Dec 7, 2010

ಕಾಡುವ ಕತ್ತಲು.....!

ನನ್ನದೇ ನೆರಳು ಉದ್ದುದ್ದವಾಗಿದೆ...
ದೂರದಾ ಬೆಳಕು ನನ್ನ ಮೇಲೆ ಬಿದ್ದಾಗ....
ನಿನ್ನದೇ ನೆನಪು ಓಡೋಡಿ ಬಂದಿದೆ,
ಮಗ್ಗುಲಿನ ಮಿಂಚುಹುಳ ಮಿನುಗಿದಾಗ....

ಕಡುಗತ್ತಲೆಗೆ ಕಣ್ಣು ಕೂಡ ಸೋತಿದೆ,

ನನಸಾಗದೇ ಕಾಡುವ ಕನಸಿನ ಹಾಗೆ.....
ಕಡುಗಪ್ಪು ಬಣ್ಣದಲೂ ಚಿತ್ತಾರ ಮೂಡಿದೆ,
ಕಾಣದೆಲೇ ಕುಣಿಸುವ ಕಾಲನ ಹಾಗೆ....

ಕತ್ತಲೆಯ ಮಡಿಲಿನಲೂ ಏನೋ ಒಂದು ಹಿತವಿದೆ,

ಬಿಗಿದಷ್ಟೂ ಜಾರುವ ಪ್ರೀತಿಯ ಹಾಗೆ....
ಕಾಣದಿಹ ಕಪ್ಪಿನಲೂ ಏನೇನೋ ಒಗಟಿದೆ...
ಗುರಿಯಿರದ ದಾರಿಯ ತಿರುವಿನ ಹಾಗೆ.....

ಹೊರಗಿನ ಕತ್ತಲಲೂ ಮನದ ದೀಪ ಬೆಳಗು
ತಿದೆ,
ಬದುಕಿಗೇ ದಾರಿ ತೋರುವ ಕನಸಿನ ಹಾಗೆ.....
ಕತ್ತಲಿನ ದಾರಿಯಲ್ಲೂ ಬೆಳಕ ನಿರೀಕ್ಷೆಯಿದೆ,
ಕಾಡಿದರೂ ಕಾಪಾಡುವ ದೇವರ ಹಾಗೆ......

32 comments:

  1. ಚೆನ್ನಾಗಿಲ್ಲ ಎಂದು ಹೇಗೆ ಹೇಳಲು ಸಾಧ್ಯ ಸರ್... ಇಷ್ಟು ಚೆಂದದ ಕವನವನ್ನು... ಚೆನ್ನಾಗಿದೆ ಸರ್.... ಕಾಡದಿರಲಿ ಕತ್ತಲು .. ಬೆಳಗುತಿರಲಿ ಬೆಳಕು..

    ReplyDelete
  2. ಸರ್,

    ತುಂಬಾ ಅರ್ಥಪೂರ್ಣ ಕವನ

    ಬಹಳ ಸೊಗಸಾಗಿದೆ

    ಬದುಕಿನ ಕತ್ತಲು ಬೆಳಕಿನ ಆಗಮನಕ್ಕೆ ದಿಕ್ಸೂಚಿಯಿರಬಹುದು ಅಲ್ಲವೇ?

    ReplyDelete
  3. ಅನೇಕ ದಿನಗಳಿ೦ದ ಬ್ಲಾಗನ್ನು ಕತ್ತಲಲ್ಲಿಟ್ಟು ಈಗ ಮನದ ದೀಪವನ್ನು ಕವಿತೆಯ ಮೂಲಕ ಬ್ಲಾಗ್ ದೀಪ ಮಾಡಿದ್ದೀರಿ..:) ಚನ್ನಾಗಿದೆ...

    ReplyDelete
  4. ಕತ್ತಲೆಯ ಮಡಿಲಿನಲೂ ಏನೋ ಒಂದು ಹಿತವಿದೆ,
    ಬಿಗಿದಷ್ಟೂ ಜಾರುವ ಪ್ರೀತಿಯ ಹಾಗೆ....
    ಕಾಣದಿಹ ಕಪ್ಪಿನಲೂ ಏನೇನೋ ಒಗಟಿದೆ...
    ಗುರಿಯಿರದ ದಾರಿಯ ತಿರುವಿನ ಹಾಗೆ.....

    ಚೆನ್ನಾಗಿದೆ ಸಾರ್..
    ಸುಂದರ ಕವನ.

    ReplyDelete
  5. ಸುಂದರ ಕವನ ದಿನಕರ್ ಸರ್.
    ಕಾಡುವ ಕತ್ತಲೆಯು ಕರಗಿ
    ದಿವ್ಯ ಬೆಳಕದು ಬೆಳಗಿ
    ಉದಯಿಸಲಿ ಮೂಕ ಮನದ ಮಾತು ಸವಿಗಾನವಾಗಿ....:)

    ReplyDelete
  6. ತುಂಬಾ ಸುಂದರ ಕವನ ದಿನಕರ್ ಸರ್.ನೀವು ಕಥೆಗಳಷ್ಟೇ ಸೊಗಸಾಗಿ ಕವನಗಳನ್ನೂ ಬರೆಯಬಲ್ಲಿರಿ.ನಮಸ್ಕಾರ.

    ReplyDelete
  7. Tumba chenaagiruva kavana... with hope n positive attitude.

    ಬೆಳಗಿತಿದೆ - ondu typo aagide ansutte!!

    ReplyDelete
  8. ಕಪ್ಪು ಬೇರೆ ಕತ್ತಲು ಬೇರೆ... ಈ ಎರಡರ ವಿವಿಧ ಮುಖಗಳನ್ನು ಹೇಳಲು ಯತ್ನಿಸಿದ್ದೀರಿ. ಪ್ರಯತ್ನ ಚೆನ್ನಾಗಿದೆ. ಮುಂದುವರಿಸಿ...

    ReplyDelete
  9. ದಿನಕರ್,

    ತುಂಬಾ ದಿನದಿಂದ ಮನದ ಮಾತು ಮೂಕವಾಗಿತ್ತು..
    ಮರಳಿ ಬಂದಿದ್ದು..ಈ ಸುಂದರ ಕವನ ಕೊಟ್ಟಿದ್ದು..
    ಇಷ್ಟವಾಯ್ತು.

    ReplyDelete
  10. ಸೊಗಸಾದ ಕವನ..ಕೊನೆಯ ಸಾಲುಗಳು ತುಂಬಾ ಹಿಡಿಸಿತು

    ReplyDelete
  11. tumbaa chennaagide Dinakar avare...

    ಕತ್ತಲಿನ ದಾರಿಯಲ್ಲೂ ಬೆಳಕ ನಿರೀಕ್ಷೆಯಿದೆ,
    ಕಾಡಿದರೂ ಕಾಪಾಡುವ ದೇವರ ಹಾಗೆ.....

    tumbaa ishtavaaytu..

    ReplyDelete
  12. ದಿನಕರ್, ಏನೋ ಎನಿಸುವ ಕಾಣದ ಗುರಿ ಏನೋ ಆಗಿ ಹೊರಹೊಮ್ಮುತ್ತದೆಯೇ..?? ಎನ್ನುವ ಭಾವ
    ಕಾಣದಿಹ ಕಪ್ಪಿನಲೂ ಏನೇನೋ ಒಗಟಿದೆ...
    ಗುರಿಯಿರದ ದಾರಿಯ ತಿರುವಿನ ಹಾಗೆ.....
    ದೂರದಿಂದ ತಿರುವೊಂದೇ ಕಾಣುವುದು ಅದರ ಗುರಿ ಏನು ತಿಳಿಯದು ಆದ್ರೆ ಹೋಗದೇ ವಿಧಿಯಿಲ್ಲ ಹೊರಟ ಮೇಲೆ...ಇದೇ ಒಗಟು...ಚನ್ನಾಗಿದೆ...

    ReplyDelete
  13. ಸುತ್ತಲೂ ಕತ್ತಲು ತುಂಬಿದಾಗಲೂ ಮನದ ದೀಪ ಬೆಳಗುತ್ತಿರುವ ರೂಪಕ ತುಂಬ ಸ್ಫೂರ್ತಿದಾಯಕವಾಗಿದೆ. ಬಸವಣ್ಣನವರ ವಚನವೊಂದು ನೆನಪಾಯ್ತು:
    "ತಮಂಧ ಘನ,ಜ್ಯೋತಿ ಕಿರಿದೆನ್ನಬಹುದೆ?"
    ಮನದ ಭಾವಕ್ಕೆ ಕನ್ನಡಿ ಹಿಡಿದಂತಿರುವ ಭಾವಗೀತೆಗಾಗಿ ಅಭಿನಂದನೆಗಳು.

    ReplyDelete
  14. ಕತ್ತಲೆಯಲ್ಲಿ ಬೆಳಕ ಹುಡುಕುವ ಯತ್ನ ಚನ್ನಾಗಿದೆ

    ReplyDelete
  15. ಕತ್ತಲೆಯ ಮಡಿಲಿನಲೂ ಏನೋ ಒಂದು ಹಿತವಿದೆ,
    ಬಿಗಿದಷ್ಟೂ ಜಾರುವ ಪ್ರೀತಿಯ ಹಾಗೆ....
    ಕಾಣದಿಹ ಕಪ್ಪಿನಲೂ ಏನೇನೋ ಒಗಟಿದೆ...
    ಗುರಿಯಿರದ ದಾರಿಯ ತಿರುವಿನ ಹಾಗೆ. ನನಗೆ ಇಷ್ಟವಾದ ಸಾಲುಗಳು ಕವಿತೆ ಚೆನ್ನಾಗಿ ಮೂಡಿಬಂದಿದೆ.ಕತ್ತಲೆ ಬಗ್ಗೆ ಸುಂದರ ವರ್ಣನೆ.ದಿನಕರ್ ಒಳ್ಳೆ ಕವಿಯೂ ಹೌದು.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  16. ಕರುಣಾಳು ಬಾ ಬೆಳಕೇ ಮುಸುಕಿದೀ ಮಬ್ಬಿನಲಿ ..... ಮಬ್ಬಿನಲಿ ಬೆಳಕನ್ನು ಕಾಯುವ ಸೊಗಸೇ ಬೇರೆ. ಆ ಕತ್ತಲಲ್ಲೂ ಖುಷಿಯಿದೆ, ಬೆಳಕ ಕಾಣುವ ತವಕವಿದೆ ತುಂಬಾ ಸುಂದರವಾದ ಕವಿತೆ ದಿನಕರ್ ಸರ್ :)

    ReplyDelete
  17. ದಿನಕರ್ ಸಾರ್ ಸುಪೆರ್ಬ್ !!!!
    ನೀವು ತಡವಾಗಿ ಬರೋವಾಗೆಲ್ಲ ಏನೋ ಒಂದು ಹೊಸದಾಗಿ ಸೋಗಸಾಗಿದ್ದನ್ನ ತರ್ತೀರಲ್ಲ ಇದರ ಗುಟ್ಟೇನು ? :D

    ReplyDelete
  18. ಅಪರೂಪಕ್ಕೆ ಬರೆದು ಅರ್ಥಪೂರ್ಣ ಕವನವನ್ನು ಕರುಣಿಸಿದ್ದೀರಿ, ಕತ್ತಲು ಕೆಲವರಿಗೆ ಭಯಹುಟ್ಟಿಸಿದರೆ ಇನ್ನೂ ಕೆಲವರಿಗೆ ಕತ್ತಲಲ್ಲೇ ಕೆಲಸಕೂಡ! ಕತ್ತಲನ್ನು ನೆನೆಸಿದರೆ ಅದು ಕಾಡುವ ಪರಿ ಹಲವುಥರ. ಇಂತಹ ಹಲವು ಕವನಗಳು ನಿಮ್ಮಿಂದ ಹುಟ್ಟಲಿ, ಶುಭಕೋರುತ್ತೇನೆ, ಧನ್ಯವಾದ

    ReplyDelete
  19. ಚೆನ್ನಾಗಿದೆ.. ಬಹಳ ದಿನಗಳ ನಂತರ ಬರೆಯುತ್ತಿದ್ದೀರಿ.. ನಿಮ್ಮ ಕಥೆಗಳು ಕೇಳದೆ ಬಹಳ ದಿನವಾಯ್ತು..

    ReplyDelete
  20. ದಿನಕರ್ ..

    ಬೆಳಕಲ್ಲಿ
    ಬೆಳೆಯುವ ಹಂಬಲವನ್ನು..
    ಬೆಳೆಸುವದು..
    ಕತ್ತಲೆಯ..
    ಕಷ್ಟಗಳು ..

    ನಿಮ್ಮ ಪ್ರತಿಯೊಂದೂ ಸಾಲುಗಳು ಇಷ್ಟವಾದವು...

    ಅಭಿನಂದನೆಗಳು..

    ReplyDelete
  21. ಒಳ್ಳೆಯ ಕವನ ಸರ್. ಚೆನ್ನಾಗಿದೆ.

    ReplyDelete
  22. ದಿನಕರ್ ಸರ್,

    ಕತ್ತಲೆಯ ಬಗ್ಗೆ ಒಂದು ಉತ್ತಮ ಕವನ. ನನಗೆ ಕತ್ತಲೆ ಒಂಥರ ಇಷ್ಟ. ಛಾಯಾಗ್ರಾಹಕರಿಗೆ ಕತ್ತಲೆಯ ನಿಯಂತ್ರಣದಲ್ಲಿ ಕಲಿಯುವುದು ತುಂಬಾ ಇರುತ್ತೆ..ಅದಕ್ಕೆ ತಕ್ಕಂತೆ ಬರಹಗಾರನಾಗಿದ್ದಲ್ಲಿ ಬರಹಗಳು ಕತ್ತಲೆಯಲ್ಲಿ ಮೂಡುತ್ತವೆ. ಚೆನ್ನಾಗಿದೆ ಕವನ.

    ReplyDelete
  23. ದಿನಕರ್ ಸರ್ ರವರೆ,ಬಹಳ ಅರ್ಥ ಪೂರ್ಣವಾದ ಕವನ .ಅಭಿನಂದನೆಗಳು

    ReplyDelete
  24. Tumba suMdara Kavana ...

    Hosa varushada shubhaashayagaLu

    ReplyDelete
  25. ದಿನಕರಣ್ಣ,
    ಕವನ ತುಂಬಾ ಹಿಡಿಸಿತು..
    ಮನದ ದೀಪದ ಬೆಳಕು ಹರಡಲಿ.. ಇನ್ನಷ್ಟು ಕವನಗಳು ನಮಗಾಗಿ ಬರಲಿ :)

    ReplyDelete
  26. ದಿನಕರಣ್ಣ,
    ಕವನ ತುಂಬಾ ಹಿಡಿಸಿತು..
    ಮನದ ದೀಪದ ಬೆಳಕು ಹರಡಲಿ.. ಇನ್ನಷ್ಟು ಕವನಗಳು ನಮಗಾಗಿ ಬರಲಿ :)

    ReplyDelete
  27. kavanada kadeya saalugalalli positive approach, uttma muktaaya anistu.. dinakar sir. shubhashayagalu.

    ananth

    ReplyDelete
  28. ಕವನ ಬರವಣಿಗೆ ಮಾತ್ರವಾಗದೆ ವಸ್ತುನಿಷ್ಠ ಮತ್ತು ವಿಷಯಾಧಾರಿತವಾಗಿದ್ದರೆ ಚೆನ್ನ

    ReplyDelete