Apr 2, 2014

ಸಾರ್ಥಕ ಭಾವ...!!!


  ಇದೊಂದು ಸಂತಸದ ವಿಷಯ ಹಂಚಿಕೊಳ್ಳುವ ಮನಸ್ಸು ಇತ್ತು... ಸ್ವಲ್ಪ ದಿನದ ಹಿಂದೆ ಅಷ್ಟೇ ನಡೆದ ಸಂಗತಿ ಇದು...  ನನ್ನ ಪುಸ್ತಕ ಬಿಡುಗಡೆ ನಡೆದು ಕೆಲವು ದಿನಗಳಾಗಿದ್ದವು... ಪುಸ್ತಕವನ್ನು ನನ್ನ ಊರಿನ ಕೆಲವು ಹಿರಿಯರಿಗೆ ಮತ್ತು ನನ್ನ ಹಿತೈಷಿಗಳಿಗೆ ಕಳುಹಿಸಿದ್ದೆ... ಪುಸ್ತಕ ಓದಿ ಅವರಿಂದ ಒಳ್ಳೆಯ ಅಭಿಪ್ರಾಯವೂ ದೊರೆತಿತ್ತು...

ಒಂದು ಶುಭ ದಿನ ಬೆಳಿಗ್ಗೆ ಫೋನ್ ರಿಂಗಾಯಿತು, ಅತ್ತಲಿಂದ ನಮ್ಮ ಸಮಾಜದ ಪದವೀಧರರ ಮತ್ತು ನೌಕರರ ಸಂಘದ ಅಧ್ಯಕ್ಷರು ಮಾತನಾಡುತ್ತಿದ್ದರು... ನನ್ನ ಕಥಾ ಸಂಕಲನಕ್ಕಾಗಿ ನನಗೆ ಸನ್ಮಾನ ಹಮ್ಮಿಕೊಂಡಿದ್ದರು... ನಮ್ಮದು ಹಿಂದುಳಿದ ಸಮಾಜ, ನಮ್ಮಲ್ಲಿ ಬರವಣಿಗೆ, ಪುಸ್ತಕ ಬರೆದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ... ನನ್ನ ಜೊತೆ ಇನ್ನೂ ಕೆಲವು ಸಾಧಕರಿಗೆ ಸನ್ಮಾನ ಇದೆ ಎಂದ ತಕ್ಷಣ ಒಪ್ಪಿಕೊಂಡೆ.. ಹೂವಿನ ಜೊತೆ ನಾರೂ ಸ್ವರ್ಗಕ್ಕೆ ಹೋದ ಹಾಗಾಗಲಿ ಎಂದುಕೊಂಡು..

ಅಪ್ಪ ಅಮ್ಮನಿಗೆ, ಅಣ್ಣನಿಗೆ ಖುಶಿಯಾಯಿತು... ಸನ್ಮಾನದ ದಿನದವರೆಗೂ ಏನೋ ಕೊರಗು.... ಈ ಸನ್ಮಾನಕ್ಕೆ ನಾನು ಅರ್ಹನಾ ಅಂತ.. ಯೋಚಿಸುತ್ತಾ ಯೋಚಿಸುತ್ತಾ ದಿನ ಬಂದೇ ಬಿಟ್ಟಿತು... ಸಮಾರಂಭಕ್ಕೆ ಅಣ್ಣ ಅಪ್ಪ ಮತ್ತು ಮಗಳು ಹೆಂಡತಿ ಬಂದಿದ್ದರು... ಕೊನೆಯ ಕ್ಷಣದವರಗೂ ಇದ್ದ ದುಗುಡಕ್ಕೆ ಕೊನೆ ಹಾಕಿ ಅಂತಿಮ ನಿರ್ಧಾರಕ್ಕೆ ಬಂದಿದ್ದೆ.

ನಾನು ಯಾವತ್ತೂ ವೇದಿಕೆಯಲ್ಲಿ ಮಾತನಾಡಿದವನಲ್ಲ.. ಅವತ್ತು ನನ್ನ ಹೆಸರು ಕರೆದಾಗ ಜೋರಾದ ಎದೆ ಬಡಿತದೊಂದಿಗೆ ವೇದಿಕೆ ಏರಿದೆ.. ವೇದಿಕೆಯಲ್ಲಿ ಕುಳಿತ ಎಲ್ಲರಿಗೂ ಜೊತೆಗೆ ಒಯ್ದಿದ್ದ ನನ್ನ ಕಥಾ ಸಂಕಲನ ಕೊಟ್ಟೆ.. ಸನ್ಮಾನಕ್ಕಾಗಿ ಕುಳಿತುಕೊಳ್ಳಲು ಇಟ್ಟ ಖುರ್ಚಿ ದಾಟಿ ಮೈಕ್ ಕೈಗೆತ್ತಿಕೊಂಡೆ.. " ಎಲ್ಲರಿಗೂ ನಮಸ್ಕಾರ" ಧ್ವನಿ ನಡುಗುತ್ತಿತ್ತು... ಬರೆಯುವುದು ಸುಲಭ , ಮಾತನಾಡುವುದಕ್ಕೆ ಗುಂಡಿಗೆ ಬೇಕು ಎನಿಸಿತು... " ಮೊದಲಿಗೆ ನನ್ನನ್ನು ಸನ್ಮಾನಕ್ಕೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ, ಇಲ್ಲಿ ನನ್ನದೊಂದು ವಿನಂತಿಯಿದೆ.. ನನ್ನ ಜೊತೆಗೆ ಸನ್ಮಾನಕ್ಕೆ ಆಯ್ಕೆಯಾದವರ ಪರಿಶ್ರಮದ ಜೊತೆಗೆ ನಮ್ಮ ಪಾಲಕರ ಪರಿಶ್ರಮವೂ ದೊಡ್ಡದು.. ಅವರ ಕರ್ತವ್ಯದ ಜೊತೆಗೆ ಅವರ ತ್ಯಾಗವೂ ಇರದಿದ್ದರೆ ನಾವೆಲ್ಲಾ ಇಲ್ಲಿ ಬಂದು ನಿಲ್ಲಲು ಸಾಧ್ಯವೇ ಇರಲಿಲ್ಲ... ನಾನೇನೋ ಪುಸ್ತಕ ಬರೆದೆ.. ಈ ಪುಸ್ತಕ ಬರೆಯಲು ಮೂಲ ಕಾರಣವಾದ ವಿಧ್ಯೆಯನ್ನೇ ನನಗೆ ಕಲಿಸದಿದ್ದರೆ ನಾನೆಲ್ಲಿ ಇರುತ್ತಿದ್ದೆ.. ಆದ ಕಾರಣ ನಿಮ್ಮೆಲ್ಲರ ಅನುಮತಿ ಕೋರಿ ನನ್ನ ಯಶಸ್ಸಿಗೆ ಕಾರಣರಾದ ನನ್ನ ತಂದೆಯವರಿಗೆ ಈ ಸನ್ಮಾನ ಮಾಡಬೇಕೆಂಬುದು ನನ್ನ ಆಶಯ.. ಇದು ಇನ್ನೂ ಎಷ್ಟೋ ಮಂದಿ ಪಾಲಕರಿಗೆ ಸ್ಪೂರ್ತಿಯಾಗಲಿ ಎನ್ನುವುದು ನನ್ನ ಬಯಕೆ" ಎಂದು ಸಂಘಟಕರ ಕಡೆ ತಿರುಗಿದೆ..

ಅವರ ಅನುಮತಿ ಮತ್ತು ವೇದಿಕೆ ಮೇಲಿದ್ದ ಅತಿಥಿಗಳ ಸಮ್ಮತಿ ಪಡೆದು ಅಪ್ಪನನ್ನು ವೇದಿಕೆಗೆ  ಕರೆ ತಂದೆ.. ಅಪ್ಪನ ಕಣ್ಣಲ್ಲಿ ನೀರಿತ್ತು... ಖುರ್ಚಿಯ ಮೇಲೆ ಕುಳ್ಳಿರಿಸಿ ಸನ್ಮಾನ ಮಾಡಿದರು.. ನನಗೆ ಸಾರ್ಥಕ ಭಾವ...

ನಾವು (ನಿಮ್ಮನ್ನೂ ಸೇರಿಸಿ) ಏನೇ ಸಾಧನೆ ಮಾಡಬಹುದು.. ಜಗತ್ತು, ಸಮಾಜ ನಮಗೆ ಸನ್ಮಾನ ಮಾಡಬಹುದು.. ನಮ್ಮ ಸಾಧನೆಗೆ ಮೂಲ ಕಾರಣರಾದ ನಮ್ಮ ಪಾಲಕರನ್ನು ಯಾರು ನೆನೆಯುತ್ತಾರೆ..? ಅವರಿಗೆ ಸಿಗಬೇಕಾದ ಗೌರವ ಸಿಗುವುದು ಯಾವಾಗ..? ಅವರ ತ್ಯಾಗಕ್ಕೆ ಬೆಲೆ ಮತ್ತು ಗೌರವ ಸಿಕ್ಕರೆ ನಮಗೂ ನೆಮ್ಮದಿ , ಅವರಿಗೂ ಸಂತ್ರಪ್ತಿ...
ವೇದಿಕೆಯಲ್ಲಿ ಹೆಚ್ಚಿಗೆ ಮಾತನಾಡಲು ಆಗಲಿಲ್ಲ... ಗಂಟಲುಬ್ಬಿ ಬಂದಿತ್ತು... ಅದಕ್ಕೆ ಇಲ್ಲಿ ಬರೆದೆ..




15 comments:

  1. ಆಭಿನಂದನೆ ದಿನಕರಣ್ಣಾ : ಇನ್ನಷ್ಟು ಚಂದದ ಬರಹಗಳು ಬರಲಿ :)

    ReplyDelete
  2. Hats off to you Dinakar Sir... ಬರಹ ಓದಿ ನನಗೂ ಮನಸ್ಸು ತುಂಬಿ ಬಂತು. ನಿಮ್ಮಂಥ ಮಗನನ್ನು ಪಡೆಯಲು ಪುಣ್ಯ ಮಾಡಿರಬೇಕು. ನಿಮಗೂ ನಿಮ್ಮ ತಂದೆಯವರಿಗೂ ನನ್ನ ಅಭಿನಂದನೆಗಳು.

    ReplyDelete
  3. ದಿನಕರ್ ನಿಮ್ಮ ಬಗ್ಗೆ ಹೆಮ್ಮೆಯಾಯಿತು , ನಿಮ್ಮ ಅನಿಸಿಕೆ ಖಂಡಿತಾ ನಿಜ, ನಮ್ಮನ್ನು ಬೆಳೆಸಿದ ತಂದೆ ತಾಯಿ, ವಿಧ್ಯೆ ನೀಡಿದ ಗುರುಗಳನ್ನು ಎಂದಿಗೂ ಯಾವ ಸನ್ನಿವೇಶದಲ್ಲಿಯೂ ಮರೆಯಬಾರದು ಎಂಬ ಸಂದೇಶ ನೀಡಿದ ನಿಮ್ಮ ಆ ವರ್ತನೆಗೆ ಹಾಗು ನಿಮ್ಮ ತಂದೆಯವರಿಗೆ ಸನ್ಮಾನ ಮಾಡಿದ್ದಕ್ಕೆ ನಿಮಗೆ ಜೈ ಹೊ ಸಾರ್

    ReplyDelete
  4. ತಮಗೆ ಅಭಿನಂದನೆಗಳು ಸಾರ್.
    ಕಾರ್ಯಕ್ರಮದ ಆಯೋಜಕರು ತಮ್ಮನ್ನು ಗುರುತಿಸಿದ್ದು ಖುಷಿಯಾಯಿತು.

    ತಮ್ಮ. ದೊಡ್ಡ ಗುಣ ನಮಗೆ ಪರಿಚಿತವೇ ಸಾರ್.
    ಬೆಂಗಳೂರಿನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತಾವು ತಮ್ಮ ಸಹೋದರರನ್ನು ಸನ್ಮಾನಿಸಿದ ರೀತಿ, ನಮಗೆಲ್ಲ ಯಾವತ್ತಿಗೂ ಮಾದರಿ.

    ಇಂತಹ ಹಲವು ಸನ್ಮಾನಗಳು ತಮ್ಮದಾಗಲಿ.

    ReplyDelete
  5. ಮಾತಿನ ಮೂಲಕ ಅಭಿವ್ಯಕ್ತಿಸದೆ ಕೃತಿಯ ಮೂಲಕ (ತಮ್ಮ ತ೦ದೆಯವರಿಗೆ ಸನ್ಮಾನ ಮಾಡಿಸಿದ್ದೂ ಸೆರಿದ೦ತೆ) ಬಹಳ ಎತ್ತರಕ್ಕೆ ಏರಿದ್ದೀರಿ ದಿನಕರ್, ನಿಮಗೆ ಅನೇಕ ಅಭಿನ೦ದನೆಗಳು :) ನನ್ನ ಬ್ಲಾಗ್ ಗೆ ಸ್ವಾಗತ.

    ReplyDelete
  6. Hats off to u Dinakar anna... Rare gift to your father...

    ReplyDelete
  7. Hats off to you Dinakaranna... Very rare and precious gift to ur father...

    ReplyDelete
  8. Hats off to u Dinakar anna... Rare gift to your father...

    ReplyDelete
  9. ದಿನಕರರೆ,
    ವಿನೀತ ಮನಸ್ಸಿಗಿಂತ ಹೆಚ್ಚು ದೊಡ್ಡದು ಯಾವುದೂ ಇಲ್ಲ. ತಂದೆ, ತಾಯಿ ಹಾಗು ಸೋದರನಿಗೆ ನೀವು ನೀಡುವ ಗೌರವ ಮನಸ್ಸನ್ನು ತುಂಬುತ್ತದೆ.

    ReplyDelete
  10. ದಿನಕರರೆ,
    ವಿನೀತ ಮನಸ್ಸಿಗಿಂತ ಹೆಚ್ಚು ದೊಡ್ಡದು ಯಾವುದೂ ಇಲ್ಲ. ತಂದೆ, ತಾಯಿ ಹಾಗು ಸೋದರನಿಗೆ ನೀವು ತೋರುವ ಗೌರವವನ್ನು ನೋಡಿ, ಮನಸ್ಸು ತುಂಬಿ ಬರುತ್ತದೆ.

    ReplyDelete
  11. ದಿನಕರ್ ನಿಜಕ್ಕೂ ಆ ಜೀವದ ಮನಸ್ಸು ಎಷ್ಟು ಆನಂದಮಯವಾಗಿರುತ್ತೆ ಎನ್ನುವುದು ಊಹಿಸಲೂ ಅಸಾಧ್ಯ...ನಿಮ್ಮ ಪಿತೃಭಕ್ತಿ, ಕಾಳಜಿಗೆ ಸಲಾಂ...

    ReplyDelete
  12. ನಿಮ್ಮ ವ್ಯಕ್ತಿತ್ವ ಪ್ರಬುದ್ಧತೆಗೆ ಸಾಕ್ಷಿ.

    ReplyDelete
  13. nija thumba kushi aythu, but ondu bejar aythu naanu nanna appa amma nige haage maadlu agalva antha.

    ReplyDelete
  14. nija thumba kushi aythu, but nan olge ondu bejar aythu , naanu nan appa amma nige e kushi kodoke agalva antha.

    ReplyDelete