Aug 13, 2010

ನಾನ್ಯಾರು........?

ಇದೇ ಅಗಷ್ಟ್ ೧೫ ಕ್ಕೆ  ನನಗೆ ತೊಂಬತ್ತು ವರ್ಷ ವಯಸ್ಸು..... ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿದ್ದ ನಾನು ಈಗ ಜೈಲಿನಲ್ಲಿದ್ದೇನೆ....ನನ್ನದಲ್ಲದ ತಪ್ಪಿಗೆ...... ನನ್ನದೇನೂ ತಪ್ಪಿಲ್ಲ ಎಂದು ವಾದಿಸಲು ನನ್ನ ಜೊತೆ ಯಾರೂ ಇಲ್ಲ..... ಈಗ ನನಗೆ ಜೈಲಿನ ಹೊರಗೆ ಬಂದು ಸಾಧಿಸಲು ಎನೂ ಉಳಿದಿಲ್ಲ.... ಅದಕ್ಕಾಗಿಯೇ ನನಗೆ ಸಿಕ್ಕ ಕ್ಷಮಾದಾನವನ್ನೂ ತಿರಸ್ಕರಿಸಿ ಇಲ್ಲೇ ಉಳಿದಿದ್ದೇನೆ.....

ನಾನು ಹುಟ್ಟಿದ್ದು ೧೯೨೦ ಅಗಷ್ಟ್ ೧೫...... ಅಪ್ಪ ಅಮ್ಮನಿಗೆ ಒಬ್ಬನೇ ಮಗನಾಗಿದ್ದ ನನ್ನ ಮೇಲೆ ತುಂಬಾ ಜವಾಬ್ದಾರಿ ಇತ್ತು.... ಅಪ್ಪ ಅಮ್ಮನ ಅಭಿಲಾಷೆಯಂತೆ ನಾನು ಪದವೀಧರನಾದೆ..... ಅದೇ ಸಮಯದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟ ನನ್ನ ಮೇಲೆ ತುಂಬಾ ಪರಿಣಾಮ ಬೀರಿತ್ತು..... ದೇಶಕ್ಕಾಗಿ ಎನಾದರೂ ಮಾಡುವ ತುಡಿತ ನನ್ನಲ್ಲಿತ್ತು..... ನನ್ನ ಊರಿಗೆ ಬಂದಿದ್ದ ಗಾಂಧೀಜಿಯವರ ದಂಡೀಯಾತ್ರೆ ಮತ್ತು ಅವರ ಮಾತು ನನ್ನಲ್ಲಿನ ದೇಶಭಕ್ತಿಯನ್ನು ಜಾಗ್ರತಗೊಳಿಸಿತ್ತು..... ಆಂಗ್ಲರ ದುರಾಡಳಿತ ಮೇರೆ ಮೀರಿತ್ತು...... ಅಸಹಕಾರ ಚಳುವಳಿಯ ಮೂಲಕ ಭಾರತೀಯರು ಕರಾರುವಕ್ಕಾದ ಎದುರೇಟನ್ನೆ ನೀಡುತ್ತಿದ್ದರು..... ನಾನು ಮನೆ ಬಿಟ್ಟು ಗಾಂಧೀಜಿಯವರ ಚಳುವಳಿ ಸೇರಲು ತಯಾರಿ ನಡೆಸಿದ್ದೆ..... ನನ್ನ ಅಮ್ಮನಿಗೆ ನಾನು ಮನೆ ಬಿಟ್ಟು ಹೋಗುವುದು ಬೇಕಿರಲಿಲ್ಲ.... ಮನೆಯಲ್ಲಿದ್ದು ಏನಾದರೂ ಕೆಲಸ ಮಾಡಿಕೊಂಡಿರು ಎನ್ನುತ್ತಿದ್ದರು......

  ಭಾರತೀಯರ ದಂಗೆಯನ್ನು ಹತ್ತಿಕ್ಕಲು ಆಂಗ್ಲರು ತಮ್ಮ ಸೇನೆಯ ಶಕ್ತಿ ಹೆಚ್ಚಿಸಿಕೊಳ್ಳಲು ತಯಾರಿ ನಡೆಸಿದ್ದರು..... ನನ್ನ ಊರಲ್ಲೂ  ಸೇನೆಗೆ ಭರ್ತಿ ನಡೆಯುತ್ತಿತ್ತು..... ಈ ಕೆಲಸಕ್ಕೆ ಸೇರಲು ನನ್ನ ಅಮ್ಮ ಒತ್ತಾಯ ಹೇರುತ್ತಿದ್ದಳು..... ನನ್ನ ಗುರಿ ಆಂಗ್ಲರ ವಿರುದ್ಧ ಹೋರಾಡುವುದಾಗಿದ್ದರೆ, ಅಮ್ಮ ನನ್ನನ್ನು ಆಂಗ್ಲರಿಗಾಗಿ ಕೆಲಸ ಮಾಡಲು ಹಟ ಮಾಡುತ್ತಿದ್ದಳು... ಅಮ್ಮನಿಗೆ ನಾನು ಅವರನ್ನು ಬಿಟ್ಟು ದೂರ ಹೋಗುವುದು ಇಷ್ಟ ಇರಲಿಲ್ಲ ಅಷ್ಟೆ..... ಅಮ್ಮನ ಒತ್ತಾಯಕ್ಕೆ ಕಟ್ಟುಬಿದ್ದು ನಾನು ಪೋಲಿಸ್ ಕೆಲಸಕ್ಕೆ ಸೇರಿದೆ.... ಆದರೆ ದೇಶಕ್ಕಾಗಿ ಸೇವೆ ಮಾಡುವ ಕನಸು ನನ್ನಲ್ಲಿ ಸತ್ತಿರಲಿಲ್ಲ..... ಪೋಲಿಸ್ ಕೆಲಸಕ್ಕೆ ಸೇರಿದ್ದರೂ ನಾನು ಎಂದೂ ಭಾರತೀಯರ ವಿರುದ್ದ ಕೈ ಎತ್ತಿರಲಿಲ್ಲ.... ಇದು ಕೆಲವು ಆಂಗ್ಲ ಅಧಿಕಾರಿಗಳ ಕಣ್ಣೂ ಕೆಂಪಗಾಗಿಸಿತ್ತು.... ಎಷ್ಟೋ ಸಾರಿ ನೌಕರಿ ಬಿಟ್ಟು ಓಡಿ ಹೋಗೊಣ ಎನಿಸಿದ್ದರೂ , ಸೂಕ್ತ ಸಂದರ್ಭಕ್ಕಾಗಿ ಕಾಯುತ್ತಿದ್ದೆ....

ಇದೇ ಸಮಯದಲ್ಲಿ ಗಾಂಧೀಜಿಯವರ ಗ್ರಾಮ ಯಾತ್ರೆ ನಮ್ಮ ಊರಿಗೆ ಬರುತ್ತಿದೆ ಎಂದು ನಮ್ಮ ಪೋಲಿಸ್ ವಲಯದಲ್ಲಿ ಮಾತು ನಡೆಯುತ್ತಿತ್ತು..... ಅದರ ಬಂದೋಬಸ್ತಿಗಾಗಿ ಹೆಚ್ಚಿನ ಪೋಲಿಸ್ ಬಲವನ್ನು ಬೇರೆ ಊರಿನಿಂದ ಕೂಡ ಕರೆಸಲಾಗಿತ್ತು.... ಬಾಪೂಜಿಯವರ ಬಂಧನದ ಮಾತೂ ನಡೆಯುತ್ತಿತ್ತು..... ಆದರೆ ಅವರ ಬಂಧಿಸಿದರೆ ಮುಂದೆ ನಡೆಯುವ ಸಂಭವನೀಯ ಗಲಭೆಗಳ ಬಗ್ಗೆ ಆಂಗ್ಲ ಅಧಿಕಾರಿಗಳ ಭಯ ಇದ್ದೇ ಇತ್ತು....... ಹೇಗಾದರೂ ಮಾಡಿ ಈ ಗಾಂಧಿ ಎಂಬ ಮಂತ್ರದಂಡವನ್ನು ಭಾರತೀಯರಿಂದ ದೂರವಿರಿಸಬೇಕೆಂಬುದು ಫರಂಗಿಗಳ ವಿಚಾರವಾಗಿತ್ತು...... ಈ ವಿಷಯವೆಲ್ಲಾ ಭಾರತೀಯ ಪೊಲಿಸರಿಂದ ನಮಗೆಲ್ಲಾ ತಿಳಿಯುತ್ತಿತ್ತು..... ಈ ಸಾರಿ ಬರುವ ಗಾಂಧೀಜಿಯವರ ನಮ್ಮೂರ ಭೇಟಿ ಆಂಗ್ಲರನ್ನು ಬೆಚ್ಚಿ ಬೀಳಿಸಿದ್ದಷ್ಟೇ ಅಲ್ಲದೇ ನಮ್ಮೂರ ತೀವ್ರವಾದಿಗಳನ್ನೂ ಇಕ್ಕಟ್ಟಿಗೆ ಸಿಲುಕಿಸಿತ್ತು... ನಮ್ಮೂರ ತೀವ್ರವಾದಿಗಳ ಗುಂಪಿಗೆ ಬಾಪೂಜಿಯ ಅಹಿಂಸಾ ಚಳುವಳಿ ರುಚಿಸಿರಲಿಲ್ಲ..... ಆಂಗ್ಲರ ಹಿಂಸೆಗೆ ಹಿಂಸೆಯಿಂದಲೇ ಉತ್ತರ ಕೊಡಬೇಕು..... ಅವರನ್ನು ಭಾರತದಿಂದಲೇ ಓಡಿಸಬೇಕೆಂಬುದು ಅವರ ವಾದವಾಗಿತ್ತು..... ಇದಕ್ಕೆ ಭೋಸರು, ಸಾವರ್ಕರ ರ ಸಹಾಯ, ಮಾರ್ಗದರ್ಶನವೂ ದೊರೆತಿತ್ತು.... ಇಂಥಾ ಸಮಯದಲ್ಲಿ ಬಾಪೂಜಿಯ ಭೇಟಿ ತೀವ್ರವಾದಿಗಳ ಎಲ್ಲಾ ತಂತ್ರಗಳನ್ನು ಬುಡಮೇಲು ಮಾಡಿತ್ತು....... ಅವರು ಪ್ರತಿತಂತ್ರ ಹೂಡುತ್ತಿದ್ದರು..... ಇದರ ಸುಳಿವು ಆಂಗ್ಲ ಅಧಿಕಾರಿಗಳಿಗೂ ಸಿಕ್ಕಿತ್ತು...... ಇದರ ಲಾಭ ಪಡೆಯಲು ಫರಂಗಿಗಳು ಉಪಾಯ ಹೂಡಿದ್ದರು......

ಆ ದಿನ ನನಗಿನ್ನೂ ಸರಿಯಾಗಿ ನೆನಪಿದೆ....ನಾನು ಎಂದಿನಂತೆ ಕೆಲಸದ ಮೇಲೆ ಮೇಲಧಿಕಾರಿಗಳ ಕೊಠಡಿ ಕಡೆ ಹೊರಟಿದ್ದೆ...... ಅಂದು ಮೈಸೂರು ಪ್ರಾಂತ್ಯದ ಮುಖ್ಯ ಅಧಿಕಾರಿ ಬಂದಿದ್ದ ಸುದ್ದಿ ನನಗೂ ತಿಳಿದಿತ್ತು...... ಮೇಲಧಿಕಾರಿಯ ಕೊಠಡಿಯ ಬಾಗಿಲು ಸ್ವಲ್ಪವೇ ತೆರೆದಿತ್ತು..... ನಾನು ಒಳಗೆ ಹೋಗಲು ಬಾಗಿಲು ದೂಡುವವನಿದ್ದೆ..... ಒಳಗಿನಿಂದ " ಗಾಂಧೀಜಿ" ಎನ್ನುವ ಹೆಸರು ಕೇಳಿ ಬಂದ್ದಿದ್ದರಿಂದ ಅಲ್ಲೇ ನಿಂತೆ...... ಒಳಗಿನಿಂದ ನಮ್ಮ ಮುಖ್ಯ ಅಧಿಕಾರಿಯ ಮಾತು ಕೇಳಿ ಬರುತ್ತಿತ್ತು.... " ಈ ಸಾರಿ ಭಾರತೀಯ ಕುನ್ನಿಗಳಿಗೆ ಸರಿಯಾದ ಪಾಠ ಕಲಿಸಬೇಕು..... ಅವರ ಪ್ರಮುಖ ಅಸ್ತ್ರವಾದ ಗಾಂಧಿಯನ್ನು ಈ ಸಾರಿ ಮುಗಿಸಿಬಿಡಬೇಕು....." " ಸರ್, ಹಾಗೆ ಮಾಡಿದರೆ, ಜನರು ದಂಗೆ ಏಳುತ್ತಾರೆ.....ನಮ್ಮ ಈ ಹೊಡೆತ ಅವರಿಗೆ ನಮ್ಮ ವಿರುದ್ದ ಇನ್ನೂ ರೊಚ್ಚಿಗೇಳಿಸಬಹುದು... ಅವರ ಕಿಚ್ಚು ಇನ್ನೂ ಹೆಚ್ಚಿ ನಮ್ಮ ಆಳ್ವಿಕೆಗೆ ಅಂತ್ಯ ಹಾಡಬಹುದು ಸರ್..." ಎಂದವರು ನನ್ನ ಮೇಲಧಿಕಾರಿ ಆಗಿದ್ದರು..... ನನಗೆ ಎನೋ ಕೆಡುಕು ಸಂಭವಿಸಲಿದೆ ಎನಿಸಲು ಶುರು ಆಗಿತ್ತು...... ನಾನು ಅಲ್ಲೇ ನಿಂತು ಉಳಿದ ಮಾತೂ ಕೇಳಿಸಿಕೊಳ್ಳಲು ತಯಾರಾದೆ...... ಮಾತು ಮುಂದುವರಿದಿತ್ತು...." ಹಾಗೇನೂ ಆಗಲ್ಲ.... ಅವರ ಹತ್ಯೆಯನ್ನು ತೀವ್ರವಾದಿಗಳ ತಲೆಗೆ ಕಟ್ಟೋಣ.. ಅವರ ಮತ್ತು ಗಾಂಧಿ ನಡುವಿನ ಭಿನ್ನಾಭಿಪ್ರಾಯವನ್ನು ನಾವು ಈ ರೀತಿ ಉಪಯೊಗಿಸಿಕೊಳ್ಳೋಣ.... ಯಾರಿಗೂ ಸಮಸ್ಯೆ ಇರೋದಿಲ್ಲ.... ಆಗ ಭಾರತೀಯರು ತಮ್ಮ ತಮ್ಮಲ್ಲೇ ಹೊಡೆದಾಡಿ ಸಾಯುತ್ತಾರೆ...... ನಾವು ಇನ್ನೂ ನೂರು ವರುಷ ಇಲ್ಲೇ ಆಳ್ವಿಕೆ ಮಾಡಬಹುದು... ಇದೇ ನಮ್ಮ ಇಂಗ್ಲಂಡಿನ ಆದೇಶವೂ ಆಗಿದೆ" ಮುಖ್ಹ್ಯ ಅಧಿಕಾರಿ ಮಾತನಾಡುತ್ತಲೇ ಇದ್ದ......... ನನ್ನ ಜೀವ ಝಲ್ ಎಂದಿತು...... ಇದೇನಾದರು ನಡೆದರೆ ಭಾರತ ಎಂದಿಗೂ ಸ್ವತಂತ್ರ ದೇಶವಾಗೋದೇ ಇಲ್ಲ.....  ಇಲ್ಲ.... ಇವರ ಈ ಉದ್ದೇಶ ಈಡೇರಲು ಬಿಡಬಾರದು.... ಬಾಪೂಜಿ ಇಲ್ಲದ ದೇಶ, ಚಳುವಳಿ ಸಾದ್ಯವೇ ಇಲ್ಲ.... ನನ್ನ ದೇಶಭಕ್ತ ಮನಸ್ಸು ಜಾಗ್ರತವಾಗಿತ್ತು.....

ನಿಧಾನವಾಗಿ ಒಳ ನಡೆದೆ........ ಅಧಿಕಾರಿಯ ಮೇಜಿನ ಮೇಲಿನ
ಬಂದೂಕು ನನ್ನ ಕೈ ಸೇರಿತ್ತು..... ಹಿಂದು ಮುಂದು ಯೊಚನೆ ಮಾಡದೇ ಸೀದಾ ಒಳಗೆ ಹೋಗಿ, ಮುಖ್ಯ ಅಧಿಕಾರಿ , ಮೇಲಧಿಕಾರಿ ಇಬ್ಬರನ್ನೂ ಗುಂಡಿಕ್ಕಿ ಕೊಂದು ಹಾಕಿದೆ..... ಢಂ...... ಢಮ್....... ಢಂ...... ಬಂದೂಕಿನಲ್ಲಿದ್ದ ಎಲ್ಲಾ ಗುಂಡುಗಳನ್ನೂ ಅವರ ದೇಹಕ್ಕೆ ಹೊಡೆದೆ....... ಅಷ್ಟರಲ್ಲಿ ಬಂದ ನನ್ನ ಪೋಲಿಸ್ ಸಹೋದ್ಯೋಗಿಗಳು ನನ್ನ ಸೆರೆ ಹಿಡಿದರು........ ಅವರಿಗೆ ನಾನು ಎನೂ ಹೇಳುವ ಹಾಗಿರಲಿಲ್ಲ...... ಕೆಳಕ್ಕೆ ಬಿದ್ದಿದ್ದ ನನ್ನ ಮುಖ್ಯ  ಅಧಿಕಾರಿ ಇಲ್ಲೂ ಆಟ ಆಡಿದ್ದ.... ನನ್ನ ಸೆರೆ ಹಿಡಿದಿದ್ದ ಪೋಲಿಸರಿಗೆ " ಇವನನ್ನು ಬಿಡಬೇಡಿ, ಇವನು ಗಾಂಧೀಜಿಯವರನ್ನು ಕೊಲ್ಲುವ ಯೋಜನೆ ಹಾಕಿದ್ದಾನೆ" ಎನ್ನುತ್ತಲೇ ಸತ್ತು ಹೋದ......ಅವನ ಮಾತನ್ನು ಎಲ್ಲರೂ ನಂಬಿದರು..... ನನ್ನ ಮಾತನ್ನು ಯಾರೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.... ನನ್ನ ಉದ್ದೇಶ ಬಾಫೂಜಿಯವರನ್ನು ಉಳಿಸುವುದಾಗಿತ್ತು...... ಆ ಉದ್ದೇಶದಲ್ಲಿ ನಾನು ಯಶಸ್ವಿಯಾಗಿದ್ದೆ......

ಬಾಪೂಜಿಯನ್ನು ಕೊಲ್ಲುವ ಯೋಚನೆ ಮಾಡಿದ್ದ ಎನ್ನುವ ಕಾರಣದಿಂದ ನನ್ನನ್ನು ಯಾರೂ ಹತ್ತಿರ ಸೇರಿಸಲಿಲ್ಲ..... ನನ್ನ ಪರವಾಗಿ ಯಾರೂ ವಕಾಲತ್ತು ವಹಿಸಲಿಲ್ಲ..... ನಾನು ಜೈಲಿನಲ್ಲೆ ಕೊಳೆಯುತ್ತ ಹೋದೆ..... ಕೊನೆಗೂ ಬಾಪೂಜಿಯ ಪ್ರಯತ್ನದ ಫಲವಾಗಿ ಭಾರತಕ್ಕೆ ಸ್ವಾತಂತ್ಯ ದೊರೆಯಿತು..... ನಾನು ಜೈಲಿನಲ್ಲೇ ಕುಳಿತು ಸಿಹಿ ತಿಂದೆ...... ಈಗಲೂ ನನಗೆ ಸಿಹಿ ತಿಂಡಿ ತಂದು ಕೊಡುತ್ತಾರೆ..... ನಾನೂ ಎಲ್ಲರಷ್ಟೇ ಖುಶಿ ಪಡುತ್ತೇನೆ..... ನನಗೇ ಈಗಲೂ ತಿಳಿದಿಲ್ಲ .... ನಾನು ದೇಶಪ್ರೇಮಿಯೋ...... ದೇಶದ್ರೋಹಿಯೋ........

79 comments:

  1. May be ನಮಗೆ ಯಾವುದನ್ನು ನಂಬಬೇಕು ಅನ್ನಿಸುತ್ತೋ ಅದನ್ನೇ ನಬುತ್ತೇವೆ...!

    ReplyDelete
  2. ದಿನಕರ್ ಹ್ಯಾಟ್ಸ ಆಫ್...ಅತಿ ಸುಂದರ..ಇದು ಸತ್ಯ ಘಟನೆಯ ಕಥನವೇ..? ಅಲ್ಲದಿದ್ದರೂ ಫಿರಂಗಿಗಳು ಕುಕೃತ್ಯ.ಮತ್ತು ನಮ್ಮಲ್ಲೇ ಒಡಕು ಮೂಡಿಸಿ ಆಳಿದ್ದರಿಂದಲೇ ಬೇರು ಬಿಟ್ಟಿದ್ದು...ಚನ್ನಾಗಿ ಹೆಣೆದಿದ್ದೀರಿ ಕಥೆಯನ್ನ ಮತ್ತು ಪ್ರಸ್ತಾಪಿಸುವ ಧಾಟಿಯನ್ನ...ಸ್ವಾತಂತ್ರಯೋತ್ಸದ ಒಂದು ದಿನ ಮೊದಲು...ಈ ಲೇಖನ ಬಹು ಸೂಕ್ತ

    ReplyDelete
  3. ತುಂಬಾ ಸುಂದರವಾಗಿ ಹೆಣೆದಿದ್ದಿರಾ...ಕಥೆ.
    ಮನ ಕಲಕಿತು...
    ನಿಜ ಘಟನೆಯ ಆಧಾರವೇ?

    ReplyDelete
  4. ಅಮಿತ್,
    ಮೊದಲ ಪ್ರತಿಕ್ರಿಯೆಗೆ ಧನ್ಯವಾದ....

    ReplyDelete
  5. ಆಜಾದ್ ಸರ್,
    ತುಂಬಾ ತುಂಬಾ ಧನ್ಯವಾದ...... ನಿಮ್ಮ ಪ್ರೋತ್ಸ್ಹಾಹ ನನಗೆ ಬರೆಯಲು ಹುಮ್ಮಸ್ಸು.... ಫಿರಂಗಿಗಳಿಗೆ ಬೇರುಉರಲು ಬಿಟ್ಟಿದ್ದು ನಾವೇ ಅಲ್ಲವೇ..... ಇವತ್ತು ಹಾಗೆ ಇದೆ... ಏನೂ ಬದಲಾಗಿಲ್ಲ..... ಅದರ ಬಗ್ಗೆ ಬರೆಯೋಣ ಎಣಿಸಿಕೊಂಡೆ.... ಆದ್ರೆ ಏನು ಬರೆದರೂ ಅಷ್ಟೇ ಎನಿಸಿ ಸುಮ್ಮನಾದೆ..... ಸ್ವಾತಂತ್ಯ ಹೋರಾಟದಲ್ಲಿ ಈ ರೀತಿ ದೇಶ ಸೇವೆ ಮಾಡಿದವರೂ ಇರಬಹುದು ಎಣಿಸಿ ಈ ಕಥೆ ಬರೆದೆ.... ಇದು ಪೂರಾ ನನ್ನ ಕಲ್ಪನೆ..... ನಿಮ್ಮ ಮೆಚ್ಚುಗೆಗೆ ಧನ್ಯವಾದ ಸರ್......

    ReplyDelete
  6. ಹರೀಶ್,
    ಸ್ವಾಗತ ನನ್ನ ಬ್ಲಾಗ್ ಗೆ..... ಮೆಚ್ಚಿ ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದ....... ಹೀಗೆ ಬರುತ್ತಾ ಇರಿ.....

    ReplyDelete
  7. ಸೀತಾರಾಂ ಸರ್...
    ಇದು ನನ್ನ ಕಲ್ಪನೆಯ ಕಥೆ..... ಆಜಾದಿ ದಿನದ ಸಲುವಾಗಿ ಏನಾದರು ಬರೆಯಬೇಕು ಎಣಿಸಿಕೊಂಡೆ..... ಕವನ ಬರೆದು '' ಮರಳ ಮಲ್ಲಿಗೆ'' ಗೆ ಕಳಿಸಿದೆ......ಬ್ಲಾಗ್ ಗೆ ಬೇರೆ ಬರೆಯೋಣ ಎಣಿಸಿ ಕುಳಿತೆ..... ಕಥೆಗೆ ಒಂದು ಎಳೆ ಹೊಳೆಯಿತು.... ಅದನ್ನೇ ಬರೆದೆ.....ಧನ್ಯವಾದ ನಿಮ್ಮ ಮೆಚ್ಚುಗೆಗೆ ಮತ್ತು ಪ್ರೋತ್ಸಾಹಕ್ಕೆ....

    ReplyDelete
  8. ನೈಜವೆನ್ನಿಸುವ ಕಥೆ ದಿನಕರ್.. ಯಾರಾದ್ರೂ movie makers ಸಿಕ್ಕಿದ್ರೆ ಕೊಟ್ಟುಬಿಡಿ!!

    ReplyDelete
  9. ಮೊದಲು ನೋಡಿದಾಗ ಇಷ್ಟುದ್ದದ ಬ್ಲಾಗ್ ಎನಿಸಿದರೂ ಕಥೆಯ ನಿರೂಪಣಾ ಶೈಲಿ ಓದಿಸಿಕೊಂಡು ಹೋಯಿತು... ಚೆಂದದ ಕಥೆ.. :)

    ReplyDelete
  10. ಸುಮನ ಮೇಡಂ...
    ತಂಬಾ ದಿನದ ನಂತರ ನನ್ನ ಬ್ಲಾಗ್ ಗೆ ಬರ್ತಾ ಇದೀರಾ ನೀವು...... ಮೆಚ್ಚುಗೆಯ ಮಾತುಗಳಿಗೆ ತುಂಬಾ ತುಂಬಾ ಧನ್ಯವಾದ ಮೇಡಂ..... ಹೀಗೆ ಬರುತ್ತಾ ಇರಿ..... ತುಂಬಾ ಖುಷಿ ಆಯ್ತು ನಿಮ್ಮ ಕಾಮೆಂಟ್ ನೋಡಿ..... filmmaker ನನ್ನಬ್ಲಾಗ್ ಓದಿದರೆ ತಾನೇ ನನ್ನ ಹತ್ತಿರ ಬರೋಕೆ ಹ್ಹ ಹಹಹಾ........... ಧನ್ಯವಾದ ನಿಮ್ಮ ಮೆಚ್ಚುಗೆಗೆ....

    ReplyDelete
  11. ಇಂದುಶ್ರೀ ಮೇಡಂ....
    ಬೆಳ್ಳಂ ಬೆಳಿಗ್ಗೆ ಈ ಕಥೆಯ ಎಳೆ ಹೊಳೆಯಿತು..... ಸಂಜೆಯೇ ಬರೆದುಬಿಟ್ಟೆ...... ತುಂಬಾ ಧನ್ಯವಾದ ನಿಮ್ಮ ಮೆಚ್ಚುಗೆಗೆ....

    ReplyDelete
  12. ವಾಸ್ತವಿಕತೆಗೆ ತುಂಬಾ ಹತ್ತಿರವಾಗಿರುವಂತಿದೆ ಕಥೆ... ಉತ್ತಮವಾಗಿದೆ.. ನಿಮ್ಮ ಕಲ್ಪನೆ ತುಂಬಾ ನೈಜವಾಗಿದ್ದು... ಬಲು ಇಷ್ಟವಾಯಿತು. ಹೀಗೂ ಆಗಿ ಜೈಲಿನಲ್ಲಿದ್ದವರು ಇರಲೂಬಹುದು... ಹಿಂದೆ ಇದ್ದಿರಲೂ ಬಹುದು!!!

    ReplyDelete
  13. ಸೂಪರ್..
    ಅಭಿನಂದನೆಗಳು..

    ReplyDelete
  14. ದಿನಕರ ಸರ್, ಕಥೆ ಬಹಳ ಸಮಗ್ರವಾಗಿ ಚೆನ್ನಾಗಿದೆ, ಆದ್ರೆ ನನಗೆ ಒಂದೇ ಡೌಟು ಬಂತು-ಅಂದಿನ ದಿನ ರಿವಾಲ್ವರ್ ಎಂಬ ಅಸ್ತ್ರವಿತ್ತೇ ? ಅದರ ಬದಲಿಗೆ ಬಂದೂಕು ಎನ್ನುವ ಶಬ್ಧ ಬಳಸಿದರೆ ಅಲ್ಲಿರುವ ಎಲ್ಲರನ್ನೂ ಮುಗಿಸಲು ಸಾಧ್ಯವಾಗೋದಿಲ್ಲ, ಬೇಜಾರಾಗಬೇಡಿ,ಕೇವಲ ಏನನ್ನೋ ಹುಡುಕಬೇಕೆಂದು ಹೇಳುತ್ತಿಲ್ಲ, ಇದು ನಂಗೆ ಬಂದ ಸಂಶಯ ಅಷ್ಟೇ! otherwise story is neatly driven, so beautiful, thanks

    ReplyDelete
  15. ಖಂಡಿತ ಇಂತಹ ಘಟನೆಗಳು ನಡೆದಿರಬಹುದು.
    ಒಂದು ಅಧ್ಬುತ ಕಥೆ ಬರೆದಿದ್ದೀರ.
    "ಅಬ್ಬ ಸ್ವಾತಂತ್ರ್ಯ ಹೋರಾಟಗಾರ, ಸ್ವಾತಂತ್ರ್ಯ ದೇಶದಲ್ಲಿ ತನಗೆ ಸೇರಬೇಕಾದ ಹೋರಾಟಗಾರೆನೆಂಬ ಪ್ರಮಾಣ ಪತ್ರ ಪಡೆದುಕೊಳ್ಳಲು ಸುಮಾರು 35 ವರ್ಷ ಸರಕಾರಿ ಕಛೇರಿಗಳನ್ನ ಅಲೆದ ಧಾಖಲೆ ಭಾರತದಲ್ಲಿದೆ"
    ಇದನ್ನ ಈ ಸಂದರ್ಭದಲ್ಲಿ ಹೇಳುವುದು ಪ್ರಸ್ತುತ ಎನಿಸಿತು.
    "ಆಗಷ್ಟ 15ರ ಶುಭಾಷಯಗಳು"

    ReplyDelete
  16. ದಿನಕರ್ ಸರ್,

    ನೀವು ಬರೆದ ಈ ಕತೆ ನಿಜಕ್ಕೂ ಅದ್ಬುತವಾಗಿದೆ. ಕತೆಯಾದರೂ ನಡೆದಂತೆ ಬರೆದಿದ್ದೀರಿ...ಇದು ಈಗಿನ ಮಕ್ಕಳ ಪಠ್ಯ ಪುಸ್ತಕದ ಒಂದು ಪಾಠವಾಗುವ ಮಟ್ಟದಷ್ಟು ಉತ್ತಮವಾಗಿದೆಯೆಂದು ನನ್ನ ಭಾವನೆ.

    ಸ್ವಾತಂತ್ರ್ಯ ದಿನಕ್ಕೆ ಉತ್ತಮ ಬರಹ ಕೊಟ್ಟಿದ್ದಕ್ಕೆ ಧನ್ಯವಾದಗಳು.

    ReplyDelete
  17. olleya mattu binna shailiya baraha
    -kodasara

    ReplyDelete
  18. ಸ್ವಾತ೦ತ್ರ್ಯಾ ಮುನ್ನಾ ದಿನಕ್ಕೆ ಉತ್ತಮ ಕಥೆಯನ್ನು ಕೊಟ್ಟಿದ್ಡೀರಿ ದಿನಕರ್.
    ಧನ್ಯವಾದಗಳು

    ಅನ೦ತ್

    ReplyDelete
  19. ಇದು ನೈಜ ಘಟನೆ ಎಂದೇ ಅಂದುಕೊಂಡಿದ್ದೆ,ದಿನಕರ. commentsನಲ್ಲಿ ಓದುವಾಗ,
    ಇದು ಕತಯೆಂದು ತಿಳಿಯಿತು. ಸುಂದರವಾಗಿ, ಅಭಿಮಾನ ಉಕ್ಕಿಸುವಂತೆ ಕತೆ ಹೆಣೆದಿದ್ದೀರಿ. ಸ್ವಾತಂತ್ರ್ಯದಿನದ ಶುಭಾಶಯಗಳು.

    ReplyDelete
  20. ನೈಜ ಘಟನೆಯಂತಿದೆ. ತುಂಬ ಚೆನ್ನಾಗಿದೆ ಸರ್.

    ReplyDelete
  21. ತೇಜಸ್ವಿನಿ ಮೇಡಂ,
    ನಿಮ್ಮ ಅನಿಸಿಕೆ ಓದಿ ನನಗೆ ತುಂಬಾ ಖುಷಿಯಾಯ್ತು... ಈ ರೀತಿ ಕಥೆ, ಇದಕ್ಕಿಂತ ಭಿನ್ನ ಕಥೆಗಳೂ ನಡೆದಿರಬಹುದು.... ಎಷ್ಟೋ ದೇಶಭಕ್ತರು ಯಾವ ರೀತಿ ಮಣ್ಣಾಗಿದ್ದಾರೋ ದೇವರು ಬಲ್ಲ.....ಧನ್ಯವಾದ...

    ReplyDelete
  22. ಕತ್ತಲು ಮನೆ...
    ಧನ್ಯವಾದ ನಿಮ್ಮ ಮೆಚ್ಚುಗೆಗೆ...

    ReplyDelete
  23. ಭಟ್ ಸರ್..
    ನಿಮ್ಮ ಸಂಶಯ ಸರಿಯಾಗಿದೆ...ಆ ಸಮಯದಲ್ಲಿ ರಿವಾಲ್ವರ್ ಇರಲಿಲ್ಲ.... ತಪ್ಪು ಕಂಡುಹಿಡಿದು ನನ್ನನ್ನು ತಿದ್ದಿದ್ದಕ್ಕೆ ತುಂಬಾ ಥ್ಯಾಂಕ್ಸ್.... ತಿದ್ದಿ ಬರೆದಿದ್ದೇನೆ ಸರ್.... ಚೆನ್ನಾಗಿದ್ದಾಗ ಬೆನ್ನು ತಟ್ಟಿ, ತಪ್ಪಿದ್ದಾಗ ಹೇಳಿದಾಗಲೇ ಅಲ್ಲವೇ ನಾವು ತಿದ್ದಿಕೊಳ್ಳೋದು.... ಮುಂದೆ ತಪ್ಪು ಮಾಡದೆ ಇರೋದು..... ಮತ್ತೊಮ್ಮೆ ಥ್ಯಾಂಕ್ಸ್ ಸರ್....

    ReplyDelete
  24. ನಾಗರಾಜ್ ಸರ್,
    ನೀವು ಹೇಳಿದ್ದು ಸರಿ ... ಎಷ್ಟೋ ಜನ ಸ್ವಾತಂತ್ರ ಹೋರಾಟಗಾರರು ತಮ್ಮತನ ಮರೆತು ಎಲ್ಲೋ ಇದ್ದಿರಬಹುದು..... ಅಥವಾ ಈಗಿನ ಪರಿಸ್ತಿತಿ ಕಂಡು ನಾನು ಸ್ವಾತಂತ್ರ್ಯ ತಂದಿದ್ದೆ ತಪ್ಪಾಯಿತು ಎನಿಸಿರಬೇಕು.... ತುಂಬಾ ಧನ್ಯವಾದ ಸರ್.... ನಿಮ್ಮ ಮೆಚ್ಚುಗೆಗೆ....

    ReplyDelete
  25. ಶಿವೂ ಸರ್,
    ನಿಮ್ಮ ಕಾಮೆಂಟ್ ನನ್ನ ಬಗೆಗಿನ ವಿಶ್ವಾಸ ಇಮ್ಮಡಿಗೊಳಿಸಿದೆ..... ಕಥೆ ಚೆನ್ನಾಗಿದೆ ಎಂದು ತಿಳಿಸಲು ಫೋನ್ ಮಾಡಿದ್ದು ಇನ್ನೂ ಖುಷಿ ಕೊಟ್ಟಿದೆ...... ತುಂಬಾ ತುಂಬಾ ಧನ್ಯವಾದ.... ಕಥೆ '' ಪಠ್ಯ ಪುಸ್ತಕದ ಒಂದು ಪಾಠವಾಗುವ ಮಟ್ಟದಷ್ಟು ಉತ್ತಮವಾಗಿದೆ'' ಎಂದಿದ್ದು ನಿಮ್ಮ ದೊಡ್ಡತನ ಸರ್...... thank you ಸರ್...

    ReplyDelete
  26. ವಿನಾಯಕ್ ಸರ್..
    ಸ್ವಾಗತ ನನ್ನ ಬ್ಲಾಗ್ ಗೆ..... ಕಥೆ ಮೆಚ್ಚಿ ಕಾಮೆಂಟ್ ಹಾಕಿದ್ದಕ್ಕೆ.....ಧನ್ಯವಾದ....ಹೀಗೆ ಬರುತ್ತಾ ಇರಿ...

    ReplyDelete
  27. ಅನಂತರಾಜ್ ಸರ್..
    ಧನ್ಯವಾದ ಸರ್.... ನಿಮ್ಮ ಮೆಚ್ಚುಗೆಗೆ,,,,, ನಿಮ್ಮ ಪ್ರೋತ್ಸ್ಹಾಹ ಹೀಗೆ ಇರಲಿ.....

    ReplyDelete
  28. ಸುನಾಥ್ ಸರ್,
    ನಿಮ್ಮ ಪ್ರೀತಿಯ ಮಾತುಗಳಿಗೆ ನಾನು ಆಭಾರಿ.... ಈ ಕಥೆ ನನ್ನ ಕಲ್ಪನೆ..... ನಿಮ್ಮ ಪ್ರೋತ್ಸ್ಹಾಹ ಹೀಗೆ ಇರಲಿ.....ಧನ್ಯವಾದ....

    ReplyDelete
  29. ಸುಬ್ರಮಣ್ಯ ಸರ್...
    ತುಂಬಾ ತುಂಬಾ ಧನ್ಯವಾದ..... ಮೆಚ್ಚುಗೆಗೆ,,,,,

    ReplyDelete
  30. namaskara sir

    today i read ur story today. your story to mark indepandance day is superb. the structure is simple and convincing. keep writing :-)

    our kasthuri channel have started new programs we had lot of shoots. even my mobile doesn't support kannada fonts sir.

    i will come back and read ur all poems and comment

    koncha adjust malpe!

    ReplyDelete
  31. ಈ ಸ೦ದರ್ಭಕ್ಕೆ ಸೂಕ್ತವಾದ ಕಥೆಯನ್ನು ಬರೆದಿದ್ದೀರಿ. ಕಥೆ ನೈಜವಾಗಿದ್ದು ಸರಾಗವಾಗಿ ಓದಿಸಿಕೊ೦ಡು ಹೋಗುವ೦ತಿದೆ. ಉತ್ತಮ ಕಥೆ ನೀಡಿದ್ದಕ್ಕಾಗಿ ಧನ್ಯವಾದಗಳು.

    ReplyDelete
  32. Dinakar sir,

    estu chennagide kate,odutta odutta,yaarirabahudu endu yochisuttale idde.

    niroopane tumba ishtavaayitu.

    ReplyDelete
  33. kathe tumba chennagide sir..nimma nirupane super :)

    ReplyDelete
  34. ಬದ್ರಿನಾಥ್ ಸರ್,
    ಸ್ವಾಗತ ನನ್ನ ಬ್ಲಾಗ್ ಗೆ.... ನಿಮ್ಮ ಬಿಡುವಿಲ್ಲದ ಕೆಲಸದಲ್ಲೂ ನನ್ನ ಬ್ಲಾಗ್ ಓದಿ ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದ ಸರ್...... ಹೀಗೆ ಬರುತ್ತಾ ಇರಿ ಸರ್....

    ReplyDelete
  35. ಪ್ರಭಾಮಣಿ ಮೇಡಂ..
    ಧನ್ಯವಾದ ನನ್ನ ಕಥೆ ಮೆಚ್ಚಿ ಕಾಮೆಂಟ್ ಹಾಕಿದ್ದಕ್ಕೆ... ಹೀಗೆ ಬರುತ್ತಾ ಇರಿ....

    ReplyDelete
  36. ಶ್ವೇತ ಮೇಡಂ,
    ತುಂಬಾ ತುಂಬಾ ಧನ್ಯವಾದ... ಮೆಚ್ಚಿ ಕಾಮೆಂಟ್ ಮಾಡಿದ್ದಕ್ಕೆ..... ಕಥೆಯ ಎಳೆ ಹೊಳೆದಾಗ ನನಗೆ ಇಷ್ಟ ಆಯ್ತು... ಅದನ್ನ ನನಗನಿದ , ನನಗೆ ಗೊತ್ತಿದ್ದ ಮಟ್ಟಿಗೆ ಬರೆದೆ..... ನಿಮಗೆಲ್ಲಾ ಇಷ್ಟವಾದರೆ ತುಂಬಾ ಖುಷಿ ನನಗೆ....... ಧನ್ಯವಾದ.....

    ReplyDelete
  37. ಸ್ನೋ ವೈಟ್...
    ಇಷ್ಟಪಟ್ಟು ಕಾಮೆಂಟ್ ಹಾಕಿದ್ದಕ್ಕೆ ತುಂಬಾ ಧನ್ಯವಾದ.....

    ReplyDelete
  38. ದಿನಕರ್ ಅವರೇ....

    ತು೦ಬಾ ಚೆನ್ನಾಗಿದೆ ಕಥೆ... ಒ೦ದು ಸಲ ನಿಜ ಕಥೆಯೋ ಏನೋ ಅನಿಸಿಬಿಡ್ತು :)

    ReplyDelete
  39. ಆಹಾ.. ಸೂಪರ್.. ಎಂಥಾ ಆಲೋಚನೆ.. ಉತ್ತಮವಾದ ಕಥೆ ನೀಡಿದ್ದಕ್ಕೆ (ಕಥೆ ಎಂದು ನಂಬಲಾಗುತ್ತಿಲ್ಲ) ಅಭಿನಂದನೆಗಳು... ನಿಮಗೆ ಹೀಗೆ ಭಯಂಕರ ಐಡಿಯಾ :-) ಬರೋದಕ್ಕೆ ಇರ್ಬೇಕು ತಲೆಯಲ್ಲಿ ಕೂದಲು ಕಮ್ಮಿಯಾಗಿರೋದು...

    ReplyDelete
  40. ದಿನಕರ ಅವರೇ,
    ಕಥೆ ತುಂಬಾ ಚೆನ್ನಾಗಿದೆ. ಗೋಡ್ಸೆ ಅವರು ನೆನಪಿಗೆ ಬಂದರು. ನಾನು ಗೋಡ್ಸೆ ಅವರನ್ನು ದ್ವೇಷಿಸೊಲ್ಲ. ನಾನೇಕೆ ಗಾಂಧಿಯನ್ನು ಕೊಂದೆ ಎಂಬ ಅವರ ಪುಸ್ತಕ ಓದಿದಾಗ ಒಂದು ರೀತಿಯ ಆತ್ಮೀಯತೆ ಬೆಳೆದು ಬಿಟ್ಟಿದೆ ಅವರೊಂದಿಗೆ.

    ReplyDelete
  41. ತುಂಬಾ ಚೆನ್ನಾಗಿ ಬರೆದಿದ್ದೀರ.. ನೈಜವೆಂದೆ ಭಾಸವಾಯಿತು..:)
    divide and rule ಈಗಲೂ ಚಾಲ್ತಿಯಲ್ಲಿದೆ ಅಲ್ವಾ..

    ReplyDelete
  42. ಸುಧೇಶ್,
    ತುಂಬಾ ಧನ್ಯವಾದ ನಿಮ್ಮ ಮೆಚ್ಚುಗೆಯ ಅನಿಸಿಕೆಗೆ..... ಇದು ಅಚಾನಕ್ ಆಗಿ ಹೊಳೆದ ಕಥೆಯ ಎಳೆ.... ಹಾಗೆ ಬರೆದುಬಿಟ್ಟೆ....

    ReplyDelete
  43. ರವಿಕಾಂತ್,
    ಹ್ಹ ಹ್ಹಾ.... ತಲೆಯಲ್ಲಿ ಕೂದಲು ಕಡಿಮೆಯಾದುದಕ್ಕೆ ಬೇರೆ ಕಾರಣ ಇದೆ..... ಹೀಗಿನ ಕಥೆ ಹೊಳೆಯಲು ಕೂದಲು ಉದುರತ್ತೆ ಅನ್ನೋದಾದರೆ ಪರವಾಗಿಲ್ಲ .... ಧನ್ಯವಾದ ನಿಮ್ಮ ಮೆಚ್ಚುಗೆಯ ಮಾತುಗಳಿಗೆ.... ಆಗಷ್ಟ್೨೨ ಕ್ಕೆ ಸಿಗೋಣ...

    ReplyDelete
  44. ಸಾಗರಿ ಮೇಡಂ,
    ನಾನಿನ್ನೂ ಆ ಪುಸ್ತಕ ಓದಿಲ್ಲ.... ಆ ಪುಸ್ತಕದ ಬಗ್ಗೆ ಬರೆಯಿರಿ ... ನಾವು ತಿಳಿದುಕೊಳ್ಳುತ್ತೇವೆ..... ನಾನೂ ನೆಹರು, ಗಾಂಧೀಜಿಯ ಎಲ್ಲಾ ಮಾತುಗಳನ್ನು ನಾನೂ ಒಪ್ಪೋಲ್ಲ.... ಧನ್ಯವಾದ ನಿಮ್ಮ ಅನಿಸಿಕೆಗಳಿಗೆ....

    ReplyDelete
  45. ಶ್ರವಣ ,
    ನೀವು ಹೇಳಿದ್ದು ಸತ್ಯ.... devide and rule ಮಾಡದೆ ಇದ್ದರೆ ಇವರ ಬೆಲೆ ಬೇಯಬೇಕಲ್ಲ.... ಧನ್ಯವಾದ ನಿಮ್ಮ ಮೆಚ್ಚುಗೆಗೆ....

    ReplyDelete
  46. kathe thumba chennagide sir, hands up,...

    ReplyDelete
  47. Comments oduvudakke munche, satya ghatane enisittu.
    Eegalu satya ghatane enisuttide.
    Ekendare kotyanthara janaru swathanthrya horatadalli bhagiyagiddaru, avaralli kelavu jana e thara jailinalli kaala kaledirabahudu.
    Adrushta illavendare, britisharu avaranna kondirabahudu.
    Neevu ene helidaru, nanage idu satya ghatane ende anisuttide.
    Thumba chennagi barediddira :)

    ReplyDelete
  48. ದಿನಕರ..

    ನಿಜ ಘಟನೆಯಂತೆ ಭಾಸವಾಯಿತು ಈ ಕಥೆ. !
    ಇಂಥಹ ಎಷ್ಟೋ ಘಟನೆಗಳು ಇತಿಹಾಸ ಗರ್ಭದಲಿ ಮುಚ್ಚಿ ಹಾಕಿದ್ದಾರೆ ನಮ್ಮ ಇತಿಹಾಸಕಾರರು !

    ಸ್ವಾತಂತ್ರ್ಯ ದಿನದ ಈ ಸಂದರ್ಭದಲ್ಲಿ ಹೋರಾಡಿದ ಮಹಾನ್ ವ್ಯಕ್ತಿಗಳಿಗೆ ನಮ್ಮದೂ ನಮನ !

    ಅಭಿನಂದನೆಗಳು.. ಚಂದದ ಕಥೆಗೆ ..

    ReplyDelete
  49. ದಿನಕರ್ ಸರ್

    ತುಂಬಾ ಸುಂದರವಾಗಿ ಬರೆದಿದ್ದೀರಿ

    ನಮಗೆ ದೇಶ ದ್ರೋಹಿಗಳು ಯಾರು ಎನ್ನುವುದೇ ತಿಳಿಯುತ್ತಿಲ್ಲ

    ಒಳ್ಳೆಯ ಕಥೆ

    ReplyDelete
  50. ಗಿರೀಶ್,
    ಮೊದಲಿಗೆ ಸ್ವಾಗತ ನನ್ನ ಬ್ಲಾಗ್ ಗೆ.... ನೀವು ಹೇಳಿದ್ದು ಸತ್ಯ.... ಎಷ್ಟೊಂದು ಸ್ವತಂತ್ರ ವೀರರ ಕಥೆ ಇತಿಹಾಸದ ಗರ್ಭದಲ್ಲಿ ಹುದುಗಿ ಹೋಗಿದೆಯೋ.....ಯಾರು ಬಲ್ಲರು..... ಧನ್ಯವಾದ ಕಥೆ ಮೆಚ್ಚಿ, ಅನಿಸಿಕೆ ಹಾಕಿದ್ದಕ್ಕೆ....

    ReplyDelete
  51. ಸಂತೋಷ್,
    ಥ್ಯಾಂಕ್ಸ್ ಪಾ.... ಓದಿ, ಕಾಮೆಂಟ್ ಮಾಡಿದ್ದಕ್ಕೆ....

    ReplyDelete
  52. ಪ್ರಕಾಶಣ್ಣ..
    ಹೌದು.... ಹೆಸರಿರದ.... ಮುಖ ತೋರದ ಎಷ್ಟೋ ವೀರರ ಪ್ರತಿಫಲ ನಮಗೆ ದೊರೆತಿದೆ..... ಸ್ವತಂತ್ರ ಹೋರಾಟದ ಸಮಯದಲ್ಲಿ ಮೋಜು ಮಾಡುತ್ತಿದವರ ಹೆಸರಿಗೆ ನಾವು ನಮನ ಮಾಡುತ್ತಿರಲು ಬಹುದು ಆಲ್ವಾ...
    ನಿಮ್ಮ ಮೆಚ್ಚುಗೆಯ ಮಾತಿಗೆ ನನ್ನ ನಮನ..... ತುಂಬಾ ಧನ್ಯವಾದ .....

    ReplyDelete
  53. ಗುರು ಸರ್...
    ಎಷ್ಟೋ ದೇಶಪ್ರೇಮಿಗಳನ್ನು ದೇಶದ್ರೋಹಿಗಳಂತೆ ಬಿಂಬಿಸಿ, ದೇಶಪ್ರೇಮಿಗಳನ್ನು ದೇಶದ್ರೋಹಿಗಳಾಗಿ ಮಾಡಿರಬಹುದು ಆಲ್ವಾ ಸರ್..... ನಮ್ಮಲ್ಲಿ ಇತಿಹಾಸ ತಿರುಚುವ ಕೆಲಸ ಆಗಾಗ ಆಗುತ್ತಲೇ ಇರುತ್ತವೆ.... ಧನ್ಯವಾದ ನಿಮ್ಮ ಮೆಚ್ಚುಗೆ ಭರಿತ ಕಾಮೆಂಟ್ ಗೆ.....

    ReplyDelete
  54. ದಿನಕರ್ ಜೀ, ಎ೦ಚ ಉಲ್ಲರ್ ಮಾರಾಯ್ರೇ ?
    ನಿಮ್ಮ ಕಥೆಯನ್ನು ಮೊನ್ನೆಯೇ ಓದಿದ್ದೆ, ಆದರೆ ಕಾಮೆ೦ಟು ಹಾಕಲು ಸಮಯ ಸಿಕ್ಕಿರಲಿಲ್ಲ. ತು೦ಬ ಚೆನ್ನಾಗಿ ಕಥೆ ಹೆಣೆದಿದ್ದೀರಿ. ನಿಮ್ಮ ಕಥನಶೈಲಿ ಇಷ್ಟವಾಯಿತು. ಭಾನುವಾರ ಭೆಟ್ಟಿಯಾಗೋಣ

    ReplyDelete
  55. ಅಬ್ಬ, ಸತ್ಯಘಟನೆಯೋ, ಕಲ್ಪನೆಯೋ ಗೊತ್ತಾಗದಷ್ಟು ಸೊಗಸಾದ ನಿರೂಪಣೆ. ಮನಕಲಕಿತು

    ReplyDelete
  56. ಅಬ್ಬಾ..!!! ಎಂತಾ ಕಥೆ ಛೇ ನಾನು ಇಷ್ಟು ದಿನ ಓದಿರಲೇ ಇಲ್ಲ.... ಇದು ನನ್ನ ತಪ್ಪಲ್ಲ ನನಗೆ ಅಪ್ ಡೇಟ್ ಬರುತ್ತಿಲ್ಲ ಸರ್.... ಕಾರಣ ತಿಳಿದಿಲ್ಲ.........
    ಒಳ್ಳೆಯ ಕಥೆಯನ್ನೇ ನಮಗೆ ನೀಡಿದ್ದೀರಿ.... ನಿಜಕ್ಕೂ ಎದೆ ಝಲ್ ಎನಿಸುತ್ತೆ..... ಇಂತಹ ಕಥೆಗಳು ಅನೇಕ ಇವೆ ಆದರೆ ನಮಗೆ ಗೂತ್ತೇ ಇಲ್ಲ....... ಈ ಬ್ರೀಟಿಷರು ಎಷ್ಟೋ ಕೆಡುಕು ಮಾಡಿಹೋಗಿದ್ದಾರೆ.

    ತುಂಬಾ ಚೆನ್ನಾಗಿ ಚಿತ್ರಿಸಿದ್ದೀರಿ... ಥ್ಯಾಂಕ್ಸ್

    ReplyDelete
  57. ದಿನಕರ್,
    ಕಥೆ ನಿಮ್ಮ ಕಲ್ಪನೆಯಾದರೂ ನೈಜ ಘಟನೆಯಂತಿದೆ.
    ತುಂಬಾ ಚೆನ್ನಾಗಿದೆ.....

    ReplyDelete
  58. ಪರಾಂಜಪೆ ಸರ್...
    ನೀವು ಕಾಮೆಂಟ್ ಖುಷಿ ನೀಡಿತು..... ತುಂಬಾ ಅಪರೂಪಕ್ಕೆ ಕಾಮೆಂಟ್ ಹಾಕ್ತೀರಾ ನೀವು..... ತುಂಬಾ ಧನ್ಯವಾದ ಸರ್...... ಭಾನುವಾರ ಸಿಗೋಣ.....

    ReplyDelete
  59. ದೀಪಸ್ಮಿತಾ ಸರ್,
    ನಿಮಗೆ ಇಷ್ಟ ಆಗಿ ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದ ... ಹೀಗೆ ಬರುತ್ತಾ ಇರಿ....

    ReplyDelete
  60. ಮನಸು ಮೇಡಂ,
    ಹ್ಹ ಹ್ಹಾ.... ಅಂತು ಬಂದರಲ್ಲ..... ಕಥೆ ಬರೆದ ನಂತರ ನನಗು ಇಷ್ಟ ಆಗಿತ್ತು... ಹಾಗಾಗಿ ನಿಮ್ಮೆಲ್ಲರ ಅನಿಸಿಕೆ ಬೇಕಿತ್ತು... ಹಾಗಾಗಿ ನಿಮ್ಮಲ್ಲಿಗೆ ಬಂದು ಪ್ರಚಾರ ಮಾಡಿ ಅನಿಸಿಕೆ ಪಡೆದುಕೊಂಡೆ..... ಇಷ್ಟಪಟ್ಟು ಕಾಮೆಂಟ್ ಹಾಕಿದ್ದಕ್ಕೆ ಖುಷಿ ಆಯ್ತು..... ಧನ್ಯವಾದ ಮೇಡಂ...... ಹೌದು... ನೀವು ಹೇಳಿದ್ದು ಸತ್ಯ .... ಇಂಥಹ ಎಷ್ಟೋ ಘಟನೆಗಳ ಮೇಲೆ ಬೆಳಕು ಚೆಲ್ಲದೇ ಹೋಗಿರಬಹುದು.....

    ReplyDelete
  61. ಮಹೇಶ್ ಸರ್,
    thank ಯು... ಇಷ್ಟಪಟ್ಟು ಕಾಮೆಂಟ್ ಮಾಡಿದ್ದಕ್ಕೆ.... ಕಲ್ಪನೆಯ ಮೆದುಳಿಗೆ ಕೈ ಹಾಕಿ ಹೊರ ತೆಗೆದೇ..... ಹ್ಹ ಹ್ಹಾ.... ಸಿಗೋಣ ಸರ್....ಧನ್ಯವಾದ ಸರ್...

    ReplyDelete
  62. ಅಬ್ಬಾ...!!! ನಾನು ಮೊದಲ ಪ್ಯಾರಾ ಓದಿದ ಕೂಡಲೇ ಸತ್ಯಕಥೆ ಎಂದೇ ನಂಬಿದ್ದೆ., ತುಂಬಾ ಸುಂದರವಾದ ಕಲ್ಪನೆ, ತುಂಬಾ ಇಷ್ಟವಾಯಿತು.

    ReplyDelete
  63. Sir...

    nimma kathe tumba tumbaa ne ista aitu...neerupisida reeti tumbaa chennagittu...dhanyavaadagalu...

    ReplyDelete
  64. ಕ್ಷಣಕಾಲ ಮೂಕನಾದೆ! ಸೂಪರ್.

    ನನ್ನ ಬ್ಲಾಗ್ www.nallanalle.blogspot.com ಗೆ ಭೇಟಿ ನೀಡಿ.

    ReplyDelete
  65. ಗುರುಪ್ರಸಾದ್ ಸರ್,
    ಸ್ವಾಗತ ನನ್ನ ಬ್ಲಾಗ್ ಗೆ..... ಧನ್ಯವಾದ ಭೇಟಿ ಕೊಟ್ಟು, ಇಷ್ಟ ಪಟ್ಟು ಕಾಮೆಂಟ್ ಹಾಕಿದ್ದಕ್ಕೆ..... ಹೀಗೆ ಬರುತ್ತಾ ಇರಿ ಸರ್....

    ReplyDelete
  66. ಅಶೋಕ್ ಸರ್...
    ತುಂಬಾ ತುಂಬಾ ಧನ್ಯವಾದ.... ಮೆಚ್ಚಿ ಕಾಮೆಂಟ್ ಮಾಡಿದ್ದಕ್ಕೆ..... ಹೀಗೆ ಬರುತ್ತಾ ಇರಿ....

    ReplyDelete
  67. ಸತೀಶ್ ಸರ್,
    ಮೊದಲಿಗೆ ನನ್ನ ಬ್ಲಾಗ್ ಗೆ ಸ್ವಾಗತ.... ಕಥೆ ಇಷ್ಟಪಟ್ಟು ಕಾಮೆಂಟ್ ಮಾಡಿದ್ದಕ್ಕೆ .... ಹೀಗೆ ಬರುತ್ತಾ ಇರಿ...

    ReplyDelete
  68. shivprakash,
    thank you ... thank you very much...

    ReplyDelete
  69. Dinakar;super story.sorry for the late response.as you know I was out of station.regards.

    ReplyDelete
  70. ಮೊದಲಿಗೆ ನನ್ನ ಬ್ಲಾಗಿಗೆ ಬಂದು ಬೆನ್ನು ತಟ್ಟಿದ್ದಕ್ಕಾಗಿ ಧನ್ಯವಾದಗಳು ಸಾರ್,

    22ನೇ ತಾರೀಖು ಭಾನುವಾರ ನಮ್ಮ ಕಸ್ತೂರಿ ಛಾನೆಲ್ ಕೋಲಾರದಲ್ಲಿ ಸೂಪರ್ ಸಂಸಾರ ಕಾರ್ಯಕ್ರಮ ಹಮ್ಮಿಕೊಂಡಿದೆ. ಆದ್ದರಿಂದ ಇದೊಂದು ಬಾರಿ ನನಗೆ ಬರಲಾಗುವುದಿಲ್ಲ. ಕ್ಷಮಿಸಿರಿ. ಪುಸ್ತಕ ಬಿಡುಗಡೆ ಯಶಸ್ವಿಗಾಗಲಿ.

    ಖಂಡಿತ ಹೀಗೆ ಮುಂದೆ ಬ್ಲಾಗ್ ಮಿತ್ರರು ಸೇರುವಂತಿದ್ದರೆ ನನಗೆ ಒಂದೇ ಮಿಸ್ ಕಾಲ್ ಕೊಡಿ ಸಾಕು. ನಾನು ಹಾಜರ್ mob: 9972570061

    ReplyDelete
  71. ಸರ್‍, ಕಲ್ಪನೆಯ ಈ ಕಥೆ ಕೊನೆಗೆ ಯಾರಿರಬಹುದು? ಎಂದು ಯೋಚಿಸುವಂತೆ ಮಾಡಿತು. ಚೆನ್ನಾಗಿದೆ.

    ReplyDelete
  72. First time here :):) Sorry for the late entry :) But I just went through your articles and they're pretty much interesting :)

    ReplyDelete
  73. ಡಾ. ಸರ್,
    ಯಾವಾಗ ಬಂದು ಕಾಮೆಂಟ್ ಮಾಡಿದರು ಖುಷಿಯೇ...... ಮೆಚ್ಚಿ ಬರೆದರಲ್ಲಾ ಅದೇ ಸಂತೋಷ... ಹೀಗೆ ಪ್ರೋತ್ಸ್ಹಾಹ ನೀಡಿ... ಧನ್ಯವಾದ,,,,,

    ReplyDelete
  74. ಬದ್ರಿನಾಥ್ ಸರ್,
    ಹೌದು... ಮೊನ್ನಿನ ಕಾರ್ಯಕ್ರಮ ತುಂಬಾ ಸೊಗಸಾಗಿತ್ತು..... ನೀವು ಬರಬೇಕಿತ್ತು..... ಮುಂದಿನ ನವಂಬರ್ ನಲ್ಲಿ ಇನ್ನೊಂದು ಸಾರಿ ಸಿಗೋ ಬಗ್ಗೆ ಯೋಚನೆ ನಡೀತಾ ಇದೆ.... ಅದು ಆದರೆ ನೀವು ಖಂಡಿತ ಬರಬೇಕು.... ಹೀಗೆ ಬರುತ್ತಾ ಇರಿ... ಧನ್ಯವಾದ.....

    ReplyDelete
  75. ಬಾಲಚಂದ್ರ ಸರ್,
    ಸ್ವಾಗತ ನನ್ನ ಬ್ಲಾಗ್ ಗೆ.... ನನ್ನ ಬೆನ್ನು ತಟ್ಟಿದ್ದಕ್ಕೆ ಧನ್ಯವಾದ ...ಹೀಗೆ ಬರುತ್ತಾ ಇರಿ.....

    ReplyDelete
  76. pratibha madam,
    wel come to my blog...... thank you for your appreciation.....keep coming... my blog wont disappoint anybody....thank you

    ReplyDelete
  77. hegidheera sir? call me once on 9972570061 whenever u feel free

    ReplyDelete