ಅವನು ಗಣಪತಿ....... ನಮ್ಮೊರ ಸೋಡಾ ಸಪ್ಲಯರ್.... ಹಳ್ಳಿಯಲ್ಲಿ 'ಗೋಲಿ ಸೋಡಾ' ಮಾರಾಟ ಮಾಡುತ್ತಿದ್ದ..... 'ಶುಂಟಿ ಸೋಡಾ' 'ಸಪ್ಪೆ ಸೋಡಾ' ತುಂಬಾ ಚೆನ್ನಾಗಿ ಮಾಡುತ್ತಿದ್ದ....... ಒಳ್ಳೆಯ ರುಚಿಯಿರುತ್ತಿತ್ತು ಕೂಡ..... ಮಾಡುವ ರೀತಿ, ಶುದ್ದಿಯ ಬಗ್ಗೆ ಅನುಮಾನಗಳಿದ್ದರೂ ಸಹ ರುಚಿಯ ಬಗ್ಗೆ ಮಾತಿರಲಿಲ್ಲ...... ತುಂಬಾ ಕೊಳಕಾಗಿ ಇರುತ್ತಿದ್ದ...... ಅದಕ್ಕಾಗಿಯೇ ಸೋಡಾ ರುಚಿಯಾಗಿರುತ್ತದೆ ಎಂದು ನಾವೆಲ್ಲಾ ಮಾತಾಡಿಕೊಳ್ಳುತ್ತಿದ್ದೆವು ..... ಅವನ ಸೈಕಲ್ ಮೇಲೆ ಊರಲ್ಲಿನ ಎಲ್ಲಾ ಅಂಗಡಿಗಳಿಗೂ ಈತನೇ ಸೋಡಾ ಸಪ್ಲಯ್ ಮಾಡುತ್ತಿದ್ದ.... ವ್ಯಾಪಾರ ಚೆನ್ನಾಗಿ ಆಗುತ್ತಿದ್ದ ಹಾಗೆ ಸ್ಕೂಟರ್ ತೆಗೆದುಕೊಂಡ....... ಸ್ಕೂಟರ್ ಹಿಂದೆ ಸೋಡಾ ರಾಕ್ ಇಟ್ಟುಕೊಂಡು ಹೊರಟನೆಂದರೆ, ''ಮೈಸೂರು ಅಂಬಾರಿ'' ಯ ನೆನಪು ತರಿಸುವ ಹಾಗೆ ಸ್ಕೂಟರ್ ನಡೆಸುತ್ತಿದ್ದ.....
ಒಮ್ಮೆ ಅವನಿಗೆ ಆಕ್ಸಿಡೆಂಟ್ ಆದ ಸುದ್ದಿ ಕೇಳಿ ತುಂಬಾ ಬೇಸರವಾಯಿತು...... ಅವನನ್ನು ಹುಡುಕಿ ನಾನು ನನ್ನ ಗೆಳೆಯ ಹೊರಟೆವು....... ಆಸ್ಪತ್ರೆಯಲ್ಲಿ ಮಲಗಿದ್ದ............ ಕಾಲಿಗೆ ಬ್ಯಾಂಡೇಜ್ ಸುತ್ತಿದ್ದರು........... ಪಾಪ ಅನಿಸಿತು.......... ನನ್ನ ಗೆಳೆಯ ಕೇಳಿದ..... '' ಏನಾಯ್ತಾ ಗಣಪತಿ ''......ಮುಂದೆ ಅವನ ಮಾತಲ್ಲೇ ಕೇಳಿ.............'' ಬೆಳಿಗ್ಗೆ ಸೋಡಾ ತಯಾರಿ ಮಾಡಿ ಎಲ್ಲಾ ಅಂಗಡಿಗೂ ಕೊಡೋಣ ಅಂತ, ಸ್ಕೂಟರ್ ಮೇಲೆ ಸಾಲಾಗಿ ಇಟ್ಟೆ.... ಸ್ಕೂಟರ್ ಸ್ಟಾರ್ಟ್ ಮಾಡಿ ಸುಮಾರು ದೂರ ಹೋಗಿದ್ದೆ...... ಅಂಗಡಿ ಎದುರಿಗೆ ಟರ್ನಿಂಗ್ ಉಂಟಲ್ಲ, ಅದರ ಎದುರಿಗೆ ಕಾಂಪೌಂಡ್ ಹೋಗಿ ಸೀದಾ ಹೊಡೆದೆ''....... ನನ್ನ ಗೆಳೆಯ ಸ್ವಲ್ಪ ರೇಗಿಸೋಣ ಎಂದು..... '' ಟರ್ನಿಂಗ್ ಬಂದರೆ ಸ್ಕೂಟರ್ ತಿರುಗಿಸಬೇಕಿತ್ತು'' ಅಂದ...... ಅವನೋ ಗಣಪತಿ..... '' ಎದುರಿಗೆ ರಿಕ್ಷಾ ಬರುತ್ತಿತ್ತು ಮಾರಾಯ್ರೇ........'' ಅಂದ............ ನನಗೆ ತಡೆಯಲಾಗಲಿಲ್ಲ....... ''ಅಲ್ಲಯ್ಯಾ ಗಣಪತಿ, ಸ್ಕೂಟರ್ ನಲ್ಲಿ ಬ್ರೇಕ್ ಇದೆ ತಾನೇ, ಬ್ರೇಕ್ ಹಾಕಬೇಕಿತ್ತು......'' ಎಂದೇ............... ಅವನ ಉತ್ತರ ನೀವೇ ಕೇಳಿ........ '' ನಾನು ಹಾಗೆ ಅಂದುಕೊಂಡೆ ಮಾರಾಯ್ರೇ........ ಎದುರಿಗೆ ಬರುತ್ತಿದ್ದ ರಿಕ್ಷಾ ತಪ್ಪಿಸಿ ಕಾಂಪೌಂಡ್ ಬದಿಯಲ್ಲಿ ನಿಲ್ಲಿಸೋಣ ಎಂದುಕೊಂಡೆ......'' ಅಂದ........ ''ಮತ್ಯಾಕೆ ಹೀಗಾಯ್ತು'' ಎಂದೇ........ ...'' ಅದೇ ಮಾರಾಯ್ರೆ.....ಆ ಟೈಮ್ ನಲ್ಲಿ ಬ್ರೇಕ್ ಹಾಕೋಕೆ ನೆನಪೇ ಆಗ್ಲಿಲ್ಲ...... ನನ್ನ ಗೆಳೆಯ, ನಗುವುದನ್ನೂ ಮರೆತ.................
ಹಹಹ, ದಿನಕರ್ ನನಗೆ ನಮ್ಮೂರ ಗೌಡ್ರು ತಮ್ಮ ಮಗ ಬೆಂಗಳೂರಿನಿಂದ ತಂದಿದ್ದ ಯೆಜ್ಡಿ ಬೈಕ್ ಸವಾರಿ ಮಾಡಿದ್ದು ನೆನೆಪಾಗುತ್ತೆ...ಎತ್ತಿಬ ಬಂಡಿ ಬಿಟ್ಟು ಇನ್ನೇನೂ ಕಾಣದ ಗೌಡರು ಅದನ್ನು ನಿಲ್ಲಿಸಲು ಪ್ರಯತ್ನಿಸಿದ್ದು ಹಾಗೆನೇ...ಓವ್, ಓಮ್ಮಾ, ಅಚ್ಚಾ, ಓಮ್ಮ...ಅಂತ ಹಹಹಹ......
ReplyDeleteಹ್ಹ...ಹ್ಹ...ಹ್ಹಾ...
ReplyDeleteಹ..ಹ..ಹ ನಮ್ಮೂರಿನಲ್ಲಿ ನಮ್ಮ ತೋಟ ನೋಡಿಕೊಳ್ಳುವವನೊಬ್ಬನಿದ್ದಾನೆ. ಅವನೂ ಸಹ ಹೀಗೆಯೆ , ಅದೆಷ್ಟು ಬಾರಿ ತನ್ನ ಸ್ಕೂಟರಿಂದ ಬಿದ್ದಿದ್ದಾನೊ ಲೆಕ್ಕವಿಲ್ಲ. ಅವನು ಬೀಳದೆ ಬಂದರೆ ನಮಗೆ ಆಶ್ಚರ್ಯವಾಗುತ್ತದೆ!!
ReplyDeleteನನ್ನ ಲೂನಾಕ್ಕೆ ಬ್ರೇಕ್-ಇಲ್ಲದೇ ಕನಿಷ್ಟ ಒ೦ದು ವರುಷ ನಡೆಸಿದ್ದೆ(ನನ್ನ ಲೂನಾ ೧೫-೨೦ಕಿಮಿ/ಗ೦ಟೆಗೆ-ಗಿ೦ತಾ ಹೆಚ್ಚು ಹೋಗುತ್ತಿದ್ದಿಲ್ಲಾ ಬಿಡಿ). ಎದುರಿಗೆ ಅಡ್ಡ ಏನಾದರೂ ಬ೦ದರೆ ಏರಡು ಕಾಲನ್ನು ನೆಲಕ್ಕೆ ಕೊಟ್ಟು ಮ್ಯಾನುವಲ್ ಬ್ರೇಕ ಹಾಕ್ತಾ ಇದ್ದದ್ದು ನೆನಪಾಯಿತು. ಕೆಲವು ಸಲ ಚಪ್ಪಲಿ ಕಿತ್ತಿದ್ದು ಇತ್ತು. ಒಳ್ಳೇ ಪ್ರಸ೦ಗ ಜ್ಞಾಪಿಸಿದಿರಿ.
ReplyDeleteಪುಣ್ಯಾತ್ಮನಿಗೆ ಸೋಡಾ ಮಾರಬೇಕು ಅನ್ನೋದು ನೆನಪಿತ್ತಲ್ಲಾ ಸದ್ಯಕ್ಕೆ...!! :-) ನಿಮ್ಮ ಕಥೆ ಓದಿ ಗೋಲಿ ಸೋಡಾ ನೆನಪಾಯಿತು.. ನಾನು ಪ್ರೌಢ ಶಾಲೆಯಲ್ಲಿ ಓದುತ್ತಿರುವಾಗ, ನನ್ನ ಕ್ಲಾಸ್ ಮೇಟ್ ದಾಮೋದರ ಅನ್ನುವವನ ತಂದೆ ಇದೆ ಗೊಲಿಸೋಡಾ ಮಾಡುತ್ತಿದ್ದರು... ಶನಿವಾರದಂದು ಕೆಲವೊಮ್ಮೆ ನಾವು ಹೋಗಿ ಉಚಿತವಾಗಿ ಸಪ್ಪೆ ಸೋಡಾ, ಸ್ವೀಟ್ ಸೋಡಾ ಎಲ್ಲಾ ಕುಡಿದು ಬರಲು ಮರೆಯುತ್ತಿರಲಿಲ್ಲ..!!!
ReplyDeleteಅಜಾದ್ ಸರ್,
ReplyDeleteಹ್ಹಾ ಹ್ಹಾ ಹ್ಹಾ , ನೀವು ಹೇಳಿದ ಕಥೆ ಕಲ್ಪಿಸಿಕೊಂಡರೆ ತುಂಬಾ ನಗು ಬರತ್ತೆ...... ಧನ್ಯವಾದ ನಿಮ್ಮ ಅನಿಸಿಕೆಗೆ ಸರ್.....
ವಿಜಯಶ್ರೀ ಮೇಡಂ,
ReplyDeleteಧನ್ಯವಾದ ನೀವು ನಕ್ಕಿದ್ದಕ್ಕೆ...... ಹ್ಹಾ ಹ್ಹಾ ಹಾ...........
ಸುಮಾ ಮೇಡಂ,
ReplyDeleteನೀವೂ ಹೇಳಿದ ಕಥೆ ಚೆನ್ನಾಗಿದೆ...... ಕೆಲವರು ಬೀಳದೆ ಸ್ಕೂಟರ್ ಹೊಡಯಲು ಬರೋಲ್ಲ ಅನಿಸತ್ತೆ.... ಧನ್ಯವಾದ ನಿಮ್ಮ ಅನಿಸಿಕೆಗೆ....
ಸೀತಾರಾಂ ಸರ್,
ReplyDeleteನಿಮ್ಮ ಅವಸ್ತೆ ಅನಿಸಿದರೆ ತುಂಬಾ ನಗು ಬಂತು...... ನನ್ನ ಗೆಳೆಯನ ತಂದೆಯವರ ಲೂನಾ ನೆನಪಿಗೆ ಬಂತು...... ಧನ್ಯವಾದ ನಿಮ್ಮ ಅನಿಸಿಕೆಗೆ.....
ರವಿಕಾಂತ್,
ReplyDeleteಶುಂಟಿ ಸೋಡಾ ರುಚಿಯೇ ಬೇರೆ ಆಲ್ವಾ....... ನಂಗೆ ನಗು ತರಿಸಿದ್ದು...... ಬ್ರೇಕ್ ಹಾಕಲು ನೆನಪಿಲ್ಲಾ ಅಂದಿದ್ದು...... 'ಬ್ರೇಕ್ ಹಾಕೋದು' ಅದೊಂದು instict ಆಲ್ವಾ.... ಪುಣ್ಯಾತ್ಮನ instict ಸರಿಯಾದ ಟೈಮ್ ಗೆ ಕೈಕೊಟ್ಟಿತ್ತು.....
ha..ha..haaa...majavaagide...
ReplyDeleteಎಲಾ ಇವನ! ಬ್ರೇಕ್ ಹಾಕೋಕೆ ಮರತ್ನಾ? ತಾನು ಯಾರು ಅನ್ನೋದನ್ನೂ ಈತ ಮರೆತರೆ ಕಷ್ಟ!
ReplyDeleteha ha ha...
ReplyDeletesometimes it seems funny.. but in some situations our mind will not work... it will be struck... (sorry for writing comment in english)
ಸುಬ್ರಮಣ್ಯ ಸರ್,
ReplyDeleteಧನ್ಯವಾದಗಳು.... ಖುಶಿಪಟ್ಟಿದ್ದಕ್ಕೆ ....
ಸುನಾಥ್ ಸರ್,
ReplyDeleteಹ್ಹಾ ಹ್ಹಾ ಅವನು ಒಂಥರಾ ಆಸಾಮಿನೆ..... ಏನನ್ನೂ ಬೇಕಾದರೂ ಯಾವಾಗಲಾದರೂ ಮರೆಯುತ್ತಿದ್ದ.....
ಶಿವಪ್ರಕಾಶ್,
ReplyDeleteನೀವು ಹೇಳಿದ್ದು ಸರಿ, ಕೆಲವೊಮ್ಮೆ ಮೈಂಡ್ ಹೀಗೆ ಬ್ಲಾಂಕ್ ಆಗತ್ತೆ...... ಆದರೆ ಅವನಿಗೆ ಆಗಬಾರದ ಟೈಮ್ ನಲ್ಲಿ ಆಗಿಬಿಟ್ಟಿತ್ತು......
ಗೌತಮ್ ,
ReplyDeleteಹ್ಹಾ ಹಾ ಹ್ಹಾ..... ಧನ್ಯವಾದ... ನಕ್ಕಿದ್ದಕ್ಕೆ...........
nan chikkava iddaga mohana anta obba bartidda! unpad adroo sakat intelligentoooo! avandodu cycle ittu. honnavaradinda idee uttarakannada adaralle suttuttidda! adakakke padllee irlila! scooter tyre na kat maadi apecial boot maadkandidda! seat n kelage spring itkondidda.adara action nindaane cycle 65km per hour odtittu! idannodid koodle mohana nenapaada! ha...haha...hahahah..
ReplyDeleteha ha ha :)
ReplyDelete'ದಿನಕರ ಮೊಗೇರ' ಅವ್ರೆ.,
ReplyDeleteನಾನು ಕೂಡ ಓದ್ತಾ ಓದ್ತಾ ... ಮರೆತೆ.
ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http://manasinamane.blogspot.com/
ವಸಂತ್ ಸರ್,
ReplyDeleteನಿಮ್ಮ ಅನುಭವ ತಿಳಿಸಿದ್ದೀರಿ .... ಚೆನ್ನಾಗಿದೆ...... ಧನ್ಯವಾದ ನಿಮ್ಮ ಕಾಮೆಂಟ್ ಗೆ......
ಸುಧೇಶ್
ReplyDeleteಹ್ಹಾ ಹ್ಹಾ ಹ್ಹಾ ..... ನಕ್ಕಿದ್ದಕ್ಕೆ ಧನ್ಯವಾದ.....
ಗುರು ದೆಸೆ....
ReplyDeleteಹೆದರಿದ್ದೆ....... ಕಾಮೆಂಟ್ ಹಾಕೊದ್ದನ್ನ ಮರೀತೀರಾ ಅಂತ......... ಹ್ಹಾ ಹ್ಹಾ............. ನಿಮ್ಮ ಬ್ಲಾಗ್ಗೆ ಕಾಮೆಂಟ್ ಹಾಕಿದ್ದೇನೆ ನೋಡಿ.....
ದಿನಕರ್ ಸರ್,
ReplyDeleteಆತ ಹೇಳಿದ್ದು ನಿಜ ಅನ್ನಿಸುತ್ತೆ ಅಲ್ವಾ...ನಮಗೂ ಹಾಗೆ ಆ ಸಮಯದಲ್ಲಿ ಏನು ಮಾಡಬೇಕು ಅನ್ನಿವುದೇ ನೆನಪಿಗೆ ಬರುವುದಿಲ್ಲ.
ಪಾಪ ಗಣಪತಿ.
ಪುಣ್ಯಕ್ ಅವ ಲಾರಿನೋ, ಬಸ್ಸೋ ಓಡ್ಸ್ತಿರ್ಲಿಲ್ಲೆ. ಆಗ್ಲೂ ಬ್ರೇಕ್ ಹಾಕೂಕೆ ಮರ್ತ್ರೆ ಮುಗೀತ್ ಕತೆ.
ReplyDeleteಶಿವೂ ಸರ್,
ReplyDeleteನೀವು ಹೇಳಿದ್ದು ಸರ್, ಬ್ರೇಕ್ ಹಾಕೋದು, ವೇಗ ಹೆಚ್ಚಿಸೋದು ಎಲ್ಲಾ ಒಂದು instinct ಆಲ್ವಾ.... ಅವನು ಹೇಳಿದ ರೀತಿ ಮಜವಾಗಿತ್ತು....... ಅನಿಸಿಕೆಗೆ ಧನ್ಯವಾದ.....
ದೀಪಸ್ಮಿತ ,
ReplyDeleteಹ್ಹಾ ಹ್ಹಾ..... ನೀವು ಹೇಳಿದ ಹಾಗೆ ಆಗಿದ್ರೆ... ಅವನು ಮಾತಾಡಿಸಲಿಕ್ಕೆ ಸಿಗ್ತಾ ಇರಲಿಲ್ಲ.... ನಾನು ಈ ಪ್ರಸಂಗ ಬರೀತಾನೆ ಇರಲಿಲ್ಲಾ...... ಹ್ಹಾ ಹ್ಹಾ.....
ಗಹಗಹಿಸಿ ನಗಲೇ ? ಸ್ವಲ್ಪ ನಗಲೇ ? ಅಂತು ನಗೆಯನ್ನಂತೂ ಅದುಮಿಡಲು ಆಗುತ್ತಿಲ್ಲ, good
ReplyDeleteವಿ ಆರ್ ಭಟ್ ಸರ್,
ReplyDeleteಸ್ವಾಗತ ನನ್ನ ಬ್ಲಾಗ್ ಗೆ..... ನಿಮಗೆ ನಗು ಬರಿಸಿದ್ದಕ್ಕೆ ನನಗೆ ಖುಷಿಯಾಯ್ತು,,,,, ಧನ್ಯವಾದ ನಿಮ್ಮ ಕಾಮೆಂಟ್ ಗೆ....
ha ha..ha..
ReplyDeletethank you manamukta madam...
ReplyDeleteಚನ್ನಾಗಿದೆ sir
ReplyDeleteಚನ್ನಾಗಿದೆ sir
ReplyDelete