Nov 7, 2013

ಶಿರಸಾ ನಮನ....

    ‘ಮನಸ್ಸಿನ ಮಾತುಗಳು ಮನಸ್ಸಲ್ಲೇ ಇದ್ದರೆ ಮುತ್ತುಗಳಾಗಲ್ಲ’ ಎನ್ನುತ್ತಲೇ ಶುರು ಮಾಡಿದ ನನ್ನ ಬ್ಲಾಗ್ ’ಮೂಕ ಮನದ ಮಾತು’ನಲ್ಲಿ ಕವನ, ಲಘು ಬರಹ, ಕಥೆಗಳನ್ನು ಬರೆದೆ... ಹೀಗೆ ಬರೆಯಲು ಶುರು ಮಾಡಿದಾಗ ನನ್ನ ಕಥೆಗಳಿಗೆ ಮಾತ್ರ ತುಂಬಾ ಪ್ರೋತ್ಸಾಹ ಸಿಗುತ್ತಿತ್ತು... ಮನಸ್ಸಿನಲ್ಲಿ ಕಾಡುತ್ತಿದ್ದ ತುಂಬಾ ವಿಷಯಗಳಿಗೆ ಸುಣ್ಣ ಬಣ್ಣ ಬಳಿದು, ಮಸಾಲೆ ಹಚ್ಚಿ ಬರೆಯುತ್ತಿದ್ದೆ... ಕಥೆಯ ಪಾತ್ರ ನಾನಾಗಿ ಬರೆಯುತ್ತಿದ್ದೆ... ’ ಎದುರಿಗೆ ಕುಳಿತು ಕಥೆ ಹೇಳಿದ ಹಾಗೆ ಇರಬೇಕು, ಕಥೆ ಬರೆಯೋ ಶೈಲಿ ’ ಎನ್ನೋದು ನನ್ನ ಅಭಿಪ್ರಾಯವಾಗಿತ್ತು.... ಹಾಗೆ ಬರೆಯಲು ಪ್ರಯತ್ನಿಸಿದೆ ಕೂಡ.. ಎಷ್ಟು ಯಶಸ್ವಿಯಾಗಿದ್ದೇನೋ ನೀವೇ ಹೇಳಬೇಕು...

      ಈ ಸಂಕಲನ ಬರಲು ಕಾರಣರಾದವರನ್ನು ಈ ಸಮಯದಲ್ಲಿ ನೆನೆಯಲೇ ಬೇಕಾಗಿದೆ...
ಬ್ಲಾಗ್ ಬರೆಯಲು ಶುರು ಮಾಡಲು ಕಾರಣನಾದ ಗೆಳೆಯ ವಿನಯ್ ಭಟ್, ನನ್ನೆಲ್ಲಾ ಕೆಲಸಗಳಿಗೂ,ನೋವಿಗೂ, ನಲಿವಿಗೂ ಜೊತೆ ನಿಲ್ಲುವ ಆತ್ಮೀಯ ಸ್ನೇಹಿತ ವೆಂಕಟೇಶ್ ಮೊಗೇರ, ದಿನವೂ ನೆನಪಾಗುವ, ಅವನ ಅನುಪಸ್ಥಿತಿ ಕಾಡುವ ಹಾಗೆ ಮಾಡುವ ಗೆಳೆಯ ದಿ. ನಾಗರಾಜ್ ಮೊಗೇರ....  ಕಥೆಯಲ್ಲಿ ಇರಬೇಕಾದ ಮಸಾಲೆ, ಕೊನೆಯಲ್ಲಿ ಕೊಡಬಹುದಾದ ತಿರುವುಗಳ ಬಗ್ಗೆ ತಿಳಿಸುವ , ತಿದ್ದುವ ’ಇಟ್ಟಿಗೆ ಸಿಮೆಂಟು ಸೆಂಟಿಮೆಂಟು’ ಬ್ಲಾಗಿನ ಪ್ರಕಾಶಣ್ಣ ... ಅತ್ತಿಗೆ ಆಶಾ ಪ್ರಕಾಶ್,  ಕವರ್ ಪೇಜ್ ಗೆ ಅತ್ಯುತ್ತಮ ಫೋಟೋ ಕಳಿಸಿಕೊಟ್ಟವರು ಇವರೇ...... ನನ್ನ ಕಥೆಯ, ನನ್ನ ಜೀವನದ ತಪ್ಪುಗಳನ್ನು ಹುಡುಕಿ ಸರಿ ಮಾಡುವ ಮಡದಿ ವನಿತಾ... ನನ್ನ ಎಲ್ಲಾ ಕಥೆಗಳಿಗೆ ಉತ್ತಮ ಪ್ರೊತ್ಸಾಹ ಕೊಡುವ, ತಿದ್ದುವ ಸುನಾಥ್ ಕಾಕಾ ಅವರ ಪುಸ್ತಕದ ಜೊತೆ ನನ್ನ ಪುಸ್ತಕ ಬಿಡುಗಡೆ ಆಗಿದೆ.... ಹೂವಿನ ನಾರೂ ಸ್ವರ್ಗಕ್ಕೆ ಹೋದ ಅನುಭವ ನನ್ನದಾಗಿದೆ.... ಸುನಾಥ್ ಕಾಕಾ ಧನ್ಯವಾದ..., ’ಕೊಳಲು’ ಖ್ಯಾತಿಯ ಡಾಕ್ಟರ್ ಮೂರ್ತಿ ಸರ್, ಮೈಸೂರಿನ ’ನಮ್ಮೊಳಗೊಬ್ಬ’ ಬಾಲಸುಬ್ರಮಣ್ಯ ಸರ್, ಕುವೈತ್ ನ ವಿಜ್ನಾನಿ ’ ಜಲನಯನ’ ಆಜಾದ್ ಸರ್, ಮುಂಬೈ ಅಶೋಕ್ ಶೆಟ್ಟರು,   ಉಮೇಶ್ ದೇಸಾಯಿ ಸರ್, ಸೀತಾರಾಂ ಸರ್ . ತುಂಬಾ ಜನ ಸ್ನೇಹಿತರ ಹೆಸರು ಮರೆತಿದ್ದೇನೆ... ದಯವಿಟ್ಟು ಕ್ಷಮಿಸಿ... ತಪ್ಪು ಮಾಡಿದಾಗ ತಿದ್ದಿ, ಮಾಡದೇ ಇದ್ದಾಗ ತಪ್ಪು ತಿಳಿದು ಹೋದ ಗೆಳೆಯರಿಗೂ ತುಂಬು ಮನದ ಧನ್ಯವಾದಗಳು...

      ಬ್ಲಾಗ್ ಲೋಕದ ಅತ್ಯುತ್ತಮ ಕವಿ ಬದರಿನಾಥ ಪಲವಳ್ಳಿಯವರು ನನ್ನ ಬೆನ್ನು ತಟ್ಟಿದ್ದಾರೆ... ನನ್ನ ಕಥೆಗಳಿಗೆ ಸೂಕ್ಷ್ಮತೆ ಯನ್ನು ಹೇಳಿದ್ದಾರೆ.. ಅವರಿಗೂ ಧನ್ಯವಾದ.... ಹಾಗೆಯೇ ನನ್ನ ಪುಸ್ತಕ ಮಾಡುವುದಾರೆ ಅದಕ್ಕೆ ನೀವೇ ಕವರ್ ಪೇಜ್ ಮಾಡಬೇಕು ಎಂದಾಗ ಖುಶಿಯಿಂದ ಒಪ್ಪಿದ ’ಮ್ರದು ಮನಸು’ ಸುಗುಣ ಮೇಡಮ್, ’ ಸವಿಗನಸು’ ಮಹೇಶ್ ಸರ್...  ಸುಗುಣ ಅವರಿಂದ ಪರಿಚಿತರಾಗಿ ಪುಸ್ತಕದ ಕವರ್ ಪೇಜ್ ಮಾಡಿಕೊಟ್ಟ ವೀರೇಶ್ ಹೊಗೆಸೊಪ್ಪಿನವರ್ ಅವರಿಗೆ ತುಂಬಾ ಧನ್ಯವಾದ... ನಾನು ಬರೆದ ಪ್ರತೀ ಕಥೆಯ ನಂತರ ’ನಿಮ್ಮ ಪುಸ್ತಕ ಯಾವಾಗ ಬರತ್ತೆ’ ಎಂದು ಕೇಳಿ ಪ್ರೋತ್ಸಾಹ ನೀಡುವ 3k ಬಳಗದ ರೂಪಾ ಸತೀಶ್... ಮಂಗಳೂರಿನಲ್ಲಿ ಸಾಹಿತ್ಯ ಸೇವೆ ಮಾಡುತ್ತಿರುವ ಅರೆಹೊಳೆ ಪ್ರತಿಷ್ಟಾನದ ಸದಾಶಿವ ರಾಯರು.... ನನ್ನ ಎಲ್ಲಾ ಕಥೆಗಳನ್ನು ಪುಸ್ತಕ ಯೋಗ್ಯವಾ ಅಂತ ಓದಿ ಅವರ ಟಿಪ್ಪಣಿ ನೀಡಿದ ಸುರತ್ಕಲ್ ಕಾಲೇಜಿನ ಅಧ್ಯಾಪಕರಾಗಿರುವ ಶ್ರೀ. ರಘು ಇಡ್ಕಿಡು ಸರ್...   ಇವರಿಗೆಲ್ಲಾ ನನ್ನ ಅನಂತ ಧನ್ಯವಾದಗಳು...      

ಒಂದು ಪುಸ್ತಕ ಪ್ರಕಟಗೊಳ್ಳಲು ಬರೆಯುವವ ಎಷ್ಟು ಮುಖ್ಯವೋ, ಪ್ರಕಾಶಕರೂ ಅಷ್ಟೇ ಮುಖ್ಯ... ಹಾಗೆಯೆ ನನ್ನ ಪುಸ್ತಕವನ್ನು ಪ್ರಕಟ ಮಾಡುತ್ತಿರುವ ಪ್ರಕಾಶಕರಾದ ’ಸ್ರಷ್ಟಿ ’ ನಾಗೇಶ್ ಅವರಿಗೆ ಅನಂತ ಧನ್ಯವಾದಗಳು..... ನನ್ನ ಪುಸ್ತಕಕ್ಕೆ ಮುನ್ನುಡಿ ಬರೆದುಕೊಡಿ ಅಂತ ಅಳುಕುತ್ತಲೇ ಖ್ಯಾತ ಸಾಹಿತ್ಯಕಾರ, ಕವಿ ಗೋಪಾಲ್ ವಾಜಪೇಯಿ ಯವರನ್ನು ಕೇಳಿಕೊಂಡಿದ್ದೆ... " ಮುನ್ನುಡಿ ಅಂತ ಹೇಳಲ್ಲ... ಒಂದೆರಡು ಕಥೆ ಓದಿ ನನ್ನ ಟಿಪ್ಪಣಿ ಬರೆದುಕೊಡುತ್ತೇನೆ " ಎಂದು ಹೇಳಿ, ನನ್ನ ಎಲ್ಲಾ ಕಥೆಗಳನ್ನೂ ಓದಿ, ತುಂಬಾ ಖುಶಿಯಿಂದ ಅತ್ಯುತ್ತಮ ಮುನ್ನುಡಿ ಬರೆದುಕೊಟ್ಟ ಹಿರಿಯರಾದ ವಾಜಪೇಯಿ ಸರ್ ಗೆ ಅನಂತ ವಂದನೆಗಳು.... ಹಾಗೆಯೇ, ಮೊದಲು ಮುನ್ನುಡಿ ಬರೆಯಲು ಒಪ್ಪಿ, ಕೊನೆಗೆ ನನ್ನ ಕೋರಿಕೆಯ ಮೇಲೆ ಬೆನ್ನುಡಿ ಬರೆದ, ನನ್ನ ಕಥೆಗಳನ್ನು ಓದುತ್ತಾ ಬೆನ್ನು ತಟ್ಟುತ್ತಿದ್ದ ಖ್ಯಾತ ರಂಗಭೂಮಿ ಕಲಾವಿದೆ, ಕಿರುತೆರೆಯ ಮುಕ್ತ ಮುಕ್ತದ ’ ಮಂಗಳತ್ತೆ, ’ ಮಹಾಪರ್ವದ ’ಮಂದಾಕಿನಿ’ ಶ್ರೀಮತಿ. ಜಯಲಕ್ಷ್ಮಿ  ಪಾಟೀಲರಿಗೆ ನನ್ನ ಹಾರ್ಧಿಕ ಧನ್ಯವಾದಗಳು....

ಇದೇ ಸಮಯದಲ್ಲಿ ಹಿತೈಷಿಗಳಾದ ವನಿತಾ, ವಿನೋದ್, ಅತ್ರಾಡಿ ಸುರೇಶ್ ಹೆಗ್ಡೆಯವರು, ನನ್ನ ಕಥೆಗಳನ್ನು ಮೆಚ್ಚುವ ವೆಂಕಟೇಶ್ ಮೂರ್ತಿಯವರು, ಕಥೆಗಳಿಗೆ ಸರಿಯಾದ ವಿಮರ್ಶೆ ನೀಡುವ ಶ್ರೀಕಾಂತ್ ಮಂಜುನಾಥ್,, ತಮ್ಮ ಚುಟುಕುಗಳಿಂದ ಗಮನ ಸೆಳೆಯುತ್ತಿರುವ ನಮ್ಮೂರಿನ ಪರೇಶ್ ಸರಾಫ್, ಕನ್ನಡ ಬ್ಲಾಗಿಗರನ್ನು ಒಂದುಗೂಡಿಸುವ ಪುಷ್ಪರಾಜ್ ಚೌಟ, ’ ಕಾಲೇಜು ಡೈರಿ’ ಪತ್ರಿಕೆ ನಡೆಸುತ್ತಿರುವ ಗುಬ್ಬಚ್ಚಿ ಸತೀಶ್ ಅವರಿಗೆ ,  ಯಾವಾಗಲೂ ನನ್ನ ಕಥೆ ಓದಿ ತಿದ್ದುವ ಸುಮಾ ಸುಧಾಕಿರಣ್, ವಿಜಯಶ್ರೀ ನಟರಾಜ್,  ದಿಲೀಪ್ ಹೆಗ್ಡೆ, ಪ್ರಗತಿ ಹೆಗ್ಡೆ, ಅತ್ಯುತ್ತಮ ಬರಹಗಳಿಂದ ನಮ್ಮನ್ನು ಮುದಗೊಳಿಸುವ ವಿ.ಆರ್. ಭಟ್ ಸರ್, ಅತ್ಯುತ್ತಮ ಛಾಯಗ್ರಾಹಕ ಮಿತ್ರರಾದ ಕೆ. ಶಿವು, ದಿಗ್ವಾಸ್ ಹೆಗ್ಡೆ,  ಮಲ್ಲಿಕಾರ್ಜುನ್, ಉತ್ತಮ ಕಥೆಗಾರ್ತಿಯರಾದ ಅನಿತಾ ನರೇಶ್ ಮಂಚಿ, ತೇಜಸ್ವಿನಿ ಹೆಗ್ಡೆ, ಪ್ರಭಾಮಣಿ ನಾಗರಾಜ್, ಭಾಗ್ಯ ಭಟ್, ಶಮ್ಮಿ ಸಂಜೀವ್, ಪ್ರವೀಣ್ ಭಟ್ ಸಂಪ, ಶಶಿ ಜೋಯಿಸ್, ಗೌತಮ್ ಹೆಗ್ಡೆ,  ಉದಯೋನ್ಮುಖ ಬರಹಗಾರ್ತಿ ಕುಮಟಾದ ಸೌಮ್ಯ ಭಾಗ್ವತ್, ಸುಶ್ರುತ ದೊಡ್ಡೇರಿ, ದಿವ್ಯ ದೊಡ್ಡೇರಿ, ಸುಷ್ಮ ಮೂಡಬಿದ್ರಿ, ರಷ್ಮಿ ಕಾಸರಗೋಡು,  ತಮ್ಮಂದಿರಾದ ಅನಿಲ್ ಬೆಡಗೆ, ಪ್ರದೀಪ್, ಹಳ್ಳಿ ಹುಡುಗ ನವೀನ್, ಶಿವಪ್ರಸಾದ್, ಗಿರೀಶ್ ಸೋಮಶೇಖರ್, ಪ್ರವೀಣ್ ಗೌಡ, ನಾಗರಾಜ್ ಕೆ, ಚಿನ್ಮಯ್ ಭಟ್, ಸತೀಶ್ ನಾಯ್ಕ್ , ಸುಧೇಶ್ ಶೆಟ್ಟಿ,  ಅರುಣ್ ಶ್ರಂಗೇರಿ, ಉಮೇಶ್ ಬೆಳ್ನಿ, ಪ್ರದೀಪ್ ಬೆಳ್ಕೆ,  ಗುರುಪ್ರಸಾದ್ ಶ್ರಂಗೇರಿ,  ಇವರಿಗೆಲ್ಲಾ ನನ್ನ ತುಂಬು ಮನದ ಧನ್ಯವಾದ...

ಹಿರಿಯರಾದ ತಿರುಮಲೈ ರವಿ, ಶ್ರೀನಿವಾಸ್ ಹೆಬ್ಬಾರ್, ಮಂಜುನಾಥ ಕೊಳ್ಳೆಗಾಲ ಇವರೆಲ್ಲರಿಗೂ ಧನ್ಯವಾದ. ಗೆಳೆಯರಾದ ಶುಭಾ ಮಂಜುನಾಥ್, ರುದ್ರೇಶ್ ಗೌಡ, ತಂಗಿ ಪುಷ್ಪಲತಾ ಮಂಜುನಾಥ್, ಮಂಗಳೂರಿನ ವರದಿಗಾರ ಮಿತ್ರರಾದ ಆರಿಫ್ ಮೊಹಮ್ಮದ್ ಪಡುಬಿದ್ರಿ, ವೇಣು ವಿನೋದ್, ಇವರಿಗೂ ತುಂಬು ಮನದ ಧನ್ಯವಾದಗಳು....


ಕೊನೆಯದಾಗಿ, ನನ್ನೆಲ್ಲಾ ಕಥೆಗಳಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸ್ಪೂರ್ತಿಯಾದ ವ್ಯಕ್ತಿಗಳಿಗೆ, ಘಟನೆಗಳಿಗೆ ಧನ್ಯವಾದಗಳು....
ಪುಸ್ತಕ ಬಿಡುಗಡೆಗೆ ಬಂದ ತುಂಬಾ ಜನ ಗೆಳೆಯರಿಗೆ ಹಿತೈಷಿಗಳಿಗೆ ತುಂಬುಮನದ ಧನ್ಯವಾದಗಳು...

11 comments:

 1. ದಿನಕರರೆ,
  ನಮ್ಮೆಲ್ಲರ ಪುಸ್ತಕಗಳು ಒಟ್ಟಾಗಿ ಪ್ರಕಟವಾಗಿದ್ದಕ್ಕಾಗಿ ಹಾಗು ಆ ಕಾರಣದಿಂದ ನಿಮ್ಮೆಲ್ಲರನ್ನು ಭೆಟ್ಟಿಯಾಗಿದ್ದಕ್ಕಾಗಿ ನನಗೆ ತುಂಬ ಸಂತೋಷವಾಗಿದೆ. ನಿಮ್ಮ ಸಾಹಿತ್ಯ ಇನ್ನೂ ಬೆಳೆಯುತ್ತ ಹೋಗಲಿ ಎಂದು ಹಾರೈಸುತ್ತೇನೆ.

  ReplyDelete
 2. ಈಕಾಲದಲ್ಲಿ ಸಹಾಯಕ್ಕೆ ಒದಗುವರೇ ಕಾಣೆಯಾಗಿರುವ ಬದುಕಿನಲ್ಲಿ, ಇಷ್ಟೋಂದು ಸ್ನೇಹಿತರ ಈ ಒಲುಮೆ ನಮಗೆ ಬದುಕಿನ ಪೂರ್ತಿ ನೆನಪಿನಲ್ಲಿ ಉಳಿಯುವ ಸಂಚಿಕೆ.
  ಆವತ್ತು ನಾನಂತೂ ನಾನಾಗಿರಲಿಲ್ಲ. ನಿಮ್ಮೆಲ್ಲರ ಪ್ರೀತಿಯಲ್ಲಿ ಮುಳುಗಿ ಹೋಗಿದ್ದೆ!

  ನಿಮ್ಮ 'ಎದುರಿಗೆ ಕುಳಿತು ಕಥೆ ಹೇಳಿದ ಹಾಗೆ ಇರಬೇಕು, ಕಥೆ ಬರೆಯೋ ಶೈಲಿ ’ ನನಗೆ ಮೊದಲಿಂದಲೂ ಇಷ್ಟ. ನಾನು ನಿಮ್ಮ ಕಥನ ಶೈಲಿ ಮತ್ತು ಅದರ ಪರಿಣಾಮದ ಅಭಿಮಾನಿ.

  ಬಹುಶಃ ಆವತ್ತು ನೀವು ಇಟ್ಟಿಗೆ ಸೀಮೆಂಟು ಬ್ಲಾಗಿನ ಶ್ರೀಯುತ. ಪ್ರಕಾಶ್ ಹೆಗ್ಡೆಯವರನ್ನು ಪರಿಚಯ ಮಾಡಿಕೊಡದಿದ್ದರೆ ನನಗೆ ಈ ಮಟ್ಟಿನ ಸಾಧನೆ ಸಾಧ್ಯವೇ ಇರಲಿಲಿಲ್ಲ. ನಾನು ನಿಮಗೆ ಆಭಾರಿ.

  (ಕ್ಷಮಾ ಪತ್ರ: ಕಾರ್ಯಕ್ರಮದ ಹಿಂದು ಮುಂದಿನ ದಿನಗಳಲ್ಲಿ ನಾನು ಕೊಟ್ಟ ಹಿಂಸೆಗಳನ್ನೆಲ್ಲ ತಾವು ಕ್ಷಮಿಸಿಕೊಳ್ಳಬೇಕು)

  ReplyDelete
 3. ಶುಭವಾಗಲಿ .. ನಿಮ್ಮ ಅಕ್ಷರ ಪ್ರಯಾಣಕ್ಕೆ ...:)

  ReplyDelete
 4. ಶುಭವಾಗಲಿ ದಿನಕರ್, ಸಾಹಿತ್ಯ ಲೋಕಕ್ಕೆ ನಿಮ್ಮಿ೦ದ ಇನ್ನಷ್ಟು ಸೇವೆಯಾಗಲಿ.
  ಬರೆಯುವ ಈ ಕಲೆ ಎಲ್ಲರಿಗೂ ಒಲಿಯೋಲ್ಲ, ಒಲಿದರೆ ಕೈ ಬಿಡುವುದಿಲ್ಲ.
  ನಿಮ್ಮ ಬರವಣಿಗೆಗಳ ಅಭಿಮಾನಿ ನಾನು, ಪುಸ್ತಕ ಬಿಡುಗಡೆ ಸ೦ತಸ ತ೦ದಿದೆ. ಅತಿ ಸರಳವಾಗಿ ಹೇಳಬೇಕಾಗಿರುವುದನ್ನ ಹೇಳಿ ಮುಗಿಸುವ ನಿಮ್ಮ ಶೈಲಿಯಲ್ಲಿ ಪ್ರಾಮಾಣಿಕತೆಯಿದೆ. ಈ ಪ್ರಾಮಾಣಿಕತೆಯ ಪರಿಣಾಮವೇ "ಮೂಕ ಮನದ ಮಾತು"!.... ಜೈ ಹೋ.... ನಾವಿದ್ದೇವೆ ನಿಮ್ಮ ಜೊತೆ :)

  ReplyDelete
 5. ದಿನಕರಣ್ಣಾ ...
  ಮೂಕ ಮನದ ಮಾತಿನ ಭಾವವೆಲ್ಲವೂ ಇಷ್ಟ ಆಗ್ತಿತ್ತು ....ಕಥೆಯಲ್ಲಿರೋ ಪಾತ್ರಗಳು ನಾವೇ ಏನೋ ಅನ್ನ ತರಹ ಕಟ್ಟಿಕೊಡೋ ನಿಮಗೊಂದು ನಮನ ..
  ಹೀಗೋಂದು ಭಾವ ಗುಚ್ಚದ ಪುಸ್ತಕ ಸಿಕ್ಕಿದ್ದು ,ನೀವೆಲ್ಲ ನಯನ ಸಭಾಂಗಣದ ಖುಷಿಗೆ ಕಾರಣರಾಗಿದ್ದು ,ನಂಗೂ ಈ ಖುಷಿಯಲ್ಲೊಂದು ಪಾಲು ಸಿಕ್ಕಿದ್ದು ಖುಷಿ ಆಯ್ತು.
  ಇಷ್ಟವಾಯ್ತೀ ನಮನದ ನುಡಿಗಳು

  ReplyDelete
 6. ನಿಮ್ಮ ಒಂದಷ್ಟು ಕಥೆಗಳನ್ನ ಓದಿ ಉತ್ತೆಜಿಸಿದ್ದು ಬಿಟ್ಟರೆ ನಾವು ನಿಮಗೆ ಮಾಡಿದ ಸಹಾಯ ಅಷ್ಟರಲ್ಲೇ ಇದೆ ದಿನಕರ್ ಸಾರ್. ಆದರೂ ನನ್ನನ್ನ ನನ್ನಂಥ ಹಲ ಓದುಗರನ್ನ ಹಾಗೆ ಹೃದಯ ತುಂಬಿ ನೆನೆಯೋ ನಿಮ್ಮ ಅದ್ಭುತ ಹೃದಯವಂತಿಕೆಗೆ ನನ್ನ ಸಲಾಂ. ನಿಮ್ಮ ಬ್ಲಾಗಿನಲ್ಲಿ ಪುಸ್ತಕದಲ್ಲಿನ ಹಲವು ಕಥೆಗಳನ್ನ ಓದಿ ಅಭಿಪ್ರಾಯ ಹೇಳಿಹೆನಾದರೂ ಪುಸ್ತಕ ವನ್ನ ಇನ್ನೂ ಓದಿಲ್ಲ. ಓದಿ ಮತ್ತೆ ಅಭಿಪ್ರಾಯಗಳನ್ನ ಹಂಚಿ ಕೊಳ್ತೇನೆ. ಧನ್ಯವಾದಗಳು.

  ReplyDelete
 7. ದಿನಕರ್ ಸರ್... ನಾನು ನಿಮ್ಮ ಬರಹ ಶೈಲಿಯ ಅತೀ ದೊಡ್ಡ ಫ್ಯಾನ್. ನಾನು ಕೆಲಸ ಮಾಡುವ ಸಂಸ್ಥೆಯ ಅನೇಕರಿಗೆ, ನನ್ನ ಸ್ನೇಹಿತರನೇಕರಿಗೆ ನಿಮ್ಮ ಬ್ಲಾಗಿನ ಲೇಖನಗಳ ಪ್ರಿಂಟ್ ಔಟ್ ತೆಗೆದು ಓದಿಸಿದ್ದೇನೆ. ಅವರಲ್ಲಿ ಅನೇಕರು ನಿಮ್ಮ ಬರಹವನ್ನು ಅತಿಯಾಗಿ ಮೆಚ್ಚಿದ್ದಾರೆ. ಸಾಹಿತ್ಯಾಸಕ್ತರು ಸಿಕ್ಕಾಗ ಸಾಕಷ್ಟು ವಿಚಾರಗಳ ಬಗ್ಗೆ ಹರಟುತ್ತೇವೆ. ಹೀಗೆ ಪ್ರತೀ ಬಾರಿಯು ನಿಮ್ಮ ಬರಹ ಹಾಗೂ ಶೈಲಿಯ ಬಗ್ಗೆ ತನ್ನಿಂತಾನೇ ಮಾತು ಹೊರಳುತ್ತದೆ.
  ನಿಮ್ಮ ಪುಸ್ತಕ ಬಿಡುಗಡೆಯಾಗುತ್ತಿರುವ ಸುದ್ದಿ ನನಗೆ ಬಹಳ ಸಂತಸ ತಂದಿದೆ. ನಿಮ್ಮ ಪುಸ್ತಕಗಳ ಈ ಅಭಿಯಾನ ಯಶಸ್ವಿಯಾಗಿ ನಿರಂತರವಾಗಿ ಮುನ್ನಡೆಯಲಿ ಎಂಬ ಹಾರೈಕೆ. ನಿಮ್ಮ ಪ್ರತಿಯೊಂದು ಬರಹಕ್ಕೂ, ಪ್ರತಿಯೊಂದು ಪುಸ್ತಕಕ್ಕೂ ಓದುಗರಾಗಿ ನಾವು ಜತೆಯಾಗಿರುತ್ತೇವೆ ಎಂಬ ಭರವಸೆಯೊಂದಿಗೆ: ಕೆ.ನಾ.ಗೋರೆ

  ReplyDelete
 8. ಸರ್... ನಾನೂ ನಿಮ್ಮಂತೆಯೇ ಮಂಗಳೂರಿನಲ್ಲೇ ಉದ್ಯೋಗದಲ್ಲಿದ್ದೇನೆ. ನಿಮ್ಮನ್ನು ದೂರವಾಣಿ ಮೂಲಕ ಸಂಪರ್ಕಿಸುವ ಅವಕಾಶ ಸಿಗಬಹುದೇ? ನಿಮಗೆ ಅಭ್ಯಂತರವಿಲ್ಲದಿದ್ದಲ್ಲಿ ನನ್ನ ಮೊಬೈಲ್ ಸಂಖ್ಯೆ: 9008875376 ಗೆ ಮೆಸೇಜ್ ಮಾಡಿದರೆ ಸಾಕು ಅಥವಾ
  ಇ,ಮೇಲ್ ಐಡಿ narayanagore@gmail.comಗೆ ನಿಮ್ಮ ನಂಬರ್ ಕಳುಹಿಸಬಹುದು.

  ReplyDelete