Jan 26, 2012

ವಿಷ್ಯ ಏನಪ್ಪಾ ಅಂತಂದ್ರೆ......!!!!

ತುರ್ತಾಗಿ ಏನೋ ಕೆಲಸವಿದ್ದರಿಂದ ಬೇಗನೆ ಆಫೀಸಿಗೆ ಬಂದಿದ್ದೆ...... ಯಾವುದೋ ಫೈಲ್ ನಲ್ಲಿ ತಲೆ ಹೊಕ್ಕಿಸಿ ಕುಳಿತಿದ್ದೆ..... ನನ್ನ ಜೊತೆ ಕೆಲಸ ಮಾಡುತ್ತಿದ್ದ ಸ್ನೇಹಿತನೊಬ್ಬ ಸ್ವಲ್ಪ ಲೇಟ್ ಆಗಿ ಬರುತ್ತಿದ್ದ... ಅವತ್ತು ಇನ್ನೂ ಲೇಟ್ ಆಗಿದ್ದ... ಫೋನ್ ಮಾಡಿ ಕೇಳೋಣ ಎನಿಸಿ ಸೆಲ್ ತೆಗೆದೆ.... ಆಗ ಆಫಿಸ್ ಒಳಗೆ ಬಂದ ಭೂಪ....  ಯಾವುದೋ ಲೋಕದಲ್ಲಿಯೇ ಇದ್ದವನಂತೆ ನಡೆದು ಬರುತ್ತಿದ್ದ.... ಆವತ್ತು ಸ್ವಲ್ಪ ಚೇಂಜ್ ಕಾಣುತ್ತಿದ್ದ.... ಇನ್ ಶರ್ಟ್ ಮಾಡಿದ್ದ..... ಹಾಗಾಗಿ ಚೆನ್ನಾಗಿ ಕಾಣುತ್ತಿದ್ದ....


" ಏನಪ್ಪಾ ರಾಜಾ.... ಏನು ಲೇಟ್.... ಭಾರಿ ಖುಶಿಯಾಗಿ ಇರೋ ಹಾಗಿದೆ... ಏನು ವಿಶ್ಯ...?" ಎಂದೆ..... ಆತ ಇನ್ನೂ ಯಾವುದೋ ಲೋಕದಲ್ಲಿಯೇ ಇದ್ದ..... " ಹೇಯ್ ನಾನು ಹೇಗೆ ಕಾಣ್ತಾ ಇದ್ದೇನೆ ಹೇಳೋ.... ?" ಅಂದ.... ನಾನು ಅವನನ್ನೇ ನೋಡಿದೆ.... ಸಾಧಾರಣ ಬಣ್ಣದ , ಸ್ವಲ್ಪ ಕೋಲು ಮುಖದ, ತಲೆಯ ಎರಡೂ ಕಡೆ ಅಲ್ಪ ಸ್ವಲ್ಪ ತಲೆಕೂದಲು ಉದುರಿತ್ತು.... ಆದರೂ ಹುಡುಗ ಚೆನ್ನಾಗಿ ಕಾಣುತ್ತಿದ್ದ..... " ಯಾಕಪ್ಪ ಏನಾಯ್ತು...? ಯಾರಾದ್ರು ಏನಾದ್ರೂ ಅಂದ್ರಾ...? " ಎಂದೆ.... "ಯಾಕೋ ಮನಸ್ಸು ಖುಶಿಯಾಗಿದೆ ಕಣೋ.... " ಎಂದ... "ಏನಾಯ್ತು .... ಅದನ್ನಾದ್ರೂ ಹೇಳು...." ಎಂದೆ....ಆತನ ಕಥೆಯನ್ನು ಆತನ ಬಾಯಲ್ಲೇ ಕೇಳಿ.... 


          " ಇವತ್ತು ಎಂದಿನಂತೆ ಲೇಟ್ ಆಗಿ ಎದ್ದೆ.... ಏಳೋ ಹೊತ್ತಿಗೇ ಎಂಟಾಗಿತ್ತು..... ಸ್ನಾನಕ್ಕೆ ಹೋಗೋವಾಗ ಮ್ಯಾಗ್ಗಿ ಸ್ಟೋವ್ ಮೇಲೆ ಇಟ್ಟು ಹೋಗಿದ್ದೆ..... ಸ್ನಾನಮುಗಿಸಿ ಬಂದಾಗ ಮ್ಯಾಗಿ ಬ್ರೆಡ್ ಆಗಿತ್ತು... ಬೇಕಾದಷ್ಟು ನೀರು ಹಾಕೋದನ್ನು ಮರೆತಿದ್ದೆ... ಸಂಜೆ ಬಂದು ತೊಳೆದರಾಯಿತು ಎಂದುಕೊಂಡು ತೆಗೆದು ಪಕ್ಕದಲ್ಲಿಟ್ಟೆ...  ಬೇಗ ಬೇಗನೆ ರೆಡಿಯಾಗಿ ಹೊರ  ಬಂದೆ..... ಹೊರ ಬಂದು ರೂಮ್ ಬಾಗಿಲಿಗೆ ಲಾಕ್ ಮಾಡುತ್ತಿದ್ದೆ.... ಪಕ್ಕದ ಮನೆಯ ಹುಡುಗಿ ಅಲ್ಲೇ ನಿಂತಿದ್ದಳು.... ಅವರ ಮನೆಯಲ್ಲಿಯೇ ನಾನು ಕೀ ಕೊಟ್ಟು ಹೋಗುತ್ತಿದ್ದೆ.... ಊರಿನಿಂದ ಅಪ್ಪ ಬರುವವರಿದ್ದರು.... ಕೀ ಕೊಡಲು ಹೋದಾಗ ಅವಳು ನನ್ನ ನೋಡಿ ನಕ್ಕಳು......ಅವಳೇನೂ ಚಿಕ್ಕ ಹುಡುಗಿಯಲ್ಲ.... ಡಿಗ್ರಿ ಮುಗಿಸಿ ಮನೆಯಲ್ಲೇ ಇದ್ದಳು...  ನನಗೆ ಒಂಥರಾ ಆಯಿತು.... ಈ ಮೊದಳು ಅವಳಲ್ಲಿ ಮಾತನಾಡಿರಲಿಲ್ಲ..... ಕೀ ಅವಳ ಕೈಯಲ್ಲಿಟ್ಟೆ.... ಅವಳು ಕೈಯನ್ನು ಬಾಯಿಗೆ ಅಡ್ಡವಾಗಿಟ್ಟು ನಗುತ್ತಿದ್ದಳು... ಕೈ ಅಡ್ಡವಾಗಿಟ್ಟರೂ ಅವಳ ತುಟಿ ಸೇಳೆಯುತ್ತಿತ್ತು... ನನ್ನನ್ನು ನೋಡಿ ನಕ್ಕಿದ್ದಕ್ಕೆ ನನಗೆ ಖುಶಿಯಾಗಿತ್ತು..... ನನ್ನ ಮುಖದಲ್ಲೂ ನಗು ಮೂಡಿತ್ತು....
       
     ಬಸ್ ಗಾಗಿ ಕಾಯುತ್ತಿದ್ದೆ ... ಪಕ್ಕದಲ್ಲೇ ಒಬ್ಬ ಹುಡುಗ ಬಂದು ನಿಂತ...... ಆತನ ಪಕ್ಕದಲ್ಲಿ ಒಬ್ಬಳು ಹುಡುಗಿಯೂ ಇದ್ದಳು.... ಆಕೆ ನನ್ನ ಕಡೆ ನೋಡಿ ನಕ್ಕಳು... ಅಯ್ಯೋ... ಇದೇನು ಎಲ್ಲರೂ ನನಗೆ ಸ್ಮೈಲ್ ಕೊಡ್ತಾ ಇದ್ದಾರಲ್ಲಾ ಎನಿಸಿತು.....ಖುಶಿಯೂ ಆಯಿತು... ಆ ಹುಡುಗಿ ತನ್ನ ಹುಡುಗನಿಗೆ ನನ್ನ ಕಡೆ ತೋರಿಸುತ್ತಿದ್ದಳು.... ಅಮ್ಮಾ.... ಇದೇನಪ್ಪಾ.... ನಾನೇನಾದರೂ ತಪ್ಪು ಮಾಡಿದೆನಾ....? ಆ ಹುಡುಗಿಯನ್ನು ಎಲ್ಲೂ ನೋಡಿದ ಹಾಗಿಲ್ಲ...ಮತ್ಯಾಕೆ...? ಈಗ ಆ ಹುಡುಗನೂ ನನ್ನ ಕಡೆ ನೋಡಿ ನಗುತ್ತಿದ್ದ..... ನಾನು ಕೈಯಲ್ಲೇ ವೇವ್ ಮಾಡಿದೆ.... ಆತನೂ ನಗಲು ಶುರು ಮಾಡಿದ.... ನನಗೋ ಅಯೋಮಯ.... ನಾನೂ ನಕ್ಕೆ... ಅಷ್ಟರಲ್ಲೇ ಬಸ್ ಬಂತು.... ಈ ನಗೆಯಾಟದಿಂದ ನನಗೆ ಬಚಾವ್ ಆಗಬೇಕಿತ್ತು.... ಬೇಗನೆ ಬಸ್ ಹತ್ತಿದೆ......


   ಕುಳಿತುಕೊಳ್ಳಲು ಸೀಟ್ ಇರಲಿಲ್ಲ.... ಮುಂದಿನಿಂದ ನಾಲ್ಕನೇ ಸೀಟಿನ ಪಕ್ಕ ನಿಂತೆ..... ನಾನು ನಿಂತ ಮುಂದಿನ  ಸೀಟ್ ನಲ್ಲಿ ಪುಟ್ಟ ಮಗುವೊಂದು ನಿಂತುಕೊಂಡಿದ್ದಳು..... ಸೀಟ್ ಮೇಲೆ ನಿಂತು ಹಿಂದಕ್ಕೆ ನೋಡುತ್ತಿದ್ದಳು... ಶಾಲೆಯ ಸಮವಸ್ತ್ರ ಧರಿಸಿದ್ದ ಹುಡುಗಿ ನನ್ನ ನೋಡಿ ನಕ್ಕಳು..... ನಾನು ನಕ್ಕೆ... ನನಗೆ ಮಕ್ಕಳೆಂದರೆ ತುಂಬಾ ಖುಶಿ.... ಆ ಮಗು ತನ್ನ ಅಮ್ಮನಿಗೆ ನನ್ನನ್ನು ತೋರಿಸಿದಳು..... ಅವರು ನನ್ನ ಕಡೆ ನೋಡಿ ಮಗಳಿಗೆ ” ವ್ಹಾಟ್ " ಎಂದು ಕೇಳಿದರು....ಆ ಪುಟ್ಟಮ್ಮ ತನ್ನ ಮುದ್ದಾದ ಕೈಯಿಂದ ನನ್ನ ಕಡೆ ತೋರಿಸುತ್ತಿದ್ದಳು....... ಆ ಪುಟ್ಟ ಬೆರಳು ನನ್ನ ಹೊಟ್ಟೆ ಕಡೆ ತೋರಿಸುತ್ತಿತ್ತು...... ನನಗೆ ನನ್ನ ಮೇಲೆ ಸಿಟ್ಟು ಬಂತು.... ಎಂದಿನ ಹಾಗೆ ’ನಾಳೆಯಿಂದಲೇ ವಾಕಿಂಗ್ ಶುರು ಮಾಡಬೇಕು’ ಎಂದುಕೊಂಡು ಉಸಿರು ಹಿಂದಕ್ಕೆ ಎಳೆದುಕೊಂಡು ಹೊಟ್ಟೆ ಚಿಕ್ಕದು ಮಾಡುವ ವಿಫಲ ಪ್ರಯತ್ನ ಮಾಡಿದೆ... ನನ್ನ ಹೊಟ್ಟೆಯ ಕಡೆ ನೋಡಿ ಆ ಹುಡುಗಿಯ ಅಮ್ಮ ಅವಳನ್ನು ತಿರುಗಿಸಿ ಕುಳ್ಳಿಸಿಕೊಂಡರು .... ಆ ಹುಡುಗಿಯೋ, ನನ್ನ ಹೊಟ್ಟೆಯನ್ನು ನೋಡಿದ್ರೆ, ಅವಳ ಅಮ್ಮ ಅವಳ ತಲೆಯ ಮೇಲೆ ಮೊಟಕಿ ಕುತ್ತಿಗೆ ತಿರುಗಿಸುತ್ತಿದ್ದರು... ನನಗಂತೂ ಏನೂ ಅರ್ಥವಾಗುತ್ತಿರಲಿಲ್ಲ.... ಅಷ್ಟರಲ್ಲೇ ಆಫಿಸು ಬಂದಿದ್ದಕ್ಕೆ ಬಚಾವಾದೆ...... ಕೂಡಲೇ ಇಳಿದು ಬಂದೆ...... " ಎಂದು ತನ್ನ ಕಥೆ ಮುಗಿಸಿದ.....


  " ಹೇಳು, ಏನು ಸ್ಪೆಷಲ್ ಕಾಣಿಸ್ತಾ ಇದೀನಿ ಇವತ್ತು ..? " ಎಂದ.... ನಾನು ಇನ್ನೂ ಅವನನ್ನೇ ಗಮನಿಸಿದೆ... ಗುಲಾಬಿ ಬಣ್ಣದ ಶರ್ಟ್ ನ ಮೇಲೆ ನೀಲಿ ಬಣ್ಣದ ಟೈ ಕಟ್ಟಿದ್ದ.... ನೀಟ್ ಆಗಿ ಶೇವ್ ಮಾಡಿದ್ದ.... " ಎದ್ದು ನಿಂತ್ಕೋ ಒಮ್ಮೆ" ಎಂದೆ....  ಆತ ಎದ್ದು ನಿಂತ.....ಶಾಕ್!!!!!!!! ನನಗೆ..... ಕೂಡಲೇ ನಗು ಬಂತು....... ಜೋರಾಗಿ ನಕ್ಕೆ........  ಆತನಿಗೆ ಇನ್ನೂ ಮುಜುಗರವಾಯಿತು ಎನಿಸುತ್ತದೆ..... " ಹೇಯ್... ಏನಾಯ್ತೋ....?" ಎಂದ..... " ಎಲ್ಲಾ ಹುಡುಗಿಯರು, ಅಮ್ಮಂದಿರು, ಮಕ್ಕಳು ನಿನ್ನನ್ನು ನೋಡಿ ನಕ್ಕಿದ್ದು ಯಾಕೆ ಅಂತ ಈಗ ಗೊತ್ತಾಯ್ತು" ಎಂದೆ...... ಆತನಿಗೆ ಕುತೂಹಲ..." ಯಾಕೆ ಹೇಳು...? " ಎಂದ......
  ನಾನು " ರಾಜಾ..... ಪ್ಯಾಂಟ್ ಹಾಕಿಕೊಂಡ ಮೇಲೆ ಅದಕ್ಕೆ ಜಿಪ್ ಹಾಕದೇ ಹಾಗೆ ಬಿಟ್ಟರೆ ಎಲ್ಲರೂ ನಿನ್ನನ್ನು ನೋಡದೆ ಎನು ಮಾಡ್ತಾರೆ ಹೇಳು...." ಎಂದೆ.... ಆಗ ಆತನ ಸ್ಥಿತಿ ನೋಡುವ ಹಾಗಿತ್ತು..... 


  ಅಷ್ಟರಲ್ಲೇ ನಮ್ ಬಾಸ್ ಬಂದಿದ್ದರಿಂದ ನಮ್ಮ ನಗು ಬಂದ್ ಆಯ್ತು..... ಅವರು ಬಂದವರೇ ನನ್ನ ಎದುರಿನ ಸೀಟ್ ನಲ್ಲೇ ಕುಳಿತುಕೊಂಡರು.... ನನ್ನ ಬಳಿ ಪ್ರೊಜೆಕ್ಟ್ ಬಗ್ಗೆ ಮಾತನಾಡತೊಡಗಿದರು..... ನನ್ನ ಸ್ನೇಹಿತ.. ಅದೇ ಜಿಪ್ ಸ್ನೇಹಿತ.... ಮಧ್ಯದಲ್ಲೇ ಬಾಯಿ ಹಾಕಿ....." ಸರ್, ನಿಮ್ಮನ್ನು ನೋಡಿ ಯಾರಾದರೂ ಸೈಲ್ ಕೊಟ್ರಾ...? " ಎಂದ..... ನಾನು ಅವನ ಕಡೆ ನೋಡಿದೆ.. ಆತ ನಗುತ್ತಿದ್ದ.... ಅವರು " ಇಲ್ಲ, ನನಗೆ ಯಾರೂ ಸಿಗಲಿಲ್ಲ... ನಾನು ನನ್ನ ಕಾರಿನಲ್ಲಿ ಬಂದೆ..... ಯಾಕೆ...?" ಎಂದರು.... ನನಗೆ ಇದ್ಯಾಕೆ ಇವ ಹೀಗೆ ಕೇಳ್ತಾ ಇದ್ದಾನೆ ಎನಿಸಿತು....." ಸರ್ ನೀವು ಬಸ್ ನಲ್ಲಿ ಬಂದಿದ್ದರೆ ನಿಮಗೆ ಅರ್ಥವಾಗುತ್ತಿತ್ತು" ಎಂದ ನನ್ನ ಸ್ನೇಹಿತ.... ನನಗೆ ಅರ್ಥವಾಗತೊಡಗಿತು..... ನಾನು ಬಾಸ್ ಫ್ಯಾಂಟ್ ಜಿಪ್ ಕಡೆ ನೋಡಿದೆ.... ಅದು ಓಪನ್ ಆಗಿತ್ತು...... 

20 comments:

  1. ದಿನಕರರೇ, ನೀವು ಕೊನೆಗೆ ಹೇಳುವುದನ್ನು ನಾನು ಮೊದಲೇ ನಿರೀಕ್ಷಿಸಿದ್ದೆ ! ಅಂತೂ ಅನೇಕರನ್ನು ಕೊನೆಯವರೆಗೂ ಎಳೆಯೋಣ ಎಂದುಕೊಂಡಿದ್ದೀರಿ. ಪರವಾಗಿಲ್ಲ. ಸ್ವತಂತ್ರವಾಗಿ ಗಾಳಿಗೆ ಬಿಟ್ಟ ಗೂಡಿನ ಹಕ್ಕಿಗೆ ಬಂಧನ ನೀಡುವುದನ್ನು ಮರೆತಿದ್ದ ಮಹಾನುಭಾವನ ಕಥೆ ! ಮಜವಾಗಿದೆ, ಮಜಾರಾಜ್ಯೋತ್ಸವ!!

    ReplyDelete
  2. ದಿನಕರ್...

    ನಕ್ಕೂ.. ನಕ್ಕೂ ಹೊಟ್ಟೆ ಹುಣ್ಣಾಯಿತು...!

    ಹ್ಹಾ..ಹ್ಹಾ... !

    ಈ ಅನುಭವ ನನಗೂ ಆಗಿದೆ... ಹ್ಹಾ ಹ್ಹಾ.. !!

    ಹ್ಹೋ... ಹ್ಹೋ...!! ಹ್ಹೆ.. ಹ್ಹೇ...

    ReplyDelete
  3. ತುಂಬಾ ಚೆನ್ನಾಗಿದೆರಿ, ವಿಷಯ ಖಾಲಿ ಒಂದು ಜಿಪ್ ಓಪನ್ ಆಗಿದ್ರೂ ಆ ಒಂದು ನಿಜವಾದ ಅನುಭವದ ಕಥೆ ಮೂಡಿಬಂದ ರೀತಿ ಮಾತ್ರ ತುಂಬ ಚೆನ್ನಾಗಿದೆ. ನಿಮ್ಮ ಎಲ್ಲಾ ಬರವಣಿಗೆಗಳೆಂದರೆ ನನಿಗಂತು ತುಂಬಾನೆ ಇಷ್ಟವಾಗುತ್ತೆ. ನಿಮ್ಮ ಆ ಬರವಣಿಗೆಗಳನ್ನು ಓದುವಾಗಲೇ ಒಬ್ಬ ಸಾಮಾನ್ಯ ವ್ಯಕ್ತಿ/ವಿದ್ಯಾರ್ಥಿಯೂ ಕೂಡಾ ತನ್ನ ಸ್ವ ಅನುಭವವನ್ನ ಹೇಗೆ ವಿವರಿಸಬಹು ಎಂಬುವುದನ್ನ ತಿಳ್ಕೊಳ್ಳೋದಕ್ಕೆ ಖಂಡಿತಾ ಇದೊಂದು ಮಾರ್ಗದರ್ಶನ ಬರಹ ಎಂದು ನನಿಗನಿಸುತ್ತೆ

    ReplyDelete
  4. ಹಹಹಹ....ಜಿಪ್ಪಾಯಣ ಬಹಳ ಕಡೆ ನಡೆಯೋದೇ... ಆದರೆ ನಮ್ಮ ಪ್ರಿನ್ಸಿಪಾಲ್ ಒಮ್ಮೆ ಬಂದಿದ್ದಾಗ ಹೀಗೆ...ಯಾರಿಗೂ ಧೈರ್ಯ ಆಗ್ಲಿಲ್ಲ ಹೇಳೋಕೆ... ಒಬ್ಬ ಸ್ಕೂಲ್ ಹುಡುಗ (ನಮ್ಮ ಇನ್ನೊಬ್ಬ ಟೀಚರ್ ಮಗ) ಅಂಕಲ್ ನಿಮ್ಮ ಪೋಸ್ಟ್ ಆಫೀಸ್ ಓಪನ್ ಇದೆ ಅಂದಿದ್ದ...ಹಹಹಹ ಚನ್ನಾಗಿದೆ...

    ReplyDelete
  5. ಮಾನ್ಯರೇ ನಿಮ್ಮ ಈ ಲೇಖನ ಓದಿ ನಗು ಬಂದು ನನ್ನ ಹೊಟ್ಟೆ ಹುಣ್ಣಾಗಿದೆ, ದಯಮಾಡಿ ಹುಣ್ಣನ್ನು ವಾಸಿಮಾಡಲು ಆಸ್ಪತ್ರೆ ಚಾರ್ಜ್ ೫೦೦ ಅನ್ನು ಕಳುಹಿಸಿಕೊಡಲು ಕೋರಿದೆ, ಇಲ್ಲದಿದ್ದಲ್ಲಿ ನಿಮ್ಮ ಮೇಲೆ ನಗೆ ಬಾಂಬ್ ಹಾಕಿದ ಅಪರಾದದ ಮೇಲೆ ಕಾನೂನು ಕ್ರಮ ವಹಿಸಲಾಗುವುದು.

    ReplyDelete
  6. ಒಳಗಡೆ ಮಾನ ಕಾಪಾಡಲು ಆಪದ್ಬಾಂಧವ ಅಂಡರ್ ವೇರ್ ಇರುವುದರಿಂದ ಎಲ್ಲರೂ ಬಚಾವು.ಇಲ್ಲದಿದ್ದರೆ ದೇವರೇ ಗತಿ!

    ReplyDelete
  7. ಮೊಗೆರರ ಹಾಸ್ಯ ಪ್ರಜ್ಞೆಗೆ ಶರಣು.

    ನಾನೂ ಕೆಲವೊಮ್ಮೆ ಜಿಪ್ ಹಾಕುವುದು ಮರೆತವನೇ! ಗಾಡಿ ಓಡಿಸಿಕೊಂಡು ಬರುವಾಗ ಏನು ಥಂಡಿ ಎನಿಸಿ ನೋಡಿಕೊಂಡು ಮುಜಗರಗೊಂಡು ಮತ್ತೆ ಆಮೇಲೆ ಜಿಪ್ ಹಾಕಿದ್ದಿದೆ.

    ಒಳ್ಳೆ ಬರಹ ಗೆಳೆಯ...

    ReplyDelete
  8. ಹ್ಹ ಹ್ಹ :) ಮಜಾ ಇತ್ತು ಮೊಗೇರರೇ.. ನಾನೂ ಬೇರೆಯವರು ನೋಡುವ ಮೊದಲೇ ಎಷ್ಟೋ ಸಲ ನಾನು ಎಚ್ಚೆತ್ತುಕೊಂಡಿದ್ದೇನೆ..:))

    ReplyDelete
  9. ನಕ್ಕು ನಕ್ಕು ಸುಸ್ತಾಯಿತು ,ಮಾರಾಯ್ರೆ ,
    ನಿಮ್ಮ ಹಾಸ್ಯ ತುಂಬಾ ಚಂದ ಬಂದದ್ದುಂಟು ,

    ReplyDelete
  10. ದಿನಕರರೆ,
    ನಿಮ್ಮ ತಿಳಿಹಾಸ್ಯದ ವಿಷಯ ಹಾಗು ಶೈಲಿ ನನಗೆ ತುಂಬ ಇಷ್ಟವಾಗುತ್ತವೆ.

    ReplyDelete
  11. ಒಳ್ಳೆ ಪಚೀತಿಯ ಕತೆ......ಹಹ್ಹಹ್ಹಾ..

    ReplyDelete
  12. hahaha chennagide... tumba dinagaLa mele ellarannu nagisiddeeri

    ReplyDelete
  13. ದಿನಕರ್ ಸರ್....

    ಇಂತಹ ಅನುಭವವಾಗದೆ ಇರೋರು ಕಡಿಮೆನೇ ಅಂತ ಹೇಳಬಹುದು....(ನಂಗೂ ಆಗಿದೆ ಅಂತ ಡೈರೆಕ್ಟ್ ಆಗಿ ಹೇಳಬಯಸೊಲ್ಲ..ಹಹಹ...).....ಚೆನ್ನಾಗಿದೆ 'ಜಿಪ್ಪಾಯಣ'.....

    ReplyDelete
  14. ಅಯ್ಯೋ ಪಾಪ!
    ಕಥೆ ಶುರುಮಾಡಿದಾಗಲೇ ಇದೇ ವಿಷಯ ಇರಬಹುದೇನೋ ಅನ್ಕೊಂಡಿದ್ದೆ. ಕೊನೆಗೂ ವಿಷಯ ಅದೇ!

    ನಾನು ಬಾಲ್ಯದಲ್ಲಿ (ಹತ್ತನೇ ತರಗತಿ ಓದುವ ಸಂಧರ್ಭದಲ್ಲಿ) ಇಂತಹ ಮುಜುಗರಕ್ಕೆ ಒಳಗಾಗಿದ್ದೇನೆ.

    Nice One....

    ReplyDelete
  15. ha ha ha... saar sakkat comedy.. onde dina onde officenalli ibbaru zip maretu bandiddare endare nim office nalli tumba work pressure irbeku ansutte!!

    ReplyDelete
  16. ಹಾಹ್ಹಾ..ತುಂಬಾ ಚೆನ್ನಾಗಿದೆ. ನನಗೂ ಒಂದೆರಡು ಬಾರಿ ಮರೆತಿತ್ತು, ಪುಣ್ಯಕ್ಕೆ ಬೇರೆಯವರಿಗೆ ತಿಳಿಯೋ ಮೊದಲೇ ಗೊತ್ತಾಗಿತ್ತು. ಈವಾಗ ಇನ್ ಶರ್ಟ್ ಮಾಡೋದೇ ಬಿಟ್ಟು ಬಿಟ್ಟಿದ್ದೇನೆ :)

    ReplyDelete
  17. rofl. Thumba chennagide. You do have very good literature skill. Thank you for sharing. Please visit my blog

    http://malenadugroup.blogspot.com/

    ReplyDelete
  18. nice comedy article sir..i liked your sense of humor..:-)

    ReplyDelete