Jul 22, 2010

ಮುಂಗಾರಿನ ನೆನಪು......!

ಮನದ ಮುಗಿಲು ಮೋಡ ಕಟ್ಟಿ,
ಗರಿಯ ಬಿಚ್ಚಿ ನೆಗೆಯುತಿದೆ.....
ತಂಪು ಗಾಳಿ ಎದೆಯ ಸೋಕಿ,
ತುಂತುರು ಮಳೆ ಸುರಿದಿದೆ......

ಎಲ್ಲಿಂದಲೋ ಬಂದ ಸುಳಿಯಗಾಳಿ,
ಕಹಿಯ ನೆನಪ ಕೆದಕಿದೆ.....
ಮಳೆಯ ಹನಿಯು ಭುವಿಯ ಸೇರಿ,
ಒಣಗಿದ ಗಾಯವ ನೆನೆಸಿದೆ.....

ಮಣ್ಣ ಮಧುರ ಪರಿಮಳ,
ಮನದ ಮೂಲೆ ತಲುಪಿದೆ,
ಮಂಜಿನ ಮಳೆಯ ಸಿಂಚನ,
ನೋವನೆಲ್ಲಾ ಮರೆಸಿದೆ.....

ನೆನೆದು ಹೋದ ನೆಲದ ಹಾಗೆ,
ನಿನ್ನ ನೆನಪ ನೆನೆಸಿದೆ.....
ಸುರಿದು ಹೋದ ಮಳೆಯು ,
ನೆನಪ ಹಸಿರು ಮಾಡಿದೆ....

64 comments:

 1. ನೆನೆದು ಹೋದ ನೆಲದ ಹಾಗೆ,
  ನಿನ್ನ ನೆನಪ ನೆನೆಸಿದೆ.....
  ee lines ishtaa aytu...

  ReplyDelete
 2. ದಿನಕರ್, ಯಾಕೋ ತುಂಬಾ ಮಲೆಯಲ್ಲಿ ನೆನೆದ ಹಾಗಿದೆ...ಅನುಭವ,,,ಹಹಹ...ನೆನೆದು ಹೋದ ನೆಲ ಉಕ್ಕುತಿರುವ ಜಲ...ಎಲ್ಲ ನಿಮ್ಮಲ್ಲಿ ಭಾವನೆಗಳನ್ನು ಹೊರತಂದಿವೆ ಎಂದರೆ ....ಮಳೆಗೂ ನಿಮ್ಮ ಪದಗಳಿಗೂ ಶುಕ್ರಿಯಾ ಹೇಳಲೇಬೇಕು.

  ReplyDelete
 3. ಮುಂಗಾರಿನ ನೆನಪು ..ತುಂಬಾ ಚೆನ್ನಾಗಿದೆ..ಈಗಷ್ಟೇ ಮುಂಗಾರಿನ ಮಳೆಯ ಸವಿಯನ್ನು ಅನುಭವಿಸಿ ಊರಿನಿಂದ ಬಂದೆ..ಪದ್ಯ ಓದಿ ಇನ್ನೂ ಖುಷಿಯಾಯ್ತು ..ಮೊದಲ ನಾಲ್ಕು ಸಾಲುಗಳು ತುಂಬಾ ಮನಸ್ಸಿಗೆ ಆನಂದ ಆಯಿತು.

  ReplyDelete
 4. ದಿನಕರ್ ಸರ್,

  ಇವತ್ತು ದಿನಪೂರ್ತಿ ಜಿಟಿಜಿಟಿ ಮಳೆಯಲ್ಲೇ ಓಡಾಡುತ್ತಿದ್ದೆ. ಜೊತೆಗೆ ತಣ್ಣನೇ ಗಾಳಿ ಬೇರೆ ಒಂಥರ ಸಕ್ಕತ್ ಅನುಭವ. ಇಲ್ಲಿ ನೋಡಿದರೆ ನೀವು ಕೂಡ ಮಳೆಯ ನೆನಪಿನ ಕವನವನ್ನೇ ಬರೆದಿದ್ದೀರಿ. ತುಂಬಾ ಚೆನ್ನಾಗಿದೆ. ಹೊರಗೆ ಅನುಭವಿಸಿದ್ದನ್ನು ಇಲ್ಲಿ ಓದುವುದು ಕೂಡ ವಿಭಿನ್ನ ಅನುಭವವೇ ಸರಿ...

  ReplyDelete
 5. ಸುರಿಯುತಿರುವ ಮಳೆಯ ಹನಿಗಳ ನೋಡುತ್ತಿದ್ದರೆ ಇನ್ನೆಲ್ಲೋ ಕಳೆದು ಹೋದ ಅನುಭವ...ಮನದ ಬಾಗಿಲ ತಟ್ಟಿ ಹೋದವರ ನೆನಪು... ಚೆನ್ನಾಗಿದೆ ನಿಮ್ಮ ಕವನ...

  ReplyDelete
 6. "ಸುರಿದು ಹೋದ ಮಳೆಯು ,
  ನೆನಪ ಹಸಿರು ಮಾಡಿದೆ...."
  -------
  ಚೆನ್ನಗಿದೆ ಸಾಲು.
  ಇಷ್ಟವಾಯಿತು ಸಾರ್.

  ReplyDelete
 7. ಮಳೆಯ ನೆನಪು ಸದಾ ಮಧುರವೇ! ಚಂದದ ಕವನ. ತುಂಬಾ ಅದ್ಭುತವಾಗಿ ಪ್ರಾಸದೊಂದಿಗೆ ಬರೆದಿದ್ದಿರಾ... ಮಳೆಯಲ್ಲಿ ನೆನೆದುಕೊಂಡು ಕುಣಿಯುತ್ತಾ ಹಾಡುವಂತಿದೆ.

  ReplyDelete
 8. ಮಳೆಗೆ ಮತ್ತು ನೆನಪಿಗೆ ಎಲ್ಲೊ ಏನೋ ಒಂದು ರೀತಿ ಹೊಂದಾಣಿಕೆ..
  ನೆನಪುಗನ್ನು ಕಲುಕುತ್ತೆ ಮಳೆ..
  ಚೆನ್ನಾಗಿದೆ ಸರ್..
  ನಿಮ್ಮವ,
  ರಾಘು.

  ReplyDelete
 9. tumba chennagide sir nimma nenapina kavana.... istavayitu

  ReplyDelete
 10. ದಿನಕರ್,

  ಚೆನ್ನಾಗಿದೆ ನಿಮ್ಮ ಮಳೆ ಕವನ. ಕೊನೆಯ ನಾಲ್ಕು ಸಾಲು


  (ನೆನೆದು ಹೋದ ನೆಲದ ಹಾಗೆ,
  ನಿನ್ನ ನೆನಪ ನೆನೆಸಿದೆ.....
  ಸುರಿದು ಹೋದ ಮಳೆಯು ,
  ನೆನಪ ಹಸಿರು ಮಾಡಿದೆ....)


  ಹಾಗೆ ಮನಸ್ಸಲ್ಲಿ ನಿಲ್ಲುತ್ತೆ :)

  ReplyDelete
 11. ಹಸಿರಾಗಿಸಿದ ಮಳೆ ಹನಿಯ ಕವನ ತುಂಬಾ ಚೆನ್ನಾಗಿದೆ ದಿನಕರ್ ಸರ್ .. .. ನಿಮ್ಮೆ ಕವನ ನೋಡಿ ನನಗೂ ಕೂಡ ನೆನಪಿಸೋ ಮಳೆ ಹನಿಯ ಮೇಲೆ ಕವನ ಬರೀಬೇಕು ಅಂತ ಅನ್ನಿಸಿಬಿಡ್ತು :) (ಮಳೆ ಬರಲಿ ಖಂಡಿ ತಕವನ ಬರೀತೀನಿ :D )

  ReplyDelete
 12. ಕವನ ಇಷ್ಟವಾಯಿತು.

  ReplyDelete
 13. ಭರ್ಜರಿ ಮಳೆಯಂತೆ ಕರಾವಳಿ ಮಲೆನಾಡಿನಲ್ಲೆಲ್ಲ. ತಮ್ಮ ನೆನಪೂ ಮಳೆಯಂತೆ ಅಪ್ಯಾಯಮಾನವೆನಿಸಿತು.

  ReplyDelete
 14. ದಿನಕರ್ ಸರ್,
  ಮಳೆಯ ತುಂತುರು ಹನಿಗಳು, ತಣ್ಣನೆಯ ಗಾಳಿ, ಬಾನಲ್ಲಿ ಹರಡಿದ ಕಾರ್ಮೋಡ...............
  ನೆನಪುಗಳನ್ನು ಎಳೆದೆಳೆದು ತರುತ್ತವೆ.........
  ಕವನ ಸುಂದರವಾಗಿದೆ........

  ReplyDelete
 15. ವಿಜಯಶ್ರೀ ಮೇಡಂ,
  ತುಂಬಾ ಧನ್ಯವಾದ..... ಇಷ್ಟಪಟ್ಟು ಕಾಮೆಂಟ್ ಮಾಡಿದ್ದಕ್ಕೆ....

  ReplyDelete
 16. ಆಜಾದ್ ಸರ್,
  ನಿಮ್ಮ ಮೆಚ್ಚುಗೆಗೆ ಧನ್ಯವಾದ..... ಇಲ್ಲಿ ತುಂಬಾ ಮಳೆ..... ಮಳೆಯಲ್ಲೇ ಹೋಗುತ್ತಿದ್ದಾಗ ಹೊಳೆದ ಸಾಲುಗಳನ್ನು ಇಲ್ಲಿ ಕೊರೆದಿದ್ದೇನೆ.....

  ReplyDelete
 17. ಶಶಿ ಮೇಡಂ,
  ಇಲ್ಲಿಯ ಮಳೆ ತುಂಬಾ ಜೋರಾಗಿ ಹೊಡೆಯುತ್ತಿದೆ...... ಕರಾವಳಿ ಮಳೆಗೆ ಎಲ್ಲವನ್ನೂ ಮರೆಯಿಸುವ, ಎಲ್ಲವನ್ನೂ ನೆನಪಿಸುವ ಶಕ್ತಿ ಇದೆ ಆಲ್ವಾ ಮೇಡಂ.... ಧನ್ಯವಾದ ನೀವು ಮೆಚ್ಚಿ ಕಾಮೆಂಟ್ ಮಾಡಿದ್ದಕ್ಕೆ....

  ReplyDelete
 18. ಶಿವೂ ಸರ್,
  ನನ್ನ ಅನುಭವವೂ ಇದೆ.... ಆದ್ರೆ ನಾನು ಮಳೆಯಲ್ಲಿ ನೆನೆದಿಲ್ಲ, ಕಾರಲ್ಲಿ ಹೋಗ್ತಾ ಇದ್ದೆ, ಮಳೆಯನ್ನೂ ನೆನಪಿಗೆ ಹೋಲಿಸಿ ಬರೆಯಲು ಪ್ರಯತ್ನ ಮಾಡಿದೆ......ಮೆಚ್ಚಿದ್ದಕ್ಕೆ ಧನ್ಯವಾದ.....

  ReplyDelete
 19. ಇಂದುಶ್ರೀ ಮೇಡಂ,
  ಕವನ ಮೆಚ್ಚಿ ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದ.... ಮನದ ಬಾಗಿಲು ತಟ್ಟಿದವರ ನೆನಪು ಬರಲು, ಒಳ್ಳೆಯ ಮಳೆಯನ್ನೂ ನೋಡುತ್ತಾ ಇದ್ದರೆ ಸಾಕು ಆಲ್ವಾ....

  ReplyDelete
 20. nimma kavite mungaaru maleya hanigalante hitavaagide.

  ReplyDelete
 21. ವೆಂಕಟಕೃಷ್ಣ ಸರ್,
  ತುಂಬಾ ಧನ್ಯವಾದ ನೀವು ಬಂದು ಓದಿ, ಮೆಚ್ಚಿ, ಕಾಮೆಂಟ್ ಮಾಡಿದ್ದಕ್ಕೆ..... ಹೀಗೆ ಬರ್ತಾ ಇರಿ ಸರ್.....

  ReplyDelete
 22. ಸೀತಾರಾಂ ಸರ್,
  ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದ..... ಮಳೆಯಲ್ಲಿ ಹುಟ್ಟಿದ ಕವನ..... ಮಳೆಯಲ್ಲಿ ನೆನೆಯುತ್ತಾ ಹಾಡಿದರೆ ನೆಗಡಿಯಾಗತ್ತೆ ಸರ್...... ಹ್ಹಾ ಹ್ಹಾ.....

  ReplyDelete
 23. ರಘು,
  ನೆನಪುಗಳ ಮಾತು ಮಧುರ ಅಂತಾರೆ, ಹಾಗೆ ಮಳೆ ಜೊತೆ ಬರುವ ನೆನಪುಗಳಿಗೆ ಬೇರೆಯದೇ ಸ್ವಾರಸ್ಯ ಇರತ್ತೆ.... ಧನ್ಯವಾದ ಮೆಚ್ಚಿ ಕಾಮೆಂಟ್ ಹಾಕಿದ್ದಕ್ಕೆ....

  ReplyDelete
 24. ಮನಸು ಮೇಡಂ,
  ನಿಮ್ಮ ಬಿಡುವಿಲ್ಲದ ಕೆಲಸ ನಡುವೆ ಸಮಯ ಹೊಂದಿಸಿಕೊಂಡು ಎಲ್ಲರ ಬ್ಲಾಗಿಗೂ ಹೋಗಿ ಕಾಮೆಂಟ್ ಹಾಕುತ್ತೀರಲ್ಲಾ... thank you ಮೇಡಂ.......

  ReplyDelete
 25. ಚಂದ್ರು ಸರ್,
  ನನ್ನ ಕವನ ನಿಮ್ಮ ಮನಸಿನಲ್ಲಿ ನಿಲ್ಲೋ ಹಾಗಾಗಿದ್ದಕ್ಕೆ ನನಗೆ ತುಂಬಾ ಖುಷಿಯಾಗ್ತಿದೆ...... ಧನ್ಯವಾದ ಇಷ್ಟಪಟ್ಟು ಕಾಮೆಂಟ್ ಮಾಡಿದ್ದಕ್ಕೆ....

  ReplyDelete
 26. ಚೆನ್ನಾಗಿದೆ ತಮ್ಮ ಕವನ, ಅಂತೂ ಭಾವುಕರಾಗಿಬಿಟ್ಟಿರಿ ಈ ಮಳೆಯಲ್ಲಿ, ಮಳೆಯೇ ಹಾಗೇ ಅಲ್ಲವೇ, ಆಗಾಗ ಕಾಲ ಬದಲಾಗುವುದೂ ಬಹುಶಃ ಬದುಕಿನ ಏಕತಾನತೆ ತಪ್ಪಿಸುವುದಕ್ಕೆನೋ! ತಡವಾಗಿ ಬಂದೆ, ನಾನು ಬರುವುದೇ ಹಾಗೇ-ಕಾರಣ ಸ್ವಲ್ಪ ಸಮಯದ ಅಡ್ಜಸ್ಟ್ಮೆಂಟು,ಹೀಗಾಗಿ ಬರಲಿಲ್ಲಾ ಎಂಬ ಬೇಸರವಿಲ್ಲವಲ್ಲ ? ಧನ್ಯವಾದಗಳು

  ReplyDelete
 27. ರಂಜಿತಾ ಮೇಡಂ,
  ನನ್ನ ಕವನ ಓದಿ, ಮಳೆಯ ನೆನಪು ಬಂದು, ನಿಮಗೆ ಇನ್ನೊಂದು ಕವನ ಬರೆಯಲು ಪ್ರೇರೇಪಣೆ ನೀಡಿದ್ದಕ್ಕೆ ನನಗೆ ಖುಷಿಯಾಗಿದೆ ..... ತುಂಬಾ ಧನ್ಯವಾದ ಮೆಚ್ಚಿ ಕಾಮೆಂಟ್ ಹಾಕಿದ್ದಕ್ಕೆ....

  ReplyDelete
 28. ಸುನಾಥ್ ಸರ್,
  ತುಂಬಾ ತುಂಬಾ ಧನ್ಯವಾದ, ಇಷ್ಟಪಟ್ಟು ಕಾಮೆಂಟ್ ಹಾಕಿದ್ದಕ್ಕೆ....

  ReplyDelete
 29. ಸಾಗರಿ ಮೇಡಂ ,
  ಹೌದು , ತುಂಬಾ ಮಳೆ ಇಲ್ಲಿ....... ನೆನಪುಗಳ ಮಳೆಯೂ ಜೋರಾಗಿದೆ ..... ಕವನ ಮೆಚ್ಚಿ ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದ.....

  ReplyDelete
 30. ಪ್ರವೀಣ್ ಸರ್,
  ಸತ್ಯವಾದ ಮಾತುಗಳು... ಬಾನಲ್ಲಿ ಮುಡೋ ಮೋಡಗಳ ಸಾಲುಗಳಿಂದ ಬರುವ ತಣ್ಣನೆ ಮಳೆಯ ಜೊತೆ ನೆನಪುಗಳ ಮಧುರ ಮೆರವಣಿಗೆ.... ಅದರ ಅನುಭವವೇ ಬೇರೆ...... ಧನ್ಯವಾದ ನಿಮ್ಮ ಮೆಚ್ಚುಗೆಗೆ.......

  ReplyDelete
 31. subramanya ಸರ್,
  ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದ ಸರ್....

  ReplyDelete
 32. mahesh ಸರ್,
  ಇಷ್ಟಪಟ್ಟು ಕಾಮೆಂಟ್ ಹಾಕಿದ್ದಕ್ಕೆ..... ತುಂಬಾ ಧನ್ಯವಾದ.......

  ReplyDelete
 33. ಚಂದ್ರು ಸರ್,
  ನೀವು ಮೆಚ್ಚಿ ಕಾಮೆಂಟ್ ಮಾಡಿದ್ದಕ್ಕೆ..... ತುಂಬಾ ಧನ್ಯವಾದ...... ಮುಂಗಾಲು ಹನಿಗಳ ಲೀಲೆ ಅಪಾರ ಆಲ್ವಾ ಸರ್.....

  ReplyDelete
 34. ಭಟ್ ಸರ್,
  ನೀವು ಯಾವಾಗ ಬಂದರೂ ಖುಷಿಯೇ, ಅದರಲ್ಲೂ ಇಷ್ಟಪಟ್ಟು , ಪ್ರೋತ್ಸಾಹದ ಎರಡು ಮಾತು ಬರೆದರೆ ಇನ್ನೂ ಖುಷಿ..... ತುಂಬಾ ಧನ್ಯವಾದ ಸರ್, ಹೀಗೆ ಬಂದು ಬೆನ್ನು ತಟ್ಟುತ್ತಾ ಇರಿ....

  ReplyDelete
 35. ಚೆನ್ನಾಗಿ ಬಣ್ಣಿಸಿರುವಿರಿ ಮುಂಗಾರಿನ ನೆನಪನ್ನು :)

  ReplyDelete
 36. ದಿನಕರ್ ಸರ್,

  ತುಂಬಾ ಸುಂದರ ಕವನ..ಎಲ್ಲಾ ಸಾಲುಗಳು ಅರ್ಥಗರ್ಭಿತವಾಗಿವೆ.

  ಮಣ್ಣ ಮಧುರ ಪರಿಮಳ,
  ಮನದ ಮೂಲೆ ತಲುಪಿದೆ,
  ಮಂಜಿನ ಮಳೆಯ ಸಿಂಚನ,
  ನೋವನೆಲ್ಲಾ ಮರೆಸಿದೆ.....

  ಈ ಸಾಲುಗಳು ತುಂಬಾ ಹಿಡಿಸಿದವು.

  ReplyDelete
 37. guruprasad sir,
  swaagata nanna blog ge... ishtapattu odi, comment maaDiddakke tumbaa dhanyavaada..... heege baruttaa iri....

  ReplyDelete
 38. ashok sir.
  thank you.... nimma protsaaha heege irali... baruttaa iri....

  ReplyDelete
 39. ದಿನಕರ...

  ಚಂದದ ಕವನ...

  ನಮ್ಮೂರಿನ ಮಳೆಯಲ್ಲಿ ನೆನೆದು ಬಂದಂತಾಯಿತು...

  ಅಭಿನಂದನೆಗಳು...
  ಸುಂದರ ನೆನಪುಗಳನ್ನು ಹಸಿರಾಗಿಸಿದ್ದಕ್ಕೆ...

  ReplyDelete
 40. ದಿನಕರ ಮೊಗೇರ.. ,

  ಮುಂಗಾರಿನ ನೆನಪಿನಲ್ಲಿ ನೆನಪಿನ ಹೂವು ನೆನೆದು ಬಾಡಿ, ಮತ್ತೆ ಒಣಗಿ, ಚಿಗುರಿ.. ಮತ್ತೆ ಮರುಕಳಿಸುತ್ತಿರುವ ಪರಿ ಚೆನ್ನಾಗಿದೆ..

  ReplyDelete
 41. ಪ್ರಕಾಶಣ್ಣ,
  ಚಂದದ ಪ್ರತಿಕ್ರಿಯೆಯ ಜೊತೆ ಪ್ರೋತ್ಸಾಹದ ನುಡಿಗಳಿಗೆ ತುಂಬು ಧನ್ಯವಾದಗಳು..... ನಮ್ಮೂರ ಮಳೆ, ಎಲ್ಲಾ ಸವಿನೆನಪುಗಳಿಗೆ ಅಡಿಪಾಯ ಆಲ್ವಾ...... ಹೀಗೆ ಬೆನ್ನುತಟ್ಟುತ್ತಾ ಇರಿ........

  ReplyDelete
 42. ಕತ್ತಲ ಮನೆ,
  ನನ್ನ ಬ್ಲಾಗ್ ಮನೆಗೆ ಸ್ವಾಗತ........ ನಿಮ್ಮ ಚಂದದ ಅನಿಸಿಕೆಗೆ ಧನ್ಯವಾದಗಳು....... ಹೀಗೆ ಬರುತ್ತಾ ಇರಿ......

  ReplyDelete
 43. ದಿನಕರ ಸರ್,
  ಚೆನ್ನಾಗಿದೆ ನಿಮ್ಮ ಮಳೆಯ ಕವನ ..ಮತ್ತು ಮಳೆ ನೆನಪುಗಳು ...

  ReplyDelete
 44. ಪ್ರಗತಿ ಮೇಡಂ,
  ಸ್ವಾಗತ ನನ್ನ ಬ್ಲಾಗ್ ಗೆ..... ನಿಮ್ಮ ಪ್ರತಿಕ್ರಿಯೆಗಳನ್ನು ಓದುತ್ತಾ ಇದ್ದೆ ಬೇರೆಯವರ ಬ್ಲಾಗ್ ಗಳಲ್ಲಿ.... ನೀವು ಚೆನ್ನಾಗಿ ಬರೆಯುತ್ತೀರಿ...... ಧನ್ಯವಾದ ನಿಮ್ಮ ಪ್ರತಿಕ್ರೀಯೆಗೆ.... ಹೀಗೆ ಬರುತ್ತಾ ಇರಿ.....

  ReplyDelete
 45. ಶ್ರೀಧರ್ ಸರ್,
  ತುಂಬಾ ಧನ್ಯವಾದ ಬಂದು, ಓದಿ, ಮೆಚ್ಚಿ ಕಾಮೆಂಟ್ ಹಾಕಿದ್ದಕ್ಕೆ.....

  ReplyDelete
 46. ದಿನಕರ್ ಅವರೆ.... "ಮಣ್ಣ ಮಧುರ ಪರಿಮಳ,
  ಮನದ ಮೂಲೆ ತಲುಪಿದೆ," ನನಗೆ ತುಂಬಾ ಇಷ್ಟವಾದ ಸಾಲು. ಕಾಂಕ್ರೀಟ್ ನಗರದಲ್ಲಿರುವವರಿಗೆ ಇದರ ಅನುಭವ ಇರೋದಿಲ್ಲ.. ಸೂರ್ಯನ ಬಿಸಿಲಿಗೆ ಚೆನ್ನಾಗಿ ಕಾದು ಧೂಳಾದ ಮಣ್ಣಿನ ಮೇಲೆ ಮಳೆಹನಿ ಬಿದ್ದಾಗ ಬರುವ ಪರಿಮಳ ಆ..ಹಾ... ಹೇಳ ತೀರದು.
  ನನ್ನ ಬ್ಲಾಗ್ ಗೆ ಮೊದಲ ಬಾರಿ ಭೇಟಿ ಕೊಟ್ಟಿದ್ದೀರಿ, ನಿಮಗೆ ಸ್ವಾಗತ, ಹೀಗೇ ಬರುತ್ತಿರಿ :)

  ReplyDelete
 47. guruprasaad sir,
  thank you sir, nimma mecchugege..... nanna blog ge swaagata.... heege baruttaa iri....

  ReplyDelete
 48. ಕವನ ತುಂಬಾ ಸೊಗಸಾಗಿದೆ ದಿನಕರ ಮೊಗೇರ ಸರ್, ಧನ್ಯವಾದಗಳು.

  ReplyDelete
 49. ಕವನದ ಸಾಲುಗಳು ತುಂಬಾ ಸೊಗಸಾಗಿ ಮೂಡಿಬಂದಿವೆ .......
  ಬಿಡುವು ಮಾಡಿಕೊಂಡು ಒಮ್ಮೆ ಬನ್ನಿ ನನ್ನವಳಲೋಕಕ್ಕೆ ....
  www.nannavalaloka.blogspot.com

  ReplyDelete
 50. ವಸಂತ್ ಸರ್,
  ಧನ್ಯವಾದ ನಿಮ್ಮ ಮೆಚ್ಚುಗೆಗೆ.... ಹೀಗೆ ಬರುತ್ತಾ ಇರಿ....

  ReplyDelete
 51. ಸತೀಶ್ ಸರ್,
  ಸ್ವಾಗತ ನನ್ನ ಬ್ಲಾಗ್ ಗೆ.... ಧನ್ಯವಾದ ಮೆಚ್ಚಿ ಕಾಮೆಂಟ್ ಹಾಕಿದ್ದಕ್ಕೆ.... ಹೀಗೆ ಬರುತ್ತಾ ಇರಿ..... ಖಂಡಿತ ಬರುತ್ತೇನೆ ನಿಮ್ಮ ಬ್ಲಾಗ್ ಗೆ...

  ReplyDelete
 52. ನಮಸ್ತೆ ದಿನಕರ್. ಸು೦ದರವಾಗಿದೆ ನಿಮ್ಮ ಬ್ಲಾಗ್ ಮನೆ. ಪ್ರಾಸ, ರಿದ೦ ಗೆ ಹೆಚ್ಚು ಒತ್ತು ಕೊಟ್ಟು ಬರೆದಿರುವ ಮು೦ಗಾರಿನ ನೆನಪು, ಕವನ ಓದಲಿಕ್ಕೆ ಖುಶಿ ಕೊಡುತ್ತದೆ. ನನಗೆ ಇ೦ತಹ ಪದ್ಯಗಳು ಓದಲು ತು೦ಬಾ ಇಷ್ಟ.

  ಶುಭಾಶಯಗಳು
  ಅನ೦ತ್

  ReplyDelete
 53. ಅನಂತ್ ಸರ್,
  ಸ್ವಾಗತ ಸರ್ ನನ್ನ ಬ್ಲಾಗ್ ಗೆ.... ನೀವು ನನ್ನ ಕವನವನ್ನು ಮೆಚ್ಚಿ ಕಾಮೆಂಟ್ ಮಾಡಿದ್ದೀರಾ ..... ಧನ್ಯವಾದ ಹೀಗೆ ಬರುತ್ತಾ ಇರಿ... ಬೆನ್ನು ತಟ್ಟುತ್ತಾ ಇರಿ ....

  ReplyDelete