Aug 4, 2010

ಯಾರವರು........?

ಹಸಿರಂತೆ ಪ್ರೇಮ ಕಥೆಗಳು,
ಯಾರವರು ಬಣ್ಣ ಕೆಡಿಸುವವರು.....?
ಕನಸಿನ ಚಿತ್ರ ಬಿಡಿಸಲು ಹೇಳಿ,
ಯಾರವರು ಕುಂಚ ಕಸಿಯುವವರು....?

ಅಮರವಂತೆ ಪ್ರೇಮಿ ಮನಸು,
ಯಾರದು ಕಾರಣ ಹೇಳದೆ ಹೊರಟವರು...?
ಗಟ್ಟಿಯಂತೆ ಪ್ರೇಮಬಂಧ,
ಯಾರವರು ಜಾಣರಂತೆ ಜಾರಿಕೊಂಡವರು..?

ಬಚ್ಚಿಡುತ್ತಾರಂತೆ ಪ್ರೀತಿ ಎದೆಯಲಿ,
ಯಾರವರು ರೆಕ್ಕೆ ಬಿಚ್ಚಿ ಹಾರಿದವರು....?
ಬಿಚ್ಚಲಾರದಂತೆ ಮನದ ಅನುಭಂದ,
ಯಾರವರು ಬದುಕಿಗೆ ಕಿಚ್ಚಿಡುವವರು..?

ರಾಗವಂತೆ ಮಧುರ ಪ್ರೀತಿ,
ಯಾರವರು ತಂತಿ ಕಡಿಯುವವರು.....?
 ದಾರಿಯಂತೆ ಪ್ರೇಮ ಜ್ಯೋತಿ ,
ಯಾರವರು ದೀಪ ಆರಿಸಿದವರು...? 

57 comments:

  1. ಶೂನ್ಯದಲ್ಲಿಯ ಹುಡುಕಾಟ !. ಕವನದ ಅಂತರಾಳ ಚೆನ್ನಾಗಿದೆ.

    ReplyDelete
  2. ಯಾರು ಅಂತ ತಿಳಿಯಲಿಲ್ಲ....
    ಕವನ ಸೊಗಸಾಗಿದೆ....

    ReplyDelete
  3. This comment has been removed by the author.

    ReplyDelete
  4. ಪ್ರೇಮಕತೆಗಳು ಸದಾ ಹಸಿರು...ಬಣ್ಣ ಕೆಡಿಸಲು ಬಂದವರಾರು?

    ದಿನಕರ್ ಸರ್, ನಿಜಕ್ಕೂ ಎಂಥವ ಪದ ಮತ್ತು ಅರ್ಥದ ಪ್ರಯೋಗ...ಇಡೀ ಕವನವೇ ಪದಗಳ ಪ್ರಯೋಗದಿಂದ ಸಿಂಗಾರಗೊಂಡಿದೆ.

    ReplyDelete
  5. ದಿನಕರ್ ಸರ್;ನಿಜಕ್ಕೂ ಉತ್ತಮ ಕವನ!ಇನ್ನಷ್ಟು ಕವನಗಳು ನಿಮ್ಮ ಲೇಖನಿಯಿಂದ ಹರಿದು ಬರುತ್ತಿರಲಿ.ಧನ್ಯವಾದಗಳು.

    ReplyDelete
  6. ಯಾರವರು ?ಯಾರವರು ? ಈ ಪ್ರಶ್ನೆಗೆ ಉತ್ತರ ಕೊಡುವರು ಯಾರು ?
    ತುಂಬಾ ಚಂದದ ಕವನ... :-)

    ReplyDelete
  7. ದಿನಕರ..

    ತುಂಬ ಸುಂದರ ಕವನ...!
    ಉತ್ತರ ಗೊತ್ತಿದ್ದೂ..
    ಬೇಸರ ತೋಡಿಕೊಳ್ಳುವ ಪರಿ ಇಷ್ಟವಾಯಿತು..

    ReplyDelete
  8. ಸುಬ್ರಮಣ್ಯ ಸರ್,
    ಕಣ್ಣೆದುರಿದ್ದೂ ಹುಡುಕಾಟ ಸರ್.... ಧನ್ಯವಾದ ಸರ್....

    ReplyDelete
  9. ಮಹೇಶ್ ಸರ್,
    ನನಗೂ ಗೊತ್ತಿಲ್ಲ ಸರ್.... ಸುಮ್ಮ ಸುಮ್ಮನೆ ಪಿಳ್ಳೆ ನೆವ ಹೇಳಿ ಒಳ್ಳೆ ಸಂಬಧ ತುಂಡರಿಸುವವರ ಬಗ್ಗೆ ತುಂಬಾ ಕನಿಕರ ಇದೆ ಸರ್... ಅದಕ್ಕೆ ಈ ಕವನ....ಧನ್ಯವಾದ ನಿಮ್ಮ ಅನಿಸಿಕೆಗೆ...

    ReplyDelete
  10. ಶಿವೂ ಸರ್...
    ನಾನೂ ಒಪ್ಪುತ್ತೇನೆ ಪ್ರೇಮ ಕಥೆ ಸದಾ ಹಸಿರು.... ಆದರೂ ಬಣ್ಣ ಕೆಡಿಸಿಕೊಂಡು ಓಡಾಡುವವರ ಬಗ್ಗೆ ಬರೆದೆ..... ತಪ್ಪು ಇಬ್ಬರ ಕಡೆಗೂ ಇರತ್ತೆ..... ಉತ್ತರ ತಿಳಿಯದೆ ಕವನ ಬರೆದೆ.... ಧನ್ಯವಾದ ಸರ್.....

    ReplyDelete
  11. ವಿಜಯಶ್ರೀ ಮೇಡಂ,
    ತುಂಬಾ ಥ್ಯಾಂಕ್ಸ್..... ನಿಮ್ಮ ಮೆಚ್ಚುಗೆಗೆ.... ಹೀಗೆ ಇರಲಿ ನಿಮ್ಮ ಪ್ರೋತ್ಸ್ಹಾಹ....

    ReplyDelete
  12. ಪ್ರಗತಿ ಮೇಡಂ,
    ಧನ್ಯವಾದ......ನಿಮ್ಮ ಮೆಚ್ಚುಗೆಗೆ....

    ReplyDelete
  13. ಡಾ. ಮೂರ್ತಿ ಸರ್,
    ಧನ್ಯವಾದ ಸರ್... ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.... ಈ ಮಾತುಗಳೇ ನನ್ನನ್ನು ಮುಂದುವರಿಯಲು ದಾರಿದೀಪ....

    ReplyDelete
  14. ದಿವ್ಯಾ...
    ಯಾರವರು... ಉತ್ತರ ಗೊತ್ತಿಲ್ಲ.... ಹುಡುಗನನ್ನ ಕೇಳಿದ್ರೆ... 'ಹುಡುಗಿ' ಅಂತಾನೆ....... ಹುಡುಗಿನ ಕೇಳಿದ್ರೆ ' ಹುಡುಗ ' ಅಂತಾಳೆ..... ನಿಷ್ಕಲ್ಮಶ ಪ್ರೀತಿ, ಅಪೇಕ್ಷೆರಹಿತ ಪ್ರೀತಿ ಗಟ್ಟಿಯಾಗಿ ನಿಲ್ಲತ್ತೆ...... ಉಳಿದದ್ದು ಜಾರಿ ಹೋಗತ್ತೆ..... ಬಾಳು ಹಾಳು ಮಾಡಿಕೊಂಡು ಕೊರಗುವವರನ್ನು ನೋಡಿ ಬರೆದೆ..... ಧನ್ಯವಾದ ನಿಮ್ಮ ಅನಿಸಿಕೆಗೆ...

    ReplyDelete
  15. ಪ್ರಕಾಶಣ್ಣ,
    ಉತ್ತರ ಗೊತ್ತಿದೆ.... ಒಂದು ಕಡೆಯಿಂದ ಯೋಚಿಸಿದರೆ ಹುಡುಗಿ ತಪ್ಪಿದೆ ಅನಿಸತ್ತೆ..... ಇನ್ನೊಂದು ಕಡೆ ನಿಂತು ಯೋಚಿಸಿದರೆ ಹುಡುಗ ದುಡುಕಿದ್ದಾನೆ ಅನಿಸತ್ತೆ.... ಎಲ್ಲರಿಗೂ ಉತ್ತರ ತಿಳಿದಿರತ್ತೆ ಆದ್ರೆ ಅವರು ಯೋಚಿಸೋದು, ತಮ್ಮ ಮೂಗಿನ ನೇರಕ್ಕೆ.... ಧನ್ಯವಾದ ಅಣ್ಣ ನಿಮ್ಮ ಅನಿಸಿಕೆ ಮತ್ತುಪ್ರೋತ್ಸಾಹಕ್ಕೆ...

    ReplyDelete
  16. ಬಹಳ ಸರಳ ಮತ್ತು ಅರ್ಥಪೂರ್ಣವಾದ ಸುಂದರ ಕವನ

    ReplyDelete
  17. Yaaradu tereya hinde :)...hahaha...chanadada kavana..!!!

    ReplyDelete
  18. saagari ,
    dhanyavaada nimma anisike mattu mecchugege....

    ReplyDelete
  19. vinay sir,
    tereya hinde ellaroo iddaare..... hh hhaa hhaa.. thank you...

    ReplyDelete
  20. ದಿನಕರ,
    ತುಂಬ ಭಾವಪೂರ್ಣ ಕವನ.

    ReplyDelete
  21. ಅರ್ಥಪೂರ್ಣ ಸಾಲುಗಳು..:)

    ReplyDelete
  22. ಪ್ರತಿಯೊಬ್ಬರೂ ಬದುಕಲ್ಲಿ ಈ ಘಟ್ಟ ದಾಟದೆ ನಡಿಗೆ ಸಾಗೋದೇ ಇಲ್ಲವೇನೊ.. ಆಪ್ತವಾಗುವ,ಮನ ಭಾರವಾಗಿಸುವ ಕವನ.

    ReplyDelete
  23. ಸೊಗಸಾದ ಪ್ರೇಮ ಕವನ..ಯಾರು ಯಾರು ಅಂತ ಹೇಳೇ ಇಲ್ಲ .

    ReplyDelete
  24. ಮನಸು ಮೇಡಂ,
    ತುಂಬಾ ತುಂಬಾ ಧನ್ಯವಾದ ನಿಮ್ಮ ಮೆಚ್ಚುಗೆಗೆ....

    ReplyDelete
  25. ಸುನಾಥ್ ಸರ್.
    ತುಂಬಾ ಧನ್ಯವಾದ ನಿಮ್ಮ ಮೆಚ್ಚುಗೆಯ ಮಾತುಗಳಿಗೆ...

    ReplyDelete
  26. ವನಿತಾ ,
    ಥ್ಯಾಂಕ್ ಯು.... ಥ್ಯಾಂಕ್ ಯು...

    ReplyDelete
  27. ಶ್ರವಣ ಸರ್,
    ನಿಮ್ಮ ಮೆಚ್ಚುಗೆಗೆ ಧನ್ಯವಾದ... ಹೀಗೆ ಬರುತ್ತಾ ಇರಿ.....

    ReplyDelete
  28. ಜಯಲಕ್ಷ್ಮಿ ಮೇಡಂ,
    ಇರಬಹುದು.... ಮನಸ್ಸಿದ್ದವರು ಮಂಡಿಗೆ ಮೆಲ್ಲುತ್ತಾರೆ.... ಹಾಗಾಗಿ ಇದೆಲ್ಲಾ ನಡೆಯತ್ತೆ..... ಬದುಕಲ್ಲಿ ಇದೆಲ್ಲಾ ಇದ್ದರೆ ಮಾತ್ರ ಸುಖ ದುಖ, ನೋವು ನಲಿವಿನ ಅಂತರ ಗೊತ್ತಾಗೋದು..... ಧನ್ಯವಾದ ನನ್ನ ಕವನ ನಿಮ್ಮ ಮನಸ್ಸಿಗೆ ತಾಗಿ , ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ....

    ReplyDelete
  29. ಶಶಿ ಮೇಡಂ....
    ಯಾರು ಅಂತ ನನಗೂ ತಿಳಿದಿಲ್ಲ.... ಮನಸ್ಸಲ್ಲಿ ಮಂಡಿಗೆ ಸವಿದ ಎಲ್ಲರೂ ಇರಬಹುದು....... ಇಷ್ಟಪಟ್ಟು ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದ....

    ReplyDelete
  30. Chenaagide, really enjoyed your feelings, thanks

    ReplyDelete
  31. ಉತ್ತರ ಇಲ್ಲದ ಪ್ರಶ್ನೆಗಳಿಗೆ.. ಉತ್ತರ ಕೇಳುತ್ತಿದ್ದೀರಿ..

    ReplyDelete
  32. bhat sir,
    tumbaa tumbaa dhanyavaada.... nimma protshaaha heege irali....

    ReplyDelete
  33. kattala mane,
    dhanyavaada...... uttara kandukoLLodu kasha aadre asaadya allaa.......

    ReplyDelete
  34. ಹೌದು, ಯಾರು ಅಂತ ಗೊತ್ತಾಗ್ಲಿಲ್ಲ.........!
    ಕವನ ತುಂಬಾ ಚನ್ನಾಗಿದೆ.

    ReplyDelete
  35. ನಿಜ,
    ಸೋನೆಯ ಮಳೆಯ ಅನುಭೂತಿ ಈ ಪ್ರೀತಿ.....
    ಸೊಗಸಾಗಿದೆ.

    ReplyDelete
  36. ಉತ್ತಮ ಪ್ರಶ್ನಾರ್ಥಕ ಕವನ. ಧನ್ಯವಾದಗಳು. ನೀವು ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ನೀಡಿ.

    ReplyDelete
  37. ಚೆಂದದ ಪ್ರಶ್ನಾಗವನ. ಬರೆಯುತ್ತಿರಿ.

    ReplyDelete
  38. ಪ್ರವೀಣ್,
    ಧನ್ಯವಾದ ನಿಮ್ಮ ಮೆಚ್ಚುಗೆಗೆ .... ಯಾರು , ಯಾರಿಗೆ ಹೇಳಿದ್ದು ನನಗೂ ಗೊತ್ತಿಲ್ಲ......

    ReplyDelete
  39. ಪ್ರಭಾಮಣಿ ಮೇಡಂ....
    ತುಂಬಾ ಧನ್ಯವಾದ ನಿಮ್ಮ ಮೆಚ್ಚುಗೆಗೆ.... ಸ್ವಾಗತ ನನ್ನ ಬ್ಲಾಗ್ ಗೆ.... ಹೀಗೆ ಬರುತ್ತಾ ಇರಿ.....

    ReplyDelete
  40. ಸೀತಾರಾಂ ಸರ್,
    ತುಂಬಾ ತುಂಬಾ ತುಂಬಾ ಧನ್ಯವಾದ....

    ReplyDelete
  41. ಅ೦ತರಾಳದ ಹುಡುಕಾಟ, ಸು೦ದರ ಸಾಲುಗಳಲ್ಲಿ ನಿರೂಪಿಸಿದ್ದೀರಿ ದಿನಕರ್. ಉತ್ತಮ ಕವನ.

    ಶುಭಾಶಯಗಳು
    ಅನ೦ತ್

    ReplyDelete
  42. anantraaj sir,
    nimma mecchugeya maatugalige nanna tumbaa tumbaa dhanyavaada.....

    ReplyDelete
  43. ದಿನಕರ್ ಸರ್ ,
    ಪ್ರೀತಿಸೋ ಮನಸಿಗೆ ನೋವು ಉಣಿಸುವವರು ಇದ್ದೆ ಇರ್ತಾರೆ ಮು೦ದ್ವರಿಸಿ ಬಿಡಬೇಡಿ..:)
    ಮಾಡೋ ಕೆಲಸಗಳಿಗೆ ಅಡ್ಡಿಗಳು ಇದ್ದೇ ಇರತ್ತೆ ಮು೦ದ್ವರಿಸಿ ಬಿಡಬೇಡಿ..
    ಚಂದದ ಕವನ ಇಷ್ಟವಾಯ್ತು ಸರ್ :)

    ReplyDelete
  44. ರಂಜಿತಾ ಮೇಡಂ,
    ಪ್ರೇಮದ ಹಿಂದೆ ಬಿದ್ದು, ಫೈಲ್ ಆಗಿರೋರನ್ನ ನೋಡಿ ಬರೆದೆ...... ಇದು ನನ್ನ ಅನುಭವ ಅಲ್ಲ... ಧನ್ಯವಾದ ನಿಮ್ಮ ಅನಿಸಿಕೆ, ಮೆಚ್ಚುಗೆಗೆ....

    ReplyDelete
  45. ದಿನಕರ ಸರ್,

    ಕವನದಲ್ಲಿನ ಪದಗಳ ಬಳಕೆ ತುಂಬಾ ಹಿಡಿಸಿತು,,,ತುಂಬಾ ಸುಂದರ ಅರ್ಥಪೂರ್ಣ ಕವನ...ಧನ್ಯವಾದಗಳು...

    ReplyDelete
  46. ashok sir..
    tumbaa thanks... mecchi comment haakiddakke....

    ReplyDelete
  47. ದಿನಕರ್ ನಿಮ್ಮ ಈ ಲೇಖನಕ್ಕೆ ನನ್ನ ಪ್ರತಿಕ್ರಿಯೆ ಹೇಗೆ ಮಿಸ್ ಆಯಿತು...ಬಿಡಿ...
    ಇದೇ ಅಲ್ಲವೇ ವಿಪರ್ಯಾಸ....ಸಾಧ್ಯತೆಗಳ ಕವಿತೆ ಪದಗಳ ಮೋಡಿ ಹಾಕುವವರುಂಟು..ಯಾರದು ಕಾಮೆಂಟ್ ಹಾಕದೇ ಹೋದವರು....
    ಹಹಹಹ ಚನ್ನಾಗಿದೆ...ಹೌದು..ಸಾಧ್ಯ ಎನ್ನುವುದನ್ನು ಅಡ್ಡ ಪಡಿಸುವವರು ಇರುತ್ತಾರೆ ಆದರೆ ...ಮುನ್ನುಗ್ಗುವುದೇ ಛಲಗಾರನ ಲಕ್ಷಣ...

    ReplyDelete
  48. thank you sir..... thank you very much..... nimma comment nange bahaLa mukhya....

    ReplyDelete
  49. ದಿನಕರ್ ಅವರೇ ತುಂಬಾ ಚೆನ್ನಾಗಿದೆ ಅದರಲ್ಲೂ ಮೊದಲನೇ ಪ್ಯಾರಾ ತುಂಬಾ ಇಷ್ಟವಾಯಿತು.

    ReplyDelete