Mar 4, 2010

ಎಲ್ಲಿಗೆ ಪಯಣ......?


ಅಲುಗಾಡುತ್ತಿದೆ ಭಾವದಾ ಬಂಡಿ,
ನಂಬಿಕೆಯೇ ಇಲ್ಲ ಯಾರೊಬ್ಬರ ಮೇಲೂ.....
ಯಾರಿಗ್ಯಾರಿಗೂ ಇಲ್ಲ ಇಲ್ಲಿ,
ನೂಕಿ ಹೊರಟಿಹರು ಎಲ್ಲರನ್ನ ......

ಮನೆಯೆಂಬ ಅಡಿಪಾಯಕೆ,
ನಂಬಿಕೆಯ ನೆಲಗಟ್ಟಿಲ್ಲ.....
ಮನಸೆಂಬ ಕಟ್ಟಡಕೆ ,
ಪ್ರೀತಿಯ ಸೂರಿಲ್ಲ.....

ಊರೊಂದು ಕಾಂಕ್ರೇಟು ಕಾಡು,
ಎಲ್ಲೆಲ್ಲು ಮನೆ ಮೇಲೆ ಮನೆ....
ಮಾರೆತ್ತರದ ಗೋಡೆಗಳು ,
ಸುತ್ತಲೆಲ್ಲ ಮೆಟ್ಟಿಲುಗಳು.....
.....

ಹಕ್ಕಿಗಳಾ ಚಿಲಿಪಿಲಿಯಿಲ್ಲ ,
ಬರೀ ಅದೇ ಗಲಿಬಿಲಿ.....
ತಿಳಿಯದ ಬಾಳ ಯಾನ,
ಗೊತ್ತು ಗುರಿ ಇಲ್ಲದ ಪಯಣ.....

44 comments:

  1. ದಿನಕರ್
    ಮನೆಯೆಂಬ ಅಡಿಪಾಯಕೆ,
    ನಂಬಿಕೆಯ ನೆಲಗಟ್ಟಿಲ್ಲ.....
    ಮನಸೆಂಬ ಕಟ್ಟಡಕೆ ,
    ಪ್ರೀತಿಯ ಸೂರಿಲ್ಲ.....
    ..................ಬಹಳ ಗಟ್ಟಿಸಾಲುಗಳನ್ನ ಪೇರಿಸಿದ್ದೀರಿ...ಗೊತ್ತು ಗುರಿ ಇಲ್ಲದಾ ಪಯಣ ಎನ್ನುವುದು ..ತಮ್ಮ ಸಾಗುವುಕೆಯೇ ಮುಖ್ಯ ಎಂದು...ಮಿಕ್ಕವರನ್ನು ನೂಕಿ ಹೋಗುವುದು..ಚನ್ನಾಗಿದೆ ಈ ಭಾವಪ್ರಕಟ.

    ReplyDelete
  2. ಆಜಾದ್ ಸರ್,
    ನನಗೂ ಇಷ್ಟದ ಸಾಲು ಅದು....... ಖುಷಿಯಾಯ್ತು, ನಿಮಗೂ ಅದೇ ಇಷ್ಟವಾದುದಕ್ಕೆ............ ಧನ್ಯವಾದ ನಿಮ್ಮ ಪ್ರೋತ್ಶಾಹಕ್ಕೆ.......

    ReplyDelete
  3. ದಿನಕರ್ ಸರ್,

    ಪ್ರೀತಿಯಿಲ್ಲದ ಪ್ರತಿಯೊಂದು ಚಟುವಟಿಕೆಗಳು ನೀವು ಹೇಳಿದಂತೆ ಇರುತ್ತವೆ. ಉತ್ತಮ ವಾದ ಕವನವನ್ನು ಅರ್ಥಪೂರ್ಣವಾಗಿ ಬರೆದಿದ್ದೀರಿ...

    ReplyDelete
  4. ವಿಜಯಶ್ರೀ ಮೇಡಂ,
    ಧನ್ಯವಾದ.... ಮೆಚ್ಚಿದ್ದಕ್ಕೆ ....... ಕಾಮೆಂಟ್ ಬರೆದಿದ್ದಕ್ಕೆ....

    ReplyDelete
  5. ಶಿವೂ ಸರ್,
    ಈಗಿನ ಪಟ್ಟಣ ಪ್ರದೇಶದಲ್ಲಿ ನಡೆಯೋದು ಇದೆ ಆಲ್ವಾ ಸರ್........ ಧನ್ಯವಾದ ನಿಮ್ಮ ಅನಿಸಿಕೆಗೆ.........

    ReplyDelete
  6. ಮನಮುಕ್ತಾ ಮೇಡಂ,
    ಧನ್ಯವಾದ...... .

    ReplyDelete
  7. chennagide kavana. Arthapoorna salugalu.

    ReplyDelete
  8. ತುಂಬಾ ಚಂದದ ಕವನ ಸರ್ ..
    ಮನೆಯೆಂಬ ಅಡಿಪಾಯಕೆ,
    ನಂಬಿಕೆಯ ನೆಲಗಟ್ಟಿಲ್ಲ.....
    ಮನಸೆಂಬ ಕಟ್ಟಡಕೆ ,
    ಪ್ರೀತಿಯ ಸೂರಿಲ್ಲ.....

    ಈ ಸಾಳುಗಲಂತೂ ತುಂಬಾ ಚೆನ್ನಾಗಿವೆ ...

    ReplyDelete
  9. ನಿಶಾ ಮೇಡಂ,
    ಧನ್ಯವಾದ.... ನಿಮ್ಮ ಮೆಚ್ಚುಗೆಗೆ......

    ReplyDelete
  10. ರಂಜಿತಾ ಮೇಡಂ,
    ಈ ಸಾಲುಗಳನ್ನು ಬರೆದಾಗ ನನ್ನಾಕೆ ' ಎಲ್ಲರಿಗೂ ಈ ಸಾಲು ಇಷ್ಟ ಆಗತ್ತೆ ನೋಡಿ' ಎಂದಿದ್ದಳು......... ಹಾಗೆ ಆಗಿದೆ...... ಧನ್ಯವಾದ ನಿಮ್ಮ ಕಾಮೆಂಟ್ ಗೆ.....

    ReplyDelete
  11. ದಿನಕರ,
    ಆಧುನಿಕ ಬದುಕಿನ ಪಯಣವನ್ನು ಸರಿಯಾಗಿ ಚಿತ್ರಿಸಿದ್ದೀರಿ.

    ReplyDelete
  12. ಎರಡನೇ ಪ್ಯಾರಾ ಸಾಲು ಸುಪರ್...
    ಅಧುನಿಕ ಬದುಕ ಬ೦ಡಿಯ ಚಲನದ ಬಗ್ಗೆ ನವಿರಾದ ನಿರುಪಣೆಯ ಕವನ.

    ReplyDelete
  13. ದಿನಕರ್ ಅವರೇ ,
    ಕವಿತೆಯಲ್ಲಿ ಚೆನ್ನಾಗಿ ನಮ್ಮ ಈಗಿನ ಜೀವನ ಶೈಲಿನ ಬಿಂಬಿಸಿದ್ದಿರ. ನಿಜವಾಗ್ಲೂ ಪ್ರೀತಿಯ ಸೂರಿಲ್ಲ , ನಂಬಿಕೆಯ ಅಡಿಯಿಲ್ಲ , ಈ ಕಾಂಕ್ರೆಟ್ ಊರಿನಲ್ಲಿ ಆತ್ಮೀಯತೆ ಇಲ್ಲವೇ ಇಲ್ಲ . ನಾವು ನಮ್ಮ ಅರ್ಥವಿಲ್ಲ ಪಯಣದಲ್ಲಿ ಎಸ್ಟೊಂದು ಮುಳುಗಿ ಹೋಗಿದಿವಿ ಅಂದ್ರೆ ನಮ್ಮ ಬ್ಯುಸಿ ಲೈಫ್ ನಲ್ಲಿ , ನಮ್ಮ ಪಕ್ಕದ ಮನೇಲಿ ಯಾರಿದ್ದಾರೆ ಅನ್ನೋದೇ ನಮಗೆ ಗೊತ್ತಿಲ್ಲ .
    ಅದಕ್ಕೆ ಒಂದು ಉದಾಹರಣೆ ಅಂದ್ರೆ ನಾವ್ ಇರೋ ಬಿಲ್ಡಿಂಗ್ ನಲ್ಲಿ ನಮ್ಮ ಮೇಲಿನ ಮನೆಯವರ ಮನೇಲಿ ಮಗು ಹುಟ್ಟಿ ೩ ತಿಂಗಳು ಆದಮೇಲೆ ನನಗೆ ಗೊತ್ತಾಗಿತ್ತು . ಅದು ನಮ್ಮ ಕೆಲಸದಾಕೆ ಕೃಪೆಯಿಂದ :).
    ಹೀಗೆದೆ ನಮ್ಮ ಈಗಿನ ಜೀವನ ಶೈಲಿ .

    ReplyDelete
  14. Good work in Navya style, chennagide!

    ReplyDelete
  15. ಸುನಾಥ್ ಸರ್,
    ನಗರ ಜೀವನಕ್ಕೆ ರೋಸಿ ಹೋಗಿದ್ದೆ.... ಹಾಗಾಗಿ ಈ ಕವನ ಹುಟ್ಟಿತು...... ಧನ್ಯವಾದ ಸರ್, ನಿಮ್ಮ ಪ್ರೋತ್ಸಾಹಕ್ಕೆ.....

    ReplyDelete
  16. ಸೀತಾರಾಂ ಸರ್,
    ಆದುನಿಕ ಬಂಡಿಯಲ್ಲಿ ಏನೂ ಮಜಾ ಇಲ್ಲ ಸರ್..... ಹಳ್ಳಿಯಲ್ಲಿ ಯಾರಿಗಾದರು ಹಲ್ಲು ನೋವು ಬಂದರೂ ಎಲ್ಲರು ಬಂದು ಮಾತನಾಡಿಸಿಕೊಂಡು ಹೋಗ್ತಾರೆ..... ಆದರೆ ಇಲ್ಲಿ, ಯಾರು ಸತ್ತರೂ ಗೊತ್ತಾಗಲ್ಲ...... ಧನ್ಯವಾದ ನಿಮ್ಮಕಾಮೆಂಟ್ ಗೆ.....

    ReplyDelete
  17. ಜ್ಯೋತಿ ಮೇಡಂ,
    ಧನ್ಯವಾದ ನಿಮ್ಮ ಅನಿಸಿಕೆಗೆ ಮೆಚ್ಚುಗೆಗೆ ....

    ReplyDelete
  18. ಮನಸಾರೆ ಮೇಡಂ,
    ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ..... ಪಕ್ಕದ ಮನೆಯವರ ಮದುವೆಯಾಕಿ ಮಕ್ಕಳಾದರೂ ನಮಗೆ ಗೊತ್ತಾಗಲ್ಲ..... ಹೀಗಿದೆ ನಗರ ಜೀವನ ಕಥೆ....... ಧನ್ಯವಾದ ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ........

    ReplyDelete
  19. ಭಟ್ ಸರ್,
    ತುಂಬಾ ಧನ್ಯವಾದ... ಏನೋ ಪ್ರಯತ್ನ ಮಾಡಿದೆ..... ಹೀಗೆ ಬೆನ್ನು ತಟ್ಟುತ್ತಾ ಇರಿ... ಅದೇ ನನಗೆ ನೂರಾನೆ ಬಲ......ಧನ್ಯವಾದ ನಿಮ್ಮ ಪ್ರೋತ್ಶಾಹದ ಕಾಮೆಂಟ್ ಗೆ....

    ReplyDelete
  20. ಕವನದಲ್ಲಿ ಇಂದಿನ ಬದುಕಿನ ಚಿತ್ರವನ್ನು ಚೆನ್ನಗಿ ಕೊಟ್ಟಿದ್ದೀರಿ.

    ReplyDelete
  21. ಧನ್ಯವಾದ ಸುಬ್ರಮಣ್ಯ ಭಟ್ ಸರ್...........

    ReplyDelete
  22. ದಿನಕರ್,
    ಒಳ್ಳೆ ಸಾಲುಗಳನ್ನು ಕಟ್ಟಿ ಇಂದಿನ ಜೀವನವನ್ನು ಹೇಳಿದ್ದೀರ....
    ಎರಡನೇ ಪ್ಯಾರಾ ಸಾಲುಗಳು ಬಹಳ ಚೆನ್ನಾಗಿದೆ.......

    ReplyDelete
  23. 'ದಿನಕರ ಮೊಗೇರ' ಅವ್ರೆ..,

    ತುಂಬಾ ಚೆಂದದ ಸಾಲುಗಳು..
    ಮೊದಲೆರಡು ಭಾವಗಳ ಬಗ್ಗೆ,ಉಳಿದೆರಡು ವಾಸ್ತವದ ಬಗ್ಗೆ ಚೆನ್ನಾಗಿ ಬಿಂಬಿತವಾಗಿವೆ..

    ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http:/manasinamane.blogspot.com

    ReplyDelete
  24. ಚೆನ್ನಾಗಿದೆ! ಆದ್ರೆ ಅಪೂರ್ಣ ಅನ್ನಿಸ್ತಿದೆ!

    ReplyDelete
  25. ದಿನಕರ್ ಸರ್...

    ಏತಕೀ ವೈರಾಗ್ಯ :)

    ಕವನ ಚೆನ್ನಾಗಿದೆ...

    ReplyDelete
  26. tumba chennagide sir kavana, mane haagu manasina adipaaya gatti iddare chirakaala uLiyutte.

    ReplyDelete
  27. ಮಹೇಶ್ ಸರ್,
    ಧನ್ಯವಾದ ನಿಮ್ಮ ಮೆಚ್ಚುಗೆಗೆ...... ಕಾಮೆಂಟ್ ಗೆ......

    ReplyDelete
  28. ಗುರು ದೆಸೆ ಸರ್,
    ಈಗಿನ ನಗರ ಜೀವನದ ವಾಸ್ತವತೆ ಗೆ ಬೇಸತ್ತು ಬಂದ ಕವನ ಇದು..... ಧನ್ಯವಾದ ನಿಮ್ಮ ಕಾಮೆಂಟ್ ಗೆ.......

    ReplyDelete
  29. ಭಾಶೆ ಮೇಡಂ,
    ನಮ್ಮ ಭಾವವೂ ಅಪೂರ್ಣವೇ ತಾನೇ... ಪಟ್ಟಣ ಜೀವನದ ನೋವು ನಲಿವು ಎಲ್ಲವೂ ಅಪೂರ್ಣ.....ಹಾಗಾಗಿ ಇದೂ ಅಪೂರ್ಣ ಆಗಿರಬಹುದು....... ಧನ್ಯವಾದ ನಿಮ್ಮ ಕಾಮೆಂಟ್ ಗೆ.......

    ReplyDelete
  30. ಸುಧೇಶ್,
    ವೈರಾಗ್ಯ ಏನಿಲ್ಲಾ.... ನಗರ ಜೀವನ ಒಮ್ಮೊಮ್ಮೆ ತೀರಾ ಬೇಸರ ತರಿಸತ್ತೆ..... ಹಾಗಾಗಿ ಈ ಕವನ.... ... ಧನ್ಯವಾದ ನಿಮ್ಮ ಅನಿಸಿಕೆ ಗೆ .......

    ReplyDelete
  31. ಮನಸು ಮೇಡಂ,
    ಮನೆಯ ಅಡಿಪಾಯ ಹೇಗೋ ಗಟ್ಟಿಯಾಗಿ ಹಾಕಬಹುದು... ಆದರೆ ಮನಸ್ಸಿನ ಅಡಿಪಾಯ ಗಟ್ಟಿ ನಂಬಿಕೆ , ಪ್ರೀತಿ ಯಿಂದ ಸಾದ್ಯ .... ಆದರೆ ಇದು ನಗರ ಜೀವನದಲ್ಲಿ ಸಾದ್ಯಾನಾ...... ಧನ್ಯವಾದ ಮೇಡಂ ನಿಮ್ಮ ಕಾಮೆಂಟ್ ಗೆ....

    ReplyDelete
  32. ಸರ್.. ತುಂಬಾ ಚೆನ್ನಾಗಿದೆ.. ಜೀವನ ತುಂಬಾ ಮೆಕ್ಯಾನಿಕಲ್ ಆಗಿದೆ... ನಾವು ನಮಗೆ ಏನಾದ್ರು ಬೇಕಾದರೆ ಏನಾದ್ರು ಮಾಡಿಯಾದ್ರೂ ಸರಿ ಪಡ್ಕೊಳ್ತಿವಿ... ಕಾಡನ್ನು ನಾಶ ಮಾಡಿ ಎಲ್ಲಾಕಡೆ ಮನೆ ಮನೆ ಮನೆ... ಎಷ್ಟರ ಮಟ್ಟಿಗೆ ನಾವು ಹಾಳಾಗಿದ್ದೇವೆ ಎನ್ನೋದು ಊಹಿಸಲಾಸಾದ್ಯ...!!
    ನಿಮ್ಮವ,
    ರಾಘು.

    ReplyDelete
  33. Manushya andre ondu machine!!..

    ReplyDelete
  34. ದಿನಕರ್ ಅವರೇ,
    ಕವನ ತುಂಬಾ ಚೆನ್ನಾಗಿದೆ. ಸುಂದರವಾಗಿ ಮೂಡಿ ಬಂದಿದೆ.

    ReplyDelete
  35. ರಘು,
    ನೀವು ಹೇಳಿದ್ದು ಸರಿ..... ನಿಮ್ಮ ಅನಿಸಿಕೆಗೆ ಧನ್ಯವಾದ.......

    ReplyDelete
  36. ರವಿಕಾಂತ್ ,
    ತುಂಬಾ ಧನ್ಯವಾದ....

    ReplyDelete
  37. ಸಾಗರಿ,
    ಧನ್ಯವಾದ ನಿಮ್ಮ ಮೆಚ್ಚುಗೆಗೆ ಮತ್ತು ಅನಿಸಿಕೆಗೆ....

    ReplyDelete
  38. ಚೆನ್ನಾಗಿದೆ ಸರ್... ಪಯಣ ಎಲ್ಲಿಗೊ ಗೊತ್ತಿಲ್ಲ, ಇರುವರೆಗೆ ಏರಿದ್ದರೂ ಎಳೆದುಕೊಂಡು ಹೊರಡಲೇಬೇಕು... ಬದುಕು ಬವಣೆಯೊ ಬಣ್ಣಮಯವೊ ಯಾಣ ನಿರಂತರ...

    ReplyDelete
  39. nagara jeevanada nija chitrana neediddira sir ..tumba chennagide :)

    ReplyDelete
  40. ಪ್ರಭುರಾಜ್ ಸರ್,
    ನಿಮ್ಮ ಮಾತು ಸತ್ಯ..... ಧನ್ಯವಾದ.......

    ReplyDelete
  41. ಸ್ನೌ ವೈಟ್...
    ಧನ್ಯವಾದ..

    ReplyDelete