Nov 27, 2009

'' ಪಾರಿವಾಳಗಳು''

'' ಆಹಾ, ಎಷ್ಟು ಪ್ರಶಾಂತವಾದ ಪರಿಸರ ಆಲ್ವಾ'' ಎನಿಸಿತು ಬಸ್ಸಿಳಿದ ಕೂಡಲೇ..... ಬಸ್ಸಿನಿಂದ ಇಳಿದು ನನ್ನ ಫ್ರೆಂಡ್ ಮನೆಗೆ ಹೊರಟಿದ್ದೆವು ನಾನು ಮತ್ತು ನನ್ನ ಸೀನಿಯರ್...... ಹಳ್ಳಿ ನೋಡದೆ ಇರದಿದ್ದರಿಂದ ತಾನೂ ಬರುತ್ತೇನೆ ಅಂದ..... ಸರಿ ಬಾ ಅಂತ ಕರೆದುಕೊಂಡು ಹೊರಟಿದ್ದೆ..... ಕಾಲೇಜಿನಲ್ಲಿ ತುಂಬಾ show off ಮಾಡ್ತಿದ್ದ..... ಬೆಂಗಳೂರಿವನಾದ್ದರಿಂದ ಸ್ವಲ್ಪ ಫಾಸ್ಟ್, ಸ್ವಲ್ಪ take it easy fellow ..... ಅವನಿಗೆ ಹಳ್ಳಿಯ ಪರಿಸರ ನೋಡಿ ತುಂಬಾ ಖುಷಿಯಾಗಿತ್ತು....ವಟ ವಟ ಮಾತಾಡುತ್ತಿದ್ದ.... ' ಏನ್ ಗಾಳಿ ಗುರೂ, ಸಕತ್ತಾಗಿದೆ..... ಎಲ್ ನೋಡಿದರೂ ಹಸಿರು.... ತಂಪು.... ತಂಪು.... ನಮ್ ಬೆಂಗಳೂರಿನಲ್ಲಿ ಇದೆಲ್ಲಾ ಇಲ್ಲ.... ' ಎನ್ನುತ್ತಲೇ ಇದ್ದವನು ಪ್ಲೇಟ್ ಬದಲಾಯಿಸಿದ ' ಆದರೂ ನಮ್ಮ ಬೆಂಗಳೂರೇ ಬೆಸ್ಟ್, ಸಂಜೆಯಾದರೆ ಪಾರಿವಾಳ ( ಹುಡುಗಿಯರು) ಬರತ್ತೆ, ಹೋಗಿ ನಿಂತರೆ ಕಣ್ಣೆಲ್ಲಾ ತಂಪಾಗತ್ತೆ '' ಎಂದೆಲ್ಲಾ ಬಡಬಡಿಸುತ್ತಿದ್ದ..... ನಾನು ಮಾತ್ರ ನಮ್ಮನ್ನು ಕರೆದುಕೊಂಡು ಹೋಗಲು ಬರಬೇಕಿದ್ದ ಫ್ರೆಂಡ್ ಹುಡುಕುತ್ತಿದ್ದೆ..... ನಿರ್ಜನ ಹಳ್ಳಿ ರಸ್ತೆಯಾಗಿತ್ತು.... ಕೆಲವೊಂದು ಹೈ ಸ್ಕೂಲ್ ಹುಡುಗಿಯರು ಬಸ್ಸಿಳಿದು ನಮ್ಮೆದುರಿಗೆ ಹೋದರು.... ಅವರನ್ನು ಕೇಳೋಣವೆಂದರೆ ಮನಸ್ಸಾಗಲಿಲ್ಲ.... ಹಳ್ಳಿ ಹುಡುಗಿಯರು ಬೇರೆ, ತುಂಬಾ ಸೂಕ್ಷ್ಮ ಆಲ್ವಾ... ತಪ್ಪು ತಿಳಿದಾರು ಎಂದು ಸುಮ್ಮನಿದ್ದೆ.... ನನ್ನ ಜೊತೆ ಬಂದ ಬಡ ಬಡ ಪೆಟ್ಟಿಗೆ ಸುಮ್ಮನಿರಬೇಕಲ್ಲ.....'' ಏನ್ ಪಾರಿವಾಳ ಲೇ'' ಅಂದ.... ಹುಡುಗಿಯರಿಗೆ ಅದರ ಅರ್ಥ ತಿಳಿಯದೆ ಸುಮ್ಮನೆ ಹೊರಟು ಹೋದರು.... ಮನಸ್ಸಲ್ಲೇ ನಾನು ' ಇವ ಯಾರಿಗಾದರು ಹೊಡೆಸುತ್ತಾನೆ' ಎಂದುಕೊಂಡೆ.... ಎದುರಿಗೆ ಹೇಳುವ ಹಾಗಿರಲಿಲ್ಲ , ಎಷ್ಟಾದರೂ ನನ್ನ ಸೀನಿಯರ್ ಆಲ್ವಾ ಸಹಿಸಿಕೊಂಡೆ....

ಸ್ವಲ್ಪ ಹೊತ್ತಿನಲ್ಲೇ ನನ್ನ ಫ್ರೆಂಡ್ ಬಂದ.... ಲೇಟ್ ಆಗಿ ಬಂದ ತಪ್ಪಿಗೆ ಅರ್ಚನೆಯನ್ನೂ ಮಾಡಿಸಿಕೊಂಡ.... ನನ್ನ ಸೀನಿಯರ್ ಮಾತ್ರ 'ಏನ್ ಗುರೂ, taxi ಏನು ಸಿಗಲ್ವಾ ಇಲ್ಲಿ,' ಅಂದ..... '' ಇಲ್ಲಾ , ಇಲ್ಲಿ ಕಾರ್ ಬದಲಿಗೆ ಕಾಲೇ ಗತಿ'' ಎಂದ ನನ್ ಫ್ರೆಂಡ್.......... ಸುಮಾರು ದೂರ ನಡೆದು ನನ್ನ ಕಾಲು ನೋಯುತ್ತಿತ್ತು.... ' ಎಲ್ಲೋ ನಿನ್ನ ಮನೆ ' ಎಂದೇ.... ' ಅಲ್ನೋಡು ಒಂದು ಬಾವಿ ಕಾಣ್ತಾ ಇದೆಯಲ್ಲ, ಅದರ ಹಿಂದೇನೆ ನನ್ನ ಮನೆ' ಎಂದ...... ' ಅಂತೂ ಬಂತಲ್ಲಾ ಮನೆ ಎಂದುಕೊಳ್ಳುತ್ತಿರುವಾಗಲೇ.... ಬಾವಿಯಲ್ಲಿ ನೀರು ಸೇದುತ್ತಿರುವ ಹುಡುಗಿ ಕಂಡಳು.... ಎಲ್ಲಾ ಹಳ್ಳಿ ಹುಡುಗಿಯರ ಹಾಗೆ ಮುದ್ದಾಗಿ ಇದ್ದಳು..... ನನ್ನ ಫ್ರೆಂಡ್ ಏನೋ ಹೇಳಲು ಬಾಯಿ ತೆರೆಯೋದಕ್ಕೂ..... ನನ್ನ ಸೀನಿಯರ್ '' ಏನ್ ಗುರೂ, ಪಾರಿವಾಳ ಸಕತ್ತಾಗಿದೆ'' ಎನ್ನುವುದಕ್ಕೂ ಸರಿ ಹೋಯ್ತು..... ಏನೋ ಹೇಳಲು ಹೊರಟ ನನ್ ಫ್ರೆಂಡ್ ಹಾಗೆ ಬಾಯಿ ಮುಚ್ಚಿದ ..... ಪುಣ್ಯಾತ್ಮ ಮಾತ್ರ '' ನಿಮ್ಮೂರಲ್ಲೂ ಪಾರಿವಾಗಳು ಸಕತ್ತಾಗಿದೆಯಮ್ಮಾ , ಹಳ್ಳಿಯ ಗಾಳಿ ನೀರು ಕುಡಿದು ಪೊಗರು ಬಂದಿರತ್ತೆ ಆಲ್ವಾ …. ಯಾವಾಗಲಾದರು ಕಾಳು ಹಾಕಲು try ಮಾಡಿದ್ದೆಯಾ ’’ ಅಂದ ….. ನನ್ನ ಫ್ರೆಂಡ್ ನಗಾಡಲು ಶುರು ಮಾಡಿದ …. ನನಗೆ ಅರ್ಥ ಆಗಲಿಲ್ಲ ….ನಾನು ಅವನನ್ನ ಯಾಕೆ ಎಂದು ಸಂಜ್ಞೆ ಮಾಡಿ ಕೇಳಿದೆ ….. ಅವನು ನನ್ನನ್ನು ಬಡಿದೆ ಕರೆದು ‘’ ಹುಡುಗಿಯನ್ನು ಸರಿಯಾಗಿ ನೋಡಿಕೋ , ಮುಂದಿದೆ ಮಜಾಎಂದ ….. ನನಗೆ ತಲೆ ಬುಡ ಅರ್ಥ ಆಗ್ಲಿಲ್ಲ.....ಆದರೂ ಹುಡುಗಿಯನ್ನು ನೋಡುತ್ತಾ ಗೆಳೆಯನ ಮನೆ ಒಳಗೆ ಹೋದೆ..... ನನ್ನ ಸೀನಿಯರ್ ಆಗಲೇ '' ಏನು fan ಇಲ್ವಾ , T. V . ಇಲ್ವಾ '' ಅಂತೆಲ್ಲಾ ಶುರು ಮಾಡಿದ್ದ..... ' ತುಂಬಾ ಸುಸ್ತಾಗಿದೆ ಏನಾದರು ಕುಡಿಯಲು ತಾರೋ' ಎಂದೆ...... '' ಪಾನೀಯ ಮಾಡಿಸಿದ್ದೇನೆ ತರಿಸುತ್ತೇನೆ ತಡಿ' ಎಂದು ''ರೂಪಾ '' ಎಂದು ಯಾರನ್ನೋ ಕರೆದ..... ಒಳಗಡೆಯಿಂದ ಕೈಯಲ್ಲಿ ಪ್ಲೇಟ್ ಹಿಡಿದು, ಮೂರು ಲೋಟ ಪಾನೀಯ ತರುತಿದ್ದಳು ಒಬ್ಬಳು ಹುಡುಗಿ...... ನಾನು ಸರಿಯಾಗಿ ಗಮನಿಸಿದೆ, ನಾವು ಬರುವಾಗ ಬಾವಿಯಲ್ಲಿ ನೀರು ಸೇದುತ್ತಿದ್ದ ಹುಡುಗಿ ಇವಳೇ ಆಗಿದ್ದಳು..... ನನ್ನ ಸೀನಿಯರ್ ಆಗಲೇ ನನ್ನ ತಿವಿಯಲು ಶುರು ಮಾಡಿದ್ದ...... ಏನೋ ಹೇಳುವವನೂ ಇದ್ದ..... ಅಷ್ಟರಲ್ಲಿ ನನ್ನ ಫ್ರೆಂಡ್ '' ಇವಳು ರೂಪಾ , ನನ್ನ ಒಬ್ಬಳೇ ತಂಗಿ'' ಎಂದ...... ನನ್ನ ಸೀನಿಯರ್ ಮುಖ ನೋಡುವ ಹಾಗಿತ್ತು...........

17 comments:

 1. ಕೆಲವರು ಏನೇನೋ ಮಾತಾಡಿ ಉಳಿದವರನ್ನು ಇಕ್ಕಟ್ಟಿಗೆ ಸಿಲುಕಿಸಿ ತಮ್ಮ ಬೆಲೆಯನ್ನೂ ಕಳೆದುಕೊ೦ಡು ಬಿಡುತ್ತಾರೆ... ಚೆನ್ನಾಗಿ ಬರೆದಿದ್ದೀರಾ. ವ೦ದನೆಗಳು.

  ReplyDelete
 2. ವಿಜಯಶ್ರೀ ಮೇಡಂ,
  ಇದರಿಂದ ಎಲ್ಲರೂ ಮುಜುಗರಕ್ಕೆ ಒಳಗಾಗುತ್ತಾರೆ..... ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು.....

  ReplyDelete
 3. ಹ್ಹ...ಹ್ಹ...ಹ .. ಆಗ ನಿಮ್ಮ ಫ್ರೆಂಡ್ ಮುಖ ಹೆಗಾಗಿರಬಹುದೆಂದು ಊಹಿಸಿ ನಗು ಬರುತ್ತಿದೆ.

  ReplyDelete
 4. ದಿನಕರ್,
  ನಿಮ್ಮ ಫ್ರೆಂಡ್ ಮುಜುಗರಕ್ಕೆ ಒಳಗಾಗಿರಬೇಕು ಅಲ್ವ.....ತಿಳಿಯದೆ ಮಾತಾಡಿದರೆ ಹಾಗೆ
  ಚೆನ್ನಾಗಿ ಬರೆದಿದ್ದೀರಾ.....

  ReplyDelete
 5. ನಿಮ್ಮ ಗೆಳೆಯನಿಗೆ ತಕ್ಕ ಶಾಸ್ತಿಯಾಗಿರಬೇಕು. ಮುಂದೆಂದು ಅರಿಯದೆ ಈ ರೀತಿ ಆತ ಮಾತಾಡಲಾರ. ಇಂಥ ಮುಜುಗರಕ್ಕೆ ಒಳಗಾಗುವ ಮೊದಲು ಸ್ವಲ್ಪ ಯೋಚಿಸಿ ಮಾತಾಡುವುದು ಒಳ್ಳೆಯದಲ್ಲವೇ

  ReplyDelete
 6. ಹಹಹಹ ಚೆನ್ನಾಗಿದೆ ನಿಮ್ಮ ಸ್ನೇಹಿತ ಒಳ್ಳೆ ಮುಜುಗರ ಪಡಿಸಿ ತಾವು ಮುಜುಗರಕ್ಕೆ ಒಳಗಾಗಿದ್ದಾರೆ. ಹಾಹಹ

  ReplyDelete
 7. This comment has been removed by the author.

  ReplyDelete
 8. ದಿನಕರ ಅವ್ರೆ..

  ತುಂಬಾ ಚೆನ್ನಾಗಿದೆ..
  ಕೊನೆಯವರಿಗೂ ಕುತೂಹಲ ಉಳಿಸಿಕೊಂಡು ಚೆನ್ನಾಗಿ ಬರೆದಿದ್ದೀರ..

  -http://balipashu.blogspot.com/

  ReplyDelete
 9. ದಿನಕರ್, ಅದಕ್ಕೆ ಹಿರಿಯರು ಹೇಳುವುದು..ಏನಾದರೂ ಹೇಳುವ ಮುನ್ನ ಒಮ್ಮೆ ಅದನ್ನೇ ಮನದಲ್ಲಿ ಹೇಳಿಕೋ..ಎಂದು..ಆಗ ಯೊಚಿಸುವುದಕ್ಕೆ ಆ ಅಲ್ಪ ಮಹತ್ತರ ಸಮಯ ಸಿಗುತ್ತೆ...ಇನ್ನು ಯೋಚಿಸಿ ಹೇಳಿದರೆ ಇನ್ನೂ ಒಳ್ಲೆಯದು..ನಿಮ್ಮ ಮಿತ್ರ ಸಂಭಾವಿತ ಅದಕ್ಕೆ ವಚಾಳಿ ಸೀನಿಯರ್ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ....ಚನ್ನಾಗಿದೆ ಘಟನೆಯ ವಿವರಣೆ...

  ReplyDelete
 10. ಏನ್ ದಿನಕರ್ ಸರ್ . ಪದ್ಯದ ಜಾಡು ಬಿಟ್ಟು ಗದ್ಯದ ಜಾಡು ಹಿಡಿದಿದ್ದೀರ . :) ಚೆನ್ನಾಗಿದೆ :)

  ReplyDelete
 11. ದಿನಕರ,
  ಸಕತ್ ಗೊಮ್ಮತ್ ಆಗಿ ಮರೆಯ್ರೆ... ಪಾರಿವಾಳಗಳ ಸ್ಟೋರಿ ಚೆನ್ನಾಗಿದೆ...ending super!
  ನಿಮ್ಮವ,
  ರಾಘು.

  ReplyDelete
 12. ಹ್ಹಾ ಹ್ಹಾ ಹ್ಹಾ...
  ನಾವು ನಮ್ಮ ಸ್ನೇಹಿತರ ಊರಿಗೆ ಹೋದಾಗ ಸ್ವಲ್ಪ.. ಅಲ್ಲ ಅಲ್ಲ ಸ್ವಲ್ಪ ಜಾಸ್ತಿನೆ ಹುಷಾರಾಗಿರಬೇಕು... (ನನ್ನದು ಇದೆ ತರ ಒಂದು ಕತೆಯಿದೆ.. ಬಹಳ ದಿನಗಳ ಹಿಂದೆಯೇ ಬರೆದಿಟ್ಟಿದ್ದೇನೆ. ಇನ್ನು ಹಾಕಿಲ್ಲ.. ಒಂದು ತಿಂಗಳ ನಂತರ ಹಾಕುತ್ತೇನೆ... ಲೇಟ್ ಆಗಿ ಹಾಕುತ್ತಿರುವುದಕ್ಕೆ ಕಾರಣವು ಇದೆ... :D )
  ಚನ್ನಾಗಿದೆ ನಿಮ್ಮ ಲೇಖನ.. :)

  ReplyDelete
 13. ಹಾಯ್ ದಿನಕರ್,
  ಮೊದಲ ಬಾರಿಗೆ ನಿಮ್ಮ ಬ್ಲಾಗ್ ಗೆ ಬಂದೆ.. ಪಾರಿವಾಳ ಗಳ ಕಥೆ ಚೆನ್ನಾಗಿದೆ... :-)
  ನಿಮ್ಮ ಬ್ಲಾಗ್ ಲಿಂಕ್ ಹುಡುಕುತ್ತಿದ್ದೆ ನಿಮ್ಮ ಪ್ರೊಫೈಲ್ ಗೆ ಹೋದರು ಅದು ಸರಿಯಾಗಿ ಕಾಣುತ್ತಿರಲಿಲ್ಲ... ಮತ್ತೆ ವಿನಯ್ ಅವರ ಬ್ಲಾಗ್ನಿಂದ ನಿಮ್ಮ ಬ್ಲಾಗ್ ನ ಸೇತುವೆ ಕಂಡಿತು... ಲೇಖನ ಚೆನ್ನಾಗಿದೆ... ನಿಮ್ಮ ಸೀನಿಯರ್ ಸ್ತಿತಿ ಇಂಗು ತಿಂದ ಮಂಗ ನನ್ತಾಗಿರಬೇಕು ಅಲ್ಲವೇ :-)... ಉಳಿದ ಲೇಖನ ಗಳನ್ನೂ ಈಗ ಓದುತ್ತಿದ್ದೇನೆ... ಹೀಗೆ ಬರೆಯುತ್ತಿರಿ...
  ಧನ್ಯವಾದಗಳು...

  ReplyDelete
 14. ದಿನಕರ್ ಸರ್
  ತುಂಬಾ ಚೆನ್ನಾಗಿದೆ ಬರಹ
  ಶೈಲಿ ಇಷ್ಟವಾಯಿತು

  ReplyDelete
 15. ಹೀಗೆ ಮುಜುಗರ ಮಾಡುವ ಗೆಳೆಯರು ಸ್ವಲ್ಪ ತೊಂದ್ರೇನೆ... ಆಯಾ ಪರಿಸರಕ್ಕೆ ತಕ್ಕಂತೆ ಹಾವಭಾವ ಇರಬೇಕೆಂಬುದು ಗೊತ್ತೇ ಇರುವುದಿಲ್ಲ... ಎಡವಟ್ಟು ಮಾಡಿಕೊಂಡುಬಿಡುತ್ತಾರೆ...

  ReplyDelete
 16. dinakar avare....

  kavanagala sangha bittu katheya sangha hididhiddhheeri.. thumba majavaagittu e lekhana :)

  ReplyDelete