Sep 16, 2009

'ಕಾಂಜೀವರಂ' ಕಥೆ.......!

ಇವತ್ತು ನಾನು ಕೇಳಿದ ಒಂದು ಸಿನಿಮಾದ ಬಗ್ಗೆ ಬರೆಯುತ್ತಿದ್ದೇನೆ.. ಸಿನಿಮಾದ ಹೆಸರು 'ಕಾಂಜೀವರಂ' . ಇದರಲ್ಲಿ ಮಾಡಿದ ಅಪ್ಪನ ಪಾತ್ರಕ್ಕೆ ನಮ್ಮವರೇ ಆದ ಪ್ರಕಾಶ್ ರೈ ಅವರಿಗೆ ಬೆಸ್ಟ್ ನಟ ರಾಷ್ಟ್ರ ಪ್ರಶಸ್ತಿ ಸಿಕ್ಕದೆ... ಆ ಚಿತ್ರದ ಕಥೆ ಕೇಳ್ತಾ ಇದ್ರೆ ಕಣ್ಣಲ್ಲಿ ನೀರು ಬರತ್ತೆ.... ಕಥೆ ಹೀಗಿದೆ..... ಕೇಳಿ...... .


ಈ ಚಿತ್ರ ಅಪ್ಪ ಮತ್ತು ಮಗಳ ನಡುವಿನ ಪ್ರೀತಿಯ ಬಗ್ಗೆ ಇದೆ... ಅಪ್ಪ ಕಾಂಜೀವರಂ ರೇಷ್ಮೆ ಸೀರೆಗಳನ್ನು ನೇಯುವ ಬಡ ನೇಕಾರ. ಅವನಿಗೆ ಸ್ವಂತ ಮಗ್ಗವಿಲ್ಲ... ಅಲ್ಲಿ ನೇಕಾರರನ್ನು ದಿನಗೂಲಿಯ ಮೇಲಿಟ್ಟು ಸೀರೆ ನೆಯಿಸಿಕೊಳ್ಳುವ, ಬಹಳ ಕಠಿಣವಾದ ಜಮೀನ್ದಾರಿ ಪದ್ಧತಿ ಇದೆ. ಮಗಳು ದೊಡ್ಡವಳಾದಾಗ ಅವಳ ಮದುವೆಗೆ ಏನೇನು ಕೊಡುತ್ತೇನೋ ಅದನ್ನ ಎಲ್ಲರ ಎದುರಿಗೂ ಹೋಳೋದು ಅಲ್ಲಿನ ರಿವಾಜು.... ಒಂದು ಅರ್ಥದಲ್ಲಿ ಅದು ಆಣೆ ಮಾಡಿದಂತೆ. ಬಡ ಅಪ್ಪನಿಗೆ ಮಗಳ ಮೇಲೆ ತುಂಬಾ ತುಂಬಾ ಪ್ರೀತಿ. ದೊಡ್ಡವಳಾದ ಮಗಳನ್ನು ಕೂಡಿಸಿ ಆರತಿ ಮಾಡುವಾಗ ಈ ಬಡ ಅಪ್ಪ ಎಲ್ಲರ ಎದುರಿಗೆ ' ಮಗಳೇ, ನಿನ್ನ ಮದುವೆಯಲಿ ನಿನಗೆ ಕಾಂಜೀವರಂ ಸೀರೆ ಉಡಿಸಿ ಕಳಿಸುತ್ತೇನೆ' ಎಂದು ಬಿಡುತ್ತಾನೆ... ಇವನ ನೆಂಟರಿಷ್ಟರು ಇವನನ್ನು ತುಂಬ ಬೈಯುತ್ತಾರೆ, ಇಷ್ಟು ಬಡತನದಲ್ಲಿ ರೇಷ್ಮೆ ಸೀರೆ ಕೊಡಿಸುವುದು ಸಾದ್ಯದ ಮಾತಾ ಎಂದು ಇವನನ್ನು ಕೇಳುತ್ತಾರೆ.... ಬಡ ಅಪ್ಪ, ಮಗಳ ಮೇಲಿನ ಪ್ರೀತಿಯಿಂದ ಅದನ್ನ ಮಾಡಿ ತೋರಿಸುವ ಹಠ ತೊಡುತ್ತಾನೆ.... ಅವನಿಗೂ ಗೊತ್ತಿರುತ್ತೆ, ಜೀವಮಾನವಿಡಿ ದುಡಿದರೂ ತನ್ನಿಂದ ಮಗಳಿಗೆ ಕಾಂಜೀವರಂ ರೇಷ್ಮೆ ಸೀರೆ ಕೊಡಿಸೋಕ್ಕೆ ಆಗಲ್ಲ ಅಂತ.....ಆದರೂ ಅವನು ಹಣ ಕೂದಿಡೋಕೆ ಶುರು ಮಾಡುತ್ತಾನೆ. ಅದು ಸಾಕಾಗದೆ ಇದ್ದಾಗ ಕಳ್ಳತನ ಮಾಡಲು ಯೋಚಿಸುತ್ತಾನೆ..... ರಹಸ್ಯವಾಗಿ ಒಬ್ಬ ಕಾರ್ಪೆಂಟರ್ ಹಿಡಿದು ಒಂದು ಕೈಮಗ್ಗ ಮಾಡಿಸಿ ಅದನ್ನ ಯಾರಿಗೂ ತೋರಿಸದೇ ಇರುತ್ತಾನೆ....... ಜಮೀನ್ದಾರನಲ್ಲಿ ಪ್ರತಿದಿನ ಕೆಲಸ ಮಾಡಿ ಬರುವಾಗ ಸ್ವಲ್ಪ ರೇಷ್ಮೆಯನ್ನು ಕದ್ದು ಬಾಯಿಯಲ್ಲಿ ಇಟ್ಟುಕೊಂಡು ಬರುತ್ತಾನೆ...ಆ ಕದ್ದು ತಂದ ನೂಲಿನಿಂದ ಮಗಳಿಗಾಗಿ ಸೀರೆ ನೇಯಲು ಶುರು ಮಾಡುತ್ತಾನೆ... ಊರಲ್ಲಿ ಶುರುವಾದ ಕಾರ್ಮಿಕ ಸಂಘದ ನಾಯಕ ಇವನೇ ಆಗಿ ಧಣಿಗಳ ವಿರುದ್ದ ಹೋರಾಟಕ್ಕೆ ಇಳಿಯುತ್ತಾನೆ... ಈ ಮದ್ಯೆ ಯಾರದೋ ಕೊಲೆ ನಡೆದು ಇವನು ಜೈಲಿಗೆ ಹೋಗುತ್ತಾನೆ... ಅರ್ಧ ನೇಯ್ದ ಸೀರೆ ಹಾಗೆ ಉಳಿಯುತ್ತದೆ... ಮುಂದೆ ಮಗಳು ಕಾಯಿಲೆಗೆ ಬೀಳುತ್ತಾಳೆ, ಅಪ್ಪನಿಗೆ ಜೀವಾವದಿ ಶಿಕ್ಷೆ. ಕೊನೆಗೆ ಅಪ್ಪ ಜಾಮೀನಿನ ಮೇಲೆ ಬಿಡುಗಡೆಯಾಗಿ ಮನೆಗೆ ಬರುವ ಹೊತ್ತಿಗೆ ಮಗಳು ಸತ್ತು ಹೋಗುತ್ತಾಳೆ....ಆದರೆ ಮನೆಯ ಒಳಗೆ ರಹಸ್ಯವಾಗೆ ನೇಯ್ದು ಇಟ್ಟಿದ್ದ ಅರ್ಧ ರೇಷ್ಮೆ ಸೀರೆ ಹಾಗೆ ಇರುತ್ತದೆ.....ಅದನ್ನು ತಂದು ಮಗಳ ಶವದ ಮೇಲೆ ಹೊದೆಸಲು ಪ್ರಯತ್ನ ಮಾಡುತ್ತಾನೆ....ಮುಖ ಮುಚ್ಕಾಲಿಕ್ಕೆ ಹೋದರೆ ಕಾಲಿಗೆ ಸಾಕಾಗ್ತಾ ಇರಲಿಲ್ಲ ....ಕಾಲು ಮುಚ್ಕಾಲಿಕ್ಕೆ ಹೋದರೆ ಶವದ ಮುಖ ತೆರೆದುಕೊಳ್ಳುತ್ತಿತ್ತು....ಮಗಳಿಗೆ ಕಾಂಜೀವರಂ ಸೀರೆ ಉಡಿಸಿ ಕಲಿಸುವ ಅಪ್ಪನ ಕನಸು ಹಾಗೆ ಉಳಿದು ಹೋಗುತ್ತದೆ...


ಅಪ್ಪನ ಪಾತ್ರದಲ್ಲಿ ನಮ್ಮ ಪ್ರಕಾಶ್ ರೈ ಇದ್ದಾರೆ.... ಪ್ರಿಯದರ್ಶನ್ ನಿರ್ದೇಶನ ಇದೆ..... ಇಷ್ಟು ಒಳ್ಳೆ ಕಥೆ ಇರುವ ಸಿನೆಮಾಗಳು ನಮ್ಮ ಊರಲ್ಲಿ ಬರೋದೇ ಇಲ್ಲ... ಬಂದರೂ ನೋಡೋರು ಇರಲ್ಲ.... ನಿಮಗೇನಾದರೂ ನೋಡುವ ಅವಕಾಶ ಸಿಕ್ಕರೆ, ನನಗೆ ದಯವಿಟ್ಟು ತಿಳಿಸಿ...... ಇದೆ ಸಿನೆಮಾದ ಮಾಡಿದ ಪಾತ್ರಕ್ಕಾಗಿ ಪ್ರಕಾಶ್ ರೈ ಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ.... ಅಭಿನಂದನೆಗಳು ಪ್ರಕಾಶ್.....

2 comments:

  1. ನೀವು ಬರೆದಿರುವುದು ಓದಿ ಸಿನಿಮಾ ಚೆನ್ನಾಗಿದೆ ಅನಿಸುತ್ತದೆ, ಪ್ರಕಾಶ ರೈ ಚೆನ್ನಾಗೇ ನಟಿಸಿರುತ್ತಾರೆ, ನೋಡಬೇಕು... ನಮ್ಮಲ್ಲಿ ಇಂಥ ವಿಭಿನ್ನ ಕಥಾವಸ್ತು ಇರುವ ಕಥೆ ಯಾರೂ ಮಾಡಲು ಮುಂದೆ ಬರುವುದಿಲ್ಲ ಅನ್ನೋದು ವಿಷಾದನೀಯ. ಬ್ಲಾಗ ಚೆನ್ನಾಗಿದೆ, ಬರೆಯುತ್ತಿರಿ.

    ReplyDelete
  2. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.... ನೀವು ಈ ಸಿನೆಮಾ ನೋಡಿದರೆ ನನಗೆ ತಿಳಿಸಿ....

    ReplyDelete