Aug 29, 2012

ಒಳ್ಳೆ ಕೆಲಸ.....!!!!


       

        ಏನಾದರೂ  ಪಾರ್ಸೆಲ್ ತೆಗೆದುಕೊಂಡು ಹೋಗೋಣ ಎಂದುಕೊಂಡು ಮನೆಗೆ ಹೋಗುವ ದಾರಿಯಲ್ಲಿದ್ದ ಬಾರ್ ಎಂಡ್ ರೆಸ್ಟೋರೆಂಟ್ ಬಳಿ ಗಾಡಿ ನಿಲ್ಲಿಸಿದೆ......ಪಾರ್ಸೆಲ್ ಗೆ ಒರ್ಡರ್ ಮಾಡಿ ಕೌಂಟರ್ ಬಳಿ ನಿಂತಿದ್ದೆ...... ಸುಮಾರು ಎಂಟು ಘಂಟೆಯಾಗಿತ್ತು...... ರೋಡ್ ಆ ಕಡೆಯಿಂದ ಒಬ್ಬ ಹುಡುಗ ಬರೀ ಕೈಯಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಅನುಕರಣೆ ಮಾಡುತ್ತಾ ಬರುತ್ತಿದ್ದ....... ಅಂಗಿ ಚಡ್ಡಿ ಎಲ್ಲಾ ಕೊಳೆಯಾಗಿತ್ತು..... ಪಕ್ಕದಲ್ಲೇ ಒಂದು ಬ್ರಿಡ್ಜ್ ಕೆಲಸ ನಡೆಯುತ್ತಿತ್ತು...... ಅಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಹುಡುಗ ಎನಿಸಿತು....... ಆತ ಸೀದಾ ಬಾರ್ ಎಂಡ್ ರೆಸ್ಟೋರೆಂಟ್ ಬಂದು ನನ್ನನ್ನೂ ಕ್ರಾಸ್ ಮಾಡಿ ಕೌಂಟರ್ ಹತ್ತಿರ ಹೋದ..... ಇವನ್ಯಾಕೆ ಇಲ್ಲಿ ಎನಿಸಿತು...... ಹುಡುಗ ಬಹಳ ಚೂಟಿಯಾಗಿದ್ದ..... ಸುಮಾರು ಹನ್ನೆರಡು ವರ್ಷ ಪ್ರಾಯ ಇರಬಹುದು...... ಕೌಂಟರ್ ನಲ್ಲಿ ಹಣ ಕೊಟ್ಟು ಇನ್ನೊಂದು ಕಡೆ ಹೋದ.... ನಾನು ಆತನನ್ನೇ ಗಮನಿಸುತ್ತಿದ್ದೆ...... ಆತ ಸೀದಾ ಮದ್ಯ ಮಾರುವ ಕೌಂಟರ್ ಗೆ ಹೋದ..... ನನಗೆ ಆಶ್ಚರ್ಯ ಆಯ್ತು..... 

        ಈ ಹುಡುಗ ಅಲ್ಯಾಕೆ ಹೋಗಿದ್ದಾನೆ..? ಮಕ್ಕಳು ಇತ್ತೀಚಿಗೆ ಕುಡಿಯಲು ಶುರು ಮಾಡಿದ್ದಾರೆ.... ಅದೇ ಚಟವಾಗಿ ಅವರ ಸಣ್ಣ ಕರಳನ್ನ ಸುಟ್ಟು ಹಾಕಿ , ಅವರ ಸಾವಿಗೆ ಕಾರಣವಾಗಿದೆ ಎಂದು ಪೇಪರ್ ನಲ್ಲಿ ಓದಿದ್ದೆ..... ಈ ಹುಡುಗನೂ ಕುಡಿಯುತ್ತಾನಾ..? ಕೂಲಿ ಕಾರ್ಮಿಕರಿಗೆ ತಮ್ಮ ಮಕ್ಕಳ ಮೇಲೆ ಗಮನ ಹರಿಸಲು ಸಾಧ್ಯವಾಗದೇ ಈ ರೀತಿ ಆಗುತ್ತಿದ್ದಾರಾ....?  ಈ ಹುಡುಗ ಶಾಲೆಗೆ ಹೋಗುತ್ತಿದ್ದಾನಾ...? ತಲೆ ತುಂಬಾ ಪ್ರಶ್ನೆಗಳೇ ತುಂಬಿದವು...... ಕೌಂಟರ್  ನಲ್ಲಿದ್ದ ಯುವಕ ಗ್ಲಾಸ್ ನಲ್ಲಿ ವಿಸ್ಕಿ ಸುರಿಯುತ್ತಿದ್ದ....... ಆ ಹುಡುಗ ಅದನ್ನ ಎತ್ತಿಕೊಂಡ..... ನನಗೆ ಇನ್ನೂ ಗಾಬರಿಯಾಯಿತು....ಕೌಂಟರ್ ನ ಯುವಕ ಒಂದು ಕಡೆ ಕೈ ತೋರಿಸಿದ.....
ಆ ಹುಡುಗ ಗ್ಲಾಸ್ ಎತ್ತಿಕೊಂಡು ಒಂದು ಟೇಬಲ್ ನಲ್ಲಿ ಕುಳಿತಿದ್ದ ವ್ಯಕ್ತಿಗೆ ಕೊಟ್ಟ..... ನನಗೆ ಸಮಾಧಾನ ಆಯ್ತು...... 

      ಆ ಹುಡುಗ ಮತ್ತೆ ಕೌಂಟರ್ ಕಡೆ ಬಂದ...  ನನಗೆ ಮತ್ತೆ ತಲೆಬಿಸಿ ಶುರುವಾಯ್ತು.... ಮತ್ತೆ ಯಾಕೆ ಅಲ್ಲಿಗೆ ಹೋಗುತ್ತಿದ್ದಾನೆ ಎನಿಸಿತು..... ಕೌಂಟರ್ ಯುವಕ ಒಂದು ವಿಸ್ಕಿ ಬಾಟಲನ್ನು ಪೇಪರ್ನಲ್ಲಿ ಸುತ್ತಿ ಆ ಹುಡುಗನ ಕೈಲಿ ಕೊಟ್ಟ....... ಆ ಹುಡುಗ ಮತ್ತದೇ ಬರಿಗೈಯಲ್ಲಿ ಬ್ಯಾಟಿಂಗ್ ಬೌಲಿಂಗ್ ಅನುಕರಣೆ ಮಾಡುತ್ತಾ ಹೊರಗೆ ಹೋದ...... ನನಗೆ ನಗು ಬಂತು.... ನನ್ನನ್ನು ನನ್ನ ಪ್ರಾಥಮಿಕ ಶಾಲೆಯ ನೆನಪು ತಂದಿತು.......

      ನಾನು ಮೂರನೇ ತರಗತಿ ಇದ್ದೆ ಅನಿಸತ್ತೆ..... ನನ್ನ ಜೊತೆ ಶಂಕ್ರ ಅಂತ ನನ್ನ ಕ್ಲಾಸ್ ಮೇಟ್ ಇದ್ದ...... ಎಲ್ಲಾ ಶಾಲೆಯಲ್ಲಿ ಇದ್ದೇ ಇರುವ ಫಟಿಂಗನಾಗಿದ್ದ...  ಆವಾಗೆಲ್ಲ ಮೂರನೇ ತರಗತಿಯಿಂದ ನಮಗೆಲ್ಲಾ  "ಒಳ್ಳೆಯ ಕೆಲಸದ ಪಟ್ಟಿ" ಅಂತ ಒಂದು ಪಟ್ಟಿ  ಇರುತ್ತಿತ್ತು..... ಅದರಲ್ಲಿ ದಿನಾಲೂ ನಾವು ಮಾಡಿದ (?????) ಒಂದು ಒಳ್ಳೆ ಕೆಲಸವನ್ನು ಬರೆಯಬೇಕಿತ್ತು.... ಮಾಡದೇ ಇದ್ದರೂ ಬರೆಯಬೇಕಿತ್ತು..... ಒಂದು ದಿನ ನಮ್ಮ ಟೀಚರ್ ಗೆಳೆಯ ಶಂಕ್ರ ಬರೆದ ಒಳ್ಳೆಯ ಕೆಲಸದ ಪಟ್ಟಿ ನೋಡುತ್ತಿದ್ದರು..... ಓದಿದವರೇ ಅದೇ ಪಟ್ಟಿಯಿಂದ ಅವನ ತಲೆಯ ಮೇಲೆ ಹೊಡೆದರು..... ಅವನು ತಲೆ ಉಜ್ಜಿಕೊಳ್ಳುತ್ತಾ " ಬರೆದದ್ದು ತಪ್ಪಾಯಿತಾ ಸಾರ್? "ಎಂದ..... ಅವರು " ಅಪ್ಪನಿಗೆ ಬೀಡಿ ತಂದಿದ್ದು ಹೇಗೆ ಒಳ್ಳೆಯ ಕೆಲಸವಾಗುತ್ತದಾ ನಿನಗೆ.....?" ಎಂದರು.... ಅವನು...." ಒಳ್ಳೆಯ ಕೆಲಸ ಅಲ್ವಾ ಸಾರ್ ಅದು...?" ಎಂದ..... " ಬೇರೆ ಎನಾದರೂ ಬರೆ ಮಾರಾಯಾ....." ಎಂದರು ನಮ್ಮ ಸರ್..... ನನ್ನ ಪಟ್ಟಿ ತೆಗೆದುಕೊಂಡು ಓದಿದರು..... ನಾನು ಆ ದಿನ ’ ರಸ್ತೆಯ ಮೇಲೆ ಬಿದ್ದಿದ್ದ ಕಲ್ಲನ್ನು ಎತ್ತಿ ಚರಂಡಿದೆ ಎಸೆದೆನು’ ಎಂದು ಬರೆದಿದ್ದೆ..... ನನಗೂ ಬಿತ್ತು ಹೊಡೆತ..... " ಕಲ್ಲು ಎತ್ತಿ ಚರಂಡಿಗೆ ಎಸೆದರೆ ನೀರು ಹೋಗೋದು ಹ್ಯಾಗೆ.....?" ಎಂದರು..... ನಾನು ಬರೆದ ಸಾಲಿನ ಮೇಲೆ ಕೆಂಪು ಸಾಯಿಯಿಂದ ಗೆರೆ ಎಳೆದರು......

   ಇನ್ನೊಬ್ಬ ಹುಡುಗಿಯ ಹತ್ತಿರ ಹೋದರು..... ಅವಳ ಪಟ್ಟಿ ತೆಗೆದುಕೊಂಡು ಓದಿದರು..."ನೋಡು ಇವಳು ಸರಿ ಬರೆದಿದ್ದಾಳೆ.....’ ಅಮ್ಮನಿಗೆ ಹಾಲು ತಂದು ಕೊಟ್ಟೆನು.....’ ಸರಿಯಾಗಿ ಬರೆದಿದ್ದಾಳೆ..." ಎಂದರು..... ನಾನು ಮತ್ತು ಶಂಕ್ರ ಮುಖ ಮುಖ ನೋಡಿಕೊಂಡೆವು..... ಮಾಸ್ತರರು ಇನ್ನೂ ಮುಂದಕ್ಕೆ ಹೋದರು.... ನಮಗೆ ಗೊತ್ತಿತ್ತು ಮತ್ತೊಬ್ಬ ಎನು ಬರೆದಿದ್ದಾನೆ ಅಂತ.....

ಯಾಕೆಂದ್ರೆ..................
...........



 ಶಾಲೆ ಶುರುವಾಗುವ ಹತ್ತು ನಿಮಿಶದ ಮೊದಲಷ್ಟೇ ನಾವು ಒಳ್ಳೆಯ ಕೆಲಸದ ಪಟ್ಟಿ ಬರೆಯುತ್ತಿದ್ದುದು...ಒಳ್ಳೆಯ ಕೆಲಸವನ್ನು ಹಂಚಿಕೊಂಡು ಬರೆಯುತ್ತಿದ್ದೆವು.....ಒಬ್ಬರ ಹಾಗೆ ಇನ್ನೊಬ್ಬರು ಬರೆಯಬಾರದು ಎಂಬುದು ಶಂಕ್ರನ ಆದೇಶವಾಗಿತ್ತು..... ನಮ್ಮ ಒಳ್ಳೆಯ ಕೆಲಸವೆಲ್ಲ ಹೀಗೇ ಇರುತ್ತಿತ್ತು.....
" ಅಪ್ಪನಿಗೆ ಬೀಡಿ ತಂದು ಕೊಟ್ಟೆನು....."
"ಅಮ್ಮನಿಗೆ ಹಾಲು ತಂದು ಕೊಟ್ಟೆನು....."
"ಅಮ್ಮನಿಗೆ ಹೂವು ತಂದು ಕೊಟ್ಟೆನು....."
"ಅಪ್ಪನಿಗೆ ಬೀಡಿ ಹಚ್ಚಿಕೊಂಡು ತಂದು ಕೊಟ್ಟೆನು....."
"ಅಪ್ಪನಿಗೆ ಸಾರಾಯಿ ತಂದು ಕೊಟ್ಟೆನು....."
"ಅಪ್ಪ ಕುಡಿದ ಸಾರಾಯಿ ಲೋಟ ತೊಳೆದು ಇಟ್ಟೆನು....."
" ರಸ್ತೆಯ ಮೇಲಿದ್ದ ಕಲ್ಲನ್ನು ಚರಂಡಿಗೆ ಎಸೆದೆನು....."
ಪಟ್ಟಿ ತುಂಬಿದ ನಂತರ ಮತ್ತದೇ ಹಿಂದಿನ ಪಟ್ಟಿಯ ಒಳ್ಳೆಯ ಕೆಲಸ ಪುನ್ಃ ಬರೆಯುತ್ತಿದ್ದೆವು.....

      ಸರ್ ಇನ್ನೊಬ್ಬನ ಹತ್ತಿರ ಹೋಗಿ ಪಟ್ಟಿ ನೋಡಿ ಅವನ ತಲೆ ಮೇಲೆ ಹೊಡೆದರು...... ನಮ್ಮ ಶಂಕ್ರ ಸುಮ್ಮನಿರಬೇಕಲ್ಲ...ಕೇಳಿಯೇಬಿಟ್ಟ..... "ಸಾರ್.. ಅಮ್ಮನಿಗೆ ಹಾಲು ತಂದು ಕೊಡೋದು ಒಳ್ಳೆ ಕೆಲಸ ವಾದರೆ,ಅಪ್ಪನಿಗೆ  ಬೀಡಿ ತಂದು ಕೊಡೋದು ಹೇಗೆ ಕೆಟ್ಟ ಕೆಲಸ ಸಾರ್.....? ಎಂದ..... ನಮ್ಮ ಸರ್ ಗೆ ನಗು ಬಂತು.... ಅವರು ತುಂಬಾ ಒಳ್ಳೆಯ ಮಾಸ್ತರರಾಗಿದ್ದರು.....ತುಂಬಾ ಶಾಂತವಾಗಿ....." ಬೀಡಿ ಸೇಯೋದು ಕೆಟ್ಟ ಕೆಲಸ..... ಅದನ್ನು ತಂದು ಕೊಡೋದು ಸಹ ಕೆಟ್ಟ ಕೆಲಸವೇ...." ಎಂದರು..... ನಮ್ಮ ಶಂಕ್ರ ಸುಮ್ಮನಿರಬೇಕಲ್ಲ..... " ಅಲ್ಲ ಸಾರ್, ಮೊನ್ನೆ ನೀವೇ ಹೇಳಿದ್ರಿ..... ಅಪ್ಪ ಅಮ್ಮ ಎಂದರೆ ದೇವರ ಸಮಾನ..... ಅವರ ಸೇವೆ ಮಾಡಬೇಕು ಅಂತ..... ಈಗ ಅವರ ಸೇವೆ ಮಾಡಿದ್ರೂ ಕೆಟ್ಟ ಕೆಲಸ ಅಂತೀರಲ್ಲ ಸರ್....." ಎಂದ.... ನಾವೆಲ್ಲಾ ನಕ್ಕೆವು..... "ಹೇಯ್ ಸುಮ್ಮನಿರ್ರೋ ಎಲ್ರು..... " ಅಪ್ಪ ಕೆಟ್ಟ ಕೆಲ್ಸ ಮಾಡಿದ್ರೆ ..... ಅದು ಕೆಟ್ಟ ಕೆಲಸಾನೇ....." ಅಂದರು ನಮ್ಮ ಸರ್..... ಶಂಕ್ರ ಬಿಡಲೇ ಇಲ್ಲಾ..... " ಕೆಟ್ಟ ಕೆಲಸ ಮಾಡಿದ್ದು ಅಪ್ಪ ಆದ್ರೆ, ಅವರಿಗೇ ಹೇಳಿ ಸರ್..... ಮುಂದಿನ ಸಾರಿ ಮೀಟಿಂಗ್ ಗೆ ಬಂದಾಗ" ಎಂದ..... "ಸುಮ್ಮನೆ ಕುಳಿತುಕೊಳ್ಳೋ ಕತ್ತೆ" ಎಂದರು ಸರ್ ಸಿಟ್ಟಿನಲ್ಲಿ.....

      ಅದೆಲ್ಲಾ ನೆನಪಾಯಿತು ಈ ಹುಡುಗನ ಕೆಲಸ ನೋಡಿ..... ಈಗಲೂ " ಒಳ್ಳೆಯ ಕೆಲಸದ ಪಟ್ಟಿ" ಬರೆಯುವ ಪದ್ದತಿ ಇದ್ದರೆ ನಾಳೆನೂ ಈ ಹುಡುಗ ತನ್ನ ಪಟ್ಟಿಯಲ್ಲಿ " ಅಪ್ಪನಿಗೆ ಸಾರಾಯಿ ತಂದು ಕೊಟ್ಟೆನು" ಎಂದು ಬರೆಯುತ್ತಾನೆ ಎನಿಸಿಕೊಂಡೆ..... ನಗು ಬಂತು.... ನನ್ನ ಪಾರ್ಸೆಲ್ ಸಹ ಬಂತು....

44 comments:

  1. ಹ ಹ...ಒಳ್ಳೆಯ ಲೇಖನ...ಹೌದು..ಶಾಲೆಯಲ್ಲಿ ಆ ತರಹದ ಅಭ್ಯಾಸಗಳು ಕೆಲವೊಮ್ಮೆ ಮಾಸ್ತರನ್ನು ಪೇಚಿಗೆ ಸಿಕ್ಕಿಸಿ ಬಿಡುತಿದ್ದವು..ಮಕ್ಕಳ ಮಧ್ಯ ಮದ್ಯ ಕುಡಿಯುತ್ತ ಕುಳಿತರೆ...ಮಕ್ಕಳ ಮುಂದೆ ನೀರು ಸೇದುವ ಬದಲು ಬೀದಿ ಸೇದಿದರೆ ಹೀಗೆ ಆಗುತ್ತದೆ...ನಿಮ್ಮ ಶೈಲಿಯ ಕತೆ ಹೇಳುವ ರೂಪ ಬಲು ಇಷ್ಟ...ಮಾರ್ಮಿಕ ಸಂಗತಿಯನ್ನ ಅಷ್ಟೇ ಸಲೀಸಾಗಿ ಮನಮುಟ್ಟುವಂತೆ ಹೇಳುವ ಕಲೆ ಚೆನ್ನಾಗಿದೆ..

    ReplyDelete
    Replies
    1. ಧನ್ಯವಾದ ಸರ್... ಎನೋ.... ನನಗೆ ತೋಚಿದ ಹಾಗೆ ಬರೆಯುತ್ತೇನೆ..... ನಿಮಗೆ ಇಷ್ಟವಾದರೆ ಅದೇ ನನಗೆ ಸಾಕು...

      Delete
  2. ದಿನಕರ್ ಸರ್ ಎಂತಹ ಸನ್ನಿವೇಶಗಳು ನಿಮ್ಮ ಬ್ಲಾಗ್ ಮೂಲಕ ಬರುತ್ತಿವೆ. ರಸವತ್ತಾದ ಕ್ಷಣಗಳ ಅನಾವರಣ ಚೆನ್ನಾಗಿ ಮೂಡಿಬಂದಿದೆ. ಜೊತೆಗೆ ಸಿಹಿ ಕಡುಬಿನ ಹೂರಣದಂತೆ ನಿಮ್ಮ ಲೇಖನದೊಳಗೆ ಮಾನವೀಯ ಕಾಳಜಿಯ ಸಂದೇಶವಿದೆ . ಜೈ ಹೋ ಸಾರ್.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
    Replies
    1. ಬಾಲು ಸರ್,
      ನಿಮ್ಮ ಪ್ರೋತ್ಶಾಹಕ್ಕೆ ಶರಣು..... ನಿಮ್ಮ ಪ್ರೀತಿಗೆ ಆಭಾರಿ.... ಲೇಖನ ಇಷ್ಟಪಟ್ಟಿದ್ದಕ್ಕೆ ತುಂಬಾ ಧನ್ಯವಾದ....

      Delete
  3. ನಾವೂ ಹೀಗೆ ಬರೆಯುತ್ತಿದ್ದುದು ನೆನಪಾಯಿತು..:)
    ನಾವು ಬೈಸಿಕೊಳ್ಳುವ೦ತೆ ಯಾವತ್ತೂ ಬರೆಯುತ್ತಿರಲಿಲ್ಲ! ರಸ್ತೆಯಲ್ಲಿ ಬಿದ್ದಿದ್ದ ಕಲ್ಲನ್ನು ಎತ್ತಿ ಹಾಕಿದೆ, ಅ೦ತ ಬರೆಯುತ್ತಿದ್ದೆವು ಎಲ್ಲಿ ಹಾಕಿದಿರಿ ಅ೦ತಾ ಮಾಸ್ತರರು ಕೇಳುತ್ತಿರಲಿಲ್ಲ.. ನಾವೂ ಬರೆಯುತ್ತಿರಲಿಲ್ಲ. ಯಾವುದನ್ನೂ ಕರಾರುವಕ್ಕಾಗಿ ಬರೆಯುತ್ತಿರಲಿಲ್ಲ.. ತಾಯಿಗೆ ಸಹಾಯ ಮಾಡಿದೆನು ತ೦ದೆಗೆಸಹಾಯ ಮಾಡಿದೆನು.. ಏನು ಅ೦ತ ಮಾಸ್ತರರು ಕೇಳುತ್ತಿರಲಿಲ್ಲ.. ಯಾವುದಾದರೂ ಆಗಿರಲಿ.. :))
    ಚ೦ದದ ಬರಹ..

    ReplyDelete
    Replies
    1. ವಿಜಯಶ್ರೀ ಮೇಡಮ್,
      ನಮಗೆ ಆಗೆಲ್ಲಾ, ಬೀಡಿ ಸೇಯೋದು ತಪ್ಪು ಅಂತಾನೆ ಗೊತ್ತಿರಲಿಲ್ಲ ...... ಮಜಾ ಇತ್ತು ಆ ದಿನಗಳೂ..... ನಿಮ್ಮ ನೆನಪು ಕೆದಕಿದೆ ನಾನು...ಧನ್ಯವಾದ ನಿಮ್ಮ ಮೆಚ್ಚುಗೆಗೆ...

      Delete
  4. nice one and a good observation from your side..

    ReplyDelete
  5. ದಿನಕರ್ ಸರ್: ನಿಮ್ಮ ಕಿರುಪ್ರಭಂದ ಓದಿ ನನ್ನ ಬಾಲ್ಯದ ನೆನಪಾಯ್ತು..

    ReplyDelete
  6. ನಮಗೂ ಹೀಗೆ ಒಳ್ಳೆ ಕೆಲಸ ಬರೆಯುವ ಪುಸ್ತಕವಿತ್ತು. ಒಮ್ಮೆ ನಾನು ಅತ್ತಿಗೆಗೆ ಹೆರಿಗೆಗಾಗಿ ಬಸ್ಸು ಹತ್ತಿಸಿ ಬಂದೆ ಅಂತ ಬರೆದೆ. ಆವತ್ತು ಇಡೀ ಕ್ಲಾಸಿಗೆ ಏಟು ಬಿದ್ದಿತ್ತು. ಏಕೆಂದರೆ ಎಲ್ಲರೂ ನನ್ನ ಪುಸ್ತಕವನ್ನೇ ಕಾಪಿ ಹೊಡೆದಿದ್ದರು.

    ಇದು ಅತ್ಯುತ್ತಮ ಲೇಖನ ಸಾರ್.

    ReplyDelete
    Replies
    1. hh hha...nimma anubhavave sakkat aagide sir....
      thank you for your support....

      Delete
  7. ನಿಮ್ಮ ಲೇಖನ ಓದಿ ಹಳೆಯ ನೆನಪು ಕಾಡುತ್ತದೆ...ಜೊತೆಗೆ ನೀತಿಯನ್ನು ಸಹಾ ಕಲಿಸುತ್ತದೆ...ಧನ್ಯವಾದಗಳು..

    ReplyDelete
  8. ಹಹಹ... ಚೆನ್ನಾಗಿದೆ ಸರ್. ನಿಮ್ಮ ಪಟ್ಟಿ.. ಒಳ್ಳೇ ಸ್ನೇಹಿತ ಇದ್ರು ನಿಮ್ಮ ಜೊತೆ

    ReplyDelete
  9. hi Dinakar,
    Gud-1... I Enjoy reading your writings :)....
    ... ಓದುವಾಗ ನಿಮ್ಮ ಬಾಲ್ಯದ / ನಿಮ್ಮ ಶಾಲೆಯ / ನಿಮ್ಮ ಸ್ನೇಹಿತರ ಚಿತ್ರಣ ಮೂಡಿದ್ದು ನಿಜ......
    ಅಂತೆಯೇ ಒಬ್ಬ ಪುಟ್ಟ ಹುಡುಗನ ಬಗ್ಗೆ ನಿಮ್ಮ ಖಾಳಜಿ, ಚಿಂತೆಗೊಳಗಾದ ನಿಮ್ಮ ಮನಸಿನ ಚಿತ್ರಣ ಮೂಡಿದ್ದು ಸಹ ನಿಜ...
    liked it :)
    Roopa

    ReplyDelete
    Replies
    1. Thank you very much Roopa madam... nimma protshaahave namage spoorti...

      thank you....

      Delete
  10. ತು೦ಬಾ ಚೆನ್ನಾಗಿದೆ ಸರ್,"ಒಳ್ಳೆ ಕೆಲಸದ ಪಟ್ಟಿ" ಬಗೆಗಿನ ಲೇಖನ.ನನಗೂ ನನ್ನ ಶಾಲೆಯ ದಿನಗಳು ನೆನಪಾಯಿತು......

    ReplyDelete
  11. Replies
    1. Nimma modala bheti nanna blog ge....

      thank you for your comment...

      Delete
  12. ದಿನಕರ್ ಸರ್....

    ಸರಾಗವಾಗಿ ಓಡಿಸಿಕೊಂಡು ಹೋದ ಬರಹ....ಬಹಳ ಚೆನ್ನಾಗಿದೆ....ಈ ಒಳ್ಳೆಯ ಕೆಲಸಗಳ ಬಗ್ಗೆ ಬರೆಯುವ ದಿನಚರಿ ನಮ್ಮ ಶಾಲೆಯಲ್ಲೂ ಇತ್ತು. 'ದಿನಚರಿ' ಪುಸ್ತಕವೆಂದೇ ಅದರ ಹೆಸರಿತ್ತು....ನಾವು ನಿಮ್ಮ ಹಾಗೆ ಎಲ್ಲಾ ಸೇರಿ ಯಾರು ಯಾರು ಏನು ಬರೆಯುವುದು ಎಂದು ನಿರ್ಧರಿಸಿಕೊಂಡು ಶಾಲೆಯಲ್ಲೇ ಬರೆಯುತಿದ್ದೆವು. ನನಗೆ ಇನ್ನೂ ನೆನಪಿದೆ ..ನಾನು ಯಾವಾಗಲೂ' ದನಕ್ಕೆ ಹುಲ್ಲು ಹಾಕಿದೆ' ಎಂದು ಬರೆಯುತಿದ್ದೆ. ಚೆನ್ನಾಗಿದೆ ನಿಮ್ಮ ಬರಹ.....ಬರಹದಿಂದ ಬರಹಕ್ಕೆ ಪ್ರಬುದ್ಧರಾಗುತಿದ್ದೀರಿ....ಇನ್ನೂ ಹೆಚ್ಚು ಹೆಚ್ಚು ಉತ್ತಮ ಬರಹಗಳು ಮೂಡಿಬರಲಿ.....ಧನ್ಯವಾದಗಳು.

    ReplyDelete
    Replies
    1. Ashok sir,
      HHa hha..nimma anubhava super.... thank you for your support and encouragement ..
      thank you again...

      Delete
  13. ಬದುಕಿನ ಒಂದು ಮೂಲತತ್ವವನ್ನೇ ಕೆದಕಿದ್ದೀರಿ. ಯಾವುದು ಒಳ್ಳೆಯ ಕೆಲಸ?

    ReplyDelete
  14. ನಿಮ್ಮ ಶೈಲಿ ಹಾಗೆಯೇ ಓಡಿಸಿಕೊಂಡು ಹೋಗುತ್ತದೆ. ಒಂದು ಸರಳ ಕಥೆಯ ಮೂಲಕ ಸೂಕ್ಷ್ಮವಾದ ವಿಚಾರ ಮಂಡಿಸಿದ್ದೀರಿ. ಹೀಗೇ ಬರೆಯುತ್ತಿರಿ. ಶುಭವಾಗಲಿ :)

    ReplyDelete
  15. ಚಂದದ ನೆನಪುಗಳು....
    ಒಳ್ಳೆಯ ಕೆಲಸ ಮಾಡುವ ಪಟ್ಟಿ, ನಾನು ಗೈಡ್ಸ್ ಸೇರಿದ್ದಾಗ ಇತ್ತು ಅದರ ನೆನಪಾಯಿತು...

    ನನ್ನ ಬ್ಲಾಗ್ ಗೆ ಬೇಟಿ ನೀಡಿ, ಪ್ರತಿಕ್ರಿಯಿಸಿದ್ದಿಕ್ಕೆ ಧನ್ಯವಾದಗಳು ಸರ್...

    ReplyDelete
    Replies
    1. ಮೌನರಾಗ,
      ಧನ್ಯವಾದ ನಿಮ್ಮ ಅನಿಸಿಕೆಗೆ.... ನಿಮ್ಮ ಬ್ಲಾಗ್ ಗೆ ನಾನು ಭೇಟಿ ಕೊಡುತ್ತಾ ಇರುತ್ತೇನೆ.... ನಿಮ್ಮ ಅನಿಸಿಕೆಗಳನ್ನೂ ಹಂಚಿಕೊಳ್ಳಿ....

      Delete
  16. ಬಹಳ ಚನ್ನಾಗಿ ಬರೆದಿರಿ ದಿನಕರ್... ಸರಳವಾದರೂ ಕೆಲ ವಿಷಯಗಳು ಅವಿಸ್ಮರಣೀಯ ಛಾಪು ಮೂಡಿಸುತ್ತವೆ, ಅದರಲ್ಲೂ ಅನುಭವಿಸಿದ ಘಟನೆಗಳು...

    ReplyDelete
    Replies
    1. ಅಜ಼ಾದ್ ಸರ್,
      ನಿಮ್ಮ ಪ್ರೊತ್ಸಾಹಕರ ಅನಿಸಿಕೆಗೆ ತುಂಬಾ ಧನ್ಯವಾದ.....ಹೌದು.... ಕೆಲ ವಿಶಯಗಳು ಮನಸ್ಸಿನ ಮೇಲೆ ತುಂಬಾ ಪ್ರಭಾವ ಬೀರಿರುತ್ತವೆ....

      Delete
  17. ದಿನಕರ್...

    ಮನತಟ್ಟುವ ಲೇಖನ...

    "ಅಪ್ಪನಿಗೆ ಸಹಾಯ ಮಾಡುವದು ಒಳ್ಳೆಯ ಕೆಲಸ"

    ಯಾವುದು ಒಳ್ಳೆಯದು.. ಕೆಟ್ಟದ್ದು?

    ಒಳ್ಳೆಯ ಕೆಲಸದ ಪರಿಣಾಮ ಕೆಟ್ಟದಿದ್ದರೆ ಅದು ಕೆಟ್ಟ ಕೆಲಸವೇ ಆಗಿರುತ್ತದೆ..

    ತುಂಬಾ ಮಾರ್ಮಿಕವಾಗಿ ಬರೆದಿದ್ದೀರಿ...

    ಪ್ರತಿಕ್ರಿಯೆಗೆ ತಡ ಆಗೋಯ್ತು... ಬೇಸರ ಬೇಡ..

    ಪ್ರೀತಿಯಿಂದ
    ಡುಮ್ಮಣ್ಣ.

    ReplyDelete
    Replies
    1. ಪ್ರಕಾಶಣ್ಣ,
      ನಿಮ್ಮ ಅನಿಸಿಕೆ ಯಾವಾಗ ಬಂದರೂ ಸ್ವಾಗತ..... ಚಿಕ್ಕ ವಯಸ್ಸಿನಲ್ಲಿ ಅನುಭವಿಸಿದ ತುಂಬಾ ಪ್ರಸಂಗಗಳಿಗೆ ತಲೆಬುಡ ಇರಲ್ಲ...ಆದ್ರೂ ಮನಸಲ್ಲಿ ತುಳಿತಿರತ್ತೆ...

      ದನ್ಯವಾದ ನಿಮ್ಮ ಪ್ರೊತ್ಸಾಹಕ್ಕೆ..

      Delete
  18. ದಿನಕರ,

    ತಮಾಷೆಯಾಗಿ ಓಡಿಸಿಕೊಂಡು ಹೋಯ್ತು ಲೇಖನ..
    ನಗು ನಗುವಿನ ನಡುವೆಯೇ ನೀವು ಕೆಲವೊಂದು ವಾಸ್ತವಗಳಿಗೆ ಕನ್ನಡಿ ಹಿಡಿದಿದ್ದು ನಿಮ್ಮ ಸಮಾಜ ಅಭಿಮುಖ ಕಾಳಜಿಯ ಪ್ರತೀಕ

    ReplyDelete
  19. ನಿಮ್ಮ ವಿದ್ಯಾರ್ಥಿ ಜೀವನದ ನೆನಪು ಚೆನ್ನಾಗಿದೆ! ಲೇಖನ ಚಿ೦ತನ ಯೋಗ್ಯವಾಗಿದೆ. ಧನ್ಯವಾದಗಳು.

    ReplyDelete
    Replies
    1. Prabhaamani madam,
      thank you very much...... nimma anisike namage mukhya....

      thank you...

      Delete
  20. Thank you very much Vasant sir...
    thank you for your support...

    ReplyDelete
  21. ಯೋಚಿಸಿದ ಹಾಗೆ ಗೆಚಿದ್ದು ಕಥೆಯಾಗಿರುವದು ತಮ್ಮ ಪ್ರತಿಭೆಗೆ ನಿದರ್ಶನ

    ReplyDelete