Apr 16, 2011

ಪ್ರೀತಿಯಿಂದ....... ಪ್ರೀತಿಯಿಂದ......

ಅಂದು ಅಗಷ್ಟ್ ೨೨ ೨೦೧೦......
 
ಎಲ್ಲೆಲ್ಲೋ ಕಂಪ್ಯೂಟರ್ ಮುಂದೆ ಕುಳಿತು ಕಥೆ, ಕವನ, ನಮಗನಿಸಿದ್ದನ್ನ ಕುಟ್ಟುತ್ತಾ ಕುಳಿತಿದ್ದ ನಾವೆಲ್ಲಾ ಮೊದಲ ಬಾರಿಗೆ ಸೇರಿದ ದಿನ.....

 ತಮ್ಮ ತಮ್ಮ ಸಮಸ್ಯೆ ಜಂಜಾಟದಲ್ಲೂ ಮತ್ತೊಬ್ಬರ ಮುಖ ನೋಡದೇ ಇದ್ದರೂ, ಅವರ ಖುಶಿಗೆ ನಕ್ಕು... ನೋವಿಗೆ ಮದ್ದಾಗಿದ್ದೆವು.... 


ಎಲ್ಲರೂ ಒಮ್ಮೆ ಸೇರೋಣ ಎಂದು ಮಾತಾಡುತ್ತಿರುವಾಗಲೇ ಅವಕಾಶ ಹುಡುಕಿಕೊಂಡು ಬಂದಿತ್ತು.....


 ಅದು............


 ಆಜಾದ್ ಸರ್ ಬರೆದ " ಜಲನಯನ " ಶಿವು ಸರ್ ಬರೆದ " ಗುಬ್ಬಿ ಎಂಜಲು'' ಪುಸ್ತಕ ಬಿಡುಗಡೆ ಕಾರ್ಯಕ್ರಮ....

 
ತುಂಬಾ ದೂರದಿಂದ ಬಂದವರೂ ನಗು ನಗುತ್ತಲೇ ಬಂದಿದ್ದೆವು.....
ಮೊದಲ ಸಾರಿ ಭೇಟಿ ಆದರೂ ಜನ್ಮಾಂತರದ ಸಂಭಂದವೇನೋ ಎಂಬಂತೆ ಖುಷಿಪಟ್ಟೆವು..... 


ಕಾಲೆಳೆದವರೂ.... ಕಾಲೆಳೆಸಿಕೊಂಡವರೂ ಎಲ್ಲರೂ ಮುಜುಗರ ಪಡದೇ ತಮ್ಮ ತಮ್ಮ ಸ್ಥಾನಮಾನ ಮರೆತು ಬೆರೆತೆವು.... 


ತಮ್ಮ ತಮ್ಮ ಪರಿಚಯ ಮಾಡಿಕೊಳ್ಳುತ್ತಾ, ಹೇಳಿಕೊಳ್ಳುತ್ತಾ ಇದ್ದ ದೃಶ್ಯ ನನಗಿನ್ನೂ ಕಣ್ಣಿಗೆ ಕಟ್ಟಿದೆ...... 


ಎಲ್ಲರೂ ನಮ್ಮದೇ ಮನೆಯ ಕಾರ್ಯಕ್ರಮ ಎಂಬಂತೆ ಸೇರಿ ನಡೆಸಿ ಕೊಟ್ಟೆವು.......
ತಮಾಶೆಯ ಬಹುಮಾನಕ್ಕೂ ಬೇಸರಿಸದೇ ಎಲ್ಲರೂ ಸೇರಿ ಖುಶಿಪಟ್ಟಿದ್ದೆವು......

ಈಗ ಅಂಥಹುದೇ ಒಂದು ಅವಕಾಶ ಬಂದಿದೆ....


ಇದೇ ತಿಂಗಳ ೨೪ ಕ್ಕೆ.....


''ಬ್ಲಾಗ್ ಲೋಕದ ನಗುವಿನ ಮನೆಯ ಗುತ್ತಿಗೆಗಾರ '' ಪ್ರಕಾಶ್ ಹೆಗಡೆ ಅವರ ಎರಡನೇ ಪುಸ್ತಕ " ಇದೇ ಇದರ ಹೆಸರು " ಬಿಡುಗಡೆಯಾಗುತ್ತಿದೆ.....


ಅವರ ಮೊದಲನೆಯ ಪುಸ್ತಕ ಬಿಡುಗಡೆಯ ಸಮಯದಲ್ಲಿ ನಾನು ಬ್ಲಾಗ್ ಬರೆಯಲು ಶುರು ಮಾಡಿರಲಿಲ್ಲ.... 


ಈಗ ಎರಡನೇ ಪುಸ್ತಕ ಬಿಡುಗಡೆ ಮಾಡುತ್ತಾ ಇದ್ದಾರೆ.... ಮಿಸ್ ಮಾಡೋ ಚಾನ್ಸೇ ಇಲ್ಲ....


ಪ್ರಕಾಶಣ್ಣನ ಮುನ್ನೂರು ವ್ಯಾಟ್ ನಗುವನ್ನು, ನಮ್ಮ ಉಪಸ್ಥಿತಿಯಿಂದ  ನಾಲ್ಕು ನೂರು ವ್ಯಾಟ್ ಮಾಡೋಣ....
ನೀವೂ ಬನ್ನಿ.... ಇನ್ನೊಮ್ಮೆ ಸೇರಿ ನಗುವಿನಲ್ಲಿ ಮುಳುಗೋಣ.....

                    ಬ್ಲಾಗ್ ಬಂಧವನ್ನು ಗಟ್ಟಿ ಮಾಡೊಣ...   

                "ಎಲ್ಲ ಬ್ಲಾಗಿಗರು ಸೇರಿ  ಸಂಭ್ರಮಿಸೋಣ ''


25 comments:

  1. ದಿನಕರಣ್ಣ.. ೨೨ ಅಗಸ್ಟ್ ಅದ್ಭುತವಾದ ದಿನ ಆಗಿತ್ತು.
    ಹಾಗೇನೆ ೨೪ ಎಪ್ರಿಲ್ ಕೂಡ ಒಂದು ಸೊಗಸಾದ ದಿನವಾಗಲಿ ಎನ್ನುವುದೇ ನಮ್ಮ ಆಶಯ..
    ನೀವು ಬೇಗ ಬನ್ನಿ ಸಿಗುವ..:)

    ReplyDelete
  2. Sir,
    nimmannella nodi nange asooye agta ide, nange baroke agta illa anta
    matte neev hegidira

    ReplyDelete
  3. ದಿನಕರ್ ಸರ್ ...ನಾವಂತೂ ಮಿಸ್ ಮಾಡ್ಕೊಳೋಲ್ಲ. ಈ ಆತ್ಮೀಯತೆಗೆ ನಮ್ಮ ಬ್ಲಾಗ್ ಬಳಗಕ್ಕೊಂದು ದೊಡ್ಡ ಥ್ಯಾಂಕ್ಸ್ ಹೇಳ್ಬೆಕು ಅಲ್ವಾ..24th ಗೆ ಸಿಗೋಣ.

    ReplyDelete
  4. Nangu kooda nimmellarannu kaanabekemba aase untu..

    ReplyDelete
  5. Dinakar sir,

    s...aa divsada savi nenapu mareyalaagaddu...matte aa susandarbha koodi bandide....Ji ho....

    ReplyDelete
  6. ದಿನಕರ,
    ಹಾರ್ದಿಕ ಶುಭಾಶಯಗಳು.

    ReplyDelete
  7. ದಿನಕರ್, ವನಿತಾ ಮತ್ತೆ ಎಲ್ಲಾ ಮಿತ್ರರನ್ನು ಒಟ್ಟಿಗೆ ನೋಡೋ ಅವಕಾಶ ಕೈ ತಪ್ತಾ ಇರೋದಕ್ಕೆ ನನಗೆ ಪ್ರಕಾಶನ ಮೇಲೆ ಸಿಟ್ಟಿದೆ..ಹಹಹ ಆದ್ರೆ ಅವನ ಈ ಎರಡ್ನೇ ಕೂಸಿಗೆ ಆಯುರಾರೋಗ್ಯ ಸಮೃದ್ಧಿಯನ್ನ ನಾವು, ನಮ್ಮ ಪರವಾಗಿ ನೀವು ಮತ್ತು ಎಲ್ಲ ಬ್ಲಾಗಿಗರ ಪುನರ್ಮಿಲನಕ್ಕೆ ಶುಭ ಕೋರುತ್ತೇವೆ ಇಲ್ಲಿಂದಲೇ....

    ReplyDelete
  8. ಈ ಕಾರ್ಯಕ್ರಮದ ಬಗ್ಗೆ ತಿಳಿಸಿದ್ದಕ್ಕೆ ಬಹಳ ಧನ್ಯವಾದಗಳು ದಿನಕರ್ ಸಾರ್.. ನಿಮ್ಮೆಲ್ಲರನ್ನೂ ಅಲ್ಲಿ ನೋಡಲು ಬಂದೇ ಬರುತ್ತೇನೆ..

    ReplyDelete
  9. ನನ್ನ ಕಡೆಯಿ೦ದಲೂ ಶುಭಾಶಯ..

    ReplyDelete
  10. ದಿನಕರ್ ಸರ್,
    ಮತ್ತೊಮ್ಮೆ ಎಲ್ಲರೂ ಸೇರಲು ಸುವರ್ಣಾವಕಾಶ. ಎಲ್ಲರೂ ಮತ್ತೆ ಪ್ರಕಾಶ್ ಹೆಗಡೆಯವರ ಎರಡನೇ ಪುಸ್ತಕದ ನೆಪದಲ್ಲಿ ಸೇರಿ ಸಂಭ್ರಮಿಸೋಣ. ಆನಂದಿಸೋಣ. ನಮ್ಮ ಬ್ಲಾಗ್ ಭಂದವನ್ನು ಮತ್ತಷ್ಟು ಗಟ್ಟಿಗೊಳಿಸೋಣ..

    ReplyDelete
  11. i will miss it this time .. 3 days leave .. oorige hogta idini ... please share the photos ..

    ReplyDelete
  12. ಸುಂದರ ದಿನದಲ್ಲಿ ...
    ಅತಿ ಸುಂದರ ಕ್ಷಣದಲ್ಲಿ..
    ಎಲ್ಲರ ಮನದಲ್ಲಿ...
    ಸ್ನೇಹಿತರಾಗಿ ಸೇರೋಣ...
    ನಾನೊ ಬರ್ತೀನಿ...ಎಲ್ಲರೊ ಬನ್ನಿ....

    ReplyDelete
  13. ಶುಭವಾಗಲಿ ಪ್ರಕಾಶಣ್ಣನಿಗೆ ... ನಾವು ಮಿಸ್ ಮಾಡ್ಕೋತಾ ಇದ್ದೀವಿ

    ReplyDelete
  14. nanu yava bloggigarannu nodilla... noda bekemba hambalavide.. baralu prayatnisuttene..

    ReplyDelete
  15. ದಿನಕರ್,
    ನಾನು ಕುವೈತ್ ಗೆ ಬಂದಾಯ್ತು, ನೀವೆಲ್ಲ Enjoy ಮಾಡಿ :)

    ReplyDelete
  16. dinakar sir nanantu khandita bartini intha avakasha bidokagatta ?yalloru seeri enjoy madona jai hoo

    ReplyDelete
  17. '' ಪ್ರಕಾಶ್ ಹೆಗಡೆ ಅವರ ಎರಡನೇ ಪುಸ್ತಕ " ಇದೇ ಇದರ ಹೆಸರು " ಬಿಡುಗಡೆಯಾಗುತ್ತಿರುವುದು ಬಹಳ ಸ೦ತಸದ ವಿಷಯ. ಶುಭಾಶಯಗಳು.`ಹೆಸರೇ ಬೇಡ' ಎ೦ದವರು ಮು೦ದಿನದಕ್ಕೆ ಯಾವ ಹೆಸರು ಇಡುತ್ತಾರೆ ಎ೦ಬ ಕುತೂಹಲವಿತ್ತು! ೨೩-೪-೨೦೧೧ರ೦ದು o/o/d/ ಯಲ್ಲಿ be0gaLuurige baruttiddene . ಅವತ್ತೇ ಇದ್ದಿದ್ದರೆ ಎನಿಸುತ್ತಿದೆ. ತಿಳಿಸಿದ್ದಕ್ಕೆ ಧನ್ಯವಾದಗಳು ದಿನಕರ್.

    ReplyDelete
  18. ಕಥೆ ಚನ್ನಾಗಿದೆ.

    ReplyDelete
  19. ಥ್ರಿಲ್ !! ರೋಮಾಂಚನ !! ತುಂಬಾ ಚೆನ್ನಾಗಿದೆ ದಿನೇಶ್ !!

    ReplyDelete