Mar 15, 2010

ಚಿಗುರಿದೆ ಕನಸು....!

ತಿಳಿಯಾಗಿದೆ ಮನಸ್ಸು,
ಕಲ್ಲೆಸೆಯಬೇಡ.....
ಹಳೆಯದಾಗಿದೆ ನೋವು,
ಮತ್ತೆ ಮತ್ತೆ ಕೆದಕಬೇಡ.....

ಹೊಸತೊಂದು ಕನಸು,
ಹೊಸತೊಂದು ಜೀವನ...
ಹಾರೈಸಿದೆ ಜೀವ,
ಕಾಯುತ್ತಿದೆ ಜಗತ್ತು....


ಚಿಗುರಿದ ಚಿಗುರು,
ಮರೆತಿದೆ ಹಳತು....
ಜೀವನ ತುಂಬಾ ಚಿಕ್ಕದು,
ಬಾಳೋಣ ಬೆರೆತು....

ಎಲ್ಲಾ ಬ್ಲಾಗ್ ಮಿತ್ರರಿಗೂ ಹೊಸ ವರ್ಷದ ಶುಭಾಶಯ......

40 comments:

  1. ಶುಭಾಶಯಗಳು ದಿನಕರ್ ಸರ್. ಕವನ ಚೆನ್ನಾಗಿದೆ

    ReplyDelete
  2. ದಿನಕರ ಅವರೇ ,
    ನಿಮ್ಮ ಉಗಾದಿಯ ಶುಭಾಶಯ ಮನ ಮುಟ್ಟಿತು , ತುಂಬಾ ಅರ್ಥಗರ್ಬಿತವಾದ ಕವನ , ಒಳ್ಳೆ ಸಂದೇಶ್ . ನಿಮಗೂ ಯುಗಾದಿ ಹಬ್ಬದ ಹಾಗೂ ಹೊಸ ವರ್ಷದ ಶುಭಾಶಯಗಳು . ಮತ್ತೊಂದು ವರ್ಷ ನಮ್ಮ ನಿಮ್ಮ ಕವನ , ಲೇಖನ ಮನಸಿನ ಭಾವನೆಗಳ ಹಂಚಿಕೆಯೊಂದಿಗೆ ಸಾಗಲಿ .

    ಮನಸಾರೆ

    ReplyDelete
  3. ಶಂಭುಲಿಂಗ ಸರ್,
    ಸ್ವಾಗತ ನನ್ನ ಬ್ಲಾಗ್ ಗೆ....... ಧನ್ಯವಾದ ನಿಮ್ಮ ಪ್ರೋತ್ಶಾಹಕ್ಕೆ.....

    ReplyDelete
  4. ಮನಸಾರೆ ಮೇಡಂ,
    ತುಂಬಾ ಧನ್ಯವಾದ ನಿಮ್ಮ ಮೆಚ್ಚುಗೆಗೆ....... ನಿಮಗೂ ಉಗಾದಿಯ ಶುಭಾಷಯ.......

    ReplyDelete
  5. yugaadi prayuktha baredha kavana chennagide...

    nimagu kooda shubha haaraikegalu :)

    ReplyDelete
  6. ದಿನಕರ್ ಸರ್
    ಹೊಸ ವರ್ಷದ ಶುಭಾಶಯಗಳು

    ReplyDelete
  7. ugadi shubhashayagaLu, kavana chennagide

    ReplyDelete
  8. ದಿನಕರ,
    ತುಂಬ ಸುಂದರ ಸಂದೇಶ.
    ನಿಮಗೂ ಸಹ ಯುಗಾದಿಯ ಶುಭಾಶಯಗಳು.

    ReplyDelete
  9. ದಿನಕರ್ ಸರ್,

    ನಿಮ್ಮ ಆಶಯವೇ ನನ್ನ ಆಶಯ ಕೂಡ. ಅದಕ್ಕಾಗಿ ಅರ್ಥಗರ್ಭಿತವಾದ ಕವನ ಬರೆದಿದ್ದೀರಿ...

    ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು.

    ReplyDelete
  10. ಸುಧೇಶ್,
    ಧನ್ಯವಾದ....ನಿಮಗೂ ಉಗಾದಿ ಹಬ್ಬದ ಶುಭಾಶಯ.....

    ReplyDelete
  11. ಡಾ. ಗುರು ಸರ್,
    ಧನ್ಯವಾದ....ನಿಮಗೂ ಹೊಸ ವರ್ಷದ ಶುಭಾಶಯ.....

    ReplyDelete
  12. ಮನಸು ಮೇಡಂ,
    ಧನ್ಯವಾದ ನಿಮ್ಮ ಅನಿಸಿಕೆಗೆ ....ನಿಮಗೂ ಹೊಸ ವರ್ಷದ ಶುಭಾಶಯ.....

    ReplyDelete
  13. ಉದಯ್ ಸರ್,
    ....ನಿಮಗೂ ಹೊಸ ವರ್ಷದ ಶುಭಾಶಯ.....

    ReplyDelete
  14. ಸೀತಾರಾಂ ಸರ್,
    ....ನಿಮಗೂ ಹೊಸ ವರ್ಷದ ಶುಭಾಶಯ..... ಧನ್ಯವಾದ ನಿಮ್ಮಮೆಚ್ಚುಗೆಗೆ,

    ReplyDelete
  15. ಸುನಾಥ್ ಸರ್,
    ತುಂಬಾ ತುಂಬಾ ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ , ....ನಿಮಗೂ ಹೊಸ ವರ್ಷದ ಶುಭಾಶಯ.....

    ReplyDelete
  16. ಮನಮುಕ್ತಾ ಮೇಡಂ,
    , ....ನಿಮಗೂ ಹೊಸ ವರ್ಷದ ಶುಭಾಶಯ.....

    ReplyDelete
  17. ಶಿವೂ ಸರ್,
    ತುಂಬಾ ಧನ್ಯವಾದ ನಿಮ್ಮ ಮೆಚ್ಚುಗೆಗೆ ಮತ್ತು ನಿಮ್ಮ ಕಾಮೆಂಟ್ ಗೆ....
    , ....ನಿಮಗೂ ಹೊಸ ವರ್ಷದ ಶುಭಾಶಯ.....

    ReplyDelete
  18. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.

    ReplyDelete
  19. ದಿನಕರ್ ಸರ್,
    ಲೇಟ್ ಆಗಿ ಯುಗಾದಿಯ ವಿಶ್ ಮಾಡುತ್ತಿದ್ದೇನೆ..
    ನಿಮ್ಮ ಮನೆಯವರಿಗೂ ನಿಮಗೂ ವರ್ಷವಿಡೀ ಹರುಷ ತುಂಬಿರಲಿ ..ಎಂದು ಹಾರೈಸುತ್ತೇನೆ....

    ReplyDelete
  20. 'ದಿನಕರ ಮೊಗೇರ' ಅವರಿಗೆ ಹೊಸ ವರ್ಷ ಉಗಾದಿಯ ಶುಭಕಾಮನೆಗಳು...

    ನವಿರಾದ ಕವಿತೆ..

    ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ..: http://manasinamane.blogspot.com (ಮಾರ್ಚ್ ೧೫ ರಂದು ನವೀಕರಿಸಲಾಗಿದೆ)

    ReplyDelete
  21. ಭಟ್ ಸರ್,
    ನಿಮಗೂ ಹೊಸ ವರ್ಷ ಹರುಷ ತರಲಿ...... ಧನ್ಯವಾದ....

    ReplyDelete
  22. ಶ್ವೇತಾ ಮೇಡಂ,
    ತುಂಬಾ ಧನ್ಯವಾದ..... ಉಗಾದಿ ನಿಮಗೂ ಸಂತಸ ತರಲಿ, ನಿಮ್ಮ ಕುಟುಂಬಕ್ಕೂ.....

    ReplyDelete
  23. ಗುರು- ದೆಸೆ,
    ಉಗಾದಿ ನಿಮಗೂ ನಿಮ್ಮ ಕುಟುಂಬಕ್ಕೂ ಹರುಷ ತರಲಿ.... ಧನ್ಯವಾದ.....

    ReplyDelete
  24. sir kavana chennagide ..
    naanu tumba late ha ha ha
    naanu mundina varshakke igale wish madtene :)

    ReplyDelete
  25. ಕವನ ಬಹಳ ಸುಂದರವಾಗಿದೆ. ನಿಮಗೆ ಯುಗಾದಿಯ ಶುಭಾಷಯಗಳು.

    ReplyDelete
  26. ದಿನಕರ್...ಸಾರಿನಪ್ಪಾ..ನಿಮ್ಮಲ್ಲಿ ಬಂದು ಉಗಾದಿಯ ಶುಭಕೋರೋದು...ತಡ ಆಯ್ತು...
    ಚನ್ನಗಿದೆ ಕವನ...

    ತಿಳಿಯಾಗಿದೆ ಮನಸ್ಸು,
    ಕಲ್ಲೆಸೆಯಬೇಡ.....
    ಹಳೆಯದಾಗಿದೆ ನೋವು,
    ಮತ್ತೆ ಮತ್ತೆ ಕೆದಕಬೇಡ.....

    ReplyDelete
  27. ರಂಜಿತಾ ಮೇಡಂ,
    ಲೇಟ್ ಆಗಿ ಬಂದ್ರು ಪರವಾಗಿಲ್ಲಾ.... ಹಾರೈಕೆಗೆ ಧನ್ಯವಾದ....

    ReplyDelete
  28. ಸಾಗರಿ ,
    ಧನ್ಯವಾದ ನಿಮ್ಮ ಉಗಾದಿ ಹಾರೈಕೆಗೆ... ನಿಮಗೂ ಉಗಾದಿ ಹಾರೈಕೆಗಳು...

    ReplyDelete
  29. ಆಜಾದ್ ಸರ್,
    ಏನೂ ಪರವಾಗಿಲ್ಲ.... .... ಯಾವಾಗ ಬಂದರೂ ನಿಮ್ಮ ಕಾಮೆಂಟ್ ಮುಖ್ಯ ನನಗೆ..... ನಿಮಗೂ ಹೊಸ ವರ್ಷದ ಶುಭ ಹಾರೈಕೆ.....

    ReplyDelete
  30. ಶಿವಪ್ರಕಾಶ್,
    ತುಂಬಾ ಅಪರೂಪವಾಗಿದೆ ನಿಮ್ಮ ಆಗಮನ..... ಹೊಸ ವರ್ಷ ನಿಮ್ಮ ಬಾಳಲ್ಲಿ , ಹೊಸತನ ತರಲಿ.....

    ReplyDelete
  31. ಚೆನ್ನಾಗಿದೆ ಸರ್ ಕವನ..
    ರಾಘು.

    ReplyDelete
  32. ರಘು,
    ತುಂಬಾ ಥ್ಯಾಂಕ್ಸ್..........

    ReplyDelete
  33. ವಿಜಯಶ್ರೀ ಮೇಡಂ,
    ಧನ್ಯವಾದ ನಿಮ್ಮ ಕಾಮೆಂಟ್ ಗೆ....

    ReplyDelete
  34. Dinakar...
    ಮತ್ತೆ ಬಂದೆ....ಒಂದು ಗೊಂದಲ....ಅದಕ್ಕೆ..ನಿಮ್ಮನ್ನೇ ಕೇಳೋಣ ಅಂತ...
    ಚಿಗುರಿದ ಚಿಗುರು
    ಮರೆತಿದೆ ಹಳತು...
    ಇಲ್ಲಿ...ಚಿಗುರು..ಮತ್ತೆ ಚಿಗುರಿತು ಅಂದರೆ ಚಿವುಟಿದ ಕನಸು ಮತ್ತೆ ಹಸಿರಾಯಿತು ಎನ್ನುವ ಅರ್ಥದಲ್ಲೇ..?

    ReplyDelete
  35. ಆಜಾದ್ ಸರ್,
    ಮತ್ತೆ ಬಂದು ನನ್ನ ಕವನದ ಸಾಲನ್ನು ಕೆದಕಿದ್ದಕ್ಕೆ ಧನ್ಯವಾದ...... ''ಯಾರೋ ಚಿವುಟಿ ಹಾಕಿದ್ದ ಚಿಗುರು ಸಹ ತನ್ನ ಹಳೆಯದನ್ನ ಮರೆತು ಮತ್ತೆ ಚುಗುರಿ ನಿಂತಿದೆ.....''

    ReplyDelete