Apr 13, 2010

'ಸುಮ್ ಸುಮ್ನೆ...... ಕೊರೀತಾನೆ.... '

ಸುಮ್ನೆ ......


ಏನೂ ಇಲ್ಲ........


ಏನೂ ಬರೆಯಲು ಮನಸ್ಸಿಲ್ಲ.......


ಏನಾದರೂ ಬರೆಯೋಣ ಎಂದುಕೊಂಡೆ , ಏನೂ ಹೊಳೆಯಲಿಲ್ಲ........ !

ಕಳೆದ ಸಾರಿ ಬರೆದ ಪೋಸ್ಟ್ ಯಾರ ಬ್ಲಾಗ್ ನಲ್ಲಿ ಅಪ್ಡೇಟ್ ಹೋಗದೆ ತುಂಬಾ ಬೇಸರವಾಯಿತು....... ಕಾರಣ ಇನ್ನೂ ತಿಳಿದಿಲ್ಲ..... ಕಾಮೆಂಟ್ ಸಹ ಕಡಿಮೆ ಬಂತು..... ಹಾಗಾಗಿ ಏನೂ ಬರೆಯೋ ಮನಸ್ಸಾಗಲಿಲ್ಲ...... ಆದರೂ ಬಿಡದೆ, ಎಲ್ಲರ ಬ್ಲಾಗ್ ಗೆ ಹೋಗಿ , ಆರ್ಕುಟ್ ನಲ್ಲಿ ಪ್ರಚಾರ ಮಾಡಬೇಕಾಗಿ ಬಂತು........ ಇದು ಯಾಕೋ ಸರಿ ಕಾಣಲಿಲ್ಲ ನನಗೆ.....

Apr 4, 2010

ಏನೋ ಮಾಡಲು ಹೋಗಿ.........

ತುಂಬಾ ಕಸಿವಿಸಿಯಾಗಿದೆ ಮನಸ್ಸು..... ಆಫೀಸ್ ಗೆ ಹೋಗಲಂತೂ ಮನಸ್ಸೇ ಇಲ್ಲ..... ..ಅದು ನಾನೇ ನನ್ನ ಕೈಯಾರೆ ಮಾಡಿಕೊಂಡ ತಪ್ಪಾಗಿತ್ತು..... ...ಅರ್ಧ ದಿನದ ರಜೆಗಾಗಿ ನನ್ನ ಟೀಂ ಲೀಡರ್ ಗೆ ಒಂದು ಸಿಹಿ smile ಬಿಸಾಡಿದ್ದೆ..... ಆ ಮುದಿಯ ಹೀಗೆ ಮಾಡುತ್ತಾನೆ ಎಣಿಸಿರಲಿಲ್ಲ.....

ಇಷ್ಟಕ್ಕೂ ನಡೆದಿದ್ದೇನೆಂದರೆ ........ ನಿನ್ನೆ ಕೆಲಸ ಮಾಡುವ ಮನಸ್ಸಿರಲಿಲ್ಲ..... ಮನೆಗೆ ಹೋಗಿ ಮಲಗೋಣ ಎನಿಸಿತು.... ಅಮ್ಮನ ಕೈಲಿ , ತಲೆ ಬಾಚಿಸಿಕೊಂಡು , ಎಣ್ಣೆ ಸ್ನಾನ ಮಾಡಿಸಿಕೊಂಡು ಸ್ವಲ್ಪ ಮಲಗೋಣ ಎನಿಸಿಕೊಂಡೆ..... ಸರಿ, ಬಾಸ್ ಗೆ ಹೇಳಿ ಹೋಗೋದು.... ಸುಮ್ಮನೆ ರಜೆ ಚೀಟಿ ಯಾಕೆ ಎಂದುಕೊಂಡು ಚೇಂಬರ್ ಬಾಗಿಲು ತಳ್ಳಿಕೊಂಡು ಒಳಗೆ ಹೋದೆ..... '' ಬಾರಮ್ಮ , ಕೂತ್ಕೋ .. ನನ್ನ ಚೇಂಬರ್ ಕಡೆ ಅಪರೂಪವಾಗಿ ಹೋದೆ ನೀನು.... ...ಏನು ವಿಶೇಷ ಇವತ್ತು,

Mar 25, 2010

ಇದು ಕಥೆಯಲ್ಲ ....ಜೀವನವೂ ಆಗದಿರಲಿ.......!

ಆಗಷ್ಟೇ ಸ್ನಾನ ಮಾಡಲು ಶುರು ಮಾಡಿದ್ದೆ... ಶೆಕೆಗಾಲದ ತಂಪು ನೀರು ಸ್ನಾನ ಮೈಗೆ, ಮನಸ್ಸಿಗೆ ಮುದ ನೀಡುತ್ತಿತ್ತು.... ಒಂದೇ ಸಮನೆ ಮನೆಯ ಕರೆಗಂಟೆ ಬಡಿದುಕೊಳ್ಳಲು ಶುರು ಮಾಡಿತು..... ಹೆಂಡತಿ ಊರಿಗೆ ಹೋಗಿದ್ದಳು..... ನಾನೇ ಹೋಗಿ ಬಾಗಿಲು ತೆರೆಯಬೇಕಿತ್ತು..... ನನ್ನ ಸ್ನಾನ ಅರ್ಧವಾಗಿತ್ತಷ್ಟೇ..... ಬೇಗ ಸ್ನಾನ ಮುಗಿಸೋಣ ಎಂದು ಸ್ನಾನ ಮುಂದುವರಿಸಿದೆ.... ಒಂದೇ ಸಮನೆ ಬೆಲ್ ಹೊಡೆದುಕೊಳ್ತಾ ಇತ್ತು..... ಯಾರಿರಬಹುದು ಈ ರೀತಿ ಬೆಲ್ ಮಾಡ್ತಾ ಇರೋರು ಅಂತ ಯೋಚನೆ ಮಾಡಿದೆ...... ಯಾರೆಂದು ಹೊಳೆಯಲಿಲ್ಲ..... ನನ್ನ ಗೆಳೆಯ ಮತ್ತು ಆತನ ಹೆಂಡತಿ ಮಾತ್ರ ಈ ರೀತಿ ಬೆಲ್ ಹೊಡೆಯುತ್ತಿದ್ದರು..... ಆದರೆ ಈಗೀಗ ಅವರಿಬ್ಬರ ನಡುವೆ ತುಂಬಾ ಜಗಳ ನಡೆಯುತ್ತಿತ್ತು.... ಇಬ್ಬರೂ ವಿದ್ಯಾವಂತರು... ಗಂಡ ಒಳ್ಳೆಯ ಕೆಲಸದಲ್ಲಿದ್ದ.... ಚಿಕ್ಕ ಚಿಕ್ಕ ವಿಷಯವನ್ನೇ ದೊಡ್ಡದು ಮಾಡಿಕೊಂಡು ಜಗಳವಾಡುತ್ತಿದ್ದರು..... ಸಂಸಾರದಲ್ಲಿ ಗಂಡಾಂತರ ಮಾಡಿಕೊಂಡಿದ್ದರು..... ನನ್ನನ್ನು ಅವರ ಜಗಳದಿಂದ ದೂರ ಇಟ್ಟಿದ್ದರು..... ಗೆಳೆಯನ ಹೆಂಡತಿ ಅವರ ಜಗಳದ ಬಗ್ಗೆ ಹೇಳುತ್ತಿದ್ದರೂ, ಆತನ ಬಗ್ಗೆ ಪೂರಾ ದೂರುಗಳೇ ಇರುತ್ತಿದ್ದವು..... ಯಾರನ್ನು ನಂಬೋದು ಅಂತ ಗೊತ್ತಿರಲಿಲ್ಲ.....

Mar 15, 2010

ಚಿಗುರಿದೆ ಕನಸು....!

ತಿಳಿಯಾಗಿದೆ ಮನಸ್ಸು,
ಕಲ್ಲೆಸೆಯಬೇಡ.....
ಹಳೆಯದಾಗಿದೆ ನೋವು,
ಮತ್ತೆ ಮತ್ತೆ ಕೆದಕಬೇಡ.....

Mar 4, 2010

ಎಲ್ಲಿಗೆ ಪಯಣ......?


ಅಲುಗಾಡುತ್ತಿದೆ ಭಾವದಾ ಬಂಡಿ,
ನಂಬಿಕೆಯೇ ಇಲ್ಲ ಯಾರೊಬ್ಬರ ಮೇಲೂ.....
ಯಾರಿಗ್ಯಾರಿಗೂ ಇಲ್ಲ ಇಲ್ಲಿ,
ನೂಕಿ ಹೊರಟಿಹರು ಎಲ್ಲರನ್ನ ......

Feb 22, 2010

ನನ್ನ ಕಥೆ.....!

ಇವತ್ತು ನನ್ನ ಮದುವೆ.. ....ನನ್ನ ಜೊತೆಗೆ ಯಾರೂ ಬಂದಿಲ್ಲ..... ಕೊನೆಯ ಘಳಿಗೆಯಲ್ಲಿ ಯಾರಾದರೂ ಬಂದಿರಬಹುದು ಎಂದು ಎಲ್ಲಾ ಕಡೆ ಕಣ್ಣು ಹಾಯಿಸಿದರೂ ಯಾರೂ ಕಾಣಿಸಲಿಲ್ಲ..... ಅವರಿಗೆ ಇಷ್ಟವಿರಲಿಲ್ಲ ಈ ಮದುವೆ...... ಅಮ್ಮ ಅಪ್ಪ, ಅಕ್ಕನ ಮನೆಗೆ ಹೋಗಿದ್ದಾರೆ ಇಲ್ಲಿಗೆ ಬರಲೇಬಾರದೆಂದು..... ಅವರಿಗಷ್ಟೇ ಅಲ್ಲ, ಯಾರಿಗೂ ಇಷ್ಟವಿರಲಿಲ್ಲ...... ನಾನು ಕೊನೆಯ ಹುಡುಗಿ ನನ್ನ ಮನೆಯಲ್ಲಿ, ಇಬ್ಬರು ಅಕ್ಕಂದಿರಿಗೆ ಮದುವೆಯಾಗಿದೆ.... ಸುಖವಾಗಿದ್ದಾರೆ..... ನಾನು ಕಿರಿಯವಳಾದ್ದರಿಂದ ಸ್ವಲ್ಪ ಮುದ್ದು ನನ್ನ ಮೇಲೆ... ನನ್ನ ಹಟವೂ ಸ್ವಲ್ಪ ಅತಿಯಾಗೆ ಇತ್ತು......

Feb 14, 2010

ನನ್ನವಳ ಸ್ವಗತ..... .!

ಕಾಯುತಿರುವೆ ಎಂದೋ ನಾನು,
ನೀನು ಬರುವ ದಾರಿಯ....
ಮೌನದಿಂದ ನೋವ ಸಹಿಸಿ,
ಕಾಯ್ವೆ ನಿನ್ನ ದಾರಿಯ.....

Feb 6, 2010

ಮಲಯಾಳಿ ಮನುಷ್ಯ..... !

ನಾನು ಈಗ ಕೆಲಸ ಮಾಡ್ತಾ ಇರುವ ಕಂಪನಿಯಲ್ಲಿ team leader ಒಬ್ಬರಿದ್ದರು...... ಈಗ ಅವರಿಲ್ಲ , ವರ್ಗಾವಣೆ ಆಗಿದೆ..... ಅವರು ಕೇರಳದವರು.... ಅತಿಯಾದ ಮಲಯಾಳಿ ಪ್ರೇಮ, ಪ್ರೇಮ ಎನ್ನುವುದಕ್ಕಿಂತ ಕೇರಳದಲ್ಲಿಯೇ ಹೆಚ್ಚಿಗೆ ಕೆಲಸ ಮಾಡಿದ್ದರಿಂದ ಮಲಯಾಳಿ ಬಿಟ್ಟು ಬೇರೆ ಭಾಷೆ ಬಿಟ್ಟು ಮಾತಾಡಿರಲಿಲ್ಲ..... ಹಿಂದಿ ಭಾಷೆ ಸುಟ್ಟುಕೊಂಡು ತಿನ್ನಲೂ ಬರುತ್ತಿರಲಿಲ್ಲ.... ಒಂದು ಶಬ್ಧದ ಅರ್ಥವೂ ತಿಳಿದಿರಲಿಲ್ಲ..... ನಮ್ಮ ಸಂಭಾಷಣೆ 'ಮಂಗ್ಲಿಶ್ ' ನಲ್ಲಿ ನಡೆಯುತ್ತಿತ್ತು.... ಅಂದ್ರೆ ಅಲ್ಪ ಇಂಗ್ಲಿಷ್, ಉಳಿದದ್ದು ಮಲಯಾಳಿಯಲ್ಲಿ ನಡೆಯುತ್ತಿತ್ತು..... ಮಾತಿನ ಆರಂಭ ಇಂಗ್ಲಿಷ್ ನಲ್ಲಿ ಮಾಡಿದರೆ , ಮುಗಿಯೋದು ಮಲಯಾಳಿಯಲ್ಲಿ... ಅದೂ 'ರಾಜಧಾನಿ express' ಸ್ಪೀಡಿನಲ್ಲಿ...... ಫರ್ಮಾನು ಹೊರಡಿಸುತ್ತಿದ್ದರು.....ಯಾಕೆಂದರೆ ಮಂಗಳೂರು ಕೇರಳಕ್ಕೆ ಹತ್ತಿರವಂತೆ , ಹಾಗಾಗಿ ನಾವೆಲ್ಲಾ ಮಲಯಾಳಿ ಕಲಿಯಬೇಕಂತೆ..... ನಮ್ಮಲ್ಲಿ ಕೆಲವರು ಕರ್ನಾಟಕದವರು, ಆಂದ್ರ, ಉತ್ತರ ಪ್ರದೇಶ, ಬಂಗಾಳ, ತಮಿಳು ನಾಡಿನವರೂ ಕೆಲಸ ಮಾಡುತ್ತಿದ್ದರು..... ನಮಗೆ ಅವರು ಹೇಳಿದ್ದು ಅರ್ಥವೂ ಆಗುತ್ತಿರಲಿಲ್ಲ.... ಎಲ್ಲಾನೂ ಮಲಯಾಳಿಯಲ್ಲಿ ಹೇಳಿ ಮುಗಿಸಿ ಕೊನೆಗೆ ' understood na ' ಎಂದು ಬೇರೆ ಕೇಳುತ್ತಿದ್ದರು.... ಸುಮ್ಮನೆ ತಲೆಯಾಡಿಸಿ ಬರುತ್ತಿದ್ದೆವು..... 'ಪುಣ್ಯಾತ್ಮರು ' ಯಾವುದೇ ಕೆಲಸ ಹೇಳಿದ್ರೂ , ಎರಡನೇ ಬಾರಿ ಅದರ ಬಗ್ಗೆ ವಿಚಾರಿಸುತ್ತಾ ಇರಲಿಲ್ಲ...... ಕೇಳಿದ್ದರೂ, ನಾವು ಆ ಕೆಲಸ ಮಾಡಿರುತ್ತಿರಲಿಲ್ಲ.... ಯಾಕಂದ್ರೆ ಹೇಳಿದ ಕೆಲಸ ಅರ್ಥ ಆಗಿದ್ರೆ ತಾನೇ........
ನಾನಂತೂ ತುಂಬಾ ಕಷ್ಟ ಪಟ್ಟಿದ್ದೆ..... ಯಾವುದೇ ಕೆಲಸ ಇದ್ರೂ ನಂಗೆ ಕರೆದು ಹೇಳುತ್ತಿದ್ದರು ..... ಅದೇ ಮಂಗ್ಲಿಶ್ ಭಾಷೆಯಲ್ಲಿ , ಆರಂಭ ಇಂಗ್ಲಿಷ್....ಅಂತ್ಯ ಮಲಯಾಳಿ..... ಒಂದು
ಚೂರೂ ಅರ್ಥ ಆಗ್ತಿರಲಿಲ್ಲ..... ಹೇಗಾದರೂ ಮಾಡಿ ಅವರಿಗೆ ಚುರುಕು ಮುಟ್ಟಿಸಬೇಕು ಎಣಿಸಿಕೊಂಡೆ..... .. ನನ್ನ ಸಹಪಾಠಿಗಳು ಇದಕ್ಕೆ ಸಮ್ಮತಿಸಿದ್ದರು.....ಹೇಗೆ ಅಂತ ಗೊತ್ತಿರಲಿಲ್ಲ.....

Jan 28, 2010

ಬ್ರೇಕ್ ಹಾಕೋಕೆ ನೆನಪೇ ಇಲ್ಲ....

ಅವನು ಗಣಪತಿ....... ನಮ್ಮೊರ ಸೋಡಾ ಸಪ್ಲಯರ್.... ಹಳ್ಳಿಯಲ್ಲಿ 'ಗೋಲಿ ಸೋಡಾ' ಮಾರಾಟ ಮಾಡುತ್ತಿದ್ದ..... 'ಶುಂಟಿ ಸೋಡಾ' 'ಸಪ್ಪೆ ಸೋಡಾ' ತುಂಬಾ ಚೆನ್ನಾಗಿ ಮಾಡುತ್ತಿದ್ದ....... ಒಳ್ಳೆಯ ರುಚಿಯಿರುತ್ತಿತ್ತು ಕೂಡ..... ಮಾಡುವ ರೀತಿ, ಶುದ್ದಿಯ ಬಗ್ಗೆ ಅನುಮಾನಗಳಿದ್ದರೂ ಸಹ ರುಚಿಯ ಬಗ್ಗೆ ಮಾತಿರಲಿಲ್ಲ...... ತುಂಬಾ ಕೊಳಕಾಗಿ ಇರುತ್ತಿದ್ದ...... ಅದಕ್ಕಾಗಿಯೇ ಸೋಡಾ ರುಚಿಯಾಗಿರುತ್ತದೆ ಎಂದು ನಾವೆಲ್ಲಾ ಮಾತಾಡಿಕೊಳ್ಳುತ್ತಿದ್ದೆವು ..... ಅವನ ಸೈಕಲ್ ಮೇಲೆ ಊರಲ್ಲಿನ ಎಲ್ಲಾ ಅಂಗಡಿಗಳಿಗೂ ಈತನೇ ಸೋಡಾ ಸಪ್ಲಯ್ ಮಾಡುತ್ತಿದ್ದ.... ವ್ಯಾಪಾರ ಚೆನ್ನಾಗಿ ಆಗುತ್ತಿದ್ದ ಹಾಗೆ ಸ್ಕೂಟರ್ ತೆಗೆದುಕೊಂಡ....... ಸ್ಕೂಟರ್ ಹಿಂದೆ ಸೋಡಾ ರಾಕ್ ಇಟ್ಟುಕೊಂಡು ಹೊರಟನೆಂದರೆ, ''ಮೈಸೂರು ಅಂಬಾರಿ'' ಯ ನೆನಪು ತರಿಸುವ ಹಾಗೆ ಸ್ಕೂಟರ್ ನಡೆಸುತ್ತಿದ್ದ.....

Jan 18, 2010

ಅಪ್ಪ ಅಮ್ಮ ನಮಗೆ ವಿದ್ಯೆ ಕೊಡಿಸಿದ್ದೆ ತಪ್ಪಾ......?


'' ಅವ್ವಾ, ಹೋಗಿ ಬರುತ್ತೇನೆ '' ..... ಅಣ್ಣ , ಅಮ್ಮನನ್ನು ಕರೆಯುತ್ತಿದ್ದ....
ಅಪ್ಪನ ಕಾಲಿಗೂ ನಮಸ್ಕರಿಸಿದ..... ಅಪ್ಪನ ಕಣ್ಣು ಆಗಲೇ ಹನಿಗೂಡುತ್ತಿತ್ತು..... ಅಮ್ಮ ಅಲ್ಲಿಗೆ ಬರುತ್ತಾ ಇದ್ದರು..... ಅವರ ಕಾಲಿಗೂ ಅಣ್ಣ ನಮಸ್ಕರಿಸಿದ..... ನಾನು ದೂರದಲ್ಲಿ ಕುಳಿತು ಇದನ್ನೆಲ್ಲಾ ಗಮನಿಸುತ್ತಿದ್ದೆ..... ಇದು ಪ್ರತಿ ಸಾರಿ ಊರಿಗೆ ಬಂದು ಅಲ್ಲಿಂದ ಹೊರಡುವಾಗ ನಡೆಯುವ ದ್ರಶ್ಯ..... ಈ ಸಾರಿ ಊರಹಬ್ಬಕ್ಕೆ ಮನೆಗೆ ಹೋಗಿ ಎರಡು ದಿನ ಕಳೆದು
ವಾಪಸ್ ಬರುವಾಗಲೂ ಹೀಗೆ ನಡೆಯಿತು .... ಈ ಸಾರಿ ಸಹ ಇದು ನನ್ನನ್ನು ತುಂಬಾ ಘಾಡವಾಗಿ ಕಾಡಿತು..... ಹಲವು ಪ್ರಶ್ನೆಗಳನ್ನು ಸಹ ಕೇಳಿತು.....

ನಾನು , ನನ್ನಣ್ಣ ಊರಿನಿಂದ ದೂರದಲ್ಲಿ ಕೆಲಸ ಮಾಡುತ್ತೇವೆ..... ನಮಗೆ ನಮ್ಮದೇ ಸಂಸಾರ, ನಮ್ಮದೇ ಆದ ತಾಪತ್ರಯಗಳಿವೆ..... ಹೊಟ್ಟೆಪಾಡಿಗಾಗಿ ನಾವು ನಮ್ಮ ಗೂಡಿಗೆ ಹಿಂತಿರುಗಿ ಬರಲೇ ಬೇಕು..... ಅಪ್ಪ ಅಮ್ಮನಿಗೆ ಬೇಸರವಾಗುತ್ತದೆ ಎಂದು ಅಲ್ಲೇ ಕುಳಿತರೆ ಬಡಪಾಯಿ ಹೊಟ್ಟೆಗೆ ಹಸಿವೆಯಾಗುತ್ತದಲ್ಲ... ..... ಅದಕ್ಕೆ ನೋವು ನಲಿವು, ಸಿಟ್ಟು ಸೆಡವು, ಪ್ರೀತಿ ಮತ್ತೆ ಅದರ ಆತ್ಮೀಯತೆ ಅರ್ಥವಾಗುವುದಿಲ್ಲವಲ್ಲ....

ಅಪ್ಪ ಅಮ್ಮ, ನಮಗೆ ವಿದ್ಯೆ ಕೊಡಿಸಲು ತುಂಬಾ ಕಷ್ಟ ಪಟ್ಟಿದ್ದರು..... ಅದರಲ್ಲೂ ಅಮ್ಮ , ಅಪ್ಪನ ಕೆಲಸದ ಹೊರತಾಗಿಯೂ, ಸಣ್ಣ ಪುಟ್ಟ ವ್ಯಾಪಾರ ಮಾಡಿ ನಮ್ಮ ಭವಿಷ್ಯದ ಕನಸಿಗೆ ಧಾರೆ ಎರೆದಿದ್ದರು ..... ಅವರ ಕಷ್ಟದ ದಿನಗಳು ನಮಗೆ ಆಗ ಏನೂ ಅರ್ಥ ಆಗುತ್ತಿರಲಿಲ್ಲ..... ದೀಪ ಹೇಗೆ ತನ್ನನ್ನು ಹೊತ್ತಿಕೊಂಡು ಇತರರಿಗೆ ಬೆಳಕು ಕೊಡುತ್ತದೋ ಹಾಗೆ ಅಪ್ಪ ಅಮ್ಮ ಅವರ ವರ್ತಮಾನ ಮರೆತು ನಮ್ಮ ಭವಿಷ್ಯಕ್ಕಾಗಿ ದುಡಿದಿದ್ದರು.... ಅವರ ಸ್ವಂತ ಸುಖ ಮರೆತು ನಮಗೆ ವಿದ್ಯೆ ಕೊಡಿಸಿ ಅದರಲ್ಲೇ ಸಾರ್ತಕ್ಯ ಕಂಡರು......ತಮ್ಮ ಹಾಗೆ ವಿದ್ಯೆ ಇಲ್ಲದೆ ಕಷ್ಟ ಪಡುವುದರ ಬದಲು ವಿದ್ಯೆ ಕಲಿತು ಒಳ್ಳೆಯ ಉದ್ಯೋಗಲ್ಲಿರಲಿ ಎಂದು ಹಾರೈಸಿ ಕನಸು ಕಂಡಿದ್ದರು.......

ಅವರ ಹಾರೈಕೆ, ಆಶಿರ್ವಾದದ ಫಲದಿಂದ ಉದ್ಯೋಗವೂ ದೊರೆತಿದೆ........ ಆದರೆ ಅವರಿಂದ ದೂರವೂ ತಳ್ಳಿದೆ... ...... ಮನೆಯಲ್ಲಿ ಏನಾದರೂ ಪೂಜೆ, ಊರಹಬ್ಬ ಇದ್ದರೆ, ಊರಿಗೆ ಹೋಗಿ ಒಂದೆರಡು ದಿನ ಮನೆಯಲ್ಲಿ ಕಳೆದು ಹೊರಡುತ್ತೇವೆ... ..... ಪ್ರತಿ ಬಾರಿ ಇಲ್ಲಿಂದ ಹೊರಡುವಾಗಲೂ ಇದೆ ಪ್ರಶ್ನೆ ನನ್ನನ್ನು ಪದೇ ಪದೇ ಕಾಡುತ್ತವೆ......

ನಾವಿಬ್ಬರೂ ಪ್ರತಿ ತಿಂಗಳೂ ಮನೆ ಖರ್ಚಿಗೆ ಅಂತ ಹಣ ಕಳಿಸಿಕೊಡುತ್ತೇವೆ.....

ಆದರೆ ಮಕ್ಕಳು ಕಳುಹಿಸುವ ಹಣ ಪ್ರೀತಿ ಕೊಡುತ್ತದಾ......?


ಅಪ್ಪ ಅಮ್ಮ ಇಬ್ಬರಿಗೂ ವಯಸ್ಸಾಗಿದೆ.......

ಅವರ ನರಳಿಕೆ ನಮಗೆ ಕೇಳಿಸುತ್ತದಾ.....?


ಕೆಲಸದ ಗಡಿಬಿಡಿಯಲ್ಲಿ ಫೋನ್ ಮಾಡುತ್ತೇವೆ ....

ಅವರ ನಿಟ್ಟುಸಿರಿಗೆ ಕಿವಿಯಾಗಲು ಸಾದ್ಯವಾಗತ್ತಾ.....?


ತಮ್ಮ ಜೀವ ತೇಯ್ದು ನಮಗೆ ಕೊಡಿಸಿದ ವಿದ್ಯೆ......

ನಮ್ಮನ್ನು ಅವರಿಂದ ದೂರ ತರಿಸಿತಾ.....?


ಅವರ ಹಾಗೆ ಕಷ್ಟ ಪಡುವುದು ಬೇಡ ಎಂದು ನಮಗೆ ಕಲಿಸಿದ ವಿದ್ಯೆ......

ಅವರ ಕೊನೆಗಾಲದಲ್ಲಿ ಅವರದೇ ಉಪಯೋಗಕ್ಕೆ ಬಾರದೆ ಹೋಯಿತಾ....?


ಸಿಮೆಂಟಿನಿಂದ ಕಟ್ಟಿಸಿದ ಮನೆ , ಮಕ್ಕಳು ಕೊಡುವ ನೆರಳು ಕೊಡತ್ತಾ....?

ನಿರ್ಜೀವ ಫೋನಿನಿಂದ ಬರುವ ಮಕ್ಕಳ ದ್ವನಿ, ಮನಸ್ಸಿಗೆ ನೆಮ್ಮದಿ ನೀಡತ್ತಾ....?


ಅಪ್ಪ ಅಮ್ಮ ನಮಗೆ ವಿದ್ಯಾ ಕೊಡಿಸದೇ ಇದ್ದಿದ್ದರೆ, ಇಂದು ನಾವು ಊರಲ್ಲೇ ಏನಾದರು ಕೆಲಸ ಮಾಡಿಕೊಂಡು ಮನೆಯಲ್ಲೇ ಇರುತ್ತಿದ್ದೆವು..... ಅವರ ಜೊತೆಯಲ್ಲೇ ಕಾಲ ಕಳೆಯುತ್ತಿದ್ದೆವು..... ಅಪ್ಪ ಅಮ್ಮ ಸ್ವಾರ್ಥಿಯಾಗದೆ ಇದ್ದದ್ದು ತಪ್ಪಾ....?

ನನ್ನ ಕೊನೆಯ ಪ್ರಶ್ನೆ....

ಅಪ್ಪ ಅಮ್ಮ ನಮಗೆ ವಿದ್ಯೆ ಕೊಡಿಸಿದ್ದೆ ತಪ್ಪಾ......?