Sep 26, 2009

ಮಂಗಳೂರು ದಸರಾ...೨













ಭಗವಂತನ ಶಕ್ತಿ ರೂಪದ ಆರಾಧನೆಯ ಪರ್ವಕಾಲವೇ ನವರಾತ್ರಿ. ಒಂಬತ್ತು ದಿನಗಳ ಕಾಲ ನಮ್ಮ ದೇಹ , ಮನಸ್ಸು ಮತ್ತು ಆತ್ಮಗಳಿಗೆ ವಿಶ್ರಾಂತಿ ಕೊಟ್ಟು ಹೊಸ ಉಲ್ಲಾಸ , ಚೈತನ್ಯದೊಂದಿಗೆ ಹೊರಬರುವುದೇ ಆಚರಣೆಯ ಉದ್ದೇಶ ಆಗಿದೆ.....









ಭಗವಂತನ ಶಕ್ತಿ ರೂಪದ ಆರಾಧನೆಯ ಮೂರು ಶಕ್ತಿಗಳಾದ ಮಧುಕೈಟಭನನ್ನು ಕೊಂದ ಮಹಾಕಾಳಿ, ಮಹಿಷಾಸುರನನ್ನು ಕೊಂದ ಮಹಿಷಮರ್ಧಿನಿ ಮಹಾಲಕ್ಷ್ಮಿ , ಶುಂಭ ನಿಶುಮ್ಬರನ್ನು ಕೊಂದ ಸರಸ್ವತಿ ಶಕ್ತಿಯನ್ನು ವಿಶೇಷವಾಗಿ ಆಚರಿಸುತ್ತಾ, ದೇವಿಯ ಒಂಬತ್ತು ರೂಪಗಳನ್ನು ಒಂಬತ್ತು ದಿನಗಳಲ್ಲಿ ಆರಾಧಿಸಲಾಗುತ್ತದೆ......


ಶಾರದಮುರ್ತಿಯ ಮುಗ್ಧ ಮುಖ , ಪ್ರಶಾಂತತೆಯನ್ನ ನೋಡಿ, ಭಕ್ತಿ ಉಕ್ಕಿ ಬರದೆ ಇರಲು ಸಾದ್ಯವೇ ಇಲ್ಲ.......












ತಮೊಗುಣಗಳನ್ನು ಮಹಾಕಾಳಿ, ರಜೋಗುಣವನ್ನು ಮಹಾಲಕ್ಷ್ಮಿ, ಸತ್ವಗುಣವನ್ನು ಮಹಾಸರಸ್ವತಿ ಪ್ರತಿನಿಧಿಸುತ್ತಿದ್ದಾರೆ..........












ಮೊದಲ ೩ ದಿನ ಮಹಾಕಾಳಿಯ ಪೂಜೆ ಮಾಡುತ್ತಾ ನಮ್ಮ ದುರ್ಗುಣಗಳನ್ನು ಹೋಗಲಾದಿಸಿಕೊಳ್ಳಬೇಕು......












ಮದ್ಯಮ ಮೂರೂ ದಿನಗಳಲ್ಲಿ ಮಹಾಲಕ್ಷ್ಮಿಯನ್ನು ಪೂಜಿಸುತ್ತಾ, ನಮ್ಮ ಸದ್ಗುಣ ಸಂಪತ್ತನ್ನು ಅವಳ ಅನುಗ್ರಹದಿಂದ ಹೆಚ್ಚಿಸಿಕೊಳ್ಳಬೇಕು.....











ಕೊನೆಯ ಮೂರು ದಿನಗಳಲ್ಲಿ, ಜ್ನಾನದೇವತೆಯಾದ ಸರಸ್ವತಿಯನ್ನು ಆರಾಧಿಸುತ್ತಾ ನಮ್ಮಲ್ಲಿರುವ ಎಲ್ಲಾ ಕೆಟ್ಟ ಗುಣಗಳನ್ನು ಹೋಗಲಾಡಿಸಿ ಆ ಜಾಗದಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸಿ ಜ್ಞಾನವನ್ನು ಗಳಿಸಿ ಬಾಳಬೇಕೆಂಬುದು ನವರಾತ್ರಿ ಆಚರಣೆಯ ಮುಖ್ಯ ಉದ್ದೇಶವಾಗಿದೆ........











ಈ ಎಲ್ಲ ಮೂರ್ತಿಗಳನ್ನು ದಸರಾದ ಸಮಯದಲ್ಲಿ ಪ್ರತಿಷ್ಟಾಪಿಸುತ್ತಾರೆ.....












ಈ ಮೂರ್ತಿಗಳನ್ನು ಇಟ್ಟ ಹಾಲ್ ಯಾವ ಸಿನೆಮ್ಮಾದ ಸೆಟ್ಟನ್ನು ನಾಚಿಸುವಂತಿದೆ, ನಿಜವಾಗಿಯು ಅದ್ಭುತ....










ಇಲ್ಲಿಯ ಮುಖ್ಯ ಆಕರ್ಷಣೆ, ೨೫-೩೦ ಮೀಟರ್ ಮೇಲೆ ಚಿಮ್ಮುವ ಕಾರಂಜಿ, ಇದನ್ನ ಶಿವನ ಜಡೆಯಿಂದ ಚಿಮ್ಮುವ ಹಾಗೆ ಮಾಡಿದ್ದಾರೆ... ಕೊಳದ ನಾಲ್ಕೂ ಮೂಲೆಗಳಲ್ಲಿ ನಾಲ್ಕು ಶಿವನ ಮೂರ್ತಿಯನ್ನ ನಿಲ್ಲಿಸಿ ಅದರ ತಲೆಯಿಂದ ಆಕಾಶಕ್ಕೆ ಚಿಮ್ಮುವ ಕಾರಂಜಿಯನ್ನ ನೋಡೇ ಆನಂದಿಸಬೇಕು.......

















ಕೊನೆಯದಾಗಿ ತಾಳ್ಮೆಯ, ಬ್ರಹ್ಮಚರ್ಯದ ಪ್ರತಿರೂಪದಂತಿರುವ ಆಂಜನೇಯನ ಮೂರ್ತಿ ಗಮನ ಸೆಳೆಯುತ್ತದೆ......
!! ಸರ್ವ ಸ್ವರೂಪೆ ಸರ್ವೆಷೆ ಸರ್ವಶಕ್ತಿ ಸಮನ್ವಿತೆ
ಭಾಯೇಭ್ಯಾ ಸ್ರಾಹಿನೋ ದೇವಿ ದುರ್ಗೇ ದೇವಿ ನಮೋಸ್ತುತೆ !!

8 comments:

  1. ದಿನಕರ್ ಅವರೇ...

    ಬ್ಲಾಗ್ ಲೋಕಕ್ಕೆ ಸುಸ್ವಾಗತ. ಆಗಲೇ ಎಷ್ಟೊ೦ದು ಬರೆದುಬಿಟ್ಟಿದ್ದೀರಾ! ನಿಧಾನವಾಗಿ ಒ೦ದೊ೦ದಾಗಿ ಓದಬೇಕು :)

    ಏನೇ ನಿನ್ನ ಹೆಸರು ತು೦ಬಾ ಇಷ್ಟ ಆಯಿತು....

    ಮ೦ಗಳೂರಿನ ದಸರಾ ಇನ್ನೂ ಚೆನ್ನಾಗಿದೆ....

    ನನ್ನ ಬ್ಲಾಗಿನಲ್ಲಿ ಕಮೆ೦ಟಿಸಿದ್ದಕ್ಕೆ ಥ್ಯಾ೦ಕ್ಸ್....

    - ಸುಧೇಶ್

    ReplyDelete
  2. ತುಂಬಾ ಸ್ಟಾಕ್ ಇದೇರಿ.....ಅದಕ್ಕೆ ಇಸ್ಟೆಲ್ಲಾ ಬರೆದೆ.....ಓದಿ ಕಾಮೆಂಟ್ ಮಾಡಿದ್ದಕ್ಕೆ ಥ್ಯಾಂಕ್ಸ್....

    ReplyDelete
  3. ಇಲ್ಲೇ ಕೂತಲ್ಲೇ ನಮಗೆ ಮಂಗಳೂರು ದಸರಾ ತೋರಿಸಿದ್ದೀರಿ :) ಅಲ್ಲೂ ಬಹಳೆ ಭರ್ಜರಿಯಾಗಿ ಆಚರಿಸುತ್ತಾರೆ ಅಂದ ಹಾಗಾಯ್ತು...
    ಈ ಹಿಂದಿನ ಆ "ಏನೇ ನಿನ್ನ ಹೆಸರು" ಕವನ ಬಹಳ ಇಷ್ಟ ಆಯ್ತು... ಹೀಗೆ ಬರೀತಾ ಇರಿ...

    ReplyDelete
  4. yes.... what ever these people do, they do in passion..... thanks for commenting...

    ReplyDelete
  5. ಥ್ಯಾಂಕ್ಸ್ ಶಿವೂ , ಹೀಗೆ ಬ್ಲಾಗ್ ಗೆ ಬರ್ತಾ ಇರಿ...

    ReplyDelete
  6. photogaLu tumba chennagide sir... thanks. dasara habbada shubhashayagaLu

    ReplyDelete
  7. ಚ೦ದದ ದಸರಾ..
    ಸು೦ದರ ಬರಹ..
    ಅ೦ದದ ಚಿತ್ತಾರ..

    ReplyDelete