‘ಮನಸ್ಸಿನ ಮಾತುಗಳು ಮನಸ್ಸಲ್ಲೇ ಇದ್ದರೆ ಮುತ್ತುಗಳಾಗಲ್ಲ’ ಎನ್ನುತ್ತಲೇ ಶುರು ಮಾಡಿದ ನನ್ನ ಬ್ಲಾಗ್ ’ಮೂಕ ಮನದ ಮಾತು’ನಲ್ಲಿ ಕವನ, ಲಘು ಬರಹ, ಕಥೆಗಳನ್ನು ಬರೆದೆ... ಹೀಗೆ ಬರೆಯಲು ಶುರು ಮಾಡಿದಾಗ ನನ್ನ ಕಥೆಗಳಿಗೆ ಮಾತ್ರ ತುಂಬಾ ಪ್ರೋತ್ಸಾಹ ಸಿಗುತ್ತಿತ್ತು... ಮನಸ್ಸಿನಲ್ಲಿ ಕಾಡುತ್ತಿದ್ದ ತುಂಬಾ ವಿಷಯಗಳಿಗೆ ಸುಣ್ಣ ಬಣ್ಣ ಬಳಿದು, ಮಸಾಲೆ ಹಚ್ಚಿ ಬರೆಯುತ್ತಿದ್ದೆ... ಕಥೆಯ ಪಾತ್ರ ನಾನಾಗಿ ಬರೆಯುತ್ತಿದ್ದೆ... ’ ಎದುರಿಗೆ ಕುಳಿತು ಕಥೆ ಹೇಳಿದ ಹಾಗೆ ಇರಬೇಕು, ಕಥೆ ಬರೆಯೋ ಶೈಲಿ ’ ಎನ್ನೋದು ನನ್ನ ಅಭಿಪ್ರಾಯವಾಗಿತ್ತು.... ಹಾಗೆ ಬರೆಯಲು ಪ್ರಯತ್ನಿಸಿದೆ ಕೂಡ.. ಎಷ್ಟು ಯಶಸ್ವಿಯಾಗಿದ್ದೇನೋ ನೀವೇ ಹೇಳಬೇಕು...
ಈ ಸಂಕಲನ ಬರಲು ಕಾರಣರಾದವರನ್ನು ಈ ಸಮಯದಲ್ಲಿ ನೆನೆಯಲೇ ಬೇಕಾಗಿದೆ...
ಬ್ಲಾಗ್ ಬರೆಯಲು ಶುರು ಮಾಡಲು ಕಾರಣನಾದ ಗೆಳೆಯ ವಿನಯ್ ಭಟ್, ನನ್ನೆಲ್ಲಾ ಕೆಲಸಗಳಿಗೂ,ನೋವಿಗೂ, ನಲಿವಿಗೂ ಜೊತೆ ನಿಲ್ಲುವ ಆತ್ಮೀಯ ಸ್ನೇಹಿತ ವೆಂಕಟೇಶ್ ಮೊಗೇರ, ದಿನವೂ ನೆನಪಾಗುವ, ಅವನ ಅನುಪಸ್ಥಿತಿ ಕಾಡುವ ಹಾಗೆ ಮಾಡುವ ಗೆಳೆಯ ದಿ. ನಾಗರಾಜ್ ಮೊಗೇರ.... ಕಥೆಯಲ್ಲಿ ಇರಬೇಕಾದ ಮಸಾಲೆ, ಕೊನೆಯಲ್ಲಿ ಕೊಡಬಹುದಾದ ತಿರುವುಗಳ ಬಗ್ಗೆ ತಿಳಿಸುವ , ತಿದ್ದುವ ’ಇಟ್ಟಿಗೆ ಸಿಮೆಂಟು ಸೆಂಟಿಮೆಂಟು’ ಬ್ಲಾಗಿನ ಪ್ರಕಾಶಣ್ಣ ... ಅತ್ತಿಗೆ ಆಶಾ ಪ್ರಕಾಶ್, ಕವರ್ ಪೇಜ್ ಗೆ ಅತ್ಯುತ್ತಮ ಫೋಟೋ ಕಳಿಸಿಕೊಟ್ಟವರು ಇವರೇ...... ನನ್ನ ಕಥೆಯ, ನನ್ನ ಜೀವನದ ತಪ್ಪುಗಳನ್ನು ಹುಡುಕಿ ಸರಿ ಮಾಡುವ ಮಡದಿ ವನಿತಾ... ನನ್ನ ಎಲ್ಲಾ ಕಥೆಗಳಿಗೆ ಉತ್ತಮ ಪ್ರೊತ್ಸಾಹ ಕೊಡುವ, ತಿದ್ದುವ ಸುನಾಥ್ ಕಾಕಾ ಅವರ ಪುಸ್ತಕದ ಜೊತೆ ನನ್ನ ಪುಸ್ತಕ ಬಿಡುಗಡೆ ಆಗಿದೆ.... ಹೂವಿನ ನಾರೂ ಸ್ವರ್ಗಕ್ಕೆ ಹೋದ ಅನುಭವ ನನ್ನದಾಗಿದೆ.... ಸುನಾಥ್ ಕಾಕಾ ಧನ್ಯವಾದ..., ’ಕೊಳಲು’ ಖ್ಯಾತಿಯ ಡಾಕ್ಟರ್ ಮೂರ್ತಿ ಸರ್, ಮೈಸೂರಿನ ’ನಮ್ಮೊಳಗೊಬ್ಬ’ ಬಾಲಸುಬ್ರಮಣ್ಯ ಸರ್, ಕುವೈತ್ ನ ವಿಜ್ನಾನಿ ’ ಜಲನಯನ’ ಆಜಾದ್ ಸರ್, ಮುಂಬೈ ಅಶೋಕ್ ಶೆಟ್ಟರು, ಉಮೇಶ್ ದೇಸಾಯಿ ಸರ್, ಸೀತಾರಾಂ ಸರ್ . ತುಂಬಾ ಜನ ಸ್ನೇಹಿತರ ಹೆಸರು ಮರೆತಿದ್ದೇನೆ... ದಯವಿಟ್ಟು ಕ್ಷಮಿಸಿ... ತಪ್ಪು ಮಾಡಿದಾಗ ತಿದ್ದಿ, ಮಾಡದೇ ಇದ್ದಾಗ ತಪ್ಪು ತಿಳಿದು ಹೋದ ಗೆಳೆಯರಿಗೂ ತುಂಬು ಮನದ ಧನ್ಯವಾದಗಳು...
ಬ್ಲಾಗ್ ಲೋಕದ ಅತ್ಯುತ್ತಮ ಕವಿ ಬದರಿನಾಥ ಪಲವಳ್ಳಿಯವರು ನನ್ನ ಬೆನ್ನು ತಟ್ಟಿದ್ದಾರೆ... ನನ್ನ ಕಥೆಗಳಿಗೆ ಸೂಕ್ಷ್ಮತೆ ಯನ್ನು ಹೇಳಿದ್ದಾರೆ.. ಅವರಿಗೂ ಧನ್ಯವಾದ.... ಹಾಗೆಯೇ ನನ್ನ ಪುಸ್ತಕ ಮಾಡುವುದಾರೆ ಅದಕ್ಕೆ ನೀವೇ ಕವರ್ ಪೇಜ್ ಮಾಡಬೇಕು ಎಂದಾಗ ಖುಶಿಯಿಂದ ಒಪ್ಪಿದ ’ಮ್ರದು ಮನಸು’ ಸುಗುಣ ಮೇಡಮ್, ’ ಸವಿಗನಸು’ ಮಹೇಶ್ ಸರ್... ಸುಗುಣ ಅವರಿಂದ ಪರಿಚಿತರಾಗಿ ಪುಸ್ತಕದ ಕವರ್ ಪೇಜ್ ಮಾಡಿಕೊಟ್ಟ ವೀರೇಶ್ ಹೊಗೆಸೊಪ್ಪಿನವರ್ ಅವರಿಗೆ ತುಂಬಾ ಧನ್ಯವಾದ... ನಾನು ಬರೆದ ಪ್ರತೀ ಕಥೆಯ ನಂತರ ’ನಿಮ್ಮ ಪುಸ್ತಕ ಯಾವಾಗ ಬರತ್ತೆ’ ಎಂದು ಕೇಳಿ ಪ್ರೋತ್ಸಾಹ ನೀಡುವ 3k ಬಳಗದ ರೂಪಾ ಸತೀಶ್... ಮಂಗಳೂರಿನಲ್ಲಿ ಸಾಹಿತ್ಯ ಸೇವೆ ಮಾಡುತ್ತಿರುವ ಅರೆಹೊಳೆ ಪ್ರತಿಷ್ಟಾನದ ಸದಾಶಿವ ರಾಯರು.... ನನ್ನ ಎಲ್ಲಾ ಕಥೆಗಳನ್ನು ಪುಸ್ತಕ ಯೋಗ್ಯವಾ ಅಂತ ಓದಿ ಅವರ ಟಿಪ್ಪಣಿ ನೀಡಿದ ಸುರತ್ಕಲ್ ಕಾಲೇಜಿನ ಅಧ್ಯಾಪಕರಾಗಿರುವ ಶ್ರೀ. ರಘು ಇಡ್ಕಿಡು ಸರ್... ಇವರಿಗೆಲ್ಲಾ ನನ್ನ ಅನಂತ ಧನ್ಯವಾದಗಳು...
ಒಂದು ಪುಸ್ತಕ ಪ್ರಕಟಗೊಳ್ಳಲು ಬರೆಯುವವ ಎಷ್ಟು ಮುಖ್ಯವೋ, ಪ್ರಕಾಶಕರೂ ಅಷ್ಟೇ ಮುಖ್ಯ... ಹಾಗೆಯೆ ನನ್ನ ಪುಸ್ತಕವನ್ನು ಪ್ರಕಟ ಮಾಡುತ್ತಿರುವ ಪ್ರಕಾಶಕರಾದ ’ಸ್ರಷ್ಟಿ ’ ನಾಗೇಶ್ ಅವರಿಗೆ ಅನಂತ ಧನ್ಯವಾದಗಳು..... ನನ್ನ ಪುಸ್ತಕಕ್ಕೆ ಮುನ್ನುಡಿ ಬರೆದುಕೊಡಿ ಅಂತ ಅಳುಕುತ್ತಲೇ ಖ್ಯಾತ ಸಾಹಿತ್ಯಕಾರ, ಕವಿ ಗೋಪಾಲ್ ವಾಜಪೇಯಿ ಯವರನ್ನು ಕೇಳಿಕೊಂಡಿದ್ದೆ... " ಮುನ್ನುಡಿ ಅಂತ ಹೇಳಲ್ಲ... ಒಂದೆರಡು ಕಥೆ ಓದಿ ನನ್ನ ಟಿಪ್ಪಣಿ ಬರೆದುಕೊಡುತ್ತೇನೆ " ಎಂದು ಹೇಳಿ, ನನ್ನ ಎಲ್ಲಾ ಕಥೆಗಳನ್ನೂ ಓದಿ, ತುಂಬಾ ಖುಶಿಯಿಂದ ಅತ್ಯುತ್ತಮ ಮುನ್ನುಡಿ ಬರೆದುಕೊಟ್ಟ ಹಿರಿಯರಾದ ವಾಜಪೇಯಿ ಸರ್ ಗೆ ಅನಂತ ವಂದನೆಗಳು.... ಹಾಗೆಯೇ, ಮೊದಲು ಮುನ್ನುಡಿ ಬರೆಯಲು ಒಪ್ಪಿ, ಕೊನೆಗೆ ನನ್ನ ಕೋರಿಕೆಯ ಮೇಲೆ ಬೆನ್ನುಡಿ ಬರೆದ, ನನ್ನ ಕಥೆಗಳನ್ನು ಓದುತ್ತಾ ಬೆನ್ನು ತಟ್ಟುತ್ತಿದ್ದ ಖ್ಯಾತ ರಂಗಭೂಮಿ ಕಲಾವಿದೆ, ಕಿರುತೆರೆಯ ಮುಕ್ತ ಮುಕ್ತದ ’ ಮಂಗಳತ್ತೆ, ’ ಮಹಾಪರ್ವದ ’ಮಂದಾಕಿನಿ’ ಶ್ರೀಮತಿ. ಜಯಲಕ್ಷ್ಮಿ ಪಾಟೀಲರಿಗೆ ನನ್ನ ಹಾರ್ಧಿಕ ಧನ್ಯವಾದಗಳು....
ಇದೇ ಸಮಯದಲ್ಲಿ ಹಿತೈಷಿಗಳಾದ ವನಿತಾ, ವಿನೋದ್, ಅತ್ರಾಡಿ ಸುರೇಶ್ ಹೆಗ್ಡೆಯವರು, ನನ್ನ ಕಥೆಗಳನ್ನು ಮೆಚ್ಚುವ ವೆಂಕಟೇಶ್ ಮೂರ್ತಿಯವರು, ಕಥೆಗಳಿಗೆ ಸರಿಯಾದ ವಿಮರ್ಶೆ ನೀಡುವ ಶ್ರೀಕಾಂತ್ ಮಂಜುನಾಥ್,, ತಮ್ಮ ಚುಟುಕುಗಳಿಂದ ಗಮನ ಸೆಳೆಯುತ್ತಿರುವ ನಮ್ಮೂರಿನ ಪರೇಶ್ ಸರಾಫ್, ಕನ್ನಡ ಬ್ಲಾಗಿಗರನ್ನು ಒಂದುಗೂಡಿಸುವ ಪುಷ್ಪರಾಜ್ ಚೌಟ, ’ ಕಾಲೇಜು ಡೈರಿ’ ಪತ್ರಿಕೆ ನಡೆಸುತ್ತಿರುವ ಗುಬ್ಬಚ್ಚಿ ಸತೀಶ್ ಅವರಿಗೆ , ಯಾವಾಗಲೂ ನನ್ನ ಕಥೆ ಓದಿ ತಿದ್ದುವ ಸುಮಾ ಸುಧಾಕಿರಣ್, ವಿಜಯಶ್ರೀ ನಟರಾಜ್, ದಿಲೀಪ್ ಹೆಗ್ಡೆ, ಪ್ರಗತಿ ಹೆಗ್ಡೆ, ಅತ್ಯುತ್ತಮ ಬರಹಗಳಿಂದ ನಮ್ಮನ್ನು ಮುದಗೊಳಿಸುವ ವಿ.ಆರ್. ಭಟ್ ಸರ್, ಅತ್ಯುತ್ತಮ ಛಾಯಗ್ರಾಹಕ ಮಿತ್ರರಾದ ಕೆ. ಶಿವು, ದಿಗ್ವಾಸ್ ಹೆಗ್ಡೆ, ಮಲ್ಲಿಕಾರ್ಜುನ್, ಉತ್ತಮ ಕಥೆಗಾರ್ತಿಯರಾದ ಅನಿತಾ ನರೇಶ್ ಮಂಚಿ, ತೇಜಸ್ವಿನಿ ಹೆಗ್ಡೆ, ಪ್ರಭಾಮಣಿ ನಾಗರಾಜ್, ಭಾಗ್ಯ ಭಟ್, ಶಮ್ಮಿ ಸಂಜೀವ್, ಪ್ರವೀಣ್ ಭಟ್ ಸಂಪ, ಶಶಿ ಜೋಯಿಸ್, ಗೌತಮ್ ಹೆಗ್ಡೆ, ಉದಯೋನ್ಮುಖ ಬರಹಗಾರ್ತಿ ಕುಮಟಾದ ಸೌಮ್ಯ ಭಾಗ್ವತ್, ಸುಶ್ರುತ ದೊಡ್ಡೇರಿ, ದಿವ್ಯ ದೊಡ್ಡೇರಿ, ಸುಷ್ಮ ಮೂಡಬಿದ್ರಿ, ರಷ್ಮಿ ಕಾಸರಗೋಡು, ತಮ್ಮಂದಿರಾದ ಅನಿಲ್ ಬೆಡಗೆ, ಪ್ರದೀಪ್, ಹಳ್ಳಿ ಹುಡುಗ ನವೀನ್, ಶಿವಪ್ರಸಾದ್, ಗಿರೀಶ್ ಸೋಮಶೇಖರ್, ಪ್ರವೀಣ್ ಗೌಡ, ನಾಗರಾಜ್ ಕೆ, ಚಿನ್ಮಯ್ ಭಟ್, ಸತೀಶ್ ನಾಯ್ಕ್ , ಸುಧೇಶ್ ಶೆಟ್ಟಿ, ಅರುಣ್ ಶ್ರಂಗೇರಿ, ಉಮೇಶ್ ಬೆಳ್ನಿ, ಪ್ರದೀಪ್ ಬೆಳ್ಕೆ, ಗುರುಪ್ರಸಾದ್ ಶ್ರಂಗೇರಿ, ಇವರಿಗೆಲ್ಲಾ ನನ್ನ ತುಂಬು ಮನದ ಧನ್ಯವಾದ...
ಹಿರಿಯರಾದ ತಿರುಮಲೈ ರವಿ, ಶ್ರೀನಿವಾಸ್ ಹೆಬ್ಬಾರ್, ಮಂಜುನಾಥ ಕೊಳ್ಳೆಗಾಲ ಇವರೆಲ್ಲರಿಗೂ ಧನ್ಯವಾದ. ಗೆಳೆಯರಾದ ಶುಭಾ ಮಂಜುನಾಥ್, ರುದ್ರೇಶ್ ಗೌಡ, ತಂಗಿ ಪುಷ್ಪಲತಾ ಮಂಜುನಾಥ್, ಮಂಗಳೂರಿನ ವರದಿಗಾರ ಮಿತ್ರರಾದ ಆರಿಫ್ ಮೊಹಮ್ಮದ್ ಪಡುಬಿದ್ರಿ, ವೇಣು ವಿನೋದ್, ಇವರಿಗೂ ತುಂಬು ಮನದ ಧನ್ಯವಾದಗಳು....
ಕೊನೆಯದಾಗಿ, ನನ್ನೆಲ್ಲಾ ಕಥೆಗಳಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸ್ಪೂರ್ತಿಯಾದ ವ್ಯಕ್ತಿಗಳಿಗೆ, ಘಟನೆಗಳಿಗೆ ಧನ್ಯವಾದಗಳು....
ಪುಸ್ತಕ ಬಿಡುಗಡೆಗೆ ಬಂದ ತುಂಬಾ ಜನ ಗೆಳೆಯರಿಗೆ ಹಿತೈಷಿಗಳಿಗೆ ತುಂಬುಮನದ ಧನ್ಯವಾದಗಳು...
ಮನಸ್ಸಿನ ಮಾತುಗಳು ಮನಸ್ಸಲ್ಲೇ ಇದ್ದರೆ ಮುತ್ತುಗಳಾಗಲ್ಲ. ಎಲ್ಲೋ ಕೇಳಿದ ಕಥೆ,ಅನುಭವಿಸಿದ ವ್ಯಥೆ, ಇಷ್ಟಪಟ್ಟ ಯಾರದೋ ಸಾಲುಗಳು, ನೋಡಿದ ಸಿನೆಮಾಗಳ ಬಗ್ಗೆ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ಮನಸ್ಸಿಗೆ ತೋಚಿದ್ದನ್ನ, ನೋಡಿದ್ದನ್ನ ಬರೆಯುತ್ತೇನೆ, ನೋವನ್ನ ನಲಿವಿನಿಂದಲೇ ಹೇಳುತ್ತೇನೆ.
Nov 7, 2013
Sep 8, 2013
ವಿನಾ- ಕಾರಣ...!!!
ಮನಸ್ಸು ಅಳುಕುತ್ತಾ ಇತ್ತು.... ಎಷ್ಟೇ ಸಮಾಧಾನ ತಂದುಕೊಂಡರೂ ಯಾಕೋ ಹೆದರಿಸುತ್ತಾ
ಇತ್ತು.... ಮಾಡುತ್ತಿದ್ದುದು ತಪ್ಪು ಎಂದು ಗೊತ್ತಿದ್ದರೂ ಸಹ, ಬುದ್ದಿ ಅದನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ....
ಇವತ್ತು ಅವಳ ಉತ್ತರ ಸಿಗುತ್ತಿತ್ತು... ನಿನ್ನೆಯ ಭೇಟಿಯ ನಂತರ ಅವಳ ಉತ್ತರದ ಬಗ್ಗೆ ಅನುಮಾನ ಇರಲಿಲ್ಲವಾದರೂ
ಮನಸ್ಸು ಯಾಕೋ ಅಳುಕುತ್ತಾ ಇತ್ತು.... ಕೆಲವೊಮ್ಮೆ ’ ಇದೆಲ್ಲಾ ಬೇಕಿತ್ತಾ ನನಗೆ ’ ಅಂತಾನೂ ಅನಿಸತ್ತೆ....
ಇದು ಶುರು ಆಗಿದ್ದು ಒಂದು ವರ್ಷದ ಹಿಂದೆ...
ನನ್ನ ಮನೆಯ ಪಕ್ಕದ
ಹುಡುಗಿಯೊಂದು ಅಚಾನಕ್ಕಾಗಿ ನನ್ನ ಕಾರಿನಲ್ಲಿ ಲಿಫ಼್ಟ್ ಕೇಳಿದಾಗ... ಆ ಸಂಜೆ ವಿಪರೀತ ಮಳೆ ಬರ್ತಾ
ಇತ್ತು... ಆಫೀಸು ಕೆಲಸ ಮುಗಿಸಿ ಹೊರಟವನಿಗೆ ಸಂಜೆ ಆರಾದರೂ ಕತ್ತಲೆಯಾದ ಹಾಗೆ ಕಾಣಿಸಿತ್ತು.... ಜೋರಾಗಿ
ಮಳೆ ಸುರಿಯುತ್ತಿದ್ದರಿಂದ ಕತ್ತಲಾದ ಹಾಗೆ ಕಾಣಿಸುತ್ತಿತ್ತು... ಜನರ ಓಡಾಟವೂ ಕಡಿಮೆ ಇತ್ತು... ಈ
ಹುಡುಗಿ ಎದುರಿಗೆ ಬಂದು ಕೈ ತೋರಿಸಿದಳು... ನಾನು ಕಾರು ನಿಲ್ಲಿಸಿದೆ.... ಒಳಗೆ ಕುಳಿತವಳೇ
" ಥಾಂಕ್ಯೂ ಸರ್. ಮನೆ ಕಡೆ ಹೋಗುವ ಬಸ್ ನಿಲ್ಲಿಸಿದ್ದಾರೆ.. ತುಂಬಾ ಮಳೆಯಲ್ವಾ ಅದಕ್ಕೆ ..
ನಿಮ್ಮನ್ನು ದಿನಾಲೂ ನೋಡುತ್ತೇನೆ... ನಿಮ್ಮ ಮನೆಯ ಪಕ್ಕವೇ ನಮ್ಮ ಮನೆ ಇರುವುದು ಸರ್.." ಎಂದಳು
ಆಕೆ... ನಾನು ಈ ಮೊದಲು ಅವಳನ್ನು ಎಲ್ಲಿಯೂ ನೋಡಿರಲಿಲ್ಲ... ನಾನು ಅವಳ ಹೆಸರು ಕೇಳುವ ಮೊದಲೇ ಆಕೆ
ಹೇಳಿಕೊಂಡಳು... " ನಿಮ್ಮ ಮಗನನ್ನು ಸ್ಕೂಲಿಗೆ ಬಿಡುವಾಗ ನಾನು ಆಫೀಸಿಗೆ ಹೊರಡೋದು ಸರ್...
ನಿಮ್ಮ ಹೆಂಡತಿಯ ಜೊತೆಗೂ ನಾನು ಮಾತನಾಡಿದ್ದೇನೆ ಸರ್... ನಿಮ್ಮನ್ನು ಭೇಟಿ ಆಗ್ತಾ ಇರೋದು ಇದೇ ಮೊದಲು....
"
ಅರಳು ಹುರಿದಂತೆ ಮಾತನಾಡುತ್ತಾ
ಇದ್ದಳು ಆಕೆ... ನಾನು ಅವಳನ್ನು ಗಮನಿಸಿದೆ... ಮಳೆಯಲ್ಲಿ ನೆನೆದಿದ್ದಳು... ಸಾಧಾರಣವೆನಿಸುವ ಚೂಡಿ
ದಾರ್ ನಲ್ಲಿದ್ದ ಆಕೆ ಸಾಧಾರಣ ರೂಪದವಳಾಗಿದ್ದಳು... ಸ್ವಲ್ಪ ಕಪ್ಪಗಿದ್ದರೂ ಮುಖದಲ್ಲಿ ಲಕ್ಷಣವಿತ್ತು,
ಮುಗ್ಧತೆಯಿತ್ತು.... ಈ ಹುಡುಗಿಯಲ್ಲಿ ಏನೋ ಸೆಳೆತವಿತ್ತು.... ಮದುವೆಯಾಗಿ ಆರು ವರ್ಷವಾಗಿದ್ದರೂ
ಹುಡುಗಿಯರ ಗಮನ ಸೆಳೆಯುವ ಮೈಕಟ್ಟು ನನ್ನದಾಗಿತ್ತು... ಇಷ್ಟಪಟ್ಟು ಮದುವೆಯಾದ ಹೆಂಡತಿ, ಮುದ್ದಿನಂಥ
ಮಗ ಇದ್ದರೂ ಆಫೀಸಿನ ಹುಡುಗಿಯರ ಜೊತೆ ಫ್ಲರ್ಟ್ ಮಾಡುವುದು ಬಿಟ್ಟಿರಲಿಲ್ಲ ನಾನು.... ಆದರೂ ನನ್ನ
ಮಿತಿ ಮೀರಿರಲಿಲ್ಲ.... ಹೆಂಡತಿಗೆ ಮೋಸ ಮಾಡಿರಲಿಲ್ಲ... ಮಾಡುವ ಉದ್ದೇಶವೂ ಇರಲಿಲ್ಲ ಎನ್ನಿ... ಅಥವಾ
ಮೋಸ ಮಾಡುವ ಅವಕಾಶ ಸಿಕ್ಕಿರಲಿಲ್ಲ ಅಂಥಲೂ ಅನ್ನಬಹುದು....
ಈ ಹುಡುಗಿ ಹೇಳಿದ್ದಕ್ಕೆಲ್ಲಾ ತಲೆಯಾಡಿಸುತ್ತಾ ಬಂದೆ ನಾನು... ಅವಳ ತಮ್ಮನೊಬ್ಬನಿಗೆ
ಕೆಲಸವಿರದೇ ಮನೆಯಲ್ಲೇ ಇದ್ದಾನಂತೆ... ಅಮ್ಮನಿಗೆ ಕಾಯಿಲೆ ಇದೆಯಂತೆ... ಅಪ್ಪನೂ ಮನೆಯಲ್ಲೇ ಇದ್ದಾರಂತೆ
, ಏನೂ ಕೆಲ್ಸ ಮಾಡದೆ... ನಾನು ಇವಳ ಹಳೆಯ ಗೆಳೆಯನಂತೆ ಎಲ್ಲವನ್ನೂ ಹೇಳಿಕೊಂಡಳು ಆಕೆ... ಅವಳ ಎಲ್ಲಾ
ಮಾತಿಗೂ ಕಿವಿಯಾದ ನನಗೆ ಮನೆ ಬಂದಿದ್ದೇ ತಿಳಿಯಲಿಲ್ಲ.... " ತುಂಬಾ ಥ್ಯಾಂಕ್ಸ್ ಸರ್... ಸಿಗುತ್ತೇನೆ
ಇನ್ನೊಮ್ಮೆ " ಎಂದವಳೇ ಕಾರು ನಿಲ್ಲಿಸಿದೊಡನೆಯೇ ಓಡಿ ಹೋದಳು... ಹುಡುಗಿ ತುಂಬಾ ಚೂಟಿ ಎನಿಸಿತು...
ಮುದ್ದಾಗಿಯೂ ಕಂಡಳು... ಅವಳ ನಗು ಅಪ್ಯಾಯಮಾನವಾಗಿ ಕಂಡಿತು ನನಗೆ ಈ ಚಳಿಯಲ್ಲಿ.... ಮನೆಯ ಗೇಟ್ ತೆಗೆದು
ಹೆಂಡತಿ ಹೊರ ಬರದೇ ಇದ್ದರೆ, ಅಲ್ಲೇ ನಿಂತಿರುತ್ತಿದ್ದೆನೋ ಏನೋ.... ಮನೆಯ ಒಳಗೆ ಬಂದರೂ ಮನಸ್ಸೆಂಬ
ಕೆರೆಗೆ ಕಲ್ಲು ಬಿದ್ದಂಗಾಗಿತ್ತು....
ಊಟದ ಶಾಸ್ತ್ರ ಮಾಡಿ ಮುಗಿಸಿದರೂ ಹೆಂಡತಿಯ ಅಡುಗೆ ಮನೆ ಕೆಲಸ ಮುಗಿದಿರಲಿಲ್ಲ...
5 ವರ್ಷ ಬೆನ್ನ ಹಿಂದೆ ಬಿದ್ದು ಪ್ರೀತಿಸಿ ಒಲಿಸಿಕೊಂಡ ಹುಡುಗಿ, ಹೆಂಡತಿಯಾದ ಮೇಲೆ ಪ್ರೀತಿ ಕಡಿಮೆಯಾಯಿತಾ....??
ಇನ್ನೂ ತಿಳಿದಿರಲಿಲ್ಲ... ಮಗುವಾದ ಮೇಲಂತೂ ಅವಳ ಪ್ರಪಂಚವೇ ಬೇರೆಯಾಗಿತ್ತು.... ಮಗ, ಮನೆ, ತವರು
ಮನೆ, ಅವಳ ತೋಟದ ಸುತ್ತಲೇ ಅವಳ ಪ್ರಪಂಚ ಸುತ್ತುತ್ತಿತ್ತು... ನನಗೆ ಇದರಿಂದ ಸಮಸ್ಯೆ ಇರದಿದ್ದರೂ
ಸಂತೋಷವಂತೂ ಇರಲಿಲ್ಲ... ಇದನ್ನೆಲ್ಲಾ ಯೋಚಿಸುತ್ತಿದ್ದವನಿಗೆ ಯಾವಾಗ ನಿದ್ದೆ ಬಂದಿತ್ತೋ ತಿಳಿಯಲಿಲ್ಲ...
ಯಾವಾಗಲೂ ಮಗನನ್ನು ಕಳುಹಿಸಲು
ಬೈಕ್ ನಲ್ಲಿ ಹೋಗುವ ನಾನು ಆ ದಿನ ಕಾರ್ ಹೊರ ತೆಗೆದೆ... ಆ ಹುಡುಗಿ ಸಿಕ್ಕರೆ ಆಫೀಸಿಗೆ ಡ್ರಾಪ್ ಕೊಡುವಾ
ಅಂತಲೂ ಇರಬಹುದು... ನಾನೆನಿಸಿದಂತೆಯೇ ಆ ಹುಡುಗಿ ಸಿಕ್ಕಳು, ನಾನು ಅವಳಿಗೆ ಡ್ರಾಪ್ ಕೊಟ್ಟೆ ಸಹ..... ದಿನಗಳೆದಂತೆಯೇ
ನಾನು ಅವಳಿಗೆ ಹತ್ತಿರವಾಗಲು ಪ್ರಯತ್ನಿಸಿದೆ... ಆ ಕ್ಷಣಗಳಲ್ಲಿ ಏನೂ ಕೆಟ್ಟ ಉದ್ದೇಶವಿರದೇ ಇದ್ದರೂ
ಅವಕಾಶ ಸಿಕ್ಕರೆ ಬಿಡುವ ಮಹಾನ್ ಬುದ್ದಿಯೂ ಇರಲಿಲ್ಲ.... ಅವಳನ್ನು ಸಮೀಪ ಮಾಡಿಕೊಳ್ಳುವ ಆತುರದಲ್ಲಿ
ನಾನು ಮಾಡಿದ ಒಂದು ತಪ್ಪೆಂದರೆ ” ನನ್ನ ಮತ್ತು ನನ್ನ ಹೆಂಡತಿಯ ಮಧ್ಯೆ ಬಿನ್ನಾಭಿಪ್ರಾಯ ಇದೆ, ದಿನಾಲು
ಜಗಳ ನಡೆಯುತ್ತದೆ, ಅವಳಿಂದ ನನಗೆ ಏನೂ ಸಂತೋಷ, ಖುಷಿ ಸಿಗ್ತಾ ಇಲ್ಲಾ, ತುಂಬಾ ಅನುಮಾನದ ಪ್ರಾಣಿ ಆಕೆ
” ಅಂತ ಸುಳ್ಳು ಹೇಳಿದ್ದೆ... ಅದನ್ನು ಈ ಹುಡುಗಿ ನಂಬಿದ್ದಳು ಕೂಡ.... ಅಲ್ಲದೇ ಅವಳು ಇದನ್ನು ನಂಬುವ ಹಾಗೆ ಮಾಡಿದ್ದೆ...
ದಿನ ಕಳೆದಂತೆ ಇವಳ ಮೇಲೆ
ಆಸಕ್ತಿ ಹೆಚ್ಚಾಗುತ್ತಾ ಬಂದಂತೆ ಹೆಂಡತಿಯ ಮೇಲೆ ಪ್ರೀತಿ ಕಡಿಮೆಯಾಗುತ್ತಾ ಬಂತು... ನನ್ನ ಹೆಂಡತಿಗೆ
ನನ್ನ ಮೇಲೆ ಇದ್ದ ಅತೀವ ನಂಬಿಕೆಯ ಪರಿಣಾಮವೋ ಅಥವಾ ಅವಳ ಆಧ್ಯತೆ ಬದಲಾದ ಪರಿಣಾಮವೋ ಇದೆಲ್ಲದರ ಬಗ್ಗೆ
ಗಮನ ಹರಿಯಲಿಲ್ಲ... ನಾನೂ ಸುಮ್ಮನಿದ್ದೆ.... ಈ ಹುಡುಗಿಯ ಸಾಂಗತ್ಯ ಬಯಸಿದರೂ ನನಗೆ ಹೆಂಡತಿಯನ್ನು
ದೂರ ಮಾಡುವ ಉದ್ದೇಶ ಇರಲಿಲ್ಲ.... ಈ ನಡುವೆ ಈ ಹುಡುಗಿ ನನ್ನನ್ನು ತುಂಬಾ ಹಚ್ಚಿಕೊಂಡು ಬಿಟ್ಟಿತ್ತು...
ನನ್ನಂಥಹ ಉತ್ತಮ ಮನುಷ್ಯನಿಗೆ ಹೆಂಡತಿಯಿಂದ ಮೋಸವಾಗಬಾರದು ಮತ್ತು ನನ್ನ ಜೀವನ ಸುಖಮಯವಾಗಿರಬೇಕು ಎಂಬುದು
ಆಕೆಯ ಅಭಿಲಾಶೆಯಾಗಿತ್ತು....
ಈಗೀಗಂತೂ ನಾನು ಅವಳಿಗಾಗಿಯೇ
ಆಫೀಸಿಗೆ ಹೋಗುತ್ತೀನಾ ಅನ್ನುವಷ್ಟು ಹಚ್ಚಿಕೊಂಡು ಬಿಟ್ಟಿದ್ದೆ... ಅವಳಿಗೆ ನನ್ನದೇ ಆಫೀಸಿನಲ್ಲಿ
ಕೆಲಸ ಕೊಡಲು ಸಹ ರೆಡಿಯಾಗಿದ್ದೆ...ಅದಕ್ಕೆ ಸಮಯ ಕೂಡಿ ಬಂದಿರಲಿಲ್ಲ... ಈ ನಡುವೆ ನನ್ನ ಮಗನ ಜೊತೆ
ಅವಳ ಗೆಳೆತನವೂ ಆಗಿತ್ತು... ನನ್ನಾಕೆಗೆ ಇದರ ಸುಳಿವೇ ಇರಲಿಲ್ಲ....
ನಾನು ಪೀಕಲಾಟಕ್ಕೆ ಸಿಕ್ಕಿದ್ದು... ಒಮ್ಮೆ ಆ ಹುಡುಗಿ ನನ್ನನ್ನು ಮದುವೆಯಾಗಲು ಕೇಳಿಕೊಂಡಿದ್ದಕ್ಕೆ....
ನನ್ನಾಕೆಗೆ ಮೋಸ ಮಾಡಿ ಇವಳನ್ನು ಮದುವೆಯಾಗಲು ನಾನು ರೆಡಿಯಾಗಿದ್ದೆ ಸಹ.... ಮಗನಿಗೆ ರಜೆ ಇದ್ದುದರಿಂದ
ನನ್ನಾಕೆಯನ್ನೂ ತವರು ಮನೆಗೆ ಕಳಿಸಿದ್ದೆ.... ಅವಳ ಮದುವೆಯ ಆಹ್ವಾನಕ್ಕೆ ನಾನು ಒಪ್ಪಿಗೆ ಕೊಡಲು ಸ್ವಲ್ಪ
ಸಮಯ ಕೇಳಿದ್ದೆ... ನನ್ನ ಹೆಂಡತಿಗೆ ಡೈವೋರ್ಸ್ ಕೊಡಲು ಸಮಯ ಬೇಕು ಅಂತ ಇವಳಿಗೆ ಸುಳ್ಳು ಹೇಳಿದ್ದೆ...
ಇವಳ ಮೇಲಿನ ಮೋಹ ನನ್ನನ್ನು ಏನು ಬೇಕಾದರು ಮಾಡಿಸುತ್ತಿತ್ತು...
ಒಂದು ದಿನ ಧೈರ್ಯ ಮಾಡಿ ಹೆಂಡತಿಗೂ ಹೇಳಿ ಬಿಟ್ಟೆ... ನನಗೆ ಅವಳಿಂದ ಡೈವೋರ್ಸ್
ಬೇಕೆಂದು... ನನ್ನ ಮಾತಿನಿಂದ ಅವಳಿಗೆ ತುಂಬಾ ಶಾಕ್ ಆಯಿತು... ಮಗನ ಮುಖವೂ ನೆನಪಿಗೆ ಬರಲಿಲ್ಲ...
ನನ್ನಾಕೆ ಮನೆಯವರ ವಿರೋದಕ್ಕೆ ಹೆದರಿ ನಾನು ಅವಳಿಗೆ ಜೀವನಕ್ಕಾಗುವ ಮೊತ್ತ ಕೊಟ್ಟೆ... ಚೆನ್ನಾಗಿಯೇ
ದುಡಿದಿದ್ದರಿಂದ ಹಣಕ್ಕೆನೂ ಕೊರತೆ ಇರಲಿಲ್ಲ... ನನ್ನ ಜೀವನದ ದುಡಿತದ ಅರ್ಧ ಪಾಲನ್ನು ಅವಳಿಗೆ ಕೊಟ್ಟಿದ್ದೆ...
ಡೈವೋರ್ಸ್ ಅನ್ನೂ ಪಡೆದೆ... ಈ ಹುಡುಗಿಯನ್ನು ಮದುವೆಯಾಗುವ ನಿರ್ಧಾರ ಮಾಡಿದ್ದೆ... ಇದನ್ನು ಕೇಳಿಯಂತೂ
ಈ ಹುಡುಗಿ ಮುಖ ಊರಗಲವಾಗಿತ್ತು... ಅವಳ ಮನೆಯವರೂ ಒಪ್ಪಿದ್ದರು... ಈ ಹುಡುಗಿಯ ಖುಶಿಗೆ ಪಾರವೇ ಇರಲಿಲ್ಲ...
ಆದರೆ ಅವಳಿಗೆ ನನ್ನ ಹೆಂಡತಿಗೆ ಮೋಸ ಮಾಡುತ್ತಿದ್ದೀನಾ ಎನ್ನುವ ಅಪರಾಧಿ ಭಾವ ಕಾಡಲು ಶುರು ಆಗಿತ್ತಂತೆ...
ಅವಳಿಗೆ ಸಮಾಧಾನ ಮಾಡಲು ನನಗೆ ಹೆಚ್ಚು ಹೊತ್ತು ಹಿಡಿಯಲಿಲ್ಲವಾದರೂ ಅವಳು ಮದುವೆಗೆ ಸ್ವಲ್ಪ ಸಮಯ ಕೇಳಿ
ನನ್ನನ್ನು ಇನ್ನೂ ಹೆಚ್ಚಿನ ಹೆದರಿಕೆಗೆ ದೂಡಿದ್ದಳು...
ನಾನೂ ಸಹ ನನ್ನ ತಳಪಾಯ ಭದ್ರ ಮಾಡಿಕೊಂಡಿದ್ದೆ.... ಅವಳ ಅಮ್ಮನನ್ನು ಬುಟ್ಟಿಗೆ
ಹಾಕಿಕೊಂಡಿದ್ದೆ...ಅಂದರೆ ಅವಳ ಅಮ್ಮನಿಗೆ ನನ್ನೆಲ್ಲಾ ಆಸ್ತಿಯ ಪರಿಚಯ ಮಾಡಿಸಿದ್ದೆ ಮತ್ತು ಮನೆಯಲ್ಲೇ ಇದ್ದ ಮಗನಿಗೆ ದೊಡ್ಡದೊಂದು ಹುದ್ದೆಯ ಆಮಿಷ ತೋರಿಸಿದ್ದೆ....
ಯಾವ ಕಾರಣಕ್ಕೂ ನನ್ನ ಮದುವೆ ಆಗಲು ಒಪ್ಪದಿರಲು ಕಾರಣವೇ ಇರದ ಹಾಗೆ ಮಾಡಿದ್ದೆ.... ನಾನು ಮಾಡಿದ ದೊಡ್ದ
ತಪ್ಪೆಂದರೆ ಈ ನಡುವೆ ನನ್ನ ಹೆಂಡತಿಯನ್ನು ಮರೆತಿದ್ದು... ಅವಳ ಬಗ್ಗೆ ನಾನು ಗಮನವೇ ಹರಿಸಿರಲಿಲ್ಲ...
ಅವಳ ಆರೋಗ್ಯ ದಿನೇ ದಿನೇ ಹದಗೆಡುತ್ತಿತ್ತು... ಈ ಹುಡುಗಿ ತೆಗೆದುಕೊಂಡ ದಿನವೂ ಇವತ್ತೇ ಇತ್ತು....
ಆಫೀಸಿನ ಹತ್ತಿರವೇ ಇದ್ದ ಪಾರ್ಕಿನಲ್ಲಿ ಕಾಯುತ್ತಾ ಕುಳಿತಿದ್ದೆ ಅವಳಿಗಾಗಿ...
ಸಿಗರೇಟ್ ಪ್ಯಾಕ್ ಮುಗಿಯುವುದಕ್ಕೂ ಅವಳು ಒಳಗೆ ಬರುವುದಕ್ಕೂ ಸರಿಯಾಯ್ತು.... ಅವಳ ಮುಖದಲ್ಲಿ ನಗುವಿತ್ತು... ನನಗಿಷ್ಟವಾದ ಹಳದಿ ಬಣ್ಣದ
ಟಿ ಶರ್ಟ್ ತೊಟ್ಟಿದ್ದಳು... ನನಗೆ ಗೆಲುವೆನಿಸಿತು... ಎಂದೂ ಬಾರದ ಹೆಂಡತಿಯ ನೆನಪಾಯಿತು... ತಲೆ
ಕೊಡವಿಕೊಂಡೆ... ಹಿಂದಿನದನ್ನು ಮರೆತು ಮುಂದಿನದರ ಬಗ್ಗೆ ಯೋಚಿಸಿ ಮುನ್ನಡೆಯೋಣ ಎನಿಸಿಕೊಂಡೆ... ನನ್ನ
ಪಕ್ಕದಲ್ಲೇ ಕುಳಿತಳು ಆಕೆ... " ಯಾಕೆ ತುಂಬಾ ಟೆನ್ಸನ್ ನಲ್ಲಿದ್ದೀರಾ..? " ಕೇಳಿದಳು...
ಇವಳಿಗೇನು ಗೊತ್ತು ನನ್ನ ಪಾಡು....? ಮದುವೆಯ ದಿನ ಗೊತ್ತುಪಡಿಸೋದೊಂದೆ ಬಾಕಿ ಇದ್ದು ಈ ಹುಡುಗಿ ಸತಾಯಿಸುತ್ತಿದ್ದಾಳೆ...
" ಇಲ್ಲಪ್ಪಾ... ಆರಾಮಿದ್ದೇನೆ ನಾನು... ಸರಿ.. ಎಲ್ಲವೂ ಕ್ಲೀಯರ್ ಆಯ್ತಾ... ಒಂದು ವಿಷಯ ನೆನಪಿಟ್ಟುಕೊ...
ನಿನ್ನ ಮೇಲೆ ನನಗೆ ಮನಸ್ಸಿದ್ದುದೂ ಹೌದು... ಆದರೆ ನೀನೇ ಮೊದಲು ಅದನ್ನು ಹೇಳಿಕೊಂಡೆ... ನನ್ನ ಹೆಂಡತಿಯ
ಜೊತೆಯೂ ನನ್ನ ಸಂಬಂಧ ಸರಿ ಇರಲಿಲ್ಲ... ಈಗ ಅದಕ್ಕೆಲ್ಲಾ ಒಂದು ತಾರ್ಕಿಕ ಅಂತ್ಯ ಬಂದಿದೆ... ಅವಳಿಂದ
ನನಗೆ ಡೈವೋರ್ಸ್ ಸಹ ಸಿಕ್ಕಿದೆ... ಈಗ ನಿನ್ನ ಮದುವೆಯಾಗಲು ನಾನು ರೆಡಿ ಇದ್ದೇನೆ... ನೀನು ಮದುವೆಯ
ಆಹ್ವಾನ ಕೊಟ್ಟ ನಂತರವೇ ಇದೆಲ್ಲಾ ಆಗಿದ್ದು... ಈಗ ಹೇಳು ಮದುವೆ ಯಾವಾಗ ಇಟ್ಟುಕೊಳ್ಳೋಣ..."?
ನನ್ನ ಗಡಿಬಿಡಿ ನನಗಾಗಿತ್ತು...
ಆಕೆ ನನ್ನ ಕೈ ತೆಗೆದುಕೊಂಡಳು... " ನಿಮ್ಮದು ಲವ್ ಮ್ಯಾರೇಜ್ ಆಗಿತ್ತಾ
...? "ಕೇಳಿದಳು... " ಹೌದು...ಅದೆಲ್ಲಾ ಯಾಕೀಗ..? ಅವಳನ್ನು 5 ವರ್ಷ ಬೆನ್ನಿಗೆ ಬಿದ್ದು ಪ್ರೀತಿಸಿ ಮದುವೆಯಾಗಿದ್ದೆ....
ಅದು ಮುಗಿದ ಅಧ್ಯಾಯ ಈಗ... " ಎಂದೆ ನಾನು.... " ನನ್ನನ್ನ ಅಷ್ಟು ಇಷ್ಟ ಪಡ್ತೀರಾ ನೀವು...?
ನನ್ನನ್ನ ಯಾಕೆ ಮದುವೆಯಾಗಲು ಮನಸ್ಸು ಮಾಡಿದ್ರೀ ನೀವು...? " ಪ್ರಶ್ನೆ ಕೇಳುವ ಪರಿಗೆ ನಾನು
ಮನಸೋತೆ... ಅವಳ ಈ ಪ್ರಶ್ನೆ ನನಗೆ ಕಿರಿಕಿರಿ ಎನಿಸಿದರೂ ಅವಳ ಮೇಲಿನ ಪ್ರೀತಿ ಹೇಳಿಕೊಳ್ಳಬೇಕಿತ್ತು....
" ನೋಡು ಹುಡುಗಿ, ನಿನ್ನ ಮೇಲೆ ನನ್ನ ಪ್ರೀತಿಗಿಂತಲೂ , ನೀನು ನನ್ನ ಮೇಲೆ ತೋರಿಸಿದ ಪ್ರೀತಿಗೆ
ಸಾಟಿಯಿಲ್ಲ... ಈ ರೀತಿ ಪ್ರೀತಿಯನ್ನೂ ಯಾರೂ ತೋರಿಸಿರಲಿಲ್ಲ.. ಅದೇ ನನ್ನನ್ನು ಮದುವೆಯಾಗಲು ಪ್ರೆರೇಪಿಸಿತು...
ನೀನು ನನ್ನ ಹೆಂಡತಿಗಿಂತಲೂ ತುಂಬಾ ಸುಂದರವಾಗಿದ್ದೀಯಾ... ಅದರ ಬಗ್ಗೆ ಮಾತೇ ಇಲ್ಲ.... ಅದು ಜಗತ್ತನ್ನೇ
ಮರೆತು ನಿನ್ನ ಹಿಂದೆ ಸುತ್ತುವ ಹಾಗೆ ಮಾಡಿದೆ... ಅದೆಲ್ಲಾ ಬಿಡು... ಮದುವೆ ಹಾಲ್ ಎಲ್ಲಿ ಬುಕ್ ಮಾಡಲಿ,
ಆಮಂತ್ರಣ ಪತ್ರಿಕೆ ರೆಡಿ ಆಗ್ತಾ ಇದೆ... ದಿನಾಂಕ ಪ್ರಿಂಟ್ ಮಾಡೊದೊಂದೇ ಬಾಕಿ..." ಎಂದೆ ಅವಳ
ಕೈ ಮೇಲೆ ಹೂ ಮುತ್ತನಿಟ್ಟೆ...
ನನ್ನ ಕೈಗೂ ಒಂದು ಮುತ್ತನಿಟ್ಟ ಆಕೆ ಎದ್ದು ನಿಂತಳು..." ನಿಮ್ಮನ್ನು
ನಾನು ಪ್ರಾಣಕ್ಕಿಂತಲೂ ಹೆಚ್ಚಿಗೆ ಪ್ರೀತಿಸುತ್ತೇನೆ... ಅದ್ಯಾವ ಮಾಯೆಯಿಂದ ನಾನು ನಿಮ್ಮನ್ನು ಇಷ್ಟು
ಪ್ರೀತಿಸಿದೆನೋ ನನಗೇ ತಿಳಿಯದು... ನಿಮ್ಮನ್ನು ಮದುವೆಯಾಗಲು ನನ್ನ ಮನಸ್ಸು ಒಪ್ಪುತ್ತಿಲ್ಲ.... ನನ್ನನ್ನು
ಮರೆತುಬಿಡಿ..." ಪಕ್ಕದಲ್ಲೇ ಬಾಂಬ್ ಬಿದ್ದಹಾಗಾಯಿತು.... ಅದುರಿಬಿದ್ದೆ....
ಅವಳ ರಟ್ಟೆ ಹಿಡಿದು ನನ್ನ ಕಡೆ ತಿರುಗಿಸಿದೆ... ಸ್ವಲ್ಪ ರಫ್ ಆಗಿಯೇ ಕೈ
ಹಿಡಿದಿದ್ದೆ.... ಅದರ ಬಗ್ಗೆ ಯೋಚಿಸುವ ಪ್ರಜ್ನೆ ಇರಲಿಲ್ಲ... " ಏನ್ ಹೇಳ್ತಾ ಇದ್ದೀಯಾ...?
ತಮಾಶೆ ಮಾಡಬೇಡ್ವೇ...? ಪ್ರಾಣಾನೇ ಇಟ್ಕೊಂಡಿದೀನಿ ನಿನ್ನ ಮೇಲೆ... " ಆಲ್ಮೋಸ್ಟ್ ಕೂಗಿದೆ....
ಅವಳ ಮುಖದಲ್ಲಿ ಏನೂ
ಬದಲಾವಣೆ ಏನೂ ಕಾಣಲಿಲ್ಲ... ನನಗೆ ಗಾಬರಿ ಯಾಯಿತು....
ಅವಳು ನಾನು ಬಿಗಿಯಾಗಿ ಹಿಡಿದ ರಟ್ಟೆಯ ಕಡೆ
ನೋಡುತ್ತಿದ್ದಳು... ನೋಯುತ್ತಿತ್ತು ಅನಿಸತ್ತೆ... ಬಿಟ್ಟು ಬಿಟ್ಟೆ.... " ಸಾರಿ ಹುಡುಗಿ,
ಆವೇಶ ಕ್ಕೊಳಗಾದೆ... ಒಂದ್ ವಿಷಯ ಅರ್ಥ ಮಾಡ್ಕೊ... ನಾನು
ನಿನ್ನನ್ನು ಇಷ್ಟ ಪಟ್ಟಿದ್ದು, ನಿನ್ನ ಮೇಲೆ ಪ್ರೀತಿ ತೋರಿಸಿದ್ದು ಯಾವುದೂ ಸುಳ್ಳಲ್ಲ...
ಹಾಗೆ ನೀನೂ ಸಹ... ನಿನಗೇನಾದರೂ ನಿನ್ನಿಂದಾಗಿ ನನ್ನ ಹೆಂಡತಿಗೆ ಮೋಸ ಆಯ್ತು ಎನ್ನುವ ಅಪರಾಧಿ ಭಾವನೆ
ಇದ್ದರೆ ಬಿಟ್ಟು ಬಿಡು ಅದನ್ನ... ಅವಳಿಗೆ ಎನು ಬೇಕೋ ಅದನ್ನ ಕೊಟ್ಟಿದ್ದೇನೆ... ಮಗನ ಭವಿಷ್ಯಕ್ಕಾಗುವಷ್ಟನ್ನೂ
ಕೊಟ್ಟಿದ್ದೇನೆ... ಅವಳ ಭವಿಷ್ಯಕ್ಕೆ ಏನೂ ತೊಂದರೆ ಆಗಲ್ಲ ಬಿಡು... ಅದರ ಬಗ್ಗೆ ಯೋಚನೆ ಮಾಡಬೇಡ..."
ನಾನು ಬೇಡುವ ಸ್ಥಿತಿಗೆ ಬಂದಿದ್ದೆ... ನನ್ನ ಬಗ್ಗೆ ನನಗೇ
ಜಿಗುಪ್ಸೆಯಾಯಿತು... ಆದರೆ ಇದೆಲ್ಲಾ ಪ್ರೀತಿ ಒಲಿಸಿಕೊಳ್ಳಲು ಎಂದು ಸಮಾಧಾನಪಡಿಸಿಕೊಂಡೆ....
ಇಷ್ಟೆಲ್ಲಾ ಅಂದರೂ ಆಕೆ ಮುಖಭಾಷೆಯಲ್ಲಿ ಏನೂ ಬದಲಾವಣೆ ಕಾಣಲಿಲ್ಲ...
" ನಿಮ್ಮ ಜೊತೆ ಮದುವೆಯಾಗದೇ ಇರಲು ಇವೆಲ್ಲಾ ಕಾರಣಗಳೇ ಅಲ್ಲ... ನನಗೆ ನನ್ನ ಭವಿಷ್ಯವೂ ಮುಖ್ಯ...
" ಎಂದಳು ಆಕೆ.... ಸಿಟ್ಟು ಬಂತು ನನಗೆ... " ನಿನಗೇನು ಕಡಿಮೆ ಮಾಡಿದ್ದೇನೆ ನಾನು...?
ನಿನ್ನ ತಮ್ಮನಿಗೆ ಉದ್ಯೋಗ ಕೊಡಿಸುತ್ತೇನೆ.... ನಿನ್ನ ಅಮ್ಮ ಸಹ ನ ಮ್ಮ ಜೊತೆಯೇ ಇರಬಹುದು... ನಿನ್ನ
ಅಪ್ಪನಿಗೂ ನನ್ನ ಜೊತೆ ಕೆಲ್ಸ ಕೊಡುತ್ತೇನೆ... ಅವರೂ ನಮ್ಮ ಜೊತೆಯೇ ಇರಲಿ.... ನನ್ನ ಆಸ್ತಿಯಲ್ಲಿ
ಸಮಪಾಲು ನಿನಗೆ ಕೊಡುತ್ತೇನೆ... ನನ್ನ ಆಸ್ತಿಯ ಬಗ್ಗೆ ನಿನಗೆ ಗೊತ್ತೇ ಇದೆ... ಆದರೂ ನಿನಗೇಕೆ ಭವಿಷ್ಯದ
ಚಿಂತೆ..? " ಸಹನೆ ಕಳೆದುಕೊಂಡೆ ನಾನು.... ಅವಳ ಕಣ್ಣಲ್ಲಿ ನೀರಿತ್ತು....
" ನೀವು ನನ್ನನ್ನ ಮದುವೆಯಾಗ್ತಾ ಇರೋದು ಯಾಕೆ ಅಂತ ಹೇಳಿದ್ರೀ...?
ನಾನು ನಿಮ್ಮನ್ನು ನಿಮ್ಮ ಹೆಂಡತಿಗಿಂತ ಚೆನ್ನಾಗಿ ಕಾಳಜಿ ತೋರಿಸಿದೆ ಮತ್ತು ಪ್ರೀತಿಸಿದೆ ಅಂತ ತಾನೆ..?
ನಾನು ನಿಮ್ಮ ಹೆಂಡತಿಗಿಂತ ಚೆನ್ನಾಗಿದೀನಿ ಅಂತ ತಾನೆ...? ಈಗ ನಾನು ನಿಮ್ಮನ್ನು ಮದುವೆಯಾದ ನಂತರವೂ
ನನಗಿಂತ ಸುಂದರ, ನನಗಿಂತ ನಿಮ್ಮನ್ನು ಪ್ರಿತಿಸುವ, ಕಾಳಜಿ ತೋರಿಸುವವರು ಸಿಕ್ಕಾಗ ನನ್ನನ್ನೂ ಮರೆಯುವುದಿಲ್ಲ
ಎನ್ನುವುದಕ್ಕೆ ಏನು ಗ್ಯಾರಂಟಿ...? ಅಷ್ಟು ಪ್ರೀತಿಸಿ ಮದುವೆಯಾದ ನಿಮ್ಮ ಹೆಂಡತಿಯನ್ನು ನನ್ನ ಸಲುವಾಗಿ
ಬಿಡಲು ತಯಾರಾದ ನೀವು , ಇನ್ಯಾರದೋ ಸಲುವಾಗಿ ನನ್ನನ್ನು ಬಿಡೋದಿಲ್ಲಾ ಅನ್ನೋದಕ್ಕೆ ಏನು ಗ್ಯಾರಂಟಿ..?
.. ನನಗೆ ನಿಮ್ಮ ಮೇಲೆ ಪ್ರೀತಿ ಇದೆ.. ಆದ್ರೆ ಅದಕ್ಕೆ ನಂಬಿಕೆ ಎನ್ನುವ ಭದ್ರ ಬುನಾದಿ ಇಲ್ಲ ಎಂದ ಮೇಲೆ ಪ್ರೀತಿ ಮೇಲೂ ಅನುಮಾನ ಬರಲು
ಶುರು ಆಗತ್ತೆ... ನನ್ನನ್ನು ಮರೆತು ಬಿಡಿ... ನಿಮ್ಮ ಹೆಂಡತಿ ಜೊತೆ ಇರ್ತೀರೋ ಇಲ್ಲವೋ ನಿಮಗೆ ಬಿಟ್ಟಿದ್ದು..."
ಎನ್ನುತ್ತಾ ಕುಸಿದು ಕುಳಿತಳು....ಅಳಲು ಶುರು ಮಾಡಿದಳು....
ಎದುರಿಗೇ ಪ್ರಪಾತ ಬಂದ ಅನುಭವ ನನಗೆ... ಹೆಂಡತಿಯ ಮುಗ್ಧ ಮುಖ, ಮಗನ ಅಮಾಯಕ
ನಗೆ ಕಣ್ಣೆದುರಿಗೆ ಬಂತು... ಕೊನೆಯ ಸಾರಿ ಮಗನನ್ನು ಬಿಟ್ಟು ಬರುವಾಗ ನನ್ನ ಕೈ ಬಿಡಲೊಪ್ಪದ ಆತನ ಕೈ
ಬಿಸಾಡಿ ಬಂದಿದ್ದೆ... ಅದೇ ಕೈ ನೋಡಿಕೊಂಡೆ.... ಈಗ ಈ ಹುಡುಗಿ ನನ್ನ ಎದೆ ಮೇಲೆ ಒದ್ದು ಹೋಗುತ್ತಿದ್ದರೂ
ಏನೂ ಮಾಡಲಾಗದ ಪರಿಸ್ಥಿತಿ..... ನನಗೆ ಏನೂ ತೋಚಲಿಲ್ಲ... ಅವಳು ಹೇಳಿದ್ದು ತಪ್ಪು ಅಂತಾನೂ ಅನಿಸಲಿಲ್ಲ....
ಅವಳು ಸಾವಕಾಶವಾಗಿ ಎದ್ದು ನಡೆಯಲು ಶುರು ಮಾಡಿದಳು... ಅವಳ ಕಡೆ ನೋಡಿದೆ... ಸಂಜೆಯ ಬಿಸಿಲಿತ್ತು...
ಅನಿರೀಕ್ಷಿತವಾಗಿ ಧೋ ಅಂತ ಮಳೆ ಬಂತು.... ಮಳೆ ನೀರು ಮುಖದ ಮೇಲೆ ಹರಿದು ಬಾಯಿಗೆ ಬಂತು.... ಉಪ್ಪುಪ್ಪು....
ಮಳೆ ನೀರ ಜೊತೆ ಕಣ್ಣೀರೂ ಸೇರಿತ್ತಾ.....? ತಿಳಿಯಲಿಲ್ಲ.....
Jul 8, 2013
ದೇವರ ಆಟ....!!!!
ಡಾಕ್ಟರ್ ಕೊಟ್ಟ ಸಮಯ ಮುಗಿದಿತ್ತು...
ಎದೆಯ ಬಡಿತವೂ ಹೆಚ್ಚಿತ್ತು... ಅವರು ಹೇಳಿದಂತೆಯೇ ಆದರೆ ಖುಷಿ ಪಡುವುದೋ, ದುಖಃ ಪಡುವುದೋ ಅರ್ಥವಾಗಲಿಲ್ಲ...
... ಭಾರವಾದ ಮನಸ್ಸಿನಿಂದ
ಕುಲದೇವರನ್ನು ನೆನೆಸಿದೆ... ಬದುಕಿಸಿ ಕೊಡು ಅಂತಲೋ, ಸಾಯಿಸಿ ಬಿಡು ಅಂತಲೋ ನನಗೂ ಗೊತ್ತಿರಲಿಲ್ಲ...
ದೊಡ್ಡದೊಂದು ಉಸಿರು ಬಿಟ್ಟು ಎದ್ದೆ... ಅಕ್ಕ ಪಕ್ಕದಲ್ಲಿ ಏನೂ ಕಾಣುತ್ತಿರಲಿಲ್ಲ... ಐ.ಸಿ.ಯು. ಎಂದು
ಬರೆದ ಬಾಗಿಲಿನ ಕಡೆ ನಡೆಯುತ್ತಿದ್ದೆ... ಗಡಿಬಿಡಿಯಿಂದ ಬರುವಾಗ ಹಾಕಿಕೊಂಡು ಬಂದ ಹವಾಯಿ ಚಪ್ಪಲಿಯ
ಸದ್ದು ದೊಡ್ಡದಾಗಿ ಕೇಳಿಸುತ್ತಿತ್ತು... ಬಾಗಿಲಿನ ಹತ್ತಿರ ಬಂದು ಬಾಗಿಲು ತಳ್ಳುವವನಿದ್ದೆ........
ತನ್ನಷ್ಟಕ್ಕೆ ಬಾಗಿಲು ತೆರೆದುಕೊಂಡಿತು... ಒಳಗಡೆಯಿಂದ ಒಬ್ಬರು ನರ್ಸ್ ಬಂದರು... "ಡಾಕ್ಟರ್
ನಿಮಗೆ ಸ್ವಲ್ಪ ಸಮಯ ಕಾಯಲು ಹೇಳಿದ್ದಾರೆ... ಅವರೂ ಬರ್ತಾರಂತೆ ನಿಮ್ಮ ಜೊತೆ" ಅಂದರು ಆಕೆ...
ಸ್ವಲ್ಪ ಸಮಾಧಾನವಾಯಿತು.. ಹೊರಗಡೆಯೇ ನಿಂತೆ... ನನ್ನ ಪಕ್ಕದಲ್ಲಿ ಒಬ್ಬರು ಹೊಸದಾಗಿ ಮದುವೆಯಾದ ಜೋಡಿ
ನಿಂತಿದ್ದರು... ಅವರನ್ನು ನೋಡುತ್ತಲೇ ನಾನು ನನ್ನ ಕಥೆ ನೆನಪಿಸಿಕೊಂಡೆ....
*********
ಮದುವೆಯಾಗಿ ಆಗಷ್ಟೇ ವರುಷ ಕಳೆದಿತ್ತು.... ಹೆಂಡತಿಯ ಡೆಲಿವರಿ ದಿನಾಂಕವೂ ಹತ್ತಿರ ಬಂದಿತ್ತು..
ಡಾಕ್ಟರ್ ಹೇಳಿದ ದಿನವೇ ಅವರ ಹತ್ತಿರ ಹೋಗಿದ್ದೆವು..."ಇನ್ನೆರಡು ದಿನದಲ್ಲೇ ಹೆರಿಗೆ ಆಗತ್ತೆ,
ಏನೂ ತೊಂದರೆ ಇಲ್ಲ.. ಹೆದರಬೇಡಿ... ನೋವು ಬಂದಾಗ ಬನ್ನಿ " ಎಂದರು..ನಮಗೆ ಅಳುಕು..
" ಮೇಡಮ್, ಏನೂ ತೊಂದರೆ ಇಲ್ಲಾ ತಾನೆ..?" ಎಂದೆ ನಾನು.. ಅವರು ಆರಾಮಾಗಿಯೇ ಹೇಳಿದರು.."
ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ... ಹೆದರಬೇಡಿ" ಎಂದರು... ನಾವು ವಾಪಸ್ ಬಂದೆವು..
ಮನೆಗೆ ಬಂದು ತಲುಪುವಷ್ಟರಲ್ಲೇ ನನ್ನಾಕೆಗೆ ಹೆರಿಗೆ ನೋವು ಬಂತು...
ಕೂಡಲೇ ಅದೇ ರಿಕ್ಷಾದಲ್ಲೇ ವಾಪಸ್ ಆಸ್ಪತ್ರೆಗೆ ಬಂದೆವು.. ಡಾಕ್ಟರ್ ಮೆಡಮ್ ಇನ್ನೊಂದು ಡೆಲಿವರಿ
ಕೇಸ್ ನಲ್ಲಿ ಇದ್ದರು.. ನಾವು ಅಡ್ಮಿಟ್ ಆದೆವು...
ನನ್ನಾಕೆಯ ನೋವು ವಿಪರೀತವಾಗಿತ್ತು... ನನಗೆ ಆಕೆಯ ನೋವು ನೋಡಲಾಗಲಿಲ್ಲ .. ಹೊರ ಬಂದೆ.. ಅಷ್ಟರಲ್ಲೇ
ನನ್ನಾಕೆಯ ಅಮ್ಮ ಮತ್ತು ನನ್ನಮ್ಮ ಇಬ್ಬರೂ ಬಂದರು... ನನ್ನಾಕೆಯ ಅಮ್ಮನನ್ನು ಅವಳ ಹತ್ತಿರ ಕಳಿಸಿದೆ...
ಎಷ್ಟಾದರೂ ಅಮ್ಮನಿಗೆ ಅರ್ಥ ಆಗೋದು ಅಮ್ಮನಾಗುವ ನೋವು ಅಲ್ವಾ...?
ಅಲ್ಲಿದ್ದ ನರ್ಸ್ ಹತ್ತಿರ ಕೇಳುತ್ತಾ ಇದ್ದೆ, ನನ್ನಾಕೆಯ ಸ್ಥಿತಿ.. ಅವರಿಗೋ,
ಎಂದಿನಂತೆ ಇದೂ ಒಂದು ಡೆಲಿವರಿ ಕೇಸ್ ಅಷ್ಟೆ... ನಮಗೆ ಇದು ಜೀವನ್ಮರಣದ ಪ್ರಶ್ನೆಯಾಗಿತ್ತು....
ಮದುವೆಯಾಗಿ ಹೋದ ಮಗಳ ಮೊದಲನೇ ಹೆರಿಗೆಯನ್ನು ತವರು ಮನೆಯವರೇ ನೋಡಿಕೊಳ್ಳುವುದು ಕಾರಣ ಇದೂ ಇರಬಹುದೇನೋ...
ಹೆರಿಗೆ ಎಂದರೆ ಮರಣದ ವಿರುದ್ದ ಹೋರಾಟವೇ ಸೈ ಎನ್ನುತ್ತಾರೆ... ನನ್ನಾಕೆಯ ನರಳಾಟ, ಕೂಗಾಟ ನನ್ನ ಕಿವಿಗೆ
ಕೇಳಿಸುತ್ತಿತ್ತು... ನನಗೂ ನೋವು ತರುತ್ತಿತ್ತು..
ಪಕ್ಕದಲ್ಲೇ ಇದ್ದ ಅಂಗಡಿಗೆ ಹೋದೆ... ಸಿಗರೇಟು ಸೇದೋಣ ಎಂದು...
ಈ ಮಧ್ಯೆ ಆಸ್ಪತ್ರೆಯ ಒಳಗಡೆ ಹೋಗಿ ಡಾಕ್ಟರ್ ಹತ್ತಿರ ಮಾತನಾಡಿ ಬಂದಿದ್ದೆ... " ನೋವು
ಬರ್ತಾ ಇದೆ ಆದರೆ ನಿಮ್ಮಾಕೆಯೂ ಒತ್ತಡ ಹಾಕಬೇಕು ಮಗು ಹೊರ ಬರಲು... ಇಲ್ಲದಿದ್ದರೆ ತೊಂದರೆ ಆಗತ್ತೆ..
ನಿಮ್ಮಾಕೆ ಸುಸ್ತಾಗಿದ್ದಾಳೆ " ಎಂದರು.. ನನಗೆ ಗಾಬರಿ ಆಯ್ತು... " ಈಗ ಏನ್ಮಾಡೊದು ಮೇಡಮ್..?
" ಎಂದೆ ಗಾಬರಿಯಿಂದ.. " ಹೆದರಬೇಡಿ, ನಿಮ್ಮಾಕೆಗೆ ಧೈರ್ಯ ಹೇಳಿ...
ಒತ್ತಡ ಹಾಕಲು ಹೇಳಿ..ಎಲ್ಲಾ ಸರಿಯಾಗತ್ತೆ" ಎನ್ನುತ್ತಲೇ ಒಳಗೆ ಓಡಿದರು ಆಕೆ ಇನ್ನೊಂದು ಕೇಸಿನ
ಸಲುವಾಗಿ... ನಾನು ಅಲ್ಲಿದ್ದ ಇನ್ನೊಂದು ನರ್ಸ್ ಹತ್ತಿರ ಕೇಳಿದೆ... " ತೊಂದರೆ ಇದ್ದರೆ ಸೀಸರಿನ್
ಮಾಡಬಹುದು ಅಲ್ವಾ..? " ಎಂದೆ...
" ನಮ್ಮ ಹತ್ತಿರ ಅನೆಸ್ಥೇಷಿಯಾ ಡಾಕ್ಟರ್ ಇಲ್ಲಾ, ಅವರು ರಜೆ ಮೇಲಿದ್ದಾರೆ , ನೀವು ಹೆದರಬೇಡಿ,
ನಾರ್ಮಲ್ ಡೆಲಿವರಿ ಆಗತ್ತೆ " ಎಂದು ಹೇಳಿದರು ಆಕೆ.. ನನಗೆ ಇನ್ನೂ ಗಾಬರಿ...ಮತ್ತದೇ ಪಕ್ಕದ
ಅಂಗಡಿಗೆ ಹೋದೆ... ಬಿಸಿ ಗಾಳಿಗಾಗಿ.... ನಾಲ್ಕು ತಾಸು..... ನಾಲ್ಕು ತಾಸು.. ಅಂಡು ಸುಟ್ಟ ಬೆಕ್ಕಿನ
ಹಾಗೆ ಅಲ್ಲಿಂದ ಇಲ್ಲಿಗೆ , ಇಲ್ಲಿಂದ ಅಲ್ಲಿಗೆ ಓಡಾಡಿದೆ.... ನನ್ನ ಅಮ್ಮ ಓಡುತ್ತಾ ಬಂದರು...
" ಆ ನರ್ಸ್ ಹೇಳ್ತಾ ಇದ್ದಾರೆ, ಡೆಲಿವರಿ ಆಗಿದೆಯಂತೆ... ಮಗುವಿಗೆ ಉಸಿರಾಟದ ತೊಂದರೆ ಆಗಿದೆಯಂತೆ...
ಡಾಕ್ಟರ್ ಹತ್ತಿರ ಮಾತನಾಡೋಣ ಬಾ... ಅಗತ್ಯ ಬಿದ್ದರೆ ಮಣಿಪಾಲಿಗೆ ಕರೆದುಕೊಂಡು ಹೋಗೋಣ" ಎನ್ನುತ್ತಲೇ
ಆಕೆ ಅಳಲು ಶುರು ಮಾಡಿದರು...
ನಾನು ಓಡುತ್ತಾ ಆಸ್ಪತ್ರೆಗೆ ಬಂದೆ... ಅಲ್ಲಿದ್ದ ಮಕ್ಕಳ ಡಾಕ್ಟರ್ ಹತ್ತಿರ ಕೇಳಿದೆ... ಅವರು
" ನಿಮ್ಮಾಕೆ ಮಗು ಹೊರ ಬರುವ ಸಮಯದಲ್ಲೇ ಸುಸ್ತಾಗಿದ್ದರು.. ಅವರಿಗೆ ಸಾಕಷ್ಟು ಒತ್ತಡ ಕೊಡಲು
ಆಗಲೇ ಇಲ್ಲ.. ಮಗು ಅರ್ಧ ಹೊರ ಬಂದಾಗ ಇವರಿಗೆ ಎಚ್ಚರ ಇರಲಿಲ್ಲ.. ಹಾಗಾಗಿ ಮಗುವಿಗೆ ಉಸಿರಾಟದ ತೊಂದರೆ
ಆಗಿದೆ... ಇನ್ನೊಂದು ವಿಷಯ ಎಂದರೆ ಹೊಕ್ಕಳ ಬಳ್ಳಿ ಮಗುವಿನ ಕುತ್ತಿಗೆಯ ಸುತ್ತಲೂ ಬಂದು ಮಗು ಗರ್ಭದಲ್ಲೇ
ಇರುವಾಗ ವಿಸರ್ಜನೆ ಮಾಡಿಕೊಂಡಿದೆ ಮತ್ತು ಅದು ಮಗುವಿನ ಮೂಗಿನ ಮೂಲಕ ಶ್ವಾಸಕೋಶ ಸೇರಿದೆ... ಮೆದುಳಿಗೆ
ಆಮ್ಲಜನಕದ ಸರಬರಾಜು ಆಗಿದೆಯೋ ಇಲ್ಲವೋ ಎನ್ನುವ ಅನುಮಾನವೂ ನಮಗಿದೆ..." ಎಂದರು..
ನಿಂತ ನೆಲ ಕುಸಿದ ಅನುಭವ ನನಗೆ... ಕೈಯಿ ಸಿಗರೇಟು ಹುಡುಕುತ್ತಿತ್ತು... ಅವರೇ ಮುಂದುವರಿದು
" ಈಗ ಏನೂ ಹೇಳಲು ಬರುವುದುಲ್ಲ... ಆಕ್ಷಿಜನ್ ಬಾಕ್ಸ್ ನಲ್ಲಿ ಇಟ್ಟಿದ್ದೇನೆ... ಈ ಸಮಯದಲ್ಲಿ
ಯಾವುದೇ ಆಸ್ಪತ್ರೆಗೆ ಹೋದರೂ ಮಾಡುವುದು ಇದನ್ನೇ... ಹಾಗಾಗಿ ಇನ್ನೂ ಸ್ವಲ್ಪ ಹೊತ್ತು ಕಾಯೋಣ... ಉಸಿರಾಟ
ಸರಿಯಾದ ಬಳಿಕ ಮಣಿಪಾಲಿಗೆ ಕರೆದುಕೊಂಡು ಹೋಗಿ " ಎಂದರು ಅವರು... ನಾನು ಆಗಲೇ ಡೆಲಿವರಿ ಮಾಡಿದ
ಡಾಕ್ಟರ್ ಹುಡುಕಿಕೊಂಡು ಹೊರಟೆ... ಮಗು ಹೊಟ್ಟೆಯಲ್ಲೇ ವಿಸರ್ಜನೆ ಮಾಡಿಕೊಂಡರೆ, ಹೊಕ್ಕಳ ಬಳ್ಳಿ ಸುತ್ತು
ಹಾಕಿಕೊಂಡರೆ ಸ್ಕ್ಯಾನಿಂಗ್ ಮಾಡಿದಾಗ ಗೊತ್ತಾಗುವುದಿಲ್ಲವಾ...? ಇವರ ಆಸ್ಪತ್ರೆಯ ಸ್ಕ್ಯಾನಿಂಗ್ ಮಸಿನ್
ಕೆಟ್ಟಿದ್ದರೆ ಬೇರೆಯವರ ಬಳಿ ಕಳಿಸಬಹುದಿತ್ತಲ್ಲ....? ತಲೆ ತುಂಬಾ ಪ್ರಶ್ನೆಗಳೇ ತುಂಬಿತ್ತು....
ಉತ್ತರ ಹೇಳುವವರು ಯಾರೂ ಇರಲಿಲ್ಲ...
ಅಷ್ಟರಲ್ಲೇ ಅದೇ ಮಕ್ಕಳ ಡಾಕ್ಟರ್ ಕರೆದರು... " ಮಗುವಿನ ಉಸಿರಾಟ ಸರಿಯಾಗುತ್ತಾ ಇದೆ...
ಕೂಡಲೇ ಮಣಿಪಾಲಿಗೆ ಕರೆದುಕೊಂಡು ಹೋಗಿ" ಎಂದ ಅವರು ಅಂಬುಲನ್ಸ್ ಗೆ ಕರೆ ಮಾಡಿದರು... ಮುಂದಿನ
ಮೂರೇ ತಾಸಿನಲ್ಲಿ ಮಣಿಪಾಲಿನ ಐ.ಸಿ.ಯು ನಲ್ಲಿ ನನ್ನ ಮಗುವಿತ್ತು... ನನ್ನಾಕೆ ಇನ್ನೂ ಊರಲ್ಲೇ ಇದ್ದಳು...
ಇಲ್ಲಿಗೆ ತಂದ ಒಂದು ವಾರದ ತನಕವೂ ನಮಗೆ ಮಗುವಿಗೆ ಏನಾಗಿದೆ, ಯಾಕೆ ಹೀಗಾಯ್ತು ಎನ್ನುವ ಸರಳ ಪ್ರಶ್ನೆಗಳಿಗೂ
ಉತ್ತರ ದೊರಕಲಿಲ್ಲ... ನನಗೆ ನನ್ನ ಮಗು ಸರಿಯಾಗಬೇಕಿತ್ತು ಅಷ್ಟೇ... ನನ್ನ ಮಗುವಿನ ಮುಂದೆ ಮತ್ತೆಲ್ಲಾ
ಪ್ರಶ್ನೆಗಳೂ ಗೌಣವಾಗಿದ್ದವು...
ಮಣಿಪಾಲ್ ಡಾಕ್ಟರ್ ಗಳು ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದರು.... ಅವರ ಪ್ರಯತ್ನ ಕೈಗೂಡುವ
ಲಕ್ಷಣ ಒಂದು ದಿನ ಕಂಡರೆ , ಇನ್ನೊಂದು ದಿನ ಕಾಣುತ್ತಿರಲಿಲ್ಲ... ದಿನಾಲೂ ಹೋಗಿ ಮಗುವನ್ನು ನೋಡಿ
ಬರುತ್ತಿದ್ದೆ... ಮಗುವಿನಲ್ಲಿ ಏನೂ ಚಲನೆ ಇರಲಿಲ್ಲ.. ಕಣ್ಣು ಮುಚ್ಚೇ ಇತ್ತು... ಮಗು ಅಳುತ್ತಲೂ
ಇರಲಿಲ್ಲ..
ಡಾಕ್ಟರ್ ಕೇಳಿದರೆ " ಈಗ ಏನೂ ಹೇಳಲು ಬರುವುದಿಲ್ಲ, ಸ್ವಲ್ಪ ದಿನ ಕಾಯಬೇಕು.. ಸ್ವಲ್ಪ
ಟೆಸ್ಟ್ ಸಹ ಮಾಡಲಿಕ್ಕಿದೆ.... ಎಂದು ಹೇಳುತ್ತಿದ್ದರು..
ಇಲ್ಲಿಗೆ ಬಂದ ಹದಿನೈದು ದಿನದ ನಂತರ ನನ್ನನ್ನು ಒಳಗೆ ಕರೆದುಕೊಂಡು ಹೋದ ಡಾಕ್ಟರ್ ನನ್ನ ಮಗುವನ್ನು
ತೋರಿಸಿದರು.. ಪ್ರಶಾಂತ ನಿದ್ರೆಯಲ್ಲಿತ್ತು ನನ್ನ ಮಗು... ಈಗಷ್ಟೇ ಸ್ನಾನ ಮಾಡಿಸಿ ಮಲಗಿಸಿದ ಹಾಗಿತ್ತು...
ಆದರೆ ಚಲನೆ ಇರಲಿಲ್ಲ, ಉಸಿರಾಟದ ತೊಂದರೆ ಈಗಲೂ ಇತ್ತು... ಡಾಕ್ಟರ್ ನನಗೆ ಮಗುವಿನ ತಲೆಯ
ಸುತ್ತ ತೊರಿಸಿ ಹೇಳಿದರು... " ಹೆರಿಗೆಯ
ಸಮಯದಲ್ಲಿ ಮಗು ಅರ್ಧ ಹೊರ ಬಂದಾಗ ಮಗುವಿನ ತಲೆಯನ್ನು ಇಕ್ಕಳ ಉಪಯೋಗಿಸಿ ಹೊರ ತೆಗೆದಿದ್ದಾರೆ... ಹಾಗಾಗಿ,
ಮಗುವಿನ ತಲೆಗೆ ಪೆಟ್ಟಾಗಿದೆ... ಹೊಕ್ಕಳ ಬಳ್ಳಿ ಕುತ್ತಿಗೆಗೆ ಸುತ್ತಿಕೊಂಡೆದೆ... ಮಗು ಗರ್ಭದಲ್ಲೇ
ಮಲವಿಸರ್ಜನೆ ಮಾಡಿಕೊಂಡ ಕಾರಣ, ಮೂಗಿನಲ್ಲಿ ಹೋಗಿ ಶ್ವಾಸಕೋಶ ಬಂದ್ ಆಗಿದೆ... ಮೆದುಳಿಗೂ ಆಮ್ಲಜನಕ
ಪೂರೈಕೆ ಆಗಿಲ್ಲ... ಹಾಗಾಗಿ ಮುಂದಕ್ಕೆ ಮಗುವಿನ ಬೆಳವಣಿಗೆ ಸರಿ ಆಗತ್ತೆ ಅನ್ನುವ ಬರವಸೆ ಇಲ್ಲಾ...
"
ಕಾದ ಕಬ್ಬಿಣ ಸುರಿದ ಹಾಗೆ ಆಯ್ತು.... ಮಾತು ಹೊರಡಲಿಲ್ಲ... ಮೈ ಬೆವರುತ್ತಿತ್ತು ಅಂಥಹ ಏ.ಸಿ.
ಯಲ್ಲೂ.... ಅವರೂ ಇನ್ನೂ ಮುಂದುವರಿದು " ಈಗ ಮಗು ಜೀವ ಆಕ್ಷಿಜನ್ ಪೂರೈಕೆಯ ಮೇಲೆ ನಿಂತಿದೆ.. ಇದರ ಪೂರೈಕೆ ನಿಲ್ಲಿಸಿದರೆ....
" ಒಂದು ಕ್ಷಣ ನಿಂತು " ಮಗು ಸಾಯತ್ತೆ " ಅಂದರು... ನನಗೆ ಅಳು ತಡೆಯಲಾಗಲಿಲ್ಲ... ಈ ಮಗುವನ್ನು ಎತ್ತಲಿಲ್ಲ...ಮುದ್ದಾಡಿರಲಿಲ್ಲ...
ಮಗುವಿನ ಮುಖವನ್ನೂ ಸರಿಯಾಗಿ ನೋಡಿರಲಿಲ್ಲ... ಆದರೂ...ನನ್ನ ಅಂಶವನ್ನು ಹಂಚಿಕೊಂಡು ಹುಟ್ಟಿದ ಮಗುವಾಗಿತ್ತು...
ಕಣ್ಣಲ್ಲಿ ನೀರು ತುಂಬಿ ಬಂತು.... ಡಾಕ್ಟರ್ ನನ್ನ ಹೆಗಲ ಮೇಲೆ ಕೈ ಹಾಕಿ ಹೇಳಿದರು... " ಸಮಾಧಾನ ಮಾಡಿಕೊಳ್ಳಿ, ಇದೆಲ್ಲಾ ನಮ್ಮ ಕೈಯಲ್ಲಿ ಇರಲ್ಲ... ಮೇಲಿನವನು
ಆಡಿಸುತ್ತಾನೆ, ನಾವು ಆಡಬೇಕು.... ಯಾರ ಹಣೆಬರಹದಲ್ಲಿ
ಎಷ್ಟು ಆಯಸ್ಸು ಇರತ್ತೋ, ಅಷ್ಟೇ ದಿನ ಬದುಕಿರೋದು.... ಅದನ್ನು ತಪ್ಪಿಸಲು ಯಾರಿಂದಲೂ ಆಗಲ್ಲ..."
ನಾನು ಡಾಕ್ಟರನ್ನ ತಬ್ಬಿ ಹಿಡಿದೆ.... ಕಣ್ಣಲ್ಲಿ ನೀರು ನಿಲ್ಲುತ್ತಿರಲಿಲ್ಲ.."ಈಗ ಒಂದು
ವಿಷಯವನ್ನು ನಿಧಾನವಾಗಿ ಯೋಚಿಸಿ.... ಈ ಮಗು ಹೀಗೆ ಬೆಳೆದರೆ ಖಂಡಿತವಾಗಿಯೂ ಅಂಗವಿಕಲವಾಗಿಯೇ ಬೆಳೆಯತ್ತೆ..
ಇಂಥಾ ಮಗುವನ್ನು ನೋಡಿಕೊಳ್ಳಲೂ ನಿಮಗೆ ನಿಮ್ಮ ಕುಟುಂಬದವರಿಗೆ ತುಂಬಾ ತಾಳ್ಮೆ ಬೇಕು... ಆರ್ಥಿಕವಾಗಿಯೂ
ಗಟ್ಟಿತನ ಬೇಕು... ಈಗ ಮಗು ಬರಿಯ ಆಮ್ಲಜನಕ ಸಹಾಯದಿಂದ ಅಷ್ಟೇ ಬದುಕಿದೆ.... ಅದನ್ನ ನಿಲ್ಲಿಸಿದರೆ
ಖಂಡಿತ ಮಗು ಸಾಯತ್ತೆ..... ಇನ್ನು ನಿಮ್ಮ ನಿರ್ಧಾರ ಹೇಳಿ...ನೀವು ಹೇಳಿದಂತೆ ನಾವು ಕೇಳುತ್ತೇವೆ...
" ಎಂದು ಹೇಳಿ ಅವರು ಹೊರಟರು.... ನಾನು ಹೊರಕ್ಕೆ ಬಂದೆ.. ಬರುವ ಮೊದಲೊಮ್ಮೆ ಮಗುವಿನತ್ತ ನೋಡಿದೆ...
ಅದೇ ಪ್ರಶಾಂತ ನಿದ್ರೆ...
ನನಗೆ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಶಬ್ಧ... ಕಣ್ಣಲ್ಲಿ ನೀರು ಇಂಗಿತ್ತು.... ಡಾಕ್ಟರ್ ಹೇಳಿದ
ಕೊನೆಯ ಮಾತು ಮಾರ್ಧನಿಸುತ್ತಿತ್ತು.... ನನ್ನ ತೀರ್ಮಾನವೇ ಮಗುವಿನ ಹಣೆಬರಹ ನಿರ್ಧರಿಸುತ್ತದೆ ಎಂದಾದರೆ
ದೇವರು ಬರೆದ ಹಣೆಬರಹದ ಗತಿ ಏನು..? ಮುಂದೆ ಅಂಗವಿಕಲವಾಗಿ ಬೆಳೆಯುವ ಮಗುವನ್ನು ದಿನಾಲೂ ನೋಡುತ್ತಾ
ನೋವು ಅನುಭವಿಸಬೇಕಾ..? ನಾನು ನನ್ನಾಕೆ ಬದುಕಿರುವ ತನಕ ಈ ಮಗುವಿನ ಸೇವೆ ಮಾಡಬಹುದು... ನಮ್ಮ ನಂತರ.....???
ಮಗು ದೈಹಿಕವಾಗಿ ತಾನೂ ನೋವು ತಿನ್ನಬೇಕು, ಮಾನಸಿಕವಾಗಿ ನಮಗೂ ನೋವು ತಿನ್ನಿಸಬೇಕಾ..? ಇಂಥಹ ನರಕ
ವೇದನೆಗಿಂತ ಮಗು ಕಣ್ಣು ಬಿಡುವ ಮೊದಲೇ ಅಂತ್ಯ ಕಂಡರೆ...? .. ಮನಸ್ಸು ಹೊಯ್ದಾಟಕ್ಕಿಳಿದಿತ್ತು....
ನನ್ನ ಅಂಶ ಹಂಚಿಕೊಂಡು ಹುಟ್ಟಿದ ಮಗುವನ್ನು ನನ್ನ ತೀರ್ಮಾನವೇ ಕೊಲ್ಲತ್ತಾ...?
ಗಟ್ಟಿ ನಿರ್ಧಾರ ಮಾಡಿ ಒಳ ಹೋದೆ... ಡಾಕ್ಟರ್ ನನ್ನತ್ತ ’ ಏನು ನಿಮ್ಮ ತೀರ್ಮಾನ .?’ ಎನ್ನುವಂತೆ
ನೋಡಿದರು... ನನ್ನ ನಾಲಿಗೆ ಪಸೆ ಆರಿತ್ತು... ಆದರೂ ಧೈರ್ಯ ಮಾಡಿ " ಆಕ್ಷಿಜನ್ ಪೂರೈಕೆ ನಿಲ್ಲಿಸಿ
ಡಾಕ್ಟರ್ " ಎಂದೆ , ಕಣ್ಣಲ್ಲಿ ನೀರು ನಿಲ್ಲಲಿಲ್ಲ.... ಈ ನಿರ್ಧಾರ ತೆಗೆದುಕೊಳ್ಳುವ ಮೊದಲು
ನನ್ನಾಕೆಯನ್ನೂ , ಅಪ್ಪ ಅಮ್ಮನನ್ನೂ ಕೇಳಲಿಲ್ಲ... ಅವರಲ್ಲಿ ಕೇಳಿದ್ದರೆ ಖಂಡಿತ ಅವರು ನನ್ನ ನಿರ್ದಾರವನ್ನು
ಬೆಂಬಲಿಸುತ್ತಿರಲಿಲ್ಲ... ಕೆಲವೊಮ್ಮೆ ವ್ಯಾವಹಾರಿಕವಾಗಿ ಯೋಚಿಸಬೇಕಾಗುತ್ತದೆ... ಅದು ಜೀವದ ಪ್ರಶ್ನೆಯೇ
ಆದರೂ........
ಡಾಕ್ಟರ್ ಮಗುವಿನ ಆಮ್ಲಜನಕದ ಲೆಕ್ಕ ನೋಡುತ್ತಿದ್ದರು.... ೯೫ ಅಂದಿತ್ತು... " ಸರ್, ಇನ್ನು
ಎಷ್ಟು ಹೊತ್ತು....." ಅಂತ ಕೇಳಿದೆ... ಅವರಿಗೆ ಅರ್ಥವಾಯಿತು ಅನ್ಸತ್ತೆ.... " ಸಾಮಾನ್ಯವಾಗಿ
ಆಮ್ಲಜನಕದ ಪ್ರಮಾಣ ೯೫ ಕ್ಕಿಂತ ಹೆಚ್ಚಿರಬೇಕು.... ಕ್ರಮೇಣ ಇದರ ಪ್ರಮಾಣ ಕಡಿಮೆಯಾಗುತ್ತಾ ಬಂದು ೫೦
ಕ್ಕಿಂತ ಕಡಿಮೆಗೆ ಬರುತ್ತದೆ... ಹೆಚ್ಚೆಂದರೆ ಇನ್ನು ಒಂದು ತಾಸು..." ಎಂದರು ಅವರು... ಆಮ್ಲಜನಕದ
ಪೂರೈಕೆ ನಿಲ್ಲಿಸಿದರು..ನಾನು ಒಮ್ಮೆ ಮಗುವನ್ನು ನೋಡಿದೆ, ಕೊನೆಯ ಬಾರಿ ಎಂಬಂತೆ... ಆಮ್ಲಜನಕ ಸಿಗದೇ
ಮಗು ಸಣ್ಣಗೆ ನಡುಗಿತು.... ನಾನು ಅವಳಿದೆ ಚುಚ್ಚಿದ್ದ ಕಂಪ್ಯೂಟರ್ ಪರದೆ ನೋಡಿದೆ...
೯೨ ಎಂದಿತ್ತು.....
ಅಲ್ಲೇ ನಿಂತೆ....
ನಾನು ಮಾಡುತ್ತಿದ್ದುದು ಸರೀನಾ... ತಪ್ಪಾ....
ಇನ್ನೊಮ್ಮೆ ನೋಡಿದೆ...
೮೮....
ಮಗು ಕಡೆ ನೋಡಿದೆ...
ಕೈ ಕಾಲು ಆಡಿಸುತ್ತಿತ್ತು....
ಧುಖಃ ಉಮ್ಮಳಿಸುತ್ತಿತ್ತು....
ಆಮ್ಲಜನಕ ಇದ್ದಾಗ ಕೈ ಕಾಲು ಆಡಿಸಿರಲಿಲ್ಲ..ಈಗ ಕಡಿಮೆ ಆದಾಗ ಕೈ ಕಾಲು ಆಡಿಸುತ್ತಿತ್ತು...
ನನಗೆ ಅಲ್ಲಿ ನಿಲ್ಲಲಾಗಲಿಲ್ಲ.... ಅದೇ ಸಮಯಕ್ಕೆ ಡಾಕ್ಟರ್ " ನೀವು ಹೊರಗೆ ಬನ್ನಿ, ಆಮ್ಲಜನಕ
ಇಳಿಕೆಯ ಗತಿ ನೋಡಿದರೆ ಹೆಚ್ಚೆಂದರೆ ಒಂದು ತಾಸು.... ಬನ್ನಿ ಹೊರಗೆ ಕುಳಿತುಕೊಳ್ಳಿ... ನಾನು ಆಫಿಸಿಗೆ
ಹೋಗಿ ಬರುತ್ತೇನೆ.... ಅಲ್ಲಿಯವರೆಗೆ ಹೊರಗೆ ಕುಳಿತಿರಿ " ಎಂದು ನನ್ನನ್ನು ಹೊರಗೆ ಕರೆದುಕೊಂಡು
ಬಂದರು... ನನಗೂ ಅದೇ ಬೇಕಾಗಿತ್ತು.... ಕೊನೆಯ ಸಾರಿ ಮಗುವಿನ ಮುಖ ನೋಡುವ ಮನಸ್ಸಾದರೂ ನೋಡಲಿಲ್ಲ....
******************
’ಡಾಕ್ಟರ್ ಬಂದರು ’ ಎನ್ನುವ ಮಾತು ಕೇಳಿ ವಾಸ್ತವಕ್ಕೆ ಬಂದೆ... ಅಲ್ಲಿದ್ದ ನವ ಜೋಡಿ ಹೊರಟು
ಹೋಗಿತ್ತು.... ಡಾಕ್ಟರ್ ಬರುತ್ತಾ ಇದ್ದರು.... " ಒಳಗೆ ಬರುವ ಧೈರ್ಯ ಇದ್ದರಷ್ಟೇ ಬನ್ನಿ....
ಇಲ್ಲದಿದ್ದರೆ ಬೇಡ... ಮುಂದಿನ ಕಾರ್ಯ ನಾವೇ ಮಾಡುತ್ತೇವೆ.... " ಎಂದರು.... " ಇಲ್ಲ,
ನಾನು ಬರುತ್ತೇನೆ.." ಎಂದು ಹೇಳಿ ಅವರ ಹಿಂದೆಯೇ ಹೋದೆ... ಮಗುವಿನತ್ತ ನೋಡುವ ಧೈರ್ಯ ಇರಲಿಲ್ಲವಾದರೂ
ನೋಡಿದೆ.... ಮಗು ನಿಷ್ಚಲವಾಗಿತ್ತು.... ಆಮ್ಲಜನಕ ಪೂರೈಕೆ ಇರಲಿಲ್ಲ.... ಕಂಪ್ಯೂಟರ್ ಕಡೆ ನೋಡಿದೆ.....
ಆಶ್ಚರ್ಯ....೯೫ ಎಂದಿತ್ತು..... ನಾನು ಡಾಕ್ಟರ್ ಕಡೆ ನೋಡಿದೆ... ಅವರೂ ನನ್ನತ್ತ ನೋಡುತ್ತಿದ್ದರು.....
ಅಲ್ಲಿದ್ದ ನರ್ಸ್ ಕರೆದು ಕೇಳಿದರು... " ಸರ್, ಮಗುವಿಗೆ ಆಕ್ಷಿಜನ್ ನಿಲ್ಲಿಸಿದಾಗ ಅದರ ಲೆವೆಲ್
೯೫ ಇತ್ತು.... ಕ್ರಮೇಣ ಅದು ೭೫ ರ ತನಕ ಬಂತು... ಅದಾದ ನಂತರ ಮಗು ಒಮ್ಮೆ ಸೀನಿತು... ಅದಾದ ನಂತರ
ಆಕ್ಷಿಜನ್ ಲೆವೆಲ್ ಮೇಲೇರುತ್ತಾ ಬಂತು.... ನಮ್ಗೂ ಅರ್ಥ ಆಗ್ತಾ ಇಲ್ಲಾ ಸರ್.." ಎಂದರು ಆಕೆ....
ಡಾಕ್ಟರ್ ನನ್ನತ್ತ ತಿರುಗಿ... " ಈ ಮಗುವಿನ ಆಯುಶ್ಯ ನಮ್ಮ ಕೈಲಿ ಇಲ್ಲ ಅಂತ ನಿರೂಪಿಸಿದ ಹಾಗೆ
ಆಯಿತು.... ಕ್ಷಣ ಕಾಲ ನಾವು ಮೇಲಿನವನನ್ನು ಮರೆತೆವು.... ನಾವೇ ಹಣೆಬರಹ ತಿದ್ದಲು ಹೊರಟೆವು....
ಆದ್ರೆ ಸೋತೆವು..." ಎಂದರು... ನಾನು ಮಗುವಿನ ಕಡೆ ನೋಡಿದೆ.... ಮಗು ಕಣ್ಣು ತೆರೆದ ಹಾಗಾಯಿತು...
ಕಪಾಳಕ್ಕೆ ಹೊಡೆದ ಅನುಭವ....
Jun 11, 2013
ಅಕ್ರಮ-ಸಕ್ರಮ.....
ತಲೆ ಎತ್ತಿ ನೋಡಿದೆ.... ಸರಿಯಾಗಿ ಓದಲಾಗಲಿಲ್ಲ ... ವಯಸ್ಸು ನಿವ್ರತ್ತಿಯ ಅಂಚಿಗೆ ಬಂದಿತ್ತು.... ಕಣ್ಣೂ ಕನ್ನಡಕದ ಸಹಾಯ ಪಡೆದಿತ್ತು... ಕನ್ನಡಕದ ಹಿಂದಿನ ಕಣ್ಣನ್ನು ಇನ್ನೂ ಕಿರಿದು ಮಾಡಿ ನೋಡಿದೆ.... ’ ವಿಶ್ವಾಯುಕ್ತ ಕಛೇರಿ ’ ಎಂದು ದೊಡ್ಡದಾಗಿ ಬರೆದಿತ್ತು... ಒಳಗೆ ಹೋದೆ.. ಯಾರೂ ಬಂದಿರಲಿಲ್ಲ... ಅಲ್ಲೇ ಇದ್ದ ಖಾಲಿ ಖುರ್ಚಿ ಮೇಲೆ ಕುಳಿತೆ... ನಾನೆಂದೂ ಈ ಕಛೇರಿಗೆ , ಈ ಕೆಲಸಕ್ಕಾಗಿ ಬರಬೇಕಾಗಿ ಬರಬಹುದು ಎಣಿಸಿರಲಿಲ್ಲ... ಆದರೂ ಬರಬೇಕಾಗಿ ಬಂತು... ಎಲ್ಲಾ ನನ್ನ ವಿಧಿ... ಕಛೇರಿಯ ಗುಮಾಸ್ತ ಬಂದ ಎನಿಸತ್ತೆ.... ನಾನು ಎದ್ದು ನಿಂತೆ... ಈ ಕಛೇರಿಯಲ್ಲಿ ಕೆಲಸ ಮಾಡುವ ಕತ್ತೆಗೂ ನಾವು ಗೌರವ ಕೊಡಬೇಕು..ಇಲ್ಲದಿದ್ದರೆ ಅವೂ ಒದೆಯುತ್ತವೆ, ಹಿಂದಿನಿಂದ...
"ಯಾರಿಗೆ ಸಿಗಬೇಕಿತ್ತು...?” ಕೇಳಿದ ಆತ... ನಾನು ಅವರ ಹೆಸರು ಹೇಳಿದೆ... (ನಿಮಗ್ಯಾಕೆ ಬಿಡಿ , ಅವರ ಹೆಸರು..) . " ಅಲ್ಲಿ ಕುಳಿತುಕೊಳ್ಳಿ, ಇನ್ನರ್ಧ ಘಂಟೆಯಲ್ಲಿ ಬರ್ತಾರೆ" ಎಂದ ಆತ.... ನಾನು ಆತ ಹೇಳಿದಲ್ಲಿಯೇ ಹೋಗಿ ಕುಳಿತೆ... ನಾನು ಕುಳಿತೆನಾದರೂ ಮನಸ್ಸು ಎರಡು ತಿಂಗಳ ಹಿಂದಕ್ಕೆ ಓಡಿತು....
*********************************
ಇದೊಂದೇ ಕೆಲಸ ಬಾಕಿ ಇತ್ತು... ನಾಳೆಯಿಂದ ಐದು ದಿನ ರಜೆ ಹಾಕಿದ್ದೆ... ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ರಜೆಗೆ ಬರ ಇರಲಿಲ್ಲ... ನಾಡಿದ್ದು ಮಗಳ ನಿಶ್ಚಿತಾರ್ಥ ಇದೆ.. ಎಲ್ಲಾ ರೆಡಿಯಾಗಿತ್ತು.. ಅಂತಿಮ ಹಂತದಲ್ಲಿ ಹೆಂಡತಿಯ ಅಪೇಕ್ಷೆ ಮನೆಯ ಎದುರಿಗೆ ಶಾಮಿಯಾನಾ ಹಾಕುವುದಾಗಿತ್ತು... ಎಲ್ಲದ್ದಕ್ಕೂ ದುಡ್ಡು ಹೊಂದಿಸಿಕೊಂಡಿದ್ದೆ.. ಇದಕ್ಕೆ ಮಾತ್ರ ಸ್ವಲ್ಪ ಹೆಚ್ಚಿಗೆ ದುಡ್ಡು ಬೇಕಾಗಿತ್ತು.. ನಮ್ಮ ಆಫೀಸಿನಲ್ಲಿ ಒಂದೆರಡು ಜನರ ಹತ್ತಿರ ಸಾಲ ಪಡೆದಿದ್ದೆ.. ಆದ್ರೆ, ಮತ್ತೆ ಅವರಲ್ಲಿ ಹಣ ಕೇಳಲು ಮನಸ್ಸು ಬಂದಿರಲಿಲ್ಲ.. ಎರಡೇ ತಿಂಗಳಲ್ಲಿ ನನ್ನ ನಿವ್ರತ್ತಿಯೂ ಇತ್ತು... ಮದುವೆಗೂ ಸಾಲ ಕೇಳಬೇಕಿತ್ತಲ್ಲ.. ಅದಕ್ಕೇ ಮನಸ್ಸು ಹಿಂಜರಿದಿತ್ತು.. ಯಾವುದೇ ಕೆಲಸಕ್ಕೂ ನಾನು ಲಂಚ ಮುಟ್ಟುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿತ್ತು.. ನನ್ನ ಮೇಲಧಿಕಾರಿ ಧಾರಾಳವಾಗಿ ಹಣ ತಿನ್ನುತ್ತಿದ್ದರೂ , ನಾನು ಅದನ್ನ ದೂರ ಇಟ್ಟಿದ್ದೆ..
ಇವತ್ತಿನ ಒಂದು ಕೆಲಸ ಬೇಗನೇ ಮಾಡಿ, ಬೇಗ ಮನೆಗೆ ಹೊರಡಲು ತಯಾರಾಗಿದ್ದೆ.. ಕೆಲಸ ಮುಗಿದಿತ್ತು, ಮೇಲಧಿಕಾರಿ ಸಹಿ ಮಾಡಿಸಿ ಇಟ್ಟಿದ್ದೆ. ಆತ ಸಹಿ ಮಾಡುವಾಗ "ಈ ಕೆಲಸ ಮಾಡಿ ಕೊಟ್ಟಿದ್ದಕ್ಕೆ ಅವರಿಂದ ಏನಾದರೂ ತೆಗೆದುಕೊಳ್ಳಿ ರಾಯರೆ.. ನಿಮ್ಮ ಮಗಳ ಮದುವೆ ಕೆಲಸಕ್ಕೆ ಸಹಾಯ ಆದೀತು.." ಎಂದರು.. ನಾನು " ಬೇಡ ಸರ್, ಹಣ ಬೇಕಾದರೆ ನಿಮ್ಮನ್ನೇ ಕೇಳುತ್ತೇನೆ" ಎಂದಿದ್ದೆ..... ಅವರಿಗೆ ನನ್ನ ಗುಣ ಗೊತ್ತಿತ್ತು.. ಸುಮ್ಮನೆ ತಲೆಯಾಡಿಸಿದರು.... ನಾನು ಹೊರಗೆ ಬರುತ್ತಾ ಇರುವಾಗ " ಅವರನ್ನು ಹಾಗೆ ಕಳಿಸಬೇಡಿ, ನನ್ನ ಹತ್ತಿರ ಕಳಿಸಿ.... ಸ್ವಲ್ಪ ಮಾತನಾಡಬೇಕು ಅವರಲ್ಲಿ" ಎಂದಿದ್ದರು..... ನನಗೆ ಗೊತ್ತಿತ್ತು , ಅವರ ಹತ್ತಿರ ಮಾತನಾಡಲಿಕ್ಕೆ ಏನಿದೆ ಎನ್ನುವುದು.... ನಾನು ’ ಆಯ್ತು ಸರ್’ ಎಂದಿದ್ದೆ.....
ಸ್ವಲ್ಪ ಹೊತ್ತಿನಲ್ಲೇ ಆತ ಬಂದಿದ್ದ.... ನನ್ನ ಹತ್ತಿರ ಬಂದು ಫೈಲ್ ಪಡೆದ ಆತ... ನನ್ನ ಕೈಯಲ್ಲಿ ಒಂದು ಕವರ್ ಕೊಟ್ಟ.... ’ ಏನೂ ಬೇಡ’ ಎಂದೆ..... ಆತ " ನನಗೆ ಗೊತ್ತು ಸರ್, ನೀವು ಏನೂ ತೆಗೆದುಕೊಳ್ಳುವುದಿಲ್ಲ ಎಂದು.. ನಿಮ್ಮ ಮಗಳ ಮದುವೆಗೆ ಏನಾದರೂ ಸಹಾಯ ಆಗತ್ತೆ ಸರ್... ಇದು ನಾನು ಪ್ರೀತಿಯಿಂದ ಕೊಡುತ್ತಿರುವುದು... ನೀವು ಹೆದರಿಸಿ ತೆಗೆದುಕೊಳ್ಳುತ್ತಿರುವುದಲ್ಲ..... ಇದು ತಪ್ಪಲ್ಲ ಸರ್...." ಎಂದರು.... ಮನೆಯಲ್ಲಿದ್ದ ಖರ್ಚು ನೆನಪಾಯಿತು...ಇಷ್ಟು ವರ್ಷ ನನ್ನ ನಿಯತ್ತಿನ ಕೆಲಸ, ಇವತ್ತಿನ ತುರ್ತು ಅವಶ್ಯಕತೆಯ ಮುಂದೆ ಗೌಣವಾಯಿತು..... ಕೈಲಿದ್ದ ಕವರ್ ನನ್ನ ಕೈಚೀಲ ಸೇರಿತು..... ಆತ ಖುಶಿಯಿಂದ ನನ್ನ ಮೇಲಧಿಕಾರಿಯನ್ನು ಭೇಟಿಯಾಗಲು ಹೊರಟ....
ನಾನು ನನ್ನ ಕೆಲಸದಲ್ಲಿ ಮುಳುಗಿದೆ.... ಆಫೀಸಿನ ಹೊರಗಡೆ ಗೌಜಿ ಕೇಳಿಸುತ್ತಿತ್ತು..... ಹತ್ತು ಜನ ಒಳಗಡೆ ಬಂದರು... ಸೀದಾ ನನ್ನ ಮೇಲಧಿಕಾರಿಯ ಕೊಠಡಿಗೆ ಹೊಕ್ಕರು... ಅವರಲ್ಲಿ ಇಬ್ಬರು ಹೊರಗೆ ಬಂದು ನನ್ನ ಟೇಬಲ್ ಹುಡುಕುತ್ತಿದ್ದರು.... ನಾನು "ಏನು ಬೇಕು ನಿಮಗೆ, ಯಾರು ನೀವು.." ಕೇಳಿದೆ.... ಅವರು ಕೂಲ್ ಆಗಿ " ವಿಶ್ವಾಯುಕ್ತ " ಎಂದರು... ಬೆನ್ನ ಹಿಂದೆ ಬೆವರಿಳಿಯುತ್ತಿತ್ತು... ಎಂದೂ ಹಣ ತೆಗೆದುಕೊಳ್ಳದ ನಾನು ಇವತ್ತು ಜಾರಿ ಬಿದ್ದಿದ್ದೆ... ದೇವರನ್ನು ಪ್ರಾರ್ಥಿಸುತ್ತಿದ್ದೆ.... ನನ್ನ ಟೇಬಲ್ ನಲ್ಲಿ ಏನೂ ಸಿಗಲಿಲ್ಲ....ಏನೂ ಇರಲಿಲ್ಲ ಕೂಡ..... ಆತ ನನ್ನ ಪಕ್ಕದ ಟೇಬಲ್ ಕಡೆ ಹೋದ... ನಾನು ಬಚಾವಾದೆ ಎನಿಸಿತು....
ನನ್ನ ಮೇಲಧಿಕಾರಿ ಕೊಠಡಿಗೆ ಹೋದವರು ಹೊರಕ್ಕೆ ಬಂದರು....ನನ್ನ ಮೇಲಧಿಕಾರಿಯನ್ನು ಬಂಧಿಸಿದ್ದರು.... ನನಗೆ ಹಣ ಕೊಟ್ಟವನೇ ದೂರು ನೀಡಿದ್ದನಂತೆ.... ಆತನೂ ಅವರ ಪಕ್ಕದಲ್ಲಿದ್ದ.... ಆತನ ಮುಖದಲ್ಲಿ ನಗು ಇತ್ತು.... ವಿಶ್ವಯುಕ್ತದ ಹಿರಿಯ ಅಧಿಕಾರಿ ಅವರ ಕಿರಿಯ ಅಧಿಕಾರಿಯನ್ನು ಕರೆದು ಕೇಳಿದ.." ಇಲ್ಲೇನಾದರು ಸಿಕ್ಕಿತಾ...?" ಅವರು ’’ಇಲ್ಲಾ ಸಾರ್, ಏನೂ ಇಲ್ಲ’ ಅಂದರು.... ಆತ "ಎಲ್ಲಾ ಬ್ಯಾಗ್ ಗಳನ್ನು ಚೆಕ್ ಮಾಡಿದ್ರಾ..?" ಕೇಳಿದರು ಆತ.... ಅವರ ಕಣ್ಣು ನನ್ನ ಬ್ಯಾಗ್ ಮೇಲೆ ಬಿತ್ತು.... ನನ್ನ ಬ್ಯಾಗನ್ನು ಎಳೆದು ಬಿಚ್ಚಿದರು... ನನ್ನ ಉಸಿರು ಸಿಕ್ಕಿಹಾಕಿಕೊಂಡ ಹಾಗಾಯಿತು... ನನ್ನ ಬ್ಯಾಗಿನಲ್ಲಿ ಇದ್ದ ಕವರ್ ತೆಗೆದು ಅದರಲ್ಲಿದ್ದ ಹಣ ತೆಗೆದರು.... "ಇದು ಯಾರು ಕೊಟ್ಟಿದ್ದು ...?" ಕೇಳಿದರು.... ನನ್ನ ಜೀವ ಬಾಯಿಗೆ ಬಂದಿತ್ತು....."ನನ್ನದೇ ಸರ್... ಮನೆಯಿಂದ ತಂದಿದ್ದು...." ಎಂದೆ... ನಾಲಿಗೆಯ ಪಸೆ ಆರಿತ್ತು... "ಹಣ ಎಷ್ಟಿದೆ ಇದರಲ್ಲಿ..?" ನನ್ನ ಎದೆ ಬಡಿತ ಒಂದು ಕ್ಷಣ ನಿಂತೇ ಬಿಟ್ಟಿತು.... ಆತ ಕೊಟ್ಟ ಕವರನಲ್ಲಿ ಎಷ್ಟಿದೆ ಅಂತ ನೋಡದೆ ತೆಗೆದುಕೊಂಡಿದ್ದೆ... ನನ್ನ ಬಾಯಿ ಹೊರಳಲಿಲ್ಲ...ಏನಂತ ಹೇಳಲಿ.... ಎಷ್ಟಿದೆ ಅಂತ ಹೇಳಲಿ.... ಬಾಯಿ ತೆರೆಯುವವನಿದ್ದೆ... ಅಷ್ಟರಲ್ಲೇ ಆತ ನನಗೆ ಕವರ್ ಕೊಟ್ಟವರಲ್ಲಿ ಕೇಳಿದ "ಇವರಿಗೂ ಕೊಟ್ಟಿದ್ದೀರೇನ್ರಿ..? ಈ ಕವರ್ ನಿಮ್ಮದೇನಾ.....? ನೀವೇ ಕೊಟ್ಟಿದ್ದಾ..?"
ನಾನು ಆತನ ಮುಖವನ್ನೇ ನೋಡುತ್ತಿದ್ದೆ... ಮರಣದಂಡಣೆ ಶಿಕ್ಷೆ ಕೊಡುವ ನ್ಯಾಯಾಧೀಶನ ಸ್ಥಾನ ಆತನದಾಗಿತ್ತು ನನ್ನ ಪಾಲಿಗೆ.... ಆತ ಸಾವಧಾನವಾಗಿ ನನ್ನ ಕಡೆ ತಿರುಗಿದ.... "ಇಲ್ಲಾ ಸಾರ್, ನಾನು ಇವರಿಗೆ ಕೊಡಲಿಲ್ಲ.... ಇವರು ತುಂಬಾ ಪ್ರಾಮಾಣಿಕರು ಸಾರ್" ಎಂದ... ನನಗೆ ಹೋದ ಪ್ರಾಣ ವಾಪಸ್ ಬಂದ ಅನುಭವ... ಆತನೆಡೆಗೆ ಭಕ್ತಿ ಭಾವದಿಂದ ನೋಡಿದೆ.... ಆತ ನನ್ನ ಪಾಲಿಗೆ ದೇವರಾಗಿ ಬಿಟ್ಟಿದ್ದ... ಅಷ್ಟರಲ್ಲೇ ವಿಶ್ವಾಯುಕ್ತ ಹಿರಿಯ ಅಧಿಕಾರಿ ” ಅವರು ಪ್ರಾಮಾಣಿಕರೋ ಅಲ್ಲವೋ ಅಂದ ನಿರ್ಧಾರ ಮಾಡಬೇಕಾದವರು ನಾವು....ನೀವಲ್ಲ.... ಬನ್ನಿ ಇಲ್ಲಿ.... ಇದನ್ನೂ ಸೀಝ್ ಮಾಡಿ" ಎಂದವರೇ ಆ ಕವರ್ ನ್ನು ತಮ್ಮ ಕಿರಿಯ ಅಧಿಕಾರಿಗೆ ಹಸ್ತಾಂತರಿಸಿದರು..... ನನ್ನ ಪರಿಸ್ಥಿತಿ ಯಾರಿಗೂ ಬೇಡವಾಗಿತ್ತು... ಅಧಿಕಾರಿಗಳು ಮಹಜರ್ ಬರೆದು "ನಮ್ಮ ಆಫೀಸಿಗೆ ಬಂದು ಹೋಗಿ, ಮುಂದಿನ ಕೆಲಸಗಳು ಬೇಗನೇ ಮುಗಿಸಬೇಕು" ಎಂದು ಹೇಳುತ್ತಲೇ ಹೊರಟರು... ನಾನು ಅವರ ಹಿಂದೆಯೇ ಓಡಿದೆ.... ಅವರ ಜೀಪ್ ಧೂಳೆಬ್ಬಿಸುತ್ತಾ ಹೊರಟೇ ಹೋಯಿತು....
ಮಾರನೇ ದಿನ ಬೆಳಿಗ್ಗೆಯೆ ವಿಶ್ವಾಯುಕ್ತ ಆಫೀಸಿಗೆ ಹೋದೆ... ಇನ್ನೂ ಯಾರೂ ಬಂದಿರಲಿಲ್ಲ... ಅಲ್ಲೇ ಇದ್ದ ಖಾಲಿ ಖುರ್ಚಿ ಮೇಲೆ ಕುಳಿತೆ... ನಮ್ಮ ಆಫೀಸಿನ ಮೇಲೆ ದಾಳಿ ಮಾಡಿದ ಅಧಿಕಾರಿ ಬರುತ್ತಿದ್ದ.. ನಾನು ಅವನತ್ತಲೇ ಓಡಿದೆ.... ಆತ ನನ್ನನ್ನು ನೋಡಿ ನಕ್ಕ... ಅವಮಾನ ಎನ್ನಿಸಿತು.. ನಿವ್ರತ್ತಿಗೆ ಎರಡು ತಿಂಗಳಿರುವಾಗ ಪುಡಿಗಾಸಿಗೆ ಆಶೆಪಟ್ಟು , ಸಿಕ್ಕಿಬಿದ್ದು, ಇಲ್ಲಿಗೆ ಬರುವ ದರ್ದು ಇತ್ತಾ ಎನಿಸಿತು.... ಅದಕ್ಕೆಲ್ಲಾ ಯೋಚಿಸುವ ಹೊತ್ತು ಇದಲ್ಲ ಎನಿಸಿ ಆತನ ಹಿಂದೆಯೇ ಹೋದೆ... ಆತ ತನ್ನ ರೂಮಿಗೆ ಹೋದ , ನನಗೂ ಒಳಗೆ ಬರಲು ಸನ್ನೆ ಮಾಡಿದ... ನಾನು ಅವರ ಎದುರಿಗೆ ಕುಳಿತೆ...
"ಏನು ನಿಮ್ಮ ಕಥೆ ಹೇಳಿ... ಸರಕಾರ ನಿಮಗೆ ಸಂಬಳ ಕೊಡತ್ತಲ್ವಾ..? ಆದ್ರೂ ಯಾಕೆ ಎಂಜಲು ಕಾಸಿಗೆ ಕೈಯೊಡ್ಡುತ್ತೀರಾ...? ಈಗ ಜೈಲಿಗೆ ಹೋಗಬೇಕಾಗಿ ಬಂದಾಗ ಕಾಲು ಹಿಡಿಲಿಕ್ಕೆ ಬರ್ತೀರಾ.." ನನಗೆ ಇವರ ಮೇಲೆ ನಂಬಿಕೆ ಬಂತು.. ನನ್ನ ನಿಜ ಕಥೆ ಇವರಿಗೆ ಹೇಳಿಕೊಂಡರೆ ನನಗೆ ಸಹಾಯ ಮಾಡಬಹುದು ಎನಿಸಿತು... ನನ್ನ ಎಲ್ಲಾ ಕಥೆಯನ್ನೂ, ಎಲ್ಲೂ ತಪ್ಪದೇ ಹೇಳಿದೆ... ಆತ ಜೋರಾಗಿ ನಗಾಡಿದ.... ನನಗೆ ಪಿಚ್ಚೆನಿಸಿತು.... ಈತ ನನ್ನನ್ನು ನಂಬಿದರಾ ಅಥವಾ ನನ್ನ ಪರಿಸ್ಥಿತಿ ನೋಡಿ ನಗುತ್ತಿದ್ದಾರಾ ಎಂದು ತಿಳಿಯಲಿಲ್ಲ...
"ನೀವೇನ್ ಕಾಗಕ್ಕ ಗೂಬಕ್ಕನ ಕಥೆ ಹೇಳ್ತಾ ಇದೀರಾ ನಂಗೆ... ನಾನಿದನ್ನ ನಂಬಬೇಕಾ..? ನಿಮ್ಮ ಇಲಾಖೆಯಲ್ಲಿ ನಡೆಯುವಷ್ಟು ಭ್ರಷ್ಟಾಚಾರ ಇನ್ನೆಲ್ಲೂ ನಡೆಯಲ್ಲ.. ನೀವೆಲ್ಲಾ ಮನೆ ಮೇಲೆ ಮನೆ ಕಟ್ಟಿಸಿರ್ತೀರಾ ಅಲ್ವಾ...? ನಾವು ನಿಮ್ಮನ್ನು ಹಿಡಿದಾಗ ಸತ್ಯ ಹರಿಶ್ಚಂದ್ರನ ಪೋಸು ಕೊಡ್ತೀರಾ..ನಿಮ್ಮಂಥವರನ್ನು ಎಷ್ಟೋ ಜನರನ್ನ ನೋಡಿದ್ದೀನಿ ನಾನು...." ಕೂಗಲಿಕ್ಕೆ ಶುರು ಮಾಡಿದ ಆತ... ನನಗೆ ಅಳುವೇ ಬಂದಿತ್ತು... " ಸಾರ್ ನನ್ನ ನಿವ್ರತ್ತಿಗೆ ಇನ್ನು ಎರಡೇ ತಿಂಗಳಿದೆ... ಈಗ ಈ ಕೇಸಿನಲ್ಲಿ ಸಿಕ್ಕಿದರೆ ನನ್ನ ಪಿಂಚಣಿಗೆ , ಭವಿಷ್ಯನಿಧಿಗೆ ಎಲ್ಲದಕ್ಕೂ ತೊಂದರೆಯಾಗತ್ತೆ.. ದಯವಿಟ್ಟು ಯಾರನ್ನಾದರೂ ವಿಚಾರಿಸಿ ನನ್ನ ಬಗ್ಗೆ... ಅದರಲ್ಲೂ ನನ್ನ ಬಗ್ಗೆ ಯಾರೂ ನಿಮಗೆ ದೂರೇ ಕೊಟ್ಟಿಲ್ಲ.. ಆದರೂ ನನ್ನನ್ನ ಈ ಕೇಸಿನಲ್ಲಿ ಸಿಕ್ಕಿಸಿದ್ದೀರಾ ಸರ್..." ಬೇಡುವ ದನಿಯಲ್ಲಿ ಹೇಳಿದೆ....
ಆತ ಖುರ್ಚಿ ಮುಂದೆ ತಂದ... ನನ್ನಲ್ಲೇನೋ ಆಸೆ ಹುಟ್ಟಿತು... ಆತ ಸಣ್ಣ ದನಿಯಲ್ಲಿ " ನಿಮ್ಮನ್ನು ಈ ಕೇಸಿನಲ್ಲಿ ಬಿಡುತ್ತೇನೆ, ನನಗೆ ಒಂದು ಲಕ್ಷ ಕೊಡಿ" ಪಕ್ಕದಲ್ಲಿ ಬಾಂಬ್ ಬಿದ್ದ ಹಾಗಾಯಿತು... ಯಾರನ್ನು ನಾವು ನ್ಯಾಯ, ಸತ್ಯ ಕಾಪಾಡುತ್ತಾರೆ ಎಂದು ನಂಬಿದ್ದೇವೆಯೋ , ಅವರೇ ಹಣಕ್ಕಾಗಿ ಸತ್ಯವನ್ನು, ನ್ಯಾಯವನ್ನು ಮಾರುತ್ತಾರೆ ಎಂದೆಣಿಸಿದಾಗ ಆದ ಆಘಾತ ನನಗಾಗಿತ್ತು... ನನಗೆ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಯ್ತು... " ಏನ್ ಹೇಳ್ತಾ ಇದೀರಾ ಸರ್, ನನ್ನದಲ್ಲದ ತಪ್ಪನ್ನು ಸಮರ್ಥನೆ ಮಾಡಿಕೊಳ್ಳಲು ನಾನು ನಿಮಗೆ ಹಣ ಕೊಡಬೇಕಾ..? ನನ್ನ ಮಗಳ ಮದುವೆ ಇದೆ ಮುಂದಿನ ತಿಂಗಳು.. ನಿಮಗೆ ನನ್ನ ಕೈ ಚೀಲದಲ್ಲಿ ಸಿಕ್ಕ ಹಣ ನೀವೇ ತೆಗೆದುಕೊಂಡು ಬಿಡಿ.. ಎಷ್ಟಿದೆಯೆಂದೂ ನೋಡಲಿಲ್ಲ ನಾನು... ನೀವು ಹೇಳಿದ್ದಷ್ಟು ಕೊಡಲು ನನ್ನಲ್ಲಿಲ್ಲ ... ಸ್ವಲ್ಪ ಹೊತ್ತು ಮೊದಲು ನನಗೆ ಬೋಧನೆ ಮಾಡಿದ ತಾವು ಈಗ ಅದರ ವಿರುದ್ಧ ಮಾತನಾಡುತ್ತಾ ಇದ್ದೀರಲ್ಲ ಸರ್..? " ಎಂದೆ ಮೆತ್ತಗೆ...
ಆತ " ಒಳ್ಳೆತನ ಇರೋದು ಬೋಧನೆ ಮಾಡೊದಕ್ಕೆ ಮಾತ್ರ... ನೀವು ಮಾತ್ರ ನಿಮ್ಮ ಇಲಾಖೆಯಲ್ಲಿ ಬರ್ಜರಿಯಾಗಿ ಕುಳಿತು ಬಿರಿಯಾನಿ ತಿನ್ನಿ... ನಾವು ಮಾತ್ರ ಇಲ್ಲೇ ಇದ್ದು ಕೊಡುವ ಸಂಬಳದಲ್ಲಿ ಗಟ್ಟಿ ರೊಟ್ಟಿ ತಿನ್ನಿ ಅನ್ನುತ್ತೀರಾ... ನಾವು ಸನ್ಯಾಸಿಗಳಲ್ಲ... ನಮಗೂ ಆಶೆಗಳಿರುತ್ತವೆ... ನಾನು ಹೇಳಿದ ಪ್ರಕಾರ ನೀವು ಕೊಟ್ಟರೆ ನಿಮ್ಮ ಹೆಸರನ್ನು ಈ ಕೇಸಿನಿಂದ ಬಿಡುತ್ತೇನೆ... ಇಲ್ಲದಿದ್ದರೆ ನಿಮಗೆ ಬಿಟ್ಟಿದ್ದು" ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದರು... ನನಗೇನೂ ತೋಚಲಿಲ್ಲ... " ಯೋಚಿಸಿ ಬರುತ್ತೇನೆ ಸರ್" ಎಂದು ಹೇಳಿ ಹೊರಬಿದ್ದೆ..
ಯೋಚಿಸಿ ಬರುತ್ತೇನೆ ಅಂತೇನೋ ಹೇಳಿದ್ದೆ ಆದರೆ ಅವರಿಗೆ ಕೊಡಲು ಹಣವಾಗಲೀ, ಅವರ ವಿರುದ್ದ ದೂರು ಕೊಡಲು ಅವರ ಮೇಲಧಿಕಾರಿಯ ಹುದ್ದೆ ಖಾಲಿ ಇತ್ತು.... ಈ ಪ್ರಕರಣ ನಡೆದು ಎರಡೇ ದಿನದಲ್ಲಿ ನನ್ನ ಮಗಳ ನಿಷ್ಚಿತಾರ್ಥ ಇದ್ದುದರಿಂದ ನನಗೆ ಮತ್ತೆ ಆ ಅಧಿಕಾರಿಯನ್ನು ಭೇಟಿ ಆಗಲು ಅವಕಾಶ ಸಿಗಲಿಲ್ಲ... ಆದರೆ.... ಮಾರನೇ ದಿನ ನನಗೆ ಖುಶಿ ಕೊಡುವ ಸುದ್ದಿ ಸಿಕ್ಕಿತು...
ನನ್ನಿಂದ ಹಣ ಕೇಳಿದ ಅಧಿಕಾರಿಯ ಮೇಲಧಿಕಾರಿ ನಿಯುಕ್ತಿ ಆಗಿತ್ತು ಮತ್ತೆ ಅದೇ ದಿನ ನನ್ನ ಹತ್ತಿರ ಹಣ ಕೇಳಿದ ಅಧಿಕಾರಿಯ ಮೇಲೆ ದಾಳಿ ನಡೆದಿತ್ತು... ಅವರ ವಿರುದ್ದ ಇದೇ ರೀತಿಯ ತುಂಬಾ ದೂರುಗಳು ಇದ್ದವಂತೆ.... ನಾನೂ ಸಹ ಈ ಕೇಸಿನ ಮೇಲೆ ಆಸೆಯನ್ನೇ ಬಿಟ್ಟಿದ್ದೆ... ಎಂದಾದರೂ ಸತ್ಯ ಗೆದ್ದೇ ಗೆಲ್ಲತ್ತೆ ಎನ್ನುವ ವಿಶ್ವಾಸದ ಜೊತೆ ಹೋರಾಡುವ ಶಕ್ತಿಯೂ ಕುಂದಿತ್ತು ಎನ್ನಿ... ಆ ಅಧಿಕಾರಿಯ ಮೇಲೆ ದಾಳಿ ನಡೆದ ಮರುದಿನವೇ ನಾನು ವಿಶ್ವಾಯುಕ್ತ ಕಚೇರಿಯ ಬಾಗಿಲಿಗೆ ಬಂದಿದ್ದೆ... ಮೇಲಧಿಕಾರಿಗಾಗಿ ಕಾದು ಕುಳಿತಿದ್ದೆ....
**************************
ಬೂಟಿನ ’ಟಕ್ ಟಕ್’ ಸದ್ದು ನನ್ನನ್ನು ವಾಸ್ತವಕ್ಕೆ ಕರೆ ತಂದಿತ್ತು... ಬರುತ್ತಿದ್ದ
ವ್ಯಕ್ತಿಯನ್ನು ಪೇಪರ್ ನಲ್ಲಿ ಮತ್ತು ಟಿ.ವಿ ಯಲ್ಲಿ ನೋಡಿದ್ದೆ.. ಆವರೇ ವಿಶ್ವಯುಕ್ತದ
ಮೇಲಧಿಕಾರಿಯಾಗಿದ್ದರು... ಅವರು ಕಚೇರಿಯ ಕೋಣೆಯನ್ನು ಹೊಕ್ಕೊಡನೆಯೇ ನಾನು ಅವರ ಸಹಾಯಕನಿಗೆ ಹೇಳಿ ಒಳ ಹೋದೆ... ನನ್ನನ್ನು ನೋಡಿ ಅವರು ಕುಳಿತುಕೊಳ್ಳಲು ಹೇಳಿದರು... ನಾನು ಕುಳಿತುಕೊಂಡೆ... ನನ್ನೆಲ್ಲ ಕಥೆ ಹೇಳಿದೆ... ಅವರಿಗೆ ನನ್ನ ಮೇಲೆ ನಂಬಿಕೆ ಬಂತು ಅನಿಸತ್ತೆ... ಅವರ ಸಹಾಯಕನಿಗೆ ನನ್ನ ವಿರುದ್ದದ ಕಡತ ತರಲು ಹೇಳಿದರು... ಅದನ್ನ ಬಿಚ್ಚಿ ಓದಿದರು.. " ರಾಯರೇ, ನಿಮ್ಮ ವಿರುದ್ಧ ಆಗಲೇ ಎಫ್. ಐ. ಆರ್. ಫೈಲ್ ಆಗಿದೆ... ಈಗ ಏನೂ ಮಾಡುವ ಹಾಗಿಲ್ಲ...ನೀವು ಕೋರ್ಟ್ ಗೆ ಹೋಗಿ " ಎಂದರು ಅವರು... ನನಗೆ ಏನೂ ಹೇಳಲು ತೋಚಲಿಲ್ಲ... ಆದರೂ ಧೈರ್ಯ ಮಾಡಿ ಹೇಳಿದೆ...
" ಸರ್, ಅವರು ಮಾಡಿದ್ದು ಸುಳ್ಳು ಕೇಸ್ ಮತ್ತು ಅದನ್ನು ಮಾಡಿದ್ದು ಸಹ ಸರಿಯಾದ ವ್ಯಕ್ತಿ ಅಲ್ಲ.... ಆತ ತನ್ನ ಲಾಭ ನೋಡಿಕೊಂಡು ದೂರು ದಾಖಲಿಸುತ್ತಿದ್ದ.. ಅವರಿಗೆ ಹಣ ಕೊಟ್ಟಿದ್ದಿದ್ದರೆ ನನ್ನ ವಿರುದ್ದದ ದೂರನ್ನು ಬಿಡುತ್ತಿದ್ದ.. ಆತನೇ ಸರಿ ಇರದಿದ್ದ ಮೇಲೆ ಆತನ ಕೇಸ್ ಹೇಗೆ ಸಾಚಾ ಆಗಿರತ್ತೆ ಸರ್..?” ಎಂದೆ ನಿಧಾನವಾಗಿ... ಅವರಿಗೂ ಮುಜುಗರವಾಯಿತು ಅನಿಸತ್ತೆ... ಅವರು ಹೇಳಿದ ಮಾತು ನಮ್ಮ ವ್ಯವಸ್ಥೆಯ ಮುಖಕ್ಕೆ ಹೊಡೆದಂತಿತ್ತು.. " ಇಲ್ಲಿ ದಾಖಲಾಗುವ ಕೇಸು, ವಿಧಾನಸಭೆಯಲ್ಲಿ ರಚಿಸಲ್ಪಡುವ ಕಾನೂನು ಎಷ್ಟೇ ಅಕ್ರಮ ಮಾಡಿದ ವ್ಯಕ್ತಿಯಿಂದಲೇ ಆಗಿರಬಹುದು.... ಅದು ಸಕ್ರಮವೇ ಆಗಿರತ್ತೆ.... "
ನಾನು ತಲೆ ತಗ್ಗಿಸಿದೆ.... ನನ್ನ ದುರದ್ರಷ್ಟಕ್ಕೊ... ಮಾಡಿದ ತಪ್ಪಿಗೋ.... ತಿಳಿಯಲಿಲ್ಲ...
(ಇದು ಕಲ್ಪನೆ ಅಷ್ಟೆ...)
Dec 13, 2012
ಸಮಸ್ಯೆ.....!!!
ತಲೆ ಕೆಟ್ಟು ಹೋಗಿತ್ತು. ಮದುವೆಯಾಗಿ ಇಪ್ಪತ್ತು ವರ್ಷವಾಗಿದ್ದರೂ ಇಂತಹ ಸಂಧಿಗ್ಧ ಪರಿಸ್ಥಿತಿ ಬಂದಿರಲಿಲ್ಲ. ಮನವರಿತು ನಡೆಯುವ ಪತಿ, ಮುದ್ದಾದ ಮಗಳು, ಮನೆ ಮನವನ್ನು ಹಿತವಾಗಿರಿಸಿತ್ತು. ಆದರೆ ಅದೇ ಮುದ್ದಿನ ಮಗಳು ತಲೆಗೆ ತಂದಿಟ್ಟಿದ್ದಳು. ಇನ್ನೂ ಹದಿನೆಂಟು ವಯಸ್ಸು, ಆಗಷ್ಟೇ ಎರಡನೇ ಪಿ.ಯು.ಸಿ ಮುಗಿಸಿದ್ದಳು, ಡಿಗ್ರಿ ಶುರುವಾಗುವ ಮೊದಲು ಕಂಪ್ಯೂಟರ್ ಕ್ಲಾಸ್ ಸೇರಿದ್ದಳು. ಅಲ್ಲಿ ಕಲಿಸುತ್ತಿದ್ದ ತರಬೇತುದಾರನನ್ನೇ ಪ್ರೀತಿಸಲು ಶುರು ಮಾಡಿದ್ದಳು. ಪುಣ್ಯಕ್ಕೆ ನನ್ನ ಹತ್ತಿರ ಹೇಳಿದ್ದಳು. ’’ಅಮ್ಮಾ, ನಂಗೆ ಆತನೆಂದರೆ ಪ್ರಾಣ. ಆತ ಪಾಠ ಮಾಡುವ ರೀತಿ, ತಿಳಿಸಿ ಹೇಳುವ ಪರಿ, ಸಮಸ್ಯೆಗಳನ್ನು ಬಿಡಿಸುವ ವಿಧಾನ ಸುಪರ್. ಆತನಿಲ್ಲದೇ ನಾನು ಬದುಕಲ್ಲ. " ಏನೇನೊ ಬಡಬಡಿಸಿದ್ದಳು.....
’’ಅಬ್ಭಾ , ಹದಿನೆಂಟರಲ್ಲಿ ಎಲ್ಲಿಯ ಬದುಕು, ಎಂಥಹ ಪ್ರೀತಿಯ ವಿಷಯ.? ಎಲ್ಲಿಂದ ಕಲಿತಳು ಇದನ್ನೆಲ್ಲಾ ಇವಳು.?’’. ನಾನು ಏನೇನೂ ಮಾತಾಡಲಿಲ್ಲ. "ಮಲ್ಲಿ, ಇವತ್ತು ರೆಸ್ಟ್ ತೆಗೆದುಕೋ, ನಾಳೆ ಮಾತಾಡೋಣ." ಎಂದು ಹೊರಗೆ ಬಂದಿದ್ದೆ. ಪತಿದೇವ ಮನೆಗೆ ಬಂದಾಗ ಎಲ್ಲವನ್ನೂ ಹೇಳಿದರೂ ಆತ ತಲೆ ಕೆಡಿಸಿಕೊಳ್ಳಲಿಲ್ಲ. ” ಅದೆಲ್ಲಾ ಈ ವಯಸ್ಸಲ್ಲಿ ಸಾಮಾನ್ಯ, ನಾಳೆ ಸರಿ ಆಗ್ತಾಳೆ ಬಿಡು " ಎನ್ನುವ ಭಾವ ಆತನದು. ಅಮ್ಮನಾದ ನನಗೆ ದಿಗಿಲಾಗಿತ್ತು. ಮದುವೆಗೆ ಮೊದಲು ನನ್ನ ತಂಗಿ ಹೀಗೇ ಅಮ್ಮನಲ್ಲಿ ಹೇಳಿದ್ದಾಗ, ಹೇಗಾಗಿದ್ದಿರಬಹುದು ಎಂದು ಈಗ ನನಗೆ ಅನುಭವಕ್ಕೆ ಬಂದಿತ್ತು. ಅಮ್ಮ ಆಗಾಗ ಹೇಳುತ್ತಿದ್ದಳು, " ವಯಸ್ಸಿಗೆ ಬಂದ ಹೆಣ್ಣು ಮಕ್ಕಳೆಂದರೆ ಸೆರಗಲ್ಲಿ ಕಟ್ಟಿಕೊಂಡ ಕೆಂಡದಂತೆ." ಅದರ ಅರ್ಥ ನನಗೆ ಈಗ ತಿಳಿದಿತ್ತು. ಈ ಸಂಕಷ್ಟದಿಂದ ಪಾರು ಮಾಡಲು ನೂರಾರು ದೇವರಿಗೆ ಹರಕೆ ಹೊತ್ತು ಮಲಗಿದರೂ ನಿದ್ದೆ ಬರಲಿಲ್ಲ.
ಬೆಳಿಗ್ಗೆ ಬೇಗ ಎದ್ದು ಅವಳಿಗಿಷ್ಟವಾದ ನೀರು ದೋಸೆ ಮಾಡಿ ಕಾದು ಕುಳಿತೆ. ನನ್ನವರು ಎಂದಿನಂತೆ ಹೊಟ್ಟೆ ತುಂಬಾ ತಿಂದು ’ಆಫಿಸಿನಲ್ಲಿ ಕೆಲಸ ಇದೆ’ ಎನ್ನುತ್ತಲೇ ಹೊರಟರು. ಈಗ ಮಗಳ ಹತ್ತಿರ ಮಾತಾಡುವ ಕೆಲಸ ನನ್ನದಾಗಿತ್ತು. ’’ ಬಾಮ್ಮಾ ಮಲ್ಲಿಗೆ, ಇವತ್ಯಾಕೋ ಫಿಲ್ಮ್ ಹೋಗೋಣ ಎನಿಸುತ್ತಾ ಇದೆ. ಶಾರುಖ್ ಫಿಲ್ಮ್ ನೋಡೋಣ, ಓನ್ ಲೈನ್ ಬುಕ್ ಮಾಡಮ್ಮಾ." ಎಂದೆ. ಅವಳನ್ನು ದಿನವಿಡಿ ಬ್ಯುಸಿ ಇಡುವುದು ನನ್ನ ಇರಾದೆಯಾಗಿತ್ತು. ಮುಖ್ಯವಾಗಿ ಇವತ್ತಿನ ಕಂಪ್ಯೂಟರ್ ಕ್ಲಾಸ್ ಗೆ ಹೋಗುವುದು ತಪ್ಪಿಸಬೇಕಿತ್ತು. " ಅಮ್ಮ ಥ್ಯಾಂಕ್ಸ್ , ನೀರು ದೋಸೆ ಮಾಡಿದ್ದಕ್ಕೆ. ಹೊಟ್ಟೆ ತುಂಬಿತು. " ಎಂದಳು ಮಲ್ಲಿಗೆ.
’ಇದೇ ಸರಿಯಾದ ಸಮಯ , ಆ ವಿಷಯ ಪ್ರಸ್ಥಾಪನೆಗೆ ’ ಎನಿಸಿತು. " ಮಗಳೇ, ಈ ವಯಸ್ಸಲ್ಲಿ ಎಲ್ಲರೂ ಪ್ರೀತಿ , ಪ್ರೇಮ ಅನ್ನುತ್ತಾರೆ. ಆದರೆ ಅದಕ್ಕೆ ನಿಮ್ಮ ಮನಸ್ಸು ಪಕ್ವವಾಗಿ ಇರಲ್ಲ. ಇಷ್ಟವಾದುದನ್ನ ಬೇಕು ಎನ್ನುವ ಮನಸ್ಸು ನಿಮ್ಮದು. ನಾನು ಯೋಚಿಸಿದ್ದೇ ಸರಿ, ಎನ್ನುವ ವಯಸ್ಸು ನಿನ್ನದು..ಇದಕ್ಕೆಲ್ಲಾ ಮನಸ್ಸು ಕೊಡದೇ ನಿನ್ನ ಅಭ್ಯಾಸದ ಬಗ್ಗೆ ಗಮನ ಕೊಡು ಮಗಳೇ.." ಎಂದೆ ಅಪ್ಯಾಯಮಾನವಾಗಿ. ಮಗಳ ಉತ್ತರ ಏನಿರುತ್ತದೋ ಎನ್ನುವ ಹೆದರಿಕೆ ಇತ್ತು. " ಅಮ್ಮಾ, ನಾನು ಆಗಲೇ ಮನಸ್ಸು ಆತನಿಗೆ ಕೊಟ್ಟು ಬಿಟ್ಟಿದ್ದೇನೆ. ಆತ ನನ್ನನ್ನ ಪ್ರೀತಿಸುತ್ತಾನೋ ಇಲ್ಲವೋ ನನಗದು ಅನವಶ್ಯಕ, ನಾನು ಮಾತ್ರ ಆತನನ್ನೇ ಪ್ರೀತಿಸುತ್ತೇನೆ. ನನ್ನ ಜನ್ಮವಿರುವವರೆಗೂ"..
ನಗು ಬಂತು ನನಗೆ, ಇಷ್ಟು ಚಿಕ್ಕ ಮಗು ಇಷ್ಟೆಲ್ಲಾ ಮಾತನಾಡುತ್ತದಲ್ಲಾ ಎಂದು.. "ಯಾಕೆ ನಗಾಡುವುದು ನೀನು.? ತಮಾಶೆಯಾಗಿ ಕಾಣತ್ತಾ ನಿನಗೆ ಇದು..?" ಎಂದಳು ಮುಖ ಡುಮ್ಮ ಮಾಡುತ್ತಾ.. "ಹಾಗಲ್ಲಮ್ಮ, ಇನ್ನೂ ಹದಿನೆಂಟು ವಯಸ್ಸು ನಿಂದು, ಜನ್ಮದ ಬಗ್ಗೆ ಮಾತನಾಡುತ್ತೀಯಲ್ಲಾ.. ಅದಕ್ಕೆ ನಗು ಬಂತು. ನಾಳೆ ಇನ್ನೂ ಚಂದದ ಹುಡುಗ ಸಿಕ್ಕಾಗ ಇವನನ್ನೇ ಮರೆತುಬಿಡುವ ವಯಸ್ಸು ನಿಂದು.. ತುಂಬಾ ತಲೆ ಕೆಡಿಸಿಕೊಳ್ಳಬೇಡ ಮಗಳೇ.." ಎಂದೆ.. ಅವಳ ಕಣ್ಣಲ್ಲಿ ವಿಚಿತ್ರ ಬೆಳಕು ಬಂತು.. ನನಗೇನೋ , ಹುರುಪು... ಯಾವುದಾದರೂ ನೆವದಲ್ಲಿ ಇವಳ ಈ ಪ್ರಕರಣ ಸಮಾಪ್ತಿಯಾದರೆ ಸಾಕಿತ್ತು. " ಅಮ್ಮಾ, ನೀನು ಯಾರನ್ನಾದರೂ ಪ್ರೀತಿಸಿದ್ದೆಯಾ, ಅಪ್ಪನನ್ನು ಮದುವೆಯಾಗುವ ಮೊದಲು ?" ಪಕ್ಕದಲ್ಲೇ ಬಾಂಬ್ ಬಿದ್ದವಳಂತೆ ಬೆಚ್ಚಿ ಬಿದ್ದೆ.
ನನ್ನದು ಮತ್ತು ನನ್ನವರದು ಲವ್ ಮ್ಯಾರೇಜ್ ಆದರೂ ಮನೆಯವರ ಒಪ್ಪಿಗೆ ಇತ್ತು. ಬರ್ತಿ ಹತ್ತು ವರುಷದ ಪರಿಚಯ, ಸ್ನೇಹದ ನಂತರ ಮದುವೆಯಾಗಿತ್ತು. ನಮ್ಮಿಬ್ಬರ ನಡುವೆ ಮುಚ್ಚು ಮರೆ ಏನೂ ಇರಲಿಲ್ಲ. ಯಾವುದೇ ವಿಚಾರವನ್ನೂ ಬಚ್ಚಿಡದೇ, ಹಂಚಿಕೊಳ್ಳುತ್ತಿದ್ದೆವು. ಮೊನ್ನೆ ಮೊನ್ನೆ ಎರೋಬಿಕ್ಸ್ ಕ್ಲಾಸ್ ನಲ್ಲಿ ಬೆನ್ನಿಗೆ ಬಿದ್ದ ಹುಡುಗನನ್ನು ಸರಿ ಮಾಡಲು ದಾರಿ ತೋರಿಸಿದ್ದೂ ನನ್ನವರೇ. ಹೀಗೆ ನನ್ನ ಜೀವನದಲ್ಲಿ ಬೇರೆ ಯಾರೂ ಇರಲಿಲ್ಲ. ಈ ಪುಟ್ಟ ಮಗಳು ಕೇಳಿದ ಪ್ರಶ್ನೆಗೆ ಏನು ಉತ್ತರ ಹೇಳುವುದೋ ತಿಳಿಯಲಿಲ್ಲ. ’ ನಾನೂ ಸಹ ನಿನ್ನ ಹಾಗೆ ಮದುವೆಗೆ ಮೊದಲು ಇನ್ನೊಬ್ಬನನ್ನು ಪ್ರೀತಿಸಿದ್ದೆ, ಆದರೂ ಅದರಿಂದ ಹೊರಬಂದು ಈಗ ಸುಖವಾಗಿ ಸಂಸಾರ ನಡೆಸುತ್ತಿದ್ದೇನೆ.’ ಎಂದು ಸುಳ್ಳು ಹೇಳೋಣ ಎನಿಸಿತು. "ಯಾಕೆ , ನಿನ್ನಪ್ಪನಿಂದ ನನಗೆ ಡೈವೋರ್ಸ್ ಕೊಡಿಸೊ ಯೋಚನೆ ಇದೆಯಾ. ನಾನು ನಿನ್ನಪ್ಪ ಸುಖವಾಗಿ ಇರೋದು ಇಷ್ಟ ಇಲ್ಲವಾ ನಿನಗೆ.?" ಎಂದೆ ನಾಟಕೀಯವಾಗಿ...
ಆಕೆಯ ಮುಖ ಮೂರಗಲ ಆಯಿತು. ’ಯಾಕೋ, ಈ ಪ್ಲಾನ್ ವರ್ಕ್ ಆಗತ್ತೆ’ ಎನಿಸಿತು. " ಅಮ್ಮಾ, ಹೇಳಮ್ಮಾ... ಅಪ್ಪನಿಗೆ ಗೊತ್ತಾದ್ರೂ ಏನೂ ಅನ್ನಲ್ಲ. ನಿನ್ನನ್ನ ಅಷ್ಟು ಇಷ್ಟಪಡ್ತಾರೆ ... ಯಾವಾಗ ನೀನು ಲವ್ ಮಾಡಿದ್ದು ? ಅವರೂ ನಿನ್ನನ್ನು ಲವ್ ಮಾಡಿದ್ನಾ..? ಈಗ ಅವರು ಎಲ್ಲಿದ್ದಾರೆ..? ಅವರಿಗೆ ಮದುವೆ ಆಗಿದೆಯಾ..? ನಿನ್ನ ಮದುವೆ ಆದ ನಂತರ ಅವರನ್ನ ಮೀಟ್ ಮಾಡಿದ್ಯಾ..?." ಅಬ್ಭಾ... ಪ್ರಶ್ನೆಗಳ ಬೌನ್ಸರ್ ಬರುತ್ತಿತ್ತು.. ನನಗೆ ಒಳಗೊಳಗೆ ನಗು ಬರುತ್ತಿತ್ತು. ಅದನ್ನ ತೋರಿಸುವ ಹಾಗಿರಲಿಲ್ಲ. ನಾನು ಕಟ್ಟುಕಥೆ ಹೇಳಲು ರೆಡಿಯಾದೆ. ಇದು ನನ್ನ ಕಲ್ಪನಾ ಶಕ್ತಿಯ ಪರೀಕ್ಷೆಯಾಗಿತ್ತು. ನಾನು ತಯಾರಾದೆ...
" ನನಗಾಗ, ಹದಿನೇಳು ವಯಸ್ಸು. ಫಷ್ಟ್ ಪಿ.ಯು.ಸಿ. ನಾನು ಒಬ್ಬರು ಲೇಡಿ ಲೆಕ್ಚರ್ ಹತ್ತಿರ ಟ್ಯೂ ಶನ್ ಗೆ ಹೊಗುತ್ತಿದ್ದೆ. ಮನೆಯಲ್ಲಿ ಅವರ ತಮ್ಮನೊಬ್ಬನಿದ್ದ. ನನ್ನನ್ನು ತುಂಬಾ ಗೋಳು ಹೊಯ್ದುಕೊಳ್ಳುತ್ತಿದ್ದ. ನಾನು ನೋಟ್ಸ್ ಬರೆಯುವಾಗ, ಆತ ತಿಂಡಿ ತಿನ್ನುತ್ತಾ ’ ನಿನಗೆ ಬೇಕಾ ’ ಎನ್ನುವ ಹಾಗೆ ತೋರಿಸುತ್ತಿದ್ದ. ಬರ್ತ್ ಡೇ ಗೆ ಗಿಫ಼್ಟ್ ಕೊಡುತ್ತಿದ್ದ. ಅವನ ತರಲೆಗಳೇ ನನ್ನನ್ನು ಆತನ ಕಡೆಗೆ ಸೆಳೆದಿದ್ದವು. ಆತನ ಜೀವನ ಶೈಲಿ ತುಂಬಾ ವಿಚಿತ್ರವಾಗಿದ್ದುದೂ ನನ್ನನ್ನ ಸೆಳೆಯಲು ಕಾರಣವಾಗಿದ್ದಿರಬಹುದು. ಅವನ ಅಕ್ಕನ ಜೊತೆ ಅಂದರೆ ನನ್ನ ಲೆಕ್ಚರ್ ಜೊತೆ ಫಿಲ್ಮ್ ನೋಡಲು ಕರೆಯುತ್ತಿದ್ದ. ಬರದಿದ್ದರೆ ಜಾಸ್ತಿ ಕಾಡಿಸುತ್ತಿದ್ದ. ಒಮ್ಮೆಮ್ಮೆ ರೊಮ್ಯಾಂಟಿಕ್ ಕಾದಂಬರಿ ಓದಲು ಕೊಡುತ್ತಿದ್ದ ಮತ್ತೆ ಅದರ ಬಗ್ಗೆ ನನ್ನ ಅನಿಸಿಕೆ ಕೇಳುತ್ತಿದ್ದ. ನಾನು ಒಂದು ದಿನ ಕ್ಲಾಸ್ ಗೆ ಬರದೇ ಇದ್ದರೆ ಮನೆಗೇ ಬರುತ್ತಿದ್ದ. ನಾನು ಅವನನ್ನು ಪ್ರೀತಿಸುತ್ತಿದ್ದೆನಾ ಅಥವಾ ಆತ ನನ್ನನ್ನ ಪ್ರೀತಿಸುತ್ತಿದ್ದನಾ ತಿಳಿದಿರಲಿಲ್ಲ. ಆತ ನನ್ನ ಪಕ್ಕ ಇರುವುದು ನನಗೆ ತುಂಬಾ ಖುಷಿ ನೀಡುತ್ತಿತ್ತು. ಅದಕ್ಕೆ ಕಾರಣ ನನಗೆ ತಿಳಿದಿರಲಿಲ್ಲ. ಆದರೂ ನನಗೆ ಆತನೆಂದರೆ ತುಂಬಾ ಇಷ್ಟವಿತ್ತು. ಆತ ಒಂದು ದಿನ ನನಗೆ ಕಾಣಿಸದೇ ಇದ್ದರೂ ಮನಸ್ಸು ರೋದಿಸುತ್ತಿತ್ತು.
ನನ್ನ ಲೆಕ್ಚರ್ ಗೆ ಬೇರೆ ಊರಿಗೆ ವರ್ಗವಾದಾಗ, ಆತ ನನ್ನನ್ನು ತಬ್ಬಿಕೊಂಡು ’ ಐ ಲವ್ ಯು’ ಅಂದಿದ್ದ. ಬಾಯಿ ತನಕ ಬಂದಿದ್ದ ನನ್ನ ಉತ್ತರ ಗಂಟಲಲ್ಲೇ ಉಳಿಸಿಕೊಂಡಿದ್ದೆ. ನಾಳೆಯಿಂದ ಈತ ನನ್ನ ಪಾಲಿಗೆ ಇಲ್ಲ ಎನ್ನುವ ಸತ್ಯವೂ ನನ್ನ ಬಾಯಿ ಕಟ್ಟಿತ್ತೇನೋ ಗೊತ್ತಿರಲಿಲ್ಲ. ನಾಳೆಯಿಂದ ಹೇಗಿರಲಿ ಎನ್ನುವ ಭಾವವೇ ನನ್ನನ್ನು ಹಿಪ್ಪಿ ಮಾಡಿತ್ತು. ಆತ ಹೊರಟು ಹೋಗಿ ವಾರಕ್ಕೊಮ್ಮೆ ಬರೆಯುತ್ತಿದ್ದ ಪತ್ರ , ದಿನ ಕಳೆದಂತೆ ತಿಂಗಳಿಗೊಂದು ನಂತರ ಜನ್ಮದಿನಕ್ಕೊಂದರಂತೆ ಬರುತ್ತಿತ್ತು. ಕ್ರಮೇಣ ಅದೂ ನಿಂತು ಹೋಯಿತು. ಅವನ ಜೀವನಕ್ಕೆ ಯಾರು ಬಂದರೋ ತಿಳಿದಿಲ್ಲ. ನನ್ನ ಜೀವನದಲ್ಲಿ ನಿನ್ನ ಅಪ್ಪ ಬಂದರು. ಈಗಿನ ಪರಿಸ್ತಿತಿ ಏನೆಂದರೆ ನನಗೆ ಆತನ ಹೆಸರೇ ಮರೆತು ಹೋಗಿದೆ.
ವಯಸ್ಸು ಹೆಚ್ಚಾಗುತ್ತಾ ಹೋದ ಹಾಗೆ ಮನಸ್ಸು ಪ್ರಭುದ್ದಗೊಳ್ಳುತ್ತದೆ. ಬುದ್ದಿಗೆ ಮನಸ್ಸನ್ನು ಗೆಲ್ಲುವ ತಾಕತ್ತಿರಬೇಕು. ಇಲ್ಲದಿದ್ದರೆ ಎಲ್ಲಾ ಕನಸುಗಳೂ ಹಳ್ಳ ಹಿಡಿಯುತ್ತವೆ. ನನಗೆ ಈಗ ಆತ ಎದುರಿಗೆ ಸಿಕ್ಕರೆ ನಿಂತು ಮಾತನಾಡಿಸುತ್ತೀನಾ ಗೊತ್ತಿಲ್ಲ. ಅವನ ಬಗ್ಗೆ ಯೋಚಿಸಲೇ ಇಲ್ಲ ನಾನು. ನಿನ್ನ ಮನಸ್ಸು ಮತ್ತು ವಯಸ್ಸು ಹಾಗೇನೆ ಕಣಮ್ಮ. ಅದಕ್ಕೂ ದುನಿಯಾ ತೋರಿಸು. ಅದಕ್ಕೇ ಅರ್ಥ ಆಗತ್ತೆ. ಈಗಲೇ ನೀ ಕಂಡ ಜಗತ್ತಿನ ಆಳ ಮತ್ತು ವಿಶಾಲ ಅಳೆಯಬೇಡ, ಅವನನ್ನು ಬಿಟ್ಟರೆ ಜಗತ್ತಲ್ಲಿ ಬೇರೆ ಯಾರೂ ಇಲ್ಲ ಅನ್ನೊದನ್ನ ಕಿತ್ತೊಗೆ ಮನಸ್ಸಿಂದ ’ ಎಂದು ನನ್ನ ಮನಸ್ಸಿಗೆ ತೋಚಿದ್ದನ್ನ ಹೇಳಿದೆ.
ಮನಸ್ಸಲ್ಲೇ ಕಲ್ಪಿಸಿಕೊಂಡ ನನ್ನ ಲವ್ ಸ್ಟೋರಿ ನನಗೇ ಖುಶಿ ಕೊಟ್ಟಿತ್ತಾ.. ಗೊತ್ತಿಲ್ಲ... ಮಗಳ ಮುಖದಲ್ಲಂತೂ ಸ್ವಲ್ಪ ಗೆಲುವು ತಂದಿತ್ತು. ಅವಳು ಏನು ಯೋಚಿಸುತ್ತಿದ್ದಳೋ ಗೊತ್ತಿಲ್ಲ. " ಅಮ್ಮಾ, ನನಗೂ ಮನಸು ಹಗುರಾಗಿದೆ. ನಿನ್ನ ರೀತಿಯಲ್ಲೇ ನಾನೂ ಯೋಚಿಸುತ್ತೇನೆ . ನೋಡೋಣ. ಸಂಜೆ ಫಿಲ್ಮ್ ಗೆ ಹೋಗೋಣ ಅಪ್ಪನಿಗೂ ಬರಲು ಹೇಳು" ಅಂದಳು ನಗುತ್ತಾ. ನನಗೆ ನೂರಾನೆಯೊಂದಿಗೆ ಹೋರಾಡಿ ಗೆದ್ದ ಬಲ.
ಸಂಜೆ ಮನೆಯವರು ಬಂದಾಗ ನಡೆದದ್ದೆಲ್ಲ ಹೇಳಿದೆ..... ಅವರು " ನೋಡಿಲ್ವಾ, ನಾನು ಹೇಳಿದ್ದೆ , ಎಲ್ಲ್ಲಾ ಸರಿ ಹೋಗತ್ತೆ ಅಂತ. ನೀನು ಸುಮ್ನೆ ಟೆನ್ಶನ್ ಮಾಡ್ಕೊಂಡಿದ್ದೆ" ಅಂದರು... ನನಗೆ ನಗು ಬಂತು, ನನಗೇ ಗೊತ್ತಿತ್ತು... ನಾನು ಇದನ್ನು ಪರಿಹರಿಸಲು ಪಟ್ಟ ಕಷ್ಟ. " ನಿಮಗೇನ್ರೀ ನನ್ನ ಕಷ್ಟ ಗೊತ್ತು.? ಏನೇನ್ ಹೇಳಿ ಅವಳಿಗೆ ಸರಿ ಮಾಡಿದ್ದೇನೆ ಅಂತ. ನಿಮಗೆ ಸರಿ ಆದ್ರೆ ’ ಒಹ್..! ಸ್ಸರಿ ಆಯ್ತಾ..?’ ... ಸರಿ ಆಗಿಲ್ಲಾ ಅಂದ್ರೆ..’ ನಿನ್ನ ಕೈಲಿ ಏನೂ ಆಗಲ್ಲ’ ಅಂತೀರಾ. ನಮ್ಮ ಕಷ್ಟ ನಿಮಗೆ ಅರ್ಥ ಆಗಲ್ಲ. ಸುಳ್ಳು -ಪಳ್ಳು ಹೇಳಿ ನಂಬಿಸಿದ್ದೇನೆ ಅವಳನ್ನ " ಎಂದೆ ಮುಖ ಉಬ್ಬಿಸಿಕೊಂಡು.... ಅವರು ಹತ್ತಿರ ಬಂದು ” ನಿನ್ನ ಮೇಲೆ ನಂಬಿಕೆ ಇತ್ತು ಕಣೆ. ಅದಕ್ಕೆ ನಿನ್ನ ಮೇಲೆಯೇ ಬಿಟ್ಟೆ ಇದನ್ನ ಪರಿಹಾರ ಮಾಡಲು " ಎಂದರು ... ಸ್ವಲ್ಪ ಸಮಾಧಾನ ಆಯ್ತು. " ಅದ್ಸರಿ, ಏನು ಸುಳ್ಳು ಹೇಳಿದೆ ಅವಳಿಗೆ ?" ಕೇಳಿದರು.
ನಾನು ಎಳೆ ಎಳೆಯಾಗಿ ನನ್ನ ಕಲ್ಪನೆಯ ಲವ್ ಸ್ಟೋರಿ ಹೇಳುತ್ತಾ ಹೋದೆ. ಕಥೆ ಹೇಳಿ ಮುಗಿಸಿದಾಗ ನನ್ನ ಮುಖದಲ್ಲಿ ಒಂದು ರೀತಿಯ ಹೆಮ್ಮೆ ಇತ್ತು..ಕಥೆ ಮುಗಿಸಿ ಅವರ ಕಡೆ ನೋಡಿದಾಗ ಅವರ ಮುಖ ಕೆಂಪಾಗಿತ್ತು. ’ಅಯ್ಯೋ ದೇವ್ರೆ.. ಇದೇನಪ್ಪ . ನನ್ನ ಕಲ್ಪನೆಯನ್ನು ನಿಜ ಅಂದ್ಕೊಂಡು ಬಿಟ್ರಾ ಹೇಗೆ.?’ ಎನಿಸಿತು. ಕೇಳಿಯೂ ಬಿಟ್ಟೆ. " ಯಾಕೆ ಏನಾಯ್ತು..? ಏನಾದರು ತಪ್ಪು ಮಾಡಿದೆನಾ ಹೇಳಿ.? ಇದು ಅವಳ ಮೇಲೆ ಏನಾದರೂ ತಪ್ಪು ಪರಿಣಾಮ ಬೀರತ್ತಾ ಹೇಗೆ..?" ನನ್ನ ಕಳವಳ ನನ್ನದಾಗಿತ್ತು..
ಅವರು ಗಂಭೀರವಾಗಿ " ಇದು ನಿನ್ನ ಕಲ್ಪನೆಯ ಕಥೆಯಾ.? ಇದನ್ನ ನಾನು ನಂಬಬೇಕಾ..? ನೀನು ಈ ರೀತಿ ಮಾಡ್ತೀಯಾ ಅಂತ ನಾನು ಯೋಚಿಸಿರಲಿಲ್ಲ. ನೆನಪಿದೆಯಾ ನಿನಗೆ, ಮದುವೆಗೆ ಮುಂಚೆ ನಮ್ಮ ಮಧ್ಯೆ ಒಂದು ಒಪ್ಪಂದವಾಗಿತ್ತು ..?". ನಾನು ಅಯೋಮಯವಾಗಿ ” ಹೌದು, ನಮ್ಮಿಬ್ಬರ ಮಧ್ಯೆ ಏನೂ ಗುಟ್ಟು ಇರಬಾರದು ಅಂತ. ನಾನು ಅದನ್ನ ಪಾಲಿಸಿದ್ದೇನೆ ಕೂಡ " ಅಂದೆ ಸ್ವಲ್ಪ ಜೋರಾಗಿಯೇ.. " ಅವರು ಇನ್ನೂ ಗಂಭೀರವಾಗಿ, " ಇನ್ನೂ ಒಂದು ಶರತ್ತಿತ್ತು, ನಮ್ಮ ಹಳೆಯ ನೆನಪುಗಳನ್ನು ಕೆದಕಬಾರದು ಮತ್ತು ನನ್ನ ಹಳೆಯ ಸೂಟ್ ಕೇಸ್ ತೆರೆಯಬಾರದು. ತೆರೆದರೂ ನಮ್ಮ ನಮ್ಮ ಡೈರಿ ಯನ್ನು ಓದಬಾರದು. ನೆನಪಿದೆಯಾ.? ನೀನು ಆ ಶರತ್ತನ್ನ ಮುರಿದುಬಿಟ್ಟೆ. ನನ್ನ ಡೈರಿ ಓದಿಬಿಟ್ಟೆ ಅಲ್ವಾ..? ನಿನ್ನಿಂದ ಇದನ್ನ ನಿರೀಕ್ಷಿಸಿರಲಿಲ್ಲ ನಾನು..ನನಗೆ ನಿಜವಾಗಿಯೂ ತುಂಬಾ ನೋವಾಗಿದೆ." ಎನ್ನುತ್ತಾ ಹೊರ ನಡೆದರು.
ನನಗೆ ಒಂದು ಸಮಸ್ಯೆ ಮುಗಿದುದ್ದಕ್ಕೆ ಸಂತಸ ಪಡಬೇಕೋ, ಹೊಸ ಸಮಸ್ಯೆ ಶುರು ಆದುದಕ್ಕೆ ಆತಂಕ ಪಡಬೇಕೋ ತಿಳಿಯಲಿಲ್ಲ.
Nov 7, 2012
ಮಾನವೀಯತೆ.......???
ಇವತ್ತು ಸೊಸೆ ಕೊಟ್ಟ ದುಡ್ಡಲ್ಲಿ
ಹೇಗಾದರೂ ಮಾಡಿ ಉಳಿಸಲೇ ಬೇಕಿತ್ತು... ಐವತ್ತು ರುಪಾಯಿ ಉಳಿಸಲೇ ಬೇಕಿತ್ತು... ದಿನಸಿ ಸಲುವಾಗಿ ಬಂದಿದ್ದೆ,
ಕೆಲವೊಂದು ಸಾಮಾನು ಬೇಕೆಂದೇ ತೆಗೆದುಕೊಳ್ಳಲಿಲ್ಲ.... ನಾಳಿನ ಪೂಜೆಗಾಗಿ ಎಲ್ಲಾ ವಸ್ತುಗಳನ್ನೂ ಕೊಂಡೆ.... ಐವತ್ತೈದು ರುಪಾಯಿ ಉಳಿಯಿತು.... ಸೈಕಲ್ ಹತ್ತಿದೆ. ಸೈಕಲ್ ನ ಇಕ್ಬಾಲ್ ಸಾಬನ ಚಿಕನ್ ಸ್ಟಾಲ್ ಕಡೆ ತಿರುಗಿಸಿದೆ.... ಇಕ್ಬಾಲ್ ಸಾಬ್ ನನ್ನ ನೋಡಿ ದೊಡ್ಡ ಕಣ್ಣು ಮಾಡಿದ, ’ಇದೇನಪ್ಪಾ ಪುಳ್ ಚಾರ್ ಮುದುಕನಿಗೆ ಇಲ್ಲೇನು
ಕೆಲಸ’ ಎನ್ನುವ ಹಾಗಿತ್ತು ಅವನ ಮುಖಭಾಷೆ..... ನಾನು ಹೆದರುತ್ತಲೇ ಆ ಕಡೆ ಈ ಕಡೆ ನೋಡುತ್ತಾ ಅವನ ಅಂಗಡಿಯ
ಒಳಗಡೆ ಹೋದೆ.... ಅಲ್ಲಿನ ಕೆಟ್ಟ ವಾಸನೆ ವಾಕರಿಕೆ ಬಂದರೂ ಸಹಿಸಿಕೊಂಡೆ..... "ಏನು ಸಾರ್ ಈ ಕಡೆ..?
ಏನು ಬೇಕು..? " ಕೇಳಿದ ಇಕ್ಬಾಲ್ ಸಾಬ್.... ನಾನು
ಗಂಬೀರವಾಗಿಯೇ " ಅರ್ಧ ಕೇಜಿ ಕೋಳಿ ಮಾಂಸ" ಎಂದೆ......
ಆತ " ಯಾರಿಗೆ ಸಾರ್ ಇದು..? ನೀವಂತೂ ತಿನ್ನುವುದಿಲ್ಲ. ಇಲ್ಲಾ ನೀವೂ ತಿನ್ನಲೂ ತಿನ್ನಲು ಶುರು ಮಾಡಿದ್ರಾ..? ಓ.. ನಿಮ್ಮ ಪಕ್ಕದ ಮನೆಯವರಿಗಾ..? " ಕೇಳಿದ...... ಈತ ಪ್ರಶ್ನೆ ಕೇಳುತ್ತಿದ್ದಾನಾ ಅಥವ ಉತ್ತರ ಹೇಳುತ್ತಿದ್ದಾನಾ ತಿಳಿಯಲಿಲ್ಲ..... ನಾನು"ಹೌದು" ಎಂದೆ,,,, ಆದರೆ ಆತನ ಯಾವ ಪ್ರಶ್ನೆಗೆ ಎನ್ನುವ ಉತ್ತರ ನನಗೂ ತಿಳಿಯಲಿಲ್ಲ..... ಮೊದಲೇ ಕಟ್ ಮಾಡಿಟ್ಟ ಮಾಂಸವನ್ನ ಆತ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಕೊಟ್ಟ..... ಜೀವನದಲ್ಲಿ ಎಂದಿಗೂ ಮುಟ್ಟದ ವಸ್ತುವನ್ನು ಇವತ್ತು ಕೈಯಲ್ಲಿ ಹಿಡಿದಿದ್ದೆ...... ಮನಸ್ಸು ದ್ರಢವಾಗಿತ್ತು.....
ಆತ " ಯಾರಿಗೆ ಸಾರ್ ಇದು..? ನೀವಂತೂ ತಿನ್ನುವುದಿಲ್ಲ. ಇಲ್ಲಾ ನೀವೂ ತಿನ್ನಲೂ ತಿನ್ನಲು ಶುರು ಮಾಡಿದ್ರಾ..? ಓ.. ನಿಮ್ಮ ಪಕ್ಕದ ಮನೆಯವರಿಗಾ..? " ಕೇಳಿದ...... ಈತ ಪ್ರಶ್ನೆ ಕೇಳುತ್ತಿದ್ದಾನಾ ಅಥವ ಉತ್ತರ ಹೇಳುತ್ತಿದ್ದಾನಾ ತಿಳಿಯಲಿಲ್ಲ..... ನಾನು"ಹೌದು" ಎಂದೆ,,,, ಆದರೆ ಆತನ ಯಾವ ಪ್ರಶ್ನೆಗೆ ಎನ್ನುವ ಉತ್ತರ ನನಗೂ ತಿಳಿಯಲಿಲ್ಲ..... ಮೊದಲೇ ಕಟ್ ಮಾಡಿಟ್ಟ ಮಾಂಸವನ್ನ ಆತ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಕೊಟ್ಟ..... ಜೀವನದಲ್ಲಿ ಎಂದಿಗೂ ಮುಟ್ಟದ ವಸ್ತುವನ್ನು ಇವತ್ತು ಕೈಯಲ್ಲಿ ಹಿಡಿದಿದ್ದೆ...... ಮನಸ್ಸು ದ್ರಢವಾಗಿತ್ತು.....
ಮಾಂಸ ಇದ್ದ ಪ್ಲಾಸ್ಟಿಕ್ ಚೀಲವನ್ನು ಸೈಕಲ್ ಹ್ಯಾಂಡಲ್ ಗೆ ನೇತಾಡಿಸಿ ಕೊಂಡು, ಸೊಸೆ ಹೇಳಿದ ದಿನಸಿ ಸಾಮಾನನ್ನು ಹಿಂದಿನ ಕ್ಯಾರಿಯರ್ ಗೆ ಸಿಕ್ಕಿಸಿ ಸೈಕಲ್ ತುಳಿದೆ...... ಸರಕಾರಿ ನೌಕರಿಯಿಂದ ನಿವ್ರತ್ತನಾದರೂ ದೇಹ ಗಟ್ಟಿಯಿತ್ತು ಅದಕ್ಕೆ ಈ ಸೈಕಲ್ ತುಳಿದಿದ್ದೂ ಕಾರಣ ಇರಬಹುದು...... ನಾನು ಮಾಡಿದ ಅಲ್ಪ ಸ್ವಲ್ಪ ಒಳ್ಳೆಯ ಕೆಲಸದಿಂದ ಈಗಲೂ ಕೆಲ ಜನರು ನನ್ನನ್ನು ಗೌರವಿಸುತ್ತಾರೆ..... ಸೈಕಲ್ ತುಳಿಯುತ್ತಲೇ ನನ್ನ ಕಣ್ಣು ಅವನ್ನು ಹುಡುಕುತ್ತಿತ್ತು...... ಈ ಕೋಳಿ ಮಾಂಸವನ್ನು ಅವಕ್ಕೆ ಹೇಗೆ ತಲುಪಿಸುವುದು ತಿಳಿಯುತ್ತಿರಲಿಲ್ಲ..... ಮನೆಗೆ ತೆಗೆದುಕೊಂಡು ಹೋದರೆ, ಮಗ ಸೊಸೆ ನನ್ನನ್ನು ಒಳಗಡೆ ಬಿಟ್ಟುಕೊಳ್ಳಲ್ಲ ಎಂದು ಗೊತ್ತಿತ್ತು.......
ಆದರೆ ನನ್ನ ಮನಸ್ಸು ಗಟ್ಟಿಯಾಗಿತ್ತು ಏನಾದರೂ ಮಾಡಿ ಅನಿಸಿಕೊಂಡ ಕೆಲಸ ಮಾಡಬೇಕಿತ್ತು..... ಸೈಕಲ್ ನ್ನ ಕಂಪೌಂಡ್ ಹೊರಗಡೆನೇ ನಿಲ್ಲಿಸಿ ಸೊಸೆ ಹೇಳಿದ ಸಾಮಾನಿನ ಚೀಲ ತೆಗೆದುಕೊಂಡೆ..... ಕೋಳಿ ಮಾಂಸದ ಚೀಲ ಸುತ್ತಿ ಸುತ್ತಿ ಇನ್ನೊಂದು ಕೈಲಿ ಹಿಡಿದೆ...... ಬಾಗಿಲು ತೆರೆದೇ ಇತ್ತು, ಒಳಗೆ ಹೋಗಬೇಕು ಎನ್ನುವಾಗಲೇ ಸೊಸೆ ಮತ್ತು ಮಗ ಎದುರಿಗೇ ಬಂದ್ರು...... ನಾನು ಸಾಮಾನಿನ ಚೀಲ ಸೊಸೆ ಕೈಲಿಟ್ಟೆ...... ಅವರ ಕಣ್ಣು ನಾನು ತಂದ ಇನ್ನೊಂದು ಚೀಲದ ಮೇಲಿತ್ತು.
ಸೊಸೆ ಮಾತ್ರ ನನ್ನನ್ನು ಕಣ್ಣೆತ್ತಿಯೂ ನೊಡುತ್ತಿರಲಿಲ್ಲ...... ಮೊದಲೆಲ್ಲಾ ತುಂಬಾ ಗೌರವದಿಂದ, ಪ್ರೀತಿಯಿಂದ ನೋಡುತ್ತಿದ್ದಳು....... ಆ ದಿನದ ನಂತರ ನನ್ನನ್ನು ಮಾತನಾಡಿಸುತ್ತಲೂ
ಇರಲಿಲ್ಲ..... ಏನೇ ಕೆಲಸ ಇದ್ದರೂ ಮಗನೇ ಹೇಳುತ್ತಿದ್ದ..... ಮನೆಯಲ್ಲೂ ಹೆಚ್ಚಿಗೆ ಇರುತ್ತಿರಲಿಲ್ಲ ನಾನು..... ಬೇಗ ಹೊರಬೀಳಬೇಕಿತ್ತು ನನಗೆ..... ಇಲ್ಲೇ ಇದ್ದರೆ ಕೈಲಿದ್ದ ಚೀಲದ ಬಗ್ಗೆ ಕೇಳುತ್ತಾರೆ ಎನಿಸಿಕೊಂಡು ಹೊರಬಿದ್ದೆ....... ಮಗ " ಅಪ್ಪಾ ಎಲ್ಲಿಗೆ ಹೊರಟಿರಿ? ನಾಳಿನ ಪೂಜೆಗೆ ಎಲ್ಲಾ ಸಾಮಾನು ತಂದಿದ್ದೀರಾ ತಾನೆ? ಉಳಿದ
ಹಣ ಎಲ್ಲಿ ? " ಎಂದ.... ನಾನು "ಹೌದು, ಎಲ್ಲಾ ತಂದಿದ್ದೇನೆ.... ಸ್ವಲ್ಪ ಹಣ ನನಗೆ ಖರ್ಚಾಯಿತು ..." ಎಂದೆ..... ’ಅಪ್ಪಾ , ಎಲ್ಲಿಗೆ ಹೋಗ್ತಾ ಇದೀರಾ.? ಕೈಯಲ್ಲಿ ಇರೋದು ಏನು.? ’ ಎಂದು ಮಗ ಕೇಳ್ತಾ
ಇದ್ದ......
ನಾನು ಗಡಿಬಿಡಿಯಿಂದ ಸೈಕಲ್ ಹತ್ತಿ ಪೆಡಲ್ ತುಳಿದೆ....... ಮನಸ್ಸು ದಾರಿ ಎಲ್ಲಿಗೆ ಎಂದು ನಿರ್ಧಾರ ಮಾಡಿಯಾಗಿತ್ತು......... ಊರ ಹೊರದಾರಿಯಲ್ಲಿದ್ದ ಮುನಿಯಮ್ಮನ ಮನೆ ಮುಂದೆ ಸೈಕಲ್ ನಿಲ್ಲಿಸಿ ಸೈಕಲ್ ಬೆಲ್ ಮಾಡಿದೆ...... ಆಕೆ ನನ್ನ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಳು..... ಗಂಡ ಸತ್ತಿದ್ದ....... ಅನುಕಂಪದ ಆಧಾರದ ಮೇಲೆ ಕೆಲಸ ಸಿಕ್ಕಿತ್ತು......... ಕೆಲಸ ಸಿಕ್ಕಿದ್ದು ನನ್ನಿಂದಲೇ ಅಂತ ಆಕೆಗೆ ನನ್ನ ಮೇಲೆ ಗೌರವ ಇತ್ತು....... ನನ್ನ ಸೈಕಲ್ ಬೆಲ್ ಕೇಳಿ ಆಕೆ ಹೊರಗೆ ಬಂದಳು....... "ಏನು ಬುದ್ದಿ, ಹೇಳಿ ಕಳಿಸಿದ್ರೆ ನಾನೇ ಬರ್ತಿದ್ನಲ್ಲಾ.... ಮನೆ ತಾವಾ ಏನಾದ್ರೂ ಕೆಲ್ಸ ಇತ್ತಾ..? ನಾಳೆ ಪೂಜೆಗಾಗಿ ಏನಾದ್ರೂ ಬೇಕಿತ್ರಾ.? "
ಅವಳ ಪ್ರಶ್ನೆ ಮುಗಿದಿರಲಿಲ್ಲ, ನಾನು ಕೋಳಿ ಮಾಂಸದ ಚೀಲ ಅವಳ ಕೈಲಿಟ್ಟೆ. " ಘಮ ಘಮ ಎನ್ನುವ ಹಾಗೆ ಸಾರು ಮಾಡಿಡು." ಎಂದೆ...... ಆಕೆ ಚೀಲ ತೆರೆದು ನೋಡಿದಳು, ಆಕೆಯ ಮುಖ ಕೆಂಪಗಾಯಿತು........." ಏನ್ ಬುದ್ದಿ ನೀವು.? ಇನ್ನೂ ಅವುಗಳ ಮೇಲೆ ಪ್ರೀತಿ ಕಡಿಮೆಯಾಗಲಿಲ್ಲವಾ.? ಅವುಗಳು ಏನು ಮಾಡಿದ್ದವು ಎನ್ನುವ ನೆನಪು ಇಲ್ಲವಾ ನಿಮಗೆ.? ನಾಳೆ ವರ್ಷದ ಪೂಜೆ ಇಟ್ಟುಕೊಂಡು ನೀವು ಈ ಕೆಲ್ಸ ಮಾಡ್ತಾ ಇದ್ದೀರಲ್ಲಾ ಬುದ್ದೀ..?"........ ಅವಳು ವಟಗುಡುತ್ತಲೇ ಇದ್ದಳು... ನಾನು "ಒಂದು ಗಂಟೆ ಬಿಟ್ಟು ಬರುತ್ತೇನೆ, ರೆಡಿ ಮಾಡಿಡು" ಎಂದವನೇ ಪೆಡಲ್ ತುಳಿದೆ......
ನಾನು ಗಡಿಬಿಡಿಯಿಂದ ಸೈಕಲ್ ಹತ್ತಿ ಪೆಡಲ್ ತುಳಿದೆ....... ಮನಸ್ಸು ದಾರಿ ಎಲ್ಲಿಗೆ ಎಂದು ನಿರ್ಧಾರ ಮಾಡಿಯಾಗಿತ್ತು......... ಊರ ಹೊರದಾರಿಯಲ್ಲಿದ್ದ ಮುನಿಯಮ್ಮನ ಮನೆ ಮುಂದೆ ಸೈಕಲ್ ನಿಲ್ಲಿಸಿ ಸೈಕಲ್ ಬೆಲ್ ಮಾಡಿದೆ...... ಆಕೆ ನನ್ನ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದಳು..... ಗಂಡ ಸತ್ತಿದ್ದ....... ಅನುಕಂಪದ ಆಧಾರದ ಮೇಲೆ ಕೆಲಸ ಸಿಕ್ಕಿತ್ತು......... ಕೆಲಸ ಸಿಕ್ಕಿದ್ದು ನನ್ನಿಂದಲೇ ಅಂತ ಆಕೆಗೆ ನನ್ನ ಮೇಲೆ ಗೌರವ ಇತ್ತು....... ನನ್ನ ಸೈಕಲ್ ಬೆಲ್ ಕೇಳಿ ಆಕೆ ಹೊರಗೆ ಬಂದಳು....... "ಏನು ಬುದ್ದಿ, ಹೇಳಿ ಕಳಿಸಿದ್ರೆ ನಾನೇ ಬರ್ತಿದ್ನಲ್ಲಾ.... ಮನೆ ತಾವಾ ಏನಾದ್ರೂ ಕೆಲ್ಸ ಇತ್ತಾ..? ನಾಳೆ ಪೂಜೆಗಾಗಿ ಏನಾದ್ರೂ ಬೇಕಿತ್ರಾ.? "
ಅವಳ ಪ್ರಶ್ನೆ ಮುಗಿದಿರಲಿಲ್ಲ, ನಾನು ಕೋಳಿ ಮಾಂಸದ ಚೀಲ ಅವಳ ಕೈಲಿಟ್ಟೆ. " ಘಮ ಘಮ ಎನ್ನುವ ಹಾಗೆ ಸಾರು ಮಾಡಿಡು." ಎಂದೆ...... ಆಕೆ ಚೀಲ ತೆರೆದು ನೋಡಿದಳು, ಆಕೆಯ ಮುಖ ಕೆಂಪಗಾಯಿತು........." ಏನ್ ಬುದ್ದಿ ನೀವು.? ಇನ್ನೂ ಅವುಗಳ ಮೇಲೆ ಪ್ರೀತಿ ಕಡಿಮೆಯಾಗಲಿಲ್ಲವಾ.? ಅವುಗಳು ಏನು ಮಾಡಿದ್ದವು ಎನ್ನುವ ನೆನಪು ಇಲ್ಲವಾ ನಿಮಗೆ.? ನಾಳೆ ವರ್ಷದ ಪೂಜೆ ಇಟ್ಟುಕೊಂಡು ನೀವು ಈ ಕೆಲ್ಸ ಮಾಡ್ತಾ ಇದ್ದೀರಲ್ಲಾ ಬುದ್ದೀ..?"........ ಅವಳು ವಟಗುಡುತ್ತಲೇ ಇದ್ದಳು... ನಾನು "ಒಂದು ಗಂಟೆ ಬಿಟ್ಟು ಬರುತ್ತೇನೆ, ರೆಡಿ ಮಾಡಿಡು" ಎಂದವನೇ ಪೆಡಲ್ ತುಳಿದೆ......
ಸ್ವಲ್ಪ ದೂರ ಹೋಗುತ್ತಲೇ ಒಂದು ಪರಿಚಯದ ಮುಖ ಕಂಡಿತು...... ಸೈಕಲ್ ನಿಲ್ಲಿಸಿದೆ....... ಮುಖ ಪರಿಚಯ ಅಷ್ಟೇ ಇತ್ತು........ ಆತನೇ ಕೈ ಮುಗಿದ "ನಮಸ್ಕಾರ ಸರ್, ನಾಳಿನ
ಸನ್ಮಾನ ಕಾರ್ಯಕ್ರಮ ನೆನಪಿದೆ ತಾನೆ.?"...... ಆಗ ನೆನಪಾಯ್ತು ನನಗೆ, ನಾಳೆ ಸನ್ಮಾನ ಕಾರ್ಯಕ್ರಮದ
ವಿಷ್ಯ....... "ನಾಳೆ ಮಧ್ಯಾನ್ಹ ನನ್ನ ಮನೆಯಲ್ಲಿ ಪೂಜೆ ಇದೆ. ಬರೋದು ಕಷ್ಟ ಆಗಬಹುದು" ಎಂದೆ......... "ಇದ್ಯೇನ್ ಸಾರ್, ನಿಮಗೆ ಸನ್ಮಾನ ಮಾಡ್ತಾ ಇರೋರು ಈ ಊರಿನ ಎಮ್. ಎಲ್.ಎ ಸಾಹೇಬರು,ನಿಮಗೆ
ಒಳ್ಳೆಯ ಹೆಸರು ಬರತ್ತೆ ಸರ್..... ಅದರಲ್ಲೂ ನಿಮ್ಮ ಮನೆ ಪೂಜೆ ಮಧ್ಯಾನ್ಹ ತಾನೆ?... ಸನ್ಮಾನ ಕಾರ್ಯಕ್ರಮ
ಹನ್ನೊಂದಕ್ಕೆ ಮುಗಿದುಹೋಗತ್ತೆ ಸರ್..... ಬೆಳಿಗ್ಗೆ ನಿಮ್ಮ ಮನೆಗೆ ಕಾರು ಕಳಿಸ್ತೇನೆ ಸರ್" ಎಂದ
ಆತ....... ನಾನು "ಆಯ್ತು, ಕಳ್ಸಿ ನೋಡೋಣ" ಎನ್ನುತ್ತಾ ಸೈಕಲ್ ತುಳಿದೆ........ ಕೋಳಿ ಸಾರು ರೆಡಿಯಾಗಿರಬಹುದು
ಎಂದು ಮುನಿಯಮ್ಮನ ಮನೆ ಕಡೆ ಹೊರಟೆ......
ನನ್ನ ಸೈಕಲ್ ಬೆಲ್ ಕೇಳಿ ಆಕೆ ಒಂದು ಟಿಫಿನ್ ಬಾಕ್ಸ್ ಹಿಡಿದು
ಬಂದಳು...... ಮುಖದಲ್ಲಿ ಇನ್ನೂ ಸಿಟ್ಟಿತ್ತು ಎನಿಸತ್ತೆ....... ನಾನು "ನಾಳೆ ಬೆಳಿಗ್ಗೆ ಬೇಗನೇ ಬಾ..... ಕೆಲ್ಸ
ಇದೆ ಮನೆಯಲ್ಲಿ" ಎಂದು ಟಿಫಿನ್ ಬಾಕ್ಸ್ ತೆಗೆದು ಪ್ಲಾಸ್ಟಿಕ್ ಕವರಿನಲ್ಲಿ ಸುತ್ತಿದೆ..... ಮುನಿಯಮ್ಮ
ಏನೂ ಮಾತಾಡಲಿಲ್ಲ..... ನಾನು ಮತ್ತೆ ಅವಳನ್ನು ಮಾತನಾಡಿಸುವ ಧೈರ್ಯ ಮಾಡಲಿಲ್ಲ...... ಮನೆ ಕಡೆ ಹೊರಟೆ..... ಮನೆ
ತಲುಪಿದವನೇ ಟಿಫಿನ್ ಬಾಕ್ಸ್ ಇದ್ದ ಪ್ಲಾಸ್ಟಿಕ್ ಚೀಲವನ್ನು ಮನೆ ಹೊರಗೆ ಇದ್ದ ಗೂಡಿನಲ್ಲಿ ಇಡುವಾಗ
ಮಗ ಸೊಸೆ ಇಬ್ಬರೂ ಹೊರಗೆ ಬಂದರು.....
" ಏನಪ್ಪ ಅದು..? " ಕೇಳಿದ ಮಗ......
" ಏನಪ್ಪ ಅದು..? " ಕೇಳಿದ ಮಗ......
" ಏನಿಲ್ಲ, ಸುಮ್ನೆ"
ಎಂದು ಬಾಕ್ಸ್ ಅಲ್ಲೇ ಇಟ್ಟೆ...... ಮಗನಿಗೆ ಗೊತ್ತಾಯ್ತು ಎನಿಸತ್ತೆ..... " ಅಪ್ಪಾ, ಇಷ್ಟೆಲ್ಲಾ ಆದ
ಮೇಲೂ ನಿಮಗೆ ಅವುಗಳ ಮೇಲೆ ಕರುಣೇನಾ.?, ಏನು ಹೇಳಲಿ ಅಪ್ಪಾ ನಿಮಗೆ,,,,, ನಿಮಗೆ ಮನಸ್ಸು ಎಂಬುದೇ ಇಲ್ಲವಾ..?"
ಎಂದವನೇ ಸೊಸೆಯನ್ನು ಕರೆದುಕೊಂಡು ಒಳಕ್ಕೆ ಹೋದ..... ಸೊಸೆಯ ಕಣ್ಣಲ್ಲಿ ನೀರಿತ್ತು..... ನಾನು ಸುಮ್ಮನೆ ಹೋಗಿ
ನನ್ನ ರೂಮಿನಲ್ಲಿ ಮಲಗಿದೆ. ಊಟ ಮಾಡುವ ಮನಸ್ಸಿರಲಿಲ್ಲ......
ಮಗ್ಗಲು
ಬದಲಿಸಿ ಬದಲಿಸಿ ಮಲಗಿದವನಿಗೆ ಯಾವಾಗ ನಿದ್ದೆ ಹತ್ತಿತ್ತೋ ತಿಳಿಯದು, ಎದ್ದಾಗ ಆರು ಗಂಟೆಯಾಗಿತ್ತು...... ಮುಖ ತೊಳೆದೆ...... ದೇವರಿಗೆ ದೀಪ ಹಚ್ಚಿದೆ...... ಅದೂ ಇದು ಕೆಲಸ ಮುಗಿಸಿದಾಗ ಗಂಟೆ ಎಂಟಾಯಿತು...... ಸ್ವಲ್ಪವೇ
ಊಟ ಮಾಡಿ, ನನ್ನ ರೂಮಿನ ಮೂಲೆಯಲ್ಲಿದ್ದ ಚಿಕ್ಕ ಕಾಗದದ
ಪೊಟ್ಟಣ ಕಿಸೆಯಲ್ಲಿ ಹಾಕಿಕೊಂಡೆ..... ಹೊರಗೆ ಬರುವಾಗ ಮಗ ’ಎಲ್ಲಿಗೆ .?’ ಎನ್ನುವ ಹಾಗೆ ನೋಡಿದ..... ನಾನು
ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ...... ’ಮಗನೇ, ನೀನು ಒಂದು ವರ್ಷ ಪಟ್ಟ ನೋವಿಗೆ ಇಂದು ಕೊನೆ ಹಾಡುತ್ತೇನೆ.’ ಎಂದು ಮನಸ್ಸಿನಲ್ಲೇ ಎಂದುಕೊಂಡು ಹೊರಬಿದ್ದೆ...... ಟೈಮ್ ನೋಡಿದೆ, ಹತ್ತು ಗಂಟೆ..... ಗೂಡಿನಲ್ಲಿ ಇಟ್ಟಿದ್ದ ಟಿಫಿನ್ ಬಾಕ್ಸ್ ತೆಗೆದುಕೊಂಡೆ..... ಸೈಕಲ್ ತುಳಿದೆ.....
ಆ ಜಾಗಕ್ಕೆ ಸುಮಾರು ಅರ್ಧ
ಘಂಟೆ ಸೈಕಲ್ ತುಳಿಯಬೇಕು..... ಯಾರೂ ಸಿಗಲಿಲ್ಲ ರಸ್ತೆಯಲ್ಲಿ..... ಅದೇ ತಿರುವು.... ಪಕ್ಕದಲ್ಲಿ ಕಸದ ತೊಟ್ಟಿ.
ಸೈಕಲ್ ನಿಲ್ಲಿಸಿದೆ. ಬೆಲ್ ಮಾಡಿದೆ..... ಬಂತು ಸದ್ದು..... ಬೌವ್..ಬೌವ್... ಬಾಲ ಅಲ್ಲಾಡಿಸುತ್ತಾ
ಬಂತು ಒಂದು ನಾಯಿ.... ಟಿಫಿನ್ ಬಾಕ್ಸ್ ಹೊರತೆಗೆದೆ..... ಒಂದು ತುಂಡನ್ನ ನಾಯಿಗೆ ಎಸೆದೆ.... "ಬೌವ್..
ಬೌವ್" ಜೋರಾಗಿ ಕೂಗಿತು ನಾಯಿ..... ಅದು ತನ್ನ ಸಹಪಾಟಿಗಳನ್ನು ಕರೆಯುತ್ತಿತ್ತು.... ನನಗೂ ಅದೇ ಬೇಕಿತ್ತು.... ನಾನು ಎಸೆದ ತುಂಡನ್ನ ಮೂಸಿದ ನಾಯಿ
ನಾಲಿಗೆ ಹೊರಹಾಕಿ ನೆಕ್ಕಿತು.... ರುಚಿ ಆಗಿತ್ತು ಎನಿಸತ್ತೆ....ಇನ್ನೂ ಜೋರಾಗಿ ಬೊಗಳಿತು...... ಬೌವ್...
ಬೌವ್... ಬೌವ್... ಅದೆಲ್ಲಿತ್ತೋ ನಾಯಿಯ ಹಿಂಡು..... ಓಡುತ್ತಾ ಬಂದವು..... ಅವೆಲ್ಲಾ ನನ್ನನ್ನೇ ಗುರುಗುಟ್ಟಿ
ನೋಡಿದವು.....
ನಾನು ಯಾವಾಗಲೂ ನಾಯಿಗೆ ಬಿಸ್ಕಿಟ್ ಹಾಕುತ್ತಿದ್ದೆ..... ಹಾಗಾಗಿ ನಾನು ಅವಕ್ಕೆ ಪರಿಚಿತ ಮುಖ...... ನನ್ನ ಕಣ್ಣು ಹುಡುಕುತ್ತಿತ್ತು..... ಎಲ್ಲಾ ನಾಯಿಯನ್ನೂ ಗಮನ ಇಟ್ಟು ನೋಡಿದೆ.... ಅವುಗಳ ಕಿರುಚಾಟ ಜೋರಾಗಿತ್ತು...... ನಾನು ಹುಡುಕುತ್ತಲೇ ಇದ್ದೆ...... ಆಗ ಬಂತು ಒಂದು ನಾಯಿ..... ಕುತ್ತಿಗೆಯಲ್ಲಿ ಕೆಂಪು ಬಣ್ಣದ ಬೆಲ್ಟ್ ಇತ್ತು..... ಬಾಲ ಅಲ್ಲಾಡಿಸುತ್ತಾ ಬಂತು..... ನನ್ನ ಕೈ ಸಾವಕಾಶವಾಗಿ ಕಿಸೆಯಲ್ಲಿದ್ದ ಪೊಟ್ಟಣ ತೆಗೆಯಿತು...... ಪೊಟ್ಟಣ ಬಿಚ್ಚಿ ಕೋಳಿ ಸಾರಿಗೆ ಹಾಕಿ ಕಲಸಿದೆ..... ಕಲಸುತ್ತಾ ಇರುವಾಗ ನನ್ನ ಕಣ್ಣಲ್ಲಿ ನೀರು ಸುರಿಯುತ್ತಿತ್ತು..... ಕಲಸಿದೆ ಕೋಳಿ ತುಂಡುಗಳನ್ನು ಒಂದೊಂದೇ ನಾಯಿಗಳ ಕಡೆ ಎಸೆದೆ..... ಮೊದಲು ಬಂದಿದ್ದೇ ಕೆಂಪು ಬೆಲ್ಟ್ ನಾಯಿ..... ನಂತರ ಗುಂಪಿನಲ್ಲಿದ್ದ ಎಲ್ಲಾ ನಾಯಿಗಳೂ ತಿಂದವು..... ನನ್ನ ಕಣ್ಣುಗಳು ಕೆಂಪು ಬೆಲ್ಟ್ ನಾಯಿಯನ್ನೇ ನೋಡುತ್ತಿದ್ದವು..... ಅದಕ್ಕೆ ರುಚಿ ಸಿಕ್ಕಿತ್ತು ಎನಿಸತ್ತೆ..... ಇನ್ನೂ ಬೊಗಳಿತು....
ನಾನು ಬಾಕ್ಸ್ ನಲ್ಲಿದ್ದಾ ಎಲ್ಲಾ ತುಂಡುಗಳನ್ನೂ ಎಸೆದೆ..... ಮುಗಿಬಿದ್ದು ತಿಂದವು.... ಆರಂಭದಲ್ಲಿ ತಿನ್ನುವಾಗಿನ ಹುರುಪು ಇರಲಿಲ್ಲ ಈಗ..... ನನ್ನ ಕಣ್ಣುಗಳಲ್ಲಿ ಕ್ರೌರ್ಯ ತುಂಬಿತ್ತು...... ಕೆಂಪು ಬೆಲ್ಟ್ ನಾಯಿ ನೆಲದ ಮೇಲೆ ಬಿತ್ತು..... ಕೂಡಲೇ ಎಲ್ಲಾ ನಾಯಿಗಳು ವಿಚಿತ್ರವಾಗಿ ಕೂಗುತ್ತಾ ಬಿದ್ದವು.... ನನಗೆ ಗೊತ್ತಿತ್ತು..... ಇನ್ನು ಕೇವಲ ನಿಮಿಷಗಳಷ್ಟೇ ಇವುಗಳ ಆಯುಷ್ಯ ಎಂದು..... ನನ್ನ ಕಣ್ಣು ಕೆಂಪು ಬೆಲ್ಟ್ ನಾಯಿಯನ್ನೇ ನೋಡುತ್ತಿತ್ತು..... ಕೆಳಕ್ಕೆ ಬಿದ್ದ ನಾಯಿಯ ಬಾಯಿಯಿಂದ ನೊರೆ ಬರಲು ಶುರು ಆಯಿತು..... ನನ್ನ ಮುಷ್ಟಿ ಬಿಗಿಯಿತು.....
ನಾನು ಯಾವಾಗಲೂ ನಾಯಿಗೆ ಬಿಸ್ಕಿಟ್ ಹಾಕುತ್ತಿದ್ದೆ..... ಹಾಗಾಗಿ ನಾನು ಅವಕ್ಕೆ ಪರಿಚಿತ ಮುಖ...... ನನ್ನ ಕಣ್ಣು ಹುಡುಕುತ್ತಿತ್ತು..... ಎಲ್ಲಾ ನಾಯಿಯನ್ನೂ ಗಮನ ಇಟ್ಟು ನೋಡಿದೆ.... ಅವುಗಳ ಕಿರುಚಾಟ ಜೋರಾಗಿತ್ತು...... ನಾನು ಹುಡುಕುತ್ತಲೇ ಇದ್ದೆ...... ಆಗ ಬಂತು ಒಂದು ನಾಯಿ..... ಕುತ್ತಿಗೆಯಲ್ಲಿ ಕೆಂಪು ಬಣ್ಣದ ಬೆಲ್ಟ್ ಇತ್ತು..... ಬಾಲ ಅಲ್ಲಾಡಿಸುತ್ತಾ ಬಂತು..... ನನ್ನ ಕೈ ಸಾವಕಾಶವಾಗಿ ಕಿಸೆಯಲ್ಲಿದ್ದ ಪೊಟ್ಟಣ ತೆಗೆಯಿತು...... ಪೊಟ್ಟಣ ಬಿಚ್ಚಿ ಕೋಳಿ ಸಾರಿಗೆ ಹಾಕಿ ಕಲಸಿದೆ..... ಕಲಸುತ್ತಾ ಇರುವಾಗ ನನ್ನ ಕಣ್ಣಲ್ಲಿ ನೀರು ಸುರಿಯುತ್ತಿತ್ತು..... ಕಲಸಿದೆ ಕೋಳಿ ತುಂಡುಗಳನ್ನು ಒಂದೊಂದೇ ನಾಯಿಗಳ ಕಡೆ ಎಸೆದೆ..... ಮೊದಲು ಬಂದಿದ್ದೇ ಕೆಂಪು ಬೆಲ್ಟ್ ನಾಯಿ..... ನಂತರ ಗುಂಪಿನಲ್ಲಿದ್ದ ಎಲ್ಲಾ ನಾಯಿಗಳೂ ತಿಂದವು..... ನನ್ನ ಕಣ್ಣುಗಳು ಕೆಂಪು ಬೆಲ್ಟ್ ನಾಯಿಯನ್ನೇ ನೋಡುತ್ತಿದ್ದವು..... ಅದಕ್ಕೆ ರುಚಿ ಸಿಕ್ಕಿತ್ತು ಎನಿಸತ್ತೆ..... ಇನ್ನೂ ಬೊಗಳಿತು....
ನಾನು ಬಾಕ್ಸ್ ನಲ್ಲಿದ್ದಾ ಎಲ್ಲಾ ತುಂಡುಗಳನ್ನೂ ಎಸೆದೆ..... ಮುಗಿಬಿದ್ದು ತಿಂದವು.... ಆರಂಭದಲ್ಲಿ ತಿನ್ನುವಾಗಿನ ಹುರುಪು ಇರಲಿಲ್ಲ ಈಗ..... ನನ್ನ ಕಣ್ಣುಗಳಲ್ಲಿ ಕ್ರೌರ್ಯ ತುಂಬಿತ್ತು...... ಕೆಂಪು ಬೆಲ್ಟ್ ನಾಯಿ ನೆಲದ ಮೇಲೆ ಬಿತ್ತು..... ಕೂಡಲೇ ಎಲ್ಲಾ ನಾಯಿಗಳು ವಿಚಿತ್ರವಾಗಿ ಕೂಗುತ್ತಾ ಬಿದ್ದವು.... ನನಗೆ ಗೊತ್ತಿತ್ತು..... ಇನ್ನು ಕೇವಲ ನಿಮಿಷಗಳಷ್ಟೇ ಇವುಗಳ ಆಯುಷ್ಯ ಎಂದು..... ನನ್ನ ಕಣ್ಣು ಕೆಂಪು ಬೆಲ್ಟ್ ನಾಯಿಯನ್ನೇ ನೋಡುತ್ತಿತ್ತು..... ಕೆಳಕ್ಕೆ ಬಿದ್ದ ನಾಯಿಯ ಬಾಯಿಯಿಂದ ನೊರೆ ಬರಲು ಶುರು ಆಯಿತು..... ನನ್ನ ಮುಷ್ಟಿ ಬಿಗಿಯಿತು.....
ನಾಯಿ ಕಾಲುಗಳನ್ನು ಬಡಿಯಲು ಶುರು ಮಾಡಿತು......
ಅಂದು.....ಅವಳೂ ತನ್ನ ಕೈ ಕಾಲು ಬಡಿಯುತ್ತಿದ್ದಳು....
ಅಂದು.....ಅವಳೂ ತನ್ನ ಕೈ ಕಾಲು ಬಡಿಯುತ್ತಿದ್ದಳು....
ಇಂದು.....ಈ ನಾಯಿಯ ಕಣ್ಣು
ನನ್ನನ್ನೇ ನೋಡುತ್ತಿದ್ದವು..
ಅಂದು.....ಅವಳ ಕಣ್ಣು ನನ್ನನ್ನೇ
ನೋಡುತ್ತಿದ್ದವು..ಸಹಾಯಕ್ಕಾಗಿ...
ನಾನು ಕಣ್ಣು ಮುಚ್ಚಿದೆ.......
ಒಂದನೇ ತರಗತಿ ಓದುವ ಮೊಮ್ಮಗಳನ್ನು ಶಾಲೆಯಿಂದ ಕರೆದುತರುವುದೇ
ನನ್ನ ನಿವ್ರತ್ತಿ ಜೀವನದ ಪ್ರಮುಖ ಕೆಲಸವಾಗಿತ್ತು.... ಅದನ್ನು ನಾನು ತುಂಬಾ ಪ್ರೀತಿಯಿಂದ ಮಾಡುತ್ತಿದ್ದೆ..... ಮೊಮ್ಮಗಳ ಶಾಲೆ ಬಿಡುವ ಒಂದು ತಾಸು ಮೊದಲೇ ನಾನು ಗೇಟಿನ
ಬಳಿ ಕಾಯುತ್ತಿದ್ದೆ..... ಅವಳಿಗಾಗಿ ಚೊಕೊಲೇಟ್ ಹಿಡಿದಿರುತ್ತಿದ್ದೆ..... ಶಾಲೆ ಬಿಟ್ಟವಳೇ ಓಡಿ ಬಂದು ಚಾಕೊಲೇಟ್
ಹುಡುಕುತ್ತಿದ್ದಳು..... ಸೈಕಲ್ ಮೇಲೆ ಕುಳಿತು ಹೊರಟೆವು ಎಂದರೆ ಅವಳಿಗೆ ಆನೆಯ ಮೇಲೆ ಸವಾರಿ ಮಾಡಿದ ಹಾಗೆ......
ಅವಳಿಗೆ ನಾಯಿ ಎಂದರೆ ತುಂಬಾ ಪ್ರೀತಿ..... ಅದಕ್ಕಾಗಿಯೇ ಅಮ್ಮನಿಂದ ಹಣ ಪಡೆಯುತ್ತಿದ್ದಳು..... ಅದರಿಂದ ಬಿಸ್ಕಿಟ್ ತೆಗೆದುಕೊಂಡು ದಾರಿಯಲ್ಲಿ ಸಿಕ್ಕ ನಾಯಿಗಳಿಗೆ ತಿನ್ನಿಸುವುದು ಅವಳ ಇಷ್ಟದ ಕೆಲಸವಾಗಿತ್ತು..... ಅದರಲ್ಲೂ ಅವಳ ಶಾಲೆಯ ತಿರುವಿನಲ್ಲಿ ಸಿಗುವ ಕೆಂಪು ಬೆಲ್ಟ್ ನಾಯಿ ಕಂಡರೆ,ಅದಕ್ಕೆ ಎರಡು ಬಿಸ್ಕೆಟ್ ಹೆಚ್ಚು..... ಅವಳ ಈ ಖುಶಿ ನೋಡಿ ನನಗೂ ಸಂತೋಷವಾಗುತ್ತಿತ್ತು....
ಅವಳಿಗೆ ನಾಯಿ ಎಂದರೆ ತುಂಬಾ ಪ್ರೀತಿ..... ಅದಕ್ಕಾಗಿಯೇ ಅಮ್ಮನಿಂದ ಹಣ ಪಡೆಯುತ್ತಿದ್ದಳು..... ಅದರಿಂದ ಬಿಸ್ಕಿಟ್ ತೆಗೆದುಕೊಂಡು ದಾರಿಯಲ್ಲಿ ಸಿಕ್ಕ ನಾಯಿಗಳಿಗೆ ತಿನ್ನಿಸುವುದು ಅವಳ ಇಷ್ಟದ ಕೆಲಸವಾಗಿತ್ತು..... ಅದರಲ್ಲೂ ಅವಳ ಶಾಲೆಯ ತಿರುವಿನಲ್ಲಿ ಸಿಗುವ ಕೆಂಪು ಬೆಲ್ಟ್ ನಾಯಿ ಕಂಡರೆ,ಅದಕ್ಕೆ ಎರಡು ಬಿಸ್ಕೆಟ್ ಹೆಚ್ಚು..... ಅವಳ ಈ ಖುಶಿ ನೋಡಿ ನನಗೂ ಸಂತೋಷವಾಗುತ್ತಿತ್ತು....
ಸರಿಯಾಗಿ ವರ್ಷದ ಹಿಂದೆ..... ಅವಳ ಶಾಲೆ ಮುಗಿದು ಕರೆದುಕೊಂಡು
ಬರುತ್ತಿದ್ದೆ..... ಅವಳಿಗೆ ಇಷ್ಟವಾದ ಬಿಳಿಯ ಡ್ರೆಸ್ ಹಾಕಿದ್ದಳು..... ಅಂದು ಮೂರು ಬಿಸ್ಕೇಟ್ ಪ್ಯಾಕ್ ಬೇಕು
ಅಂದಳು..... ತೆಗೆದುಕೊಟ್ಟೆ..... ಎಂದಿನಂತೆ ಎಲ್ಲಾ ನಾಯಿಗಳಿಗೂ ಹಾಕುತ್ತಾ ಬಂದವಳು, ತಿರುವಿನಲ್ಲಿದ್ದ ಕೆಂಪು
ಬೆಲ್ಟ್ ನಾಯಿ ನೋಡಿ ಸೈಕಲ್ ನಿಲ್ಲಿಸಲು ಹೇಳಿದಳು..... ಒಂದು ವರ್ಷದಿಂದ ನೋಡುತ್ತಾ ಬಂದಿದ್ದರಿಂದ ನನಗೂ
ಆ ನಾಯಿ ಪರಿಚಿತವಾಗಿತ್ತು..... ಮೊಮ್ಮಗಳು ಒಂದು ಬಿಸ್ಕೇಟ್ ಪ್ಯಾಕ್ ತೆಗೆದುಕೊಂಡು ಇಳಿದಳು..... ಕೆಂಪು ಬೆಲ್ಟ್
ನಾಯಿ ಇವಳ ಹತ್ತಿರ ಬಂತು..... ಇವಳಂತೂ ಖುಶಿಯಿಂದ ಒಂದೊಂದೇ ಬಿಸ್ಕೀಟ್ ಹಾಕುತ್ತಿದ್ದಳು....
ನಾನು ಸ್ವಲ್ಪವೇ ದೂರದಲ್ಲಿದ್ದೆ..... ಸುಮಾರು ನಾಲ್ಕೈದು ಬಿಸ್ಕೇಟ್ ತಿಂದ ನಾಯಿ ಇನ್ನೂ ಬೊಗಳಲು ಶುರು ಮಾಡಿತು.... ಪಕ್ಕದಲ್ಲೇ ಕಸದ ತೊಟ್ಟಿಯಲ್ಲಿ ಚಿಂದಿ ತಿನ್ನುತ್ತಿದ್ದ ನಾಯಿಗಳೂ ಬಂದವು...... ಮೊಮ್ಮಗಳು ಖುಶಿಯಿಂದ ಅವಕ್ಕೂ ಬಿಸ್ಕೇಟ್ ಹಾಕಿದಳು..... ಎನೆನ್ನಿಸಿತೋ ಕೆಂಪು ಬೆಲ್ಟ್ ನಾಯಿಗೆ.... ಸೀದಾ ಮೊಮ್ಮಗಳ ಕೈಯಿಗೆ ಬಾಯಿ ಹಾಕಿತು...... ಅವಳು ಕೂಗಿ ಬಿಟ್ಟಳು..... ನಾನು ಓಡಿದೆ..... ಆ ನಾಯಿ ಕೈ ಬಿಡಲೇ ಇಲ್ಲ..... ಅದರ ಜೊತೆಗಿದ್ದ ನಾಯಿಗಳೂ ಮೊಮ್ಮಗಳ ಕಾಲು ಕಚ್ಚಿಯೇ ಬಿಟ್ಟವು..... ನಾನು ಕೋಲು ಹುಡುಕುತ್ತಿದ್ದೆ..... ಸಿಗಲಿಲ್ಲ..... ಅವುಗಳ ಹತ್ತಿರ ಹೋದೆ.....
ಇನ್ನೂ ನಾಲ್ಕಾರು ನಾಯಿ ಓಡಿ ಬಂದವು..... ನನ್ನನ್ನು ನನ್ನ ಮೊಮ್ಮಗಳ ಬಳಿ ಹೋಗದಂತೆ ಅಡ್ದಗಟ್ಟಿದವು.... ನನ್ನನ್ನೂ ಕಚ್ಚಿದವು..... ಆ ಕೆಂಪು ಬೆಲ್ಟ್ ನಾಯಿ ನನ್ನ ಮೊಮ್ಮಗಳ ಹೊಟ್ಟೆಗೆ ಕಚ್ಚಿತ್ತು..... ಅವಳ ಕೂಗು ಕೇಳಿ ಅಕ್ಕ ಪಕ್ಕದವರೂ ಬಂದರು. ಇನ್ನೂ ಸಿಟ್ಟಿಗೆದ್ದ ನಾಯಿ ಅವಳನ್ನ ಎಳೆದಾಡಿತು..... ಅವಳ ಕಣ್ಣು ನನ್ನನ್ನೇ ನೋಡುತ್ತಿತ್ತು.... ಸಹಾಯಕ್ಕಾಗಿ ಕೂಗುತ್ತಿತ್ತು... ನಾನು ಅಸಹಾಯಕನಾಗಿದ್ದೆ........ ಶಾಕ್ ಗೆ ಒಳಗಾಗಿದ್ದೆ..... ಆ ನಾಯಿ ನನ್ನ ಮೊಮ್ಮಗಳನ್ನು ಬಿಟ್ಟಾಗ ಅವಳು ತೊಟ್ಟಿದ್ದ ಬಿಳಿ ಬಣ್ಣದ ಡ್ರೆಸ್ ಕೆಂಪಾಗಿತ್ತು....... ಎಲ್ಲರೂ ಸೇರಿ ನಾಯಿಯಿಂದ ಬಿಡಿಸುವ ಹೊತ್ತಿಗೆ ನನ್ನ ಮೊಮ್ಮಗಳ ಜೀವ ಹೊರಟು ಹೋಗಿತ್ತು..... ಅವಳ ಕಣ್ಣು ತೆರೆದೇ ಇತ್ತು....... ನನ್ನನ್ನೇ ನೋಡುತ್ತಿತ್ತು......
ನಾನು ಸ್ವಲ್ಪವೇ ದೂರದಲ್ಲಿದ್ದೆ..... ಸುಮಾರು ನಾಲ್ಕೈದು ಬಿಸ್ಕೇಟ್ ತಿಂದ ನಾಯಿ ಇನ್ನೂ ಬೊಗಳಲು ಶುರು ಮಾಡಿತು.... ಪಕ್ಕದಲ್ಲೇ ಕಸದ ತೊಟ್ಟಿಯಲ್ಲಿ ಚಿಂದಿ ತಿನ್ನುತ್ತಿದ್ದ ನಾಯಿಗಳೂ ಬಂದವು...... ಮೊಮ್ಮಗಳು ಖುಶಿಯಿಂದ ಅವಕ್ಕೂ ಬಿಸ್ಕೇಟ್ ಹಾಕಿದಳು..... ಎನೆನ್ನಿಸಿತೋ ಕೆಂಪು ಬೆಲ್ಟ್ ನಾಯಿಗೆ.... ಸೀದಾ ಮೊಮ್ಮಗಳ ಕೈಯಿಗೆ ಬಾಯಿ ಹಾಕಿತು...... ಅವಳು ಕೂಗಿ ಬಿಟ್ಟಳು..... ನಾನು ಓಡಿದೆ..... ಆ ನಾಯಿ ಕೈ ಬಿಡಲೇ ಇಲ್ಲ..... ಅದರ ಜೊತೆಗಿದ್ದ ನಾಯಿಗಳೂ ಮೊಮ್ಮಗಳ ಕಾಲು ಕಚ್ಚಿಯೇ ಬಿಟ್ಟವು..... ನಾನು ಕೋಲು ಹುಡುಕುತ್ತಿದ್ದೆ..... ಸಿಗಲಿಲ್ಲ..... ಅವುಗಳ ಹತ್ತಿರ ಹೋದೆ.....
ಇನ್ನೂ ನಾಲ್ಕಾರು ನಾಯಿ ಓಡಿ ಬಂದವು..... ನನ್ನನ್ನು ನನ್ನ ಮೊಮ್ಮಗಳ ಬಳಿ ಹೋಗದಂತೆ ಅಡ್ದಗಟ್ಟಿದವು.... ನನ್ನನ್ನೂ ಕಚ್ಚಿದವು..... ಆ ಕೆಂಪು ಬೆಲ್ಟ್ ನಾಯಿ ನನ್ನ ಮೊಮ್ಮಗಳ ಹೊಟ್ಟೆಗೆ ಕಚ್ಚಿತ್ತು..... ಅವಳ ಕೂಗು ಕೇಳಿ ಅಕ್ಕ ಪಕ್ಕದವರೂ ಬಂದರು. ಇನ್ನೂ ಸಿಟ್ಟಿಗೆದ್ದ ನಾಯಿ ಅವಳನ್ನ ಎಳೆದಾಡಿತು..... ಅವಳ ಕಣ್ಣು ನನ್ನನ್ನೇ ನೋಡುತ್ತಿತ್ತು.... ಸಹಾಯಕ್ಕಾಗಿ ಕೂಗುತ್ತಿತ್ತು... ನಾನು ಅಸಹಾಯಕನಾಗಿದ್ದೆ........ ಶಾಕ್ ಗೆ ಒಳಗಾಗಿದ್ದೆ..... ಆ ನಾಯಿ ನನ್ನ ಮೊಮ್ಮಗಳನ್ನು ಬಿಟ್ಟಾಗ ಅವಳು ತೊಟ್ಟಿದ್ದ ಬಿಳಿ ಬಣ್ಣದ ಡ್ರೆಸ್ ಕೆಂಪಾಗಿತ್ತು....... ಎಲ್ಲರೂ ಸೇರಿ ನಾಯಿಯಿಂದ ಬಿಡಿಸುವ ಹೊತ್ತಿಗೆ ನನ್ನ ಮೊಮ್ಮಗಳ ಜೀವ ಹೊರಟು ಹೋಗಿತ್ತು..... ಅವಳ ಕಣ್ಣು ತೆರೆದೇ ಇತ್ತು....... ನನ್ನನ್ನೇ ನೋಡುತ್ತಿತ್ತು......
ಇವತ್ತೂ...... ಈ ನಾಯಿಯ ಕಣ್ಣು
ನನ್ನನ್ನೇ ನೋಡುತ್ತಿದೆ... ಸಹಾಯಕ್ಕಾಗಿಯಂತೂ ಅಲ್ಲ ...... ಈಗ ನಾಯಿ ನಿಸ್ಚಲವಾಗಿತ್ತು........ ಅದರ ಸುತ್ತಲೂ ಹತ್ತಕ್ಕೂ
ಹೆಚ್ಚಿಗೆ ನಾಯಿ ಸತ್ತಿತ್ತು..... ನನ್ನ ಕಣ್ಣಲ್ಲಿ ನೀರು ಹರಿಯುತ್ತಿತ್ತು..... ಮೊಮ್ಮಗಳು ನೆನಪಾಗುತ್ತಿದ್ದಳು......
ಅವಳು ಸತ್ತು ಸರಿಯಾಗಿ ವರ್ಷಕ್ಕೆ ಈ ನಾಯಿಯನ್ನು ಕೊಂದಿದ್ದೆ ನಾನು...... ನಾಳೆ ನಡೆಯುವ ಅವಳ ವರ್ಷದ ಪೂಜೆಗೆ
ಸರಿಯಾದ ಅರ್ಪಣೆ ನೀಡಿದೆ ಎನ್ನುವ ಭಾವ ನನಗೆ ಬಂದಿತ್ತು..... ಕೈಗೆ ಸಿಕ್ಕ ದೊಡ್ಡ ಕಲ್ಲಿನಿಂದ ಆ ಕೆಂಪು
ಬೆಲ್ಟ್ ನಾಯಿಯ ಮೇಲೆ ಎಸೆದೆ..... ಮಿಸುಕಾಡಲಿಲ್ಲ ಅದು.... ಮನಸ್ಸು ಶಾಂತವಾಗಿತ್ತು..... ಮನೆ ಕಡೆ ಸೈಕಲ್
ತುಳಿದೆ......
ನೆಮ್ಮದಿಯ ನಿದ್ದೆ ಬಂದಿತ್ತು..... ಬೆಳಿಗ್ಗೆ ಬೇಗನೇ ಎದ್ದು ಸ್ನಾನ ಮುಗಿಸಿದೆ..... ದೇವರಿಗೆ ಮತ್ತು ಪಕ್ಕದಲ್ಲೇ ಇದ್ದ ಮೊಮ್ಮಗಳ ಫೋಟೊಗೆ
ಕೈ ಮುಗಿದೆ..... ಅವಳ ಮುಖ ಶಾಂತವಾಗಿತ್ತು..... ಆಗ ಮಗ ನನ್ನ ಹತ್ತಿರ ಬಂದು ನಿಂತ "ರಾತ್ರಿ ಎಲ್ಲಿಗೆ
ಹೋಗಿದ್ರೀ ಅಪ್ಪಾ..? .. ಈಗ ಬಂದ ಮುನಿಯಮ್ಮ ಹೇಳಿದ್ರು ನೀವು ಆ ನಾಯಿಗಳಿಗೆ ಕೋಳಿ ಸಾರು ಮಾಡಿಸಿಕೊಂಡು
ಹೋದ ವಿಷ್ಯ..... ನಿಮ್ಮ ಬಗ್ಗೆ ನನಗೆ ನಾಚಿಕೆಯಾಗತ್ತೆ ಅಪ್ಪಾ.. ನಿಮ್ಮದೇ ಮೊಮ್ಮಗಳನ್ನು ಕೊಂದ ನಾಯಿಗಳಿಗೆ
ಸತ್ಕಾರ ಮಾಡಲು ಹೋಗಿದ್ರಲ್ಲಾ ಅಪ್ಪಾ...? ಏನೆನ್ನಲೀ ನಿಮ್ಮ ಮನಸ್ಸಿಗೆ...?" ಇನ್ನೂ ಹೇಳುವವನಿದ್ದ.... ಆಗಲೇ ಪಕ್ಕದ ಮನೆಯ ಹುಡುಗ ಓಡುತ್ತಾ ಬಂದ .. ಆತ ನನ್ನ ಮೊಮ್ಮಗಳ
ಕ್ಲಾಸ್ ಮೇಟ್, " ಅಜ್ಜಾ , ನಮ್ಮ ಶ್ವೇತಾಳನ್ನು ಕಚ್ಚಿದ ನಾಯಿ ಸತ್ತು ಹೋಗಿದೆಯಂತೆ..... ನನ್ನ
ಅಂಕಲ್ ಹೇಳ್ತಾ ಇದ್ರು"ಎಂದ...... ನನ್ನ ಮಗ ನನ್ನನ್ನೇ ನೋಡುತ್ತಿದ್ದ..... ಸೊಸೆ ಓಡಿ ಬಂದಳು.
ಆಷ್ಟರಲ್ಲೇ ಹೊರಗಡೆ ಕಾರು ಬಂದ ಸದ್ದಾಯಿತು..... ಡ್ರೈವರ್ ಒಳಕ್ಕೆ
ಬರುತ್ತಾ " ಸರ್, ಕಾರ್ ಬಂದಿದೆ ನಿಮ್ಮನ್ನು ಸನ್ಮಾನಕ್ಕೆ ಕರೆದೊಯ್ಯಲು..... ಅಂದಹಾಗೆ ನೀವು ವರ್ಷ
ಪೂರ್ತಿ ಯಾವ ನಾಯಿಯನ್ನು ಪಾಲಿಕೆಯವರು ಕೊಲ್ಲಬಾರದು ಎಂದು ಕೋರ್ಟ್ ಗೆ ಹೋಗಿ ಸ್ಟೇ ತಂದಿದ್ದೀರೋ,
ಅದಕ್ಕಾಗಿಯೇ ನಿಮಗೆ ಪ್ರಾಣಿ ದಯಾ ಸಂಘದ ವತಿಯಿಂದ ಇವತ್ತು ಸನ್ಮಾನ ನಡೆಯಲಿಕ್ಕಿದೆಯೋ ಅದೇ ನಾಯಿಯನ್ನು
ಯಾರೋ ಸಾಯಿಸಿದ್ದಾರೆ ಸಾರ್...... ಚಿಕನ್ ಗೆ ವಿಷ ಸೇರಿಸಿ ಹಾಕಿದ್ದಾರೆ ಸಾರ್..... ಸುಮಾರು ಇಪ್ಪತ್ತು ನಾಯಿ
ಸತ್ತಿದೆ..... ಅದಿರಲಿ ಸಾರ್, ನಾವು ಹೊರಡೋಣ.... ಲೇಟ್ ಆಗತ್ತೆ ಸರ್" ಎಂದ.......
Sep 17, 2012
ಪ್ಲೀಸ್..... ಬೇಡ........!!!
ಆಫೀಸಿನ ಕಿರಿಕಿರಿಯಿಂದ ಮನೆಗೆ ಬಂದರೂ ಮನೆಯವಳ ಕಿರುಕುಳ ತಪ್ಪಲಿಲ್ಲ.... ವಿಷಯ ಚಿಕ್ಕದೇ ಆಗಿದ್ದರೂ ಅವಳ ಹಠದಿಂದಾಗಿ ನನಗೆ ಸಿಟ್ಟು ಬಂದಿತ್ತು.... ಈ ಸಾರಿ ಊರಿಗೆ ಹೋಗೋದು ಬೇಡ, ಮುಂದಿನ ಸಾರಿ ಹೋಗೋಣ ಎಂದರೂ ಕೇಳಿರಲಿಲ್ಲ ಅವಳು.... ಮನೆಯಲ್ಲಿ ಕುಳಿತಿರಲು ಮನಸ್ಸಾಗದೇ ಹೊರಗೆ ಬಂದೆ.... ಬೈಕ್ ಕೀ ಜೇಬಿನಲ್ಲೇ ಇತ್ತು.... ಬೈಕ್ ನ ಕಣ್ಣಿಗೆ ಚುಚ್ಚಿದೆ.... ಸಿಟ್ಟಿನಿಂದಲೇ ಕಿಕ್ ಹೊಡೆದೆ.... ಬೈಕ್ ತಿರುಗಿಸುತ್ತಿರುವಾಗಲೇ ನನ್ನವಳು ಹೊರಕ್ಕೆ ಓಡಿ ಬಂದಳು.... ಯಾಕೋ, ಅವಳನ್ನು ನೋಡಲೂ ಮನಸಾಗಲಿಲ್ಲ.... ಆಕ್ಸಿಲೇಟರ್ ಹೆಚ್ಚಿಸಿದೆ.... ಏನೂ ಕೆಲಸವಿರದೇ ಇದ್ದರೂ, ಸುಮ್ಮನೆ ಒಂದು ಡ್ರೈವ್ ಗೆ ಹೋಗಿ ಬರೋಣ ಎನಿಸಿತ್ತು.... ಮನೆಯಲ್ಲೇ ಇದ್ದರೆ ಜಗಳವಾಗಬಹುದು ಎಂಬ ಭಯವಿತ್ತು.... ಅದಕ್ಕೆ ಹೊರಬಿದ್ದಿದ್ದೆ.... ಹೊರಗೇನೋ ಬಂದಿದ್ದೆ.... ಎಲ್ಲಿಗೆ ಹೋಗೋದು ಅಂತ ಗೊತ್ತಿರಲಿಲ್ಲ.... ಸಿಟಿ ಕಡೆ ಹೋಗಲು ಮನಸ್ಸಿರಲಿಲ್ಲ, ಹೋದರೆ ಯಾರಾದರೂ ಪರಿಚಯದವರು ಸಿಕ್ಕಾರು ಎನ್ನುವ ಅನುಮಾನ ಇತ್ತು.... ಇನ್ನೊಂದು ದಾರಿ ಹಿಡಿದೆ.......
ಒಂದು ಅರ್ಧ ತಾಸು ಡ್ರೈವ್ ಮಾಡಿ ಬರೋಣ ಎಂದು ಹೊರಟಿದ್ದೆ.... ಸಿಟ್ಟು, ಬೇಸರದ ಭರದಲ್ಲಿ ಎಷ್ಟು ದೂರ ಹೋಗಿದ್ದನೋ ತಿಳಿದಿರಲಿಲ್ಲ.... ಊರಿನ ಸ್ಮಶಾನವನ್ನೂ ದಾಟಿ ಬಂದಿದ್ದೆ.... ಒಂದು ಗದ್ದೆಯ ಪಕ್ಕದಲ್ಲಿ ಬೈಕ್ ನಿಲ್ಲಿಸಿದೆ.... ಸಾವಕಾಶವಾಗಿ ಒಂದು ಸಿಗರೇಟ್ ಎಳೆದೆ.... ದಮ್ ಬಿಡ್ತಾ ಬಿಡ್ತಾ ಮನಸ್ಸು ಸ್ತಿಮಿತಕ್ಕೆ ಬರ್ತಾ ಇತ್ತು.... ಇನ್ನೊಂದು ಸಿಗರೇಟಿಗೆ ಬೆಂಕಿ ಇಟ್ಟು ಬೈಕ್ ಸ್ಟಾರ್ಟ್ ಮಾಡಿದೆ.... ಮನೆ ಕಡೆ ತಿರುಗಿಸಿದೆ.... ಆಗಲೇ ಕತ್ತಲಾಗುತ್ತಿತ್ತು.... ಈ ತಲೆಬಿಸಿಯಲ್ಲಿ ಒಂದು ವಿಶ್ಯ ಮರೆತೇ ಬಿಟ್ಟಿದ್ದೆ.... ನನಗೆ ಸ್ಮಶಾನ ಎಂದರೆ ತುಂಬಾ ಭಯ.... ಈಗ ಸ್ಮಶಾನವನ್ನೂ ದಾಟಿ ಬಂದಿದ್ದೆ..... ಮೊದಲೇ ಹೆದರಿಕೆ.... ಈಗ ಏನು ಮಾಡುವುದೆಂದು ತಿಳಿಯಲಿಲ್ಲ.... ದೆವ್ವ, ಭೂತಗಳನ್ನು ನೋಡದೇ ಇದ್ದರೂ ಅದರ ಬಗ್ಗೆ ಕೇಳಿಯೇ ಭಯ ಇತ್ತು.... ನೋಡು ನೋಡುತ್ತಲೇ ಸ್ಮಶಾನ ಬಂದೇ ಬಿಟ್ಟಿತ್ತು.... ಸ್ವಲ್ಪ ಹೊತ್ತು ನಿಲ್ಲಿಸಿದೆ, ಯಾರಾದರೂ ಸಿಕ್ಕರೆ ಹತ್ತಿಸಿಕೊಂಡು ಹೋಗೋಣ ಎನಿಸಿತ್ತು.... ಅವರಿಗೆ ಪಿಕ್ ಅಪ್ ಕೊಟ್ಟು ಉಪಕಾರ ಮಾಡುವ ಯೋಚನೆ ಇಲ್ಲದಿದ್ದರೂ, ಯಾರಾದರೂ ಸಂಗಡ ಇದ್ದರೆ ನನ್ನ ಹೆದರಿಕೆ ಕಡಿಮೆ ಆಗುತ್ತದಲ್ಲಾ ಎನ್ನುವ ದೂರುದ್ದೇಶ ನನ್ನದಾಗಿತ್ತು....
ಸುಮಾರು ಹೊತ್ತು ಕಾದೆ.... ಯಾರೂ ಬರುವ ಲಕ್ಷಣ ಕಾಣಲಿಲ್ಲ.... ಇದೆಲ್ಲಾ ಬೇಕಿತ್ತಾ.? ಹೆಂಡತಿಯ ಮೇಲಿನ ಸಿಟ್ಟು ಇದನ್ನೆಲ್ಲಾ ಮಾಡಿಸಿತು.... ಹೆಂಡತಿಯ ಮುಖ ನೆನಪಿಗೆ ಬಂತು.... ಇನ್ನೂ ಸಿಟ್ಟು ಬಂತು.... ಅದಿರಲಿ, ಈ ಸಂಕಟದಿಂದ ಪಾರಾಗುವುದು ಹೇಗೆಂದು ತಿಳಿಯಲಿಲ್ಲ.... ದೇವರ ಹಾಡು ಹಾಡುತ್ತಾ ಹೋದರಾಯಿತು ಎಂದುಕೊಂಡು ಹೊರಟೆ.... ದೇವರ ಹಾಡುಗಳನ್ನ ನೆನಪು ಮಾಡಿಕೊಂಡೆ.... " ಫೂಜ್ಯಾಯ ರಾಘವೇಂದ್ರಾಯ, ............" ಅರ್ಧ ಬರುತ್ತದೆ. " ದೇವರೆ ನೀನು ನಿಜವಪ್ಪ........" ಸುಮಾರಾಗಿ ಬರುತ್ತಿತ್ತು.... ಮೊದಲಿಗೆ ಗಣಪತಿಯ ಹಾಡಿನಿಂದಲೇ ಶುರು ಮಾಡೋಣ ಎನಿಸಿಕೊಂಡು " ಗಜಮುಖನೇ...." ಎಂದು ಶುರು ಮಾಡಿದ್ದೆ ಅಷ್ಟೇ, ಸ್ವಲ್ಪ ದೂರದಲ್ಲಿ ಒಬ್ಬ ಮನುಷ್ಯ ನಿಂತಿದ್ದ.... ಜೀವ ಬಂದ ಹಾಗಾಯಿತು.... ದೇವರ ಹಾಡು ಮರೆತೇ ಹೋಯಿತು.... ಆದರೂ ಮನಸ್ಸ ಮೂಲೆಯಲ್ಲಿ ದೇವರಿಗೆ ಧನ್ಯವಾದ ಹೇಳಿದೆ.... ಆತನ ಬಳಿ ಹೋಗಿ ನಾನೇ ಬೈಕ್ ನಿಲ್ಲಿಸಿದೆ.... ಟಿಪ್ ಟಾಪ್ ಆಗಿ ಇದ್ದ. ಜಾಕೆಟ್ ಹಾಕಿದ್ದ. ಕಳ್ಳನಾಗಿದ್ದರೆ ಎನಿಸಿತು, ದೆವ್ವಕ್ಕಿಂತ ಕಳ್ಳನೇ ಲೇಸು ಎನಿಸಿತು.... " ಬರ್ತೀರಾ ಸಾರ್.?" ಎಂದೆ.... " ಹೌದು, ಸ್ವಲ್ಪ ದೂರ ಅಷ್ಟೇ ಥ್ಯಾಂಕ್ಯೂ" ಎನ್ನುತ್ತಲೇ ಆತ ಬೈಕ್ ಹಿಂದೆ ಕುಳಿತ.... ಕೈಯಲ್ಲಿ ಒಂದು ಬ್ಯಾಗ್ ಇತ್ತು. ಅದಕ್ಕೆ ಸ್ಚಲ್ಪ ಕೆಸರು ಮೆತ್ತಿತ್ತು. ಎಲ್ಲಾದರೂ ಬಿದ್ದಿದ್ದನಾ...? ನಾನು ಕೇಳಲಿಲ್ಲ.... " ಎಲ್ಲಿಗೆ ಹೋಗಿದ್ರೀ ಸರ್..? " ಕೇಳಿದ ಆತ.... ನನಗೆ ಮಾತನಾಡುವ ಮೂಡ್ ಇರಲಿಲ್ಲ.... ಹೆಂಡತಿಯ ಮೇಲೆ ಸಿಟ್ಟು ಇನ್ನೂ ಕರಗಿರಲಿಲ್ಲ ಅಲ್ವಾ..?....
" ಯಾಕೆ ಸರ್, ಏನಾಯ್ತು...? ಏನಾದ್ರೂ ಸಮಸ್ಯೇನಾ...? " ಆತ ಮಾತನಾಡುತ್ತಲೇ ಇದ್ದ.... ನಾನು ಉತ್ತರಿಸಲಿಲ್ಲ.... ’ನನ್ನ ತಲೆಬಿಸಿ ನನಗೆ. ಈತನದೊಂದು’ ಎನಿಸಿತು..... "ಸಾರ್ , ನನಗನಿಸತ್ತೆ ನಾನು ನಿಮ್ಮ ಜೊತೆ ಬರೋದು ನಿಮಗೆ ಇಷ್ಟ ಇಲ್ಲ ಅನಿಸತ್ತೆ, ನನ್ನನ್ನು ಇಲ್ಲೇ ಬಿಡಿ, ನಾನು ನಡೆದೇ ಬರುತ್ತೇನೆ" ಎಂದ ಆತ.... ಯಾವಾಗ ಆತ ಇಳಿದುಹೋಗುತ್ತೇನೆ ಎಂದನೋ ಆಗ ನನ್ನ ಕಿವಿ ನೆಟ್ಟಗಾಯಿತು.... "ಹಾಗೆನಿಲ್ಲ ಸಾರ್, ಮನೆಯಲ್ಲಿ ಸ್ವಲ್ಪ ಕಿರಿಕಿರಿ, ಎಲ್ಲರ ಮನೆಯಲ್ಲಿ ಇದ್ದ ಹಾಗೆ" ಎಂದೆ.... " ಓ ಹೌದಾ, ಯಾರ ಜೊತೆ ಜಗಳ ..? ಕೇಳಿದ ಆತ.... ನನಗೆ ಹೇಳುವ ಮನಸ್ಸಿರಲಿಲ್ಲ.... ಆತನೇ ಮತ್ತೆ ಕೇಳಿದ.... "ಮನೆಯಲ್ಲಿ ಯಾರ್ಯಾರಿದ್ದರೆ ಸರ್.....?" "ಹೆಂಡತಿ ಮತ್ತು ಮಗಳು" ಎಂದೆ ನಾನು.... "ಹಾಗಿದ್ರೆ ಹೆಂಡತಿಯ ಜೊತೆಗೆ ಜಗಳ ಅಲ್ವಾ..? " ಎಂದ ಆತ.... ನಾನು "ಹ್ಹೂ " ಎಂದೆ.... "ಇದು ಎಲ್ಲರ ಮನೆಯ ದೋಸೆ ಸರ್.... ಆದ್ರೆ ನಾವು ತುಂಬಾ ಮುಖ್ಯವಾದ ವಿಷಯ ಮರೆಯುತ್ತೇವೆ....." ಎಂದು ಪ್ರವಚನ ಶುರು ಮಾಡುವವನಿದ್ದ.... ಈ ದೆವ್ವದ ಹೆದರಿಕೆ ಒಂದು ಇಲ್ಲದಿದ್ದರೆ ಈತನನ್ನು ಅಲ್ಲೇ ಇಳಿಸಿಬಿಡುತ್ತಿದ್ದೆ.... ಒಲ್ಲದ ಮನಸ್ಸಿಂದ " ಏನು...?" ಎಂದೆ.... ನನಗೆ ಈತನ ಪುರಾಣ ಕೇಳದೇ ಬೇರೆ ಉಪಾಯ ಇರಲಿಲ್ಲ....
" ನನ್ನ ಕಥೆಯೂ ಅದೇ ಆಗಿತ್ತು ಸರ್, ನಾನು, ನನ್ನ ಹೆಂಡತಿ, ಮೂರು ವರ್ಷದ ಮಗಳು.... ನಮ್ಮದು ಲವ್ ಮ್ಯಾರೇಜ್ ಸರ್. ನನಗಾಗಿ ತನ್ನ ಮನೆ, ತನ್ನವರನ್ನ ಬಿಟ್ಟು ಬಂದಿದ್ದಳು ಆಕೆ.... ಆಕೆಯ ಮನೆಯವರಿಗೆ ನಾನು ಬೇಡವಾಗಿದ್ದೆ.... ನನ್ನ ಜಾತಿ ಅವರ ಜಾತಿಗಿಂತ ಕೀಳಾಗಿತ್ತಂತೆ.... ನನ್ನನ್ನು ತುಂಬಾ ದ್ವೇಷಿಸುತ್ತಿದ್ದರು ಅವಳ ಮನೆಯವರೆಲ್ಲಾ.... ಆದರೂ ನಾವು ಮದುವೆಯಾದೆವು.... ಮದುವೆಯಾಗಿ ವರ್ಷಕ್ಕೇ ಮಗಳು ಬಂದಿದ್ದಳು.... ನನ್ನ ಕೆಲಸವೂ ಚೆನ್ನಾಗಿತ್ತು.... ಕೆಲವೊಮ್ಮೆ ಕೆಲಸದ ಪ್ರಯುಕ್ತ ನಾನು ದೂರದ ಊರಿಗೆ ಹೋಗಬೇಕಾಗುತ್ತಿತ್ತು.... ಆಗ ನನ್ನವಳು ಒಬ್ಬಂಟಿಯಾಗುತ್ತಿದ್ದಳು.... ಅವಳಿಗೆ ತನ್ನ ಹೆತ್ತವರ ನೆನಪಾಗುತ್ತಿತ್ತೋ ಏನೊ.... ಅವರಿಗೆ ಫೋನ್ ಮಾಡಿದ್ದಾಳೆ.... ಅವರೂ ಸಹ ಮಾತನಾಡಿದ್ದಾಳೆ.... ಮೂರು ವರುಷದ ಧ್ವೇಷ ಕರಗಿತ್ತೋ ಎನೋ.... ಆದರೆ ಅವರಿಗೆ ನನ್ನ ಮೇಲಿನ ಕೋಪ ಹಾಗೆ ಇತ್ತು ಎನಿಸತ್ತೆ..... ಅದಕ್ಕಾಗಿಯೇ ನನ್ನವಳು ಈ ವಿಷಯ ಮುಚ್ಚಿಟ್ಟಳು.....
ಹೀಗೆ ತುಂಬಾ ದಿನದಿಂದ ನಡೆಯಿತ್ತಾ ಇತ್ತು ಎನಿಸತ್ತೆ.... ಒಂದಿನ ನಾನು ಆಫೀಸಿನ ಕಿರಿಕಿರಿಯಿಂದ ಬೇಸತ್ತು ಬೇಗನೇ ಮನೆಗೆ ಬಂದಿದ್ದೆ.... ಅವಳ ಮೊಬೈಲ್ ಗೆ ಕಾಲ್ ಬರ್ತಾ ಇತ್ತು..... ಅದನ್ನು ನಾನು ನೋಡಿದೆ, ’ ಮೈ ಡ್ಯಾಡ್’ ಎಂದಿತ್ತು.... ನನಗೆ ಗಾಬರಿ.....!!! ’ ಇದೇನಿದು...? ಇವರ್ಯಾಕೆ ಫೋನ್ ಮಾಡ್ತಾ ಇದಾರೆ...? ’ ಎನಿಸಿತು..... ಮೊದಲೇ ಆಫೀಸಿನ ಕಿರಿಕಿರಿ,ಇದರಲ್ಲಿ ಇವರ ಕಾಲ್ ಬಂದು ಇನ್ನೂ ಸಿಟ್ಟು ತರಿಸಿತ್ತು..... ನನ್ನವಳು ಬಂದು ಕಾಲ್ ಡಿಸ್ಕನೆಕ್ಟ್ ಮಾಡಿದಳು...... "ರೀ,ನಿಮ್ಮ ಹತ್ತಿರ ಒಂದು ವಿಷ್ಯ ಹೇಳೊದಿತ್ತು" ಎಂದಳು..... ನಾನು "ಏನು ವಿಷ್ಯ" ಕೇಳಿದೆ.... ಇವಳ ತಂದೆ ಕಾಲ್ ಮಾಡೊದಕ್ಕೂ, ಇವಳು ಮಾತನಾಡುವುದಕ್ಕೂ ಏನಾದರೂ ಸಂಬಂಧ ಇರಬಹುದು ಎನಿಸಿತು..... "ಇತ್ತೀಚಿಗೆ ನಾನೇ ಅಪ್ಪನಿಗೆ ಕಾಲ್ ಮಾಡಿದ್ದೆ, ಅಪ್ಪನಿಗೆ ನಮ್ಮ ಮೇಲೆ ಕೋಪ ಇಲ್ಲವಂತೆ........".... ಇನ್ನೇನೋ ಹೇಳುವವಳಿದ್ದಳು ಎನಿಸತ್ತೆ..... ನನ್ನ ಕೋಪ ಮಿತಿ ಮೀರಿತ್ತು..... ಅದರಲ್ಲೂ ಇವಳೇ ಇವಳಪ್ಪನಿಗೆ ಫೋನ್ ಮಾಡಿದ್ದಾಳೆ, ಮತ್ತದನ್ನು ನನಗೆ ತಿಳಿಸಿಲ್ಲ ಎಂದು ಕೋಪ ನೆತ್ತಿಗೇರಿತ್ತು.... "ಹೋಗು... ನೀನು ಅಪ್ಪನ ಹತ್ತಿರ.... ಅವರ ಹತ್ತಿರವೇ ಇರು.... ನಿನ್ನ ಕಂಡರೆ ಪ್ರೀತಿ ಅಲ್ವಾ...? " ಎಂದವನಿಗೆ ಅಲ್ಲಿರುವ ಮನಸ್ಸಾಗಲಿಲ್ಲ.... ಹೊರಬಿದ್ದೆ.... ಬೈಕ್ ತೆಗೆದುಕೊಂಡು ಹೊರಟಿದ್ದೆ..... ಎಲ್ಲಿಗೆ ಎಂದು ಗೊತ್ತಿರಲಿಲ್ಲ.........."
’ಅರೇ, ಇದೇನಿದು ನನ್ನ ಸಮಸ್ಯೆಯನ್ನೇ ಹೇಳುತ್ತಿದ್ದಾನಲ್ಲ ಈತ ಎನಿಸಿತು.... "ತಪ್ಪಲ್ವಾ ಸರ್ ಅದು, ಆಕೆ ನಿಮ್ಮಿಂದ ಮುಚ್ಚಿಡಬಾರದಿತ್ತು. ಎಲ್ಲವನ್ನೂ ಹಂಚಿಕೊಳ್ಳಬೇಕಾಗಿತ್ತು ಅಲ್ವಾ...? " ಎಂದೆ ನಾನು..... ಇದನ್ನು ಹೇಳುವಾಗ ನನ್ನವಳ ಮುಖ ನನ್ನೆದುರಿಗೆ ಇತ್ತು..... ಆತ ನಗಾಡಿದ "ಇದು ನಿಮ್ಮ ಸಿಟ್ಟು ಹಾಗೆ ಮಾತನಾಡಿಸತ್ತೆ ಸರ್, ಸ್ವಲ್ಪ ಯೋಚನೆ ಮಾಡಿ..... ನಮ್ಮ ಜಗತ್ತು ನಮ್ಮ ಕೆಲ್ಸ, ಆಫೀಸು ಇಲ್ಲೇ ತಿರುಗುತ್ತಾ ಇರತ್ತೆ.... ಸಮಯ ಉಳಿದರೆ ಅಷ್ಟೇ ಹೆಂಡತಿ ಮಕ್ಕಳಿಗೆ..... ಆದ್ರೆ ಹೆಂಡತಿ ಎನ್ನುವವಳ ಜಗತ್ತು ನಮ್ಮ ಸುತ್ತಲೇ ತಿರುಗುತ್ತಾ ಇರುತ್ತದೆ..... ನನ್ನ ಗಂಡನ ಬಟ್ಟೆ, ಅವನ ಊಟ, ಅವನ ಆರೋಗ್ಯ, ಅವನ ಅಪ್ಪ ಅಮ್ಮ, ಅವನ ಮಕ್ಕಳು, ಆತನ ನಿದ್ರೆ, ಆತನಿಗೆ ನೀಡಬೇಕಾದ ಸುಖ.... ಹೀಗೆಯೇ ಇರತ್ತೆ.... ಎಂದಿಗೂ ಆಕೆ ತನ್ನ ಬಗ್ಗೆ ಯೋಚಿಸೋದೆ ಇಲ್ಲ.... ಅವರಿಗೂ ಒಂದು ಮನಸ್ಸು ಇರತ್ತೆ,ಅದು ಅವಳ ಅಪ್ಪ ಅಮ್ಮನ ಬಗ್ಗೆ ಮಿಡಿಯತ್ತೆ ಅಂತ ನಮಗೆ ಅನಿಸೋದೇ ಇಲ್ಲ..... ಈಗ ನೋಡಿ ನನ್ನ ವಿಶ್ಯದಲ್ಲಿ, ನನ್ನಾಕೆ ಮಾಡಿದ ಕೆಲಸವೇ ನನಗೆ ದೊಡ್ಡ ಅಪರಾಧವಾಗಿ ಕಾಣಿಸಿತ್ತು.... ಅವಳು ತನ್ನ ಅಪ್ಪನ ಜೊತೆ ಮಾತನಾಡಿದ್ದು ನನಗೆ ಹೇಳಿದರೆ ’ನನಗೆ ಬೇಸರವಾಗಬಹುದು’ ಎಂದು ಹೇಳದೇ ಇರಬಹುದಾಗಿತ್ತು..... ಇದನ್ನೇ ನಾನು ದೊಡ್ಡ ರಂಪಾಟ ಮಾಡಿಕೊಂಡು ಹೊರ ಬಂದಿದ್ದೆ. ".....
"ಹೌದಲ್ವಾ..? ನಾನು ಮಾಡಿದ್ದೂ ಅದೇ ಸರ್.... ನನ್ನಾಕೆ ತನ್ನ ಅಪ್ಪನ ಮನೆಗೆ ಹೋಗಬೇಕು ಅಂದಿದ್ದಳು..... ಈ ಸಾರಿ ಬೇಡ, ಮುಂದಿನ ಸಾರಿ ಹೋಗೋಣ ಎನ್ನೋದು ನನ್ನ ಮಾತಾಗಿತ್ತು.... ಅದನ್ನೇ ದೊಡ್ಡ ಮಾಡಿಕೊಂಡು ನಾನು ಹೊರಬಿದ್ದಿದ್ದೇನೆ.... ತಪ್ಪು ಮಾಡಿದ್ದೇನೆ ಎಂದು ಗೊತ್ತಿದರೂ ಮನಸ್ಸು ಒಪ್ಪುತ್ತಿರಲಿಲ್ಲ.... ನಾವು ದಿನದ ಹೆಚ್ಚು ಹೊತ್ತು ಆಫೀಸಿನಲ್ಲೇ ಕಳೆಯುತ್ತೇವೆ..... ದಿನದ ಇಪ್ಪತ್ನಾಲ್ಕು ಘಂಟೆ ಮನೆಯ ನಾಲ್ಕು ಗೋಡೆಗಳ ನಡುವೆ ಕಳೆಯುವ ನನ್ನಾಕೆಗೆ ಸ್ವಲ್ಪವೂ ಬಿಡುವು ಬೇಡವೇ.....? ನಮಗೆ ಆಫೀಸು ಕಿರಿಕಿರಿಯಾದರೆ ಮನೆಗೆ ಬರಬಹುದು..... ಆದರೆ ನನ್ನಾಕೆಗೆ ಮನೆಯಲ್ಲೇ ಕಿರಿಕಿರಿಯಾದರೆ ಎಲ್ಲಿ ಹೋಗಿಯಾಳು.....? ಚೆ, ಎಂಥಾ ಕೆಲಸವಾಯ್ತು.... ಮನೆಗೆ ಹೋಗಿ ಅವಳಲ್ಲಿ ’ಸಾರಿ’ ಕೇಳಬೇಕು" ಎಂದೆ.... ನನ್ನ ಮಾತಿನಿಂದ ಆತನಿಗೆ ಖುಶಿಯಾಯ್ತು " ತುಂಬಾ ಒಳ್ಳೆಯ ಮಾತು ಸರ್, ಈಗಲಾದರೂ ಈ ಯೋಚನೆ ಬಂತಲ್ಲಾ.... ನಿಮ್ಮಾಕೆ ತುಂಬಾ ಲಕ್ಕಿ ಸರ್.... ಅವರಿಗೆ ಬೇಸರ ಮಾಡಬೇಡಿ.... ಅವರನ್ನು ಖುಶಿಯಿಂದ ನೋಡಿಕೊಳ್ಳಿ." ಎಂದ. ಮೊದಲ ಬಾರಿಗೆ ನನಗೆ ಅನುಮಾನ ಬಂತು.ಈತನೇನಾದರೂ ನನ್ನಾಕೆಯ ಸಂಬಂಧಿ ಇರಬಹುದಾ ಹೇಗೆ ಅಂತ..... ಆದರೆ ಈ ಅನುಮಾನ ಎಷ್ಟು ಬೇಗ ಬಂತೋ ಅಷ್ಟೇ ಬೇಗ ಮಾಯವಾಯಿತು ಕೂಡ..... ಇದ್ಯಾವುದರ ಪರಿವೆ ಇಲ್ಲದೇ ಆತ ತನ್ನ ಕಥೆ ಮುಂದುವರಿಸಿದ್ದ.... "ಹೀಗೆಯೇ... ನಿಮ್ಮ ಹಾಗೆಯೇ ಸ್ವಲ್ಪ ದೂರದ ತನಕ ಹೋಗಿ ಬರೋಣ ಎಂದು ಹೊರಟವನೆ ಸ್ನೇಹಿತನೊಬ್ಬ ಸಿಕ್ಕಿದ.... ಅವನ ಜೊತೆ ಹೋಗಿ ಸ್ವಲ್ಪ ವಿಸ್ಕಿ ಕುಡಿದೆ.... ತಲೆಯಲ್ಲಿ ಸಿಟ್ಟಿತ್ತಲ್ವಾ...? ಸ್ವಲ್ಪ ಸ್ವಲ್ಪ ಕುಡಿಯುತ್ತಲೇ ಸ್ವಲ್ಪ ಹೆಚ್ಚಿಗೇ ಕುಡಿದೆ. "
"ಅದೇ ಸಮಯಕ್ಕೆ ನನ್ನ ಮೊಬೈಲ್ ಗೆ ನನ್ನವಳ ಕಾಲ್ ಬಂತು..... ನನ್ನ ಸಿಟ್ಟೂ ಇನ್ನೂ ಇಳಿದಿರಲಿಲ್ಲ. " ಏನು...ಇನ್ನೇನು ಹೇಳುವುದಿದೆ...? ಎಲ್ಲಾ ಮುಗಿಯಿತಲ್ಲ...? ಹೊರಡು ನಿನ್ನ ಮನೆಗೆ... ನಿನ್ನ ಅಪ್ಪನ ಮನೆಗೆ..." ಎಂದವನೇ ಕಾಲ್ ಕಟ್ ಮಾಡಿದೆ.... ನಶೆ ಏರುತ್ತಿತ್ತು.... ಮನೆಗೆ ಹೋಗಲೇಬೇಕಿತ್ತು.... ಬೈಕ್ ಸ್ಟಾರ್ಟ್ ಮಾಡಿದೆ.... ಮನೆಯತ್ತ ಹೊರಟೆ..... ಮಾರ್ಗ ಮಧ್ಯದಲ್ಲಿ, ಮತ್ತೆ ನನ್ನವಳ ಕಾಲ್ ಬಂತು......." ಅದೇ ಸಮಯಕ್ಕೆ ನನ್ನ ಫೋನ್ ರಿಂಗಾಗುತ್ತಿತ್ತು. ನನ್ನಾಕೆಯ ಫೋನ್ ಆಗಿತ್ತು....."ಹಲೋ, ಬರ್ತಾ ಇದ್ದೇನೆ ಮನೆಗೆ.... ಸಂಗಡ ಊಟ ಮಾಡೋಣ " ಎಂದು ಫೋನ್ ಕಟ್ ಮಾಡಿದೆ...... ನನ್ನ ಹಿಂದೆ ಕುಳಿತಾತನಿಗೆ ಖುಶಿಯಾಗಿತ್ತು..... " ವೆರಿ ಗುಡ್ ಸರ್, ಖುಶಿಯಾಯ್ತು ನನಗೆ, ಆದ್ರೆ ನಾನು ದೊಡ್ಡ ತಪ್ಪು ಮಾಡಿದ್ದೆ..... ನಿಮ್ಮಾಕೆಯ ಹಾಗೆಯೇ ನನ್ನವಳೂ ಕಾಲ್ ಮಾಡಿದ್ದಳು.... ಆದ್ರೆ ನಾನು ಮತ್ತೆ ಅವಳಿಗೆ ಸಿಟ್ಟಿನಿಂದಲೇ ಉತ್ತರಿಸಿದ್ದೆ. ಸಿಟ್ಟಿನಿಂದಲೇ ಕಾಲ್ ಕಟ್ ಮಾಡಿದ್ದೆ."..... ದೊಡ್ಡದಾಗಿ ಉಸಿರು ತೆಗೆದುಕೊಳ್ಳುತ್ತಾ ಅಂದ "ಹಾಗೆಯೇ ಮನೆಗೆ ಹೋಗುವ ಅವಕಾಶವನ್ನೂ ಕಳೆದುಕೊಂಡಿದ್ದೆ......... " ನನಗೆ ನಿಜವಾಗಿಯೂ ಕನಿಕರ ಹುಟ್ಟಿತು. " ಯಾಕೆ ಸರ್, ನಿಮ್ಮಾಕೆ ಮನೆ ಬಿಟ್ಟು ಹೋಗಿದ್ದರಾ..? " ಕೇಳಿದೆ......
ನನಗೆ ಸ್ವಲ್ಪ ಧೈರ್ಯ ಬಂದಿತ್ತು....... ಯಾಕೆಂದರೆ ಸ್ಮಶಾನವನ್ನು ದಾಟಿ ಬಂದಿದ್ದೆ.
"ಇಲ್ಲ ಸಾರ್...ನನ್ನಾಕೆ ಮತ್ತೆ ಫೋನ್ ಮಾಡಿದಳು... ನನಗೆ ಕೋಪ ನೆತ್ತಿಗೇರಿತು... ಅವಳಿಗೆ ಚೆನ್ನಾಗಿ ಬಯ್ದೆ..."
ಆತ ಸ್ವಲ್ಪ ಹೊತ್ತು ಸುಮ್ಮನಾದ...
ನನಗೆ ಕುತೂಹಲ ಜಾಸ್ತಿಯಾಯ್ತು...
"ಮುಂದೆ ಏನಾಯ್ತು ಸಾರ್...?
ಈಗ ನೀವೆಲ್ಲ ಪ್ರೀತಿಯಿಂದ ಇದ್ದಿರಲ್ವಾ?...."
"ಇಲ್ಲಾ ಸಾರ್...
ನಾನು ಕೋಪದಲ್ಲಿ ಮಾತಾಡುತ್ತಿದ್ದೆ..
ಮುಂದಿನಿಂದ ಬರುತ್ತಿದ್ದ ಲಾರಿಗೆ ನನ್ನ ಬೈಕ್ ಜೋರಾಗಿ ಢಿಕ್ಕಿ ಆಯ್ತು..."
ನನಗೆ ಪಾಪ ಅನ್ನಿಸಿತು...
"ಹೋಗ್ಲಿ ಬಿಡಿ ಸಾರ್.... ಈಗ ಎಲ್ಲ ಸರಿ ಹೊಯ್ತಲ್ವಾ? ಎನೋ ಕೆಟ್ಟ ಘ್ಹಳಿಗೆ ಆಗೋಯ್ತಲ್ಲಾ .... ಮತ್ತೆ ತಪ್ಪು ಮಾಡಬೇಡಿ ಸರ್ "ಎಂದೆ.....
" ಸಾರ್......ನೀವು ನಿಮ್ಮ ಮಡದಿಯೊಡನೆ ಪ್ರೀತಿಯಿಂದ ಚೆನ್ನಾಗಿರಿ...
ನನ್ನ ಹಾಗೆ ಮಾಡ್ಕೋಬೇಡಿ..." ಅಂದರು ಆತ ಬೇಸರದಿಂದ....
"ನಿಮಗೇನಾಯ್ತು...?" ಕೇಳಿದೆ ನಾನು......
"ಆ ಅಪಘಾತದಲ್ಲಿ ನನ್ನ ತಲೆಯೇ ಕತ್ತರಿಸಿ ಹೋಯ್ತು....!!! "
ನಾನು ಬೈಕ್ ನಿಲ್ಲಿಸಿ ತಿರುಗಿ ನೋಡಿದೆ...
ಹಿಂದೆ ಯಾರೂ ಇರಲಿಲ್ಲ.....!!
Aug 29, 2012
ಒಳ್ಳೆ ಕೆಲಸ.....!!!!
ಏನಾದರೂ ಪಾರ್ಸೆಲ್ ತೆಗೆದುಕೊಂಡು ಹೋಗೋಣ ಎಂದುಕೊಂಡು ಮನೆಗೆ ಹೋಗುವ ದಾರಿಯಲ್ಲಿದ್ದ ಬಾರ್ ಎಂಡ್ ರೆಸ್ಟೋರೆಂಟ್ ಬಳಿ ಗಾಡಿ ನಿಲ್ಲಿಸಿದೆ......ಪಾರ್ಸೆಲ್ ಗೆ ಒರ್ಡರ್ ಮಾಡಿ ಕೌಂಟರ್ ಬಳಿ ನಿಂತಿದ್ದೆ...... ಸುಮಾರು ಎಂಟು ಘಂಟೆಯಾಗಿತ್ತು...... ರೋಡ್ ಆ ಕಡೆಯಿಂದ ಒಬ್ಬ ಹುಡುಗ ಬರೀ ಕೈಯಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಅನುಕರಣೆ ಮಾಡುತ್ತಾ ಬರುತ್ತಿದ್ದ....... ಅಂಗಿ ಚಡ್ಡಿ ಎಲ್ಲಾ ಕೊಳೆಯಾಗಿತ್ತು..... ಪಕ್ಕದಲ್ಲೇ ಒಂದು ಬ್ರಿಡ್ಜ್ ಕೆಲಸ ನಡೆಯುತ್ತಿತ್ತು...... ಅಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಹುಡುಗ ಎನಿಸಿತು....... ಆತ ಸೀದಾ ಬಾರ್ ಎಂಡ್ ರೆಸ್ಟೋರೆಂಟ್ ಬಂದು ನನ್ನನ್ನೂ ಕ್ರಾಸ್ ಮಾಡಿ ಕೌಂಟರ್ ಹತ್ತಿರ ಹೋದ..... ಇವನ್ಯಾಕೆ ಇಲ್ಲಿ ಎನಿಸಿತು...... ಹುಡುಗ ಬಹಳ ಚೂಟಿಯಾಗಿದ್ದ..... ಸುಮಾರು ಹನ್ನೆರಡು ವರ್ಷ ಪ್ರಾಯ ಇರಬಹುದು...... ಕೌಂಟರ್ ನಲ್ಲಿ ಹಣ ಕೊಟ್ಟು ಇನ್ನೊಂದು ಕಡೆ ಹೋದ.... ನಾನು ಆತನನ್ನೇ ಗಮನಿಸುತ್ತಿದ್ದೆ...... ಆತ ಸೀದಾ ಮದ್ಯ ಮಾರುವ ಕೌಂಟರ್ ಗೆ ಹೋದ..... ನನಗೆ ಆಶ್ಚರ್ಯ ಆಯ್ತು.....
ಈ ಹುಡುಗ ಅಲ್ಯಾಕೆ ಹೋಗಿದ್ದಾನೆ..? ಮಕ್ಕಳು ಇತ್ತೀಚಿಗೆ ಕುಡಿಯಲು ಶುರು ಮಾಡಿದ್ದಾರೆ.... ಅದೇ ಚಟವಾಗಿ ಅವರ ಸಣ್ಣ ಕರಳನ್ನ ಸುಟ್ಟು ಹಾಕಿ , ಅವರ ಸಾವಿಗೆ ಕಾರಣವಾಗಿದೆ ಎಂದು ಪೇಪರ್ ನಲ್ಲಿ ಓದಿದ್ದೆ..... ಈ ಹುಡುಗನೂ ಕುಡಿಯುತ್ತಾನಾ..? ಕೂಲಿ ಕಾರ್ಮಿಕರಿಗೆ ತಮ್ಮ ಮಕ್ಕಳ ಮೇಲೆ ಗಮನ ಹರಿಸಲು ಸಾಧ್ಯವಾಗದೇ ಈ ರೀತಿ ಆಗುತ್ತಿದ್ದಾರಾ....? ಈ ಹುಡುಗ ಶಾಲೆಗೆ ಹೋಗುತ್ತಿದ್ದಾನಾ...? ತಲೆ ತುಂಬಾ ಪ್ರಶ್ನೆಗಳೇ ತುಂಬಿದವು...... ಕೌಂಟರ್ ನಲ್ಲಿದ್ದ ಯುವಕ ಗ್ಲಾಸ್ ನಲ್ಲಿ ವಿಸ್ಕಿ ಸುರಿಯುತ್ತಿದ್ದ....... ಆ ಹುಡುಗ ಅದನ್ನ ಎತ್ತಿಕೊಂಡ..... ನನಗೆ ಇನ್ನೂ ಗಾಬರಿಯಾಯಿತು....ಕೌಂಟರ್ ನ ಯುವಕ ಒಂದು ಕಡೆ ಕೈ ತೋರಿಸಿದ.....
ಆ ಹುಡುಗ ಗ್ಲಾಸ್ ಎತ್ತಿಕೊಂಡು ಒಂದು ಟೇಬಲ್ ನಲ್ಲಿ ಕುಳಿತಿದ್ದ ವ್ಯಕ್ತಿಗೆ ಕೊಟ್ಟ..... ನನಗೆ ಸಮಾಧಾನ ಆಯ್ತು......
ಆ ಹುಡುಗ ಮತ್ತೆ ಕೌಂಟರ್ ಕಡೆ ಬಂದ... ನನಗೆ ಮತ್ತೆ ತಲೆಬಿಸಿ ಶುರುವಾಯ್ತು.... ಮತ್ತೆ ಯಾಕೆ ಅಲ್ಲಿಗೆ ಹೋಗುತ್ತಿದ್ದಾನೆ ಎನಿಸಿತು..... ಕೌಂಟರ್ ಯುವಕ ಒಂದು ವಿಸ್ಕಿ ಬಾಟಲನ್ನು ಪೇಪರ್ನಲ್ಲಿ ಸುತ್ತಿ ಆ ಹುಡುಗನ ಕೈಲಿ ಕೊಟ್ಟ....... ಆ ಹುಡುಗ ಮತ್ತದೇ ಬರಿಗೈಯಲ್ಲಿ ಬ್ಯಾಟಿಂಗ್ ಬೌಲಿಂಗ್ ಅನುಕರಣೆ ಮಾಡುತ್ತಾ ಹೊರಗೆ ಹೋದ...... ನನಗೆ ನಗು ಬಂತು.... ನನ್ನನ್ನು ನನ್ನ ಪ್ರಾಥಮಿಕ ಶಾಲೆಯ ನೆನಪು ತಂದಿತು.......
ನಾನು ಮೂರನೇ ತರಗತಿ ಇದ್ದೆ ಅನಿಸತ್ತೆ..... ನನ್ನ ಜೊತೆ ಶಂಕ್ರ ಅಂತ ನನ್ನ ಕ್ಲಾಸ್ ಮೇಟ್ ಇದ್ದ...... ಎಲ್ಲಾ ಶಾಲೆಯಲ್ಲಿ ಇದ್ದೇ ಇರುವ ಫಟಿಂಗನಾಗಿದ್ದ... ಆವಾಗೆಲ್ಲ ಮೂರನೇ ತರಗತಿಯಿಂದ ನಮಗೆಲ್ಲಾ "ಒಳ್ಳೆಯ ಕೆಲಸದ ಪಟ್ಟಿ" ಅಂತ ಒಂದು ಪಟ್ಟಿ ಇರುತ್ತಿತ್ತು..... ಅದರಲ್ಲಿ ದಿನಾಲೂ ನಾವು ಮಾಡಿದ (?????) ಒಂದು ಒಳ್ಳೆ ಕೆಲಸವನ್ನು ಬರೆಯಬೇಕಿತ್ತು.... ಮಾಡದೇ ಇದ್ದರೂ ಬರೆಯಬೇಕಿತ್ತು..... ಒಂದು ದಿನ ನಮ್ಮ ಟೀಚರ್ ಗೆಳೆಯ ಶಂಕ್ರ ಬರೆದ ಒಳ್ಳೆಯ ಕೆಲಸದ ಪಟ್ಟಿ ನೋಡುತ್ತಿದ್ದರು..... ಓದಿದವರೇ ಅದೇ ಪಟ್ಟಿಯಿಂದ ಅವನ ತಲೆಯ ಮೇಲೆ ಹೊಡೆದರು..... ಅವನು ತಲೆ ಉಜ್ಜಿಕೊಳ್ಳುತ್ತಾ " ಬರೆದದ್ದು ತಪ್ಪಾಯಿತಾ ಸಾರ್? "ಎಂದ..... ಅವರು " ಅಪ್ಪನಿಗೆ ಬೀಡಿ ತಂದಿದ್ದು ಹೇಗೆ ಒಳ್ಳೆಯ ಕೆಲಸವಾಗುತ್ತದಾ ನಿನಗೆ.....?" ಎಂದರು.... ಅವನು...." ಒಳ್ಳೆಯ ಕೆಲಸ ಅಲ್ವಾ ಸಾರ್ ಅದು...?" ಎಂದ..... " ಬೇರೆ ಎನಾದರೂ ಬರೆ ಮಾರಾಯಾ....." ಎಂದರು ನಮ್ಮ ಸರ್..... ನನ್ನ ಪಟ್ಟಿ ತೆಗೆದುಕೊಂಡು ಓದಿದರು..... ನಾನು ಆ ದಿನ ’ ರಸ್ತೆಯ ಮೇಲೆ ಬಿದ್ದಿದ್ದ ಕಲ್ಲನ್ನು ಎತ್ತಿ ಚರಂಡಿದೆ ಎಸೆದೆನು’ ಎಂದು ಬರೆದಿದ್ದೆ..... ನನಗೂ ಬಿತ್ತು ಹೊಡೆತ..... " ಕಲ್ಲು ಎತ್ತಿ ಚರಂಡಿಗೆ ಎಸೆದರೆ ನೀರು ಹೋಗೋದು ಹ್ಯಾಗೆ.....?" ಎಂದರು..... ನಾನು ಬರೆದ ಸಾಲಿನ ಮೇಲೆ ಕೆಂಪು ಸಾಯಿಯಿಂದ ಗೆರೆ ಎಳೆದರು......
ಇನ್ನೊಬ್ಬ ಹುಡುಗಿಯ ಹತ್ತಿರ ಹೋದರು..... ಅವಳ ಪಟ್ಟಿ ತೆಗೆದುಕೊಂಡು ಓದಿದರು..."ನೋಡು ಇವಳು ಸರಿ ಬರೆದಿದ್ದಾಳೆ.....’ ಅಮ್ಮನಿಗೆ ಹಾಲು ತಂದು ಕೊಟ್ಟೆನು.....’ ಸರಿಯಾಗಿ ಬರೆದಿದ್ದಾಳೆ..." ಎಂದರು..... ನಾನು ಮತ್ತು ಶಂಕ್ರ ಮುಖ ಮುಖ ನೋಡಿಕೊಂಡೆವು..... ಮಾಸ್ತರರು ಇನ್ನೂ ಮುಂದಕ್ಕೆ ಹೋದರು.... ನಮಗೆ ಗೊತ್ತಿತ್ತು ಮತ್ತೊಬ್ಬ ಎನು ಬರೆದಿದ್ದಾನೆ ಅಂತ.....
ಯಾಕೆಂದ್ರೆ..................
...........
ಶಾಲೆ ಶುರುವಾಗುವ ಹತ್ತು ನಿಮಿಶದ ಮೊದಲಷ್ಟೇ ನಾವು ಒಳ್ಳೆಯ ಕೆಲಸದ ಪಟ್ಟಿ ಬರೆಯುತ್ತಿದ್ದುದು...ಒಳ್ಳೆಯ ಕೆಲಸವನ್ನು ಹಂಚಿಕೊಂಡು ಬರೆಯುತ್ತಿದ್ದೆವು.....ಒಬ್ಬರ ಹಾಗೆ ಇನ್ನೊಬ್ಬರು ಬರೆಯಬಾರದು ಎಂಬುದು ಶಂಕ್ರನ ಆದೇಶವಾಗಿತ್ತು..... ನಮ್ಮ ಒಳ್ಳೆಯ ಕೆಲಸವೆಲ್ಲ ಹೀಗೇ ಇರುತ್ತಿತ್ತು.....
" ಅಪ್ಪನಿಗೆ ಬೀಡಿ ತಂದು ಕೊಟ್ಟೆನು....."
"ಅಮ್ಮನಿಗೆ ಹಾಲು ತಂದು ಕೊಟ್ಟೆನು....."
"ಅಮ್ಮನಿಗೆ ಹೂವು ತಂದು ಕೊಟ್ಟೆನು....."
"ಅಪ್ಪನಿಗೆ ಬೀಡಿ ಹಚ್ಚಿಕೊಂಡು ತಂದು ಕೊಟ್ಟೆನು....."
"ಅಪ್ಪನಿಗೆ ಸಾರಾಯಿ ತಂದು ಕೊಟ್ಟೆನು....."
"ಅಪ್ಪ ಕುಡಿದ ಸಾರಾಯಿ ಲೋಟ ತೊಳೆದು ಇಟ್ಟೆನು....."
" ರಸ್ತೆಯ ಮೇಲಿದ್ದ ಕಲ್ಲನ್ನು ಚರಂಡಿಗೆ ಎಸೆದೆನು....."
ಪಟ್ಟಿ ತುಂಬಿದ ನಂತರ ಮತ್ತದೇ ಹಿಂದಿನ ಪಟ್ಟಿಯ ಒಳ್ಳೆಯ ಕೆಲಸ ಪುನ್ಃ ಬರೆಯುತ್ತಿದ್ದೆವು.....
ಸರ್ ಇನ್ನೊಬ್ಬನ ಹತ್ತಿರ ಹೋಗಿ ಪಟ್ಟಿ ನೋಡಿ ಅವನ ತಲೆ ಮೇಲೆ ಹೊಡೆದರು...... ನಮ್ಮ ಶಂಕ್ರ ಸುಮ್ಮನಿರಬೇಕಲ್ಲ...ಕೇಳಿಯೇಬಿಟ್ಟ..... "ಸಾರ್.. ಅಮ್ಮನಿಗೆ ಹಾಲು ತಂದು ಕೊಡೋದು ಒಳ್ಳೆ ಕೆಲಸ ವಾದರೆ,ಅಪ್ಪನಿಗೆ ಬೀಡಿ ತಂದು ಕೊಡೋದು ಹೇಗೆ ಕೆಟ್ಟ ಕೆಲಸ ಸಾರ್.....? ಎಂದ..... ನಮ್ಮ ಸರ್ ಗೆ ನಗು ಬಂತು.... ಅವರು ತುಂಬಾ ಒಳ್ಳೆಯ ಮಾಸ್ತರರಾಗಿದ್ದರು.....ತುಂಬಾ ಶಾಂತವಾಗಿ....." ಬೀಡಿ ಸೇಯೋದು ಕೆಟ್ಟ ಕೆಲಸ..... ಅದನ್ನು ತಂದು ಕೊಡೋದು ಸಹ ಕೆಟ್ಟ ಕೆಲಸವೇ...." ಎಂದರು..... ನಮ್ಮ ಶಂಕ್ರ ಸುಮ್ಮನಿರಬೇಕಲ್ಲ..... " ಅಲ್ಲ ಸಾರ್, ಮೊನ್ನೆ ನೀವೇ ಹೇಳಿದ್ರಿ..... ಅಪ್ಪ ಅಮ್ಮ ಎಂದರೆ ದೇವರ ಸಮಾನ..... ಅವರ ಸೇವೆ ಮಾಡಬೇಕು ಅಂತ..... ಈಗ ಅವರ ಸೇವೆ ಮಾಡಿದ್ರೂ ಕೆಟ್ಟ ಕೆಲಸ ಅಂತೀರಲ್ಲ ಸರ್....." ಎಂದ.... ನಾವೆಲ್ಲಾ ನಕ್ಕೆವು..... "ಹೇಯ್ ಸುಮ್ಮನಿರ್ರೋ ಎಲ್ರು..... " ಅಪ್ಪ ಕೆಟ್ಟ ಕೆಲ್ಸ ಮಾಡಿದ್ರೆ ..... ಅದು ಕೆಟ್ಟ ಕೆಲಸಾನೇ....." ಅಂದರು ನಮ್ಮ ಸರ್..... ಶಂಕ್ರ ಬಿಡಲೇ ಇಲ್ಲಾ..... " ಕೆಟ್ಟ ಕೆಲಸ ಮಾಡಿದ್ದು ಅಪ್ಪ ಆದ್ರೆ, ಅವರಿಗೇ ಹೇಳಿ ಸರ್..... ಮುಂದಿನ ಸಾರಿ ಮೀಟಿಂಗ್ ಗೆ ಬಂದಾಗ" ಎಂದ..... "ಸುಮ್ಮನೆ ಕುಳಿತುಕೊಳ್ಳೋ ಕತ್ತೆ" ಎಂದರು ಸರ್ ಸಿಟ್ಟಿನಲ್ಲಿ.....
ಅದೆಲ್ಲಾ ನೆನಪಾಯಿತು ಈ ಹುಡುಗನ ಕೆಲಸ ನೋಡಿ..... ಈಗಲೂ " ಒಳ್ಳೆಯ ಕೆಲಸದ ಪಟ್ಟಿ" ಬರೆಯುವ ಪದ್ದತಿ ಇದ್ದರೆ ನಾಳೆನೂ ಈ ಹುಡುಗ ತನ್ನ ಪಟ್ಟಿಯಲ್ಲಿ " ಅಪ್ಪನಿಗೆ ಸಾರಾಯಿ ತಂದು ಕೊಟ್ಟೆನು" ಎಂದು ಬರೆಯುತ್ತಾನೆ ಎನಿಸಿಕೊಂಡೆ..... ನಗು ಬಂತು.... ನನ್ನ ಪಾರ್ಸೆಲ್ ಸಹ ಬಂತು....
Aug 15, 2012
ವಾಸ್ತವ........
ವೇದಿಕೆಯನ್ನು ಬಹಳ ಸುಂದರವಾಗಿ ಸಿಂಗರಿಸಿದ್ದೆ..... ನಾನೇ ಕಾಲೇಜಿನ ವಿಧ್ಯಾರ್ಥಿ ಮುಖ್ಯ ಕಾರ್ಯದರ್ಶಿಯಾಗಿದ್ದರಿಂದ ತುಂಬಾ ಮುತುವರ್ಜಿ ವಹಿಸಿ ಕಾರ್ಯಕ್ರಮ ಆಯೋಜಿಸಿದ್ದೆ...... ಇದೇ ನನ್ನ ಅಂತಿಮ ವರ್ಷದ ಎಮ್. ಬಿ.ಬಿ.ಎಸ್. ಆದುದರಿಂದಲೂ ಇರಬಹುದು...... ಒಬ್ಬರು ವಿಶೇಷ ವ್ಯಕ್ತಿಗೆ ಸನ್ಮಾನ ಇದೆಯೆಂದು ತಿಳಿದಿತ್ತು......ಆದರೆ ಆವ್ಯಕ್ತಿ ಯಾರೆಂದು ಗೊತ್ತಿರಲಿಲ್ಲ...
ಸರಿಯಾಗಿ ಹತ್ತಕ್ಕೇ ಕಾರ್ಯಕ್ರಮ ಶುರು ಆಗುವುದಿತ್ತು....... ಎಲ್ಲಾ ಗಣ್ಯರೂ ವೇದಿಕೆ ಮೇಲೆ ಇದ್ದರು..... ನಮ್ಮ ಕಾಲೇಜಿನ ಪ್ರಿನ್ಸಿಪಾಲ್, ನಮ್ಮ ಊರಿನ ಎಂ. ಎಲ್. ಎ, ಯುವ ವೇದಿಕೆಯ ಅಧ್ಯಕ್ಷರು, ನಮ್ಮೂರ ಹಿರಿಯರೂ ಆದ ಸ್ವಾತಂತ್ರ್ಯ ಹೋರಾಟಗಾರರು, ಅವರ ಪಕ್ಕದಲ್ಲಿ ಒಬ್ಬರು ಮಹಿಳೆ ಕುಳಿತಿದ್ದರು..... ತಲೆ ಮೇಲೆ ಸೆರಗು ಎಳೆದಿದ್ದರು.... ಕಿವಿಯಲ್ಲಿ ದೊಡ್ಡ ಜುಮುಕಿ ಇತ್ತು..... ಗಮನಿಸಿದಾಗ ಅವರು ಒಬ್ಬರು ಮುಸ್ಲಿಂ ಮಹಿಳೆ ಎಂದು ತಿಳಿದು ಬರುತ್ತಿತ್ತು..... ಅವರು ಯಾರು ನನಗೆ ತಿಳಿದಿರಲಿಲ್ಲ...... ನನ್ನ ಕೆಲಸ ವೇದಿಕೆ ವ್ಯವಸ್ಥೆಗೆ ಸೀಮಿತವಾಗಿದ್ದರಿಂದ ನಾನು ಎದುರಿನ ಸಾಲಲ್ಲೇ ಕುಳಿತಿದ್ದೆ...... ನಮ್ಮ ಪ್ರಿನ್ಸಿಪಾಲರು ಪ್ರಾಸ್ಥಾವಿಕ ಭಾಷಣ ಮಾಡಿ, ಬಂದ ಗಣ್ಯರನ್ನು ಸ್ವಾಗತಿಸಿದರು..... ವೇದಿಕೆ ಮೇಲಿದ್ದ ಮಹಿಳೆ ಹೆಸರು ಅಲೀಮಾ ಎಂದು ಆಗಲೇ ತಿಳಿಯಿತು...... ಆದರೆ ಅವರನ್ನು ವೇದಿಕೆ ಮೇಲೆ ಯಾಕೆ ಕುಳ್ಳಿರಿಸಿದ್ದಾರೆ ಎಂದು ತಿಳಿಯಲಿಲ್ಲ..... ನಂತರ ಮಾತಾಡಿದ ನಮ್ಮೂರ ಎಮ್.ಎಲ್.ಎ ಸಾಹೇಬರು, ’ಕುಸಿಯುತ್ತಿರುವ ಮಾನವೀಯ ಮೌಲ್ಯಗಳ ಬಗ್ಗೆ ಹೇಳಿದರು..... " ಇಲ್ಲಿ ಕುಳಿತ ಮಹಿಳೆಗೆ ಎಲ್ಲರೂ ಎದ್ದು ನಿಂತು ಗೌರವಿಸಿ...... ಈ ಮಹಿಳೆ ಮಾಡಿದ ಹೋರಾಟ, ಯಾವ ಸ್ವಾತಂತ್ರ್ಯ ಹೋರಾಟಕ್ಕೂ ಕಮ್ಮಿ ಇಲ್ಲ...... ಈ ಮಹಿಳೆಯಿಂದಾಗಿ ಎಷ್ಟೋ ಜನರ ಪ್ರಾಣ ಉಳಿಯಿತು....... ತನ್ನ ಪ್ರಾಣದ ಬಗ್ಗೆ ಚಿಂತೆ ಮಾಡದೇ ಪರರ ಬಗ್ಗೆ ಯೋಚಿಸಿದ ಈ ಹೋರಾಟಗಾರ್ತಿಗೆ ಸಲ್ಲುವ ಎಲ್ಲಾ ಗೌರವಕ್ಕಾಗಿ ನಾನು ಸರಕಾರಕ್ಕೆ ಕೇಳಿಕೊಳ್ಳುತ್ತೇನೆ...... ನಾನು ಇವರಿಗೆ ಸನ್ಮಾನ ಮಾಡುವುದು ನನ್ನ ಪೂರ್ವಜನ್ಮದ ಪುಣ್ಯ...." ಎಂದರು...... ಹಣ್ಣು ಹಂಪಲ ಕೊಟ್ಟು ಶಾಲು ಹೊದೆಸಿ ಸನ್ಮಾನ ಮಾಡಿದರು............ನನಗೆ ಈಕೆಯ ಬಗ್ಗೆ ಇನ್ನೂ ಕುತೂಹಲ ಹೆಚ್ಚಿತು......
ನಂತರ ಎದ್ದು ನಿಂತವರು ಆ ಮುಸ್ಲಿಂ ಮಹಿಳೆ.... ಸುಮಾರು ಮುವತ್ತೈದು ವರ್ಷವಿರಬಹುದು ಆಕೆಗೆ....... ನನಗೆ ಆಕೆಯ ಬಗ್ಗೆ ಎನೂ ತಿಳಿದಿರಲಿಲ್ಲ...... ಇಡೀ ಸಭಾಂಗಣ ನಿಶ್ಯಬ್ಧವಾಗಿತ್ತು........ " ನಮಸ್ಕಾರ, ನನ್ನ ಹೆಸರು ಅಲೀಮಾ..... ನನಗೆ ಈ ವೇದಿಕೆಯ ಮೇಲೆ ಕುಳಿತುಕೊಳ್ಳಲು ಅರ್ಹತೆ ಇದೆಯೋ ಇಲ್ಲವೋ ತಿಳಿದಿಲ್ಲ.... ನಿಮ್ಮ ಪ್ರಿನ್ಸಿಪಾಲರು ಒತ್ತಾಯ ಮಾಡಿ ನನ್ನನ್ನು ಇಲ್ಲಿಗೆ ಕರೆಸಿದ್ದಾರೆ..... ನನ್ನ ಕಥೆಯನ್ನು ಹೇಳಲು ಕೇಳಿಕೊಂಡಿದ್ದಾರೆ..... ನಿಮಗೆಲ್ಲಾ ಬೋರ್ ಹೊಡೆಸದೇ ಬೇಗನೇ ಮುಗಿಸುತ್ತೇನೆ....
ನನ್ನದು ತುಂಬಾ ಸಾಮಾನ್ಯ ಕುಟುಂಬವಾಗಿತ್ತು..... ಅಪ್ಪ ಅಮ್ಮ ನೋಡಿದ ಹುಡುಗನನ್ನೇ ಮದುವೆಯಾಗಿದ್ದೆ..... ಆತ ಖಾಸಗಿ ಬಸ್ ಚಾಲಕನಾಗಿದ್ದ...... ಆತ ತರುವ ತಿಂಗಳ ಸಂಬಳವನ್ನೇ ನಂಬಿತ್ತು ನಮ್ಮ ಕುಟುಂಬ.... ನಾನು ಪಿ.ಯು.ಸಿ ಓದಿದ್ದೆನಾದ್ದರಿಂದ ಪಕ್ಕದಲ್ಲಿದ್ದ ಮಸೀದಿಗೆ ಹೋಗಿ ಬಡ ಮಕ್ಕಳಿಗೆ ಪಾಠ ಮಾಡುತ್ತಿದ್ದೆ...ಅದರಿಂದ ನನಗೆ ತಿಂಗಳಿಗೆ ಮುನ್ನೂರು ರುಪಾಯಿ ಸಿಗುತ್ತಿತ್ತು...... ಮದುವೆಯಾಗಿ ಹತ್ತು ವರ್ಷವಾದರೂ ಮಕ್ಕಳಿಲ್ಲದ ಕೊರಗೊಂದನ್ನು ಬಿಟ್ಟರೆ.... ಹಣವಿಲ್ಲದಿದ್ದರೂ ನೆಮ್ಮದಿಯಿಂದ ಇದ್ದೆವು...... ಅತ್ತೆ ಮಾವ ನನ್ನ ಗಂಡನಿಗೆ ಬೇರೆ ಮದುವೆ ಮಾಡಿಸಲು ಪ್ರಯತ್ನ ಪಟ್ಟರಾದರೂ ನನ್ನವರು ಅದನ್ನು ಒಪ್ಪಿರಲಿಲ್ಲ..... ನನ್ನ ಅಪ್ಪ ಅಮ್ಮ ಮುಂಬೈ ನ ಹಾಜಿ ಅಲಿ ದರ್ಗಾ ಕ್ಕೆ ಹೋಗಿ ಚಾದರ್ ಹೊದೆಸಿ ಬಂದರೆ ಮಕ್ಕಳಾಗುತ್ತದೆ ಎಂದಿದ್ದರು.... ನಾನು ಹೊರಡಲು ತಯಾರಿದ್ದೆ..... ಆದ್ರೆ ನನ್ನ ಗಂಡ ಮಾತ್ರ ನಮಾಜ್ ಮಾಡುವಾಗ " ನನಗೆ ಮಕ್ಕಳಾದರೆ ಮಾತ್ರ ಹಾಜಿ ಅಲಿಗೆ ಬಂದು ಚಾದರ್ ಹೊದೆಸುತ್ತೇನೆ" ಎಂದು ಹರಸಿಕೊಂಡರು....... ಯಾವ ದೇವರ ಹರಕೆಯ ಫಲವೋ.... ಮರುವರ್ಷವೇ ಮುದ್ದಾದ ಹೆಣ್ಣುಮಗುವಿಗೆ ತಾಯಿಯಾಗಿದ್ದೆ........ ಮಗುವಿಗೆ ಒಂದು ವರ್ಷವಾಗುತ್ತಲೇ , ಹಾಜಿ ಅಲಿಗೆ ಹೋಗಿ ಬರುವ ನಿರ್ಧಾರ ಮಾಡಿದೆವು.....
ನನಗಿನ್ನೂ ನೆನಪಿದೆ.... ರೈಲಿನಲ್ಲಿ ಒಂದು ರಾತ್ರಿ ಕುಳಿತು ಬೆಳ್ಳ್ಂ ಬೆಳಿಗ್ಗೆ ಮುಂಬೈ ತಲುಪಿದ್ದೆವು... ರೈಲಿನಿಂದ ಇಳಿದು ಸೀದಾ "ಸುಲ್ತಾನ್ ಚಾದರ್ " ಅಂಗಡಿಗೆ ಹೋದೆವು....... ಅಲ್ಲಿ ಸುಂದರವಾದ ದರ್ಗಾಕ್ಕೆ ಕೊಡುವ ಚಾದರ್ ಸಿಗುತ್ತವೆ ಎಂದು ಕೇಳಿದ್ದೆ..... ಸಾವಿರ ರುಪಾಯಿ ಕೊಟ್ಟು ಚಾದರ್ ಕೊಂಡೆವು....... ಪುನ್ಃ ಇನ್ನೊಂದು ರೈಲು ಹಿಡಿಯಬೇಕಿತ್ತು....... ಮುಂಬೈ ನ ಚತ್ರಪತಿ ರೈಲು ನಿಲ್ದಾಣ ದಲ್ಲಿ ಕುಳಿತೆವು....... ನಿಲ್ದಾಣ ಗಿಜಿ ಗಿಜಿಗೊಡುತ್ತಿತ್ತು....... ಎಲ್ಲಿ ನೋಡಿದರಲ್ಲಿ ಜನ...... ಜನ ಓಡುತ್ತಿದ್ದಾರೋ.....ನಡೆಯುತ್ತಿದ್ದಾರೋ ತಿಳಿಯುತ್ತಿರಲಿಲ್ಲ....... ನಾನು , ನನ್ನ ಗಂಡ, ಮಗಳು ಒಂದು ಕಂಬದ ಪಕ್ಕ ಕುಳಿತೆವು....... ನನ್ನವರು ಹಾಜಿ ಅಲಿಗೆ ಹೋಗಲು ಯಾವ ರೈಲು ಮತ್ತೆ ಹೊರಡುವ ವೇಳೆ ಕೇಳಿ ಬರುತ್ತೇನೆ ಎಂದು ಹೊರಟರು........ ಹೋಗಿ ಸ್ವಲ್ಪ ಹೊತ್ತಿನಲ್ಲೇ ಓಡುತ್ತಾ ಬಂದರು....... ನನ್ನನ್ನೆಬ್ಬಿಸುತ್ತಾ ಮಗುವನ್ನು ಎತ್ತಿಕೊಂಡರು......ನಾನು " ಯಾಕೆ ....ಏನಾಯ್ತು.... ಎಷ್ಟು ಹೊತ್ತಿಗೆ ರೈಲು.. " ಎಂದೆ......ಅವರು ಕೂಗುತ್ತಿದ್ದರು.." ಓಡು ಇಲ್ಲಿಂದ.... ಓಡು.... ಯಾರೋ ಭಯೋತ್ಪಾದಕರು ಗುಂಡು ಹಾರಿಸುತ್ತಿದ್ದಾರಂತೆ...... ಪಾಕಿಸ್ಥಾನದವರಂತೆ........ ತುಂಬಾ ಜನರನ್ನು ಸಾಯಿಸಿದ್ದಾರೆ....... ನಾನು ತಪ್ಪಿಸಿಕೊಂಡು ಬಂದೆ....ನಡೆ....ಓಡು......ಅಲ್ಲಿ ಕುಳಿತುಕೊಳ್ಳೋಣಾ......." ನನಗೆ ತೋಚದಾಗಿತ್ತು....... ಮಗುವನ್ನು ಅವರೇ ಎತ್ತಿಕೊಂಡಿದ್ದರು...... ನಾವು ಓಡುತ್ತಾ ಒಂದು ಕಂಬದ ಹಿಂದೆ ನಿಂತೆವು....ಗುಂಡಿನ ಸದ್ದು ಹತ್ತಿರವಾಗುತ್ತಿತ್ತು....... ಜನರ ಕೂಗಾಟವೂ ಮೇರೆ ಮೀರಿತ್ತು...... ನನ್ನ ಗಂಡ ಮಗುವನ್ನು ನನ್ನ ಕೈಗಿತ್ತರು........ ನನ್ನನ್ನು ಬಿಗಿದಪ್ಪಿ ಹಿಡಿದರು....... ನಾನು ಕಣ್ಣು ಮುಚ್ಚಿದೆ.......
ನಾವು ಕುಳಿತಿದ್ದ ಕಂಬದ ಹಿಂದೆ ನಿಂತೇ ಆ ಭಯೋತ್ಪಾದಕ ಗುಂಡು ಹಾರಿಸುತ್ತಿದ್ದ........ ನನ್ನ ಗಂಡ ಎದ್ದು ನಿಂತರು...... ನಾನು ಕಣ್ಣು ಬಿಟ್ಟೆ....... ಆ ಭಯೋತ್ಪಾದಕ ಇಷ್ಟ ಬಂದ ಹಾಗೆ ಗುಂಡು ಹಾರಿಸುತ್ತಿದ್ದ....... ಪುಸ್ತಕದಲ್ಲಿ ರಣರಂಗದ ಬಗ್ಗೆ ಕೇಳಿದ್ದೆ...ಈಗ ಕಣ್ಣೆದುರಿಗೇ ಇತ್ತು...... ಆ ಭಯೋತ್ಪಾದಕ " ಅಲ್ಲಾ ಹೋ ಅಕ್ಬರ್" ಎಂದು ಕೂಗುತ್ತಿದ್ದ...... ಕಂಡಕಂಡಲ್ಲಿ ಗುಂಡು ಹಾರಿಸುತ್ತಿದ್ದ.....ಆತನ ಮುಖದಲ್ಲಿ ಮಾನವೀಯತೆ ಒಂಚೂರು ಕಾಣಿಸುತ್ತಿರಲಿಲ್ಲ...... ಮಕ್ಕಳು, ಮಹಿಳೆ, ವ್ರದ್ಧರು ಯಾರನ್ನೂ ನೋಡುತ್ತಿರಲಿಲ್ಲ ಆತ...... ದೂರದಲ್ಲಿ ಕೆಲ ಪೋಲಿಸರು ಕಂಬದ ಮರೆಯಲ್ಲಿ ಅಡಗಿದ್ದರು.....ಅವರ ಕೈಲಿ ಬರೇ ಲಾಠಿಯಿತ್ತು....ಪಾಪ ಅವರಾದರೂ ಏನು ಮಾಡುತ್ತಿದ್ದರು........ ಸುಮಾರಾಗಿ ಎಲ್ಲಾ ಸತ್ತ ನಂತರ ಆತ ಕಂಬದ ಹಿಂದಿದ್ದ ನಮ್ಮನ್ನು ನೋಡಿದ....... ಅದರಲ್ಲೂ ನನ್ನ ಗಂಡ ಎದ್ದು ನಿಂತಿದ್ದರು...... ಆ ಭಯೋತ್ಪಾದಕ ನನ್ನ ಗಂಡನ ಕಡೆ ಬಂದೂಕು ಹಿಡಿದ..... ನನ್ನವರು ಕೂಗಿದರು....." ಬಿಟ್ಟು ಬಿಡು ನಮ್ಮನ್ನು....ನಾವು ಇಲ್ಲಿಯವರಲ್ಲ...ದೂರದಿಂದ ಬಂದಿದ್ದೇವೆ..... ಬಿಟ್ಟುಬಿಡು ನಮ್ಮನ್ನು....ನನ್ನ ಮಗಳ ಹರಕೆ ತೀರಿಸಲು ಬಂದಿದ್ದೇವೆ ಇಲ್ಲಿಗೆ....... " ಆತನ ಮುಖ ಚರ್ಯೆ ಬದಲಾಗಲಿಲ್ಲ.....ಆತ ಬಂದೂಕು ಹಿಡಿದು ಇನ್ನೂ ಮುಂದೆ ಬಂದ..... ನನ್ನವರು ಕೊನೆಯ ಪ್ರಯತ್ನವಾಗಿ..." ನಾನೂ ಮುಸ್ಲಿಂ......ಹಾಜಿ ಅಲಿಗೆ ಬಂದಿದ್ದೆವು....... ನೋಡು ಚಾದರ್ ತಂದಿದ್ದೇವೆ....." ಎನ್ನುತ್ತಾ ತಂದಿದ್ದ ಚಾದರ್ ತೋರಿಸಿದರು.......
ಊರಿನಲ್ಲಿ ಎಲ್ಲರ ಜೊತೆ ಗಣೇಶೋತ್ಸವ ಆಚರಿಸುವ ನನ್ನ ಗಂಡ , ಜೀವ ಉಳಿಸಿಕೊಳ್ಳಲು ತಮ್ಮ ಧರ್ಮವನ್ನು ಗುರಾಣಿಯಾಗಿ ಉಪಯೋಗಿಸಲು ನೋಡಿದ್ದರು....ಆದರೆ ಆ ಭಯೋತ್ಪಾದಕನಿಗೆ ಜಾತಿಯಿರಲಿಲ್ಲ, ಧರ್ಮವಿರಲಿಲ್ಲ..... ಕನಿಷ್ಟ ಆತನ ಮುಖಚರ್ಯೆಯೂ ಬದಲಾಗಲಿಲ್ಲ....... ಆತ ದಿಡಿರನೇ ಗುಂಡು ಹಾರಿಸಿದ.... ಗುಂಡು ಬಡಿದ ರಭಸಕ್ಕೆ ನನ್ನ ಗಂಡ ಮಾರು ದೂರಕ್ಕೆ ಹಾರಿ ಬಿದ್ದರು...... ಅವರ ಕೈಯಲ್ಲಿದ್ದ ಚಾದರ್ ನನ್ನ ಮೈ ಮೇಲೆ ಬಿತ್ತು....... ನನ್ನ ಗಂಡನ ಮೈ ಪೂರಾ ರಕ್ತವಾಗಿತ್ತು...... ಕಣ್ಣು ಅರ್ಧ ತೆರೆದಿತ್ತು..... ಬಿದ್ದ ರೀತಿ ನೋಡಿದರೆ ಆಗಲೇ ಪ್ರಾಣ ಹೋಗಿತ್ತು....... ನನ್ನ ಮುಖದ ಮೇಲೂ ರಕ್ತ ಬಿದ್ದಿತ್ತು...... ಆ ಭಯೋತ್ಪಾದಕ ಬಂದೂಕನ್ನ ನನ್ನ ಕಡೆ ತಿರುಗಿಸಿದ...... ನಾನು ಎಚ್ಚೆತ್ತುಕೊಳ್ಳುವ ಮೊದಲೇ ಗುಂಡು ಹಾರಿಸಿಯೇ ಬಿಟ್ಟ... ಅದು ನನ್ನ ಮಗುವಿನ ಕಣ್ಣಿಗೇ ತಾಗಿತು...... ನನ್ನ ಮಗಳ ಕೂಗು ಇನ್ನೂ ಕಿವಿಯಲ್ಲಿದೆ ನನಗೆ...... ನನಗೆ ಏನೆನಿಸಿತೋ ಗೊತ್ತಿಲ್ಲ.....ಕೈಯಲ್ಲಿದ್ದ ದರ್ಗಾಗೆ ಕೊಡಲು ತಂದಿದ್ದ ಚಾದರದಿಂದ ಬೀಸಿ ಒಗೆದೆ "ಅಲ್ಲಾ ಹೋ ಅಕ್ಬರ್" ಎನ್ನುತ್ತಾ ಆತನ ಕಡೆಗೆ........ ಅದು ಬಿಡಿಸಿಕೊಳ್ಳುತ್ತಾ ಹೋಗಿ ಆತನ ಮುಖದ ಮೇಲೆ ಬಿತ್ತು....... ತುಂಬಾ ಉದ್ದವಾದ ಚಾದರ್ ಆಗಿದ್ದರಿಂದ ಆತ ಅದನ್ನು ಬಿಡಿಸಿಕೊಳ್ಳಲು ಆತನಿಗೆ ಸ್ವಲ್ಪ ಸಮಯ ಹಿಡಿಯಿತು..........ಅಷ್ಟರಲ್ಲಿ ಅಲ್ಲಿದ್ದ ಕೆಲ ಪೋಲೀಸರು ಮತ್ತು ಜನ ಸೇರಿ ಆತನನ್ನು ಹಿಡಿದಿದ್ದರು......
ನನ್ನ ಮಗಳ ಅಳು ಹೆಚ್ಚುತ್ತಿತ್ತು.....ಕೂಡಲೇ ಬಂದ ಅಂಬುಲನ್ಸ್ ನನ್ನ ಮಗಳನ್ನ ಆಸ್ಪತ್ರೆಗೆ ಕರೆದುಕೊಂಡು ಹೋಯ್ತು....... ಆದರೆ ನನ್ನ ಗಂಡ ಮೇಲೇಳಲೇ ಇಲ್ಲ...... ನಂತರ ಸರಕಾರ ನನ್ನ ಮಗಳ ಉಪಚಾರ ಮತ್ತು ವಿಧ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದೆ...... ಅದಕ್ಕೆ ನಾನು ಆಭಾರಿಯಾಗಿದ್ದೇನೆ.....
ನಾನು ಇಲ್ಲಿ ಹೇಳಬೇಕಾದ ಒಂದೇ ಮಾತಿದೆ.....ಭಯೋತ್ಪಾದನೆಗೆ ಜಾತಿಯಿಲ್ಲ...ಮತವಿಲ್ಲ...... ಅವರಿಗೆ ಬುದ್ಧಿಯೂ ಇಲ್ಲ..... " ಆಕೆ ತನ್ನ ಕಣ್ಣನ್ನ ಸೆರಗಿನಿಂದ ಒರೆಸಿಕೊಳ್ಳುತ್ತಿದ್ದರು......
ನಮ್ಮೆಲ್ಲರ ಕಣ್ಣಲ್ಲೂ ನೀರಿತ್ತು....... ನಮ್ಮ ಕಾಲೇಜ್ ಪರವಾಗಿ ಹಿರಿಯ ಸ್ವಾತಂತ್ಯಗಾರರನ್ನೂ ಶಾಲು ಹೊದೆಸಿ ಸನ್ಮಾನಿಸಿದೆವು...... ಅಲೀಮಾ ಅವರ ಮಗಳು ಕಪ್ಪು ಕನ್ನಡಕ ಧರಿಸಿ ಚೂಟಿಯಾಗಿ ಓಡಾಡಿಕೊಂಡಿದ್ದಳು...... ನಾನು ಕಾರ್ಯಕ್ರಮದ ವಂದನಾರ್ಪಣೆ ಮಾಡಿದೆ....." ಅಲೀಮಾ ಮೇಡಂ ಮಾಡಿದ ಕೆಲಸ ಅವರಿಗೆ ತಿಳಿದೋ, ತಿಳಿಯದೆಯೋ ದೇಶಕ್ಕೆ ಒಳ್ಳೆಯದನ್ನೇ ಮಾಡಿದೆ...... ಹಾಜಿ ಅಲಿಗಾಗಿ ಕೊಂಡೊಯ್ದ ಚಾದರ್ ತುಂಬಾ ಜನರ ಪ್ರಾಣ ಉಳಿಸಿದೆ.... ಅದೂ ಸಹ ದೇವರ ಕೆಲಸವೇ ಆಗಿದೆ....... ನಿಮಗೆ ನಮ್ಮೆಲ್ಲರ ನಮನ......" ಎಂದೆ... ನನ್ನ ಕಣ್ಣು ಹನಿಗೂಡಿತ್ತು.....
ಕಾರ್ಯಕ್ರಮ ಮುಗಿಸಿ ಹೊರ ಬರುತ್ತಿದ್ದೆ......... ಆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಅಲೀಮಾ ಮೇಡಂ ರಸ್ತೆ ಬದಿಯಲ್ಲಿ ನಿಂತಿದ್ದರು...... ಅವರಿಗಾಗಿ ಕಾಲೇಜು ಮಂಡಳಿ ವಾಹನ ವ್ಯವಸ್ತೆ ಮಾಡಿತ್ತು.... ಅದು ಬರಲು ಸ್ವಲ್ಪ ಲೇಟ್ ಆಗಿತ್ತು ಅನಿಸತ್ತೆ........ ಎಮ್.ಎಲ್.ಎ ಸಾಹೇಬರ ವಾಹನ ಹೊರಡಲು ತಯಾರಾಗಿತ್ತು.... ನಾನು ಹೋಗಿ ಎಮ್.ಎಲ್.ಎ. ಆಪ್ತ ಕಾರ್ಯದರ್ಶಿ ಹತ್ತಿರ ಆ ಇಬ್ಬರನ್ನು ಅವರ ವಾಹನದಲ್ಲಿ ಕರೆದುಕೊಂಡು ಹೋಗಲು ವಿನಂತಿ ಮಾಡಿದೆ...... ಆತ ಹೋಗಿ ಎಮ್.ಎಲ್.ಎ. ಸಾಹೇಬರಿಗೆ ಹಾಗೆ ಹೇಳಿದ..... ನಾನು ಅವರಿಂದ ಸ್ವಲ್ಪವೇ ದೂರವಿದ್ದೆ...... ಅವರ ಮಾತು ನನ್ನ ಕಿವಿಗೆ ಕಾದ ಸೀಸದಂತೆ ಸುರಿದಿತ್ತು..." ಅಲ್ಲಾರೀ...ಇವರೆಲ್ಲಾ ಏನು ಮಹಾನ್ ಕಾರ್ಯ ಮಾಡಿದ್ದಾರೆ ಎಂದು ಸನ್ಮಾನ ಮಾಡಬೇಕ್ರೀ.....?... ಈ ಸ್ವಾತಂತ್ರ್ಯ ಹೋರಾಟಗಾರನಿಗೆ ಆ ಸಮಯದಲ್ಲಿ ಏನು ಮಾಡಿದ್ದನೋ ಯಾವನಿಗೆ ಗೊತ್ತು....... ಏನೂ ಕೆಲಸವಿಲ್ಲದೇ ಇದ್ದಾಗ ಸುಮ್ಮನೇ ದೊಂಬಿ ಜಗಳಕ್ಕೆ ಹೋಗಿದ್ದಿರಬೇಕು......ಜೈಲಿಗೆ ಹಾಕಿರುತ್ತಾರೆ...... ಅದು ಈಗ ಸ್ವಾತಂತ್ರ್ಯ ಹೋರಾಟಗಾರ ಎಂಬ ಹೆಸರು ಸಿಕ್ಕಿದೆ......ಈಗಿನ ಸರಕಾರದಿಂದ ಪಿಂಚಣಿಯನ್ನೂ ಪಡೆಯುತ್ತಿದ್ದಾನೆ....... ಆಯಮ್ಮನದೂ ಅದೇ ಕಥೆ....... ಸಾವು ತಮ್ಮ ಬುಡಕ್ಕೆ ಬಂದಾಗ ಎಲ್ಲರೂ ಬಡಿದೇಳುತ್ತಾರೆ.... ಅವಳೂ ಮಾಡಿದ್ದೂ ಅದೇ.... ಅದರಲ್ಲೇನು ಮಹಾ ಕೆಲಸವಿದೆ.......!!!"
Subscribe to:
Posts (Atom)
