Nov 27, 2011

ಎಂಥಾ ಪಜೀತಿಯಯ್ಯಾ......!!!ಸುಮ್ಮನೆ ನಿಂತಾಗ, ಸುಮ್ ಸುಮ್ನೆ ಕುಳಿತಾಗ..
ಎಕ್ಶಿಲರೇಟರ್ ಮೇಲೆ ಕೈಯಿದ್ದಾಗ....
ಟ್ರಾಫಿಕ್ ನಲ್ಲಿ ನಿಲ್ಲಿಸಿದ್ದಾಗ...
ಪೋಲಿಸಿಗೆ ದುಡ್ಡು ಕೊಡುತ್ತಿದ್ದಾಗ, 
ಬಾಸ್ ಹತ್ತಿರ ಬೈಸಿಕೊಳ್ಳುತ್ತಿದ್ದಾಗ...
ಹುಟ್ಟಿ ಬರತ್ತೆ ಕತ್ತೆ ಕವಿತೆ......


ಅವಳ ನೆನಪು ಮತ್ತೆ ಮತ್ತೆ ಮತ್ತೇರಿದಾಗ.
ಇವಳ ಇಹದಲ್ಲಿ ಭೂತವನ್ನು ಮರೆತಾಗ.....
ಲೇಟಾಗಿ ಎದ್ದು ಗಡಿಬಿಡಿಯ ಸ್ನಾನದಲ್ಲಿ...
ತೊಳೆಯದೇ ಇದ್ದ  ಸಾಕ್ಸ್ ವಾಸನೆಯಲ್ಲಿ...
ಸ್ಟಾರ್ಟ್ ಆಗದೇ ಕೈ ಕೊಡುವ ಬೈಕಲ್ಲಿ....
ಹಾಳಾದ್ದು ಆಗ್ಲೇ ಹೊಳೆಯತ್ತೆ ಕವಿತೆ......


ಇಸ್ತ್ರಿ ಪೆಟ್ಟಿಗೆ ಬಿಸಿಯೇರಿದಾಗ....
ಇಂಟರ್ನೆಟ್ಟಿನ ದುಡ್ಡು ಕಟ್ಟದಿದ್ದಾಗ...
ಸಕ್ಕರೆ ನಿದ್ದೆಯ ಕನಸಿನಲ್ಲಿ...
ಉರಿಯುತ್ತಿರುವ ಮೊಂಬತ್ತಿಯ ಕೊನೆಯ ಗುಟುಕಿನಲ್ಲಿ....
ಸಿಗರೇಟಿನ ಕೊನೆಯ ಪಫ್ ನ ಕಿಕ್ಕಿನಲ್ಲಿ....
ಕೈ ತುದಿಗೇ ಬರತ್ತೆ ಕಳ್ಳ ಕವಿತೆ.....

21 comments:

 1. ದಿನಕರ್;ಬಹಳ ದಿನಗಳ ಮೇಲೆ ನಿಮ್ಮ ಬರಹ.ಅದೂ ಕವಿತೆ!ನಿಮ್ಮ ಕವಿತೆಗೆ ಏನೆಲ್ಲಾ ಸ್ಫೂರ್ತಿ!ಹೀಗೂ ಕವಿತೆ ಬರಬಹುದೇ!ಹೊಸ ರೀತಿಯ ಕವಿತೆ. ಚೆನ್ನಾಗಿದೆ.ಅಭಿನಂದನೆಗಳು.

  ReplyDelete
 2. ಒಳಸೇರಿದ ಪಟ್ಟೆ ಪಟ್ಟೆ ಚಡ್ಡಿಯ ಲಾಡಿಯನ್ನು
  ಹೊರಗೆ ತರಲು ಪ್ರಯತ್ನಿಸುವಾಗ
  ಬಸ್ಸಿಗೆ ತಡವಾಯ್ತೆಂದು ಧುತ್ತನೇ ಓಡುವಾಗ
  ಕೈಲಿರುವ ಮೊಬೈಲಿನಲ್ಲಿ ಬೇಡದವರ ಜೊತೆ
  ಔಪಚಾರಿಕವಾಗಿ ಮಾತನಾಡುತ್ತಿರುವಾಗ
  ತೆಂಡೂಲ್ಕರ್ ಸೆಂಚುರಿ ಬಾರಿಸುವ ಗುಂಗಿನಲ್ಲಿ
  ಗಡಿಬಿಡಿಯಲ್ಲೂ ಟೈಲೆಟ್‍ಗೆ ಹೋಗಿ ಕುಳಿತಾಗ
  ಆಗಲೇ ಬರುತ್ತೆ ಮಜಮಜಾ ಕವಿತೆ !

  ಮಜವಾಗಿದೆ, ಶುಭಮಸ್ತು.

  ReplyDelete
 3. ಡಾಕ್ರ್ಟೇ..
  ಧನ್ಯವಾದ.... ಹೌದು ತುಂಬಾ ದಿನದ ನಂತರದ ಪಜೀತಿ ಇದು.....

  ReplyDelete
 4. ಭಟ್ ಸರ್,
  ನನ್ನ ಈ ಚಿಕ್ಕ ಕವನವೆಂಬ ಗೀಚುವಿಕೆಗಿಂತ ಇನ್ನೂ ಮುಂದೆ ನಿಮ್ಮ ಹಾಗೆ ಪ್ರತಿಕ್ರೀಯೆಯಲ್ಲಿಯೇ ಕವನ ಬರೆಯುವುದನ್ನು ನೆನೆದು ಖುಶಿಯಾಗಿದೆ...
  ಧನ್ಯವಾದ ನಿಮ್ಮ ಪ್ರತಿಕ್ರೀಯೆಗೆ....

  ReplyDelete
 5. ಕವಿತೆ ಹುಟ್ಟಿದ ಬಗೆ ನಿಜಕ್ಕೂ ಅಮೋಘ..:))

  ReplyDelete
 6. ದಿನಕರ್ ಸರ್,
  ಏನು ಬಹಳ ದಿನಗಳ ನಂತರ ಕವಿತೆ ಎಲ್ಲೆಲ್ಲೋ ಹೊಳೆಯುತ್ತೆ ಹಹಹಹ ಚೆನ್ನಾಗಿದೆ ಸರ್ ಕವನ

  ReplyDelete
 7. ದಿನಕರ,
  ಈ ಕವಿತೆ ನಿಮ್ಮ ಜೀವನದ ಒಂದು ಭಾಗವೇ ಆಗಿದೆ. ಹಾಗೆಂದೇ ಇಷ್ಟು ಸಲೀಸಾಗಿ, ಸುಂದರವಾಗಿ ನಿಮ್ಮಿಂದ ಹೊರ ಬರುತ್ತದೆ.

  ReplyDelete
 8. ಕವಿತೆಯ ಹುಟ್ಟೇ ವಿಚಿತ್ರ ಆದರೂ ಅದು ಹುಟ್ಟಿದ ಬಳಿದ ಅದರ ಸೊಗಸು ಅಗಾಧ ಅಲ್ಲವೆ ? ಕವತೆ ಉತ್ತಮವಾಗಿದೆ ಧನ್ಯವಾದಗಳು ಸರ್......

  ReplyDelete
 9. ಪಜೀತಿಯಲ್ಲಿ ಹುಟ್ಟಿದ ಕವಿತೆಗಳೇ ಮಸ್ತ್ ದಿವಾಕರ್! ಇದು ಹಾಗೆ ಹುಟ್ಟಿದ ಕವಿತೇನ? ಚೆನ್ನಾಗಿದೆ!

  ReplyDelete
 10. ದಿನಕರ್ ಪಜೀತಿ ಕವಿತೆಗಳೇ ಅಷ್ಟು, ಪಜೀತಿ ಮಾಡಿಕೊಂಡೆ ಬಂದು ಮಿಂಚುತ್ತವೆ.ನಿಮ್ಮ ee ಪಜೀತಿ ಕವಿತೆ ಮಿಂಚುತಿದೆ ಗುಡ್ ಗುಡ್ ಗುಡ್

  ReplyDelete
 11. ದಿನಕರ್..

  ಯೋಗರಾಜ್ ಭಟ್ತಿಗೆ ಕವಿತೆ ಬರೆದು ಕೊಡಬಹುದು ನೋಡ್ರಿ..

  ಈ ಕವಿತೆಗಳೇ ಹಾಗೆ ಎಲ್ಲಾದ್ರೂ ಹುಟ್ಟಿಕೊಳ್ಳುತ್ವೆ..

  ಬಾತ್ ರೂಮಿನಲ್ಲಿ ಸೋಪು ಹಚ್ಕೊಂಡು ನೀರು ಖಾಲಿ ಆದಾಗಾ....
  ಕಣ್ಣಿಗೆ ಸೋಪು ಹೋಗುವ ಮೊದಲು..

  ಮಡದಿ ತವರು ಮನೆಯಿಂದ ಅನಿರೀಕ್ಷತವಾಗಿ ಬರುವ ಮುನ್ನ..
  ಅಸಂಖ್ಯಾತ ಪ್ರೀತಿ ಉಕ್ಕಿ ಹರಿಯುವ ಹಾಗೆ..

  ಎಲ್ಲಾದ್ರೂ ಹುಟ್ಟಿಕೊಳ್ಳುತ್ವೆ ಈ ಹಾಳು ಕವಿತೆಗಳು..!

  ಒಂದು ಹೊಸ ಮೂಡಿಗೆ ಕಳಿಸಿದ್ದಕ್ಕಾಗಿ..
  ಚಂದದ ಸಾಲುಗಳಿಗಾಗಿ ಧನ್ಯವಾದಗಳು..

  ReplyDelete
 12. ಹೊಸ ತರದ ಹೊಸ ನಿರೂಪಣಾ ಶೈಲಿಯ ಕವಿತೆ. ಕವಿತೆಯ ಹುಟ್ಟಿನ ಅಚಾನಕತೆಯನ್ನು ಚೆನ್ನಾಗಿ ಒಕ್ಕಣಿಸಿದ್ದೀರ ಪ್ರಿಯ ಮೊಗೆರ.

  ತುಸು ತಡವಾಗಿ ಓದಿದ ಬೇಸರ ನನಗಿದೆ.

  (ವಿನಂತಿ : ನಾವು ಕವಿಗಳು ಕವಿತೆಯನ್ನು ಹೇಗೆ ಗರ್ಭಧರಿಸುತ್ತೇವೆ, ಅಂತ ಇಷ್ಟು ಸಲೀಸಾಗಿ ಗುಟ್ಟು ಬಿಟ್ಟು ಕೊಡಬಾರದು ಗೆಳೆಯ! ;-) :-D )

  ReplyDelete
 13. ಇಲ್ಲಿ... ಅಲ್ಲಿ... ಹೀಗೆ....ಹಾಗೆ....
  ಧುತ್ತೆಂದು ಎದ್ದು ನಿಲ್ಲುವ
  ತದಕಾಟದ...ತೊಳಲಾಟದ....
  ಮೂಸೆಯಲ್ಲಿ... ಮೂಡಿದ....
  ತುಸು ಹಸಿ... ತುಸು ಬಿಸಿಯ...ಕವನ...
  ಕಾಗದ ಲೇಖನ ಹಿಡಿಯೇ...
  ಹೊರ ಬರದೆ.. ಮರಳಳಲ್ಲಿ ಚೆಲ್ಲಿದ ನೀರ ಹಾಗೆ..ಮಾಯವಾಗುವದು.... ಕಳ್ಳ ಕಾಮಿ ಕವನ...
  ಚೆನ್ನಾಗಿದೆ...ನಿಮ್ಮದು ಕವನ ಹುಟ್ಟುವ ಸಮಯ... ನನ್ನದು ಕವನ ಸಾಯುವ ಸಮಯ...

  ReplyDelete
 14. ದಿನಕರ್ ಸರ್,

  ಕವಿತೆ ಹೀಗೂ ಹುಟ್ಟುತ್ತಾ...ನನಗೆ ಗೊತ್ತಿರಲಿಲ್ಲ. ನನಗಂತೂ ಅದು ಹುಟ್ಟುವ ಸಮಯವೇ ಗೊತ್ತಾಗುವುದಿಲ್ಲ.

  ReplyDelete
 15. Karanaantaragalinda Blog ge bheti kodlu aagilla..Kshame irali....

  ಅವಳ ನೆನಪು ಮತ್ತೆ ಮತ್ತೆ ಮತ್ತೇರಿದಾಗ.
  ಇವಳ ಇಹದಲ್ಲಿ ಭೂತವನ್ನು ಮರೆತಾಗ.....
  ಲೇಟಾಗಿ ಎದ್ದು ಗಡಿಬಿಡಿಯ ಸ್ನಾನದಲ್ಲಿ...
  ತೊಳೆಯದೇ ಇದ್ದ ಸಾಕ್ಸ್ ವಾಸನೆಯಲ್ಲಿ...
  ಸ್ಟಾರ್ಟ್ ಆಗದೇ ಕೈ ಕೊಡುವ ಬೈಕಲ್ಲಿ....
  ಹಾಳಾದ್ದು ಆಗ್ಲೇ ಹೊಳೆಯತ್ತೆ ಕವಿತೆ......
  ..............SUPERBBBBBBB.....

  Happy New Year Sir....

  ReplyDelete
 16. ಎಂಥೆಂತಾ ಸನ್ನಿವೇಷಗಳಲ್ಲಿ ನಿಮಗೆ ಕವಿತೆ ಹೊಳೆಯುತ್ತೆ ಅನ್ನುವುದರ ಬಗ್ಗೆ ಒಳ್ಳೆ ಕವಿತೆ ಬರೆದೇ ತಿಳಿಸಿದ್ದೀರಿ.. ಚೆನ್ನಾಗಿದೆ!! ನಿಮ್ಮ ಕಥೆಗಳು ಇನ್ನೂ ಚೆನ್ನಾಗಿರುತ್ತದೆ.. ಯಾವ ಯಾವ ಸನ್ನಿವೇಶಗಳಲ್ಲಿ ನಿಮಗೆ ಕಥೆಗಳು ಹೊಳೆಯುತ್ತವೆ ಎಂಬುದರ ಬಗ್ಗೆಯೂ ಒಂದು ಕವನ ಬರೆಯಿರಿ ಸಾರ್...

  ReplyDelete
 17. ವಾವ್ವ ವಾವ್ವ...ಮಸ್ತಾಗಿದೆ ಕವಿತೆ...

  ReplyDelete
 18. ಹೌದು ದಿನಕರ್ ರವರೆ ಅಂತ ವೇಳೆಯಲ್ಲೇ ಹುಟ್ಟುತ್ತೆ ಕವಿತೆ.
  ಆದರೆ ಕೈಯಲ್ಲಿ ಪೆನ್ನು ಪೇಪರ್ ಮಾತ್ರ ಇರಲ್ಲ ಅಷ್ಟೇ.
  ತುಂಬಾ ಚೆನ್ನಾಗಿದೆ ಕವಿತೆ..ಮತ್ತು ಕವಿತೆ ಹುಟ್ಟುವ ವೇಳೆ...

  ReplyDelete
 19. ಚೆನ್ನಾಗಿದೆ..
  ಒಂದ್ಸಾರಿ ನಮ್ ಬ್ಲಾಗ್ ಕಡೆಗೂ ಇಣುಕಿ..
  http://ravindratalkies.blogspot.in/

  ReplyDelete