Nov 9, 2009

ನನ್ನ ಚಿತ್ತ.............!



ಅಲೆಗಳಿಗೇಕೆ
ತಿಳಿದಿಲ್ಲ ನೀ ನನ್ನುಸಿರು,
ಪದೇ ಪದೇ ಅಳಿಸುತ್ತವೆ ನಾ ಬರೆದ ಹೆಸರು.....
ಅವುಗಳು ಅಳಿಸುವುದು ನಿನ್ನ ಹೆಸರು ಮಾತ್ರ,
ಮುಟ್ಟಲಾರವು ಅವು ನನ್ನೆದೆಯೊಳಗಿನ
ಚಿತ್ರ.......


ನೀ ನನಗೆ ಪೌರ್ಣಮಿಯ ಬೆಳದಿಂಗಳಂತೆ,
ಕೈಚಾಚಿದರೂ ನಾ, ಸಿಗದೆನಗೆ ನಿನ್ನಯ ನೆರಳು....
ನೀ ನನಗೆ ಮುಗಿಲ ಮಲ್ಲಿಗೆಯಂತೆ,
ನೆನಪು ಘಮ್ಮೆಂದರೂ, ಸಿಗದೆನಗೆ ನಿನ್ನಯ ಬೆರಳೂ ......


ಮುನಿಸಿ ನಡೆದ ಒಡತಿ ಹೊರಟು ಬಾ ಬೇಗ,
ಕಾಯುವುದೇ ಕಾಯಕ ಆಗಿದೆ ನನಗೀಗ.....
ನೀ ಕೊಟ್ಟ ಪ್ರೀತಿ ಸಾಕು ಪೂರ್ತಿ ಜನ್ಮಕ್ಕೆ,
ನೀ ತಿರುಗಿ ಬಂದ ದಿನ ಮುಕ್ತಿ ಜೀವಕ್ಕೆ.......

21 comments:

  1. ಸು೦ದರ ಕವನ....
    ನೀವು ಬಯಸಿದ್ದು ನಿಮಗೆ ಸಿಗಲೆ೦ದು ಹಾರೈಸುತ್ತೇನೆ...

    ReplyDelete
  2. ದಿನಕರ್ ಸರ್,
    ಬಹಳ ಚೆನ್ನಾಗಿದೆ.ಈ ಕವನ ಕಂಡಕೂಡಲೆ ಮುನಿಸಿಕೊಂಡ ಒಡತಿ ಎಲ್ಲವನು ಮರೆತು ಬಂದುಬಿಡುವರು ಬಿಡಿ. ಕಾಯುವುದೇ ಕಾಯಕ ಮಾಡಿಕೊಳ್ಳಬೇಡಿ ಸದಾ ನಿಮ್ಮೊಂದಿಗಿರಲಿ ಆ ನಿಮ್ಮ ಒಡತಿ...
    ವಂದನೆಗಳು

    ReplyDelete
  3. ದಿನಕರ್,
    ನೀವಿನ್ನು ಕಾಯುವುದು ಬೇಡ....
    ನಿಮ್ಮ ಒಡತಿ ಈ ಕವನ ನೋಡಿದ ಕೂಡಲೆ ನಿಮ್ಮನ್ನು ಸೇರುತ್ತಾರೆ....
    ಚೆಂದದ ಕವನ....

    ReplyDelete
  4. ದಿನಕರ್ ಸರ್,
    ತುಂಬ ಚೆಂದದ ಕವನ ...
    ನೀ ತಿರುಗಿ ಬಂದ ದಿನ ಮುಕ್ತಿ ಈ ಜೀವಕ್ಕೆ....
    ಈ ಸಾಲು ಇಷ್ಟವಾಯಿತು
    ಧನ್ಯವಾದಗಳು :)

    ReplyDelete
  5. ಅಲೆಗಳಿಗೇಕೆ ತಿಳಿದಿಲ್ಲ ಇವಳು ನನ್ನವಳೆಂದು... ?
    ಚೆನ್ನಾಗಿದೆ ನಿಮ್ಮ ಕಲ್ಪನೆ..
    ನಿಮ್ಮವ,
    ರಾಘು.

    ReplyDelete
  6. ಚುಕ್ಕಿ ಚಿತ್ತಾರ ಮೇಡಂ,
    ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು...

    ReplyDelete
  7. ಮನಸು ಮೇಡಂ,
    ನಿಮ್ಮ ಆಶಯಕ್ಕೆ ಧನ್ಯವಾದಗಳು...

    ReplyDelete
  8. ಮಹೇಶ್ ಸರ್,
    ಮನೆಯ ಒಡತಿ ನನ್ನ ಜೊತೆ ಇದ್ದಾಳೆ ಈಗ .... ನಿಮ್ಮ ಅಭಿಪ್ರಾಯ, ಹಾರೈಕೆಗೆ ಧನ್ಯವಾದ...

    ReplyDelete
  9. ದಿವ್ಯ ಮೇಡಂ,
    ಇಷ್ಟಪಟ್ಟು, ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು....

    ReplyDelete
  10. ರಘು ಸರ್,
    ನಿಮ್ಮ ಫೋಟೋ ನೋಡಿದ್ರೆ ನೀವೂ ಸಹ ಅಲೆಗಳ ಪಕ್ಕ ಕುಳಿತು ಯಾರಿಗೋ ಕಾಯುತ್ತಿರುವ ಹಾಗಿದೆ..... ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದಗಳು....

    ReplyDelete
  11. Wow... ಸುಂದರ ಸಾಲುಗಳು...
    ಕವನದ ಎಲ್ಲ ಸಾಲುಗಳು ಇಷ್ಟವಾದವು...

    ReplyDelete
  12. ಶಿವಪ್ರಕಾಶ್,
    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

    ReplyDelete
  13. ದಿನಕರ,
    ನಿಮ್ಮ ಕವನದಲ್ಲಿ ವಿರಹಭಾವನೆ ಸೊಗಸಾಗಿ ಮೂಡಿದೆ. ಈ ಕವನವನ್ನು ಒದಿದರೆ, ನಿಮ್ಮ ಒಡತಿ ಓಡಿ ಬರುವದರಲ್ಲಿ ಸಂದೇಹವಿಲ್ಲ!

    ReplyDelete
  14. ಸುನಾಥ್ ಸರ್,
    ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ತುಂಬಾ ಧನ್ಯವಾದಗಳು....ಒಡತಿ ನನ್ನ ಪಕ್ಕದಲ್ಲಿ ಕುಳಿತು ಇದನ್ನೆಲ್ಲಾ ಓದುತ್ತಿದ್ದಾಳೆ....

    ReplyDelete
  15. ವವ್ ಸರ್ ತುಂಬಾ ಚೆನ್ನಾಗಿದೆ .. ನಿಮ್ಮ ಕವಿತೆಗಳ ನೋಡಿ ಮುನಿಸಿಕೊಳ್ಳುವ ಒಡತಿಯು ನಸುನಕ್ಕು ಒಳ ನಡೆದಾರು ..

    ReplyDelete
  16. ರಂಜಿತ ಮೇಡಂ,
    ಕಾಮೆಂಟ್ ಗೆ ಧನ್ಯವಾದ..... ಒಡತಿ ಪಕ್ಕದಲ್ಲಿ ಕುಳಿತು ಓದುತ್ತಿದ್ದಾಳೆ.....

    ReplyDelete
  17. ಮೊದಲ ಪ್ಯಾರ ತುಂಬಾ ಇಷ್ಟ ಆಯ್ತು... ಅಳಿಸುವ ಅಲೆಗಳ ಬಗ್ಗೆ ಸುಂದರ ವರ್ಣನೆ.

    ReplyDelete
  18. ಪ್ರಭು ಸರ್,
    ಇಷ್ಟಪಟ್ಟು ಕಾಮೆಂಟ್ ನೀಡಿದ್ದಕ್ಕೆ ಧನ್ಯವಾದಗಳು..... ಹೀಗೆ ಬರುತ್ತಾ ಇರಿ......

    ReplyDelete
  19. ತುಂಬಾ ಚಂದದ ಕವನ,
    ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ
    ಶಬ್ದಗಳ ಪ್ರಯೋಗ ತುಂಬಾ ಸೊಗಸಾಗಿದೆ

    ReplyDelete
  20. ಗುರು ಸರ್,
    ಓದಿ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..... ಯಾವಾಗ ಬಂದರೂ ಖುಷಿಯೇ...

    ReplyDelete
  21. ತು೦ಬಾ ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ....

    ಯಾರದು ಮುನಿಸಿಕೊ೦ಡ ಒಡತಿ...? :)

    ReplyDelete