Feb 22, 2010

ನನ್ನ ಕಥೆ.....!

ಇವತ್ತು ನನ್ನ ಮದುವೆ.. ....ನನ್ನ ಜೊತೆಗೆ ಯಾರೂ ಬಂದಿಲ್ಲ..... ಕೊನೆಯ ಘಳಿಗೆಯಲ್ಲಿ ಯಾರಾದರೂ ಬಂದಿರಬಹುದು ಎಂದು ಎಲ್ಲಾ ಕಡೆ ಕಣ್ಣು ಹಾಯಿಸಿದರೂ ಯಾರೂ ಕಾಣಿಸಲಿಲ್ಲ..... ಅವರಿಗೆ ಇಷ್ಟವಿರಲಿಲ್ಲ ಮದುವೆ...... ಅಮ್ಮ ಅಪ್ಪ, ಅಕ್ಕನ ಮನೆಗೆ ಹೋಗಿದ್ದಾರೆ ಇಲ್ಲಿಗೆ ಬರಲೇಬಾರದೆಂದು..... ಅವರಿಗಷ್ಟೇ ಅಲ್ಲ, ಯಾರಿಗೂ ಇಷ್ಟವಿರಲಿಲ್ಲ...... ನಾನು ಕೊನೆಯ ಹುಡುಗಿ ನನ್ನ ಮನೆಯಲ್ಲಿ, ಇಬ್ಬರು ಅಕ್ಕಂದಿರಿಗೆ ಮದುವೆಯಾಗಿದೆ.... ಸುಖವಾಗಿದ್ದಾರೆ..... ನಾನು ಕಿರಿಯವಳಾದ್ದರಿಂದ ಸ್ವಲ್ಪ ಮುದ್ದು ನನ್ನ ಮೇಲೆ... ನನ್ನ ಹಟವೂ ಸ್ವಲ್ಪ ಅತಿಯಾಗೆ ಇತ್ತು......

ಕಾಲೇಜಿಗೆ ಹೋಗುತ್ತಿದ್ದಾಗ ನನ್ನ ಹಿರಿಯ ಬಾವನ ತಮ್ಮನೊಬ್ಬ ಮನೆಗೆ ಬರುತ್ತಿದ್ದ..... ನಾನು ಸ್ವಲ್ಪ ಸಲುಗೆಯಿಂದ ಮಾತನಾಡಿಸುತ್ತಿದ್ದೆ..... ಆತನೂ ಸಹ ನನ್ನನ್ನು ತುಂಬಾ ಪ್ರೀತಿಯಿಂದ ನೋಡುತ್ತಿದ್ದ..... ಕ್ರಮೇಣ ಮನಸ್ಸು , ಪ್ರೇಮಕ್ಕಾಗಿ ಕಾಡುತ್ತಿತ್ತು...... ನನಗೆ ಗೊತ್ತಿಲ್ಲದೇ ಅವನನ್ನು ಇಷ್ಟಪಡಲು ಶುರು ಮಾಡಿದ್ದೆ..... ಆತನೂ ನಂಗೆ ಪ್ರೊಪೋಸ್ ಮಾಡಿಯೇ ಬಿಟ್ಟಿದ್ದ...... ಬುದ್ದಿ ಬೇಡವೆಂದರೂ ಮನಸ್ಸು ಬೇಕೆನಿಸಿತ್ತು... ..... ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಿತ್ತು...... ನನ್ನ ಅಕ್ಕ ಬಾವ ನನ್ನ ಪ್ರೀತಿಗೆ ಒಪ್ಪಿ ಮದುವೆಯಾಗಲು ಒಪ್ಪುತ್ತಾರೆ ಎಂದು ಮನಸ್ಸು ಕನಸು ಕಟ್ಟಲು ಶುರು ಮಾಡಿತ್ತು...... ಬಾವನ ತಮ್ಮ ಎದುರಿಗೆ ಸಿಗದೇ ಇದ್ದರೂ ಫೋನಿನಲ್ಲೇ ಭವಿಷ್ಯದ ಬಗ್ಗೆ ಪಾಯ ಹಾಕಿದ್ದೆವು..... ದೊಡ್ಡಕ್ಕನ ಮಕ್ಕಳನ್ನು ನಾನು ನನ್ನ ಮಕ್ಕಳಿಗಿಂತ ಚೆನ್ನಾಗಿ ನೋಡಿಕೊಂಡೆ..... ಇದು ನನ್ನ ಬಾವನಿಗೂ ತುಂಬಾ ಖುಷಿ ಕೊಡುತ್ತಿತ್ತು..... ನನ್ನ ಮತ್ತು ಬಾವನ ತಮ್ಮನ ಮದುವೆಗೆ ಇವರಿಂದ ಯಾವ ತೊಂದರೆಯೂ ಬರಲಿಕ್ಕಿಲ್ಲಎನ್ನುವುದು ನನ್ನ ದೂರದ ಆಲೋಚನೆಯಾಗಿತ್ತು...... ನಮ್ಮ ಇಷ್ಟದ ಹಾಗೆ ಬದುಕು ಇರಲ್ಲ ಆಲ್ವಾ..... ನಾವು ಎಣಿಸಿದ ಹಾಗೆ ಎಲ್ಲವೂ ನಡೆದರೆ ನಾವೇ ದೇವರಾಗಿ ಬಿಡ್ತೀವಂತೆ.....


ನಮ್ಮ ಸಂಭಂದದ ವಿಷಯ ಕೇಳಿ ಅಕ್ಕ ಬಾವ ತುಂಬಾ ಸಿಟ್ಟಾದರು..... ಬಾವನಿಗೆ ಸುತಾರಾಂ ಸಂಭಂಧ ಇಷ್ಟವಾಗಲೇ ಇಲ್ಲ...... ಅವರಿಗೆ ನನ್ನನ್ನು ಅವರ ತಮ್ಮನ ಹೆಂಡತಿಯಾಗಿ ನೋಡಲು ಮನಸ್ಸೇ ಇರಲಿಲ್ಲ..... ನನ್ನ ಕನಸಿನ ಸೌಧ ಕುಸಿದು ಬಿದ್ದಿತ್ತು...... ಬಾವನ ವಿರೋದವನ್ನು ಅಕ್ಕನೂ ಸಮ್ಮತಿಸಿದರು...... ಬಾವನ ಒತ್ತಾಯಕ್ಕೆ ಅಕ್ಕ ಸೋತರಾ ಅಥವಾ ಅಕ್ಕನದೆ ನಿರ್ಧಾರವಾಗಿತ್ತಾ ಒಂದೂ ತಿಳಿಯಲಿಲ್ಲ..... ಅಕ್ಕ ನನ್ನ ಹೃದಯ ಒಡೆದಿದ್ದರು....... ನಾನು ಹುಚ್ಚಿಯಂತಾಗಿದ್ದೆ.... ಮನೆಯಲ್ಲಿ ಜಗಳವಾಡಿ ಕೆಲಸಕ್ಕೆ ಸೇರಿಕೊಂಡೆ..... ಬಾವ ಅವರ ತಮ್ಮನಿಗೆ ಬೇರೆ ಮದುವೆ ಮಾಡಿಸಿದರು...... ಅವನು ತಲೆ ತಗ್ಗಿಸಿ ಮದುವೆಯಾದ..... ನಾನು ಕೆಲಸಕ್ಕಾಗಿ ಬೆಂಗಳೂರುಸೇರಿದೆ.....


ಮನಸ್ಸು ಅಕ್ಕ ಬಾವನನ್ನು ಕ್ಷಮಿಸಲೇ ಇಲ್ಲ..... ಅವರ ಮೇಲೆ ಸೇಡು ತೀರಿಸಿಕೊಳ್ಳಲು ಮನಸ್ಸು ಕಾತರಿಸುತ್ತಿತ್ತು..... ಹೇಗೆ.... ಹೇಗೆ..... ತಿಳಿದಿರಲಿಲ್ಲ.... ತುಂಬಾ ತಲೆ ಕೆಡಿಸಿಕೊಂಡೆ..... ಕೆಲಸ ಕೈ ಹಿಡಿದಿತ್ತು..... ಚೆನ್ನಾಗಿ ಕೆಲಸ ಕಲಿತೆ...... ಆಫ್ಫಿಸಿನಲ್ಲಿದ್ದ ಒಬ್ಬ ಸಹಾಯಕ ನನ್ನನ್ನು ಇಷ್ಟ ಪಡಲು ಶುರು ಮಾಡಿದ..... ನನಗೆ ಮೊದ ಮೊದಲು ಇದು ಸರಿ ಕಾಣದೆ ಹೋದರೂ, ಹುಡುಗ ಪ್ರಾಮಾಣಿಕನ ಹಾಗೆ ಇದ್ದ ..... ಹುಡುಗ ಬೇರೆ ಜಾತಿಯವನಾಗಿದ್ದ..... ನನ್ನ ಅಕ್ಕ ಬಾವನ ಮೇಲೆ ಸೇಡು ತೀರಿಸಿಕೊಳ್ಳಲು ಸಮಯ ಬಂದಿತ್ತು..... ಬೇರೆ ಜಾತಿಯವನನ್ನು ಮದುವೆಯಾಗಿ , ನನ್ನ ಅಕ್ಕ ಬಾವನಿಗೆ ಸರಿಯಾದ ಹೊಡೆತ ಕೊಡುತ್ತೇನೆ ಎಂದು ನನ್ನ ಹುಚ್ಚು ಮನಸ್ಸು ಯೋಚಿಸಿತ್ತು..... ಅವನು ನೋಡಲು ಸಾದಾರಣವಾಗಿದ್ದ, ದುಡಿಮೆಯೂ ಅಂಥದ್ದೆನಿರಲಿಲ್ಲ... ಆದರೂ ಅವನ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟೆ...... ಅವನ ಪ್ರೀತಿಗಿಂತ, ಅಕ್ಕ ಬಾವನಿಗೆ ಸರಿಯಾದ ಪಾಠ ಕಲಿಸಿದೆ ಎಂಬ ಭಾವನೆಯೇ ನನಗೆ ತುಂಬಾ ಖುಷಿ ಕೊಡ್ತಾ ಇತ್ತು...... ಹುಡುಗ ನನ್ನನ್ನು ತುಂಬಾ ಪ್ರೀತಿಸುತ್ತಿದ್ದ..... ಅವನ ಪ್ರೀತಿಗೆ ನಾನೂ ಕ್ರಮೇಣ ಸೋಲುತ್ತಿದ್ದೆ.....


ಇತ್ತ ಮನೆಯಲ್ಲಿ, ಅಪ್ಪ ಅಮ್ಮ, ಅಕ್ಕಂದಿರು, ಬಾವಂದಿರು ನನ್ನ ಮದುವೆಗಾಗಿ ಹುಡುಗನನ್ನು ಹುಡುಕಲು ಪ್ರಾರಂಭಿಸಿದ್ದರು...... ಇದನ್ನು ಕೇಳಿ ನಾನು ಊರಿಗೆ ಬಂದಿದ್ದೆ..... ನನ್ನ ಹೊಸ ಪ್ರೀತಿಯ ಬಗ್ಗೆ ಅಪ್ಪ ಅಮ್ಮನಿಗೆ ಹೇಳಿಯೇ ಬಿಟ್ಟೆ.... ಅಕ್ಕನ ಎದುರಿಗೆ....... ಅಪ್ಪ ಅಮ್ಮ ಶಾಕ್ ಗೋಳಗಾಗಿದ್ದರು..... ಅಕ್ಕ ಬಾವ ತುಂಬಾ ಜಗಳವಾಡಿದರು...... ಅದರಲೂ ಹುಡುಗ ಬೇರೆ ಜಾತಿಯವನೆಂದು ತಿಳಿದು..... ನನ್ನ ಇನ್ನೊಬ್ಬ ಅಕ್ಕ ಬಾವನೂ ಓಡೋಡಿ ಬಂದರು, ಸುದ್ದಿ ತಿಳಿದು....... ಯಾರು ಏನೇ ಹೇಳಿದರೂ ನಾನು ಕೇಳಲಿಲ್ಲ..... '' ಅಪ್ಪನ ಆರೋಗ್ಯ ಸರಿ ಇಲ್ಲ, ಬಾವನಿಗೆ ಊರಲ್ಲಿ ಒಳ್ಳೆಯ ಹೆಸರಿದೆ .... ಹೀಗಿದ್ದ ನೀನು ಬೇರೆ ಜಾತಿಯ ಹುಡುಗನನ್ನು ಮದುವೆಯಾಗುತೀಯಾ ಎನ್ನುತ್ತೀಯಾ..... ನೀನು ಈಗಲೂ ರೆಡಿಯಾದರೆ ಒಳ್ಳೆಯ ಕೆಲಸವಿರುವ ಹುಡುಗನನ್ನು ಹುಡುಕಿ ನಿನ್ನ ಮದುವೆ ಮಾಡಿ ಕೊಡುತ್ತೇವೆ.....'' ಎಂದೆಲ್ಲಾ ಗೋಗರೆದರೂ ನಾನು ಕೇಳಲಿಲ್ಲ..... ನನ್ನ ಅಪ್ಪ ದೇವರಂಥವರು... .... ಅವರ ಆರೋಗ್ಯ ಸರಿ ಇರಲಿಲ್ಲ..... ಅಮ್ಮನೂ ಮನೆ ಕೆಲಸ ಮಾಡಿ ಮಾಡಿ ಜೀವ ದಣಿದಿತ್ತು..... ನನಗೆ ಯಾರ ಮಾತೂ ರುಚಿಸುತ್ತಿರಲಿಲ್ಲ..... ದೊಡ್ಡಕ್ಕ, ಬಾವನಿಗೆ ಆದ ಶಾಕ್ ನನ್ನನ್ನು ಥ್ರಿಲ್ ಮಾಡಿತ್ತು...... ಒಂದು ಮನಸ್ಸು, ಅಪ್ಪ ಅಮ್ಮನ ಜೊತೆ ಇರುವ ಅವಶ್ಯಕತೆ ಹೇಳುತ್ತಿದ್ದರೆ ಇನ್ನೊಂದು ಮನಸ್ಸು ಪ್ರೀತಿಸುವ ಹುಡುಗನ ಜೊತೆ ಹೋಗುವ ಅನಿವಾರ್ಯತೆ ಹೇಳುತ್ತಿತ್ತು...... ನಾನು ತೋಡಿದ ಹಳ್ಳಕ್ಕೆ ನಾನೇ ಬಿದ್ದಿದ್ದೆನಾ... ತಿಳಿದಿರಲಿಲ್ಲ..... ಯಾರು ಏನೇ ಹೇಳಿದರೂ ಮನಸ್ಸು ಕಲ್ಲು ಮಾಡಿಕೊಂಡು ನನ್ನ ನಿರ್ಧಾರ ಬದಲಿಸಲೇ ಇಲ್ಲ.... ಅಕ್ಕಂದಿರು ಕಣ್ಣಿರು ಸುರಿಸಿದರೂ ನನ್ನ ಮನಸ್ಸು ಕರಗಲಿಲ್ಲ..... ಬಾವನ್ದಿರೂ ಸಹ ತಮ್ಮ ತಂಗಿಯ ಹಾಗೆ ತಿಳಿ ಹೇಳಿದರೂ ನನ್ನ ಪೊರೆ ಕಳಚಲಿಲ್ಲ..... ಎಲ್ಲರೂ ಬೇಸರಿಸಿಕೊಂಡು ಹಾಗೆ ಹೊರಟು
ಹೋದರು......

ಬಾವಂದಿರ ಸಲಹೆಯಂತೆ ಅಪ್ಪ ಅಮ್ಮ ನನ್ನನ್ನು register ಮದುವೆ ಮಾಡಿ ಕೊಟ್ಟರು.... ಅಕ್ಕ ಬಾವನಿಗೆ ಪಾಠ ಕಲಿಸಿದೆ ಎಂದು ಬುದ್ದಿ ಹೇಳುತ್ತಿತ್ತಾದರೂ ಮನಸ್ಸಲ್ಲಿ ಏನೋ ಕಳೆದುಕೊಂಡ ಭಾವ ತುಂಬಿತ್ತು..... ಅಕ್ಕಂದಿರು ಮನಸ್ಸು ಮಾಡಿದ್ದರೆ ನನ್ನ ಮದುವೆ ಅದ್ಧೂರಿಯಾಗಿ ಮಾಡುತ್ತಿದ್ದರು.... ಎಲ್ಲವನ್ನೂ ಧಿಕ್ಕರಿಸಿ ಏನೋ ಸಾಧಿಸುವ ಹುಚ್ಚು ಕಲ್ಪನೆಯೊಂದಿಗೆ ಮನೆ ಬಿಟ್ಟು ಹೊರ ಬಂದೆ.... ಅಪ್ಪ ಅಮ್ಮ register ಮದುವೆಗೆ ಸಹಿ ಹಾಕಿ, ಕಣ್ಣಲ್ಲಿ ನೀರು ತುಂಬಿಕೊಂಡು ಹೊರಟುಹೋದರು...... ಇದಾದ ಕೆಲದಿನಗಳಲ್ಲೇ ನನ್ನ ಮದುವೆ ಶಾಶ್ತ್ರೋತ್ತವಾಗಿ ದೇವಸ್ತಾನದಲ್ಲಿ ನಡೆಯುತ್ತಿದೆ..... ಕೊನೆಯದಾಗಿ ಕಿರಿಯ ಬಾವ ಹೇಳಿದ್ದ ಮಾತು ಇಂದಿಗೂ ಕಿವಿಯಲ್ಲಿ ಸದ್ದು ಮಾಡುತ್ತಿದೆ........ '' ನೋಡು , ನೀನು ಎಲ್ಲರಿಗೂ ಮೋಸ ಮಾಡಿದ್ದೀಯಾ.... ಹುಟ್ಟಿಸಿ, ಸಾಕಿ ಸಲಹಿದ ಅಪ್ಪ ಅಮ್ಮನಿಗೆ, ನಿನ್ನನ್ನು ನಂಬಿದ ಅಕ್ಕಂದಿರಿಗೆ ಎಲ್ಲರಿಗೂ ಮೋಸ ಮಾಡಿದ್ದೀಯಾ, ನೀನು ಬದಲಾಗುತ್ತೀಯಾ ಎಂದು ಇನ್ನೊಂದು ಅವಕಾಶ ಕೊಟ್ಟು ಕೆಲಸ ಕೊಡಿಸಿದ ನನಗೂ ಮೋಸ ಮಾಡಿದ್ದೀಯಾ.... ಈಗ ನೀನು ಪ್ರೀತಿಸಿದ ಹುಡುಗನಿಗೂ ಮೋಸ ಮಾಡಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ...? ಏನೇ ಆದರೂ ಹುಡುಗನಿಗೆ ಮಾತ್ರ ಮೋಸ ಮಾಡಬೇಡ...... ಹಾಗೆ ಮಾಡಿದರೆ ದೇವರು ನಿನಗೆ ಒಳ್ಳೆಯದು ಮಾಡಲ್ಲ....'' ಮಾತು ನನ್ನನ್ನು ತುಂಬಾ hurt ಮಾಡಿತ್ತು... ಮಾತುಗಳೇ ನನ್ನನ್ನು ಮದುವೆಯ ತನಕ ತಂದು ನಿಲ್ಲಿಸಿತಾ...... ಗೊತ್ತಿಲ್ಲ....
ಪುರೋಹಿತರು, ' ತಾಳಿ ಕಟ್ಟೋ ವೇಳೆಯಾಯ್ತು....' ಎನ್ನುತ್ತಿದ್ದರು...... ಹುಡುಗನ ಕೈ ತಾಳಿ ಕಟ್ಟಲು ಮುಂದೆ ಬರ್ತಾ ಇತ್ತು......... ...
ನನ್ನ ಕಣ್ಣು ಮಂಜಾಗಿತ್ತು.....

43 comments:

  1. ದಿನಕರ,
    ತುಂಬ ಸ್ವಾರಸ್ಯಕರವಾದ ಕತೆ. ಬದುಕು ಹೇಗೆ ಬದಲಾಗಿ ಬಿಡಬಹುದು ಎನ್ನುವದನ್ನು ಚೆನ್ನಾಗಿ ನಿರೂಪಿಸಿದ್ದೀರಿ. ಮುಖ್ಯವಾಗಿ
    ನಾಯಕಿಯ ಮನೋಸ್ಥಿತಿಯ ವರ್ಣನೆ ಚೆನ್ನಾಗಿ ಬಂದಿದೆ. ನಿಮಗೆ ಅಭಿನಂದನೆಗಳು.

    ReplyDelete
  2. ದಿನಕರ್ ಸರ್
    ತುಂಬಾ ನೈಜ ಕಥೆಯಂತಿದೆ
    ಎಷ್ಟೋ ಹುಡುಗಿಯರು ಇದೆ ರೀತಿ ಜೀವನ ಹಾಲು ಮಾಡಿಕೊಂಡಿದ್ದಾರೆ
    ನಿಮ್ಮ ಶೈಲಿ ಚೆನ್ನಾಗಿದೆ

    ReplyDelete
  3. ತುಂಬಾ ಚೆನ್ನಾಗಿದೆ ಕಥೆ ಶೈಲಿ ಇಷ್ಟವಾಯಿತು, ನಿಜ ಕಥೆ ಎನ್ನಿಸುತ್ತೆ.

    ReplyDelete
  4. ಸುನಾಥ್ ಸರ್,
    ಧನ್ಯವಾದ ಸರ್, ಹಾಗೆ ಸರ್, ಬದುಕು ಬದಲಾದ ಕಥೆ ಬಗ್ಗೆ ಬರೆಯಲು ಪ್ರಯತ್ನ ಮಾಡಿದೆ...... ನಿಮ್ಮ ಅನಿಸಿಕೆ ನೋಡಿ, ಯಶಸ್ವಿಯಾದೆ ಅನಿಸಿತು...... ತುಂಬಾ ಧನ್ಯವಾದ ನಿಮ್ಮಪ್ರೋತ್ಸಾಹಕ್ಕೆ.....

    ReplyDelete
  5. ಗುರು ಸರ್,
    ಹೀಗೆ ಬದುಕು ಹಾಳು ಮಾಡಿಕೊಂಡ ಹುಡುಗಿಯನ್ನು ಕಂಡು ಬರೆದಿದ್ದೇನೆ...... ಧನ್ಯವಾದ ನಿಮ್ಮ ಕಾಮೆಂಟ್ ಗೆ ....

    ReplyDelete
  6. ಮನಸು ಮೇಡಂ,
    ಹೌದು ಮೇಡಂ, ನಿಜ ಕಥೆನೇ...... ಧನ್ಯವಾದ ನಿಮ್ಮ ಅನಿಸಿಕೆಗೆ......

    ReplyDelete
  7. ಮನಸ್ಸು ಹೋದಂತೆ ಹರಿಬಿಟ್ಟರೆ ಹೀಗೆ ಆಗೋದು ಅಲ್ವಾ... ನಾವು ಮಾಡ್ತಾ ಇರೋದು ತಪ್ಪು ಅಂತ ಗೊತ್ತಿದ್ರೂ ಏನನ್ನೋ ಸಾಧಿಸ್ತಾ ಇದ್ದೀನಿ ಅನ್ನೊ ಹುಚ್ಚುಕಲ್ಪನೆಯಲ್ಲಿ ಸುಖ ಪಡೆಯಲು ಕಾತರಿಸುವುದನ್ನು ಚೆನ್ನಾಗಿ ಹೇಳಿದ್ದೀರ... :)

    ReplyDelete
  8. ದಿನಕರ್ ಸರ್,
    ಕಥೆಯ ನಿರೂಪಣೆ ಚೆನ್ನಾಗಿದೆ. ಕೆಲವು ಮಾತುಗಳು ಹೇಗೆ ಮನಸ್ಸನ್ನು ಹೇಗೆ hurt ಮಾಡಿ ತನ್ನದಲ್ಲದ ನಿರ್ಣಯವನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ ಎನ್ನುವದನ್ನು ತೆರೆದಿಟ್ಟಿದ್ದೀರಿ. ಧನ್ಯವಾದ ನಿಮಗೆ.

    ReplyDelete
  9. ಕಥೆಯ ನಿರೂಪಣೆ ಚೆನ್ನಾಗಿದೆ ದಿನಕರ್.

    ReplyDelete
  10. ಹೃದಯಕ್ಕಾದ ಗಾಯಗಳು ಹೇಗೆ ಉದ್ದಟತನದ ಜೀವನಕ್ಕೆ ಎಡೆ ಮಾಡುತ್ತವೇ ಮತ್ತು ಪರಿಸ್ಥಿತಿಗಳ ಒತ್ತಡದಲ್ಲಿ ಮನಗಳು ನೊ೦ದುಕೊಳ್ಳುವ ಪರಿ-ಕಥೆಯ ಪಾತ್ರಗಳಲ್ಲಿ -ಮೇಲಾಗಿ ನಾಯಕಿಯ ಪಾತ್ರದಲ್ಲಿ, ನವಿರಾಗಿ ನಿರೂಪಣೆ ಮಾಡಿದ್ದಿರಾ... ಧನ್ಯವಾದಗಳು.

    ReplyDelete
  11. ದಿನಕರ್ ಸರ್,
    ಕಥೆ ನಿರೂಪಣೆ ಏನೋ ಚನ್ನಾಗಿದೆ..
    ಆದರೆ ಏನೋ ಅರ್ಧ ಅಷ್ಟೇ ಹೇಳಿದ್ದಿರ ಅನಿಸುತ್ತಿದೆ...
    ದಿವ್ಯಾ ... :-)

    ReplyDelete
  12. ದಿನಕರ್ ಸರ್,

    ಇದು ಯಾರ ಕತೆ? ನೈಜವಾದದ್ದೋ? ಕಲ್ಪನೆಯದೋ? ತುಂಬಾ ಚೆನ್ನಾಗಿ ಬರೆದಿದ್ದೀರಿ...ಒಂದೇ ಉಸುರಿಗೆ ಓದಿಸಿಕೊಂಡುಬಿಡ್ತು. ಮುಂದೇನು?

    ReplyDelete
  13. ದಿನಕರ್,
    ಒಂದೆ ಉಸಿರಿಗೆ ಓದಿ ಬಿಟ್ಟೆ...ಕಥೆ ಶೈಲಿ ಬಹಳ ಚೆನ್ನಾಗಿದೆ....ನಿಜ ಕಥೆ ಅನ್ನಿಸಿತು....
    ಮಿಕ್ಕ ಭಾಗ ಮುಂದುವರೆಸಿ....
    ಒಳ್ಳೆ ನಿರೂಪಣೆ....

    ReplyDelete
  14. ಕಥೆ ಚೆನ್ನಾಗಿದೆ... ಇದು ಖಂಡಿತಾ ನಿಜ -ನಡೆದ ಕಥೆ... ಅಲ್ವೇ??

    ReplyDelete
  15. ಕಥೆ, ಶೈಲಿ, ನಿರೂಪಣೆ, ಎಲ್ಲಾ ಸೊಗಸಾಗಿದೆ.
    ಅಭಿನ೦ದನೆಗಳು.

    ReplyDelete
  16. 'ದಿನಕರ ಮೊಗೇರ' ಅವ್ರೆ..,

    'ಬೇರೆ ಜಾತಿಯವನನ್ನು ಮದುವೆಯಾಗಿ , ನನ್ನ ಅಕ್ಕ ಬಾವನಿಗೆ ಸರಿಯಾದ ಹೊಡೆತ ಕೊಡುತ್ತೇನೆ ': ಇದು ತಪ್ಪು.
    ಇದೆ ರೀತಿ ಒಬ್ಬಾಕೆ(ನನ್ನ ಹತ್ತಿರದ ಸಂಬಂಧಿ) ತಾಯಿಗೆ ಬುದ್ಧಿ ಕಲಿಸಲು,ಬೇರೆ ಜಾತಿಯವನನ್ನು ಮಾಡುವೆ ಆಗಿ...,ಮನೆಯವರಿಂದ,ಊರಿನವರಿಂದ,ಮನದಿಂದ.ದೂರಾಗಿ.. ಹೊರಟಳು. ಅದರಿಂದ ನೊಂದ ಮುಗ್ದ ಮಗುಮನಸ ತಂದೆಯ ಮನ ಸೊರಗಿ ಅನಾರೋಗ್ಯಕ್ಕೆ ತುತ್ತಾಗಿ ಇತ್ತೀಚಿಗೆ ತೀರಿಕೊಂಡರು.. ಆಕೆಗೆ ಆ ವಿಷಯ ತಿಳಿಯಿತೋ ಇಲ್ಲವೋ ಅವಳು ಕೊನೆಯ ಬಾರಿ ತನ್ನ ತಂದೆಯ ಮಖ ನೋಡಲಾಗಲಿಲ್ಲ.. ಅವಳನ್ನು ನೆನೆಯಲೂ ಇಷ್ಟ ಪಡದ ಜನರು ಬಹಳಷ್ಟಿದ್ದಾರೆ..!

    Blog is Updated: http://manasinamane.blogspot.com

    ReplyDelete
  17. ದಿನಕರ...

    ಕಥೆ ಸ್ವಾರಸ್ಯಕರವಾಗಿ ಹೆಣೆದಿದ್ದೀರಿ...

    ಬದುಕು
    ಬದಲಾದರೂ..
    ಭಾವಗಳು.. ಅವೆ ಅಲ್ಲವೆ..?

    ಚಂದದ ಕಥೆಗೆ ಅಭಿನಂದನೆಗಳು...

    ಇನ್ನಷ್ಟು ಪ್ರಯತ್ನ ನಡೆಯಲಿ....

    ReplyDelete
  18. dinakar avare...
    kathe chandha idhe...

    ondhu salahe.... paragraph aagi baredhare odhalu chennagiruttadhe...

    mundeyoo inthaha sundhara kathegalu barali :)

    ReplyDelete
  19. ಹರೆಯದ ಹುಮ್ಮಸ್ಸಿನಲ್ಲಿ ನಡೆದ ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮತ್ತೆ ವಿವೇಚನೆ ಇಲ್ಲದೇ ಅದೇ ತರಹದ ತಪ್ಪು ಮಾಡಿದ್ದು ತುಂಬಾ ಸಹಜವಾಗಿದೆ. ನಾಯಕಿಗೆ ತಾನು ಮಾಡಿದ್ದು ತಪ್ಪು ಅನ್ನಿಸಿದರೂ ಮನಸ್ಸಿಗೆ ಬುದ್ದಿ ಸೋತಿದ್ದು ವೈಪರ್ಯಾಸ!

    ReplyDelete
  20. ಇಂದುಶ್ರೀ ಮೇಡಂ,
    ನೀವು ಹೇಳಿದ್ದು ಸರಿ, ಅದಕ್ಕೆ ಆಲ್ವಾ ಹದಿಹರೆಯ ಅನ್ನುವುದು...... ಆ ಸಮಯದಲ್ಲಿ ತಪ್ಪು ಮಾಡ್ತಿದೀನಿ ಅನ್ನೋದು ಗೊತ್ತಾಗಲ್ಲ ಅನಿಸತ್ತೆ...... ದನ್ಯವಾದ ನಿಮ್ಮಅನಿಸಿಕೆಗೆ....

    ReplyDelete
  21. ಭಟ್ ಸರ್,
    ಏನೇನೋ ಮಾಡೋದಕ್ಕೆ ಕೆಲವೊಂದನ್ನ ದೂರುತ್ತೇವೆ ಅಷ್ಟೇ ಅನಿಸುತ್ತದೆ...... ಧನ್ಯವಾದ ನಿಮ್ಮ ಅನಿಸಿಕೆಗಳಿಗೆ....

    ReplyDelete
  22. ಸುಮಾ ಮೇಡಂ,
    thank you ..... ನಿಮ್ಮ ಪ್ರೋತ್ಸಾಹಕ್ಕೆ.....

    ReplyDelete
  23. ವಿಜಯಶ್ರೀ ಮೇಡಂ,
    ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ......

    ReplyDelete
  24. ಸೀತಾರಾಂ ಸರ್,
    ಹೌದು, ಕೆಲವೊಂದು ಸಮಯ , ಕೆಲವೊಂದು ಘಟನೆಗಳಿಗೆ ನೇರವಾಗಿ ಕಾರಣವಾಗುತ್ತವೆ...... ಹಾಗೆ ಅದರ ಪರಿಣಾಮಗಳಿಗೆ ಕೂಡ.....

    ReplyDelete
  25. ದಿವ್ಯಾ ಮೇಡಂ,
    ಇಲ್ಲ ..... ಅರ್ಧ ಹೇಳಿಲ್ಲ..... ಮುಂದಿನ ಭಾಗ ನನಗೂ ಗೊತ್ತಿಲ್ಲ...... ಧನ್ಯವಾದ ನಿಮ್ಮ ಅನಿಸಿಕೆಗೆ.....

    ReplyDelete
  26. ಶಿವೂ ಸರ್,
    ಧನ್ಯವಾದ ನಿಮ್ಮ ಅನಿಸಿಕೆಗೆ..... ಪ್ರೋತ್ಸಾಹಕ್ಕೆ.... ಮುಂದಿನ ಕಥೆ ನನಗೂ ಗೊತ್ತಿಲ್ಲ..... ಈ ಕಥೆಯ ದುರಂತ ನಾಯಕಿಯನ್ನು ಹುಡುಕುವ ಪ್ರಯತ್ನವನ್ನೂ ಮಾಡಿಲ್ಲ ನಾನು......

    ReplyDelete
  27. ಮಹೇಶ್ ಸರ್,
    ತುಂಬಾ ಧನ್ಯವಾದ ನೀವು ಮೆಚ್ಚಿಕೊಂಡು ಕಾಮೆಂಟ್ ಮಾಡಿದ್ದಕ್ಕೆ..... ಈ ಹುಡುಗಿಯ ಬಗ್ಗೆ ಮುಂದು ನನಗೆ ತಿಳಿದರೆ , ಎಲ್ಲರಿಗೂ ತಿಳಿಸುತ್ತೇನೆ.....

    ReplyDelete
  28. ರವಿಕಾಂತ್,
    ಹೌದು , ಇದು ನಿಜ ಕಥೆ..... ಮುಂದುವರಿದ ಭಾಗ ಯಾವಾಗ ಬರೆಯುತ್ತೇನೋ ಗೊತ್ತಿಲ್ಲ....

    ReplyDelete
  29. ಮನಮುಕ್ತಾ ಮೇಡಂ,
    ಧನ್ಯವಾದ ನಿಮ್ಮ ಅನಿಸಿಕೆಗೆ ಮತ್ತು ಪ್ರೋತ್ಸಾಹಕ್ಕೆ....

    ReplyDelete
  30. ಗುರು ದೆಸೆ ಸರ್,
    ವಿದ್ಯೆ ಕಲಿತು, ಓದಿ, ಯೋಚಿಸೋ ಶಕ್ತಿ ಇದ್ದೂ ಈ ರೀತಿ ಕೆಲಸ ಮಾಡಿರೋರನ್ನ ಯಾರೂ ಕ್ಷಮಿಸೋಲ್ಲ..... ಕ್ಷಮಿಸಲೂ ಬಾರದು...... ದನ್ಯವಾದ ನಿಮ್ಮ ಅನುಭವ, ಅನಿಸಿಕೆ ತಿಳಿಸಿದ್ದಕ್ಕೆ.....

    ReplyDelete
  31. ಪ್ರಕಾಶಣ್ಣ....
    ಬದುಕು , ಎಲ್ಲಾ ಸರಿಯಾಗಿ ನಡೀತಾ ಇದೆ ಎನ್ನುವಾಗಲೇ ಕೈ ಕೊಡತ್ತೆ..... ಇದರ ಮರ್ಮ ಅರ್ಥಾನೆ ಆಗಲ್ಲ..... ಧನ್ಯವಾದ ನಿಮ್ಮ ಅನಿಸಿಕೆಗೆ ... ಪ್ರೋತ್ಶಾಹಕ್ಕೆ.....

    ReplyDelete
  32. ಸುಧೇಶ್,
    ನಿಮ್ಮ ಸಲಹೆಗೆ ಸ್ವಾಗತ..... ಸರಿಯಾದ್ದು ಕೂಡ...... ಮುಂದಕ್ಕೆ ಸರಿ ಮಾಡಿಕೊಳ್ಳುತ್ತೇನೆ..... ಧನ್ಯವಾದ.......

    ReplyDelete
  33. ಸುಮನ ಮೇಡಂ,
    ನೀವು ಹೇಳಿದ್ದು ಸರಿ, ಬುದ್ದಿ ಹೇಳಿದ್ದು ಕೇಳಬೇಕು.... ಕೆಲವೊಮ್ಮೆ ಮನಸ್ಸು ಹೇಳಿದ್ದು ಕೂಡ..... ಆದರೆ ಯಾವುದನ್ನು ತೆಗೆದುಕೊಳ್ಳಬೇಕು ಅಂತ ನಾವೇ ನಿರ್ಧರಿಸಬೇಕು...... ತುಂಬಾ ಧನ್ಯವಾದ.....ನಿಮ್ಮ ಅನಿಸಿಕೆಗೆ....

    ReplyDelete
  34. ಸೂಪರ್... ತುಂಬಾ ತುಂಬಾ ಚೆನ್ನಾಗಿದೆ... ನಿಮ್ಮ ಲೇಖನಗಳಲ್ಲೇ ಇದು ಒಳ್ಳೇ ನಿರೂಪಣೆ, ಸೇಡು ಅಂತ ಹೀಗೆ ಎಷ್ಟು ಜನ ಹುಡುಗಿಯರು ದುಡುಕಿಬಿಡುವುದಿಲ್ಲ... ಆ ವಯಸ್ಸೇ ಹಾಗೆ ಯಾರ್ಯಾರೊ ಇಷ್ಟ ಆಗ್ತಾರೆ, ಮನೆಯವ್ರೇನು ಕೆಟ್ಟದ್ದೇಕೇನೂ ಮಾಡುತ್ತಿರುವುದಿಲ್ಲ(ಕೆಲವು ಸಾರಿ ಅವರೂ ಜಿದ್ದಾಜಿದ್ದಿಗಿಳಿದರೆ ಕಷ್ಟ)... ತಮ್ಮದೇ ಜೀವನ್ ಯೋಚನೆ ಮಾಡಿ ನಿರ್ಧಾರಕ್ಕೆ ಬರಬೇಕು...

    ReplyDelete
  35. ಪ್ರಭು ಸರ್,
    ತುಂಬಾ ತುಂಬಾ ಧನ್ಯವಾದ..... ಪ್ರೋತ್ಶಾಹಕ್ಕೆ ಕೂಡ..... ಆ ವಯಸ್ಸಲ್ಲಿ ನಾನು ಯೋಚಿಸಿದ್ದೆ ಸರಿ, ಎಲ್ಲರೂ ನನ್ನ ಕೆಟ್ಟದ್ದಕ್ಕೆ ಎಣಿಸುತ್ತಾ ಇರತ್ತೆ ..... ಅವರ ಇದೆಯೋಚನೆ ತುಂಬಾ ಕೆಟ್ಟ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ......

    ReplyDelete
  36. tumba tumba letaagi bandiruve..sorry sir.. kathe tumba chennagide :) :)

    ReplyDelete
  37. ದಿನಕರ್, ಆತುರಪಟ್ಟಾಗ ವಿವೇಕ ಕೆಲಸಮಾದೊಲ್ಲ...ಕೋಪಬಂದಾಗ ಬುದ್ಧಿ ಕೆಲ್ಸ ಮಾಡೊಲ್ಲ ಅನ್ನೋದು ಇಂತಹ ನಿದರ್ಶನಗಳನ್ನು ಕಂಡೇ ಅಲ್ಲವೇ ಬಂದಿರುವುದ್ ಈ ಲೋಕಾರೂಢಿಮಾತು...ಕಥೆ ಹೆಣೆಯೋದು ಬರುತ್ತೆ ಬಿಡಿ ನಿಮಗೂ...ಅಬಿನಂದನೆಗೆಳು...

    ReplyDelete
  38. snowwhite ..
    ಧನ್ಯವಾದ...... ಓದಿ.. ಮೆಚಿ ಕಾಮೆಂಟ್ ಮಾಡಿದ್ದಕ್ಕೆ.....

    ReplyDelete
  39. ಆಜಾದ್ ಸರ್,
    ತುಂಬಾ ಧನ್ಯವಾದ..... ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.....

    ReplyDelete
  40. ಹಲೋ ಸರ್,
    ತಮ್ಮ ಬರವಣಿಗೆ ನನಗೆ ತುಂಬಾ ಇಷ್ಟ ಆಗತ್ತೆ. ತುಂಬಾ ಚೆನ್ನಾಗಿ ಚಿತ್ರಿಸಿದ್ದೀರಿ ನಾಯಕಿಯ ಭಾವನೆಗಳನ್ನ. ನನಗಂತು ಇದು ಕಾಲ್ಪನಿಕ ಅಂತ ಅನಿಸಲೇ ಇಲ್ಲ. ಓದುತಿದ್ದಂತೆ ಗೊತ್ತಾಯಿತು ಇದು ಸತ್ಯ ಕಥೆ ಅಂತ.

    ತಪ್ಪು ಮಾಡೋದು ಓಕೆ, ಆದರೆ ತಿಳಿದು ತಿಳಿದು ತಪ್ಪು ಮಾಡುವವರನ್ನ ಕ್ಷಮಿಸಲೇ ಬಾರದು, ಅನುಭವಿಸು ಅಂತ ಬಿಟ್ಟು ಬಿಡಬೇಕು.

    ReplyDelete