ಕಾಯುತಿರುವೆ ಎಂದೋ ನಾನು,
ನೀನು ಬರುವ ದಾರಿಯ....
ಮೌನದಿಂದ ನೋವ ಸಹಿಸಿ,
ಕಾಯ್ವೆ ನಿನ್ನ ದಾರಿಯ.....
ನೀನು ತರುವ ಮಧುರ ಪ್ರೀತಿ,
ನಿನ್ನ ತೊದಲು ಮಾತಿಗೆ.....
ನೀನು ಕೊಡುವ ಹರುಷವನ್ನು,
ನೆನೆದು ಜೀವ ಪುಳಕವು.....
ನಿನ್ನ ಜೊಲ್ಲು ಬಾಯಿಯಿಂದ ,
ಕರೆವೆ ನೀನು 'ಅಮ್ಮಾ' ಎಂದು.....
ಜಗದ ಎಲ್ಲಾ ಪ್ರೀತಿ ತಂದು,
ಬಾ ನೀನು ನನ್ನ ಮುಂದೆ.......
ನಿನ್ನ ಕಣ್ಣ ಹೊಳಪಿಗಾಗಿ,
ನನ್ನ ನಯನ ಕಾಯುತಿಹುದು.....
ನಿನ್ನ ಪಾದದೊದೆತಕಾಗಿ,
ನನ್ನ ಉದರ ಕಾಯುತಿಹುದು......
ಮಳೆಯ ಮೊದಲ ತಂಪಿನ್ಹಾಗೆ,
ನೀಡು ಸುಳಿವು ಬರುವ ಮುನ್ನ.....
ಸಿಟ್ಟು ಸೆಡವು ಎಲ್ಲ ಬಿಟ್ಟು,
ಬಂದು ಬೇಗ ಸೇರು ನನ್ನ.....
ದಿನಕರ್,
ReplyDeleteನಿಮ್ಮ ಕಾಯುವಿಕೆ ಬೇಗ ಮುಗಿಯಲಿ......
ಸುಂದರ ಕವನ....
ಮಹೇಶ್ ಸರ್,
ReplyDeleteತುಂಬಾ ತುಂಬಾ ಧನ್ಯವಾದ...... ನಿಮ್ಮ ಹಾರೈಕೆ ನಿಜವಾಗಲಿ.....
ಏನ್ಸಾರ್..! ನನ್ನವಳದ್ದೂ ಇದೇ ಹಾಡು..ನಾನೂ ಬರೆಯೋಣವೆಂದುಕೊಂಡಿದ್ದೆ...:)..ನೀವು ಚೆನ್ನಾಗಿ ಬರೆದಿದ್ದೀರಿ...ಸೊಗಸಾಗಿದೆ...
ReplyDeleteಭಟ್ ಸರ್,
ReplyDeleteತುಂಬಾ ದಿನದಿಂದ ಬರೆಯೋಣ ಎಂದುಕೊಂಡಿದ್ದೆ..... ಈಗ ಬರೆದೆ ಅಷ್ಟೇ..... ನಿಮಗೂ ಒಲಿಯಲಿ ಬೇಗ ಅನಿಸಿದ್ದು......
nice poem sir :) tumba ista aithu :)
ReplyDeleteದಿನಕರ್, ಯಾಕೋ ಎಲ್ಲಾ ಗಮನಿಸಿದರೆ...ಸದ್ಯದಲ್ಲೇ ಇನ್ನೊಂದು ಕವನ ಬರೆಯಲಿದ್ದೀರಿ ಅನ್ಸುತ್ತೆ...ಶುಭವಾಗಲಿ...
ReplyDeleteಹಾಂ... ಅಂದಹಾಗೆ...ಕವನ ಎಲ್ಲಾ ಮುದವಾದ ಭಾವನೆಗೆ ಕನ್ನಡಿಯಾಗಿದೆ...
snow white ,
ReplyDeleteಧನ್ಯವಾದ ನಿಮಗೆ ಇಸ್ಥವಾದುದಕ್ಕೆ ..... ಕಾಮೆಂಟ್ ಹಾಕಿದ್ದಕ್ಕೆ....
ಆಜಾದ್ ಸರ್,
ReplyDeleteಸುಮ್ನೆ ಸರ್, ತುಂಬಾ ದಿನದಿಂದ ಇದೆ ಬರೆಯಬೇಕು ಅನಿಸುತ್ತಿತ್ತು.... ಕೆಲವೊಂದು ಸಾಲುಗಳು ರೆಡಿ ಆಗಿತ್ತು.... ನಿನ್ನೆ ಮಾತ್ರ ಸಲೀಸಾಗಿ ಬರೆದು ಮುಗಿಸಿದೆ..... ನಿಮ್ಮ ಬಾಯಿ ಹರೆಕೆಯಂತೆ ಆಗಲಿ....... ಧನ್ಯವಾದ ನಿಮ್ಮಹರಕೆಗೆ....
ದಿನಕರ್ ಸರ್,
ReplyDeleteನಿಮ್ಮ ನಿರೀಕ್ಷೆಯ ಕಂದಮ್ಮ ಸುಗಮವಾಗಿ ಭುವಿಗೆ ಆಗಮಿಸಲಿ. ಪುಟ್ಟಕಾಲುಗಳಿಂದ ಉದರಕ್ಕೆ ಒದಿಸಿಕೊಳ್ಳುವದರ ಆನಂದವೇ ಬೇರೆ ಅಲ್ವ...
ಕವನ ಚೆನ್ನಾಗಿದೆ.
ಇನ್ನೂ ಎಷ್ಟು ದಿನ ಕಾಯಬೇಕಿದೆ ದಿನಕರ್...
ReplyDeleteಸಿಹಿಸುದ್ದಿಗೆ...!!!!! ???
ಶುಭಾಶಯಗಳು.
ಕಾಯುತ್ತಿರುವವರು ಬೇಗ ಬ೦ದು ಹಾಯ್ ಅನ್ನಲಿ :)
ReplyDeleteಕ೦ದನನ್ನು ಒಡಲಿನಲ್ಲಿಟ್ಟುಕೊ೦ಡು ಮಮತೆಯ ಅನುಭೂತಿಯನ್ನು ಪಡೆಯುತ್ತಿರುವ, ಕ೦ದನ ಬರುವಿಕೆಯನ್ನು ಕಾತರದಿ೦ದ ಎದಿರು ನೋಡುತ್ತಿರುವ ನಿಮ್ಮವರ ಭಾವನೆಯನ್ನು ತು೦ಬಾ ಚೆನ್ನಾಗಿ ಬರೆದಿದ್ದೀರಿ.
ReplyDeleteಧನ್ಯವಾದಗಳು .
ಶುಭ ಹಾರೈಕೆಗಳು.
ಶಿವೂ ಸರ್,
ReplyDeleteಭುವಿಗೆ ಆಗಮಿಸಿದ ಕೂಡಲೇ ನಿಮಗೆಲ್ಲಾ ತಿಳಿಸಿ. ತೋರಿಸಿ ನಿಮ್ಮೆಲ್ಲರಿಂದ ಆಶೀರ್ವಾದ ಕೋರುತ್ತೇನೆ..... ಧನ್ಯವಾದ.....
ವಿಜಯಶ್ರೀ ಮೇಡಂ,
ReplyDeleteಗೊತ್ತಿಲ್ಲಾ ಮೇಡಂ, ಏನೂ ಸೂಚನೆಯೇ ಸಿಗುತ್ತಿಲ್ಲ..... ಧನ್ಯವಾದ......
ಸುಧೇಶ್,
ReplyDeleteತುಂಬಾ ತುಂಬಾ ಧನ್ಯವಾದ,,,,,,,
ಮನಮುಕ್ತಾ ,
ReplyDeleteಅವಳ ವೇದನೆ, ಅವಳ ಹೇಳದ ನೋವುಗಳನ್ನು ನೋಡಿ ನನಗೆ ನೋವಾಗುತ್ತಿದೆ...... ಅವಳನ್ನು ಈ ರೀತಿ ಸಂತೋಷ ಕೊಡೋಣ ಎಂದು ಇದನ್ನು ಬರೆದೆ..... ಧನ್ಯವಾದ ನಿಮ್ಮ ಹಾರೈಕೆಗೆ.....
ಚೆನ್ನಾಗಿದೆ . ಹೀಗೆ ಮುಂದಿನ ಹಂತವಾದ ಜೋಗುಳವನ್ನೂ ರಚಿಸಿ ಎಂಬ ಹಾರೈಕೆ.
ReplyDeleteಸುಮಾ ಮೇಡಂ,
ReplyDeleteಖಂಡಿತ..... ನಿಮ್ಮ ಹಾರೈಕೆ ನಿಜವಾಗಲಿ......... ಧನ್ಯವಾದಗಳು.....
ದಿನಕರ್ ಸರ್
ReplyDeleteಕವನ ಚೆನ್ನಾಗಿದೆ
ನಿಮ್ಮ ಆಸೆ ಬೇಗ ಪೂರೈಸಲಿ :)
ರಂಜಿತ ಮೇಡಂ,
ReplyDeleteನಿಮ್ಮ ಹಾರೈಕೆಗೆ ಧನ್ಯವಾದಗಳು.....
hi....
ReplyDeleteSogasada kavana. hitavada barahagalu. Shubhavagali. Sihisuddi namagella tilisi.
heege barita iri
ಏಕಾಂತ ಅವರೇ,
ReplyDeleteಸ್ವಾಗತ ನನ್ನ ಬ್ಲಾಗ್ ಗೆ.... ಸಿಹಿ ಸುದ್ದಿ ಸಿಕ್ಕ ತಕ್ಷಣ ತಿಳಿಸುತ್ತೇನೆ... ಧನ್ಯವಾದ ಸರ್, ಹೀಗೆ ಬರುತ್ತಾ ಇರಿ....
super
ReplyDelete'ದಿನಕರ ಮೊಗೇರ ' ಅವರೇ..,
ReplyDeleteಮುದ್ದಾಗಿದೆ ನಿಮ್ಮೀ ಮುದ್ದು ಮಗುವ ನಿರೀಕ್ಷೆಯ ಕವನ...
ನನ್ನ 'ಮನಸಿನಮನೆ'ಗೆ ಬನ್ನಿ:http//manasinamane.blogspot.com
ಸಧ್ಯ ನನ್ನವಳೂ ಇದೇ ಹಾಡು ಹೇಳುತ್ತಿರಬಹುದು. ಕೇಳಿ ನೋಡುತ್ತೆನೆ. ಲೇಖನದ ಧಾಟಿ ಚೆನ್ನಾಗಿದೆ.
ReplyDeleteದಿನಕರ...
ReplyDeleteಅಭಿನಂದನೆಗಳು...
ನಮ್ಮ ಬದುಕು..
ನಮ್ಮ ಬಾಳಿಗೊಂದು..
ಅರ್ಥ ತರುವ..
ಕಂದನಿಗೆ ..
ಕಂದ
ಕಂದನಿಗೊಂದು ಹೆಸರಿಡುವ..
ಕಂದನ ಹೆಸರಿನಲ್ಲೊಂದು
ಹೆಸರಾಗುವ..
ತಂದೆಯಾಗುವ ಅನುಭವ ವರ್ಣಿಸಲು ಅಸಾದ್ಯ...!
ಚಂದದ ಕವನ...
ಮತ್ತೊಮ್ಮೆ ಹೃದಯ ಪೂರ್ವಕ ಶುಭಾಶೀರ್ವಾದಗಳು...
ಮನಸು ಮೇಡಂ,
ReplyDeleteಧನ್ಯವಾದ ನಿಮ್ಮ ಕಾಮೆಂಟ್ ಗೆ....
ಗುರು ದೆಸೆ,
ReplyDeleteಧನ್ಯವಾದ ನಿಮ್ಮ ಹಾರೈಕೆಗೆ , ನಿಮ್ಮ ಅನಿಸಿಕೆಗೆ...
ಸೀತಾರಾಂ ಸರ್,
ReplyDeleteಕೇಳಿ ನೋಡಿ, ನಿಮ್ಮವರೂ ಬೇಗ ಹಾಡು ಹೇಳುವ ದಿನ ಬರಲಿ........... ನಾನು ನನ್ನ ದಿನಕ್ಕಾಗಿ ಕಾಯುತ್ತಿದ್ದೇನೆ......
ಪ್ರಕಾಶಣ್ಣ,
ReplyDeleteಇನ್ನೂ ತಂದೆಯಾಗುವ ಸೂಚನೆ ಸಿಕ್ಕಿಲ್ಲ..... ಆದರೆ ನನ್ನವಳು ಹೇಳಿಕೊಳ್ಳದೆ ಇದ್ದ ನೋವು ಮತ್ತು ಆಶೆ ಎಂದು ಇದನ್ನು ಬರೆದೆ........ ನೀವು ಹೇಳಿದ್ದು ಸರಿ , ಆ ಆನಂದ ಅನುಭವಿಸಲು ಎಷ್ಟು ದಿನ ಕಾಯಬೇಕೋ ಗೊತ್ತಿಲ್ಲ.... ತುಂಬಾ ತುಂಬಾ ಕನಸುಗಳಿವೆ .... ನಿಮ್ಮ ಹಾರೈಕೆ ಗೆ ಧನ್ಯವಾದ....
ನಿಮ್ಮ ಇಷ್ಟ ಬೇಗನೆ ಸಿದ್ಧಿಸಲಿ..
ReplyDeleteರವಿಕಾಂತ್ ,
ReplyDeleteಧನ್ಯವಾದ ನಿಮ್ಮ ಕಾಮೆಂಟ್ ಗೆ...
modalasala appanaaguttideeri! Congratulation on your promotion! mane mana hasiraagali...harushada honalu hariyali.... Kavana chennagide!
ReplyDeleteವಸಂತ್ ಸರ್,
ReplyDeleteನಾನೀಗಲೇ ಅಪ್ಪನಾಗ್ತಾ ಇಲ್ಲ..... ಅದರ ಸೂಚನೆಯೂ ಸಿಕ್ಕಿಲ್ಲ..... ಕಾಯುತ್ತಿದ್ದೇನೆ ಆ ಭಾಗ್ಯಕ್ಕೆ...... ಧನ್ಯವಾದ ನಿಮ್ಮ ಕಾಮೆಂಟ್ ಗೆ....
ದಿನಕರ ಅವರೇ , ತುಂಬಾ heart touching ಕವಿತೆರೀ , Infact ತುಂಬಾ heart touching ನಿಮ್ಮವರ ಸ್ವಗತ ರೀ . ಅದನ್ನ ಇಷ್ಟು ಚೆನ್ನಾಗಿ ನೀವು ಅರ್ಥ ಮಾಡಿಕೊಂದಿದ್ದಿರಾ . ನಿಮ್ಮವರ ವೇದನೆ , ಅವರು ಹೇಳದ ನೋವುಗಳನ್ನ ನೋಡಿ ನಿಮಗೆ ನೋವಾಗುತ್ತಿದೆ ಅಂತ ಹೇಳಿದ್ದಿರಾ . ಅಸ್ಟು ಸಾಕು ಅವರು ನೋವು ಅರ್ದಕರ್ದ ಕಡಿಮೆ ಆಗುತ್ತೆ ಬಿಡಿ . ಈ ಕವಿತೆ ಓದಿ ಉಳಿದ ಅರ್ದ ನೋವು ಮಾಯವಾಗುತ್ತೆ ಬಿಡಿ . ಹುಡುಗಿಯರಿಗೆ ಮಕ್ಕಳೆಂದರೆ ತುಂಬಾ ಇಷ್ಟ , ಎಷ್ಟು ಇಷ್ಟ ಅಂದ್ರೆ ನಾವು ಹುಡಗಿಯರು ಬಾಲ್ಯದಲ್ಲೇ ಬೊಂಬೆಗೆ ಸಿಂಗರಿಸಿ , ಉಡಿಸಿ , ತೊಡಿಸಿ ಅದನ್ನ ಜೊತೇಲೆ ಮಲಗಿಸಿಕೊಂಡು ಮಕ್ಕಳ ಥರ ನೋಡ್ಕೊಂಡಿರ್ತಿವಿ , ಅರ್ದ ಬಾಲ್ಯನ ಅದರಲ್ಲೇ ಕಳಿದಿರ್ತಿವಿ .
ReplyDeleteಇನ್ನು ರಿಯಲ್ ಬೊಂಬೆಗೆ ಕಾಯೋದು ಹೇಗಿರುತ್ತೆ ಅಂತ ಕವಿತೆಯಲ್ಲಿ ಚೆನ್ನಾಗಿ ಹೇಳಿದ್ದೀರಾ . ಕೆಳಗಿನ ಸಾಲುಗಳಂತೂ ಮನ ಕಲುಕಿದವು.
ಮಳೆಯ ಮೊದಲ ತಂಪಿನ್ಹಾಗೆ,
ನೀಡು ಸುಳಿವು ಬರುವ ಮುನ್ನ.....
ಸಿಟ್ಟು ಸೆಡವು ಎಲ್ಲ ಬಿಟ್ಟು,
ಬಂದು ಬೇಗ ಸೇರು ನನ್ನ..
ಇನ್ನು ತುಂಬಾ ದಿನಾ ನಿಮ್ಮನ್ನ ಕಾಯಿಸದೇ , ಜೊಲ್ಲು ಬಾಯಿಂದ ನಿಮ್ಮನ್ನ ಅಮ್ಮ , ಅಪ್ಪ ಅನ್ನೋ ಪುಟಾಣಿ ಬೇಗ ಬರಲಿ ಎಂದು ಹಾರೈಸುವ
ಮನಸಾರೆ
ಮನಸಾರೆ ಮೇಡಂ,
ReplyDeleteನಿಮ್ಮ ಅನಿಸಿಕೆ ಓದಿ ಮನಸ್ಸು ಭಾರವಾಯ್ತು..... ನನ್ನವಳ ಮನಸ್ಸನ್ನು ತಿಳಿದಿದ್ದೇನೆ..... ಅವಳ ನಿರೀಕ್ಷೆ ನನಗೆ ಅರ್ಥವಾಗತ್ತೆ..... ನಿಮ್ಮ ಹಾರೈಕೆ ಬೇಗ ನಿಜವಾಗಲಿ...... ಧನ್ಯವಾದ ನಿಮ್ಮ ಹಾರೈಕೆಗೆ ಮತ್ತುಕಾಮೆಂಟ್ ಗೆ....
ದಿನಕರ್ ಸರ್,
ReplyDeleteಕವಿತೆ ಓದಿಸಿಕೊಂಡು ಹೋಗಿ
ಮಾತನ್ನು ಮೌನವಾಗಿಸಿ
ಚಿಂತಿಗೆ ಹತ್ತಿಸಿತು .ತುಂಬಾ ಚೆನ್ನಾಗಿರುವ ಕವನ
ಮತ್ತೆ ಬರೆಯಿರಿ ಬಿಡುವಿದ್ದಾಗ ಓದುವೆ
ಕನಸು ಮೇಡಂ,
ReplyDeleteಧನ್ಯವಾದ ಓದಿ ಇಷ್ಟಪಟ್ಟಿದ್ದಕ್ಕೆ ......