ಮನಸ್ಸಿನ ಮಾತುಗಳು ಮನಸ್ಸಲ್ಲೇ ಇದ್ದರೆ ಮುತ್ತುಗಳಾಗಲ್ಲ. ಎಲ್ಲೋ ಕೇಳಿದ ಕಥೆ,ಅನುಭವಿಸಿದ ವ್ಯಥೆ, ಇಷ್ಟಪಟ್ಟ ಯಾರದೋ ಸಾಲುಗಳು, ನೋಡಿದ ಸಿನೆಮಾಗಳ ಬಗ್ಗೆ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ಮನಸ್ಸಿಗೆ ತೋಚಿದ್ದನ್ನ, ನೋಡಿದ್ದನ್ನ ಬರೆಯುತ್ತೇನೆ, ನೋವನ್ನ ನಲಿವಿನಿಂದಲೇ ಹೇಳುತ್ತೇನೆ.
Nov 9, 2009
ನನ್ನ ಚಿತ್ತ.............!
ಅಲೆಗಳಿಗೇಕೆ ತಿಳಿದಿಲ್ಲ ನೀ ನನ್ನುಸಿರು,
ಪದೇ ಪದೇ ಅಳಿಸುತ್ತವೆ ನಾ ಬರೆದ ಹೆಸರು.....
ಅವುಗಳು ಅಳಿಸುವುದು ನಿನ್ನ ಹೆಸರು ಮಾತ್ರ,
ಮುಟ್ಟಲಾರವು ಅವು ನನ್ನೆದೆಯೊಳಗಿನ ಚಿತ್ರ.......
ನೀ ನನಗೆ ಪೌರ್ಣಮಿಯ ಬೆಳದಿಂಗಳಂತೆ,
ಕೈಚಾಚಿದರೂ ನಾ, ಸಿಗದೆನಗೆ ನಿನ್ನಯ ನೆರಳು....
ನೀ ನನಗೆ ಮುಗಿಲ ಮಲ್ಲಿಗೆಯಂತೆ,
ನೆನಪು ಘಮ್ಮೆಂದರೂ, ಸಿಗದೆನಗೆ ನಿನ್ನಯ ಬೆರಳೂ ......
ಮುನಿಸಿ ನಡೆದ ಒಡತಿ ಹೊರಟು ಬಾ ಬೇಗ,
ಕಾಯುವುದೇ ಕಾಯಕ ಆಗಿದೆ ನನಗೀಗ.....
ನೀ ಕೊಟ್ಟ ಈ ಪ್ರೀತಿ ಸಾಕು ಪೂರ್ತಿ ಜನ್ಮಕ್ಕೆ,
ನೀ ತಿರುಗಿ ಬಂದ ದಿನ ಮುಕ್ತಿ ಈ ಜೀವಕ್ಕೆ.......
Subscribe to:
Post Comments (Atom)
ಸು೦ದರ ಕವನ....
ReplyDeleteನೀವು ಬಯಸಿದ್ದು ನಿಮಗೆ ಸಿಗಲೆ೦ದು ಹಾರೈಸುತ್ತೇನೆ...
ದಿನಕರ್ ಸರ್,
ReplyDeleteಬಹಳ ಚೆನ್ನಾಗಿದೆ.ಈ ಕವನ ಕಂಡಕೂಡಲೆ ಮುನಿಸಿಕೊಂಡ ಒಡತಿ ಎಲ್ಲವನು ಮರೆತು ಬಂದುಬಿಡುವರು ಬಿಡಿ. ಕಾಯುವುದೇ ಕಾಯಕ ಮಾಡಿಕೊಳ್ಳಬೇಡಿ ಸದಾ ನಿಮ್ಮೊಂದಿಗಿರಲಿ ಆ ನಿಮ್ಮ ಒಡತಿ...
ವಂದನೆಗಳು
ದಿನಕರ್,
ReplyDeleteನೀವಿನ್ನು ಕಾಯುವುದು ಬೇಡ....
ನಿಮ್ಮ ಒಡತಿ ಈ ಕವನ ನೋಡಿದ ಕೂಡಲೆ ನಿಮ್ಮನ್ನು ಸೇರುತ್ತಾರೆ....
ಚೆಂದದ ಕವನ....
ದಿನಕರ್ ಸರ್,
ReplyDeleteತುಂಬ ಚೆಂದದ ಕವನ ...
ನೀ ತಿರುಗಿ ಬಂದ ದಿನ ಮುಕ್ತಿ ಈ ಜೀವಕ್ಕೆ....
ಈ ಸಾಲು ಇಷ್ಟವಾಯಿತು
ಧನ್ಯವಾದಗಳು :)
ಅಲೆಗಳಿಗೇಕೆ ತಿಳಿದಿಲ್ಲ ಇವಳು ನನ್ನವಳೆಂದು... ?
ReplyDeleteಚೆನ್ನಾಗಿದೆ ನಿಮ್ಮ ಕಲ್ಪನೆ..
ನಿಮ್ಮವ,
ರಾಘು.
ಚುಕ್ಕಿ ಚಿತ್ತಾರ ಮೇಡಂ,
ReplyDeleteನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು...
ಮನಸು ಮೇಡಂ,
ReplyDeleteನಿಮ್ಮ ಆಶಯಕ್ಕೆ ಧನ್ಯವಾದಗಳು...
ಮಹೇಶ್ ಸರ್,
ReplyDeleteಮನೆಯ ಒಡತಿ ನನ್ನ ಜೊತೆ ಇದ್ದಾಳೆ ಈಗ .... ನಿಮ್ಮ ಅಭಿಪ್ರಾಯ, ಹಾರೈಕೆಗೆ ಧನ್ಯವಾದ...
ದಿವ್ಯ ಮೇಡಂ,
ReplyDeleteಇಷ್ಟಪಟ್ಟು, ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು....
ರಘು ಸರ್,
ReplyDeleteನಿಮ್ಮ ಫೋಟೋ ನೋಡಿದ್ರೆ ನೀವೂ ಸಹ ಅಲೆಗಳ ಪಕ್ಕ ಕುಳಿತು ಯಾರಿಗೋ ಕಾಯುತ್ತಿರುವ ಹಾಗಿದೆ..... ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದಗಳು....
Wow... ಸುಂದರ ಸಾಲುಗಳು...
ReplyDeleteಕವನದ ಎಲ್ಲ ಸಾಲುಗಳು ಇಷ್ಟವಾದವು...
ಶಿವಪ್ರಕಾಶ್,
ReplyDeleteಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ದಿನಕರ,
ReplyDeleteನಿಮ್ಮ ಕವನದಲ್ಲಿ ವಿರಹಭಾವನೆ ಸೊಗಸಾಗಿ ಮೂಡಿದೆ. ಈ ಕವನವನ್ನು ಒದಿದರೆ, ನಿಮ್ಮ ಒಡತಿ ಓಡಿ ಬರುವದರಲ್ಲಿ ಸಂದೇಹವಿಲ್ಲ!
ಸುನಾಥ್ ಸರ್,
ReplyDeleteನಿಮ್ಮ ಪ್ರೋತ್ಸಾಹಕ್ಕೆ ತುಂಬಾ ತುಂಬಾ ಧನ್ಯವಾದಗಳು....ಒಡತಿ ನನ್ನ ಪಕ್ಕದಲ್ಲಿ ಕುಳಿತು ಇದನ್ನೆಲ್ಲಾ ಓದುತ್ತಿದ್ದಾಳೆ....
ವವ್ ಸರ್ ತುಂಬಾ ಚೆನ್ನಾಗಿದೆ .. ನಿಮ್ಮ ಕವಿತೆಗಳ ನೋಡಿ ಮುನಿಸಿಕೊಳ್ಳುವ ಒಡತಿಯು ನಸುನಕ್ಕು ಒಳ ನಡೆದಾರು ..
ReplyDeleteರಂಜಿತ ಮೇಡಂ,
ReplyDeleteಕಾಮೆಂಟ್ ಗೆ ಧನ್ಯವಾದ..... ಒಡತಿ ಪಕ್ಕದಲ್ಲಿ ಕುಳಿತು ಓದುತ್ತಿದ್ದಾಳೆ.....
ಮೊದಲ ಪ್ಯಾರ ತುಂಬಾ ಇಷ್ಟ ಆಯ್ತು... ಅಳಿಸುವ ಅಲೆಗಳ ಬಗ್ಗೆ ಸುಂದರ ವರ್ಣನೆ.
ReplyDeleteಪ್ರಭು ಸರ್,
ReplyDeleteಇಷ್ಟಪಟ್ಟು ಕಾಮೆಂಟ್ ನೀಡಿದ್ದಕ್ಕೆ ಧನ್ಯವಾದಗಳು..... ಹೀಗೆ ಬರುತ್ತಾ ಇರಿ......
ತುಂಬಾ ಚಂದದ ಕವನ,
ReplyDeleteತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ
ಶಬ್ದಗಳ ಪ್ರಯೋಗ ತುಂಬಾ ಸೊಗಸಾಗಿದೆ
ಗುರು ಸರ್,
ReplyDeleteಓದಿ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..... ಯಾವಾಗ ಬಂದರೂ ಖುಷಿಯೇ...
ತು೦ಬಾ ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ....
ReplyDeleteಯಾರದು ಮುನಿಸಿಕೊ೦ಡ ಒಡತಿ...? :)