Jun 20, 2010

'ಅನುಭವ' ಮೊದಲನೆಯದು...........

ಮನಸ್ಸು ತುಂಬಾ ಖುಷಿಯಾಗಿತ್ತು...... ಹೆದರಿಕೆಯೂ ಇತ್ತು.....ಹೊಸದೊಂದು ಅನುಭವಕ್ಕೆ ಮೈ ಮನಸ್ಸು ಕಾತುರಗೊಂಡಿತ್ತು..... ಟಿ. ವಿ. ಯಲ್ಲಿ ನೋಡಿದ್ದೆ..... ಅನುಭವಿಸಿದವರ ಬಾಯಲ್ಲಿ ಕೇಳಿದ್ದೆ...... ಒಬ್ಬನೇ ಈ ಸಾಹಸಕ್ಕೆ ಕೈ ಹಾಕಲು ಧೈರ್ಯ ಇರಲಿಲ್ಲ.... ನನ್ನ ಗೆಳೆಯರಾದ ವೆಂಕಟೇಶ್, ನಾಗರಾಜ್ ನನ್ನ ಕಾತುರ ಕಂಡು ಈ ದಿನವನ್ನು ಆರಿಸಿದ್ದರು...... ಇಬ್ಬರೂ ನನ್ನ ಶಾಲಾ ಸಹಪಾಟಿಗಳಾಗಿದ್ದರು.. ...... ಆದ್ರೆ ಈ ಅನುಭವ ಪಡೆಯೋ ಮನಸ್ಸು ಮಾಡಿದಾಗ ನಾನು ಕೆಲಸ ಸೇರಿದ್ದೆ...... ನನ್ನ ಗೆಳೆಯ ನಾಗರಾಜನಂತೂ ನನ್ನನ್ನ ಮಾನಸಿಕವಾಗಿ ರೆಡಿ ಮಾಡಿದ್ದ..... ವೆಂಕಟೇಶನಿಗೆ ಮನಸ್ಸಿಲ್ಲದಿದ್ದರೂ, ನನಗಾಗಿ ಜೊತೆಯಾಗಲು ಮನಸ್ಸು ಮಾಡಿದ್ದ..... ನಾಗರಾಜ ಈ ಮೊದಲು ಒಂದೆರಡು ಸಲ ಈ ಅನುಭವ ಪಡೆದಿದ್ದ ಎಂದೇ ಹೇಳಿದ್ದ......'' ಸಕತ್ ಕಣೋ, ಏನೋ ಒಂಥರಾ ಆಕಾಶದಲ್ಲಿ ತೇಲೋ ಥರ ಆಗತ್ತೆ ........ ಇದರ ಖರ್ಚು ಎಲ್ಲಾ ನಂದೇ... ಒಂದು ಸಲ ನೋಡು... ಮುಂದಿನ ಸಲ ನೀನೆ ನನ್ನನ್ನು ಕರೀತೀಯಾ'' ಅಂದ...... ''ಸರಿಯಪ್ಪಾ ನಡಿ, ಮೊದಲು ಅನುಭವಿಸಿ ನಂತರ ನೋಡ್ತೀನಿ..... ಏನಾದರೂ ತೊಂದರೆ ಆದರೆ ಜಾಡಿಸಿ ಒದಿತೀನಿ'' ಅಂದ ವೆಂಕಿ...... ' ಮಗನೆ, ಏನಾದರೂ ಯಾರ ಕೈಲಾದರೂ ಸಿಕ್ಕಿ ಬಿದ್ದರೆ, ನಿನ್ನ ತಿಥಿ ಮಾಡಿ ಬಿಡ್ತೀನಿ'' ಎಂದೆ ನಾನು....... ' ಏನೂ ಆಗಲ್ಲ ನಡೀರಿ' ಅಂದ ನಾಗ......


ಎಲ್ಲದಕ್ಕೂ  ಮೊದಲು ಚೆನ್ನಾಗಿ ಊಟ ಮುಗಿಸಿದೆವು....... ಹೊರಗಡೆ ಬಂದು ನೋಡಿದೆ, ತುಂಬಾ ಜನ ಪರಿಚಯದವರ  ಹಾಗೆ ಕಂಡರು......ಎಲ್ಲರೂ ನಮ್ಮನ್ನೇ  ನೋಡುತ್ತಿದ್ದಾರೆ  ಎನಿಸುತ್ತಿತ್ತು..... ನನಗಂತೂ ಬೆವರೊಡೆಯಲು ಶುರು ಮಾಡಿತ್ತು...... ನಾಗ , ಗೂಡಂಗಡಿ ಕಡೆಗೆ ನಡೆದ....... ನಾನು, ವೆಂಕಿ ಸ್ವಲ್ಪ ದೂರ ಹೋಗಿ ನಿಂತೆವು....... ನಾಗ ಗೂಡಂಗಡಿಯವನ ಜೊತೆ ಏನೋ ಕೇಳಿದ, ಅವನು ತೆಗೆದು ಕೊಟ್ಟ...... ನಾಗ ಒಳ್ಳೆ ಅನುಭವಸ್ತನ ಹಾಗೆ, ಹುಷಾರಾಗಿ ಪೇಪರ್ನಲ್ಲಿ ಸುತ್ತಿ ಕಿಸೆಯಲ್ಲಿ ಇಟ್ಟುಕೊಂಡ...... ಆ ಕಡೆ, ಈ ಕಡೆ ನೋಡಿ ನಮ್ಮತ್ತ ಬಂದ....... ' ನಡೀರೋ, ಅಲ್ಲಿ ಎಲ್ಲಾ ರೆಡಿಯಾಗಿದೆ' ಎಂದ...... ನಾನು '' ಯಾಕೋ ಹೆದರಿಕೆ ಆಗ್ತಾ ಇದೆ ಕಣ್ರೋ'' ಎಂದೆ..... '' ಮಗನೆ, ಹೀಗೆ  ಮಾಡೋಣ ಎಂದವನೂ ನೀನೆ, ಈಗ ಹೆದರುವವನೂ ನೀನೆ, ನಡಿ, ಏನಾಗತ್ತೋ ನೋಡೋಣ ಒಂದು ಕೈ ನೋಡೇ ಬಿಡೋಣ '' ಎಂದ ವೆಂಕಿ..........




ಸ್ಸರಿ.........., ಬಂದವರೇ  , ನಾಗರಾಜ  ಅಂಗಡಿಯಿಂದ  ಏನೋ ತೆಗೆದುಕೊಂಡು ಕಿಸೆಗೆ ಹಾಕಿಕೊಂಡ......ನಂತರ ನಮ್ಮ ಸವಾರಿ  ಸೈಕಲ್ ಹತ್ತಿ ಹೊರಟೆವು............ ನನ್ನ ಪ್ರಶ್ನೆ  ಮುಂದುವರಿದಿತ್ತು.......'' ಮುಗಿದ ನಂತರ ತುಂಬಾ ಕಷ್ಟ ಆಗತ್ತಾ..? ಬೇರೆಯವರೀಗೆ  ಗೊತ್ತಾಗತ್ತಾ....? ಜಾಗ ಸೇಫ್ ಆಗಿದೆ ತಾನೇ....? ಹಸಿವೆ  ಆದರೆ ಏನಾದರೂ ಇದೆಯಾ ತಿನ್ನಲಿಕ್ಕೆ.....?   ಎಲ್ಲರಿಗೂ ಚಾನ್ಸ್ ಇದೆ ತಾನೇ....?'' ಸೈಕಲ್ ಹಿಂದೆ ಕುಳಿತಿದ್ದ ವೆಂಕಿಯ ಕೈ ನನ್ನ ತಲೆ ಮೇಲೆ ಬೀಳದೆ ಇದ್ದರೆ , ನನ್ನ ಪ್ರಶ್ನೆ ಇನ್ನೂ ಮುಂದುವರಿಯುತ್ತಿತ್ತು......... ನಮ್ಮ ಸವಾರಿ, ಒಂದು ಕಾಡಿನ ತನಕ ಬಂದು ನಿಂತಿತ್ತು........ ಸೈಕಲ್ ನ್ನು ಒಂದು ಪೊದೆಯ ಹಿಂದೆ ಇಟ್ಟು, ಕಾಡಿನ ಒಳಗೆ ಹೋದೆವು....... ಅಷ್ಟೇನೂ ಘನವಾದ ಕಾಡೆನೂ ಆಗಿರಲಿಲ್ಲ...... ಸ್ವಲ್ಪ  ದೂರ ಹೋಗಿ, ನೆಲದ ಮೇಲೆ ಕುಳಿತೆವು........ ಒಬ್ಬರ ಮುಖ ಇನ್ನೊಬ್ಬರು ನೋಡಿಕೊಂಡೆವು........


ನಾಗರಾಜ, ಕಿಸೆಯಿಂದ ಪೇಪರ್ನಲ್ಲಿ ಸುತ್ತಿದ್ದನ್ನ ಹೊರತೆಗೆದ....... ''ಇದರ ಹೆಸರೇನು'' ಎಂದು ಕೇಳಿದೆ ನಾನು........' classic menthol ' ....... ''ಎಷ್ಟು ಕೂಲ್ ಆಗಿರತ್ತೆ  ಗೊತ್ತಾ......ಗಂಟಲಿಗೆ ಹೋದ ನಂತರ  ಕೂಲ್ ಕೂಲ್...... ಒಂದು ಸಲ ಸೇದಿದರೆ, ಇನ್ನೊಮ್ಮೆ ಸೇದಬೇಕು   ಅನಿಸತ್ತೆ'' ಅಂದ...... ..... ನಾನೂ ಸಹ ಇದರ ಬಗ್ಗೆ ತುಂಬಾ ಕೇಳಿದ್ದೆ...... ಒಂದು ಸಲ ಅನುಭವಿಸಿಯೇ ಬಿಡೋಣ ಎಂದು ಈ ಸಾಹಸಕ್ಕೆ ಕೈ ಹಾಕಿದ್ದೆವು......... ಮೊದಲ  ಸಲ ಆದ್ದರಿಂದ ಮತ್ತು ತಪ್ಪು ಎಂದು ಗೊತ್ತಿದ್ದರಿಂದ ಹೀಗೆಲ್ಲಾ ಕಾಡಿಗೆ ಬಂದು ಈ ಮಹತ್ಕಾರ್ಯಕ್ಕೆ ಮುಂದಾಗಿದ್ದೆವು..... ......


'' ಒಬ್ಬೊಬ್ಬರಿಗೆ, ಎರಡೆರಡು ತಂದಿದ್ದೇನೆ  ..... ಏನೂ ಆಗಲ್ಲ.... ಇದನ್ನ ಮುಗಿಸಿಯೇ ಹೊರಡಬೇಕು '' ಅಂದ ನಾಗರಾಜ......   ನಾನು, ವೆಂಕಿ ನಮ್ಮ ಪಾಲನ್ನು ಪಡೆದು, ಬಾಯಿಗಿಟ್ಟುಕೊಂಡೆವು  ..... ನಾಗರಾಜನ ಇನ್ನೊಂದು ಕಿಸೆಯಿಂದ ಬೆಂಕಿ ಪೊಟ್ಟಣ ಹೊರ ಬಂತು..... ನಾಗರಾಜ , ನುರಿತ ಸೇದುಗಾರನಾಗಿದ್ದ...... ಸಲೀಸಾಗಿ, ಬೆಂಕಿ ಹಚ್ಚಿಕೊಂಡ....... ನಾನು , ವೆಂಕಿ ಸ್ವಲ್ಪ ಕಷ್ಟಪಟ್ಟೆವು..... ಬೆಂಕಿ ತಾಗಿಸುವ ಸಮಯಕ್ಕೇ, ಉಸಿರನ್ನು ಒಳಗೆ ತೆಗೆದುಕೊಳ್ಳಬೇಕು ಎಂದು ನಮಗೆ ತೋಚಿಯೇ ಇರಲಿಲ್ಲ.....ನಮಗೆ ಅದು ಸಾಧ್ಯವಾಗದೆ ಇದ್ದಾಗ ನಾಗರಾಜನೆ , ಹಚ್ಚಿ ಕೊಟ್ಟ......ಬಾಯಿಗಿಟ್ಟ ಕೂಡಲೇ, ತುಟಿ ಚುರ್ ಎಂದಿತು..... ಆದರೂ ಏನೋ ಒಂಥರಾ....... ವೆಂಕಿಯನ್ನು ನೋಡಿದೆ....... ಅವನದೂ ನನ್ನದೇ ಪಾಡು..... ಮುಖ ಇಂಗು ತಿಂದವನ ಹಾಗಿತ್ತು...... ನಾಗರಾಜ ಮಾತ್ರ ರಾಜನ ಹಾಗೆ ಎಳೆಯುತ್ತಿದ್ದ ದಮ್ಮು....... ನನ್ನ ಮೊದಲನೇ ದಮ್ಮು ಒಳಗೆಳೆದುಕೊಂಡೆ..... ತಂಬಾಕಿನ ಹೊಗೆಯ ಗಾಳಿ, ನಾಲಿಗೆಯನ್ನು ಸೋಕಿ ಕಹಿಯ ಅನುಭವವಾಯಿತು.... ಸಿಗರೇಟು ಕೈಯಲ್ಲಿ ಹಿಡಿದು , ಹೊಗೆಯನ್ನು ಹೊರಗೆ ಬಿಟ್ಟೆ...... ನಾಲಿಗೆ ಪೂರಾ ಕಹಿ ಕಹಿ ಎನಿಸಲು ಶುರು ಮಾಡಿತ್ತು....... ಬಾಯಿಯ ಒಳ ಮೈಯಿ, ಸುಟ್ಟ ಅನುಭವ ನೀಡಿತ್ತು..... '' ಥೂ.... '' ಎನ್ನುತ್ತಿದ್ದ ವೆಂಕಿ......... '' ಏನೆಂದೇ ಮಗನೆ, ಬಾಯಿ, ಗಂಟಲು  ಎಲ್ಲಾ ಕೂಲ್ ಆಗತ್ತೆ ಎಂದ್ಯಲ್ಲಾ........ ಎಲ್ಲಾ ಉರಿಯುತ್ತಿದೆ ಇಲ್ಲಿ'' ಎಂದೆ.......... ವೆಂಕಿಯೂ ದನಿಗೂಡಿಸಿದ......... '' ಮಕ್ಕಳೇ, ಹೊಗೆಯನ್ನು ಗಂಟಲಿನ ತನಕ ಎಳೆದುಕೊಂಡು ಸ್ವಲ್ಪ ಹೊತ್ತು ಇಟ್ಟುಕೊಂಡು ನಂತರ ಹೊರಗೆ ಬಿಡಿ...... ಆಗ ತಿಳಿಯತ್ತೆ ಇದರ ರುಚಿ '' ಎಂದ........ ನಾನು ವೆಂಕಿ ಮುಖ ಮುಖ ನೋಡಿಕೊಂಡೆವು...... 'ಇರಲಿ, ಇದನ್ನೂ ನೋಡೇ ಬಿಡೋಣ' ಎಂದುಕೊಂಡು ಮತ್ತೊಮ್ಮೆ ತುಟಿಗಿಟ್ಟೆ  ...... ಎರಡನೇ  ದಮ್ಮೂ ಒಳಗೆ ಹೋಗಲು ಶುರು ಮಾಡಿತು...... ಮೊದಲು ನಾಲಿಗೆ ಮುಟ್ಟಿದ ಹೊಗೆ, ಕ್ರಮೇಣ ತನ್ನ ಪಯಣವನ್ನು ಗಂಟಲಿನತ್ತ ಮುಂದುವರಿಸಿತ್ತು...... ನಾಗರಾಜ ಹೇಳಿದ್ದನಲ್ಲ,  ಗಂಟಲಿನಲ್ಲೇ  ಇಟ್ಟುಕೊಳ್ಳಬೇಕು ಅಂತ..... ಸ್ವಲ್ಪ ಹೊತ್ತು ಇಟ್ಟುಕೊಂಡೆ....... ಹೊಗೆ ತನ್ನ ಕರಾಮತ್ತು ತೋರಲು ಶುರು ಮಾಡಿತ್ತು...... ಗಂಟಲಲ್ಲಿ ತಂಪಿನ ಅನುಭೂತಿ ಶುರು  ಆಗುವುದರಲ್ಲಿತ್ತು........ ಅಷ್ಟರಲ್ಲೇ....... ಅದೆಲ್ಲಿತ್ತೋ........... ಕೆಮ್ಮು........ಕೆಮ್ಮು......... ಕೆಮ್ಮು.........


       ಬಾಯಲ್ಲಿ..... ಮೂಗಲ್ಲಿ....ಕಣ್ಣಲ್ಲಿ..... ಹೊಗೆ ಹೊರ ಬಂದ ಹಾಗಾಗಿತ್ತು.......  ಬಾಯಲ್ಲಿ ನೀರು..... ಕಣ್ಣಲ್ಲಿ ನೀರು ........ ಕೆಮ್ಮಿ ಕೆಮ್ಮಿ ಸುಸ್ತಾಗಿ, ವೆಂಕಿಯನ್ನು ನೋಡಿದೆ........ ಅವನ ಪರಿಸ್ತಿತಿ ಬೇರೆ ಏನೂ ಆಗಿರಲಿಲ್ಲ..... ನಾಗರಾಜ  ಮಾತ್ರ ಬಿಂದಾಸ್ ಆಗಿ ಹೊಗೆ ಬಿಡುತ್ತಿದ್ದ....... ಕೊನೆಯಲ್ಲಿ ನನ್ನ ಅರ್ಧ  , ವೆಂಕಿ ಅರ್ಧ  ಸಿಗರೇಟು ಸಹ ಅವನ ಬೆರಳುಗಳ ಮದ್ಯೆ ಇತ್ತು...... ತೋರು ಬೆರಳು, ಮಧ್ಯ ಬೆರಳು , ಕಿರು ಬೆರಳುಗಳ ಮಧ್ಯೆ ಮೂರು ಸಿಗರೇಟು ರಾರಾಜಿಸುತ್ತಿತ್ತು..... ನಮ್ಮ ಕೆಮ್ಮು ಮುಗಿದು ಒಂದು ಹಂತಕ್ಕೆ ಬಂದಿದ್ದೆವು........ ನಾಲಿಗೆ, ಬಾಯಿ ಕಹಿ..ಕಹಿ..... ಸುಟ್ಟ ಹಾಗಾಗಿತ್ತು....... ನಾಗರಾಜ ' ಏನು ಹುಡುಗ್ರಪ್ಪಾ, ಒಂದು ಸಿಗರೇಟು ಸೇದಲಿಕ್ಕೂ ಬರಲ್ಲ'' ಎಂದು ಎದ್ದು ನಿಂತ.... ನನಗೋ..... ಜಾಡಿಸಿ ಒದೆಯೋಣ ಎನಿಸಿತು.......  ಅರ್ಜಂಟಾಗಿ, ಬಾಯಿಗೆ ಏನಾದರೂ ಉಪಚಾರ ಮಾಡಬೇಕಿತ್ತು...... ಸೈಕಲ್ ಹತ್ತಿ , ಬೇಗ ಬೇಗ ಅಂಗಡಿಗೆ ಬಂದೆವು............ ಅಲ್ಲಿ, ನಮ್ಮ ಬಾಯಿಗಾಗುವ ಮದ್ದು ಏನೂ ಇರಲಿಲ್ಲ...... ಬಾಯಿ ಒಳಗೆ, ಹೊರಗೆ...... ಕೈಯಿ.... ಅಂಗಿ ಎಲ್ಲೆಲ್ಲೂ ಸಿಗರೇಟಿನ ವಾಸನೆ..... ಏನಾದರೂ ಅರ್ಜಂಟಾಗಿ, ಅದರ ವಾಸನೆಗಿಂತಲೂ ಕೆಟ್ಟದ್ದನ್ನು ಬಾಯಿಗೆ ಹಾಕಿಕೊಳ್ಳಬೇಕಿತ್ತು...... ಹುಡುಕಿದೆ..... ಹುಡುಕಿದೆ..... ಸಿಕ್ಕಿದ್ದು.... ಕೊತ್ತಂಬರಿ ಬೀಜ.......... ಗಬಕ್ಕನೆ ಬಾಯಿಗೆ ಹಾಕಿಕೊಂಡೆವು ನಾನು ಮತ್ತು ವೆಂಕಿ...... ನಾಗರಾಜ ಮಾತ್ರ ಕೂಲ್ ಆಗಿದ್ದ...... ಕೊತ್ತಂಬರಿ ಜಗಿದೆ....... ಸಿಗರೇಟಿನದು ಒಂದು ತೂಕದ್ದಾದರೆ, ಕೊತ್ತಮ್ಬರಿಯದ್ದೊಂದು ತೂಕ..... ಆದರೂ ಸಹಿಸಿಕೊಂಡೆ...... ನಾಗರಾಜನನ್ನು ಕೊಂದೇ ಹಾಕುವ ಮನಸ್ಸಾಗಿತ್ತು........




ನಂತರ ಎಂದೆಂದೂ ನಾನು ಸಿಗರೇಟಿಗೆ ತುಟಿ ಸೋಕಿಸಲೇ ಇಲ್ಲ...... ಆದರೂ ಆ ವಾಸನೆ ನನ್ನನ್ನು ಬೆನ್ನತ್ತುತ್ತಲೇ ಇದೆ...... ನನ್ನ ಗೆಳೆಯ ನಾಗರಾಜನ ನೆನಪಿನ ಹಾಗೆ...... 

55 comments:

  1. ಅಹ್ಹಹ್ಹಾ! ಲೇಖನ ಪ್ರಾರಂಭವಾಗುತ್ತಿದ್ದಂತೆ ಇದು ಯಾವುದೋ ದೊಡ್ಡ ಸಾಹಸ ಇರಬೇಕು ಎಂದುಕೊಂಡಿದ್ದೆ. ಓದುತ್ತಿದ್ದಂತೆ ನಗು ಬಂದಿತು. ಸಿಗರೇಟು ಸೇದುವ ನನ್ನ ಮೊದಲ ಪ್ರಯತ್ನವೂ ಸಹ ಇದೇ ರೀತಿ ವಿಫಲವಾಗಿತ್ತು.

    ReplyDelete
  2. ದಿನಕರ್,
    ಸಕ್ಕತ್ತಾಗಿ ಬರೆದಿದ್ದೀರ....
    ನಿಮ್ಮ ಅನುಭವ ಸಹ ಹಾಗೆ ಇದೆ ಬಿಡಿ....ಮೊದಲು ಕುತೂಹಲ ಇತ್ತು ಯಾವ ಅನುಭವ ಅಂತ.....
    ನಾನು ಹೀಗೆ ಊರಲ್ಲಿ ಕೆಲವು ಸ್ನೇಹಿತರ ಜೊತೆ ಹೋಗಿದ್ದೆ. ಅವರೆಲ್ಲ ನನಗಿಂತ ಒಂದೆರಡು ವರ್ಷ ದೊಡ್ಡವರು ಅವರು ನನಗೆ ಕೊಡಲೆ ಇಲ್ಲ ಸೇದಲು. ನೀನು ಚಿಕ್ಕವನು ಅಂತ....ಬಡ್ಡಿ ಮಕ್ಳು ನನಗೆ ಕೊಡಲೆ ಇಲ್ವಲ್ಲ ಅಂತ ಅಂದುಕೊಂಡು ನಿಮ್ಮ ಮನೆಗಳಲ್ಲಿ ನಿಮ್ಮ ಅಪ್ಪನಿಗೆ ಹೇಳ್ತೀನಿ ಅಂದೆ....ಆಗ ಕೊಟ್ಟರು ಒಂದು ಧಮ್......ನಿಮ್ಮ ಬರಹ ನೆನಪು ತರಿಸಿತು.....

    ReplyDelete
  3. ಸುನಾಥ್ ಸರ್,
    ಹ್ಹಾ....ಹ್ಹಾ.... ನನಗೂ ನಿಮ್ಮನ್ನೆಲ್ಲ ದಾರಿ ತಪ್ಪಿಸುವ ಉದ್ದೇಶದಿಂದಲೇ ಹೀಗೆ ಬರೆದೆ....... ಧನ್ಯವಾದ ಮೆಚ್ಚಿದ್ದಕ್ಕೆ.....

    ReplyDelete
  4. ದಿನಕರ್;ನಿಜಕ್ಕೂ ಬರಹ ಸಖತ್!ಏನ್ರೀ!ಬರೆಯೋಕೇ ಬರೋಲ್ಲಾ ಅಂತೆಲ್ಲಾ ನಾಟಕ ಆಡ್ತೀರಾ!ಇನ್ನು ಮೇಲೆ ನೀವು ವಾರಕ್ಕೆ ಒಂದಾದರೂ ಲೇಖನ ಬರೆಯಲೇ ಬೇಕು.ನಿಮ್ಮ ಬರಹ ಓದಿ ನಮ್ಮ ಸಣ್ಣ ವಯಸ್ಸಿನ ಕಳ್ಳಾಟಗಳೆಲ್ಲಾ ಜ್ಞಾಪಕಕ್ಕೆ ಬಂತು.
    ನನ್ನ ಬ್ಲಾಗಿಗೆ ಬನ್ನಿ.ನಗೆ ಕಜ್ಜಾಯ ನಿಮಗಾಗಿ ರೆಡಿ ಇದೆ.ನಮಸ್ಕಾರ.

    ReplyDelete
  5. ಮಹೇಶ್ ಸರ್,
    ಮೊದಲೇ, ಯಾವುದರ ಅನುಭವ ಅಂತ ತಿಳಿಸಿದರೆ ಮಜಾ ಇರಲ್ಲ್ಲ ಆಲ್ವಾ ಸರ್..... ಅದಕ್ಕೆ ದಾರಿ ತಪ್ಪಿಸಿದೆ...... ನಿಮ್ಮ ಅನುಭವ ತಿಳಿಸಿ , ನನ್ನ ಬರಹ ಮೆಚ್ಚಿ ಅನಿಸಿಕೆ ಬರೆದಿದ್ದಕ್ಕೆ ಧನ್ಯವಾದ...... ನಿಮ್ಮ ಅನುಭವ ನಗುತರಿಸಿತು ಸರ್......

    ReplyDelete
  6. ದಿನಕರ್, ಹಹಹ..ಸಿಗರೇಟ್ ನೆನಪಿಸಿಕೊಂಡ್ರೆ ಈಗಲೂ ಕೆಮ್ಮು ಬರುತ್ತೆ ನನಗೂ...ಹಹಹ...ಆದ್ರೆ ನನ್ನದು ಬೇರೆ ತರಹ ಅನುಭವ...ಸಾಸಿವೆ ಉದುರಿಸಿದ ಮೇಲೆ ಅದರ ಕಡ್ಡಿನ ಬೀಡಿ ತರಹ ಹಚ್ಚಿ ಎಳೆದದ್ದು..ಮೊದಲ ಎಳೆತ ಗಂಟಲನ್ನು ದಾಟಿ ನೆತ್ತಿ ಏರಿತ್ತು..ಕಣ್ಣು ಊದಿಕೊಳ್ಳೋಹಾಗೆ ಕೆಮ್ಮು,....ಅದೇ ಮೊದಲು ಅದೇ ಕೊನೆ..!! ಬಹಳ ಕಣ್ನಿಗೆ ಕಟ್ಟಿದ ಹಾಗಿದೆ ವಿವರಣೆ ನಿಮ್ಮದು...ಈ ತರಹದ ಅನುಭವ ಬಹುಶಃ ಎಲ್ಲರಿಗೂ ಆಗಿರುತ್ತೆ...

    ReplyDelete
  7. ಡಾ. ಸರ್,
    ನನಗೂ ಇಷ್ಟ ಬರೆಯೋದು ವಾರಕ್ಕೊಮ್ಮೆ.... ಆದ್ರೆ ಟೈಮ್ ಸಿಗ್ತಾ ಇಲ್ಲ ಅಷ್ಟೇ.... ಕೆಲಸದ ಒತ್ತಡ ಇದೆ , ಹಾಗಾಗಿ ಸಮಯ ಸಿಕ್ಕಾಗ ಅಪ್ಡೇಟ್ ಮಾಡುತ್ತೇನೆ.... ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದ..... ನಿಮ್ಮ ಬ್ಲಾಗ್ ಗೆ ಬರ್ತಾ ಇದ್ದೇನೆ... ಕಾಮೆಂಟ್ ಸಹ ಹಾಕಿದ್ದೇನೆ ಸರ್.......ಧನ್ಯವಾದ.......

    ReplyDelete
  8. ಆಜಾದ್ ಸರ್,
    ಹ್ಹಾ ಹ್ಹಾ..... ನಿಮ್ಮ ಅನುಭವ ಮಜಾ ಇದೆ....... ಬರಹ ಮೆಚ್ಚಿದ್ದಕ್ಕೆ ಧನ್ಯವಾದ ಸರ್..... ನನ್ನ ಬರಹಕ್ಕಿಂತ ಈ ಸಾರಿಯ ಕಾಮೆಂಟ್ ರಸವತ್ತಾಗಿರತ್ತೆ ಅನಿಸತ್ತೆ ಸರ್...... ಎಲ್ಲರ ಅನುಭವ ತಿಳಿಸಬಹುದು......ಕಾಯುತ್ತಿದ್ದೇನೆ.....

    ReplyDelete
  9. ಚೆನ್ನಾಗಿದೆ....ಇಲ್ಲೂ ಇಣುಕಿ ಒಮ್ಮೆ...
    http://www.vedasudhe.blogspot.com/

    ReplyDelete
  10. ದಿನಕರ್...

    ತುಂಬಾ ಚೆನ್ನಾಗಿದೆ...
    ಬರವಣಿಗೆಯ ಶೈಲಿ ಇನ್ನೂ ಸೊಗಸಾಗಿದೆ...

    ಓದುತ್ತ.. ಓದುತ್ತ... ನನ್ನ ಬಾಲ್ಯದ ಒಂದು ಘಟನೆ ನೆನಪಾಯಿತು...

    ನೆನಪುಗಳೆ ಹಾಗೆ...ಸುಮಮಧುರ..!!

    ನಮ್ಮ ಹಳೆಯ ನೆನಪುಗಳನ್ನು ಕೆದಕಿದ್ದಕ್ಕೆ...
    ನಗಿಸಿದ್ದಕ್ಕೆ ಅಭಿನಂದನೆಗಳು...

    ReplyDelete
  11. ವೆದಸುಧೆ,
    ಧನ್ಯಾವಾದ ಇಲ್ಲಿಗೆ ಬಂದು , ಓದಿ, ಕಾಮೆಂಟ್ ಹಾಕಿದ್ದಕ್ಕೆ.... ನಿಮ್ಮ ಬ್ಲಾಗ್ ಗೆ ಬಂದಿದ್ದೇನೆ..... ಇನ್ನು ಮುಂದೆ ರೆಗುಲರ್ ಆಗಿ ಬರುತ್ತೇನೆ.....

    ReplyDelete
  12. ವಿಜಯಶ್ರೀ ಮೇಡಂ,
    ಧನ್ಯವಾದ ..... ಬಂದು ಕಾಮೆಂಟ್ ಹಾಕಿ ನಕ್ಕಿದ್ದಕ್ಕೆ...... ಹ್ಹ ಹ್ಹಾ...

    ReplyDelete
  13. ಪ್ರಕಾಶಣ್ಣ,
    ಮೊದಲು, ಸೀದಾ ಸೀದಾ ವಿಷಯವನ್ನೇ ಹೇಳೋಣ ಎಂದುಕೊಂಡೆ..... ನಂತರ ಹೀಗೆ ತಿರುಗಿಸಿ ಹೇಳೋಣ ಎಂದು ಈ ರೀತಿ ಬರೆದೆ...... ವರ್ಕ್ ಔಟ್ ಆಗಿದೆಯೋ ಇಲ್ಲವೋ ಗೊತ್ತಿಲ್ಲ...... ಧನ್ಯವಾದ ಮೆಚ್ಚಿ ಕಾಮೆಂಟ್ ಹಾಕಿದ್ದಕ್ಕೆ.... ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....

    ReplyDelete
  14. ದಿನಕರ್...

    ನಾನು ಮೊದಲು ಬೆಸ್ತು ಬಿದ್ದದ್ದು ನಿಜ...!

    ಒಂದು ಧೈರ್ಯವಿತ್ತು...
    "ಈ ಹುಡುಗ ಸಂಭಾವಿತ..
    ಹಾಗೆಲ್ಲ ಬರೆಯಲಾರ" ಎನ್ನುವ ಭರವಸೆಯೂ ಇತ್ತು...

    ಉತ್ತಮ ಬರವಣಿಗೆಗೆ.. ಶೈಲಿಗೆ ಮತ್ತೊಮ್ಮೆ ಅಭಿನಂದನೆಗಳು...

    ReplyDelete
  15. ಬಾಲು ಸಾಯಿಮನೆJune 20, 2010 at 11:28 PM

    ಚನ್ನಾಗಿದೆ. ಇಲ್ಲಂತೂ (ಜರ್ಮನಿಯಲ್ಲಿ) ಹುಡುಗರಿಗಿಂತ ಹುಡುಗೀರೆ ಹೆಚ್ಚು ಸಿಗರೇಟ ಸೇದ್ತಾರೆನೋ ಅನಿಸ್ತಿದೆ. ಧನ್ಯವಾದಗಳು

    ReplyDelete
  16. ಹ ಹ ಹ... ಒಳ್ಳೆ ಲೇಖನ ದಿನಕರ್ ಸರ್...
    ನಾನು ಫಸ್ಟ್ ಗೆ drugs ಇರಬಹುದೇನೋ ಅಂತ ಅಂದುಕೊಂಡೆ...ಆಮೇಲೆ ಗೊತ್ತಾಯ್ತು...:-)

    ReplyDelete
  17. ಆರ೦ಭದ ಸಾಲುಗಳನ್ನು ಓದಿ ಕುತೂಹಲದಿಂದ, ಇದೇನೋ ಮಹಾ ಸಾಹಸಗಾಥೆಯೇ ಇರಬೇಕು. ಏನಿರಬಹುದು? ಎ೦ದು ಓದುತ್ತ ಹೋದೆ. ಚೆನ್ನಾಗಿದೆ, ನಿಮ್ಮ ಶೈಲಿ, ಓದುಗನನ್ನು ಬೇಸ್ತು ಬೀಳಿಸುವ ಕಲೆಗಾರಿಕೆ. ಇಷ್ಟವಾಯಿತು.

    ReplyDelete
  18. ಬಾಲ್ಯ ಬಾಲ್ಯವೇ ಬಿಡಿ, ನಾವು ಅದನ್ನೆಲ್ಲ ಮೆಲುಕುತ್ತ ನಮ್ಮ ಹಳವಂಡಗಳನ್ನು ಬಿಚ್ಚಿಡಬೇಕಷ್ಟೇ! ನಿಮ್ಮ ಲೇಖನ ತುಂಬಾ ಚೆನ್ನಾಗಿದೆ,ಧನ್ಯವಾದಗಳು

    ReplyDelete
  19. ಶುರು ನೋಡಿ ಅನ್ನಿಸಿತ್ತು ಇದು ಯಾವೊದೋ ಈ ಥರದ ಅನುಭವವೇ ಅಂತ... ಚೆನ್ನಾಗಿದೆ.
    ಸಧ್ಯ ನೀವು ಸಿಗರೇಟಿನ ಪಾಶಕ್ಕೆ ಮತ್ತೆ ಸಿಲುಕಲಿಲ್ಲವಲ್ಲ

    ReplyDelete
  20. ಲೇಖನ ಚೆನ್ನಾಗಿದೆ.ನೀವು ಸಾಹಸ ಮಾಡಲು ಹೋಗಿ ಪಾಪ ನಾಗರಾಜನನ್ನು ಕೊಲ್ಲುವ ಮನಸ್ಸು ಮಾಡಿದ್ದೂ ಸರಿಯೇ??(ಹ್ಹಾ ಹ್ಹಾ ಹ್ಹಾ )
    ಆದರೆ ನನ್ನ ಬಾಲ್ಯದ ದಿನ ನೆನಪಾಯ್ತು ನಾನು ಈ ಸಾಹಸಕ್ಕೆ ಕೈ ಹಾಕಿದೆ ಅಂತ ಎಣಿಸಿದಿರ ಇಲ್ಲಪ್ಪ .ನನ್ನ ಇಬ್ಬರು ತಮ್ಮ ಮತ್ತು ಚಿಕ್ಕಮ್ಮನ ಮಗ 3 ಜನ ಸೇರಿ ಸಣ್ಣದರಲ್ಲಿ (6,7 ವರ್ಷ ಇರಬಹುದು)ಸೇದಿ ಬಿಟ್ಟ ಸಣ್ಣ ತುಂಡನ್ನು ಸೇದುತ್ತಿದ್ದದ್ದನ್ನು ನೋಡಿ ಅಪ್ಪನಿಗೆ ಹೇಳಿ ಕೊಟ್ಟು ಹೊಡೆಸಿದ್ದೆ ..ಇವಾಗಲು ಅವರೆಲ್ಲ ಹೇಳ್ತಾರೆ ಅವತ್ತು ಶಶಿ ನಮಗೆಲ್ಲಾ ಹೊಡೆಸಿದ್ದಕ್ಕೆ ಒಳ್ಳೆದಾಯ್ತು ಅಂತ..ಅವಾಗಿನಿಂದ ಅದನ್ನು ಅವರೆಲ್ಲಾ ಕಣ್ಣೆತ್ತಿ ನೋಡಿಲ್ಲ ..

    ReplyDelete
  21. ಪ್ರಕಾಶಣ್ಣ,
    ಮತ್ತೊಮ್ಮೆ ಬಂದು ಅನಿಸಿಕೆ ಹಾಕಿದ್ದಕ್ಕೆ....' ಒಳ್ಳೆ ಹುಡುಗ' ಅಂತ ಬಹುಮಾನ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದ..... ನಿಮ್ಮ ಈ ನಿರೀಕ್ಷೆಯನ್ನು ಯಾವಾಗಲೂ ಕಾಪಾಡಿಕೊಂಡು ಬರತ್ತೇನೆ...... ಬರವಣಿಗೆ ಮೆಚ್ಚಿ, ಬೆನ್ನುತಟ್ಟಿದ್ದಕ್ಕೆ ಋಣಿ...

    ReplyDelete
  22. ಬಾಲು ಸರ್,
    ಈಗ ಸಿಗರೇಟು ಸೇದೋದು ಫ್ಯಾಶನ್ ಆಗಿದೆ..... ಅದಕ್ಕೆ ಗಂಡಸು ಹೆಂಗಸು ಅಂತ ಇಲ್ಲ .... ಈಗ ಭಾರತದಲ್ಲೂ ಅದೇ ಗತಿ.... ಅನಿಸಿಕೆ ಹಾಕಿದ್ದಕ್ಕೆ ಧನ್ಯವಾದ... ಹೀಗೆಬರುತ್ತಿರಿ.....

    ReplyDelete
  23. ದಿವ್ಯಾ,
    ' ಆಕಾಶದಲ್ಲಿ ತೇಲಿದ ಹಾಗಾಗತ್ತೆ' ಅಂತ ಬರೆಯುತ್ತಾ ಇದ್ದಾಗ , ನನಗೂ ಅನಿಸಿತ್ತು,,, ಎಲ್ಲರೂ ನಿಮ್ಮಂತೆ ಅಂದುಕೊಳ್ಳುತ್ತಾರೆ ಅಂತ..... ಸದ್ಯ drugs ತಂಟೆಗೆ ಹೋಗಿಲ್ಲಮ್ಮ..... ಧನ್ಯವಾದ ಮೆಚ್ಚಿ ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದ.....

    ReplyDelete
  24. ಪರಾಂಜಪೆ ಸರ್,
    ನಿಮ್ಮ ಮೆಚ್ಚುಗೆಯ ಮಾತಿಗೆ ತುಂಬಾ ಧನ್ಯವಾದ....... ನೀವು ಎಣಿಸಿದ ಮಹಾಗಾಥೆ ಬರೆಯುವ ಶೈಲಿಯಲ್ಲೇ ಬರೆದೆ... ಸ್ವಲ್ಪ ಹಾದಿ ತಪ್ಪಿಸಿ ಬರೆದೆ ಅಷ್ಟೇ... ಸ್ವಲ್ಪ ಮಟ್ಟಿಗೆ ಯಶಸ್ವಿಯೂ ಆದೆ ಅನಿಸುತ್ತಿದೆ .... ನಿಮ್ಮ ಪ್ರೋತ್ಸ್ಹಾಹ ಹೀಗೆ ಇರಲಿ .....

    ReplyDelete
  25. ಭಟ್ ಸರ್,
    ಬಾಲ್ಯದ ಆಟ, ಹರೆಯದ ಮಲ್ಲಾಟ, ಅದರ ಅನುಭವವೇ ಅಂದ ಸರ್...... ಅದನ್ನ ಹೇಳಿಕೊಂಡರೆ ಏನೋ ಖುಷಿ ಆಲ್ವಾ ಸರ್..... ತುಂಬಾ ಧನ್ಯವಾದ ಸರ್, ಲೇಖನ ಇಷ್ಟ ಪಟ್ಟು ಕಾಮೆಂಟ್ ಮಾಡಿದ್ದಕ್ಕೆ......

    ReplyDelete
  26. ಭಾಶೆ ಮೇಡಂ,
    ಇಲ್ಲ , ಏನೋ ಕುತೂಹಲಕ್ಕೆ ಅಂತ ಸೇದಲು ಹೋಗಿದ್ದು ಅಷ್ಟೇ... .... ಮೊದಲ ಯತ್ನವೇ ಕೈ ಕೊಡ್ತು..... ಮುಂದಕ್ಕೆ ಬೆಳೆಸಲಿಲ್ಲ.... ಯಶಸ್ವಿ ಆಗಿದ್ದರೆ , ಏನಾಗುತ್ತಿತ್ತೋ ಗೊತ್ತಿಲ್ಲ..... ಧನ್ಯವಾದ ನಿಮ್ಮ ಕಾಮೆಂಟ್ ಹಾಕಿಮೆಚ್ಚಿದ್ದಕ್ಕೆ......

    ReplyDelete
  27. ಶಶಿ ಮೇಡಂ,
    ಹ್ಹ ಹ್ಹ... ನಾಗರಾಜ ನನ್ನ ನೆಚ್ಚಿನ ಹೀರೋ, ಅವನ ಆಟಗಳು ಅಪಾರ ಮೇಡಂ, . ..... ನಾವೆಲ್ಲಾ ಗಾಂಧಿಗಳಾದರೆ , ಅವನು ಮಾತ್ರ ರೆಬೆಲ್ ಸ್ಟಾರ್......ಹಾಗಾಗಿ ಅವನೇ ನಮ್ಮ ಗೈಡ್ .... ಆದ್ರೆ ಅವನನ್ನ ದೇವರು ಬೇಗನೆ ಮೇಲಕ್ಕೆ ಕರೆದುಕೊಂಡ..... ನಮ್ಮನ್ನು ಅಗಲಿ ಸುಮಾರು ಆರು ವರ್ಷವಾಯ್ತು.....

    ReplyDelete
  28. chennagide dinakar avre baraha.... praarambadalli kuthoohala thadeyoke aagilla... sigarEtina anubhava heegirutta!

    nanaginnu aagila adara anubhava :)

    ReplyDelete
  29. saar, naanu yaavudo saarayi packeto, athava neera kudiyo du andukondidde... ;)
    nanage nimma haage anubhava illa sir.. :)

    ReplyDelete
  30. ಸುಧೇಶ್,
    ಓಹೋ... ಅನುಭವ ಆಗಿಲ್ವಾ...... ತಗೊಳೋಕೂ ಹೋಗಬೇಡಿ ಆಯ್ತಾ..... ತುಂಬಾ ಕೆಮ್ಮು ಬರತ್ತೆ....... ಹ್ಹಾ ಹ್ಹಾ...... ಧನ್ಯವಾದ ನನ್ನ ಬರವಣಿಗೆ ಮೆಚ್ಚಿದ್ದಕ್ಕೆ........ಕಾಮೆಂಟ್ಮಾಡಿದ್ದಕ್ಕೆ....

    ReplyDelete
  31. ಶಿವಪ್ರಕಾಶ್,
    ಅಂದರೆ ನಿಮಗೆ ಕೆಮ್ಮು ಬಂದಿಲ್ಲ ಅಂತ ಅರ್ಥಾನೋ ಹೇಗೆ...... ಹ್ಹಾ ಹ್ಹಾ....... ಅಯ್ಯೋ..... bear ಕುಡಿಯಲು ಹೋಗಿ ಕಮಂಗಿಯಾದದ್ದು ಇನ್ನೊಂದು ಕಥೆ...... ಯಾವಾಗಲಾದರು ಬರೆಯುತ್ತೇನೆ...... ಧನ್ಯವಾದ......

    ReplyDelete
  32. tumba chennagide ..............yallara anubava onde

    ReplyDelete
  33. mithun sir,
    swaagata nanna blog ge.... heege baruttaa iri..... dhanyavaada nimma anisikege.......

    ReplyDelete
  34. ದಿನಕ ಸರ್, ಚೆನ್ನಾಗಿದೆ ...
    ಮೊದಲನೇ ಅನುಭವ ಕೆಮ್ಮಿಂದಾಗಿ ಕೆಟ್ಟಿದ್ದರಿಂದರಿಂದಲೇ ಬಹುಷಃ ನೀವು ಮತ್ತೆ ಆ ಸಾಹಸಕ್ಕೆ ಕೈ ಹಾಕಲಿಲ್ಲ ಅನ್ಸುತ್ತೆ ಅಲ್ವ ? ನಿಮ್ಮ ಅನುಭವ ನೋಡಿ ನಂದು ಹೇಳ್ಕೋಬೇಕು ಅನ್ನಸ್ತಾ ಇದೆ ನೋಡಿ :P :P :P
    ಹ್ಹೀ ಹ್ಹೀ ಹ್ಹೀ ...

    ReplyDelete
  35. ತುಂಬ ಸೊಗಸಾಗಿ ಬರೆದಿದ್ದೀರಿ ಸರ್ ನಿಮ್ಮ ಅನುಭವವನ್ನು .

    ReplyDelete
  36. ಸಾರಿ ಸರ್ ,
    ನನ್ನ ತಮಾಷೆಯಿಂದ ನೋವಾಗಿರಬಹುದು,ನಿಮ್ಮ ಸ್ನೇಹಿತನ ಬಗ್ಗೆ ಹಗುರವಾಗಿ ಮಾತಾಡಿದ್ದಕ್ಕೆ ಕ್ಷಮೆ ಇರಲಿ.

    ReplyDelete
  37. ರಂಜಿತಾ ಮೇಡಂ,
    ಖಂಡಿತಾ ನಿಮ್ಮ ಮಾತು ಸತ್ಯ.... ಅನುಭವ ಕೆಟ್ಟದ್ದು ಆದ್ದರಿಂದಲೇ, ನಾನು ಮತ್ತೆ ಅದರ ಹತ್ತಿರವೂ ಸುಳಿಯಲಿಲ್ಲ..... ಅಂದ ಹಾಗೆ ನಿಮ್ಮ ಅನುಭವ ಯಾವುದರ ಬಗ್ಗೆ,....... ಹ್ಹಾ ಹ್ಹಾ.... ಹೇಳಿಕೊಳ್ಳಿ....... ಧನ್ಯವಾದ ನಿಮ್ಮಕಾಮೆಂಟ್ ಗೆ...

    ReplyDelete
  38. ಸುಬ್ರಮಣ್ಯ ಸರ್,
    ಧನ್ಯವಾದ ನಿಮ್ಮ ಮೆಚ್ಚುಗೆಗೆ....

    ReplyDelete
  39. ಶಶಿ ಮೇಡಂ,
    ಹಾಗೇನಿಲ್ಲ...... ನನ್ನ ಗೆಳೆಯನ ಬಗ್ಗೆ ಹಗುರವಾಗೆನೂ ಹೇಳಿಲ್ಲ ನೀವು...... ಧನ್ಯವಾದ...

    ReplyDelete
  40. ದಿನಕರ್..ತುಂಬಾ ಕಿತಾಪತಿ ಮಾಡಿದ್ದೀರಿ. ಒಳ್ಳೆ ಕಥೆ ನಿಮ್ಮದು. ತುಂಬಾ ನಗು ಬಂತು ಓದಿ.
    ಕೆಲವು ನೆನಪು ತುಂಬಾ ಖುಷಿ ಕೊಡುತ್ತೆ.
    ನಿಮ್ಮವ,
    ರಾಘು.

    ReplyDelete
  41. raghu,
    ashtenoo kitaapati illa bidi....... dhanyavaada, odi khushi pattu comment maadiddakke.....

    ReplyDelete
  42. ಸ್ನಾತಕ ಪದವಿಯಲ್ಲಿದ್ದಾಗ, ಯಾವದೋ ವ್ಯಾಕುಲ ಮನಸ್ಥಿತಿಯಿ೦ದ ದೂರಾಗಲು, ನಾನು ಸಿಗರೇಟ ಸೇದಬೇಕೆ೦ದು, ಧಾರವಾಡದಿ೦ದ ಹುಬ್ಬಳ್ಳಿಗೆ ಬ೦ದು (ಅಲ್ಲಿ ಪರಿಚಿತರೂ ಇರಲಾರರೆ೦ಬ ನ೦ಬಿಕೆಗೆ), ಸಿಗರೇಟ-ಗೆ ಬೆ೦ಕಿ ಹಚ್ಚಿಕೊಳ್ಳಬೇಕೆ೦ದು ತಯಾರಾದಾಗ, ಇದರಿ೦ದ ನನ್ನ ಮನಸ್ಸಿಗೆ ನೆಮ್ಮದಿ ಸಿಗುವದೇ-ಎ೦ಬ ತರ್ಕಕ್ಕೆ ಮನ ಹೋದಾಗ- ಸಿಗರೇಟ ಸೇದಿದ್ದಕ್ಕೆ ಮನ ಹೊ೦ದುವ ವ್ಯಾಕುಲ ನೆನಸಿ, ಸಿಗರೇಟನ್ನು ಮೋರಿಗೆ ಬಿಸಾಡಿ, ವಾಪಸ್ ಬ೦ದಿದ್ದೂ; ತಮ್ಮ ಲೇಖನ ಓದಿದಾಗ ನೆನಪಿಗೆ ಬ೦ತು. ರೋಚನೀಯವಾಗಿ ಹೆಣೆದ ಕಥೆ ಚೆ೦ದವಿದೆ.

    ReplyDelete
  43. ಕತೆ ಓದಿ ನಗು ಬಂತು, ಕತೆಯ ನಿರೂಪಣೆ ಚೆನ್ನಾಗಿದೆ ಮತ್ತು ಕತೆಯ ವಿಷಯ ಕೂಡ ಮಜವಾಗಿದೆ

    ReplyDelete
  44. ಸೀತಾರಾಂ ಸರ್,
    ನಿಮ್ಮ ಅನುಭವವೂ ಸಹ ಚೆನ್ನಾಗಿದೆ.......... ಎಲ್ಲರೂ ಸುಳ್ಳೇ ಹೇಳುತ್ತಾರೆ, ಸಿಗರೇಟು ಸೇದಿದರೆ ಟೆನ್ಶನ್ ಕಡಿಮೆ ಆಗುತ್ತದೆ ಅಂತ............ ನನ್ನ ಲೇಖನ ಮೆಚ್ಚಿ ಕಾಮೆಂಟ್ ಮಾಡಿದ್ದಕ್ಕೆಧನ್ಯವಾದ.....

    ReplyDelete
  45. ಸಾಗರಿ ಮೇಡಂ,
    ನಿಮ್ಮ ಮೆಚ್ಚುಗೆಯ ಮಾತಿಗೆ ತುಂಬಾ ಧನ್ಯವಾದ.....ಹೀಗೆ ನಿಮ್ಮ ಪ್ರೋತ್ಸಾಹ ಇರಲಿ.... ಧನ್ಯವಾದ....

    ReplyDelete
  46. ಸಿಗರೇಟು ಸೇದಿದ ನಿಮ್ಮ ಮೊದಲ ಅನುಭವ ಓದಿ ನಗು ತಡೆಯಲಾಗಲಿಲ್ಲ. ನನ್ನ ಮೊದಲ ಅನುಭವವೂ ನೆನಪಾಯಿತು.
    ನಿರೂಪಣೆ ಚೆನ್ನಾಗಿತ್ತು.

    ReplyDelete
  47. ಮನದಾಳದಿಂದ.....
    ನಿಮ್ಮ ಅನುಭವವನ್ನೂ ನಮ್ಮ ಜೊತೆ ಹಂಚಿಕೊಳ್ಳಿ....... ಖುಷಿ ಪಟ್ಟು ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದ......

    ReplyDelete
  48. ದಿನಕರ ಮೊಗೇರ..,

    ಹ ಹ ಹ !!
    ಆರಂಭದಲ್ಲಿ ಇನ್ನ್ಯಾವುದೋ ಮಹತ್ಕಾರ್ಯ ಅನ್ಕೊಂಡಿದ್ದೆ..

    ReplyDelete
  49. ಜ್ನಾನಾರ್ಪಣಮಸ್ತು ....
    ಧನ್ಯವಾದ..... ಮದುವೆಗೆ ಮೊದಲೇ ಏನೂ ಮಹತ್ಕಾರ್ಯ ಮಾಡಿರಲಿಲ್ಲ ಬಿಡಿ...... ಹ್ಹಾ ಹ್ಹಾ....

    ReplyDelete
  50. ದಿನಕರ್ ಸರ್,

    ಮೊದಲು ಇದನ್ನು ಓದಿದಾಗ ಏನೋ ಹೊಸ ಅನುಭವವೆಂದುಕೊಂಡು ನೋಡಿದರೆ ಕೊನೆಗೆ ಆ ಸಿಗರೇಟು ಸೇದಾಟದ ಪ್ರಸಂಗ. ತುಂಬಾ ಚೆನ್ನಾಗಿ ಕುತೂಹಲಕರವಾಗಿ ಬರೆದಿದ್ದೀರಿ. ನನಗೂ ಈ ಸಿಗರೇಟು ಮೊದಲ ಬಾರಿ ಸೇದಿದಾಗ ಆದ ಅನುಭವವವನ್ನು ಬರೆಯಬೇಕಿದೆ ಅನ್ನಿಸುತ್ತೆ...

    ಒಟ್ಟಾರೆ ಒಂದು ಥ್ರಿಲ್ ಕೊಡುವ ಬರಹ ಕೊಟ್ಟಿದ್ದಕ್ಕೆ ಥ್ಯಾಂಕ್ಸ್..

    ReplyDelete
  51. shivoo sir,
    tumbaa thanks.... nimma mecchuge sikkare tumbaa khushiyaagatte.... dhanyavaada... nimma anubhavavannoo bareyiri....

    ReplyDelete
  52. ದಿನಕರ್ ಸರ್,

    ತಡವಾಗಿ ಪ್ರತಿಕ್ರಿಯಿಸುತಿದ್ದೇನೆ. ಕ್ಷಮೆ ಇರಲಿ....

    ತುಂಬಾ ಈ ಬರಹ ಸಕತ್ತಾಗಿದೆ ಸರ್. ಓದುತ್ತ ಹೋದಂತೆ ಕುತೂಹಲ ಕೆರಳಿಸಿತು..ತುಂಬಾ ಉತ್ತಮ ಬರಹ...

    ReplyDelete
  53. Shivshankar,
    houdu adanna baredilla... yaakandre naanu continue maaDalilla adakke....

    ReplyDelete