Jul 18, 2012

ವಿಪರ್ಯಾಸ.....!!!




   ಮಧ್ಯಾನ್ಹದ ಚುಟುಕು ನಿದ್ದೆಯಲ್ಲಿದ್ದೆ.... ಮೊಬೈಲ್ ಕುಂಯ್ಗುಟ್ಟಿತು...... ನೋಡಿದರೆ ಮೆಸೇಜ್ ಇತ್ತು.... " ನಿಮ್ಮ ಕೆಮೆರಾ ಜೊತೆ ಹೊಟೆಲ್ ಮಾಯಾಕ್ಕೆ ಬನ್ನಿ.... ಸುದ್ದಿ ಇದೆ.." ಎಂದಿತ್ತು...... ಇಪ್ಪತ್ನಾಲ್ಕು ಘಂಟೆಯ ಸುದ್ದಿ ವಾಹಿನಿಗೆ ಕೆಲಸಕ್ಕೆ ಸೇರಿ ಮೂರು ತಿಂಗಳಾಗುತ್ತಾ ಬಂದಿದ್ದರೂ ಒಂದೂ ಬ್ರೇಕಿಂಗ್ ನ್ಯೂಸ್ ಕೊಡಲು ಆಗಿರಲಿಲ್ಲ.... ವರದಿಗಾರನ ಸ್ಟೇಟಸ್ ಈಗೀಗ ಬ್ರೇಕಿಂಗ್ ನ್ಯೂಸ್ ಮೇಲೆಯೇ ಅವಲಂಬಿತವಾಗಿರುತ್ತದೆ..... ಕೂಡಲೇ ಸಂಪಾದಕರಿಗೆ ಫೋನ್ ಮಾಡಿದೆ..... " ನಿಮ್ಮ ವಲಯದ ವರದಿಗಾರರು ಬೇರೆ ಕೆಲಸದ ಮೇಲೆ ಹೋಗಿದ್ದಾರೆ... ನೀವು ಹೋಗಿ ಶೂಟ್ ಮಾಡಿ ಬನ್ನಿ, ಆಡಿಯೋ ನಂತರ ಸೇರಿಸೋಣ" ಎಂದರು.... ಕೆಮೆರಾ ಎತ್ತಿಕೊಂಡವನೇ ಬೈಕ್ ಕಿಕ್ ಹೊಡೆದೆ...... 


ಹೊಟೆಲ್ ಮಾಯಾ ನನ್ನ ರೂಮಿನಿಂದ ಹತ್ತು ನಿಮಿಷದ ಬೈಕ್ ದಾರಿ....  ನಾನು ಹೊಟೆಲ್ ಮುಟ್ಟುತ್ತಲೇ ನಾಲ್ಕೈದು ಜನ ವರದಿಗಾರರೂ ಅಲ್ಲಿದ್ದರು.... ಜೊತೆಗೆ ಎಂಟು ಹತ್ತು ಜನ ಯುವ ವೇದಿಕೆಯ ಕಾರ್ಯಕರ್ತರೂ ಇದ್ದರು...."ಯುವ ವೇದಿಕೆ" ತಾವೇ ಘೋಷಿಸಿಕೊಂಡಂತೆ ಈ ನಾಡಿನ ಸಂಸ್ಕ್ರತಿ, ವಿಚಾರ, ಗೌರವದ ರಕ್ಷಕರೆಂದು ಹೇಳಿಕೊಳ್ಳುತ್ತಿದ್ದರು..... ಅಲ್ಲಿದ್ದ ಒಬ್ಬ ಯುವಕನನ್ನು ಕೇಳಿದೆ...." ಏನು ಸುದ್ದಿ...?"......  ಆತ" ಈ ಹೊಟೆಲ್ ನಲ್ಲಿ ಗಾಂಜಾ , ಚರಸ್ ಗಳ ಸರಬರಾಜಾಗುತ್ತಿದೆ....   ನಾವು ಸ್ತ್ರೀ ಜಾತಿಯನ್ನು ಮಾತೆಯರಂತೆ ಪೂಜಿಸುತ್ತೇವೆ.... ಆದರೆ ಈ ದಾರಿ ತಪ್ಪಿದ ಯುವ ಜನಾಂಗ ದುಡ್ಡಿನ ಮದದಲ್ಲಿ ಯುವತಿಯರ ದಾರಿ ತಪ್ಪಿಸಿ ಅವರನ್ನು ಕೆಟ್ಟದಾಗಿ ನೋಡುತ್ತಿದ್ದಾರೆ.... ಅರೆ ಬರೆ ಬಟ್ಟೆಯಲ್ಲಿ ಅವರನ್ನು ನಿಲ್ಲಿಸಿ, ಅವರನ್ನು ಭೋಗಿಸುತ್ತಿದ್ದಾರೆ...... ಇದೆಲ್ಲಕ್ಕೂ ಅಂತ್ಯ ಹಾಡಲೇ ಬೇಕು.." ಮೈಕ್ ಇಲ್ಲದಿದ್ದರೂ ಆತ ಭಾಷಣ ಹೊಡೆಯುತ್ತಿದ್ದ...... ಅಷ್ಟರಲ್ಲಿ ಒಬ್ಬ" ಹೋಗೋಣ ನಡೆಯಿರಿ, ಕೆಮೆರಾ ಚಾಲು ಇರಲಿ" ಎಂದ......


ನಾನು ಕೆಮೆರಾ ಸೆಟ್ ಮಾಡಿಕೊಂಡೇ ಒಳಗೆ ಓಡಿದೆ..... ಮುಖ್ಯ ಧ್ವಾರದಲ್ಲಿದ್ದ ಸೆಕ್ಯುರಿಟಿಗೆ ಒಬ್ಬ ಯುವ ವೇದಿಕೆಯ ಯುವಕ ಹೊಡೆಯುತ್ತಿದ್ದ..... ನಾನು ಅದನ್ನೂ ಶೂಟ್ ಮಾಡಿದೆ...... ಒಂದು ನಿಮಿಶದ ಶಾಟ್ ನಂತರ ಆ ಯುವಕನನ್ನು ದೂಡಿದೆ..." ನಾವು ಬಂದ ಕೆಲಸದ ಮೇಲೆ ಗಮನ ಇಡು"....ಎಂದೆ...... ಒಳಕ್ಕೆ ಓಡಿದೆ....ಹೊರಗಡೆಯಿಂದ ಸಾಧಾರಣವಾಗಿ ಕಾಣುವ ಈ ಹೊಟೆಲ್ ಒಳಗಡೆಯಿಂದ  ಸ್ವರ್ಗದಂತೆಯೇ ಇತ್ತು..... ಝಗಮಗಿಸುವ ಬಣ್ಣ ಬಣ್ಣದ ದೀಪಗಳು ಸ್ವರ್ಗವನ್ನೂ ನಾಚಿಸುವಂತೆ ಇದ್ದವು...... ನಾಲ್ಕೈದು ಮಾರು ದೂರದಲ್ಲಿ ಒಂದು ಸ್ಟೇಜ್ ಇತ್ತು....ಅಲ್ಲಿ ಇಪ್ಪತ್ತು ಜನರ ಗುಂಪಿತ್ತು.... ಎಚ್ಚರಿಕೆಯಿಂದ ಅವರನ್ನೇ ಫ಼್ಹೋಕಸ್ ಮಾಡಿದೆ..... ಹತ್ತು ಜನ ಹುಡುಗ, ಹತ್ತು ಜನ ಹುಡುಗಿಯರಿದ್ದರು.... ನಾವೆಲ್ಲಾ ಒಳಕ್ಕೆ ಬಂದಿದ್ದರೂ ಅವರಿಗೆ ನಮ್ಮ ಗಮನವೇ ಇರಲಿಲ್ಲ..... ಹುಡುಗಿಯರ ಬಟ್ಟೆಯೂ ಅರೆಬರೆಯಾಗಿತ್ತು...... ಯಾವುದೋ ಗುಂಗಿನಲ್ಲಿ ಇದ್ದ ಹಾಗಿತ್ತು..... ನಾನು ಎಲ್ಲವನ್ನೂ ಕೆಮೆರಾ ಕಣ್ಣಿನಿಂದಲೇ ನೋಡುತ್ತಿದ್ದೆ...... ಯುವ ವೇದಿಕೆಯ ಎಲ್ಲರೂ ಸ್ಟೇಜ್ ಹತ್ತಿ ಅಲ್ಲಿದ್ದ ಹುಡುಗ ,ಹುಡುಗಿಯರಿಗೆ ಹೊಡೆಯಲು ಶುರು ಮಾಡಿದರು....... ನಾನು ಎಲ್ಲವನ್ನೂ ಶೂಟ್ ಮಾಡುತ್ತಿದ್ದೆ...... ಯುವ ವೇದಿಕೆಯ ಒಬ್ಬ ಹುಡುಗ ಅಲ್ಲಿದ್ದ ಒಬ್ಬಳು ಹುಡುಗಿಯನ್ನು ಹೊಡೆಯಲು ಶುರು ಮಾಡಿದ..... ನಾನು ಶೂಟ್ ಮಾಡುತ್ತಲೇ ಇದ್ದೆ.... ಅಲ್ಲಿಗೆ ಟೈ ಕಟ್ಟಿದ್ದ ಒಬ್ಬಾತ ಓಡಿ ಬಂದು ತಾನು ಮೆನೇಜರ್ ಎಂದು ಹೇಳಿಕೊಂಡ...... ಯಾರೂ ಆತನನ್ನು ಕೇಳುತ್ತಲೇ ಇರಲಿಲ್ಲ...... ನಾನು ಕೇವಲ ಕೆಮೆರಾ ಕಣ್ಣಿನಿಂದ ಎಲ್ಲವನ್ನೂ ನೋಡುತ್ತಿದ್ದೆ....   ಯುವ ವೇದಿಕೆಯ ಎಲ್ಲರೂ ಹೊಡೆಯುವುದರಲ್ಲಿಯೇ ಇದ್ದರು........ 


    ಕೇವಲ ಹತ್ತು ನಿಮಿಷದ ಹಿಂದೆ ಸ್ತ್ರಿಯರನ್ನು ಮಾತೆಯರಂತೆ ಪೂಜಿಸುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಯುವಕನನ್ನು ಹುಡುಗನನ್ನು ಹುಡುಕುತ್ತಿದ್ದೆ..... ಆತ ಒಬ್ಬಳು ಹುಡುಗಿಯನ್ನು ಮನಬಂದಂತೆ ಹೊಡೆಯುತ್ತಿದ್ದ...... " ನಿಮ್ಮಿಂದಲೇ ಹುಡುಗರೆಲ್ಲಾ ಹಾಳಾಗಿದ್ದೆ..... ಮೈಯನ್ನು ಅರ್ಧಂಭರ್ಧ ತೋರಿಸುತ್ತಾ ತಿರುಗಾಡಿದರೆ ಯಾವ ಹುಡುಗ ನಿಮ್ಮ ಮೇಲೆ ಆಶೆ ಪಡಲ್ಲ..... ಮನೆಯಲ್ಲೇ ಬಿದ್ದಿರಬೇಕು ನೀವು....." ಎಂದೆಲ್ಲಾ ಹೇಳುತ್ತಲೇ ಹೊಡೆಯುತ್ತಿದ್ದ...... ನನ್ನ ಕೆಮೆರಾ ಎಲ್ಲವನ್ನೂ ರೆಕೊರ್ಡ್ ಮಾಡುತ್ತಿತ್ತು....... ಅಲ್ಲಿದ್ದ ಹುಡುಗರಲ್ಲಿ ಕೆಲವರು ಓಡಿ ಹೋಗಿದ್ದರು..... ಕೆಲವು ಹುಡುಗಿಯರೂ ಓಡುತ್ತಿದ್ದರು.....ಯುವ ವೇದಿಕೆಯವರು ಅವರನ್ನೂ ಅಟ್ಟಿಸಿಕೊಂಡು ಹೋಗಿ ಹೊಡೆಯುತ್ತಿದ್ದರು..... ನನ್ನ ಜೊತೆ ಇದ್ದ ಕೆಮೆರಾಮೆನ್ ಎಲ್ಲರೂ ಅವರ ಹಿಂದೇನೆ ಓಡುತ್ತಾ ಶೂಟ್ ಮಾಡುತ್ತಿದ್ದರು.... ನಾನೂ ಓಡಿದೆ..... ಅವರ ಹಿಂದೆ.........
  
 ಓಡುತ್ತಾ ಶೂಟ್ ಮಾಡುತ್ತಿದ್ದೆ......ನನ್ನ ಮುಂದಕ್ಕೆ ಓಡಿ ಹೋಗುತ್ತಿದ್ದ ಒಬ್ಬಳು ಹುಡುಗಿಯನ್ನು ಯುವ ವೇದಿಕೆಯ ಸದಸ್ಯನೊಬ್ಬ ಜೋರಾಗಿ ದೂಕಿದ...... ಆಕೆ ದೂಕರಿಸಿ ಹೋಗಿ ಒಂದು ಕಂಬಕ್ಕೆ ತಾಗಿ ಕೆಳಗೆ ಬಿದ್ದಳು........ ತಲೆಯಿಂದ ರಕ್ತ ಬರಲು ಶುರು ಆಗಿತ್ತು..... ಎಲ್ಲಾ ಕೆಮೆರಾಮೆನ್ ಗಳೂ ಅವಳ ಸುತ್ತ ನಿಂತು ಶೂಟ್ ಮಾಡುತ್ತಿದ್ದರು...... ನಾನೂ ಅವರಲ್ಲಿ ಒಬ್ಬನಾದೆ...... ತಲೆಯಿಂದ ರಕ್ತ ಒಸರುತ್ತಿತ್ತು....... ಒಂದು ಕೈಯಿಂದ ತಲೆ ಒತ್ತಿ ಹಿಡಿದಿದ್ದಳು ಆಕೆ, ಇನ್ನೊಂದು ಕೈಯಿಂದ ಹರಿದು ಹೋದ ಬಟ್ಟೆ ಸರಿಪಡಿಸಿಕೊಳ್ಳುತ್ತಿದ್ದಳು..... ಅಲ್ಲೇ ಇದ್ದ ಯುವ ವೇದಿಕೆ ಸದಸ್ಯನೊಬ್ಬ ಆಕೆಯನ್ನು ಒದೆಯಲು ಶುರು ಮಾಡಿದ....... ಹೊಟ್ಟೆಯ ಮೇಲೆ ಒದೆಯುತ್ತಿದ್ದ ಆತ...... ಆಕೆ ಕೂಗುತ್ತಿದ್ದಳು...... ಆತ ಒದೆಯುತ್ತಲೇ ಇದ್ದ..... ನನ್ನ ಕೆಮೆರಾ ಕಣ್ಣುಗಳಿಗೆ ಆಕೆ ಪ್ರಜ್ನೆ ತಪ್ಪುವುದು ಕಾಣಿಸುತ್ತಿತ್ತು...... ನನಗೆ ಇದ್ಯಾಕೊ ಅತೀ ಎನಿಸಿತು...... ನಮ್ಮ ಸಂಸ್ಕ್ರತಿ, ಸ್ತ್ರಿ ಗೌರವದ ಬಗ್ಗೆ ಮಾತನಾಡುತ್ತಿದ್ದ ಇವರೇನಾ ಈಗ ಈ ರಿತಿ ಹೊಡೆಯುತ್ತಿರುವುದು?... ತಪ್ಪು ನಡೆಯುತ್ತಿದ್ದರೆ ಅದನ್ನು ನಿಲ್ಲಿಸಬೇಕೋ ಹೊರತು ಹೀಗೆ ಹೊಡೆದರೆ ಸರಿ ಆಗತ್ತಾ..? ಹೀಗೆ.....ಮನದಲ್ಲಿ ನೂರಾರು ಪ್ರಶ್ನೆಗಳು ಮೂಡುತ್ತಿದ್ದವು.......


  ಕೆಳಗೆ ಬಿದ್ದಿದ್ದ ಹುಡುಗಿ ಪ್ರಜ್ನೆ ತಪ್ಪುವ ಹಾಗೆ ಕಾಣುತ್ತಿತ್ತು...... ನನಗೆ ಯಾಕೊ ಸರಿ ಕಾಣಲಿಲ್ಲ...... ದೌರ್ಜನ್ಯ ನಡೆಯುತ್ತಿದ್ದರೂ ಅದನ್ನ ತಡೆಯದೇ , ಅದನ್ನ ವರದಿ ಮಾಡುವುದರಲ್ಲಿ ಯಾವ ಪುರುಶಾರ್ಥ ಇದೆ ಎನಿಸಿತು.... ಕೆಮೆರಾ ಪಕ್ಕಕ್ಕಿಟ್ಟೆ...... ಆ ಹುಡುಗಿಯನ್ನು ಎತ್ತಿಕೊಂಡೆ..... ಹೊರಗಡೆ ಓಡಿದೆ..... ಉಳಿದ ಕೆಮೆರಾಮೆನ್ ಗಳು ನನ್ನನ್ನೂ ಶೂಟ್ ಮಾಡುತ್ತಾ ನನ್ನ ಹಿಂದೆಯೇ ಓಡಿ ಬಂದರು...... ನಾನು ಆಟೊ ಹತ್ತಿ ಹಾಸ್ಪಿಟಲ್ ಕಡೆ ಹೊರಟೆ..... 


  ಆ ಹುಡುಗಿಯನ್ನು ಅಡ್ಮಿಟ್ ಮಾಡಿ ಹೊರಬಂದೆ..... ವರಾಂಡಾದಲ್ಲಿದ್ದ ಟಿ ವಿ ಯಲ್ಲಿ ಇದೇ ಸುದ್ದಿಯ ಬಗ್ಗೆ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು......
" ಪಬ್ ಮೇಲೆ ದಾಳಿ..... ಮಹಿಳೆಯರ ಮೇಲೆ ದೌರ್ಜನ್ಯ"...... 
"ಪಬ್ ಮೇಲೆ ದಾಳಿ..... ಮಹಿಳೆಯನ್ನು ಬಚಾವ್ ಮಾಡಿದ ಮಾಧ್ಯಮ ವರದಿಗಾರ..".....
ತಕ್ಷಣಕ್ಕೆ ನೆನಪಾಗಿದ್ದು... ನಮ್ಮ ಸಂಪಾದಕರು.... ಮೊಬೈಲ್ ತೆಗೆದೆ..... ಸಂಪಾದಕರದೇ ಹದಿನೈದು ಮಿಸ್ ಕಾಲ್ ಇತ್ತು..... ಹೊಟೆಲ್ ಒಳಗಡೆ ಹೊಗುವಾಗ ಮೊಬೈಲ್ ಸೈಲೆಂಟ್ ಮೋಡ್ ನಲ್ಲಿಟ್ಟಿದ್ದೆ....... ಸಂಪಾದಕರಿಗೆ ಫೋನ್ ಮಾಡಿದೆ........ " ಎಲ್ಲಿದ್ದೀಯಾ..... ? ನಮ್ಮ ವಾಹಿನಿಯ ವರದಿಗಾರರಿದ್ದೂ ನಾನು ವೀಡಿಯೋವನ್ನು ದುಡ್ಡು ಕೊಟ್ಟು ಬೇರೆ ವಾಹಿನಿಯಿಂದ ಕೊಂಡುಕೊಳ್ಳಬೇಕಾ...? ಅದೇ ಸುದ್ದಿ ತರಲು ಹೋಗಿದ್ದಲ್ಲವಾ ನೀನು...? ಮತ್ತೇಕೆ, ನಮಗೆ ವೀಡಿಯೋ ತಲುಪಿಲ್ಲ......? " ಒಂದೇ ಸಮನೆ ಪ್ರಶ್ನೆ ಕೇಳುತ್ತಿದ್ದರು......... ನಾನು ಎಲ್ಲವನ್ನೂ ವಿವರಿಸಿದೆ......." ಬ್ರೇಕಿಂಗ್ ನ್ಯೂಸ್ ನಲ್ಲಿ ಬರುತ್ತಿರುವ ಹಾಗೆ ಮಹಿಳೆಯನ್ನು ಬಚಾವ್ ಮಾಡಿದ ವರದಿಗಾರ ನಾನೆ ಸಾರ್.." ಎಂದೆ.... ಅವರು ಸುಮ್ಮನಾದರು....." ನಾಳೆ ಬಂದು ನನ್ನ ಚೇಂಬರ್ ನಲ್ಲಿ ಭೇಟಿ ಮಾಡು" ಎಂದು ಫೋನ್ ಕಟ್ ಮಾಡಿದರು.......


  ಮಾರನೇ ದಿನ ಎಲ್ಲರಿಗಿಂತ ಮೊದಲೇ ನಾನು ಸ್ಟುಡಿಯೋದಲ್ಲಿದ್ದೆ..... ಎಲ್ಲರೂ ನನ್ನನ್ನು ಅಭಿನಂಧಿಸುತ್ತಿದ್ದರು....... ಅಷ್ಟರಲ್ಲೇ ಸಂಪಾದಕರು ಬಂದರು.... ನಾನು ಅವರ ಹಿಂದೆಯೇ ಹೋದೆ..... ಅವರ ಚೇರ್ ನಲ್ಲಿ ಕುಳಿತು ಒಂದು ಕವರ್ ಕೊಟ್ಟರು......" ಒಂದು ಯುವತಿಯ ಪ್ರಾಣ ಉಳಿಸಿ ಒಳ್ಳೆಯ ಕೆಲಸ ಮಾಡಿದ್ದೀಯಾ... ಆದರೆ ನಮ್ಮ ಕೆಲಸ ಸುದ್ದಿ ತರೋದೆ ಹೊರತು ನಾವೇ ಸುದ್ದಿಯಾಗೋದು ಅಲ್ಲ..... ಯು ಮೆ ಗೋ ನೌ" ಎಂದರು 


ನನಗೆ ಏನೂ ತಿಳಿಯಲಿಲ್ಲ......ಕವರ್ ಓಪನ್ ಮಾಡಿದೆ...... YOU ARE TERMINATED     ಎಂದಿತ್ತು......

26 comments:

  1. ದಿನಕರ...

    ಓದುತ್ತ ಓದುತ್ತ ತಲೆ ಗಿರ್ ಎಂದಿತು....
    ದಿನ ನಿತ್ಯ ಬ್ರೇಕಿಂಗ್ ಸುದ್ಧಿಗಳ ಹಿಂದೆ ಇಂಥಹ ಸತ್ಯ ಇದ್ದಿರ ಬಹುದಲ್ಲಾವಾ?

    ತುಂಬಾ ಮಾರ್ಮಿಕವಾದ ಕಥೆ..

    ಉತ್ತಮ ಕಥೆಗಾಗಿ ಅಭಿನಂದನೆಗಳು.... ಜೈ ಹೋ !

    ReplyDelete
  2. ಮಾಧ್ಯಮದ ಕರಾಳ ಮಗ್ಗುಲನ್ನು ಸಮರ್ಥವಾಗಿ ತೋರಿಸಿದ್ದೀರ.

    ನನ್ನ ವಿಡಿಯೋಗ್ರಫಿ ಗುರು ಜೋಶಿಯವರು ಅಂತಹ ಸಂದರ್ಭ ಬಂದರೆ ಕ್ಯಾಮರಾ ಎತ್ತಿಟ್ಟು ಗಾಯಗೊಂಡವನನ್ನು ಎತ್ತಿಕೋ ಎಂದು ಹೇಳಿಕೊಟ್ಟರು.

    ಮ್ಹೆಣ್ಣು ಮಕ್ಕಳನ್ನು ದೇವತೆ ಅಂತೆಲ್ಲ ಬಡಾಯಿಕೊಚ್ಚಿಕೊಂಡ ಯುವಕನೇ ಹುಡುಗಿಗೆ ಮಾರಣಾಂತಿಕವಾಗಿ ಹೊಡೆದರೆ, ನ್ಯಾಯವೆಲ್ಲಿ ಅಡಗಿದೆ?

    ಅಪರೂಪಕ್ಕೆ ಬ್ಲಾಗಿಸಿದರೂ ವರ್ತಮಾನ ಸಮಸ್ಯೆಯನ್ನೇ ಕೈಗೆತ್ತಿಕೊಂಡಿದ್ದೀರ.

    ಪೋಷಕರು ತಮ್ಮ ಯುವ ಪೀಳಿಗೆಯನ್ನು ಹದ್ದು ಬಸ್ತಿನಲ್ಲಿಡಲು, ಮೊದಲು ಅವರೂ ನೈತಿಕವಾಗಿ ನಡೆದುಕೊಳ್ಳಬೇಕು. ಇದು ಮೇಲ್ವರ್ಗದಲ್ಲಿ ನಡೆಯುತ್ತಿರುವ ಅನಾಚಾರ.

    ಉತ್ತಮ ಲೇಖನ ಮೋಗೇರ ಸಾರ್, ಅಭಿನಂದನೆಗಳು.

    ReplyDelete
  3. ಸಾಹಸ ಮೆಚ್ಚುವಂತದ್ದು...ಒಳ್ಳೆಯ ಬರವಣಿಗೆ...

    ನನಗೆ ಇಷ್ಟವಾದ ಸಾಲುಗಳು ..... ದೌರ್ಜನ್ಯ ನಡೆಯುತ್ತಿದ್ದರೂ ಅದನ್ನ ತಡೆಯದೇ , ಅದನ್ನ ವರದಿ ಮಾಡುವುದರಲ್ಲಿ ಯಾವ ಪುರುಶಾರ್ಥ ಇದೆ ಎನಿಸಿತು

    ಇದನ್ನು ಎಲ್ಲ ಮಾಧ್ಯಮಗಳು ಅರ್ಥ ಮಾಡಿಕೊಂಡರೆ..ನಮ್ಮ ಸಮಾಜ ಉತ್ತಮವಾಗುವುದರಲ್ಲಿ ಸಂದೇಹವೇ ಇಲ್ಲ...

    ReplyDelete
  4. olleya lekhana.samayochita baraha.

    ReplyDelete
  5. ಬ್ರೇಕಿಂಗ್ ನ್ಯೂಸ್ ಎಂಬುದರ ಹಿಂದೆ ಹೀಗೊಂದು ಮುಖ ಇರಬಹುದೇ? ಎನಿಸಿತು. ಚಂದದ ಕಥೆ..

    ReplyDelete
  6. idu naijavo katheyo...
    jagattina ello ondu kade nadede irutte..
    bharaatavo anya deshavo..
    manaviya moulyagalige bele sigade irode vishada...:(

    ReplyDelete
  7. ನಮ್ಮ ನ್ಯೂಜ್ ಚಾನೆಲ್‍ಗಳ ಸಂಸ್ಕೃತಿಯನ್ನು ಬಿಚ್ಚಿ ತೋರಿಸಿದ್ದೀರಿ!

    ReplyDelete
  8. ದಿನಕರ್ ಸರ್;ತುಂಬಾ ಚೆನ್ನಾಗಿದೆ.ಇದು ಬರೀ ಬ್ರೆಕಿಂಗ್ ನ್ಯೂಸ್ ಅಲ್ಲಾ .....ಹಾರ್ಟ್ ಬ್ರೆಕಿಂಗ್ ನ್ಯೂಸ್ !!!

    ReplyDelete
  9. madhurbhandarkar cinema nenapaaytu... :) sakath kathe sir

    ReplyDelete
  10. ಈ ಕೆಲಸ ಹೋದರೆ ಇನ್ನೊಂದು ಸಿಗುತ್ತದೆ...ಮನುಷ್ಯನಿಗೆ ಮಾನವೀಯತೆ ಮುಖ್ಯ...ಅದು ನಿಮ್ಮಲ್ಲಿದೆ... :)

    ReplyDelete
  11. ದಿನಕರ್ ಸರ್,
    ಇಂದಿನ ಮಾದ್ಯಮಗಳ ಸತ್ಯಸ್ಥಿತಿಯನ್ನು ಕತೆಯಲ್ಲಿ ಚೆನ್ನಾಗಿ ವಿವರಿಸಿದ್ದೀರಿ...ಕುತೂಹಲಕರವಾಗಿ ಓದಿಸಿಕೊಂಡಿತು...

    ReplyDelete
  12. you have shown the other side, perhaps the real side of coin. good one.

    ReplyDelete
  13. Hi Dinakar,

    ಅ೦ತವರ ನಡುವೆ ನಿಮ್ಮನ್ತವರೂ ಇರೋದೇ ಒಂದು ಸಮಾಧಾನ....
    ತುಂಬಾ ಇಷ್ಟವಾಯ್ತು....

    Roopa

    ReplyDelete
  14. ದಿನಕರ್..ಸಿವಿಲ್ ಎಂಜಿನಿಯರಿಂಗ್ ಹುದ್ದೆ ಬಿಟ್ಟು ಯಾವಾಗಪ್ಪಾ ಈ ದಿನಕರ ಈ ಕೆಲ್ಸ ಶುರುಹಚ್ಕೊಂಡಿದ್ದು ಅಂತ ಕ್ಷಣಕ್ಕೆ...ತಬ್ಬಿಬ್ಬು...!!! ಹಹಹ ಬಹಳ ಚನ್ನಾಗಿದೆ ನಿರೂಪಣೆ. ಹೌದು ಒಬ್ಬರಿಗೆ ಸಹಾಯ ಮಾಡಿ ಪ್ರಾಣ ಉಳಿಸುವುದಕ್ಕಿಂತಾ ಅವರ ವಿಲವಿಲ ಜೀವ ಹೋಗುವ ಸ್ಥಿತಿಯನ್ನು ವೀಡಿಯೋ ಮಾಡಿದವನೇ ಮಹಾ ಶೂರ.... ಇದು ಮಾಧ್ಯಮ.!!!!!!

    ReplyDelete
  15. Whenever I watch news channel and when they show something disturbing, I usually say "Why can't these media people stop rather shooting it". but, now got the proper answer, indeed its simple & only one. Media makes dramatic changes positively & negatively. Here, reporter run for the news and become a news in-turn lose daily bread . . .all of us running because all are doing the same pray is not to end up with termination letter . . . truly media makes the difference socially & personally respected people have to think . . . people searching for news from 24*7 news channels . . .
    My statements may sound like out of the scope. . but, I thought to put so . . . Anna, like all the time its new & nice . . . :-)

    ReplyDelete
  16. ದಿನಕರ್ ನೀವು ಬರೆದಿರುವ ಶಿಲಿ ತುಂಬಾ ಇಷ್ಟ ವಾಯಿತು. ಕಣ್ಣಿಗೆ ಕಟ್ಟಿದಂತೆ ಕಥೆಯನ್ನು ನಿರೂಪಣೆ ಮಾಡಿದ್ದೀರಿ. ಹೌದು ಇಂತಹ ಘಟನೆಗಳು ಸಾಮಾನ್ಯವಾಗಿವೆ ಇಂದು. ಬ್ರೆಕಿಂಗ್ ನ್ಯೂಸ್ ಗಾಗಿ ಮಾನವೀಯತೆ ಮರೆತು ಕರ್ತವ್ಯದ ಹೆಸರಿನಲ್ಲಿ ಆಶಯಗಳನ್ನು ಸಮಾಜದ ಮುಂದೆ ಸುರಿಯುತ್ತಿರುವ ಮಾಧ್ಯಮಗಳ ಚಾನಲ್ ಗಳಲ್ಲಿ ನಿಮ್ಮ ಕಥೆಯಲ್ಲಿ ಬರುವ ವರಧಿಗಾರರಿದ್ದರೆ ಎಷ್ಟು ಚಂದಾ ಆಲ್ವಾ. ನಿಮ್ಮ ವಸ್ತುನಿಷ್ಠ ಪೋಸ್ಟಗೆ ಜೈ ಹೋ
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  17. ದಿನಕರ್ ಸರ್,

    ಇಂದಿನ ಸುದ್ದಿ ಮಾಧ್ಯಮಗಳ ಕಾರ್ಯ-ವೈಖರಿಗೆ ಹಿಡಿದ ಕನ್ನಡಿ ಯಂತಿದೆ ನಿಮ್ಮ ಲೇಖನ...ಬ್ರೇಕಿಂಗ್ ನ್ಯೂಸ್ ಹೆಸರಿನಲ್ಲಿ ಮಾನವೀಯತೆಯನ್ನು ಮರೆತು ವರ್ತಿಸುವ ಈ ಮಾಧ್ಯಮ ದವರಿಗೆ ಬುದ್ಧಿ ಬರುವುದು ಎಂದೋ ? ಉತ್ತಮ ನಿರೂಪಣೆ....ಇಷ್ಟ ಆಯಿತು....

    ReplyDelete
  18. ದಿನಕರ್ ರವರೆ,
    ನಿಮ್ಮ ವಿಪರ್ಯಾಸ ಲೇಖನವನ್ನು ನೀವು ಬ್ಲಾಗಿಗೆ ಹಾಕಿದ ದಿನವೆ ಓದಿದ್ದೆ. ಆದರೆ ಪ್ರತಿಕ್ರಿಯೆ ನೀಡಿರಲಿಲ್ಲ. ಅದರೆ ಇತ್ತೀಚಗೆ ಮಂಗಳೂರಿನಲ್ಲಿ ನಡೆದ ಘಟನೆಯಲ್ಲಿ ನಿಮ್ಮ ಲೇಖನವು ಮತ್ತೆ ನೆನಪಿಗೆ ಬಂತು. ಅಲ್ಲಿ ಕ್ಯಾಮೆರಾಮೆನ್ ಕ್ಯಾಮರ ಕಣ್ಣಿನಲ್ಲೇ ನೋಡುತ್ತಿದ್ದ.ಇಲ್ಲಿ ಕ್ಯಾಮೆರಾ ಕಣ್ಣು ಮುಚ್ಚಿತ್ತು, ಮನದ ಕಣ್ಣು ತೆರೆದಿತ್ತು.
    ಸುದ್ದಿವಾಹಿನಿಯ ವರದಿಗಾರರು ಬಗೆಗಿನ ಲೇಖನ ಚನ್ನಾಗಿದೆ.

    ReplyDelete
  19. ಓದುತ್ತಾ ಎದೆ ಝಲ್ ಎಂದಿತು....
    ಸಂಸ್ಕೃತಿ ಹೆಸರಿನಲ್ಲಿ ಅನಾಗರಿಕ ವರ್ತನೆ ನಿಜಕ್ಕೂ ಖಂಡನೀಯ...

    ReplyDelete
  20. ಇಂದಿನ ಮಾದ್ಯಮಗಳ ಸತ್ಯಸ್ಥಿತಿಯನ್ನು ಕತೆಯಲ್ಲಿ ಚೆನ್ನಾಗಿ ವಿವರಿಸಿದ್ದೀರಿ...

    ReplyDelete
  21. ಎಂತಹ ವಿಪರ್ಯಾಸ..!! ಮಾಧ್ಯವದವರು ಯಾಕೆ ರಕ್ಷಿಸುವುದನ್ನು ಬಿಟ್ಟು ವಿಡಿಯೋ ಕವರೇಜ್ ಮಾಡ್ತಾರೆ ಎನ್ನುವುದಕ್ಕೆ ಇಂತಹ ಕಥೆಯೇ ಸಾಕ್ಷಿ... ನಿರೂಪಣೆ ಸೂಪರ್..

    ReplyDelete
  22. ದಿನಕರ್ ಅದು ಹೀಗೆಲ್ಲಾ ಆಯಿತು
    "ಅವರ ಚೇರ್ ನಲ್ಲಿ ಕುಳಿತು ಒಂದು ಕವರ್ ಕೊಟ್ಟರು......" ಒಂದು ಯುವತಿಯ ಪ್ರಾಣ ಉಳಿಸಿ ಒಳ್ಳೆಯ ಕೆಲಸ ಮಾಡಿದ್ದೀಯಾ..." ಇಷ್ಟು ಓದುತ್ತಿದ್ದಂತೆ ಅರ್ಜೆಂಟ್ ಕೆಲಸ ಬಂದು ಅದರತ್ತ ಓಡಿದೆ. ಕೆಲಸ ಮಾಡುತ್ತಾ ನಿಮ್ಮ ಕೆಲಸ ಹಾಗೂ ಅದಕ್ಕೆ ಸಂಪಾದಕರು ಕವರ್ ಕೊಟ್ಟು ಆಡಿದ ಮಾತು ತುಂಬಾ ಖುಷ್ ಕೊಟ್ಟಿತು. ಅರ್ದ ಗಂಟೆ ಬಿಟ್ಟು ಮುಂದಿನ ಸಾಲು ಓದಿದೆ. ಇಡೀ ಚಿತ್ರಣವೇ ಬದಲು.... ಛೆ ಏನಂತ ಬರೆಯಲಿ.....? ಆದರೂ ನಿಮ್ಮ ಜತೆ ನಾನು ಅಷ್ಟೆ ಸಾಕು.

    ReplyDelete
  23. ಉತ್ತಮ ಲೇಖನ ಮೊಗೇರ ರವರೆ, ಬಹುತೇಕ ನಮಗೂ ನಿಮ್ಮ ಕಥಾನಾಯಕ ನ೦ತೆಯೆ ಮಾನವೀಯತೆಯಿ೦ದ ವರ್ತಿಸಿದರೆ ಒಳಿತಲ್ಲವೇ ಎನಿಸುತ್ತದೆ. ಅಭಿನ೦ದನೆಗಳು.

    ReplyDelete