Apr 13, 2010

'ಸುಮ್ ಸುಮ್ನೆ...... ಕೊರೀತಾನೆ.... '

ಸುಮ್ನೆ ......


ಏನೂ ಇಲ್ಲ........


ಏನೂ ಬರೆಯಲು ಮನಸ್ಸಿಲ್ಲ.......


ಏನಾದರೂ ಬರೆಯೋಣ ಎಂದುಕೊಂಡೆ , ಏನೂ ಹೊಳೆಯಲಿಲ್ಲ........ !

ಕಳೆದ ಸಾರಿ ಬರೆದ ಪೋಸ್ಟ್ ಯಾರ ಬ್ಲಾಗ್ ನಲ್ಲಿ ಅಪ್ಡೇಟ್ ಹೋಗದೆ ತುಂಬಾ ಬೇಸರವಾಯಿತು....... ಕಾರಣ ಇನ್ನೂ ತಿಳಿದಿಲ್ಲ..... ಕಾಮೆಂಟ್ ಸಹ ಕಡಿಮೆ ಬಂತು..... ಹಾಗಾಗಿ ಏನೂ ಬರೆಯೋ ಮನಸ್ಸಾಗಲಿಲ್ಲ...... ಆದರೂ ಬಿಡದೆ, ಎಲ್ಲರ ಬ್ಲಾಗ್ ಗೆ ಹೋಗಿ , ಆರ್ಕುಟ್ ನಲ್ಲಿ ಪ್ರಚಾರ ಮಾಡಬೇಕಾಗಿ ಬಂತು........ ಇದು ಯಾಕೋ ಸರಿ ಕಾಣಲಿಲ್ಲ ನನಗೆ.....


ಏನಾದರೂ ಬರೆದು ಅದಕ್ಕೆ ಪ್ರತಿಕ್ರೀಯೆ ಬರದೆ ಇದ್ದಾಗ ( ಚೆನ್ನಾಗಿದೆ ಅಂತಾದರೂ ಸರಿ, ಚೆನ್ನಾಗಿಲ್ಲ ಅಂತಾದರೂ ಸರಿ..) ಮುಂದೆ ಬರೆಯೋ ಮನಸ್ಸಾಗಲ್ಲ.... ಆಲ್ವಾ.... ನಿಮಗೂ ಹಾಗೇನಾ......


ಅಂದ ಹಾಗೆ............. ಮೊನ್ನೆ ಶುಕ್ರವಾರ ಸೀತಾರಾಂ ಕೆಮ್ಮಣ್ಣು ಸರ್ ಸಿಕ್ಕಿದ್ರು....... ಅವರ ಕೆಲಸದ ಮೇಲೆ ಮಂಗಳೂರಿಗೆ ಬಂದಿದ್ದರು..... ಬರುವ ಮೊದಲೇ ನನಗೆ ಹೇಳಿದ್ದರು, ನನ್ನ ಫೋನ್ ನಂಬರ್ ಸಹ ತೆಗೆದುಕೊಂಡಿದ್ದರು...... ಅವರ ಕೆಲಸ ಮುಗಿಸಿ ಕೂಡಲೇ ಫೋನ್ ಮಾಡಿದ್ದರು..... ನಾನೂ ಸಹ ಅವರನ್ನ ಭೇಟಿ ಮಾಡಲು ಕಾತರನಾಗಿದ್ದೇ.... ತುಂಬಾ ಚೆನ್ನಾಗಿ ' ಒಂಚೂರು ಅದು ಇದು' ಬರೆಯುವ ಬ್ಲಾಗ್ ನ ಒಡೆಯರು ಅವರು...... ಬ್ಲಾಗ್ ಬರೆಯಲು ಶುರು ಮಾಡಿದಾಗಿನಿಂದ ಭೇಟಿಯಾದ ಎರಡನೇ ಹಿರಿಯ ಸ್ನೇಹಿತರು ಇವರು....... ಮೊದಲನೆಯವರು..... ಆಜಾದ್ ಸರ್....... ಸೀತಾರಾಂ ಸರ್ ನೋಡಿ ತುಂಬಾ ಖುಷಿಯಾಯಿತು ನನಗೆ..... ಶಾಂತ ಸ್ವಭಾವದ ಬುದ್ದಿಜೀವಿ ಅವರು..... ಅವರ ಜೊತೆ ಕಳೆದ ಒಂದು ಘಂಟೆ ಕೆಲವು ಪ್ರಭಾವಿ ವ್ಯಕ್ತಿಗಳ ಬಗ್ಗೆ ಇದ್ದ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಿದರು...... ತುಂಬಾ ಧನ್ಯವಾದ ಸರ್...... ನೀವು ಕೊಟ್ಟ ಗಿಫ್ಟ್ ಇಷ್ಟ ಆಯ್ತು...... ಧನ್ಯವಾದ.......


ನನ್ನದೊಂದು ಚಾಳಿ ಇದೆ...... ಕವನ ಬರೆಯಲು ಹೋದರೆ , ಒಂದು ಶಬ್ದನೂ ನೆನಪಿಗೆ ಬರಲ್ಲ.... ... ಯಾವುದಾದರೂ ಪುಸ್ತಕ ಓದಬೇಕು.....
ಓದುತ್ತಾ ಓದುತ್ತಾ.....ಯಾವುದಾದರೂ ಶಬ್ದ ಕಚ್ಚಿಕೊಂಡು ಬಿಡತ್ತೆ......

ಆ ಶಬ್ದ ಇಷ್ಟವಾಗಿ, ಕವನ ಅದರ ಸುತ್ತಲೇ ಹೊಯ್ದಾಡಲು ಶುರು ಮಾಡತ್ತೆ......ಅದಕ್ಕೆ, ಸುಣ್ಣ ಬಣ್ಣ ಎಲ್ಲಾ ತುಂಬಿ 'ಕವನ' ಅಂತ ಹೇಳಿ ನಿಮ್ಮ ಕಿವಿಗೆ ಹೂವು ಇಡುತ್ತೇನೆ.....

ಇಲ್ಲಿ ತನಕ ಒಂದು ಹಾಡಾದರೆ, ಅದಕ್ಕೆ ಶೀರ್ಷಿಕೆ ಇಡೋದು ಇನ್ನೊಂದು ಪಾಡು.....

ಕವನ ಅನ್ನೋದನ್ನ ಗೀಚಿ ಒಂದು ಗಂಟೆಯಾದರೂ ಅದರ ಶೀರ್ಷಿಕೆ ಯಾವುದು ಅಂತ ಒದ್ದಾಡ್ತೀನಿ..... ಐದೋ, ಹತ್ತೋ ಬರೆದು, ಹರಿದು ಆದ ಮೇಲೆ ಅನಾಯಾಸವಾಗಿ ಒಂದು ಶೀರ್ಷಿಕೆ ಹೊಳೆದುಬಿಡತ್ತೆ..... ನಿಮಗೂ ಹೀಗೆ ಆಗತ್ತಾ...... ಕೆಲವೊಮ್ಮೆ ಶೀರ್ಷಿಕೆ ಮೊದಲೇ ಬರೆದು..... ಅದಕ್ಕೆ ತಕ್ಕ ಕವನ ಬರೆಯಲು ಹೋದರೆ ಮಿಲಿ ಮೀಟರ್ ಸಹ ಮುಂದಕ್ಕೆ ಹೋಗಲ್ಲ ಅನ್ನತ್ತೆ 'ಕವನ'.........ನಿಮ್ಮ ಕಥೆ ಏನು ಹೇಳಿ........


ಇನ್ನು.... ಕಥೆ ಬರೆಯೋದು ಅಂದ್ರೆ ತುಂಬಾ ಸೋಮಾರಿ ನಾನು..... ವಿಷಯ ಇದೆ... ಬರೆಯೋಕೆ ಸಮಯ ಇಲ್ಲ.... ಸಮಯ ಇದ್ರೂ, ಕುಟ್ಟಲು ಸೋಂಬೇರಿತನ......

ನೀವೆಲ್ಲಾ ಕಥೆ , ಕವನ ಬರೆಯೋ ಮೊದಲು.......ಪೇಪರ್ ನಲ್ಲಿ ಮೊದಲು ಬರೆದು , ನಂತರ ಕಂಪ್ಯೂಟರ್ ನಲ್ಲಿ ಕುಟ್ಟುತ್ತೀರೋ ಅಥವಾ ಡೈರೆಕ್ಟ್ ಆಗಿ ಕುಟ್ಟುತ್ತೀರೋ ಗೊತ್ತಿಲ್ಲ.....

ನಾನಂತೂ ಮೊದಲು ಪೇಪರ್ನಲ್ಲಿ ಬರೆದು ತೆಗೆದು ನಂತರ ಕಂಪ್ಯೂಟರ್ ಮುಂದೆ ಬಂದು ಕುಟ್ಟಿದರೆ ಮಾತ್ರ ಕಥೆ ಕೈ ಹಿಡಿಯತ್ತೆ..... ಇಲ್ಲದಿದ್ರೆ ಕೈ ಕಚ್ಚತ್ತೆ.......

ಇನ್ನು, ಅನುಭವ ಬರೆಯೋಣ ಎಂದರೆ ಸಿಕ್ಕಾಪಟ್ಟೆ ಇದೆ......

ನಾನು ಸ್ವಭಾವತಃ ಕೀಟಲೆ ಮನುಷ್ಯ..... ನನ್ನ ಅನುಭವ, ಬರೇ ಬೇರೆಯವರಿಗೆ ಕಾಲೆಳೆದದ್ದೇ ಇದೆ..... ಅದನ್ನೇ ಬರೆದರೆ.....'' ಇದೇನಪ್ಪಾ ಇವ, ತನ್ನ ಬೆನ್ನು ತಾನೇ ತಟ್ಟಿಕೊಳ್ತಾ ಇದ್ದಾನೆ'' ಅಂತೀರೇನೋ ಅಂತ ಭಯ.......

ಏನಾದರೂ ಬರೆಯೋಣ ಅಂತ ಕುಳಿತು...... ಇಷ್ಟು ಹೊತ್ತಾಯಿತು...... ಅರ್ಧ ಬೋಳಾದ ತಲೆ ಮೇಲೆ ಕೈಯಾಡಿಸಿ ಕೈಯಾಡಿಸಿ...... ಒಂದೆರಡು ಕೂದಲು ಕೈಗೆ ಬಂತೆ ಹೊರತು...... ಮತ್ತೇನೂ ಬರಲಿಲ್ಲ........



54 comments:

  1. ಹಹಹ...ದಿನಕರ್...ಏನೂ ಬರ್ಲಿಲ್ಲ ಅಂತಾನೇ ಹೇಳಿ...ಎರಡು ಕೂದ್ಲು ಬಂತು ಅಂತ..ಬೋಳಿಗ್ಯಾಕೆ ಬೈಯ್ತೀರಿ...ಎಲ್ಲಾ ಆಗಿ ಬಂತಲ್ಲ ಒಂದು ಪೋಸ್ಟು...ಸೀತಾರಾಂ ಸಿಕ್ಕಿದ್ದು ನಿಮಗೆ....??!! ಯಾಕೋ ವಯಸ್ಸಿನಾನುಗುಣ ನೀವು ಮೀಟ್ ಮಾಡ್ತಿದ್ದೀರಾ ಹೇಗೆ ಬ್ಲಾಗು ಮಿತ್ರರನ್ನ..?? ಹಹಹಹ......

    ReplyDelete
  2. ಹ್ಹ ಹ್ಹ ಸೊ ಕೇರ್ ಫುಲ್ ಆಗಿ ಇರಿ..:)
    ಈ ಸಲ ಕೂಡ ನಿಮ್ಮ ಬ್ಲಾಗ್ ಅಪ್ಡೇಟ್ ಆದದ್ದು ಕೂಡ ಕಾಣಿಸ್ತಿಲ್ಲ ..ಆರ್ಕುಟ್ ಮೂಲಕನೆ ಬಂದೆ:(

    ReplyDelete
  3. :):). ಕೂದಲಾದರೂ ಬಂತಲ್ಲ ಬಿಡಿ. ನಿಮ್ಮ ಕೂದಲಿಲ್ಲದ ತಲೆಗೂ , ಸೀತಾರಾಮ ಗುರುಗಳನ್ನು ಭೆಟ್ಟಿಯಾದುದಕ್ಕೂ ಒಳ್ಳೆ co-ordination ಆಯ್ತು ಬಿಡಿ. ಏನೂ ತೋಚುತ್ತಿಲ್ಲ ಅಂತ ಚೆನ್ನಾಗಿ ಬರ್ದೀದ್ದೀರಲ್ಲಾ ...

    ನಿಮ್ಮ blog publishing setting ಒಮ್ಮೆ ಚೆಚ್ಕ್ ಮಾಡಿ. ಇನ್ನೂ update ಆಗಿಲ್ಲ.

    ReplyDelete
  4. ಕಥೆ ಬರೆಯೊ ವಿಷಯದಲ್ಲಿ ನನ್ನ ಕತೆಯೂ ನಿಮ್ಮ ಥರಾನೆ!! :-( ಸುಮ್ ಸುಮ್ನೆ ಕೊರೆದದ್ದು ಇಷ್ಟ ಆಯ್ತು..:-)

    ReplyDelete
  5. ಆಜಾದ್ ಸರ್,
    ಹ್ಹಾ ಹ್ಹಾ....... ಎರಡು ಎರಡು ಕೂದಲು ಬರ್ತಾ ಹೋದರೆ.......... ಸದ್ಯದಲ್ಲೇ ಏನೂ ಉಳಿಯಲಿಕ್ಕಿಲ್ಲ ಸರ್............ ಮುಂದಿನ ಸ್ಸರಿ ನನ್ನ ಭೇಟಿಯಾದಾಗ ನೀವು ತಂಪು ಕನ್ನಡಕ ಹಾಕಬೇಕಾಗಿ ಬರಬಹುದು........ ಯಾಕಂದ್ರೆ, ಸೂರ್ಯನ ಕಿರಣ ನನ್ನ ತಲೆ ಮೇಲೆ ಬಿದ್ದು..... ನಿಮ್ಮ ಕಣ್ಣಿಗೆ ಹೊಳೆಯಬಹುದು ಆಲ್ವಾ ಸರ್............ ಧನ್ಯವಾದ ನಿಮ್ಮಅನಿಸಿಕೆಗೆ...........

    ReplyDelete
  6. ವನಿತಾ ಮೇಡಂ,
    ಏನಾಗಿದೆಯೋ ಗೊತ್ತಿಲ್ಲ........... ನನ್ನ ಫ್ರೆಂಡ್ ಗೆ ಹೇಳಿದ್ದೀನಿ............ ನಾನು ನೆಟ್ವರ್ಕ್ ಕೆಲಸದಿಂದ ಬಹಳ ದೂರ........... ಧನ್ಯವಾದ ಬಂದು ಕಾಮೆಂಟ್ಮಾಡಿದ್ದಕ್ಕೆ..............

    ReplyDelete
  7. ಸುಬ್ರಮಣ್ಯ ಸರ್,
    ಹ್ಹಾ ಹ್ಹಾ....... ನಾನು ಆಜಾದ್ ಸರ್ ನೂ ಭೇಟಿ ಮಾಡಿದ್ದೇನೆ........ ತಲೆಯ ಬಗ್ಗೆ ಯೋಚನೆ ಮಾಡಿಲ್ಲ............. ಧನ್ಯವಾದ.......

    ReplyDelete
  8. ಜಯಲಕ್ಷ್ಮಿ ಮೇಡಂ,
    ಸ್ವಾಗತ ನನ್ನ ಬ್ಲಾಗ್ ಗೆ........ ನಿಮ್ಮ ಮೊದಲ ಭೇಟಿ ಇದು..... ಮೆಚ್ಚಿ ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದ. ಬರುತ್ತಾ ಇರಿ ಮೇಡಂ.....

    ReplyDelete
  9. ದಿನಕರ್ ಸರ್,

    ಮೊದಲಿಗೆ ನಿಮ್ಮ blog publishing setting ಅನ್ನು ಒಮ್ಮೆ ಪರೀಕ್ಷಿಸಿ ಅದರಲ್ಲಿ ಎಲ್ಲಾ ಸರಿಯಾಗಿದೆಯೋ ಅಂತ ನೋಡಿ..

    ಮತ್ತೆ ಏನು ಬರೆಯೋದು ಅನ್ನುವ ಚಿಂತೆ ಬೇಡ ಸರ್, ಬೇರೆಯವರ ಬ್ಲಾಗುಗಳೆಲ್ಲಾ ಬೇಗ ಬೇಗ update ಆಗುತ್ತಿವೆ ಅನ್ನುವ ಕಾರಣಕ್ಕೆ ನಿಮಗೆ ಇಷ್ಟವಿಲ್ಲದಿದ್ದರೂ ಏನಾದರೂ ಒಂದನ್ನು ಬರೆದು ಹಾಕುವ ಚಟಕ್ಕೆ ಬೀಳಬೇಡಿ. ಸುಮ್ಮನಿದ್ದು ನಿಮ್ಮ ಕೆಲಸದ ಕಡೆ ಗಮನವಿಟ್ಟಾಗ ಅಲ್ಲೇ ಏನಾದರೂ ಹೊಸದು ಹೊಳೆಯಬಹುದು. ನೀವಿರುವ ಜಾಗದಲ್ಲೇ ಪುಟ್ಟ ಪುಟ್ಟ ವಿಚಾರಗಳು ಕಾಣುತ್ತವೆ, ಹೊಳೆಯುತ್ತಿರುತ್ತವೆ. ಅದನ್ನು ನೀವು ಮೊದಲು ಕುತೂಹಲದಿಂದ ನೋಡಿದಾಗ ಅದರಲ್ಲಿ ಸ್ವಾರಸ್ಯಕರವಾದುದು ಸಿಗಬಹುದು. ಅದನ್ನು ನೀವು ಮೊದಲು enjoy ಮಾಡಿದ ಮೇಲೆ ಚೆನ್ನಾಗಿದೆಯೆನ್ನಿಸಿದರೆ ನಂತರ ಬ್ಲಾಗಿಗೆ ಹಾಕಿದಾಗ ಬೇರೆಯವರು ಖುಷಿಪಡುತ್ತಾರೆ ಎನ್ನುವುದು ನನ್ನ ಭಾವನೆ. ನಾನು ಅನುಸರಿಸುವುದು ಇದೇ ದಾರಿಯನ್ನು.
    ತಡವಾಗಿಯಾದರೂ ವಿಭಿನ್ನವಾಗಿರುವುದು ಬಂದರೆ ಚೆನ್ನ. ಮತ್ತು ನಾನು ಪೇಪರಿನಲ್ಲಿ ಬರೆದು ನಂತರ ಟೈಪ್ ಮಾಡುವುದಿಲ್ಲ. ಬಂದ ವಿಚಾರಗಳನ್ನು ನೇರ ಟೈಪಿಸಿಬಿಡುತ್ತೇನೆ..
    ನೀವು ಹೀಗೆ ಪ್ರಯತ್ನಿಸಬಹುದು...all the best...

    ಧನ್ಯವಾದಗಳು.

    ReplyDelete
  10. ಶಿವೂ ಸರ್,
    ನೀವು ಹೇಳಿದ್ದನ್ನ ಪೂರ್ಣವಾಗಿ ಒಪ್ಪುತ್ತೇನೆ............. ಆದ್ರೆ ಈ ಬಾರಿ ನಾನು ಭಿನ್ನವಾಗಿ, ಏನೂ ಬರೆಯಲು ಆಗುತ್ತಿಲ್ಲ ಎನ್ನುತ್ತಲೇ, ಸ್ವಲ್ಪ ಬರೆಯೋಣ ಎಂದು ಬರೆದೆ ಇದನ್ನ............ ಮುಂದಿನದಕ್ಕಾಗಿ ಕಾಯಿರಿ...... ಪ್ರಯತ್ನಮಾಡ್ತೇನೆ.......

    ReplyDelete
  11. ಸ್ವಾಮೀ.. "ನಾನು ಸ್ವಲ್ಪ ಕೀಟಲೆ ಮನುಷ್ಯ" ಅಂತ ಹೇಳ್ಕೊಂದಿದ್ದೀರಿ... ಅದೆಂಥಾ ಕೀಟಲೆ ಅಂತ ನಾನು ಎಲ್ಲಾ ಕೇಳಿದ್ದೀನಿ.. ಅದಕ್ಕೆ ಆ "ಸ್ವಲ್ಪ" ಅನ್ನೋ ಶಬ್ದ ತೆಗೆದಿಡಿ ಆಯ್ತಾ...:-)





    ನಿಮ್ಮ ಬ್ಲಾಗ್ ಅಪ್ಡೇಟ್ ಆಗ್ತಿಲ್ಲ.. ಮೇಲ್ ಓದಿ ಇಲ್ಲಿಗೆ ಬಂದೆ..




    ಮತ್ತೆ ನಾನು ಏನೆ ಬರೆಯಬೇಕೆನ್ದರೂ ನಾಲ್ಕಾರು ಬಾರಿ
    ಆಲೋಚಿಸಿ ನೆಟ್ಟಗೆ ಇಲ್ಲಿ ಟೈಪ್ ಮಾಡುತ್ತೇನೆ.. ಪೇಪರ್ ಬಳಸಿ ಮರ-ಪ್ರಕೃತಿ ಹಾಳು ಮಾಡೋವಂಥ ಕೆಟ್ಟವನು ನಾನಲ್ಲ.. ಹಿಹಿಹಿ "ಕಂಪ್ಯೂಟರ್ ಸೆ ಪೇಪರ್ ಬಚಾವೋ ... ವಾಟ್ ಎನ್ ಐಡಿಯಾ ಸರ್ಜಿ!!!"

    ReplyDelete
  12. ನನಗೂ ತಮ್ಮ ಪೊಸ್ಟಗಳು ಅಪ್ಡೇಟ್ ಆಗ್ಥಾ ಇಲ್ಲ ಜೊತೆಗೆ ನಾನು ಪ್ರವಾಸದಲ್ಲಿದ್ದು ನನ್ನ ನೆಟ್-ಡಾಟಾಕಾರ್ಡ್ ತೊ೦ದರೆಯಿ೦ದಾಗಿ ಗಣಕಯ೦ತ್ರವಿದ್ದರೂ ವಾರಗಳ ಕಾಲ ಬ್ಲೊಗ್ -ನೇಪಥ್ಯದಲ್ಲಿದ್ದೂ ಒ೦ದಾದ ನ೦ತರ ಒ೦ದನ್ನು ಓದುತ್ತಾ ಇ೦ದು ಕೊನೆಗೆ ನಿಮ್ಮ ಪೊಸ್ಟ್-ಗೆ ಬ೦ದೆ.
    ತಮ್ಮ ಪರಿಚಯ-ಭೇಟಿಯಾಗಿದ್ದು ಒ೦ದು ಅಪರೂಪದ ಕ್ಷಣ ನನಗೂ ಸಹಿತ. ದ೦ಪತಿಗಳಿಬ್ಬರೂ ನನ್ನ ಭೇಟಿಗೆ ಬ೦ದದ್ದು ನನಗ೦ತೂ ಖುಷಿಯ ಕ್ಷಣ.
    ಕುಳಿತೆನೆ೦ದು ಬರೆಯ ಹೊರಟರೇ ತಲೆಗೆ ಏನು ಹೊಳೆಯದು. ನಮ್ಮ ಪರಿಸರದ, ನಮ್ಮ ಸುತ್ತ -ಮುತ್ತ ನಡೆವ ಪ್ರತಿಯೊ೦ದರಲ್ಲೂ ಬರಹಕ್ಕೆ ಯೋಗ್ಯವಾಗುವ ಅ೦ಶಗಳಿವೆ. ಅವನ್ನು ಹಿಡಿದಿಟ್ಟು ಓದುಗರಿಗೆ ಆಸಕ್ತಿದಾಯಕವಾಗಿ ಬರೆಯುವದೇ ಬರಹಗಾರನ ಚಾತುರ್ಯ. ಓದು ಓದು ಓದು -ಈ ಕಾರ್ಯ ಒಬ್ಬನಲ್ಲಿ ಬರಹಗಾರನನ್ನು ಹುಟ್ಟು ಹಾಕುತ್ತದೆ -ನರಳಿ ನರಳಿ ರೋಗ ಅ೦ತಾರಲ್ಲಾ ಹಾಗೇ.
    ಬಾಲ್ಯದಿ೦ದಲೂ ನಾನು ಓದುತ್ತಾ ಇದ್ದೆ --ಪತ್ರಿಕೆ, ಚ೦ದಮಾಮಾ, ಬೊ೦ಬೆಮನೆ, ಬಾಲಮಿತ್ರ, ಸುಧಾದಲ್ಲಿನ ಅಜ಼ಾದ-ಶೂಜಾ,ಡಾಬೂ ಮತ್ತು ಮಜ್ನು, ಮಯೂರದ-ಪುಟ್ಟಿ,ಬುತ್ತಿ ಚಿಗುರು ಮತ್ತು ಅ೦ಗೈ ಅರಮನೆ, ಪ್ರಜಮತದ-ನೀವು ಕೇಳಿದಿರಿ ಮತ್ತು ಚಿ೦ಗಾರಿ, ಪುಟಾಣಿ, ಭಾಲ-ಭಾರತಿ ಪ್ರಕಾಶನದ ಹೆಚ್ಚಿನ ಎಲ್ಲ ಪುಸ್ತಕಗಳು, ಕಾಮಿಕ್ಸ್ ಗಳು, ಮು೦ದೆ ಹೀಗೆ ಸಾಗಿ ಕಥೆ, ಕವನ, ದಾರಾವಾಹಿ, ಪತ್ತೇದಾರಿ ಕಾದ೦ಬರಿ ಮು೦ದುವರೆಯಿತು.
    ಶಾಲೆಯಲ್ಲಿನ ನಮ್ಮ ಮನೆಯಲ್ಲೊ೦ದು ಸಣ್ಣ ಪಾಪ ಇರುವದು ಕವನದ ಅಣಕದ ಪ್ರಯತ್ನವಾಗಿ ನಾನು ಮೊದಲು ಬರೆದಿದ್ದು -'ನಮ್ಮ ಅಪ್ಪಿ ಶಾಣ್ಯೇದು". ಜೊತೆಗೆ ರಾಜಕೀಯ, ಸಾಮಾಜಿಕ, ಐತಿಹಾಸಿಕ, ವೈಜ್ಞಾನಿಕ ವಿಶಯವಾಗಿ ಓದುತ್ತಾ ಬ೦ದೆ. ಸಣ್ಣ ಹಾಸ್ಯ ಚುಟುಕುಗಳನ್ನು ಬರೆಯುತ್ತಾ ಬಾಲ್ಯದಲ್ಲಿಯೇ "ಅಪರ೦ಜಿ " ಎ೦ಬ ಪತ್ರಿಕೆಯಲ್ಲಿ ಪ್ರಕಟವಾದವು. ನಿಭ೦ಧ ಸ್ಪರ್ಧೆಗಳಲ್ಲಿ ನನ್ನ ಬಾಷೇ ನನ್ನ ಈ ಓದಿನಿ೦ದಾಗಿ ಪಕ್ವವ್ವಾಗಿ ನಾನೊಬ್ಬ ಯಶಸ್ವಿ ನಿಭ೦ಧನಕಾರನನ್ನಗಲು ಸಹಕರಿಸಿತು. ಮು೦ದಿನ ಚಿ೦ತನೆಯ ಓದುಗಳು ಧಾರವಾಡದ ಕವಿಗಳ ಪ್ರಭಾವ ಮಿತ್ರ ವಾಮನನ ಸ್ಫೂರ್ತಿ ನನ್ನನ್ನು ಓದಿಗೆ ಹಚ್ಚಿದ್ದು ಇ೦ದು ನನ್ನ "ಒ೦ಚೂರು ಅದು -ಇದು"ಗೆ ವಿಷಯಗಳಾದವು. ನನ್ನ ಹೆಚ್ಚಿನ ಸಾಹಿತ್ಯ ಹೊರಹೊಮ್ಮಿದ್ದು -ನನ್ನ ನಿಶ್ಚಯವಾಗಿ ಮದುವೆಯಾಗುವವರೆಗಿನ ನನ್ನ ಪತ್ರ ಪ್ರ್‍ಏಮದಲ್ಲಿ. ಅಲ್ಲಿನ ಹಲವಾರು ಚುಟುಕುಗಳು ನನ್ನ ಬ್ಲೊಗ್ ನಲ್ಲಿ ಮೂಡಿವೆ.
    ಓದು ನಮಗೆ ಶಬ್ದ ಭಾಷೆಗಳ ಮೇಲೆ ಹಿಡಿತ ಸಾಧಿಸಿ ಓದುಗರ ಆಸಕ್ತಿಗೆ ತಕ್ಕ ಹಾಗೇ ಬರೆಯುವ ಸಾಮರ್ಥ್ಯ ಉ೦ಟುಮಾಡುತ್ತದೆ. ಇನ್ನು ನಮ್ಮ ಸುತ್ತಮುತ್ತಲ್ಲಿನ ಜಗ ವಿಷಯ ನೀಡುತ್ತೆ. ಶಿವೂರವರು ಹೇಳಿದ ಹಾಗೆ ಅದನ್ನು ಹೆಕ್ಕುವ ಚಕ್ಷು ನಮಗಿದ್ದರೇ ಸಾಕು.
    ನನ್ನ ಸಾಹಿತ್ಯಕ ಒಲವುಗಳು ಬ್ಲೊಗ್-ಪೊಸ್ಟ್-ನಲ್ಲಿ ಕೆಲವು ವಿವರಗಳಿವೆ.
    ತಮಗೆ ಓದಿನಲ್ಲಿ ಕೆಲವು ಅಕ್ಷರಗಳು ಹಿಡಿಸಿ ಅದರ ಸುತ್ತ ಗಿರಕಿ ಹೊಡೆದು ಬರವಣಿಗೆ ಉದ್ಭವವಾಗುವದು ಒಬ್ಬೊಬ್ಬರಲ್ಲಿನ ಒ೦ದೊ೦ದು ವಿಧದ ಪ್ರಕ್ರಿಯೆ. ಅದರ ಸುತ್ತ ಒ೦ದು ಸೃಜನ ಶೀಲ ವಸ್ತುವೊ೦ದನ್ನು ತಮ್ಮ ಅನುಭವದ ಪರಿಸರದಿ೦ದ ಹೆಕ್ಕಿ ಹೆಣೆದರಾಯಿತು.
    ನಾನ೦ತೂ ನೇರವಗಿ ಟೈಪಿಸಿದ್ದೆನೆ. ಹಳೆಯ ಕೃತಿಗಳನ್ನು ಹೊರತು ಪಡಿಸಿ.

    ReplyDelete
  13. ನನ್ನ ಇತ್ತೀಚಿನ ಚಿತ್ರ-ಪ್ರವಾಸ ಲೇಖನ ಕೇವಲ ೧೫-೨೦ ನಿಮಿಷದ ಕೃತಿ ಅದರ ಅಡಿಬರಹ ಸೇರಿಸಿ.
    ಆದರೆ ಕೆಲವೊಬ್ಬರಿಗೆ ಬರೆದು -ತಿದ್ದಿ ತೀಡಿ ಆಮೇಲೆ ಅದನ್ನು ಅ೦ತರ್ಜಾಲಕ್ಕೇರಿಸುವ ಅಭ್ಯಾಸವೂ ಇರುತ್ತೆ -ಅದು ಒಳ್ಳೆಯದೇ. ನನಗೆ ವಿಷಯ ತಲೆಯಲ್ಲಿ ತಿರುಗುತ್ತಾ ತಿರುಗುತ್ತಾ ರೂಪ ಪಡೇಯುತ್ತೆ ಅದನ್ನು ನೇರವಾಗಿ ದಾಖಲಿಸಿ ಬಿಡುತ್ತೆನೆ.
    ತಮ್ಮ ಬರಹ ಹೀಗೆ ಮು೦ದುವರೆಯಲಿ ಎ೦ದು ಹಾರೈಸುತ್ತಾ ನನ್ನಲ್ಲಿನ ಅನುಭವ ಕೆಣಕಿ ಇದನ್ನು ಬರೆಯಲು ಅವಕಾಶ ಮಾಡಿದ ತಮ್ಮ ಈ ಬರವಣಿಗೆಗೆ ವ೦ದನೆ ಸಲ್ಲಿಸುತ್ತೆನೆ.
    ಬರಹಸ್ಫೂರ್ತಿಗೆ ತಲೆಮೇಲೆ ಕೈಯಾಡಿಸಿ ತಮ್ಮ ಕೂದಲು ಕಿತ್ತಿ ಬ೦ದಿದ್ದು, ನಾನು ನಿಮ್ಮನ್ನು ಭೇಟಿಯಾಗಿದ್ದು ಕಾಕತಾಳೀಯವೆ೦ದು ಸ್ಪಷ್ಟಪಡಿಸಲಿಚ್ಚಿಸುತ್ತೇನೆ -ಎಕೆ೦ದರೆ ಸುಬ್ರಮಣ್ಯರಿಗೆ ಅನುಮಾನ ಕಾಡುತ್ತಿದೆ. :-)))

    ReplyDelete
  14. ದಿನಕರ್ ಅವರೇ ನಮಸ್ಕಾರಗಳು.ನಿಮ್ಮ ಬ್ಲಾಗಿಗೆ ಮೊದಲ ಸಲ ಬರುತ್ತಿದ್ದೇನೆ .ನಿಮ್ಮ ಫಾಲೋಯರ್ ಆಗಿದ್ದೇನೆ .ಆದರೂ ಅಪ್ಡೇಟ್ ಆಗಿಲ್ಲ .
    ನೀವೂ ನನ್ನ ಬ್ಲಾಗಿಗೆ ಬನ್ನಿ .ಫಾಲೋಯರ್ ಆಗಿ .ಬರೆಯುವ ಪ್ರಕ್ರಿಯೆಯ ಹಿಂದೆ ಸಾಕಷ್ಟು ಓದು ಇರಬೇಕು ಎನ್ನುವುದು ನನ್ನ ಅನಿಸಿಕೆ.ಬರವಣಿಗೆ
    ತಾನಾಗೆ ಸಿದ್ದಿಸುತ್ತದೆ.ಸುಮ್ಮನೆ ಬರೆಯುತ್ತಾ ಹೋಗಬೇಕು.ತಲೆ ಕೆಡಿಸಿಕೊಂಡರೆ ಇದ್ದ ಎರಡು ಕೂದಲೂ ಉದುರುತ್ತದೆ .ಇದು ಸ್ವಂತ ಅನುಭವವೂ ಹೌದು .

    ReplyDelete
  15. ದಿನಕರ್ ಸರ್,
    ನಿಜ ಸುಮ್ ಸುಮ್ನೆ ಬರೆಯೊಕೆ ಕುತರೆ ಏನೂ ತೋಚೊದೆ ಇಲ್ಲ. ನಾನು ಬ್ಲೊಗ್ ಪ್ರಾರಂಭ ಮಾಡಿದಾಗ ಬರೆದ ಮೊದಲ ಬರಹದಲ್ಲಿ ಇದೆ ರೀತಿಯ ವಿಚಾರ ಹೇಳಿದ್ದೇನೆ.
    ಹೀಗೆ ಇನ್ನು ಚೆನ್ನಾಗಿ ಬರೆಯುತ್ತಿರಿ....

    ReplyDelete
  16. ಹ್ಹ..ಹ್ಹ..ಹ್ಹಾ..

    ಏನೂ ತೋಚುತ್ತಿಲ್ಲ ಅ೦ತಲೇ ಬರೆದಿದ್ದು ಚನ್ನಾಗಿದೆ..
    ನನಗೆ ಬರೆಯಬೇಕೆನ್ನುವ ವಿಷಯ ಅಕಸ್ಮಾತ್ತಾಗಿ ಹೊಳೆದರೂ ಕೆಲವು ಸಮಯ ತಲೆಯಲ್ಲಿ ತಿರುಗುತ್ತಲೇ ಇರುತ್ತದೆ..

    ನಿಮ್ಮ ಬ್ಲೊಗ್ ನನ್ನ ಪೇಜ್ ನಲ್ಲೂ ಅಪ್ಡೇಟಾಗುತ್ತಿಲ್ಲ..
    ವ೦ದನೆಗಳು.

    ReplyDelete
  17. hahaha chennagide enu bareyokke baralilla anta heLi istu saalu geechi konege nage tarisiddeeri...thnx...

    tadavaagi odi nanna anisike tiLisutta ideeni kshame irali

    ReplyDelete
  18. ಚುಕ್ಕಿಚಿತ್ತಾರದವರ ಬ್ಲಾಗಿನ ಅರಮನೆಯಿ೦ದ ಸುದ್ದಿ ತಿಳಿದು ಬ೦ದೆ. ನಿಮ್ಮ ಬ್ಲಾಗ್ ಅಪ್ದೇಟ್ ಆಗಿಲ್ಲ:(
    ಏನೆ ಹೇಳಿ..ಬರೆದದ್ದು ಚೆನ್ನಾಗಿದೆ..ಬರಿತಾ ಇರಿ..ನಿಮ್ಮ ಬ್ಲಾಗಿನ ಅಪ್ಡೆಟ್ ಸಮಸ್ಯೆ ದೂರಾಗುವವರೆಗೆ ಅಲ್ಲಿ ಇಲ್ಲಿ ಸುದ್ದಿ ತಿಳಿದು ಬರುತ್ತೇವೆ.

    ReplyDelete
  19. ರವಿಕಾಂತ್,
    ಸತ್ಯ ಹೇಳ್ತಾ ಇದ್ದೇನೆ........ ನಾನು ಇಷ್ಟೇ ಇಷ್ಟು ಕೀಟಲೆ ಮಾಡ್ತೀನಿ......... ಹ್ಹಾ ಹ್ಹಾ....... ಯಾರೋ ನನಗಾಗದ ವಿರೋದ ಪಕ್ಷದವರು ನನ್ನ ಬಗ್ಗೆ ಹೀಗೆ ಹೇಳಿದ್ದಾರೆ ಅಷ್ಟೇ........... ಬ್ಲಾಗ್ ಅಪ್ಡೇಟ್ ಆಗದೆ ವಿನಯ್ ಭಟ್ ಗೆ ಕಂಪ್ಲೈಂಟ್ ಕೊಟ್ಟಿದ್ದೇನೆ........... ಏನಾಗತ್ತೋ ನೋಡಬೇಕು......... ಧನ್ಯವಾದ ನಿಮ್ಮಸಂದೇಶಕ್ಕೆ.............

    ReplyDelete
  20. ಸೀತಾರಾಂ ಸರ್,
    ತುಂಬಾ ಧನ್ಯವಾದ ನಿಮ್ಮ ಪ್ರೋತ್ಶಾಹಕ್ಕೆ ... ನಿಮ್ಮ ಅನಿಸಿಕೆಯನ್ನು ನನ್ನ ಜೊತೆ ಹಂಚಿಕೊಂಡಿದ್ದಕ್ಕೆ..... ಮಾರ್ಗದರ್ಶನ ಮಾಡಿದ್ದಕ್ಕೆ... ನಿಮ್ಮ ಪ್ರೋತ್ಸ್ಹಾಹ ಹೀಗೆ ಇರಲಿ ಸರ್......

    ReplyDelete
  21. ಬ್ಲಾಗು ಅಪ್ಡೇಟ್ ಆಗದಿದ್ದರೆ ಬೇಜಾರು, ಪ್ರತಿಕ್ರಿಯೆ ಬರಲಿ ಬರದಿರಲಿ ನಿಮ್ಮ ಬ್ಲಾಗಿಗೆ ಕೆಲವು ದಿನ ನೀವೇ ಓದುಗರಾಗಿಬಿಡಿ! ಕೆಲವು ಮಹಾನ್ ಬ್ಲಾಗ್ ಬರಹಗಾರರು ಬರೆಯುತ್ತಲೇ ಇದ್ದಾರೆ, ವರ್ಷಗಳೇ ಉರುಳಿವೆ, ಓದಿದವರಾರೋ, ಬರೆಯಲಿಲ್ಲ ವೆಂದು ಹೇಳಿದವರಾರೋ ತಿಳಿಯದು, ಬ್ಲಾಗ್ ಮಾತ್ರ ಸತತ ಅಪ್ಡೇಟ್, ಹುರುಳಿಲ್ಲದ ಬರಹ, ಆದರೂ ಅದು ಅವರ ನಿತ್ಯ ಕಾಯಕ, ಚುನಾವಣೆಯಲ್ಲಿ ಕೊನೇಪಕ್ಷ ನಮ್ಮ ಮತವಾದರೂ ನಮಗೆ ಬೀಳುವುದು ಸತ್ಯ ಎಂಬ ಧೋರಣೆಯಂತೆ ಬರೆದೇ ಬರೆಯುತ್ತಾರೆ. ಅವರಿಗಿರುವ ಆ ಸ್ಫೂರ್ತಿ ನಮ್ಮಂಥ ಬರೆಯಬಹುದಾದ ವಿಷಯಗಳನ್ನು ಬುಟ್ಟಿಯಲ್ಲಿ ಇಟ್ಟುಕೊಂಡು ಕೂತಿರುವವರಿಗೆ ಯಾಕಿಲ್ಲ? ಹೂವೋ ಹಣ್ಣೋ ಕಾಯೋ ಮೊಟ್ಟೆಯೋ ಕೋಳಿಯೋ ಮೀನೋ ಒಟ್ಟಾರೆ ಬುಟ್ಟಿಯ ವಸ್ತುವನ್ನು ಮಾರಾಟಮಾಡುವುದು ಮಾರುವವನ ಧರ್ಮ, ಹಾಗೆಯೇ ಮನದ ಬುಟ್ಟಿಯಲ್ಲಿರುವ ವಿಷಯಗಳನ್ನು ಬರೆಯಬೇಕಾದುದು ಬರಹಗಾರನ ಧರ್ಮ, ಧರ್ಮವೋ ಕರ್ಮವೋ ಬರೆಯೋಣ ಬಿಡಿ, ಯಾಕೆ ಹೋದ ಎರಡು ಕೂದಲಿಗೆ ಚಿಂತೆ, ಉದುರಿದ ಪ್ರತೀ ಕೂದಲ ಬುಡಬುಡದಲ್ಲೂ ಹುಟ್ಟಲಿ ರಸಗವಳ, ಒಂದು ಕಥೆ-ಕವನ-ಕಾದಂಬರಿ ಸರಿಯಷ್ಟೇ, ಈಗ ನೀವು ಸುಮ್ಮನೇ ಬರೆಯಲಾರೆನೆಂದು ಹೇಳಿದ್ದೇ ಒಂದು ಬರಹವಾಯಿತಲ್ಲ, ಅದೇ ಸಾಕು, ಇದು ಪ್ರೂಫ್, ಚೆನ್ನಾಗಿದೆ,ಧನ್ಯವಾದಗಳು

    ReplyDelete
  22. ಡಾಕ್ಟರ್ ಕೃಷ್ಣಮೂರ್ತಿ ಸರ್,
    ಸ್ವಾಗತ ನನ್ನ ಬ್ಲಾಗ್ ಗೆ..... ಆಗಾಗ ಸಮಯ ಸಿಕ್ಕಾಗ ಓದುತ್ತಿದ್ದೇನೆ ....... ಏನಾದರೂ ಬರೆಯುತ್ತಾ ಸುಮ್ಮನೆ ಕೊರೆಯೋಣ ಎಂದು ಇದನ್ನ ಬರೆದೆ ಸರ್....
    ನಾನೂ ನಿಮ್ಮ ಬ್ಲಾಗ್ ಗೆ ಬಂದಿದ್ದೆ ಸರ್...... ಹೀಗೆ ಬರುತ್ತಾ ಇರಿ........ಧನ್ಯವಾದ ನಿಮ್ಮ ಅನಿಸಿಕೆಗೆ....

    ReplyDelete
  23. ಶ್ರೀಧರ್ ಸರ್,
    ಧನ್ಯವಾದ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ..... ನಾನು ಬರೆಯೋದರಲ್ಲೂ ಸೋಮಾರಿ............. ಹಾಗೂ ಹೀಗೂ ಮಾಡಿ ಬರೆಯುತ್ತೇನೆ..........

    ReplyDelete
  24. ವಿಜಯಶ್ರೀ ಮೇಡಂ,
    ಹ್ಹಾ ಹ್ಹಾ........ ಅಪ್ಡೇಟ್ ಆಗದೆ ನನ್ನ ತಲೆ ಕೆಟ್ಟು ಹೋಗಿದೆ.......... ಇನ್ನೂ ಸರಿಯಾಗಿಲ್ಲ ಮೇಡಂ............. ಧನ್ಯವಾದ ನಿಮ್ಮ ಅನಿಸಿಕೆ, ಪ್ರೋತ್ಸಾಹಕ್ಕೆ......

    ReplyDelete
  25. ಮನಸು ಮೇಡಂ,
    ತಡವಾಗಿ ಬಂದರೂ ಪರವಾಗಿಲ್ಲ........ ಧನ್ಯವಾದ ಬಂದು ಅನಿಸಿಕೆ ತಿಳಿಸಿದ್ದಕ್ಕೆ.........

    ReplyDelete
  26. ದಿನಕರ್..

    ಪ್ರತಿಕ್ರಿಯೆ ಕಡಿಮೆ ಬಂದರೆ..
    ಮನಸ್ಸಿಗೆ ಸ್ವಲ್ಪ ಖೇದವಾಗುವದು ಸಹಜ...

    ನಾವು ಬರೆಯುವದು ನಮ್ಮ ಸಂತೋಷಕ್ಕೆ..
    ನಮ್ಮ ಗೆಳೆಯರೊಡನೆ ಹಂಚಿಕೊಳ್ಳಲಿಕ್ಕೆ..
    ಅದಕ್ಕೆ ಬೇಸರ ಪಟ್ಟುಕೊಳ್ಳ ಬೇಡಿ..

    ನನಗೂ ಹೀಗೆ ಬರೆಯಲು ಮೂಡ್ ಇಲ್ಲದಿದ್ದಾಗ..
    ನನ್ನ ಮೆಚ್ಚಿನ ಬ್ಲಾಗುಗಳಿಗೆ ಹೋಗಿ...
    ಒಳ್ಳೆಯ ಲೇಖನ ಓದುತ್ತೇನೆ..

    ಇಲ್ಲವೇ...
    ನನ್ನ ಗೆಳೆಯರೊಡನೆ ಫ್ರೀಯಾಗಿ ಮಾತನಾಡಿ..
    ಉತ್ಸಾಹ ತಂದುಕೊಳ್ಳುತ್ತೇನೆ..

    ನಾನಂತೂ ನಿಮ್ಮ ಬರಹಗಳನ್ನು ತಪ್ಪದೆ ಓದುತ್ತೇನೆ..
    ಇಷ್ಟವಾಗುತ್ತದೆ...

    ನಿಮ್ಮ ಸೈಟಿನ ಮೇಸ್ತ್ರಿಯನ್ನೊಮ್ಮೆ ಮಾತನಾಡಿಸಿ...
    ಅವನ ಜೀವನದ "ಹಾಸ್ಯ" ಸಂದರ್ಭ ಏನಾದರೂ ಇದೆಯಾ ಅಂತ ಕೇಳಿ..

    ಸ್ವಾರಸ್ಯಕರ ವಿಷಯ ಏನು ಗೊತ್ತಾ ?

    ಈ ನಗು ಅನ್ನೋದು...
    ಸಮಾಜದ ವರ್ಗಗಳಲ್ಲಿ ಬೇರೆ ಬೇರೆ ಇರುತ್ತದೆ..

    ಮೇಸ್ತ್ರಿಯ "ನಗುವಿನ" ಸಂದರ್ಭ ನಿಮಗೆ ನಗು ಬರದೇ.. ಇರ ಬಹುದು...

    ಆದರೆ ಅಂಥಹದ್ದೊಂದು ಬದುಕಿನ ಪರಿಚಯ ನಿಮಗಾಗುತ್ತದೆ..

    ಏನೂ ವಿಷಯ ಇಲ್ಲಾ ಅಂತನೇ..
    ಒಂದು ಲೇಖನ ಬರೆದಿದ್ದೀರಿ..
    ಇದು ನಿಮ್ಮ ಸಾಮರ್ಥ್ಯ..

    ReplyDelete
  27. lokhaabhiraamavaagi baredha e baraha thumba haththiravenisithu... nanagoo kooda nimma tharaane... modhalu haaLeyalli baredhu nanthara computer nalli kottodhu naanu :)

    ReplyDelete
  28. ಪ್ರಕಾಶಣ್ಣ,
    ನಿಮ್ಮ ಪ್ರೀತಿಯ ಮಾತಿಗೆ , ಕಳಕಳಿ, ಕಾಳಜಿಗೆ ನನ್ನ ನಮನ...... ನನಗೆ ಏನೋ ತೊಂದರೆ ಇದೆ ಎನಿಸಿಕೊಂಡು ನೀವು ಫೋನ್ ವಿಚಾರಿಸಿದ್ದು ತುಂಬಾ ಖುಷಿ ನೀಡಿತು....... ಧನ್ಯವಾದ ಪ್ರಕಾಶಣ್ಣ.... ಕೆಲಸದ ಒತ್ತಡ ಇದೆ, ಹೊಸ ಕಂಪನಿಯ ಕೆಲಸ , ಹೊಸ ಸವಾಲು..... ಹಾಗಾಗಿ ಏನೂ ಬರೆಯಲು ಸಮಯ ಇಲ್ಲ ಅಷ್ಟೇ...... ಸಮಯ ಮಾಡಿಕೊಂಡು ಬರೆಯುತ್ತೇನೆ..... ತುಂಬಾ ವಿಷಯ ಇದೆ....... ನೀವು ಹೇಳಿದ ಉತ್ತಮ ಸಲಹೆಗಳನ್ನುಗಮನದಲ್ಲಿ ಇಡುತ್ತೇನೆ.......

    ReplyDelete
  29. THANK YOU SUDHESH.....
    thanks for your comment...

    ReplyDelete
  30. Dinakaravare..
    nannadu hosa haadu.. I can install baraha or any other a/w in my office and after coming from office no mood!!! huh!! heegaadre kashta..

    ReplyDelete
  31. ದಿನಕರ್ ಸರ್,
    ಅನಿವಾರ್ಯ ಕಾರನಗಲಿನದಾಗಿ ಇದೆ ಮೊದಲ ಬಾರಿ ನಿಮ್ಮ ಬ್ಲಾಗಿಗೆ ಬರುತ್ತಿದ್ದೇನೆ. ತಡವಾಗಿ ಬಂದಿದ್ದಕ್ಕೆ ಕ್ಸಮೆ ಇರಲಿ.
    ನಿಮ್ಮ ಎಲ್ಲಾ ಬರಹಗಳನ್ನೂ ಓದಿದೆ. ಒಂದಕ್ಕಿಂತ ಒಂದು ಚೆನ್ನಾಗಿವೆ. ಕತೆಗಳು ಕುತೂಹಲ ಕೆರಳಿಸಿದರೆ, ಕವನಗಳು ಪ್ರೀತಿಯುಕ್ಕಿಸುತ್ತವೆ.

    ದನ್ಯವಾದಳು
    ಇನ್ನು ಮುಂದೆ ಖಂಡಿತಾ ನಿಮ್ಮ ಬ್ಲಾಗೆಂಬ ಮನೆಗೆ ಬರುತ್ತೇನೆ.

    ReplyDelete
  32. enu barayalilla anta ondu page barediddiri.. tumba ishtavaaytu,,

    biduvinallomme beti kodi

    www.vanishrihs.blogspot.com

    ReplyDelete
  33. ನಿವೇದಿತಾ,
    ತುಂಬಾ ಧನ್ಯವಾದ ಬಂದು ಓದಿ, ಕಾಮೆಂಟ್ ಮಾಡಿದ್ದಕ್ಕೆ.... ಈ ಮೂಡಿನದು ಒಂದು ದೊಡ್ಡ ಗೋಳು ಆಲ್ವಾ.....

    ReplyDelete
  34. ಪ್ರವೀಣ್ ಸರ್,
    ಸ್ವಾಗತ ನನ್ನ ಬ್ಲಾಗ್ ಗೆ....... ಹೀಗೆ ಬರುತ್ತಾ ಇರಿ.... ನಿಮ್ಮ ನಿರೀಕ್ಷೆಗೆ ಮೋಸ ಮಾಡಲ್ಲ..............

    ReplyDelete
  35. ವಾಣಿಶ್ರೀ ಮೇಡಂ,
    ಸ್ವಾಗತ ನನ್ನ ಬ್ಲಾಗ್ ಗೆ.......... ಹೀಗೆ ಬರುತ್ತಾ ಇರಿ.......... ಹೊಸ ಪೋಸ್ಟ್ ಬೇಗ ಹಾಕುತ್ತೇನೆ...........

    ReplyDelete
  36. ನಿಮ್ಮ ಬೇಜಾರ್ಗೆ ನಾನು ಒಬ್ಬ ಪಾಲುದಾರ..! ಯಾಕೆ ಅಂತ ಕೇಳ್ತಿರ ತುಂಬಾ ದಿನದಿಂದ ನಿಮ್ಮ ಬ್ಲಾಗ್ ಕಡೆ ಬಂದಿಲ್ಲ..ನನ್ನ ಬ್ಲಾಗಿಗೂ ಕೂಡ..ಕೆಲಸ..ಆರೋಗ್ಯ..ಎಲ್ಲ ನನ್ನ ಕೈಗಳನ್ನು ಕಟ್ಟಿ ಹಾಕಿತ್ತು... ಪ್ರೋಸ್ಸಹ ತುಂಬಾ ಮುಖ್ಯ.. ನಮ್ಮವರು ಓದ್ತಾ ಇದ್ದಾರೆ ಅಂದಾಗ ಬರೀಬೇಕು ಅನ್ನಿಸುತ್ತೆ.. ಬರಿಯೋಕ್ಕು ನಮಗೂ ಏನೋ ಒಂದು ಖುಷಿ ಇರುತ್ತೆ..ನೀವು ಹೇಳೋ ಮಾತು ಸತ್ಯ..ಮನಸ್ಸಿನ ಬಾವಗಳು ಬರಿಲಿಕ್ಕೆ ತುಂಬಾ ಸಹಕಾರಿ..ಅದು ಚೆನ್ನಾಗಿ ಕೆಲಸ ಮಾಡ್ತಾ ಇದ್ದರೆ ಎಲ್ಲ ಸಸುತ್ರವಾಗಿ ಸಾಗುತ್ತೆ...
    ಅವತ್ತು ನಿಮ್ಮ ಕಾಲ್ ಬಂತಲ್ಲ ತುಂಬಾ ಖುಷಿ ಆಯಿತು..ಮುಂದಿನ ವಾರದಲ್ಲಿ ಊರಿಗೆ ಬರ್ತಾ ಇದ್ದೀನಿ..ಸಮಯವಿದ್ರೆ ಬೇಟಿ ಆಗೋಣ.. ಅಥವಾ ಸಮಯ ಮಾಡ್ಕೊಂಡು :)
    ನಿಮ್ಮವ,
    ರಾಘು.

    ReplyDelete
  37. ಚೆನ್ನಾಗಿದೆ ಸರ್ ....ಏನು ಬರೆಯಲಿ ಎಂಬ ವಿಚಾರವಾಗೇ ಇಷ್ಟೆಲ್ಲ ಬರೆದಿದ್ದೀರಲ್ಲ ... ನಿಮಗೆಲ್ಲಿದೆ ವಿಷಯದ ಕೊರತೆ?
    ಬರೆಯುವ ವಿಚಾರದಲ್ಲಿ ನಾನು ಸ್ವಲ್ಪ ಸೋಮಾರಿಯೆ ಸರ್ ... ಬರೆಯಬೇಕೆನ್ನಿಸಿದ ಎಷ್ಟೋ ವಿಚಾರಗಳನ್ನು ಬರೆಯಲಾಗುವುದೇ ಇಲ್ಲ. ಕೆಲವೊಮ್ಮೆ ಬರೆಯಲು ಪ್ರಾರಂಭಿಸಿದರೂ ಇನ್ನೂ ವಿಷಯ ಇರುವಂತೆಯೆ ಮೊಟಕುಗೊಳಿಸಿ ಬಿಡುತ್ತೇನೆ .

    ReplyDelete
  38. ದಿನಕರ್,
    ನಾನು ತಡವಾಗಿ ಬಂದೆ ನಿಮ್ಮ ಬ್ಲಾಗಿಗೆ...ಈಗ ಅಪ್ ಡೇಟ್ ಬಂತು ಅದಕ್ಕೆ.....
    ಸಕ್ಕತ್ ಬರಿದಿದ್ದೀರ....ಕೂದಲಾದರೂ ಬಂತಲ್ಲ ಬಿಡಿ. ....
    ಚೆನ್ನಾಗಿದೆ...

    ReplyDelete
  39. hahaah...super...kate bareyokke barolla anta heLi ondu katena barediddeeri

    ReplyDelete
  40. ಹಿರಿಯ ಲೇಖಕಿಯೊಬ್ಬರು ಹೇಳಿದ್ದರು... ಕವನ ಅಥವಾ ಇನ್ನೂ ವಿಶಾಲವಾಗಿ ಬರವಣಿಗೆ ಅನ್ನೋದು ಹೆರಿಗೆ ಆದ ಹಾಗೆ... ಎಷ್ಟು ತಡೆದರೂ ತಡೆಯಲಾರದು ಬರೆವವರೆಗೂ ನೋವು ತಾಳಲಾಗದು ಅದೇ ಬರೆದ ನಂತರ ಮುದ್ದು ಮುಖದ ಮಗುವ ನೋಡಿದಂತೆ... ತೃಪ್ತಿ, ಸಂತೋಷ ಎಲ್ಲ ಸಿಗುತ್ತೆ!
    ನನಗೂ ಹಾಗೆ! ಒಂದು ಯೋಚನೆಯ ಹುಳ ತಲೆಗೆ ಹೊಕ್ಕರೆ ಬರೆದು ಮುಗಿಸುವವರೆಗೂ ಶಾಂತಿ ಇಲ್ಲ!
    ನನ್ನ ಪ್ರಕಾರ ಅದು ವ್ಯಕ್ತಿಯ ಆಂತರಿಕ ತುಡಿತದ ಮೇಲೆ ನಿರ್ಧಾರವಾಗುತ್ತೆ ಅಥವಾ ಅವರೊಳಗಿರುವ ಕವಿಯ ತಾಕತ್ತಿನ ಮೇಲೆ ಅವಲಂಬಿಸಿರುತ್ತೆ!

    ಭಾಶೇ

    ReplyDelete
  41. raghu,
    oorige bandaaga phone maadi, khandita sigona.... dhanyavaada bandu comment maadiddene....

    ReplyDelete
  42. suma madam,
    dhanyavaada nimma protsaahakke..... heege irali...

    ReplyDelete
  43. sitaaram sir,
    houdu eega upadate hogtaa ide.... credit should go to my friend VINAY BHAT...

    ReplyDelete
  44. ವನಿತಾ ಮೇಡಂ,
    ಇದು ನನ್ನ ಫ್ರೆಂಡ್ ವಿನಯ್ ಭಟ್ ನ ಕೆಲಸ.... ಸರಿ ಮಾಡಿದ್ದು ಅವನು, ಹಾಳು ಮಾಡಿದ್ದು ನಾನು............

    ReplyDelete
  45. ಮಹೇಶ್ ಸರ್,
    ಹ್ಹಾ... ಹ್ಹಾ... ಕೂದಲೂ ಬಂತು, ಒಂದು ಬರಹವೂ ಬಂತೂ....... ಧನ್ಯವಾದ.....

    ReplyDelete
  46. ಮನಸು ಮೇಡಂ,
    ಧನ್ಯವಾದ.... ನಿಮ್ಮ ಕಾಮೆಂಟ್ ಗೆ....

    ReplyDelete
  47. ಭಾಷೆ ಮೇಡಂ,
    ಧನ್ಯವಾದ ನಿಮ್ಮ ಚಂದದ ಪ್ರತಿಕ್ರೀಯೆಗೆ........ ಬರೆಯೋದು ಕಷ್ಟ, ವಿಷಯಕ್ಕೆ ಕೊರತೆ ಇಲ್ಲ...... ಬರೆಯೋದಕ್ಕೆ ಸೋಮಾರಿ.... ಈಗೀಗ ಸಮಯವೂ ಇಲ್ಲ.....

    ReplyDelete
  48. nimage aarticle bareyodu kasta..
    nanage article bareyodu, haage comment hakodu eredu kasta... ha ha ha...

    ReplyDelete
  49. shivprakaash,
    hhaa...hhaa.hego nibhaayisabekappaa....

    ReplyDelete
  50. "ಏನಾದರೂ ಬರೆದು ಅದಕ್ಕೆ ಪ್ರತಿಕ್ರೀಯೆ ಬರದೆ ಇದ್ದಾಗ ( ಚೆನ್ನಾಗಿದೆ ಅಂತಾದರೂ ಸರಿ, ಚೆನ್ನಾಗಿಲ್ಲ ಅಂತಾದರೂ ಸರಿ..) ಮುಂದೆ ಬರೆಯೋ ಮನಸ್ಸಾಗಲ್ಲ.... ಆಲ್ವಾ.... ನಿಮಗೂ ಹಾಗೇನಾ......"

    ನಿಜವಾಗಿಯೂ ಸರ್...ನನಗೂ ಹಾಗೆ....ನಾನು ಬರೆದ ಕೆಲವು ಕವನಗಳು ನಂಗೆ ತುಂಬಾ ಚೆನ್ನಾಗಿವೆ ಅನ್ನಿಸಿತ್ತು... ಆದ್ರೆ ಯಾವುದೇ ಕಾಮೆಂಟ್ ಬರದೆ ಇದ್ದಾಗ ಕವನಾನೆ ಸರಿ ಇಲ್ವೇನೋ ಅನ್ಸಿತ್ತು...

    "ಏನಾದರೂ ಬರೆಯೋಣ ಅಂತ ಕುಳಿತು...... ಇಷ್ಟು ಹೊತ್ತಾಯಿತು...... ಅರ್ಧ ಬೋಳಾದ ತಲೆ ಮೇಲೆ ಕೈಯಾಡಿಸಿ ಕೈಯಾಡಿಸಿ...... ಒಂದೆರಡು ಕೂದಲು ಕೈಗೆ ಬಂತೆ ಹೊರತು...... ಮತ್ತೇನೂ ಬರಲಿಲ್ಲ"

    ಓದಿದ ನಂತರ ನನ್ನ ಕೈನು ಒಂದ್ಸಲ ತಲೆಮೇಲೆ ಸುತ್ತಾಡಿ ಬಂತು....ಹ ಹ ಹ ....

    ReplyDelete
  51. ashok sir,
    hhaa....hhaa.... ode oduttaare nimma kavana.... aadre naavoo saha bereyavara blog ge hogi, odi, namma comment haakabeku ashte.......

    ReplyDelete