Nov 20, 2009

ಮತ್ತೆ ನಿನ್ನದೇ ಸುದ್ದಿ......


ಎಲ್ಲಿದ್ದೀಯಾ........?

ಮುಂಜಾನೆಯ ಮಂಜು ಕೂಡ,
ನಿನ್ನ ದಾರಿ ಕಾಯುತ್ತದೆ....
ನಿನ್ನ ಪಾದ ಸೋಕಿ,
ಧರೆಗುರುಳಿ ಇಂಗುತ್ತದೆ.....

ಕಾಯುತ್ತದೆ ಕನಸು ಕೂಡ,
ನೀ ಕೊಡುವ ಕಚಗುಳಿ .....
ನಿನ್ನ ಮನದ ಮನಸ ಕೂಡಿ,
ಉದಯರಾಗ ಹಾಡುತ್ತದೆ.....

ಹುಣ್ಣಿಮೆಯ ಚಂದ್ರ ಕೂಡ,
ನಿನ್ನ ಕ್ಷೇಮ ಬಯಸುತ್ತದೆ ......
ಬೆಳದಿಂಗಳೂ ಸಹ ಹಾಲಾಗಿ,
ನಿನ್ನ ನೆರಳಾಗುತ್ತದೆ.....

ನಿನ್ನ ಮೈಯ ಘಮವು ಕೂಡ ,
ನಿನ್ನ ಸುಳಿವು ಕೊಡುತ್ತದೆ.....
ಮನದ ಮೂಲೆಯನ್ನು ಕೆಣಕಿ,
ದಣಿದ ದೇಹ ತಣಿಸುತ್ತದೆ......




24 comments:

  1. ದಿನಕರ,
    ನಮ್ಮ ಮಂಗಳೂರು ಭಾಷೆಯಲ್ಲಿ ಹೇಳುದಾದರೆ ತುಂಬಾ ಚೆನ್ನಾಗಿದೆ ಮಾರಾಯ್ರೆ...ಒಳ್ಳೊಳ್ಳೆದು ಹೀಗೆ ಬರಿತ ಇರಿ ಅಕ್ಕಾ... :)
    ನಿಮ್ಮವ,
    ರಾಘು.

    ReplyDelete
  2. ಒಂದ್ GPS ಕೊಡಿಸಿದ್ರೆ ತಕ್ಷಣಕ್ಕೆ ಗೊತ್ತಾಗ್ತಿತ್ತೇನೋ :)
    ಚೆನ್ನಾಗಿದೆ... ಮಂಜು ಕರಗುವ ಮೊದಲೇ ದಾರೀಲಿ ಹೆಜ್ಜೆ ಮೂಡಲಿ

    ReplyDelete
  3. ದಿನಕರ್ ಸಾಲುಗಳ ಹಿಡಿತ ಕಾಯ್ದುಕೊಂಡಿರುವಂತೆ ಪದ ಪ್ರಯೋಗ ಮಾಡಿದ್ದಿರಿ ಅದರಲ್ಲೂ....
    ಹುಣ್ಣಿಮೆಯ ಚಂದ್ರ ಕೂಡ,
    ನಿನ್ನ ಕ್ಷೇಮ ಬಯಸುತ್ತದೆ ......
    ಬೆಳದಿಂಗಳೂ ಸಹ ಹಾಲಾಗಿ,
    ನಿನ್ನ ನೆರಳಾಗುತ್ತದೆ.....
    ಹಾಲು ನೆರಳಾಗುತ್ತದೆ..ಈ ಪ್ರಯೋಗ ಮೆಚ್ಚಿದೆ...

    ReplyDelete
  4. ಕಲ್ಪನೆಗಳು ಚೆನ್ನಾಗಿ ಮೂಡಿವೆ....
    ಕವನ ಇಷ್ಟವಾಯಿತು.
    ವ೦ದನೆಗಳು.

    ReplyDelete
  5. ದಿನಕರ್,
    ಕವನದ ಕಲ್ಪನಾ ಸಾಲುಗಳು ಸೊಗಸಾಗಿವೆ....
    ಅಭಿನಂದನೆಗಳು

    ReplyDelete
  6. ದಿನಕರ,
    ಈ ಕವನವೇ ಭಾವನೆಯ ಬೆಳದಿಂಗಳಾಗಿದೆ.

    ReplyDelete
  7. ಬೆಳದಿಂಗಳೂ ಸಹ ಹಾಲಾಗಿ,
    ನಿನ್ನ ನೆರಳಾಗುತ್ತದೆ.....

    I liked the abve lines and the whole poem ofcourse..

    ReplyDelete
  8. ಅಬ್ಬಾ.. ಪ್ರೇಮದ ಮಳೆಯಲ್ಲಿ ನೆನೆದು ತೋಯ್ದರೆ ಮಾತ್ರ ಇ೦ತಹ ಕವನಗಳು ಹುಟ್ಟಲು ಸಾಧ್ಯ.. ಹೌದು ತಾನೆ?

    ReplyDelete
  9. ರಘು ಸರ್,
    ಮಂಗಳೂರಿನ ಬಂಗಡೆ ಮೀನಿನ ಪ್ರಭಾವ ಇರಬೇಕು ಆಲ್ವಾ....

    ReplyDelete
  10. ಆನಂದ್ ಸರ್,
    ನನ್ನ ಬ್ಲಾಗ್ ಗೆ ಸ್ವಾಗತ ..... ಮಂಜು ಕರಗಿದ ಹಾಗೆ ಹೆಜ್ಜೆಯೂ ಕರಗಿದೆ...

    ReplyDelete
  11. ಅಜಾದ್ ಸರ್,
    ನಿಮಗೆ ಇಷ್ಟವಾದುದಕ್ಕೆ ತುಂಬಾ ಖುಷಿಯಾಯ್ತು.... ಈ ಸಾರಿ ಏನಾದರು correction ಮಾಡ್ತೀರಾ ಅಂತ ಕಾಯ್ತಾ ಇದ್ದೆ... ನೀವೇ ಇಷ್ಟ ಪಟ್ಟು ಕಾಮೆಂಟ್ ಹಾಕಿದ್ದನ್ನು ನೋಡಿ, ನನ್ನ ಬೆನ್ನು ನಾನೇ ತಟ್ಟಿಕೊಂಡೆ.... ನನ್ನ ಹೆಂಡತಿಯ ಕಣ್ಣಲ್ಲಿ ಮೆಚ್ಚುಗೆಮೂಡಿದೆ....

    ReplyDelete
  12. ವಿಜಯಶ್ರೀ ಮೇಡಂ,
    'ಕವನ ' 'ಕಲ್ಪನೆ' ಎಲ್ಲಾ ಮುಡೋದು ಕನಸಲೀ ತಾನೇ.... ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

    ReplyDelete
  13. ಮಹೇಶ್ ಸರ್...
    ಕಲ್ಪನೆಯ ಕರಾಮತ್ತು ಇದೆ ತಾನೇ.... ಯಾರನ್ನು ಬೇಕಾದರೂ, ಏನನ್ನು ಬೇಕಾದರೂ ಕರೆಯಬಹುದು ಆಲ್ವಾ ಸರ್.... ಹೀಗೆ ಪ್ರೋತ್ಸಾಹ ಹೊಡ್ತಾ ಇರಿ.... ನನ್ನ ಕವನ, ಕಲ್ಪನೆಮುಂದುವರಿಯತ್ತೆ...

    ReplyDelete
  14. ಸುನಾಥ್ ಸರ್,
    ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.... ಬರುತ್ತಾ ಇರಿ... ನಿಮ್ಮ ನಿರೀಕ್ಷೆ ಹೀಗೆ ಉಳಿಕೊಳ್ಳುವ ಪ್ರಯತ್ನ ಮಾಡುತ್ತೇನೆ......

    ReplyDelete
  15. ನಿವೇದಿತ ಮೇಡಂ..
    ಇಷ್ಟ ಆಯ್ತಾ..... ನೆರಳೂ ಹಾಲಾಗೋದು ....ಚಂದ ಕೊಡೆ ಹಿಡಿಯೋದು ಕಲ್ಪನೆಯಲ್ಲೇ ತಾನೇ.... ಕಂಡರೆ ದೊಡ್ಡ ಕನಸನ್ನೇ ಕಾಣು ಅಂತ 'ಕಲಾಂ ಸರ್'ಹೇಳಿದ್ದಾರಲ್ಲ..... ಅದಕ್ಕೆ, ಅಂದದ ಕನಸನ್ನೇ ಕಂಡೆ.... ಇಷ್ಟಪಟ್ಟು ಕಾಮೆಂಟ್ ಮಾಡಿದ್ದಕ್ಕೆ,ಧನ್ಯವಾದ...

    ReplyDelete
  16. ಸುಧೇಶ್,
    ಮಂಗಳೂರಿನ ಮಳೆ ಹೇಗಿದೆ ಅಂತ ನನಗಿಂತ ಚೆನ್ನಾಗಿ ನಿಮಗೆ ಗೊತ್ತು.... ಪ್ರೇಮದ ಮಳೆಗಿಂತ ಇಲ್ಲಿ ಕೋಮು ದ್ವೇಷದ ಮಳೆ ತುಂಬಾ ಆಗ್ತಾ ಈಗೀಗ.... ಪ್ರೇಮವನ್ನು ಕನಸಲ್ಲಾದರೂ ನೋಡೋಣ ಅಂತ ಯೋಚಿಸಿದೆ.... ನಿಮ್ಮ ಬ್ಲಾಗ್ನಲ್ಲಿ ಪ್ರೇಮದ ಪ್ರವಾಹವೇ ಹರೀತಾ ಇದೆ..... ನನ್ನದು ಮಳೆ ಬಿಡಿ....

    ReplyDelete
  17. ದಿನಕರ್ ಸರ್,
    ಕಲ್ಪನೆಯಲ್ಲೇ ಹೂಸ ಹೂಸ ಸಾಲುಗಳು ಚೆಂದದ ಸಾಲುಗಳ ಸೃಷ್ಟಿ ಆಗುವುದು.. ಕವನ ಇಷ್ಟವಾಯಿತು... ಎಲ್ಲಾ ಸಾಲುಗಳು ಚೆನ್ನಾಗಿವೆ.

    ReplyDelete
  18. ದಿನಕರ್ ಸರ್,

    ನಿಮ್ಮ ಕವನಗಳು ಚೆನ್ನಾಗಿರುತ್ತವೆ. ಸರಳವಾಗಿ ಓದಿಸುತ್ತಾ ಭಾವಾರ್ಥವನ್ನು enjoy ಮಾಡುವಂತೆ ಇರುತ್ತವೆ.
    ನಿನ್ನ ಮೈಯ ಘಮವು ಕೂಡ ,
    ನಿನ್ನ ಸುಳಿವು ಕೊಡುತ್ತದೆ.....
    ಮನದ ಮೂಲೆಯನ್ನು ಕೆಣಕಿ,
    ದಣಿದ ದೇಹ ತಣಿಸುತ್ತದೆ......

    ಕೊನೆಯ ಪದ್ಯವಂತೂ ತುಂಬಾ ಚೆನ್ನಾಗಿದೆ.

    ಧನ್ಯವಾದಗಳು.

    ReplyDelete
  19. ದಿನಕರ ಅವರೇ,
    ನಿಮ್ಮ ಈ ಕವನ ತುಂಬಾ ಚನ್ನಾಗಿದೆ.. :)

    ReplyDelete
  20. ದಿನಕರ ಸರ್
    ಮತ್ತೊಂದು ಉತ್ತಮ ಕವನ
    ಓಡಿಸಿಕೊಂಡು ಹೋಗುತ್ತದೆ
    ರಾಗ ಬದ್ದವಾಗಿ ಹಾಡಬಹುದು

    ReplyDelete
  21. ಮನಸು ಮೇಡಂ,
    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ...... ಪ್ರೋತ್ಸಾಹ ಹೀಗೆ ಇರಲಿ....

    ReplyDelete
  22. ಶಿವೂ ಸರ್,
    ನನಗೆ ಸರಳ ಶಬ್ದ ಬಳಕೆ ಮಾಡಿದರೇ ಖುಷಿಯಾಗುತ್ತದೆ.... ನಿಮಗೆ ಖುಷಿಯಾದರೆ , ನನಗೂ ಖುಷಿ......

    ReplyDelete
  23. ಶಿವಪ್ರಕಾಶ್,
    ಇಷ್ಟಪಟ್ಟು ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು....

    ReplyDelete
  24. ಗುರು ಸರ್,
    ರಾಗಗಳ ಗಂದಗಾಳಿಯೇ ನನಗೆ ಗೊತ್ತಿಲ್ಲ..... ಮನಸ್ಸಿಗೆ ತೋಚಿದ್ದನ್ನ ಗೀಚುತ್ತೇನೆ..... ನಿಮಗೆ ಇಷ್ಟವಾದರೆ ಸಂತೋಷ್, ಪ್ರೋತ್ಸಾಹ ಹೀಗೆ ಇರಲಿ....

    ReplyDelete