Sep 25, 2011

ಈ ರೀತಿ.....!!!

ಈ ಕಥೆಯನ್ನು ಪ್ರಕಾಶಣ್ಣ ಬರೆದ ಕಥೆ(  http://ittigecement.blogspot.com/  )ಯನ್ನು ಮುಂದುವರೆಸಿ ಬರೆಯುವ ಪ್ರಯತ್ನ ಮಾಡಿದ್ದೇನೆ.... 



ನಾನ್ಯಾಕೆ ಹಾಗೆ ಮಾಡಿದೆ ಎಂದು ತಿಳಿಯಲಿಲ್ಲ..........
 ಮನುಷ್ಯ ಸಹಜವಾಗಿ ಎಲ್ಲರ ಜೊತೆ ಬೆರೆಯುತ್ತಾನೆ......
 ಕೆಲಸ ಮಾಡುವ ಸ್ಥಳದಲ್ಲಿ ಎಲ್ಲರ ಜೊತೆ ಬೆರೆಯದಿದ್ದರೆ ನಮ್ಮನ್ನೇ ಅನುಮಾನದಿಂದ ನೋಡುತ್ತಾರೆ...
ಸಂಬಂಧಿಕರ ಜೊತೆ ಸೇರದಿದ್ದರೆ ಅವರೆಲ್ಲ ದೂರ ಹೋಗುತ್ತಾರೆ....

ಛೆ...ತಪ್ಪು ಮಾಡಿದೆ ಎನಿಸಿತು....  ಬೆನ್ನು ತಿರುಗಿಸಿ ನೋಡಿದೆ....
 ಆತ ಮೊಬೈಲ್ ನಲ್ಲಿ ಮೆಸೇಜ್ ಮಾಡುತ್ತಿದ್ದ ಎನಿಸುತ್ತದೆ.... ನಾನು ತಿರುಗಿದ್ದನ್ನು ನೋಡಿಯೂ ಸಹ ಆತ ಮೆಸೇಜ್ ಕುಟ್ಟುವುದು ಮುಂದುವರಿಸಿದ........
 ನನ್ನ ಕೋಪ ಇಳಿದಿತ್ತಾದರೂ ತೋರಿಸಲು ಹೋಗಲಿಲ್ಲ..... ಹೆಣ್ಣು ಯಾವಾಗಲೂ ಗಂಡೇ ಸೋಲಲಿ ಎಂದು ಬಯಸುತ್ತಾಳೆ....
 ಆತ ಏನೂ ಪ್ರತಿಕ್ರೀಯಿಸದೇ ಇರಲು ನಾನೂ ಸೋಲಲು ಬಯಸಲಿಲ್ಲ.... ಬೆನ್ನು ತಿರುಗಿಸಿ ಮಲಗಿದೆ....
 ಮಲಗೇ ಇದ್ದರೂ ನಿದ್ದೆ ಬರಲಿಲ್ಲ.... 
ಮನಸ್ಸು ನನ್ನನ್ನು ನನ್ನ ಕಾಲೇಜಿನ ದಿನಗಳತ್ತ ಕೊಂಡೊಯ್ದಿತು....

ಪದವಿಯ ಕೊನೆಯ ವರ್ಷದಲ್ಲಿದ್ದೆ...........
ಇದೇ ನನ್ನ ಕಾಲೇಜಿನ ಅಂತಿಮ ವರ್ಷವೆಂದೇ ಇರಬೇಕು...
ಎಲ್ಲರ ಜೊತೆಯೂ ಖುಷಿ ಖುಷಿಯಿಂದ ಇರುತ್ತಿದ್ದೆ.....
ಅದರಲ್ಲೂ ಒಬ್ಬ ಹುಡುಗನ ಜೊತೆ ನನಗೆ ತುಂಬಾ ಖುಶಿ ಕೊಡುತ್ತಿತ್ತು.... ನನಗೆ ಒಳ್ಳೆಯ ಗೆಳೆಯನಾಗಿದ್ದ....

ನನ್ನ ಧುಖ್ಹಕ್ಕೆ ಹೆಗಲಾಗುತ್ತಿದ್ದ... ಖುಷಿಗೆ ಕಿವಿಯಾಗುತ್ತಿದ್ದ....
ಆದರೂ ನಾನು ಅವನನ್ನು ತೀರಾ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ......
ಗಂಟೆಗಟ್ಟಲೆ ಹರಟಿದರೂ ಸಹ ನನ್ನ ಮನೆಯ ವಿಳಾಸ ಅವನಿಗೆ ಹೇಳಿರಲಿಲ್ಲ... ಅವನೂ ಕೇಳಿರಲಿಲ್ಲ.....

ಒಮ್ಮೆ ಕಾಲೇಜಿನ ಪ್ರವಾಸವಿತ್ತು....... ಆತನೂ ಬಂದಿದ್ದ....
ನನ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಆತ ಪದೇ ಪದೇ  ಬಂದು ನನ್ನ ಬಳಿ ಕುಳಿತುಕೊಳ್ಳಲು ಪ್ರಯತ್ನಿಸಿದ್ದ..... ನಾನು ಅದನ್ನು ಒಪ್ಪಿರಲಿಲ್ಲ.....
ಗೋವಾದ ಪ್ರವಾಸವಾಗಿತ್ತು... ಒಂದು ದಿನ ಅಲ್ಲೇ ಉಳಿಯುವ ವ್ಯವಸ್ಥೆ ಸಹ ಇತ್ತು....... 
ಎಲ್ಲರೂ ಬೀಚ್ ನಲ್ಲಿ ಕುಣಿಯುತ್ತಿದ್ದೆವು.... ಆತ ನನ್ನನ್ನು ಸಮೀಪಿಸಲು ಪ್ರಯತ್ನಿಸುತ್ತಿದ್ದಾನೆ ಅನಿಸುತ್ತಿತ್ತು......

ಯಾಕೋ ಆತನನ್ನು ದೂರವಿಡಬೇಕು ಎನಿಸುತ್ತಿತ್ತು.... ಹಾಗೆ ಮಾಡಿದೆ....
 ಕುಣಿದು ಕುಣಿದು ಸುಸ್ತಾಗಿತ್ತು.... ರೂಮಿಗೆ ಬಂದು ಸ್ನಾನ ಮಾಡಿ ಊಟ ಮಾಡಿದೆವು....
  ಮಲಗುವವರಿದ್ದೆವು... ನನ್ನ ರೂಮ್ ನಲ್ಲಿ ನನ್ನ ಗೆಳತಿ ಒಬ್ಬಳಿದ್ದಳು...
ಅಷ್ಟರಲ್ಲಿ ಆತ ಅಲ್ಲಿಗೇ ಬಂದ...

ಆತ ತನ್ನ ಗೆಳೆಯರ ಜೊತೆ ಬಿಯರ್ ಕುಡಿದು ಬಂದಿದ್ದ ಎನಿಸುತ್ತಿತ್ತು...... ಬೀಯರ್ ವಾಸನೆಯೇ ವಾಕರಿಕೆ ತರಿಸುತ್ತಿತ್ತು....
ಬಂದವನೇ ನನ್ನ ಬೆಡ್ ಮೇಲೆ ಕುಳಿತ.... ನನ್ನ ಗೆಳತಿ ಬಾತ್ ರೂಮಿಗೆ ಹೋದಳು...
ಅದೇ ಸಮಯದಲ್ಲಿ ಆತ ನನ್ನ ಕೈ ಹಿಡಿದ.....
ನನಗೆ ಶಾಕ್ ಹೊಡೆದ ಹಾಗಾಯಿತು.....

ಇದು ನನ್ನ ಗೆಳೆತನಕ್ಕೆ ಮಾಡಿದ ಅಪಮಾನವಾಗಿತ್ತು..... ನಂಬಿಕೆಗೆ ಮಾಡಿದ ದ್ರೋಹವಾಗಿತ್ತು.....
ಯಾವ ನಿರೀಕ್ಷೆಯೂ ಇಲ್ಲದೆ ಸ್ನೇಹ ಮಾಡಿದ್ದೆ.....

ಈತನ ವರ್ತನೆ ನನ್ನನ್ನು ಕೆಣಕಿತ್ತು..... ಸಿಟ್ಟು ಬಂತು...
ಫಟೀರೆಂದು  ಎರಡು ಕೆನ್ನೆಗೆ  ಬಿಟ್ಟೆ......

ಆತನ ನಷೆ ಇಳಿದಿರಬೇಕು ಎನಿಸತ್ತೆ....
ಮಾತನಾಡದೆ ಹೊರಗೆ ಹೋದ....

ಬಾತ್ ರೂಮಿಗೆ ಹೋದ ಗೆಳತಿ ಹೊರಗೆ ಓಡಿ ಬಂದಳು" ಏನದು ಸದ್ದು.." ಎಂದಳು...
"ಸೊಳ್ಳೆ ಹೊಡೆದೆ" ಎಂದೆ... ನನ್ನ ಸಿಟ್ಟು ಹಿಡಿತಕ್ಕೆ ಬಂದಿತ್ತು.....

ಎಂದಿಗೂ ನನ್ನ ಜೊತೆ ಕೆಟ್ಟದಾಗಿ ನಡೆದುಕೊಳ್ಳದ ಆತ ಇಂದೇಕೆ ಹೀಗಾದ ಎನಿಸುತ್ತಿತ್ತು.... ನಾಳೆ ಕೇಳಿದರಾಯಿತು ಎಂದುಕೊಂಡು ಮಲಗಿದೆ....

ಬೆಳಿಗ್ಗೆ ಬೇಗನೇ ಎದ್ದೆ....
ಆತನಲ್ಲಿ ಹೋಗಿ ಕೇಳಬೇಕು ಎಂದಿಕೊಂಡು ಆತನ ರೂಮ್ ಹುಡುಕಿಕೊಂಡು ಹೋದೆ....

ಒಂದು ರೂಮಿನ ಬಾಗಿಲು ಅರ್ಧ ತೆರೆದಿತ್ತು....
ಇಣುಕಿದೆ...
ನನ್ನದೇ ಕಾಲೀಜಿನ ಹುಡುಗರು ಎಲ್ಲರೂ ಇದ್ದರು....
ಇದೇನಿದು ಎಲ್ಲರೂ ಇಷ್ಟು ಬೇಗ ಸೇರಿದ್ದಾರೆ ಎಂದುಕೊಂಡು ಒಳಗೆ ಹೋದೆ....  ಬೆಡ್ ಮೇಲೆ ಆತ ಕುಳಿತಿದ್ದ.... ಆತನ ಸುತ್ತಲು ಎಲ್ಲರೂ ನಿಂತಿದ್ದರು... ಅವರ ಹಿಂದೆ ನಾನು ನಿಂತಿದ್ದೆಯಾದ್ದರಿಂದ ನನ್ನನ್ನು ಯಾರೂ ಗಮನಿಸಲಿಲ್ಲ.....
ಆತ ಮೆಲ್ಲಗೆ ಮಾತನಾಡುತ್ತಿದ್ದ...... ನಾನು ಕಿವಿಗೊಟ್ಟು ಕೇಳಿದೆ..." ನನಗೆ ಎನೂ ಮನಸ್ಸಿರಲಿಲ್ಲ...ಅವಳೇ ನನ್ನನ್ನು ರೂಮಿಗೆ ಕರೆದಿದ್ದಳು.... ನನಗೆ ನಮ್ಮ ಸ್ನೇಹವನ್ನು ಹಾಳು ಮಾಡುವ ಮನಸಾಗಲಿಲ್ಲ..... ನೀವೇ ನೋಡಿದ್ದಿರಲ್ಲ, ಡಾನ್ಸ್ ಮಾಡುವಾಗ ಸಹ ನನ್ನ ಹತ್ತಿರವೇ ಬರುತ್ತಾ ಇದ್ದಳು.... ರಾತ್ರಿ ರೂಮಿಗೆ ಬರಲು ಹೇಳಿದ್ದಳು..... ಎನೋ ವಿಷಯ ಇರಬೇಕೆಂದುಕೊಂಡು ಹೋದೆ.... ಅವಳ ಗೆಳತಿ ಬಾತ್ ರೂಮಿಗೆ ಹೋಗಿದ್ದಾಗ ನನ್ನ ಕೈ ಹಿಡಿದು ಬಾ ಎಂದಳು.... ಕೆನ್ನೆಗೆ ಎರಡು ಬಿಗಿದು ಬಂದೆ... ಸ್ನೇಹವನ್ನು ಹೀಗೆ ದುರುಪಯೋಗ ಮಾಡಿಕೊಳ್ಳುವುದು ನನಗೆ ಇಷ್ಟ ಇರಲಿಲ್ಲ....." ಎಂದು ಇನ್ನೆನೋ ಹೇಳುವವನಿದ್ದ......
ನಾನು ಆತನ ಗೆಳೆಯರ ಮಧ್ಯದಲ್ಲೇ ನುಸುಳಿಕೊಂಡು ಆತನ ಎದುರಿಗೆ ನಿಂತೆ...
 ಆತನ ಬಾಯಿಗೆ ಬೀಗ ಬಿದ್ದಿತ್ತು.......
ನನ್ನ ಮೈ ಕಂಪಿಸುತ್ತಿತ್ತು.... ನನ್ನ ನಡುಕ ನನಗೇ ಕೇಳಿಸುತ್ತಿತ್ತು.... 

ಏನು ಹೇಳಬೇಕೋ ತಿಳಿದಿರಲಿಲ್ಲ...
ಥೂ..... ಎಂದು ಮುಖಕ್ಕೆ ಉಗಿದೆ.....
ಹೊರಗೆ ಬಂದೆ.....
ಬೇರೆಯದೇ ಬಸ್ ಹಿಡಿದು ಊರಿಗೆ ಬಂದಿದ್ದೆ....
ನಂತರ ಕಾಲೇಜಿನ ಕಡೆ ತಲೆ ಹಾಕಿರಲಿಲ್ಲ....

ಎಲ್ಲಾ ನೆನಪಾಯಿತು....... ಇದೆಲ್ಲವನ್ನು ನಾನೂ ಸಹ ಗಂಡನಿಗೆ ಹೇಳಿರಲಿಲ್ಲ....
ನನ್ನದೇನೂ ತಪ್ಪಿಲ್ಲ ಎಂದರೂ ಆತ ನಂಬಬಹುದು ಎನಿಸಿರಲಿಲ್ಲ..... ಮತ್ತೆಲ್ಲಾ ವಿಷಯದ ಬಗ್ಗೆ ಹೇಳಿಕೊಂಡರೂ ಈ ವಿಷಯ ಮುಚ್ಚಿಟ್ಟಿದ್ದೆ.....
ಯಾಕೊ ಹೇಳಬೇಕು ಎನಿಸಿರಲಿಲ್ಲ........ 

ಫೋನ್ ರಿಂಗ್ ಆದ ಹಾಗಾಯಿತು....
ನನ್ನ ಯೋಚನಾ ಸರಣಿಗೆ ಕತ್ತರಿ ಬಿತ್ತು......

ಕಿರುಗಣ್ಣಲ್ಲೇ ನೋಡಿದೆ...
ಆತ ಫೋನ್ ಕಿವಿಗಿಟ್ಟು ಪಿಸುಗುಟ್ಟಿದ... ಮತ್ತೆ ಕಟ್ ಮಾಡಿ.... ಮೆಸೇಜ್ ಕುಟ್ಟತೊಡಗಿದ...

ನಾನು ಸುಮ್ಮನೇ ಮಲಗಿದೆ.....


ಬೆಳಿಗ್ಗೆ ಬೇಗ ಎದ್ದು ತುಳಸಿಕಟ್ಟೆ ತೊಳೆದು ದೀಪ ಹಚ್ಚಿದೆ....
ಎಲ್ಲರಲ್ಲೂ ತಪ್ಪಿರತ್ತೆ.... ಕೆಲವೊಂದು ಹುಳುಕುಗಳು ಇರುತ್ತವೆ....
ಅದರ ಜೊತೆ ಹೊಂದಿಕೊಂಡು ಹೋದರೆ ಜೀವನ ಎಂದು ಅಮ್ಮ ಹೇಳುತ್ತಿದ್ದುದು ನೆನಪಾಯಿತು....

ನಿನ್ನೆ ಆತನ ಜೊತೆ ನಡೆದ ಜಗಳ ಮರೆತು ಸರಿಯಾಗೋಣ ಎನಿಸಿತು....
ಒಳ್ಳೆಯ ಕಾಫಿ ಮಾಡಿಕೊಂಡು ಬೆಡ್ ರೂಮಿಗೆ ಹೋದೆ....

ಆತ ಬೇಗನೇ ಎದ್ದಿದ್ದ... ಯಾರದೋ ಜೊತೆ ಮೆಲ್ಲ ದನಿಯಲ್ಲಿ ಮಾತನಾಡುತ್ತಿದ್ದ..... ನಾನು ಒಳಗೆ ಬಂದ ನಂತರ ಫೋನ್ ಕಟ್ ಮಾಡಿದ.....
ನಾನು " ಕಾಫಿ ಕುಡಿಯಿರಿ" ಎಂದೆ.....

"ಇದೇನು ಜಗಳ ಎಲ್ಲಾ ಮುಗೀತಾ..? ನಿನ್ನೆ ತುಂಬಾ ಸಿಟ್ಟಲ್ಲಿದ್ದೆ..... " ಎಂದರು.....

" ಅದೆಲ್ಲಾ ಬಿಟ್ಟುಬಿಡಿ... ಜಗಳ ಮರೆತು, ಜತೆಯಾಗಿ ಬಾಳೋಣ... ಮೊದಲು  ಕಾಫಿ ಕುಡಿಯಿರಿ" ಎಂದೆ......

"ನಿನ್ನದೂ ಸಹ ತಪ್ಪಿಲ್ಲ , ಎಲ್ಲಾ ಕಡೆಯಲ್ಲೂ ಸಂಬಂಧ ಕೆಟ್ಟು ಹೋಗಿದೆ... ಯಾರನ್ನೂ ನಂಬುವ ಹಾಗಿಲ್ಲ... ಇದನ್ನೆಲ್ಲಾ ಸರಿ ಮಾಡೊದು ಹೇಗಂದ್ರೆ, ಏನನ್ನು ಮುಚ್ಚಿಡದೇ ಎಲ್ಲವನ್ನೂ ಹಂಚಿಕೊಳ್ಳೋದು.... ನನ್ನ ಜೀವನ ತೆರೆದ ಪುಸ್ತಕದ ಹಾಗೆ.... ನಿನ್ನಲ್ಲಿ ಎಲ್ಲವನ್ನೂ ಹೇಳಿಕೊಂಡಿದ್ದೇನೆ....  ಇಷ್ಟೆಲ್ಲಾ ಮಾಡಿದರೂ ನೀನು ನನ್ನ ಮೇಲೆ ತಪ್ಪು ತಿಳಿದೆ...... ಇರಲಿ, ಈಗ್ಲಾದ್ರೂ  ಎಲ್ಲಾ ಅರ್ಥ ಆಯ್ತಲ್ಲಾ.... ಸರಿ..... ಇದೇ ರೀತಿ ಇರು.... ಎರಡೇ ನಿಮಿಷ ಬಂದೆ.." ಎಂದವರೇ ಬಾತ್ ರೂಮಿಗೆ ಓಡಿದರು..... ಬಾಗಿಲು ಹಾಕಿಕೊಳ್ಳುವವರಿದ್ದರು.....

ಅಷ್ಟರಲ್ಲೇ ವಾಪಸ್ ಬಂದು ಮೊಬೈಲ್ ತೆಗೆದುಕೊಂಡು ಏನೋ ಕುಟ್ಟಿದರು...... ಮತ್ತೆ ಮೊಬೈಲ್ ನ್ನು ಬೆಡ್ ಮೇಲಿಟ್ಟು ಬಾತ್ ರೂಮಿಗೆ ಹೋದರು.....

ನನಗೆ ಮತ್ತೆ ತಲೆಯಲ್ಲಿ ಹುಳ.......
ಇದ್ಯಾಕೆ ಇಷ್ಟೊಂದು ಮೊಬೈಲ್ ಹುಚ್ಚು ಎನಿಸಿತು.....

ಮೊಬೈಲ್ ಕೈಯಲ್ಲಿ ತೆಗೆದುಕೊಂಡೆ....
ನೊಕಿಯಾ ಮೊಬೈಲ್ ಆಗಿತ್ತು.....
ದುಬಾರಿಯದೇ ಆಗಿತ್ತು.....

ನಿನ್ನೆ ರಾತ್ರಿ ಮೊಬೈಲ್ ನಲ್ಲಿ ಮಾತನಾಡಿದ್ದು ಮತ್ತು ಮೆಸೇಜ್  ನೆನಪಾಯಿತು.....
ಯಾರ ಜೊತೆ ಎನಿಸಿ....INBOX ನೋಡಿದೆ....... EMPTY... 
ಎಂದಿತ್ತು..!! ಅರೆ... ಇದೇನಿದು.... ನಿನ್ನೆ ರಾತ್ರಿಯಿಡಿ ಮೆಸೇಜ್  ಮಾಡಿದ್ದರಲ್ಲ.....
 SENT MESSAGE ನೋಡಿದೆ.......... ಅದೂ EMPTY
ಎಂದಿತ್ತು......!!
ಅದ್ಸರಿ.....
ನಾನು ಬೆಳಿಗ್ಗೆ ಕಾಫಿ ತರುವ ಮೊದಲು ಯಾರದೋ ಜೊತೆ ಮಾತನಾಡುತ್ತಿದ್ದರಲ್ಲ ಎನಿಸಿ Dialed call list ನೋಡಿದೆ......
 Empty ಎಂದಿತ್ತು.......!!
Received call list ನೋಡಿದೆ..............
Empty ಎಂದಿತ್ತು..... !!


ಫೋನ್ ತೆಗೆದು ಪಕ್ಕದಲ್ಲಿಟ್ಟೆ....
"ಟಿವ್...ಟಿವ್" ಎಂದು ಮೆಸೇಜ್ ಅಲರ್ಟ್ ಆಯ್ತು.....

ನಾನು ಬಗ್ಗಿ ನೋಡಿದೆ......

ONE MESSAGE RECEIVED.....!!!!

49 comments:

  1. ದಿನಕರ್, ಒಳ್ಲೆ ಪ್ರಯತ್ನ...ಪ್ರಕಾಶ ಮೊದಲ ಕಾಮೆಂಟ್ ಹಾಕಿದ್ರೆ ಚನ್ನಾಗಿತ್ತು...ಆದ್ರೂ ಒಂದು ದಿಶೆ ನೀಡೋ ಪ್ರಯತ್ನ ಚನ್ನಾಗಿದೆ...

    ReplyDelete
  2. ಇದೆಂತ ಮಾರಾಯ್ರೆ?
    ಎನೊ ಅನ್ದುಕೊನ್ದರೆ ಎನೊ ಆಯ್ತಲ್ಲ? ಒಬ್ಬರಿಗಿನ್ತ ಒಬ್ಬರು ಕತೆ ಬರೆಯುವ ಪರಿ......... ವ್ವಾ.......
    ಅನುಮಾನಕ್ಕೆ ವಾಸ್ತವ ಸಹಭಾಗಿ!!!!!!

    ReplyDelete
  3. ದಿನಕರ....

    ಮಸ್ತ್ ಕಥೆ.... !!

    ಸಂಶಯಗಳೇ ಹೀಗೆ... ಅದಕ್ಕೊಂದು ಕೊನೆ, ಮೊದಲಿಲ್ಲ.... !!

    ನಾನು ಬರೆದ ಕಥೆ ಮುಂದುವರೆಸಬಹುದೆಂಬ ವಿಚಾರ ಕೂಡ ನನಗೆ ಬಂದಿರಲಿಲ್ಲ...!

    ತುಂಬಾ ತುಂಬಾ ಸುಂದರ ಕಥೆ !!

    ಇದು ಮುಂದುವರೆದ ಭಾಗ ಅನ್ನುವದಕ್ಕಿಂತ
    ಇದೂ ಕೂಡ ಸ್ವತಂತ್ರವಾದ ಕಥೆ...!

    ಕಥೆಗಾರ "ದಿನಕರ" ನನಗೆ ಇಷ್ಟವಾದ...

    ಇನ್ನಷ್ಟು ಕಥೆಗಳು ಬರಲಿ... ಜೈ ಹೋ !!

    ReplyDelete
  4. ಇದೇನಿದು ಸರ್...ಪ್ರಕಾಶಣ್ಣ ನ ಕತೆಗೆ ಇಲ್ಲಿ ಸುಖಾಂತ್ಯ ಇದೆಯೇನೋ ಎಂದುಕ್ಕೊಳ್ಳುತ್ತಲೇ ಕತೆ ಓದುಲು ಶುರುವಿಟ್ಟೆ ..ಇಲ್ಲಿ ಮತ್ತೇ ಕೊನೆ ನಿಗೂಢವಾಗಿ ಬಿಟ್ಟಿದೆ.. ಬಹುಶಃ ಹುಡುಗಿಯರ ಮನಸ್ಸೇ ಹೀಗಿರಬಹುದು...! ನಿಗೂಢ...!!
    ಮುಂದೇನು...?ಕುತೂಹಲ ಇದೆ...

    ReplyDelete
  5. super dinakar sir... innu munduvariyali..

    ReplyDelete
  6. sir, very interesting

    tumbaa suspence ittu barediddiraa,

    ninne aste life in a METRO movie nodide, inthadde sanshayagala taana adu. allu onde message ella anaahuta maadiratte.

    wonderful story

    ReplyDelete
  7. E Kathe kooda chennagide..! Superrrr!!
    Mundenu? Mundiana bhagavannu yaru bareyuttre ??

    ReplyDelete
  8. ಪ್ರಕಾಶರ ಕತೆಯನ್ನು ನೀವು ಮುಂದುವರಿಸಿದ್ದು ಒಂದು ಮಹತ್ವದ ಪ್ರಯೋಗವಾಗಿದೆ. ಈ ಪ್ರಯೋಗದಲ್ಲಿ ನೀವು ಸಖತ್ ಯಶಸ್ಸು ಗಳಿಸಿದ್ದೀರೆಂದು ಹೇಳಲೇ ಬೇಕು. ಶುಭಾಶಯಗಳು.

    ReplyDelete
  9. ತುಂಬಾ ಚೆನ್ನಾಗಿದೆ ಸರ್.. 'ONE MSG RECIEVED' ನ್ನು CLICK ಮಾಡೋಣ ಅನ್ನಿಸಿತು..:) ಮುಂದಿನ ಭಾಗ ಬೇಗ ಬರಲಿ....

    ReplyDelete
  10. ಆಜಾದ್ ಸರ್,
    ಪ್ರಕಾಶಣ್ಣನ ಸಹಯೋಗದಿಂದಲೇ ಇದನ್ನು ಬರೆದಿದ್ದೇನೆ....... ಅವರ ಸಹಕಾರ ಮತ್ತು ತಿದ್ದುಪಡಿ ಇದೆ....ಧನ್ಯವಾದ ನಿಮ್ಮ ಮೆಚ್ಚುಗೆಗೆ....

    ReplyDelete
  11. ಪ್ರವೀಣ್,
    ಜೀವನದಲ್ಲಿ ಅನುಮಾನ ಇದ್ದೇ ಇರತ್ತೆ...ಆದ್ರೆ ನಾವು ಎಷ್ಟರಮಟ್ಟಿಗೆ ಅದನ್ನ ತಲೆಗೆ ಬಿಟ್ಟುಕೊಳ್ಳುತ್ತೆವೆ ಅದರ ಮೇಲೆ ನಮ್ಮ ಜೀವನ ಸುಗಮವಾಗಿರತ್ತೆ.... ತುಂಬಾ ಧನ್ಯವಾದ ನಿಮ್ಮ ಮೆಚ್ಚುಗೆಗೆ....

    ReplyDelete
  12. ಪ್ರಕಾಶಣ್ಣ,
    ನಿಮ್ಮ ಪ್ರೋತ್ಸಾಹವೇ ನನಗೆ ಇನ್ನಷ್ಟು ಬರೆಯಲು ಹುರಿದುಂಬಿಸುತ್ತವೆ.... ನಿಮ್ಮ ಕಥೆಯಲ್ಲಿ ಎಂದಿನ "ಪ್ರಕಾಶಣ್ಣನ ಕಥಾ ತಿರುವು" ಇರಲಿಲ್ಲ....ಹಾಗಾಗಿ ಬರೆಯೋಣ ಎನಿಸಿ ನಿಮಗೆ ಹೇಳಿದೆ... ನೀವು ಅದನ್ನು ತಿದ್ದಿ ತೀಡಿದಿರಿ.... ತುಂಬಾ ಧನ್ಯವಾದ.....

    ReplyDelete
  13. ವಾಣಿಶ್ರೀ ಮೇಡಮ್,
    ಮುಂದೇನು...? ನನಗೂ ಗೊತ್ತಿಲ್ಲ..... ನೀವೇ ಮುಂದುವರಿಸಿ.....

    ReplyDelete
  14. ವಾಣಿಶ್ರೀ ಮೇಡಮ್,
    ಮುಂದೇನು...? ನನಗೂ ಗೊತ್ತಿಲ್ಲ..... ನೀವೇ ಮುಂದುವರಿಸಿ.....

    ReplyDelete
  15. ವಾಣಿಶ್ರೀ ಮೇಡಮ್,
    ಮುಂದೇನು...? ನನಗೂ ಗೊತ್ತಿಲ್ಲ..... ನೀವೇ ಮುಂದುವರಿಸಿ.....

    ReplyDelete
  16. ಮೌನರಾಗ...
    ಹೌದು..ನಿಗೂಡ ಇರಬೇಕು ಎಲ್ಲಾ ಕಡೆ... ಇಲ್ಲದಿದ್ದರೆ ನೀರಸ...... ಧನ್ಯವಾದ ನಿಮ್ಮ ಮೆಚ್ಚುಗೆಗೆ....

    ReplyDelete
  17. ಕಾಂತೇಶ,
    ನೀವೂ ಟ್ರೈ ಮಾಡಿ.... ನನಗೆ ಹೊಳೆದರೆ ಬರೆಯುವೆ..............

    ReplyDelete
  18. ಮನಸು ಮೆಡಮ್,
    ಧನ್ಯವಾದ ನೀವು ಇಷ್ಟ ಪಟ್ಟಿದ್ದಕ್ಕೆ..... ಮುಂದುವರಿಸಲು ಪ್ರಯತ್ನ ಮಾಡುತ್ತೇನೆ....

    ReplyDelete
  19. ಕಾವೇರಿ....
    ಥ್ಯಾಂಕ್ಸ್..... ಇಷ್ಟ ಪಟ್ಟಿದ್ದಕ್ಕೆ.....

    ReplyDelete
  20. ದಿನಕರ್ ಅವರೇ, ಪ್ರಕಾಶಣ್ಣನ ಕಥೆಗೆ ಅಷ್ಟೇ ಸುಂದರವಾದ ಮುಂದುವರಿಕೆ ನೀಡಿದ್ದೀರಿ :)

    ReplyDelete
  21. ದಿನಕರ್;ಕಥೆ ಒಳ್ಳೇ ಸಸ್ಪೆನ್ಸ್ ಥ್ರಿಲ್ಲರ್ ಥರ ಇದೆ!

    ReplyDelete
  22. ಅಯ್ಯೋ ಏನ್ರಪ್ಪ ಅಣ್ಣಂದಿರಾ ನೀವಿಬ್ರು ಕಥೆ ಬರಿತೀರಾ ಅಂತಾ ಇದ್ರೆ, ಪಾತ್ರಗಳ ಜೊತೆ ಲಗೋರಿ ಆಡ್ತಿದ್ದೀರಲ್ಲಾ! ಇದಪ್ಪಾ ಜುಗಲ್‍ಬಂದಿ ಅಂದ್ರೆ. ನೈಸ್. ನೈಸ್ ಮುಂದುವರೆಸಿ ಒಳ್ಳೆ ಕಾದಂಬರಿ ಆಗುತ್ತೆ.

    ReplyDelete
  23. ಕಥೆ ತುಂಬಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ದಿನಕರ್ ಸರ್... ಈ ಕಾಲದಲ್ಲಿ ಇಂಥ ಅನೇಕ ಘಟನೆಗಳು ಕಾಣಸಿಗುತ್ತವೆ...ಈಗಿನ ಮೊಬೈಲ್ ಇಂಟರ್ನೆಟ್ ಯುಗದ ದುಸ್ಪರಿಣಾಮಗಳು ಎಂದರೆ ತಪ್ಪಾಗಲಾರದು ಅನ್ಸುತ್ತೆ ಅಲ್ವಾ..

    ReplyDelete
  24. ಚ೦ದ ಬರೆದಿದ್ದೀರಿ ಕಥೆಯನ್ನು..
    [ಈ ಮೊದಲು ನಾನು ಹಾಕಿದ ಕಾಮೆ೦ಟ್ ಕಾಣಿಸುತ್ತಿಲ್ಲವಲ್ಲ..!]

    ReplyDelete
  25. ಕತೆ ಮುಂದುವರೆದಿರುವುದು ನೋಡಿ ಹುಚ್ಚು ಹಿಡಿದಿದೆ ದಿನಕರ ಸರ್.. ಕನ್ನಡದ ಪಾಲಿಗೆ ೩-೪ ಜನ ಸೇರಿ ಕಥೆ ಬರೆಯುವುದು ಹೊಸ ಪ್ರಯೊಗ ಎನಿಸುತ್ತದೆ...(೨-೩ ಜನ ಬರೆದ text book ಅನ್ನು english ನಲ್ಲಿ ಓದಿದ್ದೇನೆ ಹಾ ಹಾ) ಮುಂದುವರೆಸಿ.....

    ಬನ್ನಿ ನಮ್ಮನೆಗೂ,
    http://chinmaysbhat.blogspot.com/

    ಕನ್ನಡಕ್ಕೆ ಹೊಸ ಸಾಹಿತ್ಯದ ಮೆರೆಗು ಬರುವ ಆಸೆ ಹೊತ್ತು,
    ನಿಮ್ಮನೆ ಹುಡುಗ,
    ಚಿನ್ಮಯ ಭಟ್.

    ReplyDelete
  26. ಪ್ರಿಯ ಮೊಗೇರ,

    ಒಬ್ಬ ಲೇಖಕ ಬರೆದ ಕಥೆಯನ್ನು ಆಧಾರವಾಗಿಟ್ಟುಕೊಂಡು ಎರಡನೇ ಭಾಗ ಬರೆಯುವ ಪ್ರವೃತ್ತಿ ಅನುಕರಣನೀಯ.

    ಕಥವನವನ್ನು ನಿರೂಪಿಸುವಾಗ ನೀವು ಅನುಸರಿಸುವ ಪುಟ್ಟ ವಾಕ್ಯಗಳು, ಕಮ್ಮೀ ಉದ್ದದ ಸಾಲುಗಳು ಮತ್ತು ಹೇಳುವಷ್ಟೇ ಹೇಳುವ ಸಣ್ಣ ಪ್ಯಾರಾಗಳು ಓದುಗನನ್ನು ಸೆಳೆಯುತ್ತವೆ.

    ಚಿಕ್ಕ ಗುಳಿಗೆಗಳು, ಬೇಗ ಜೀರ್ಣವಾಗುತ್ತವೆ...

    ಹೆಣ್ಣು ಸದಾ ತಾನೇ ಗೆಲ್ಲುವ ಉಮೇದಿಯಲ್ಲಿರುತ್ತಾಳೆ. ಅವನು ಹತ್ತಿರ ಬರಲು ಯತ್ನಿಸಿದಾಗ ದೂರ ಸರೆಯುವ ಮತ್ತು ಅವನು ತನ್ನನ್ನು ಕಡೆಗಣೆಸುತ್ತಿದ್ದಾನೆ ಎಂದು ಕೊರಗುವ ಅವಳ ವ್ಯಕ್ತಿತ್ವ ಸರ್ವಕಾಲೀನ.

    ಈಗ ಹಟಕ್ಕೆ ಬಿದ್ದು ಇಬ್ಬರಲ್ಲಿ ಯಾರ ಕಥನ ಮಸ್ತ್ ಅಂತ ತಲೆ ಕೆರೆದುಕೊಂಡು ಕೂರುವಂತಾಯ್ತಲ್ಲ ಮಾರಾಯ್ರೇ...

    ReplyDelete
  27. Sir really very interesting... Please continue soon...

    ReplyDelete
  28. ದಿನಕರ್ ಸರ್,
    ಬಿಡುವಿಲ್ಲದ ಕಾರಣದಿಂದಾಗಿ ಓದಲಾಗಿರಲಿಲ್ಲ. ಇವತ್ತು ಓದಿದೆ. ತುಂಬಾ ಒಳ್ಳೆಯ ಪ್ರಯತ್ನವನ್ನು ಮಾಡಿದ್ದೀರಿ ಅನ್ನಿಸುತ್ತೆ. ಹೊರಗಿನ ಮಾಧ್ಯಮಗಳು ತುಂಬಾ ಕಲುಷಿತಗೊಂಡಿರುವಾಗ ಇಂಥ ಪ್ರಯತ್ನಗಳು ನಮ್ಮ ಬ್ಲಾಗ್ ಲೋಕದಲ್ಲಿ ಆಗುತ್ತಿದೆಯೆನ್ನುವುದೇ ಖುಷಿಯ ವಿಚಾರ.
    ಅಭಿನಂದನೆಗಳು ಸರ್.

    ReplyDelete
  29. ತುಂಬಾ ಚೆನ್ನಾಗಿದೆ ದಿನಕರ್ ಅವರೇ. ನಿಮ್ಮ ಕಥೆಗಳಲ್ಲಿ ಯಾವಾಗಲೂ ಏನೋ ಒಂದು ಹೊಸತನ ಇರತ್ತೆ, ಮತ್ತೆ ಮತ್ತೆ ಓದೋಣ ಅನಿಸತ್ತೆ. ಹೀಗೆ ಬರೀತಾ ಇರಿ.

    ReplyDelete
  30. ಗುರು ಸರ್,
    ಕಥೆ ಮುಂದುವರಿಸುವಾಗ ಅಂತ್ಯದ ಬಗ್ಗೆ ಯೋಚಿಸಿರಲಿಲ್ಲ...ಅಚಾನಕ್ ಆಗಿ ಬಂದ ಅಂತ್ಯ ಅದು...... ಪ್ರವೀಣ್ ಅದನ್ನು ಚೆನ್ನಾಗಿ ಮುಂದುವರಿಸಿದ್ದಾರೆ......ಧನ್ಯವಾದ ನಿಮ್ಮ ಮೆಚ್ಚುಗೆಗೆ.....

    ReplyDelete
  31. ಕವಿತಾ...
    ಧನ್ಯವಾದ ನಿಮ್ಮ ಮೆಚ್ಚುಗೆಗೆ...ಈಗಾಗಲೇ ಪ್ರವೀಣ್ ಇದನ್ನು ಮುಂದುವರಿಸಿದ್ದಾರೆ...

    ReplyDelete
  32. ಸುನಾಥ್ ಸರ್,
    ತುಂಬಾ ತುಂಬಾ ತುಂಬಾ ಧನ್ಯವಾದ... ನೀವು ಇಷ್ಟ ಪಟ್ಟು ಅನಿಸಿಕೆ ಹಾಕಿದ್ದಕ್ಕೆ, ಮೆಚ್ಚಿದ್ದಕ್ಕೆ...... ನಿಮ್ಮೆಲ್ಲರ ಹಾರೈಕೆ ನಮಗೆಲ್ಲಾ ಇನ್ನಷ್ಟು ಹುಮ್ಮಸ್ಸು ತರುತ್ತದೆ .....

    ReplyDelete
  33. ಶುಭಾ ಮೇಡಮ್,
    ಹ್ಹ ಹ್ಹ.... ಕಥೆ ಮುಗಿಸುವಾಗ ಬಂದ ಆಲೋಚನೆ ಅದು..... ನನಗೂ ಇಷ್ಟ ಆಗಿತ್ತು.... ನೀವು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದ...

    ReplyDelete
  34. ಹರೀಶ್ ಸರ್,
    ಧನ್ಯವಾದ ನಿಮ್ಮ ಮೆಚ್ಚುಗೆಗೆ...

    ReplyDelete
  35. ಡಾಕ್ಟ್ರೇ....
    ಹ್ಹ ಹ್ಹ.... ಥ್ರಿಲ್ಲರ್ ಸಿನೇಮಾ ಥರಾನೆ ಮುಂದುವರಿಯುತ್ತಾ ಇದೆ...... ಧನ್ಯವಾದ.....

    ReplyDelete
  36. ಸತೀಶ್ ಸರ್....
    ಈ ಜುಗಲ್ಭಂದಿ ಮುಂದುವರಿಯುತ್ತಾ ಇದೆ... ಅದೇ ಖುಶಿ..... ಧನ್ಯವಾದ ನಿಮ್ಮ ಮೆಚ್ಚುಗೆಯ ಮಾತಿಗೆ.....

    ReplyDelete
  37. ಓ ಮನಸೇ,
    ಮೊಬೈಲ್ ನಾವು ಉಪಯೋಗಿಸಿದ ಹಾಗೆ ಅಲ್ವಾ...? ಇಷ್ಟಪಟ್ಟಿದ್ದಕ್ಕೆ ಧನ್ಯವಾದ.....

    ReplyDelete
  38. ಸುಮಾ ಮೇಡಮ್,
    ನಿಮ್ಮ ಅನಿಸಿಕೆ ಮೊದಲೇ ಹಾಕಿದ್ರಾ...? ಗೊತ್ತಾಗ್ತಿಲ್ಲ..... ಧನ್ಯವಾದ ನಿಮ್ಮ ಮೆಚ್ಚುಗೆಗೆ....

    ReplyDelete
  39. ದಿನಕರ್ ರವರೇ ನಿಮ್ಮ ಈ ಕಥೆಯನ್ನ ಓದಿ ತುಂಬ ಸಂತೋಷ ಆಯ್ತು. ಆದ್ರೆ ಇದಕ್ಕೆ ಮೊದಲು ಪ್ರಕಾಶ್ ರವರು ಇದ್ನ ಆರಂಭಿಸಿದ್ರು ಆನಂತರ ನೀವು ಮುಂದುವರೆಸಿದ್ದೀರಿ ಅಂತ ಗೊತ್ತಾಯ್ತು. 1 ಮೆಸೇಜ್ ರಿಸ್ಸೀವ್ಡ್ ನ್ನು ಕ್ಲಿಕ್ ಮಾಡೋ ಹುಮ್ಮನಸ್ಸು ಇದೆ. ಇದ್ನ ಈಗಾಗಲೇ ಪ್ರವೀಣ್ ರವರು ಕ್ಲಿಕ್ ಮಾಡಿದ್ದಾರೆ ಎಂದು ಮೇಲೆ ಪ್ರತಿಕ್ರಿಯೆಯೊಂದರಲ್ಲಿ ತಿಳಿಸಿದ್ದೀರಿ. ತುಂಬಾ ಸಂತೋಷ. ನಾನು ಈ ವರ್ಷ ಅಂತರ್ಜಾಲಕ್ಕೆನೇ ಹೊಸೊಬ್ಬನಾಗಿರೋದ್ರಿಂದ ಇದ್ರ ಬಗ್ಗೆ ಅಷ್ಟೇನು ತಿಳಿದಿಲ್ಲ. ಆದ್ರೂ ನಿಮ್ಮ ಬ್ಲಾಗನ್ನು ಪದೇ ಪದೇ ಕಣ್ಣಾಯಿಸುತ್ತಿರುತ್ತೇನೆ. ತುಂಬಾ ಚೆನ್ನಾಗಿ ಮೂಡಿಬರುತಿದೆ. ಹೀಗೆಯೇ ಮುಂದೆ ಸಾಗಲಿ ಎಂದು ಆಶಿಸುತ್ತೇನೆ. ಧನ್ಯವಾದಗಳು.

    -> ನಿಮ್ಮ ಪ್ರೀತಿಯ ಗೆಳೆಯ ಪ್ರವೀಣ್ ಚಂದ್ರ ಬರಾಯ ಕನ್ಯಾಡಿ.

    ReplyDelete
  40. ಕಥೆ ಕುತೂಹಲಕರವಾಗಿದೆ. ಮು೦ದುವರಿಸದೆ ಏಕಿಷ್ಟು ನಿಧಾನಿಸಿದಿರಿ? ನೀವು ನನ್ನ ಬ್ಲಾಗ್ ಗೆ ಬ೦ದು ಬಹಳ ದಿನಗಳಾದವು. ಬಿಡುವು ಮಾಡಿಕೊ೦ಡು ಒಮ್ಮೆ ಭೇಟಿ ನೀಡಿ.

    ReplyDelete
  41. ಸಂಸಾರದಲ್ಲಿ ಹೆಚ್ಚಾಗಿ/ಪೂರ್ತಿ ಯಾಗಿ ಹಂಚಿಕೊಂಡಷ್ಟು ಅನುಮಾನ, ಮನಸ್ತಾಪ ಕಡಿಮೆ. ಜೀವನ ಸುಖಮಯವಾಗಿರುತ್ತದೆ. ಇದು ನನ್ನ ಅನಿಸಿಕೆ .ನೀವ್ ಏನ್ ಹೇಳ್ತಿರ ಸರ್?

    ReplyDelete
  42. ಕಥೆಯ ಹಂದರ ಬಹಳ ಸೊಗಸಾಗಿದೆ. ನೈಜತೆ ಇದೆ ಕಥೆಯಲ್ಲಿ. ಒಬ್ಬ ಪ್ರಾಮಾಣಿಕನ ಅಸಹಾಯಕತೆ ಬಹಿರಂಗವಾದಂತಿದೆ.

    ReplyDelete
  43. ಕಥೆಯ ಹಂದರ ಬಹಳ ಸೊಗಸಾಗಿದೆ. ನೈಜತೆ ಇದೆ ಕಥೆಯಲ್ಲಿ. ಒಬ್ಬ ಪ್ರಾಮಾಣಿಕನ ಅಸಹಾಯಕತೆ ಬಹಿರಂಗವಾದಂತಿದೆ.

    ReplyDelete