3K ಚಿತ್ರ-ಕವನ ಸ್ಪರ್ಧೆಗಾಗಿ ಬರೆದ ಕವನ...
ಮುನಿಸಿ ಹೇಳದೇ ಹೋದ
ಗೆಳೆಯನ ನೆನಪಿಗೆ ಬರವಿಲ್ಲ..
ಅವನ ಇರುವಿಕೆಗಾಗಿ
ಕುರುಹು ಇರಲೇ ಬೇಕಿಲ್ಲ....
ಕಾಡುವ ಕನಸಿನ ನಡುವೆ
ನೆನಪಿನ ನೆರಳಿಗೆ ಸಾವಿಲ್ಲ...
ಬರಿದಾದ ಕಣ್ಣೀರಿಗೆ
ಕಾರಣವ ಹುಡುಕುವ ಮನಸಿಲ್ಲ...
ಮನದ ಮುನಿಸಿಗೆ ಮುಲಾಮು
ಸವರಿದರೂ ಮಾಯುವ ಗಾಯ ಇದಲ್ಲ...
ಅಳಿಸಿಹೋದ ಹೆಜ್ಜೆ ಗುರುತ
ಹುಡುಕುವ ಬಯಕೆಯಂತೂ ಇಲ್ಲ...
ಇರುವುದೊಂದೆ ಆಸೆ ನನಗೆ....
ಮನೆಯ ಮುಚ್ಚಿದ ಬಾಗಿಲಿಗೆ
ಪತ್ತೆಯಾಗದ ಸಾಕ್ಷ್ಯವಿರಿಸು...
ಮನಸ ಮುರಿದ ಕಾರಣ ತಿಳಿಸಿ
ವಿಳಾಸವಿರದ ಪತ್ರವಿರಿಸು...
ಆ ಚಿತ್ರ ಹೊಮ್ಮಿಸಿದ ಭಾವಗಳಿಗೆ ಪದಗಳ ಪೋಷಾಕು ತೊಡೊಸಿ ಗುಪ್ತಗಾಮಿನಿಯ ಹಾಗೆ ನೇಯ್ದಿರುವ ಕವನ ಸೊಗಸಾಗಿದೆ..ಅಪರೂಪದ ಕವನ...ಸೂಪರ್ ದಿನಕರ್
ReplyDeleteThank you sir
Deleteಹಳತು ನೆನಪುಗಳನೆಲ್ಲ ಮರು ಉತ್ಖಲಿಸಿದಿರಿ.
ReplyDeleteಇಲ್ಲಿಹರೋ ಆ "ಮುನಿಸಿ ಹೇಳದೇ ಹೋದ
ಗೆಳೆಯ"(ತಿ)ಯರೆಲ್ಲ ಅದೆಲ್ಲಿಹರೋ?
ನೆನಪಾಗುತಿವೆ ಆ ಚಹರೆಗಳು...
ಸೊಗಸಾದ ಕವನ...
ತುಂಬಾ ಚೆನ್ನಾಗಿದೆ ಸರ್👌👌
ReplyDeleteNice post. I was checking constantly this blog and I am impressed!
ReplyDeleteVery helpful info specially the last part :) I care for such info a lot.
I was looking for this certain info for a very long time.
Thank you and best of luck.
ಅರ್ಥವತ್ತಾದ ಕವನ
ReplyDelete