ಮನಸ್ಸಿನ ಮಾತುಗಳು ಮನಸ್ಸಲ್ಲೇ ಇದ್ದರೆ ಮುತ್ತುಗಳಾಗಲ್ಲ. ಎಲ್ಲೋ ಕೇಳಿದ ಕಥೆ,ಅನುಭವಿಸಿದ ವ್ಯಥೆ, ಇಷ್ಟಪಟ್ಟ ಯಾರದೋ ಸಾಲುಗಳು, ನೋಡಿದ ಸಿನೆಮಾಗಳ ಬಗ್ಗೆ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ಮನಸ್ಸಿಗೆ ತೋಚಿದ್ದನ್ನ, ನೋಡಿದ್ದನ್ನ ಬರೆಯುತ್ತೇನೆ, ನೋವನ್ನ ನಲಿವಿನಿಂದಲೇ ಹೇಳುತ್ತೇನೆ.
May 19, 2010
ಕಳೆದೋದ ನಾನು......!
ಮರೆಯಾದೆ ನನ್ನೊಳಗೆ,
ನಾನೆಂಬ ನೆರೆಯೊಳಗೆ.......
ಕಳೆದೋದೆ ನನ್ನನ್ನೇ,
ಕಾಣೆಯಾದ ಕನಸೊಳಗೆ.........
ಗಿಜಿಗುಡುವ ಬಾಯಿಗಳು ,
ಅಬ್ಬರದಾ ಸದ್ದುಗಳು.....
ಕೈ ತುಂಬಾ ಯೋಜನೆ,
ತನು ತುಂಬ ಕೆಲಸ.......
ತಲೆ ಮೇಲ ಬಾನಲ್ಲೂ,
ಸೇತುವೆಯ ಚಿತ್ರ....
ಕಾಲಡಿಯ ಮಣ್ಣಲ್ಲೂ,
ಮೂಡಿದೆ ಲೆಕ್ಕಪತ್ರ.......
ಕನಸಿಗೊಂದು ಅಡ್ಡಗೋಡೆ,
ಮನಸಿಗೊಂದು ಹಸಿ ಸುಳ್ಳು......
ಮಾತಿಗೊಂದು ಮುಳ್ಳುಬೇಲಿ,
ಬರಹಕ್ಕೊಂದು ರಜಾಚೀಟಿ.....
ಹುಡುಕಿಕೊಡಿ ನನ್ನನ್ನ.....
ಇಲ್ಲೆಲ್ಲೋ ಇದ್ದೇನೆ.....
ಕಿವಿ ಹಿಂಡಿ ಎಬ್ಬಿಸಿ,
ಬರೆಯಲು ಕೂಳಿಸಿರಿ......
Subscribe to:
Post Comments (Atom)
ಕನಸಿಗೊಂದು ಅಡ್ಡಗೋಡೆ,
ReplyDeleteಮನಸಿಗೊಂದು ಹಸಿ ಸುಳ್ಳು......
ಮಾತಿಗೊಂದು ಮುಳ್ಳುಬೇಲಿ,
ಬರಹಕ್ಕೊಂದು ರಜಾಚೀಟಿ.....
ಪೂರ್ತಿ ಕೊಚ್ಚಿಬಿಡೋ ಭರದಲ್ಲಿ ಇರೋಹಾಗಿದೆ ಕವನ ...ಹಹಹ....ಬಹಳ ಚನ್ನಾಗಿವೆ ...ಅದರಲ್ಲೂ ...ಮೇಲಿನ ಸಾಲುಗಳು ದಿನಕರ್
thank you sir.... nimma protsaahakke......
ReplyDeleteದಿನಕರ್ ಸರ್,
ReplyDeleteನಾನು ಫೋನಿನಲ್ಲೇ ಆಗಾಗ ಕಿವಿಯಿಂಡುತ್ತಿರುತ್ತೇನೆ. ನೀವು ಹೇಳಿದ ಎಲ್ಲದರಲ್ಲೂ ಕಳೆದುಹೋಗಬೇಡಿರೆಂದು.
ಕವನ ನಿಮ್ಮ ಮನಸ್ಸಿನ ಭಾವನೆಯನ್ನು ಕಟ್ಟಿಕೊಡುವಲ್ಲಿ ಸಫಲವಾಗಿದೆಯೆಂದು ನನ್ನ ಭಾವನೆ.
ಧನ್ಯವಾದಗಳು.
ಮೊದಲು ಒಬ್ಬ ಕ೦ಪ್ಯೂಟರ್ ಇ೦ಜಿನಿಯರನ್ನು ಹಿಡಿದು ನಿಮ್ಮ ಬ್ಲೊಗ್ ಸೆಟ್ಟಿ೦ಗ ಸರಿ ಮಾಡಿಸಿ ಅಪ್-ಡೇಟ್ ಮಿತ್ರರಿಗೆ ಬರುವ೦ತೆ ಮಾಡಬೇಕು. ನೀವೆಲ್ಲಿದ್ದಿರೆ೦ದು ಅವರಿಗೆ ಗೊತ್ತಾದರೆ ಹಿಡಿದು ತರುತ್ತಾರೆ. ಯಾ೦ತ್ರಿಕ ಜೀವನದಲ್ಲಿ ನಮ್ಮನ್ನು ನಾವು ನಾವೇ ಸೃಷ್ಟಿಸಿದ ನೆರೆಯಲ್ಲಿ ಕಳೆದಿಕೊಳ್ಳುತ್ತಿರುವದರ ಚಿತ್ರಣ ಆಪ್ತವಾಗಿ ಮೂಕಹಕ್ಕಿಯ ಮನದ ಮಾತಾಗಿ ಹೊರಹೊಮ್ಮಿದೆ. ಚೆ೦ದದ ಕವನ. ಬರೆಯುತ್ತಾ ಇರಿ.
ReplyDeleteಇಲ್ಲಿಯೇ ಇದ್ದೀರಲ್ಲ ಸರ್ !. ಕಳೆದುಹೋಗುವ ಮೊದಲು ನೆನಪು ಮಾಡಿಕೊಳ್ಳಿ. ಕವನ ಚೆನ್ನಾಗಿದೆ.
ReplyDeleteದಿನಕರ್ ಅವರೆ,
ReplyDeleteಕವನ ಬಹಳ ಚೆನ್ನಾಗಿವೆ.
"
ಕಾಲಡಿಯ ಮಣ್ಣಲ್ಲೂ,
ಮೂಡಿದೆ ಲೆಕ್ಕಪತ್ರ.......
ಕನಸಿಗೊಂದು ಅಡ್ಡಗೋಡೆ,
ಮನಸಿಗೊಂದು ಹಸಿ ಸುಳ್ಳು......
ಮಾತಿಗೊಂದು ಮುಳ್ಳುಬೇಲಿ, "
ನನಗೆ ಬಹಳ ಇಷ್ಟವಾದ ಸಾಲುಗಳು ಇವು.
ಎಲ್ಲಿ ಕಳೆದು ಹೋಗ್ತಿರ .. ನಾವಿಲ್ಲವೇ .. ಇದು ಬ್ಲೊಗ್ ಭಾಂದವ್ಯ ಸರ್ ...
ದಿನಕರ್..ಒಳ್ಳೆಯ ಕವನ...ಕವನದಲ್ಲಿ ನಿಮ್ಮ ಬಾವನೆಗಳನ್ನು ಪದಗಳಲ್ಲಿ ಹಿಡಿಯುವ ಪ್ರಯತ್ನ ಚೆನ್ನಾಗಿದೆ.
ReplyDeleteನಿಮ್ಮವ,
ರಾಘು.
ದಿನಕರ್ ,ನಿಮ್ಮ ಫಾಲೋಯರ್ ಆಗಿದ್ದರೂ ನಿಮ್ಮ ಬ್ಲಾಗಿನ ಅಪ್ಡೇಟ್ ಆಗುತ್ತಿಲ್ಲ.ನೀವು ಕೂಡ ಬ್ಲಾಗಿಗೆ ಬರುತ್ತಿರಿ.ಬರೆಯಲು ಬರುತ್ತಿಲ್ಲಾ ಎನ್ನುತ್ತಲೇ ಒಳ್ಳೆಯ ಕವನ ಕೊಟ್ಟಿದ್ದೀರಿ.ಪ್ರಯತ್ನ ಮುಂದುವರಿಯಲಿ.
ReplyDeleteಇದೇನು ಸರ್,
ReplyDeleteಅದು ಹೇಗೆ ಕಳೆದು ಹೋಗ್ತೀರಾ?
ಬ್ಲಾಗ್ ಬಂಧುಗಳ
ಬಾಂಧವ್ಯದ ಬಂಧನ
ಬಂಧಿಸುವುದು ನಮ್ಮೆಲ್ಲರನ್ನು
ಕಳೆದು ಹೋಗದಂತೆ.....!
ಅಂದ ಹಾಗೆ ನಿಮ್ಮ ಬ್ಲಾಗ್ update ಆಗ್ತಿಲ್ಲ. ಸ್ವಲ್ಪ ಮದ್ದು ಕೊಡಿಸಿ!
ಶಿವೂ ಸರ್,
ReplyDeleteತುಂಬಾ ಧನ್ಯವಾದ.... ನಿಮ್ಮಿಂದ ಕಿವಿ ಹಿಂಡಿಸಿಕೊಂಡೆ ಈ ಕವನ ಬರೆದಿದ್ದೇನೆ......... ಪ್ರೋತ್ಸಾಹ ಹೀಗೆ ಇರಲಿ.......
ಸೀತಾರಾಂ ಸರ್,
ReplyDeleteಮಿತ್ರನಿಗೆ ಹೇಳಿದ್ದೇನೆ..... ಸರಿ ಮಾಡಲಿಕ್ಕೆ...... ಅವನಿಗೂ ಸಿಗುತ್ತಿಲ್ಲ...... ಅಪ್ date ಯಾರಿಗೂ ಹೋಗದೆ ತುಂಬಾ ತೊಂದರೆಯಾಗುತ್ತಿದೆ.............. ಪ್ರತಿಯೊಬ್ಬರಿಗೂ ಇ ಮೇಲ್ ಮಾಡಬೇಕಾಗಿ ಬಂದಿದೆ......... ಬೇಗ ಸರಿಯಾಗಬಹುದು........ ನಿಮ್ಮ ಮೆಚ್ಚುಗೆಗೆವಂದನೆ.............
ಸುಬ್ರಮಣ್ಯ ಸರ್,
ReplyDeleteಕವನ ಮೆಚ್ಚಿ ಪ್ರತಿಕ್ರೀಯೆ ಹಾಕಿದ್ದಕ್ಕೆ ಧನ್ಯವಾದಗಳು......... ಹೀಗೆ ಬರುತ್ತಿರಿ ಸರ್..........
ಶ್ರೀಧರ್ ಸರ್,
ReplyDeleteತುಂಬಾ ತುಂಬಾ ಧನ್ಯವಾದ.... ಮೆಚ್ಚಿ ಕಾಮೆಂಟ್ ಮಾಡಿದ್ದಕ್ಕೆ...... ಕೆಲಸ ಒತ್ತಡದ ನಡುವೆ ಬರೆಯಲಾಗುತ್ತಿಲ್ಲ.... ಅದರ ಜಂಜಾಟದಲ್ಲೇ ಬರೆದ ಕವನ ಇದು... ಹೀಗೆ ಬರುತ್ತಿರಿ ಸರ್........
ರಘು,
ReplyDeleteಹೇಗಿದ್ದೀರಾ.... ತುಂಬಾ ಸಮಯದ ನಂತರ ಬರುತ್ತಾ ಇದ್ದೀರಿ......... ಧನ್ಯವಾದ...... ಹೀಗೆ ಬರುತ್ತಾ ಇರಿ............
ಡಾ . ಕೃಷ್ಣಮೂರ್ತಿ ಸರ್,
ReplyDeleteಏನು ತೊಂದರೆ ಅಂತ ನನಗೂ ತಿಳಿಯುತ್ತಿಲ್ಲ.......... ಕೆಲ ಸಮಯದಿಂದ ಯಾರಿಗೂ ಅಪ್ ಡೇಟ್ ಹೋಗ್ತಾ ಇಲ್ಲ........... ನಾನೂ ನಿಮ್ಮ ಬರಹಗಳನ್ನ ಓದಿದ್ದೇನೆ....... ಹೀಗೆ ಬರುತ್ತಾ ಇರಿ ಸರ್........
praveen sir,
ReplyDeletetumbaa dhanyaavada bandu odi, mecchi, comment maadiddakke........
ದಿನಕರ್ ಸರ್ ,
ReplyDeleteಕ್ಷಮಿಸಿ ತುಂಬಾ ದಿನಗಳಾಗಿ ಬಿಟ್ಟಿತ್ತು ನಿಮ್ಮ ಬ್ಲಾಗ್ ಕಡೆ ಬರದೆ ..
ಕಳೆದು ಹೋದ ಕವನ ತುಂಬಾ ಚೆನ್ನಾಗಿದೆ ...
ಬ್ಲಾಗ್ ಅಪ್ಡೇಟ್ ಮಾಡ್ತಾನೇ ಇರಿ ಕಳೆದು ಹೋದದ್ದು ಸಿಕ್ಕೇ ಸಿಗತ್ತೆ :)
@ ದಿನಕರ ಸರ್
ReplyDeleteತುಂಬಾ ಚೆನ್ನಾಗಿದೆ ಸರ್ ನಿಮ್ಮ ಕವನ...
ತಲೆ ಮೇಲ ಬಾನಲ್ಲೂ,
ಸೇತುವೆಯ ಚಿತ್ರ....
ಕಾಲಡಿಯ ಮಣ್ಣಲ್ಲೂ,
ಮೂಡಿದೆ ಲೆಕ್ಕಪತ್ರ.......
ಕನಸಿಗೊಂದು ಅಡ್ಡಗೋಡೆ,
ಮನಸಿಗೊಂದು ಹಸಿ ಸುಳ್ಳು......
ಮಾತಿಗೊಂದು ಮುಳ್ಳುಬೇಲಿ,
ಬರಹಕ್ಕೊಂದು ರಜಾಚೀಟಿ.....
ಈ ಸಾಲುಗಳು ತುಂಬಾನೇ ಇಷ್ಟ ಆದವು ...
ರಂಜಿತಾ ಮೇಡಂ,
ReplyDeleteನೀವು ಯಾವಾಗ ಬಂದರೂ ಅದು ನನಗೆ ಖುಷಿ ಕೊಡತ್ತೆ... ತುಂಬಾ ಸತ್ಯವಾಗಿ ಕಾಮೆಂಟ್ ಮಾಡುತ್ತೀರಾ..... ಧನ್ಯವಾದ ನಿಮ್ಮ ಅನಿಸಿಕೆಗೆ.....
ಅಶೋಕ್ ಸರ್,
ReplyDeleteಸ್ವಾಗತ ನನ್ನ ಬ್ಲಾಗ್ ಗೆ... ಹೀಗೆ ಬರುತ್ತಾ ಇರಿ......... ನಿಮ್ಮ ಅಪೇಕ್ಷೆಗೆ ಮೋಸ ಮಾಡಲ್ಲ.... ಇಷ್ಟಪಟ್ಟು ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದ......
ಕನಸಿಗೊಂದು ಅಡ್ಡಗೋಡೆ,
ReplyDeleteಮನಸಿಗೊಂದು ಹಸಿ ಸುಳ್ಳು......
ಮಾತಿಗೊಂದು ಮುಳ್ಳುಬೇಲಿ,
ಬರಹಕ್ಕೊಂದು ರಜಾಚೀಟಿ.....
Good..
thank you niveditaa.... ishtapattu comment maadiddakke...........
ReplyDeleteಕೆಲಸದ ಬಗ್ಗೆ ತುಂಬಾ ತಲೆ ಕೆಡಿಸಿಕೊ೦ಡಿರುವ ಹಾಗಿದೆ ನೀವು ದಿನಕರ್ :)
ReplyDeleteಕವನ ಚೆನ್ನಾಗಿತ್ತು... ಆದರೆ ಯಾಕೋ ಅಪ್ಡೇಟ್ ಬರಲೇ ಇಲ್ಲ... !
hoTTepaadu alvaa sudhesh......... mecchiddakke tumbaa dhanyavaada........
ReplyDeleteSuper saar.. Kiwi hindalu iddeevalla :)
ReplyDeleteದಿನಕರ್...
ReplyDeleteಬ್ಲಾಗ್ ತುಂಬಾ ಸೊಗಸಾಗಿ ಕಾಣುತ್ತಿದೆ...
ಹೇಗೆ ಮಾಡಿದಿರಿ ಇದನ್ನೆಲ್ಲ ?
ಕಳೆದು ಹೋದ ಪರಿ..
ನೀವು ಬರೆದ ರೀತಿ ಎರಡೂ ಸೂಪರ್ !
ಕಳೆ..
ಕಳೆದು ಹೋದರೂ..
ಎಳೆ
ಎಳೆಯಾಗಿ
ಎಳೆದು
ತರುವದು..
ತರ..
ತರಹದಲ್ಲಿ...
ತಹತಹಿಸಿ...
ಸುಡುವದು...
ನಿನ್ನ
ನೆನಪು...
ಅಭಿನಂದನೆಗಳು.. ಚಂದದ ಕವನಕ್ಕೆ...
This comment has been removed by the author.
ReplyDeleteravikant,
ReplyDeletetumbaa dhanyavaada..... kelasada ottada ide, adara baggene hoLeda saalugalanna barede..... ishtapaatu comment haakiddakke dhanyaavaada......
prakaashanna,
ReplyDeletenimma chandada pratikreeyege dhanyavaada........
nice kavana...
ReplyDeleteishta aaytu sir... :-)
ಸುಂದರ ಕವಿತೆ ಸರ್...
ReplyDeleteಕನಸಿಗೊಂದು ಅಡ್ಡಗೋಡೆ,
ಮನಸಿಗೊಂದು ಹಸಿ ಸುಳ್ಳು......
ಮಾತಿಗೊಂದು ಮುಳ್ಳುಬೇಲಿ,
ಬರಹಕ್ಕೊಂದು ರಜಾಚೀಟಿ
ಸಾಲುಗಳು ಇಷ್ಟವಾಯಿತು.
ಈಗ ನಿಮ್ಮ ಬ್ಲಾಗ್ ಅಪ್ಡೇಟ್ ಬರ್ತಾ ಇದೆ!!! :-)
ReplyDeletedivya madam,
ReplyDeleteishtapattu comment maadiddakke dhanyavaada.....
raghavendra hegade sir,
ReplyDeleteswaagata nanna blog ge........ kavanada saalugaLannu comment maadiddakke dhanyavaada.......
ravikaant,
ReplyDeletehoudu, nanna friend VINAY BHAT sari maadiddaane........
ಮರೆತರೂ ಮರೆಯಲಾಗದ್ದು ನಮ್ಮನ್ನೇ ನಾವು ಕಳೆದುಕೊಳ್ಳುವುದು, ಕೆಲವೊಮ್ಮೆ ಈ ಮೊಬೈಲು, ಲ್ಯಾಂಡ್ ಫೋನು, ಆಫೀಸು,ತಿರುಗಾಟ, ವಿವಿಧ ಕೆಲಸಗಳು, ಒತ್ತಡ-ನೀರಸದ-ಬೇಸರದ ಅದೇ ಕೆಲಸಗಳು, ಬೇಸತ್ತ ಮನಕೆ ಸ್ವಲ್ಪ ಹೊಸತನ ಕರುಣಿಸಲು, ರಿಫ್ರೆಶ್ ಆಗಲು ಕಳೆದು ಹೋಗುವುದೇ ಲೇಸು, ಅಪರೂಪಕ್ಕಾದರೂ ಒಮ್ಮೆ, ಕಿವಿ ಹಿಂಡುವುದು ಬೇಡ, ದಬ್ಬುವುದು ಬೇಡ, ಕಿವುಚುವುದು-ಕಿರುಚುವುದು-ಪರಚುವುದು ಯಾವುದೂ ಬೇಡ, ಬರುತ್ತೀರಿ ನೀವಾಗಿ ನೀವೇ- ಅದು ನಮ್ಮ ಕನ್ನಡದ ತಾಕತ್ತು, ಅದು ನಮ್ಮ ಅಮ್ಮನ ಮಸಲತ್ತು, ಅದು ನಮತನದ ಗಮ್ಮತ್ತು! ಬನ್ನಿ ಮತ್ತೆ ಮರೆಯಬೇಡಿ-ಇದೋ ನಿಮಗೆ ಮತ್ತೆ ಕರೆಯೋಲೆ ಬರೆಯಲು-ಇಷ್ಟು ಸಾಲದೇ? ಹಾಗಾದರೆ ಹೇಳಿ ಬೇರೇನು ಬೇಕು ? ಬಹುಶಃ ನೀವು ಪುನಃ ಬರೆಯಲು ಆರಂಭಿಸಿದಾಗ ಕೆಲಕಾಲ ನಾವೆಲ್ಲಾ ಕಳೆದುಹೋದೇವು ಹುಷಾರು ! ಬರಲೇ ?ನಮಸ್ಕಾರ
ReplyDeleteBHAT SIR,
ReplyDeleteTHANK YOU VERY MUCH.......nimma protshaahakke endigoo ruNi.... heege barutiri, bennu taTTuTTiri..
thank you vasant sir....
ReplyDeletechanda nemma baravanige
ReplyDeletehodalikke
chanda nimma chinthane
badukige horege hachalikke