ತುಂಬಾ ಕಸಿವಿಸಿಯಾಗಿದೆ ಮನಸ್ಸು..... ಆಫೀಸ್ ಗೆ ಹೋಗಲಂತೂ ಮನಸ್ಸೇ ಇಲ್ಲ..... ..ಅದು ನಾನೇ ನನ್ನ ಕೈಯಾರೆ ಮಾಡಿಕೊಂಡ ತಪ್ಪಾಗಿತ್ತು..... ...ಅರ್ಧ ದಿನದ ರಜೆಗಾಗಿ ನನ್ನ ಟೀಂ ಲೀಡರ್ ಗೆ ಒಂದು ಸಿಹಿ smile ಬಿಸಾಡಿದ್ದೆ..... ಆ ಮುದಿಯ ಹೀಗೆ ಮಾಡುತ್ತಾನೆ ಎಣಿಸಿರಲಿಲ್ಲ.....
ಇಷ್ಟಕ್ಕೂ ನಡೆದಿದ್ದೇನೆಂದರೆ ........ ನಿನ್ನೆ ಕೆಲಸ ಮಾಡುವ ಮನಸ್ಸಿರಲಿಲ್ಲ..... ಮನೆಗೆ ಹೋಗಿ ಮಲಗೋಣ ಎನಿಸಿತು.... ಅಮ್ಮನ ಕೈಲಿ , ತಲೆ ಬಾಚಿಸಿಕೊಂಡು , ಎಣ್ಣೆ ಸ್ನಾನ ಮಾಡಿಸಿಕೊಂಡು ಸ್ವಲ್ಪ ಮಲಗೋಣ ಎನಿಸಿಕೊಂಡೆ..... ಸರಿ, ಬಾಸ್ ಗೆ ಹೇಳಿ ಹೋಗೋದು.... ಸುಮ್ಮನೆ ರಜೆ ಚೀಟಿ ಯಾಕೆ ಎಂದುಕೊಂಡು ಚೇಂಬರ್ ಬಾಗಿಲು ತಳ್ಳಿಕೊಂಡು ಒಳಗೆ ಹೋದೆ..... '' ಬಾರಮ್ಮ , ಕೂತ್ಕೋ .. ನನ್ನ ಚೇಂಬರ್ ಕಡೆ ಅಪರೂಪವಾಗಿ ಹೋದೆ ನೀನು.... ...ಏನು ವಿಶೇಷ ಇವತ್ತು, ನಿನ್ನ ದರ್ಶನ ಸಿಕ್ಕಿದೆ ನನಗೆ '' ಎಂದ ಮುದಿಯ ಟೀಂ ಲೀಡರ್..... ಅವರಿಗೆ ಅರವತ್ತು ವಯಸ್ಸು...... respect ಕೊಡಬೇಕು ಸರಿ...... ಆದ್ರೆ ಸ್ವಲ್ಪ ಚೆಲ್ಲು ಚೆಲ್ಲಾಗಿ ಆಡ್ತಾನೆ..... ಬೆರಳು ಕೊಟ್ರೆ ಹಸ್ತ ನುಂಗೋ ಮನುಷ್ಯ.... ಅದಕ್ಕೆ ಎಲ್ಲರಿಂದಲೂ ಉಗಿಸಿಕೊಳ್ತಾನೆ..... ನನ್ನ ತಂಟೆಗೆ ಇನ್ನೂ ಬಂದಿಲ್ಲ..... ಬಂದ್ರೆ ಅಷ್ಟೇ....... '' ಏನಿಲ್ಲಾ ಸರ್, ತುಂಬಾ ಬೋಅರ್ ಆಗ್ತಾ ಇತ್ತು... ಅದಕ್ಕೆ ಈ ಕಡೆ ಬಂದೆ ''ಎಂದೇ .. ಸೀದಾ ಸೀದಾ ' ರಜೆ ಬೇಕು ಸರ್' ಅಂದ್ರೆ ಕೊಡೊ ಜನ ಅಲ್ಲ ಇದು ...ಅದಕ್ಕೆ ಈ ರೀತಿ ಸುತ್ತಿ ಬಳಸಿ ಮಾತಾಡಲು ಶುರು ಮಾಡಿದ್ದೆ..... 'ಅಲ್ಲಾ.... ಇಷ್ಟು ಹೇಳಿದ್ದೆ ತಪ್ಪಾ....? ಯಾವುದೋ fileನಲ್ಲಿ busy ಆಗಿದ್ದ ಮನುಷ್ಯ file ಮುಚ್ಚಿಟ್ಟು '' ಸರಿ, ಏನು ಮಾತಾಡೋಣ..? ಯಾವ ವಿಷಯದ ಬಗ್ಗೆ...? '' ಎನ್ನೋದೇ..... 'ಅಯ್ಯೋ ಕೆಟ್ಟೆ..... ಸುಮ್ಮನೆ ರಜೆ ಚೀಟಿ ಕಳಿಸಬೇಕಿತ್ತು ' ಎನಿಸಿತು..... ಆದರೂ ಮುದಿಯನಿಗೆ ಸ್ವಲ್ಪ ಸತಾಯಿಸೋಣ ಎನಿಸಿ....'' ಏನಿಲ್ಲ ಸರ್, ಸ್ವಲ್ಪ ಆರೋಗ್ಯ ಸರಿ ಇಲ್ಲ.... ಅರ್ಧ ದಿನ ರಜೆ ತಗೊಳ್ಳೋಣ ಎಂದು ನಿಮಗೆ ರಜೆ ಚೀಟಿ ಕೊಡಲು ಬಂದೆ '' ಎಂದೆ ಸ್ವಲ್ಪ...... ಇಷ್ಟೇ..... ಇಷ್ಟು..... ವಯ್ಯಾರದಿಂದ........... ! '' ಹೌದೆನಮ್ಮ.... ಏನು ಆರೋಗ್ಯ ಸರಿ ಇಲ್ಲ...... ಏನು ನೋವಿದೆ....'' ಎಂದು ಏನೇನೋ ನೋಡಲು ಶುರು ಮಾಡಿದ...... 'ಇದೊಳ್ಳೆ ಕಥೆ ಆಯ್ತಲ್ಲ...ನನ್ನಪ್ಪನಿಗಿಂತಲೂ ಹೆಚ್ಚಾಗಿದೆ ವಯಸ್ಸು..... ಮಾಡ್ತಾ ಇರೋದು ನೋಡಿದ್ರೆ ತೆಗೆದು ಕಪಾಳಕ್ಕೆ ಬಿಡಬೇಕು ಎನಿಸತ್ತೆ.... ನನಗೆ ಬೇಕಾಗಿದ್ದು ರಜೆ... ಅದೂ ಸಂಬಳ ಕಡಿತ ಮಾಡದೆ'..... ಅದಕ್ಕೆ ಸುಮ್ಮನಾದೆ.....'' ಹಾಗೇನಿಲ್ಲ ಸರ್, ಸ್ವಲ್ಪತಲೆನೋವು ಅಷ್ಟೇ..., ನಾನು ಹೊರಡ್ಲಾ ಸರ್'' ಎಂದು ಹೊರಡಲು ಶುರು ಮಾಡಿದೆ...... '' ಓಕೆ....ಓಕೆ.... you take rest ...'' ಎಂದ ಆಸಾಮಿ... ಏನೋ ನಮ್ಮ ಫ್ಯಾಮಿಲಿ ಡಾಕ್ಟರ ಥರ... ....
ಮನೆಗೆ ಬಂದು ಅಮ್ಮನ ಕೈಲಿ ಸ್ನಾನ ಮಾಡಿಸಿಕೊಂಡು, ಜಡೆ ಹಾಕಿಸಿಕೊಂಡು..... ಇಷ್ಟದ ಹಾಡು ಕೇಳುತ್ತಾ ಇದ್ದಾಗಲೇ ನೆನಪಾಗಿದ್ದು... ನನ್ನ ಮೊಬೈಲ್ silent mode ನಲ್ಲಿ ಇದ್ದದ್ದು...... ಓದಿ ಹೋಗಿ ಮೊಬೈಲ್ ನೋಡಿದ್ರೆ..... ೧೫ ಮಿಸ್ ಕಾಲ್ ಮತ್ತು ೫ ಮೆಸೇಜ್ ಇತ್ತು..... ಯಾರದಪ್ಪ ಇದು ಎಂದು ನೋಡಿದ್ರೆ...... ಥತ್ ... ಇದೆ ಮುದಿ ಟೀಂ ಲೀಡರ್ ದು ೧೫ ಮಿಸ್ ಕಾಲ್ .... ೫ ಮೆಸೇಜ್... ಮೆಸೇಜ್ ಏನಪ್ಪಾ ಎಂದು ನೋಡಿದ್ರೆ...'' how is your pain ''...... ಇದೊಳ್ಳೆ pain ಆಯ್ತಲ್ಲ ಎಂದುಕೊಂಡು ಸೆಲ್ ಆಫ ಮಾಡಿ ಮಲಗಿದೆ.............. ಇದು ನಿನ್ನೆ ನಡೆದ ಕಥೆ.......'
ಇವತ್ತು ಮತ್ತೆ ಆಫೀಸ್ ಗೆ ಹೋಗಬೇಕಲ್ಲಾ .... ಹೇಗಾದರೂ ಮಾಡಿ ಆ ಮನುಷ್ಯನಿಂದ ಸ್ವಲ್ಪ ದಿನ ದೂರವೇ ಇರಬೇಕೆಂದು ನಿರ್ಧಾರ ಮಾಡಿಕೊಂಡು ಆಫೀಸ್ ಒಳಗೆ ಕಾಲಿಟ್ಟೆ..... .. ನನ್ನ ಕೆಲಸದಲ್ಲೂ ಬ್ಯುಸಿ ಆದೆ.... ... ಸ್ವಲ್ಪ ಹೊತ್ತಾದ ನಂತರ ಯಾವುದೋ ನೆರಳು ನನ್ನ ಟೇಬಲ್ ಮೇಲೆ ಬಿದ್ದ ಹಾಗಾಗಿ ತಲೆ ಎತ್ತಿ ನೋಡಿದ್ರೆ.....ಆ ಹಾ ಹಾ.. .... ಏನು ಡ್ರೆಸ್ಸು.... ಕೆಂಪ ಕೆಂಪಗಿನ T - ಶರ್ಟ್ ನಲ್ಲಿ ತೂರಿಕೊಂಡ ನಮ್ಮ ಟೀಂ ಲೀಡರ್.... ತುಟಿಯಲ್ಲಿ ಏನೋ ನಗೆ..... '' ಗುಡ್ ಮಾರ್ನಿಂಗ್..... ಹೌ ಇಸ್ ಯುವರ್ pain '' ಎಂದ........ 'ಎಲಾ ಬಡ್ಡಿಮಗನೆ..... ' ಎಂದುಕೊಂಡರೂ...'' ಗುಡ್ ಮಾರ್ನಿಂಗ್ ಸರ್... i am fine '' ಎಂದೆ...... ... '' ಓಕೆ ಓಕೆ.... ಮೊನ್ನೆ ನಡೆದ ಮೀಟಿಂಗ್ file ತೆಗೆದುಕೊಂಡು ನನ್ನ chamber ಗೆ ಬಾರಮ್ಮಾ '' ಎಂದು ಬೇಗ ಬೇಗ ಒಳಗೆ ನಡೆದ..... ... ನಾನು ಪ್ರಿಂಟ್ ತೆಗೆದುಕೊಂಡು chamber ಒಳಗೆ ಹೋದೆ...... '' ಕಂ ಇನ್.... ಕಂ ಇನ್.... sit down ಮಿಸ್.....'' ನಾನು ಕುಳಿತುಕೊಂಡೆ......'' ಸರ್, file ರೆಡಿ ಇದೆ'' ಎಂದೆ....... file ತೆಗೆದುಕೊಂಡು ಬದಿಗಿದುತ್ತಾ..... ನನ್ನನ್ನು ತಿನ್ದುಬಿಡುವಂತೆ ನೋಡುತ್ತಿದ್ದ....' ಕಣ್ಣು ಕಿತ್ತುಬಿಡಲಾ ' ಎನಿಸುತ್ತಿತ್ತು..... ..... ನನ್ನ ವರ್ಷದ increment ಹತ್ತಿರ ಬರ್ತಾ ಇತ್ತು.... ನೆನಪಾಗಿ ಸುಮ್ಮನಾದೆ.... ಆದರೂ.... ಹಣಕ್ಕಾಗಿ, ನೌಕರಿಗಾಗಿ ಇದನ್ನೆಲ್ಲಾ ಸಹಿಸಿಕೊಳ್ಳೋದು ಸರಿ ಕಾಣಲಿಲ್ಲ....'' ಸರ್, ಸ್ವಲ್ಪ ಕೆಲಸ ಇದೆ.... ನಾನು ಹೊರಡ್ಲಾ'' ಎಂದೆ........ '' ಕುತ್ಕೊಳಮ್ಮಾ ..... ಯಾಕೆ ಹೆದರಿಕೆನಾ.... ನನ್ನನ್ನು ಕಂಡರೆ.... ನನ್ನ T - ಶರ್ಟ್ ಹೇಗಿದೆ..... ನಿನ್ನೆಯಷ್ಟೇ ಕೊಂಡುಕೊಂಡೆ...... ಹೇಗೆ ಕಾಣಿಸ್ತಾ ಇದ್ದೀನಿ ನಾನು'' ಎಂದ..... ' ಎಮ್ಮೆಗೆ ಬಟ್ಟೆ ಹಾಕಿದ ಹಾಗಿದೆ' ಎನಿಸಿಕೊಂಡೆ..... ಹಾಗೆಂದು ಹೇಳುವ ಹಾಗಿರಲಿಲ್ಲ....'' ಓಕೆ ಸರ್... ನೈಸ್'' ಎಂದೆ........ ''ಇವತ್ತು ಸಂಜೆ ಏನು ಮಾಡ್ತಾ ಇದೀಯಾ'' ಎಂದ ಮೆತ್ತಗೆ....... ''ಯಾಕೆ'' ಎಂದೆ ನಾನು ಜೋರಾಗಿ...... ' ಹೇಯ್... ಮೆತ್ತಗೆ ಮಾತಾಡಮ್ಮಾ ..... ಯಾರಾದರೂ ಏನಾದರೂ ತಿಳಿದಾರು'' ಎಂದ ಮೆತ್ತಗೆ...... ' ನಿನ್ನಜ್ಜಿ ಪಿಂಡ.... ನನ್ನಪ್ಪನಷ್ಟು ವಯಸ್ಸಾಗಿದೆ... ನನ್ನ ಹತ್ತಿರ ಹೀಗೆಲ್ಲಾ ಮಾತಾಡ್ತೀಯಾ' ಅಂದು ಮನಸ್ಸು ಕೂಗುತ್ತಿತ್ತು......'' ಸರ್, ಸುಮ್ಮನೆ ಬೇರೆ ಬೇರೆ ಮಾತಾಡೋದು ಸರಿ ಕಾಣಲ್ಲ.....'' ಎಂದೆ.... ಮುದಿಯ...'' ನಾನೇನು ಕೆಳಿದೆನಮ್ಮಾ...... ಸುಮ್ಮನೆ ನನಗೂ ಟೈಮ್ ಪಾಸ್.... ನಿನಗೂ ಟೈಮ್ ಪಾಸ್....ಈ ಸಾರಿಯ increment ಚೆನ್ನಾಗಿ ಆಗುವ ಹಾಗೆ ನೋಡಿಕೊಳ್ಳುತ್ತೇನೆ'' ಎಂದ ಖತರ್ನಾಕ್ ಮುಖ ಮಾಡಿಕೊಂಡು..... ನನಗೆ ಅಮರೀಶ್ ಪುರಿ ನೆನಪಾದ..... ನಾನು ಏನೂ ಮಾತಾಡದೆ chamber ಹೊರಗೆ ಬಂದೆ...... ಸಂಜೆಯ ತನಕ.. ಏನು ಕೆಲಸ ಮಾಡಿದೆನೋ ನನಗೆ ಗೊತ್ತಿಲ್ಲ..... ಸಂಜೆ ಆರಕ್ಕೆ ಹೊರ ಬಿದ್ದೆ.....
ಮಾರನೆ ದಿನ ಬಂದವಳಿಗೆ ಹೇಗಾದರೂ ಮಾಡಿ, ಇದಕ್ಕೆ ಒಂದು ಅಂತ್ಯ ಕಾಣಿಸಲೇ ಬೇಕಿತ್ತು...... ಹೀಗೆ ನಡೆಯಲು ಬಿಟ್ಟರೆ ನನ್ನ ಅಂತರಾತ್ಮ ಸಾಯುತ್ತಿತ್ತು...... ಏನೋ ಯೋಚಿಸಿಕೊಂಡು ಬಂದಿದ್ದೆ..... ಅದು ಸರಿಯಾಗತ್ತಾ ಇಲ್ವೋ ಗೊತ್ತಿರಲಿಲ್ಲ.... ಇವತು ಎಲ್ಲರಿಗಿಂತ ನಾನೇ ಮೊದಲು ಬಂದಿದ್ದೆ ಆಫೀಸ್ ಗೆ.... ಕ್ರಮೇಣ ಎಲ್ಲಾ staff ಬಂದರೂ, ನನಗೆ ಕೆಲಸ ಮಾಡೋ ಆಸಕ್ತಿ ಇರಲಿಲ್ಲ..... ಸ್ವಲ್ಪ ಹೊತ್ತಲ್ಲೇ ಬಂತಲ್ಲ ಟೀಂ ಲೀಡರ್ ಸವಾರಿ...... ನಾನು ವಿಶ್ ಕೂಡ ಮಾಡಲಿಲ್ಲ..... ಮಾಡಿದ್ರೆ ಎಲ್ಲಿ ಮೈಗೆ ಅಂಟಿಕೊಂಡು ಬಿಡತ್ತೋ ಅಂತ...... ಸುಮ್ಮನೆ ಹೋಯ್ತು ಪಾರ್ಟಿ.....ಸ್ವಲ್ಪ ಹೊತ್ತಲ್ಲೇ..... ಇಂಟರ್ಕಾಮ್ ಕುಯ್ ಗುಡ್ತು..... ಫೋನ್ ಎತ್ತಿದೆ....'' ಗುಡ್ ಮಾರ್ನಿಂಗ್.... ನಿನ್ನ ಹತ್ತಿರ ತುಂಬಾ ಮಾತಾಡಬೇಕು... ಬೇಗ ಬಾ ನನ್ನ chamber ಗೆ'' ಎಂತು ಜೊಲ್ಲು ಪಾರ್ಟಿ......ನನಗೆ ತಲೆ 'ಧೀಂ' ಎಂದಿತು ...... ' ಅಲ್ಲಾ ... ಇವನೇನು ನನ್ನ ಬಾಯ್ friendaa ..... ಅದೂ..... ಒಂದು ದಿನದ ಸಂಬಳ ಸಹಿತದ ರಜೆ ಕೇಳಿದ್ದಕ್ಕೆ ಈ ಶಿಕ್ಷೆನಾ..... ಸುಮ್ಮನೆ ರಜೆ ಚೀಟಿ ಬಿಸಾಡಿ ಹೋಗಿದ್ದರೆ ಈ ತಾಪತ್ರಯ ಇರುತ್ತಿರಲಿಲ್ಲ.... ' ಆಲ್ವಾ ಎನಿಸಿಕೊಂಡೆ.... ಏನೇ ಆಗಲಿ ಇವತ್ತು ಇದಕ್ಕೊಂದು ಫುಲ್ ಸ್ಟಾಪ್ ಹಾಕಲೇ ಬೇಕು ಎನಿಸಿಕೊಂಡು chamber ಒಳಗೆ ಹೋದೆ...... ಅಲ್ಲಿಂದ ಸೀದಾ ಮನೆಗೆ ಹೋಗೋದು ಎಂದು ತೀರ್ಮಾನಿಸಿ ವ್ಯಾನಿಟಿ ಬ್ಯಾಗ್ ಹಿಡಿದುಕೊಂಡೆ ಹೋದೆ...... '' ಏನಮ್ಮ ಹೇಗಿದ್ದೀಯಾ..... ನಿನ್ನ ಸೆಲ್ ಆಫ ಇತ್ತು,,,,,, ಯಾಕಮ್ಮ...... ಆರಾಮಿದ್ದೀಯಾ......'' ಎಂದ ಮುದಿಯ ಏನೋ ತವಕದಲಿ..... '' ನಾನು ನಿನ್ನ ವರ್ಷದ increment ೫೦% ಹೆಚ್ಚಿಗೆ ಮಾಡಲು ಹೇಳಿದ್ದೇನೆ...... ಕೂತ್ಕೋ...ಕೂತ್ಕೋ'' ಎಂದ ಹತ್ತಿರ ಬರುತ್ತಾ....... ನಾವು ಹುಡುಗಿಯರು flirt ಮಾಡುತ್ತೇವೆ...... ಇಲ್ಲಾ ಅನ್ನಲ್ಲ..... ಆದರೆ ಅದು ತೀರಾ ದೈಹಿಕ ಮಟ್ಟಕ್ಕೆ ಬರಲಿಕ್ಕಂತೂ ಬಿಡಲ್ಲ...... ನಮಗೂ ದೋಸ್ತಿ,ಸುತ್ತಾಡೋದು, ಫಿಲಂ ನೋಡೋದು ಇಷ್ಟ..... ಹೀಗೆ ಸುತ್ತಾಡೋಕೆ ವಯಸ್ಸಿನ ನಿರ್ಭಂಧ ಕೂಡ ಇರಲ್ಲ.... ನಾನೂ ಸಹ ಅಪ್ಪನ ಜೊತೆ ತಿರುಗಾಡಲು ಹೋಗುತ್ತೇನೆ..... friendly ಆಗೇ ಇರುತ್ತೇನೆ.....ಆದ್ರೆ ಈಯಪ್ಪನದು ಅತೀಯಾಯ್ತು....... '' ಸರ್, ನಾನು ನಿಮ್ಮ ಮಗಳ ವಯಸ್ಸಿನವಳು.... ನೀವು ಹೀಗೆಲ್ಲಾ ಮಾಡಿದ್ರೆ ಒಳ್ಳೆಯದಾಗಲ್ಲ ...'' ಎಂದೆ ಸ್ವಲ್ಪ ಗಡುಸಾಗಿಯೇ..... ಆಗಲೇ ನನಗೆ ನೆನಪಾಯ್ತು.... ಇವತ್ತು ಇವನಿಗೆ ಸರಿಯಾಗಿ ಬಲಿ ಹಾಕಬೇಕು ಎನಿಸಿ, ಕೈಯಲ್ಲಿನ ಮೊಬೈಲ್ ಆನ್ ಮಾಡಿ vedio mode ಸೆಲೆಕ್ಟ್ ಮಾಡಿದೆ.... ಮುದಿಯ ಟೀಂ ಲೀಡರ್ ಇದನ್ನೆಲ್ಲಾ ನೋಡುವ ಸಮಯ ಇರಲಿಲ್ಲ..... '' ವಯಸ್ಸು ನನ್ನ ಮಗಳಿನದು ಆದರೆ ನೀನು ನನ್ನ ಮಗಳೇನೂ ಆಗಲ್ಲ ಆಲ್ವಾ.....ಸುಮ್ಮನೆ ಹಾಗೆಲ್ಲಾ ಯೋಚನೆ ಮಾಡಬೇಡ... ನೀನಿನ್ನೂ ಬೆಳೆಯಬೇಕು ಬದುಕಲ್ಲಿ..... ನನಗೆ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಂಡು ಹೋಗು.... ನೋಡ್ತಾ ಇರು... ನೀನು ಎಲ್ಲಿಂದ ಎಲ್ಲಿಗೆ ಹೋಗ್ತೀಯಾ ಎಂದು.... ಸ್ವಲ್ಪ co- operate ಮಾಡಿಕೊ '' ಎಂದವನೇ ನನ್ನ ಕೈ ಹಿಡಿದ... ಚೇಳು ಕಟುಕಿದಂತಾಯಿತು..... ....ಎದ್ದು ನಿಂತೇ...... ಎಲ್ಲಿತ್ತೋ ಶಕ್ತಿ ಗೊತ್ತಿಲ್ಲ..... ಕೈ ಎತ್ತಿ ' ಫ್ಹಟೀರ್ ' ಎಂದು ಬಾರಿಸಿದೆ ಕೆನ್ನೆಗೆ..... '' ಏನೆಂದುಕೊಂಡ್ರಿ ನನ್ನನ್ನ..... ಅಷ್ಟು clear ಆಗಿ ಹೇಳ್ತಾ ಇದ್ದೀನಿ.... ಆದರೂ ನನ್ನ ಕೈ ಮುಟ್ತೀಯ......ಮಾಡ್ತೀನಿ ನಿಮಗೆ ..... ನೀವು ಮಾತಾಡಿರೋ ಮಾತು, ಆಡಿರೋ ಆಟ ಎಲ್ಲಾ ರೆಕಾರ್ಡ್ ಮಾಡಿದೀನಿ ಇದರಲ್ಲಿ.... ಪೇಪರ್ ನಲ್ಲಿ, ಟಿವಿಯಲ್ಲಿ ಹಾಕ್ತೀನಿ...... ಬಿಡಲ್ಲಾ ನಿಮಗೆ....... ನೆಟ್ಟಗೆ ನಡಿಯೋಕೆ ಆಗಲ್ಲ.... ಹುಡುಗಿ ಬೇಕಾ..... ಥೂ ನಿಮ್ಮ ಜನ್ಮಕ್ಕೆ'''' ಎಂದು ಮುಖಕ್ಕೆ ಉಗಿದು ಹೊರ ಬರಲು ಹೊರಟೆ...... ಪಾಪಿ... ಚಂಗನೆ ಹಾರಿ ಬಾಗಿಲ ಬಳಿ ಹೋದ...... ನನಗೆ ಹೆದರಿಕೆ ಆಯಿತು...... ಏನು ಮಾಡ್ತಾನೋ ಅಂತ..... ಮುದಿಯ ಸೀದಾ ನನ್ನ ಕಾಲಿಗೆ ಬಿದ್ದ..... '' ತಪ್ಪಾಯ್ತಮ್ಮ.... ನೀನು ಆ ದಿನ ಬಂದು ನನ್ನ ಜೊತೆ ಸಲುಗೆಯಿಂದ ಮಾತಾಡಿದ್ದನ್ನ ತಪ್ಪು ಅರ್ಥ ಮಾಡಿಕೊಂಡೆ....ನಿನ್ನ ಹತ್ತಿರ ಕೆಟ್ಟದಾಗಿ ನಡೆದುಕೊಂಡೇ.... ರೆಕಾರ್ಡ್ ಮಾಡಿದ್ದನ್ನ ಡಿಲೀಟ್ ಮಾಡಮ್ಮಾ..... ಯಾರಿಗೂ ತೋರಿಸಬೇಡ ಅದನ್ನ....ನನ್ನ ಮಾನ ಮರ್ಯಾದೆ ಎಲ್ಲ ಹಾಳಾಗತ್ತೆ'' ಎಂದ ನನಗೆ ಮುಂದೆ ಏನೂ ಮಾತಾಡುವ ಮನಸ್ಸಿರಲಿಲ್ಲ..... ಸೀದಾ ಹೊರಗೆ ಬಂದೆ...... ನನ್ನ ಸೀಟ್ ನಲ್ಲಿ ಕುಳಿತು ಯೋಚನೆ ಮಾಡಿದೆ...' ನಾನು ಆ ದಿನ ಗಮ್ಬೀರವಾಗಿ ಇದ್ದಿದ್ದರೆ ಇದೆಲ್ಲಾ ನಡೀತಿರಲಿಲ್ಲ ಆಲ್ವಾ.... ಸುಮ್ಮನೆ ಇದೆಲ್ಲಾ ರಾಮಾಯಣ ಯಾಕೆ.... ಅವನಿಗೂ time ಕೊಡೋಣ' ಎಂದುಕೊಂಡೆ..... ಏನು ರೆಕಾರ್ಡ್ ಆಗಿದೆ ನೋಡೋಣ ಮೊಬೈಲ್ ಆನ್ ಮಾಡಿ ನೋಡಿದ್ರೆ ಅದರಲ್ಲಿ ಏನೂ ರೆಕಾರ್ಡ್ ಆಗಿರಲೇ ಇಲ್ಲ..... ಆಗಲೇ ನನಗೆ ನೆನಪಾಗಿದ್ದು.... ರೆಕಾರ್ಡ್ mode ಸೆಲೆಕ್ಟ್ ಮಾಡಿದ್ದೇನೆ ಹೊರತು 'ರೆಕಾರ್ಡ್' ಪ್ರೆಸ್ ಮಾಡಿರಲೇ ಇಲ್ಲ...... ನಗು ಬಂತು.....
ಇದೆಲ್ಲಾ ನಡೆದು ಒಂದು ತಿಂಗಳಾಯ್ತು...... ನನ್ನ increment ೪೦% ಆಗಿದೆ....... ನಂತರ ನನ್ನ ಜೊತೆ ಟೀಂ ಲೀಡರ್ ಹಾಗೆ ನಡೆದುಕೊಳ್ಳಲೇ ಇಲ್ಲ....'' ಗಿಡವನ್ನು ಗಿಡವಾಗಿದ್ದಾಗಲೇ ಬಗ್ಗಿಸಿದ್ದೆ...... ಮರವಾಗಲು ಬಿಟ್ಟಿರಲಿಲ್ಲ....''.....
ದಿನು...
ReplyDeleteಒಂದು ಹೆಣ್ಣಾಗಿ,
ಹೆಣ್ಣಿನ ಭಾವನೆಗಳನ್ನು...
ಅವಳ ಕಥೆಯನ್ನು ಹೇಳುವದು ಬಲು ಕಷ್ಟ..
ನೀವು ಗೆದ್ದಿದ್ದೀರಿ..
ತುಂಬಾ ಸೊಗಸಾಗಿದೆ...
ನಿಮ್ಮ ಕಥಾನಾಯಿಕಿ ಇಷ್ಟವಾಗಿ ಬಿಟ್ಟಳು...
ಅಭಿನಂದನೆಗಳು ಚಂದದ ಕಥೆಗಾಗಿ...
ಇನ್ನಷ್ಟು ಕಥೆ ಬರಲಿ...
ದಿನಕರ್, ಹೆಣ್ಣಿಗೆ ಧೈರ್ಯ ಬಹುಮುಖ್ಯ ಈಗಿನ ದಿನಗಳಲ್ಲಿ...ಆದ್ರೆ...ಸಲುಗೆಯ ಅಥವಾ ತಮ್ಮ ವರ್ತನೆಯ ಪರಿಣಾಮ ಏನಾಗ್ತಿದೆ ಎನ್ನುವುದರ ಸೂಕ್ಷ್ಮ ಪರಿವೆಯೂ ಇರಬೇಕು... ಅದನ್ನು ಅತಿರೇಕಕ್ಕೆ ಹೋಗಗೊಡಬಾರದು...ಒಂಥರಾ ಬ್ರೇಕ್ ಮೇಲೇ ಸಣ್ಣದಾಗಿ ಕಾಲಿಡುವಗಾಹೆ ಟ್ರಫಿಕ ನಲ್ಲಿ...
ReplyDeleteದಿನಕರ ಅವರೇ ,
ReplyDeleteಹೆಣ್ಣಿನ ಭಾವನೆಗಳನ್ನ ಚೆನ್ನಾಗಿ ಬಿಂಬಿಸಿದಿರ . ಕಥಾ ನಾಯಕಿಯ ಪಾತ್ರ, ಭಾವನೆ , ಅವಳು ಮನಸಿನಲ್ಲಿಯೇ ಮೂದಿ ಲೀಡರ್ ಗೆ ಮಾಡೋವ ಮಂಗಳಾರತಿ ಚೆನ್ನಾಗಿ ಮೂಡಿ ಬಂದಿದೆ .
ಇಂತವರನ್ನ ಗಿಡವಾಗಿದ್ದಗೆ ಬಗ್ಗಿಸಬೇಕು , ಸತ್ಯದ ಮಾತು
ಮನಸಾರೆ
ದಿನಕರ,
ReplyDeleteನನ್ನ ಗೂಗಲ್-ರೀಡರ್ ನಲ್ಲಿ ಈ ಲೇಖನ ಇನ್ನೂ ಮೂಡಿಲ್ಲ;ಯಾಕೊ ಕಾಣೆ.
ಹೆಣ್ಣಿನ ಮನಸ್ಸಿನಲ್ಲಿ ಲೀನವಾಗಿ ಬರೆಯೋದು ಸುಲಭವಲ್ಲ. ಅದನ್ನು ನೀವು ಸಾಧಿಸಿದ್ದೀರಿ. ತುಂಬ ಸಂಯಮದಿಂದ ಬರೆದ ಸೊಗಸಾದ ಕಥೆ.
ನಿನ್ನೆ ನಿಮ್ಮ ಬ್ಲಾಗ್ ಪೇಜ್ ನಲ್ಲೂ ಕಥೆ ಕಾಣಿಸಿರಲಿಲ್ಲ.ಇವತ್ತು ಸಿಕ್ತು..ಕಥೆಯನ್ನು ತು೦ಬಾ ಚೆನ್ನಾಗಿ ಬರೆದಿದ್ದೀರಿ.ನೈಜತೆ ತು೦ಬಿದೆ.ಹೆಣ್ಣುಮಕ್ಕಳ ಭಾವನೆಯನ್ನು ಚೆನ್ನಾಗಿ ಚಿತ್ರಿಸಿದ್ದೀರಿ.
ReplyDeleteಕಥೆಗೆ ಉತ್ತಮ ಅ೦ತ್ಯ ಕೊಟ್ಟಿದ್ದೀರಿ.
ಮತ್ತಷ್ಟು ಕಥೆಗಳು ಬರುತ್ತಿರಲಿ.
ನಿನ್ನೆ ನಿಮ್ಮ ಬ್ಲಾಗ್ ಪೇಜ್ ನಲ್ಲೂ ಕಥೆ ಕಾಣಿಸಿರಲಿಲ್ಲ.ಇವತ್ತು ಸಿಕ್ತು..ಕಥೆಯನ್ನು ತು೦ಬಾ ಚೆನ್ನಾಗಿ ಬರೆದಿದ್ದೀರಿ.ನೈಜತೆ ತು೦ಬಿದೆ.ಹೆಣ್ಣುಮಕ್ಕಳ ಭಾವನೆಯನ್ನು ಚೆನ್ನಾಗಿ ಚಿತ್ರಿಸಿದ್ದೀರಿ.
ReplyDeleteಕಥೆಗೆ ಉತ್ತಮ ಅ೦ತ್ಯ ಕೊಟ್ಟಿದ್ದೀರಿ.
ಮತ್ತಷ್ಟು ಕಥೆಗಳು ಬರುತ್ತಿರಲಿ.
ವಾಸ್ತವಿಕತೆಗೆ ಹತ್ತಿರವಾದ ಕಥೆ. ಹೆಣ್ಣಿನ ಮನದೊಳಗಿನ ಭಾವಗಳನ್ನು ತುಂಬಾ ಚೆನ್ನಾಗಿ ನಿರೂಪಿಸಿದ್ದೀರಿ. ಈಗ ಉದ್ಯೋಗಕ್ಷೇತ್ರಗಳಲ್ಲಿ ಮಹಿಳೆ ಪಡುತ್ತಿರುವ ಕಷ್ಟ ಎಲ್ಲರಿಗೂ ಗೊತ್ತಿರುವುದೇ. ಚೆನ್ನಾಗಿದೆ ಕಥೆ.
ReplyDeleteಪ್ರಕಾಶಣ್ಣ,
ReplyDeleteಮೊದಲ ಕಾಮೆಂಟ್ ನಿಮ್ಮದೇ..... ತುಂಬಾ ಖುಷಿಯಾಯ್ತು............ ಈ ಕಥೆ ಎಲ್ಲಾ ಆಫೀಸ್ ನಲ್ಲಿ ಸ್ವಲ್ಪವಾದರೂ ನಡೆಯುವ ಕಥೆ.... ಆದರೆ ಅಂತ್ಯ ನನ್ನ ಕಲ್ಪನೆಯದು.... ಹೆಣ್ಣಿನ ಭಾವನೆಗಳನ್ನು ಹಿಡಿಯುವುದು ತುಂಬಾ ಕಷ್ಟ...... ತುಂಬಾ ಧನ್ಯವಾದ ನಿಮ್ಮಪ್ರೋತ್ಶಾಹಕ್ಕೆ....
ಆಜಾದ್ ಸರ್,
ReplyDeleteಆಫೀಸ್ ನಲ್ಲಿ ಕೆಲಸ ಮಾಡೋ ಹೆಣ್ಣು ಮಕ್ಕಳಿಗೆ ಸಲಿಗೆ ಮತ್ತು ಫ್ರೀಯಾಗಿರೋದರ ಮದ್ಯೆ ವ್ಯತ್ತಾಸ ಗೊತ್ತಿರಬೇಕು..... ಅದು ಗೊತ್ತಾಗದೆ ಕೆಲವೊಂದು ಆವಾಂತರಗಳು ಆಗುತ್ತವೆ..... ಧನ್ಯವಾದ ನಿಮ್ಮಪ್ರತಿಕ್ರಿಯೆಗೆ.....
ಮನಸಾರೆ ಮೇಡಂ,
ReplyDeleteಹ್ಹಾ ಹ್ಹಾ..... ಮನಸ್ಸಿನಲ್ಲೇ ಮಾಡೋ ಮಂಗಳಾರತಿ ನನಗೂ ಹಿಡಿಸಿತು............... ಆದ್ರೆ ಇದು ನಿಜವಾಗಿದ್ರೆ ತುಂಬಾ ಒಳ್ಳೆಯದು...... ತುಂಬಾ ಸಲ ಇದರ ಅಂತ್ಯ , ಒತ್ತಡಕ್ಕೆ ಒಳಗಾಗಿ ಬೇರೆಯದೇ ಆಗಿರುತ್ತದೆ...... ತುಂಬಾ ಧನ್ಯವಾದ.... ಯಾಕೋ ಈ ಕಥೆ ಬರೆದ ನಂತರ ಯಾರ ಬ್ಲಾಗ್ ನಲ್ಲೂ ಅಪ್ಡೇಟ್ ಆಗಲೇ ಇಲ್ಲಾ.... ಅದಕ್ಕಾಗಿ ಎಲ್ಲರ ಬ್ಲಾಗ್ ಗೆ ಬಂದುಕೇಳಬೇಕಾಗಿ ಬಂತು......
ಸುನಾಥ್ ಸರ್,
ReplyDeleteತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ..... ನಿಜ ಹೆಣ್ಣಿನ ಮನಸ್ಸು, ಚಿಂತನೆ ಅರ್ಥ ಮಾಡಿಕೊಳ್ಳೋದು ತುಂಬಾ ಕಷ್ಟ.... ನನ್ನದು ಪುಟ್ಟ ಪ್ರಯತ್ನ ಅಷ್ಟೇ...... ಧನ್ಯವಾದ ನಿಮ್ಮ ಕಾಮೆಂಟ್ ಗೆ....
ಮನಮುಕ್ತಾ ಮೇಡಂ,
ReplyDeleteಧನ್ಯವಾದ ನೀವು ಬಂದು ಕಾಮೆಂಟ್ ಮಾಡಿದ್ದಕ್ಕೆ..... ನನಗೂ ಗೊತ್ತಾಗ್ತಾ ಇಲ್ಲ ಏನು ಸಮಸ್ಯೆ ಅಂತ...... ಯಾರ ಬ್ಲಾಗ್ ನಲ್ಲೂ ಅಪ್ಡೇಟ್ ಆಗಲೇ ಇಲ್ಲ...... ಈ ಥರದ ಎಲ್ಲಾ ಕಥೆಗಳಲ್ಲೂ ಈ ಥರದ ಅಂತ್ಯ ಕಂಡರೆ ತುಂಬಾ ಖುಷಿ ಕೊಡೋದು ......
ತೇಜಸ್ವಿನಿ ಮೇಡಂ,
ReplyDeleteಧನ್ಯವಾದ ನಿಮ್ಮ ಅನಿಸಿಕೆಗೆ ಮತ್ತು ಪ್ರೋತ್ಸಾಹಕ್ಕೆ...... ಈಗಿನ ಕಛೇರಿಗಳಲ್ಲಿ ನಡೆಯೋ ಸಮಸ್ಯೆ ಇದು..... ಅಂತ್ಯ ಹೀಗಿದ್ದರೆ ಒಳ್ಳೆಯದು ಅಂತ ನನ್ನ ಅಭಿಪ್ರಾಯ ಅಷ್ಟೇ.......
ಉದ್ಯೋಗಸ್ಥ ಮಹಿಳೆಯ ಮನ ಹೊಕ್ಕು ಬರೆದ ಕಥೆ ಸು೦ದರವಾಗಿ ಮೂಡಿದೆ. ಆದರೆ ರೆಕಾರ್ಡ್ ಮಾಡಿ ಹೆದರಿಸುವದು ಅಷ್ಟು ಸುಲಭದ್ದಲ್ಲ ಮತ್ತು ಅವರ ಮನ ಪರಿವರ್ತನೆ ಸುಲಭದ್ದಲ್ಲ ಅನಿಸಿತು.
ReplyDeleteಹೆಣ್ಣಾಗಿ, ಹರೆಯದ ಹುಡುಗಿಯ ನೈಜ ಭಾವನೆಗಳನ್ನು ಚೆನ್ನಾಗಿ ಹೇಣೆದಿದ್ದೀರಿ....
ReplyDeleteಇನ್ನೂ ನಿಮ್ಮ blog ನನ್ನ blog ನಲ್ಲಿ update ಆಗಿಲ್ಲ..ಕಾರಣ ತಿಳಿಯುತ್ತಿಲ್ಲ.
ಧನ್ಯವಾದ
hennina manasa aritu tumba chennagi baredideeri... dhanyavaadagLu..
ReplyDeleteNeevu Hennu aagiddu yaavaga... ?
ReplyDeleteNimma TL ge smile kottiddu yaavaga ?
ha ha ha... just kidding...
nice writeup sir :)
ದಿನಕರ್ ಸರ್,ಲೇಟ್ ಆಗಿ ಬಂದೆ ನಿಮ್ಮ ಬ್ಲೋಗ್ ಗೆ...ಅಪ್‌ಡೇಟ್ ಆಗಿರಲಿಲ್ಲ......ಕಥೆ ಚೆನ್ನಾಗಿದೆ ..ಆಕೆಯ ಗಟ್ಟಿತನ ಎಸ್ಟು ಹೆಣ್ಣು ಮಕ್ಕಳಲ್ಲಿ ಇರುತ್ತೆ ಹೇಳಿ..ಹೆಣ್ಣುಮಕ್ಕಳು ತಮಗೆ ತಾವೇ ಮೀಸಲಾತಿ ಕೊಟ್ಟುಕೊಂಡು ಬಿಡುತ್ತಾರೆ.. ಯಾಕೆ ಎಂದು ಪ್ರಶ್ನಿಸದೇ ಒಪ್ಪಿಕೊಂಡರೆ ದಡ್ಡತನ ಅಲ್ಲವ?
ReplyDeleteಸೀತಾರಾಂ ಸರ್,
ReplyDeleteನೀವು ಹೇಳಿದ್ದು ಸರಿ...... ರೆಕಾರ್ಡ್ ಮಾಡಿ ಹೆದರಿಸೋದು ತುಂಬಾ ಕಷ್ಟ...... ನಾನು ಈ ರೀತಿ ಕಷ್ಟ ಅನುಭವಿಸುವವರನ್ನು ನೋಡಿದ್ದೇನೆ ಸರ್..... ಹೊಡೆಯಲು ಹೇಳಿದೆ, ಕಂಪ್ಲೈಂಟ್ ಮಾಡಲು ಹೇಳಿದೆ..... ಆದರೆ ಏನೂ ಮಾಡಲಿಲ್ಲ..... ನಾನು ಏನೂ ಮಾಡುವ ಹಾಗಿರಲಿಲ್ಲ...... ನನ್ನ ಕಲ್ಪನೆಯ ಅಂತ್ಯ ಇದು.......
ಸುಬ್ರಮಣ್ಯ ಸರ್,
ReplyDeleteತುಂಬಾ ಧನ್ಯವಾದ ನಿಮ್ಮ ಮೆಚ್ಚುಗೆಗೆ..... ಬ್ಲಾಗ್ ಅಪ್ಡೇಟ್ ಆಗದೆ ಇರೋಕೆ ಕಾರಣ ಹುಡುಕಿ, ಹುಡುಕಿ ಸುಸ್ತಾದೆ...... ಕೊನೆಗೆ ಎಲ್ಲರ ಬ್ಲಾಗ್ ಗೆ ಹೋಗಿ ಪ್ರಚಾರ ಮಾಡಬೇಕಾಗಿ ಬಂದಿದೆ ಸರ್......
ಮನಸು ಮೇಡಂ,
ReplyDeleteಧನ್ಯವಾದ ನಿಮ್ಮ ಮೆಚ್ಚುಗೆಗೆ ಮತ್ತು ಅನಿಸಿಕೆಗೆ.......
ಶಿವಪ್ರಕಾಶ್,
ReplyDeleteಹ್ಹಾ ಹ್ಹಾ...... ಹೆಣ್ಣಿನ ಮನಸ್ಸು ಅರಿಯೋದು ತುಂಬಾ ಕಷ್ಟ .... ಆದರೂ ಕೆಲವೊಮ್ಮೆ ತುಂಬಾ ಸುಲಭ...... ಹಾಗೆ ಇದು ಒಂದು ಪ್ರಯತ್ನ.......
ಶ್ವೇತಾ ಮೇಡಂ,
ReplyDeleteಅಪ್ಡೇಟ್ ಆಗದೆ ಇರೋದಕ್ಕೆ ಕಾರಣ ಗೊತ್ತಾಗಿಲ್ಲ.... ಒಳ್ಳೆಯ ಡಾಕ್ಟರ ಗೆ ಹೇಳಿದ್ದೀನಿ.... ಧನ್ಯವಾದ ನಿಮ್ಮ ಮೆಚ್ಚುಗೆಗೆ......
haha story ending majavaagide:) good story dinakar sir:)
ReplyDeleteದಿನಕರ್ ಅವರೆ..
ReplyDeleteಕಥೆ ತು೦ಬಾ ಚನ್ನಾಗಿ ಮೂಡಿ ಬ೦ದಿದೆ..
ಹೆಣ್ಣಿನ ಮನಸ್ಥಿತಿಯನ್ನು ಚನ್ನಾಗಿ ಅರ್ಥ ಮಾಡಿಕೊ೦ಡು ಕಥೆಯನ್ನು ಅರ್ಥವತ್ತಾಗಿ ನಿರೂಪಿಸಿದ್ದೀರಿ....
ಆಲ್ ದಿ ಬೆಸ್ಟ್...
thank you goutam............
ReplyDeletevijayashree madam
ReplyDeletetumbaa dhanyavaada..... nimma mecchugege........
ದಿನಕರ್ ಸರ್,
ReplyDeleteಈ ಕತೆ ತುಂಬಾ ಚೆನ್ನಾಗಿ ಬರೆದಿದ್ದೀರಿ....ನನ್ನ ಬಿಡುವಿಲ್ಲದ ಕೆಲಸದ ನಡುವೆ ಓದಲಿಕ್ಕಾಗಿರಲಿಲ್ಲ...ಹೆಣ್ಣಿನ ಇಂದಿನ ಮನಸ್ಥಿತಿಯನ್ನು ಕತೆಯಲ್ಲಿ ಚೆನ್ನಾಗಿ ಪ್ರತಿಬಿಂಬಿಸಿದ್ದೀರಿ. ಈಗಿನ ಕಾಲದ ಹೆಣ್ಣು ಮಕ್ಕಳು ಹೀಗಿರಲೇಬೇಕು ಕೂಡ...
ಒಂದೇ ವೇಗದಲ್ಲಿ ಓದಿಸಿಕೊಂಡು ಹೋಗುವ ಹಾಗೆ ಬರಹದಲ್ಲಿ ಮೂಡಿಸಿದ್ದೀರಿ...ಹೆಣ್ಣು ಎಲ್ಲದಕ್ಕೂ[ಬಾರಿಸುವುದಕ್ಕೂ]ಸಿದ್ಧವಾಗಿರಬೇಕು ಅಲ್ವಾ ಸರ್...
ಕಥನ ನೈಜವಾಗಿದೆ!
ReplyDeleteಶಿವೂ ಸರ್,
ReplyDeleteಧನ್ಯವಾದ ನಿಮ್ಮ ಮೆಚ್ಚುಗೆಯ ಮಾತಿಗೆ... ನಾನು ಕಂಡ ಕೆಲ ಹುಡುಗಿಯರ ಪಾಡಾಗಿತ್ತು ಇದು..... ಆದರೆ ಅಂತ್ಯ ಮಾತ್ರ ನನ್ನ ಕಲ್ಪನೆ.....
ಭಾಶೆ ಮೇಡಂ,
ReplyDeleteಧನ್ಯವಾದ ನಿಮ್ಮ ಅನಿಸಿಕೆಗೆ ಮತ್ತು ಮೆಚ್ಚುಗೆಗೆ....
ತುಂಬಾ ಲೇಟ್ ಆಗಿ ಬಂದೆ..ತುಂಬ ಚೆನ್ನಾಗಿ ಬರೆದಿದ್ದೀರಿ. ನಾನು ಕಂಡ ಹಾಗೆ ಇಲ್ಲಿ ವರ್ಕ್ ಮಾಡೋವಾಗ ಈ ಥರದ ಪ್ರೋಬ್ಲೆಮ್ಸ್ ಬರುವುದಿಲ್ಲ..:)
ReplyDeleteGood one. ಆಫೀಸ್ ನಲ್ಲಿ ಕೆಲಸ ಮಾಡೋ ಹೆಣ್ಣು ಮಕ್ಕಳಿಗೆ ಸಲಿಗೆ ಮತ್ತು ಫ್ರೀಯಾಗಿರೋದರ ಮದ್ಯೆ ವ್ಯತ್ತಾಸ ಗೊತ್ತಿರಬೇಕು. Nimma commentina ee salugalu thumba ista aithu.
ReplyDeleteವನಿತಾ ಮೇಡಂ,
ReplyDeleteಲೇಟ್ ಆಗಿ ಬಂದರೂ ಪರವಾಗಿಲ್ಲ....... ನಿಮ್ಮ ಅನಿಸಿಕೆ, ನನಗೆ ಅಮೂಲ್ಯ..... ಹೌದು.... ಇಲ್ಲಿನ ಹುಡುಗಿಯರಿಗೆ ಕೆಲಸ ಮಾಡುವ ಅನಿವಾರ್ಯತೆ ಇದೆ .... ಅದಕ್ಕಾಗಿ ಈ ರೀತಿನಡೆಯತ್ತೆ.............
ನಿಶಾ ಮೇಡಂ,
ReplyDeleteನಾನು ಯಾವಾಗಲೂ ನಂಬುವ ತತ್ವ ಅದು........ ಎಲ್ಲದ್ದಕ್ಕೂ ಒಂದು ಇತಿ, ಮಿತಿ ಇರತ್ತೆ ಆಲ್ವಾ........... ಎರಡೂ ಕಡೆಯಿಂದಲೂ.......
update baradhe iddiddakko athva naanu busy aagi idduddakko.... e katheyannu thumba late aagi odhabekaagi banthu... thumba ishta aayithu... kathanaayakiya paathra kooda :)
ReplyDeleteಕಥೆ ಚೆನ್ನಾಗಿದೆ . ಎಲ್ಲ ಹೆಣ್ಣುಮಕ್ಕಳು ಇಷ್ಟೇ ಬುದ್ದಿವಂತರಾಗಿದ್ರೆ ಅನೇಕ ಕಷ್ಟಗಳಿಂದ ಪಾರಾಗುತ್ತಿದ್ದರಲ್ವ?
ReplyDeletenice article sir...
ReplyDeleteದಿನಕರ್, ಹೆಣ್ಣಿನಂತೆ ಊಹಿಸಿಕೊಂಡು ಬರೆದಿದ್ದು ತುಂಬಾ ಚೆನ್ನಾಗಿದೆ..ಪಾರಾಗುವ ಉಪಾಯ ತುಂಬಾ ಚೆನ್ನಾಗಿದೆ. ನಾವು ಕಾಲೇಜ್ ಡೇಸ್ನಲ್ಲಿ busನಲ್ಲಿ ಹೋಗೋವಾಗ ಸೇಫ್ಟೀ ಪಿನ್ ಇಟ್ಕೋತಿದ್ದಿದ್ದು ನೆನಪಿಗೆ ಬಂತು!!
ReplyDeletesudhesh,
ReplyDeleteishtapattu comment maadiddakke... dhanyavaada....
suma madam,
ReplyDeletehennumakkaLu buddivantare iraare, aadre bekaadaaga kharchu maadalla ashte...
manasu madam,
ReplyDeletethank you.....
sumana madam,
ReplyDeletethank you very much..... ishtapattu odi, comment maadiddakke...... nimma anisike haakiddakke