Mar 21, 2011

"ಮನೆ ಊಟ ದೊರೆಯುತ್ತದೆ.."

"ದೋಸ್ತಾ.... ಹೋಟೆಲ್ ಊಟ ಮಾಡಿ ಮಾಡಿ ಸಾಕಾಗಿದೆ... ಎಲ್ಲಾದರೂ ಮೆಸ್ ಊಟ ಅಥವಾ ಮನೆ ಊಟ ಕರ್ಕೋಂಡು ಹೋಗೊ" ಎಂದೆ ನನ್ನ ಗೆಳೆಯನಿಗೆ...... ಉದ್ಯೋಗ ನಿಮಿತ್ತ ಬೇರೆ ಊರಿಗೆ ಬಂದು ತುಂಬಾ ದಿನಗಳಾಗಿತ್ತು..... ಹೋಟೆಲ್ ಊಟ ಮಾಡಿ ನಾಲಿಗೆ ಕೆಟ್ಟು ಹೋಗಿತ್ತು..... ನನ್ನ ಗೆಳೆಯನೂ ಸಹ ಅದೇ ಊರಲ್ಲಿ ಕೆಲಸ ಮಾಡುತ್ತಿದ್ದನಾದ್ದರಿಂದ ಆತನನ್ನು ಭೇಟಿ ಮಾಡಲು ಬಂದಿದ್ದೆ..... " ಓಹೋ, ನಿನಗೆ ಮನೆ ಊಟ ಬೇಕೋ...." ಎಂದ... "ಹೌದೋ, ಮನೆ ಊಟ ಹಾಕಿಸಿದರೆ ದೊಡ್ಡ ಉಪಕಾರ ಆಗುತ್ತದೆ ಮಾರಾಯ....." ಎಂದೆ..... "ಹಾಗಾದರೆ, ನಿನಗೆ ನಿಜವಾದ ಮನೆ ಊಟದ ಪರಿಚಯ ಮಾಡಿಸುತ್ತೇನೆ... ಬಾ.." ಎಂದವನೇ ಬೈಕಿನಲ್ಲಿ ಕರೆದುಕೊಂಡು ಹೋದ......

ಸುಮಾರು ದೂರ ಬಂದ ನಂತರ ಒಂದು ಸಣ್ಣ ಮನೆಯ ಮುಂದೆ ನಿಲ್ಲಿಸಿದ... ಮನೆಯ ಮುಂದೆ ಒಂದು ಸಣ್ಣ ಬೋರ್ಡ್ ಇತ್ತು, ಅದರಲ್ಲಿ ’ಮನೆ ಊಟ ದೊರೆಯುತ್ತದೆ ’ ಎಂದು ಬರೆದಿತ್ತು..... ನನಗಂತೂ ಅದನ್ನು ಓದಿಯೇ, ಹಸಿವೆ ಹೆಚ್ಚಾಯಿತು...... ಗೆಳೆಯನ ಕೈ ಹಿಡಿದು ಒಳಗೆ ಹೋದೆ..... ಒಂದು ಟೇಬಲ್ ನಾಲ್ಕು ಕುರ್ಚಿ ಇತ್ತು.... ನಾಲ್ಕೂ ಕುರ್ಚಿ ಖಾಲಿ ಇತ್ತು..... ಬೇಗ ಬೇಗನೆ ಕೈ ತೊಳೆದು ಕುಳಿತುಕೊಂಡೆ..... ನನ್ನ ಗೆಳೆಯ ಪಕ್ಕ ಕುಳಿತುಕೊಂಡ... ಒಬ್ಬರು ಹಿರಿಯ  ವಯಸ್ಸಿನ ಗಂಡಸು ಬಂದು ಊಟದ ಪ್ಲೇಟ್ ಕೊಟ್ಟು ನಮ್ಮ ಪಕ್ಕವೇ ಕುಳಿತರು...... " ಊಟಕ್ಕೆ ಬರೋದು ಯಾಕೆ ಲೇಟ್ ಆಯ್ತು...? ಎಂದರು ಆ ಹಿರಿಯರು.... ನನ್ನ ಗೆಳೆಯ " ಸ್ವಲ್ಪ ಕೆಲಸವಿತ್ತು, ಅದಕ್ಕೇ ಲೇಟ್ ಆಯ್ತು ’ ಎಂದ...ನಾನು ಸುಮ್ಮನೇ ಕುಳಿತೆ.... ಒಳಗಿನಿಂದ ಒಳ್ಳೆಯ ದಾಲ್ ಪರಿಮಳ ಬರುತ್ತಾ ಇತ್ತು..... ಒಂದು ಕೈಯಲ್ಲಿ ದಾಲ್ ಪ್ಲೇಟ್, ಇನ್ನೊಂದು ಕೈಯಲ್ಲಿ ಅನ್ನದ ಪ್ಲೇಟ್ ಹಿಡಿದು ಹಿರಿಯ ವಯಸ್ಸಿನ ಹೆಂಗಸೊಬ್ಬರು ಬಂದರು..... ಸಿಟ್ಟಿನಿಂದಲೇ ಪಾತ್ರೆಯನ್ನು ಟೇಬಲ್  ಮೇಲೆ ಕುಕ್ಕಿ ಇಟ್ಟರು.... ನನಗೆ ಮುಜುಗರವಾಯಿತು..... " ಸರಿಯಾದ ಟೈಮ್ ಗೆ ಊಟಕ್ಕೆ ಬರುತ್ತೀರಾ.....  ಮನೆಯಲ್ಲಿ ಇಬ್ಬರು ವಯಸ್ಸಾದ ಇಬ್ಬರಿದ್ದಾರೆ, ಅವರ ಬಗ್ಗೆ ಸ್ವಲ್ಪವಾದರೂ ನೆನಪಿದ್ದರೆ ತಾನೆ....?"   ನನಗೆ ಎನೂ ಅರ್ಥ ಆಗಲಿಲ್ಲ...... ಗೆಳೆಯನ ಕಡೆ ನೋಡಿದೆ.... ಆತ ತನ್ನ ಪ್ಲೇಟ್ ಕಡೆ ನೋಡುತ್ತಿದ್ದ...... ನಾನೂ ಸುಮ್ಮನಾದೆ..... " ಎಲ್ಲರೂ ತಮ್ಮ ತಮ್ಮ ಬಗ್ಗೆಯೇ ಯೋಚಿಸುತ್ತಾರೆ, ಮಳೆಗಾಲ ಹತ್ತಿರದಲ್ಲೇ ಇದೆ, ಹಂಚಿನ ಮೇಲೆ ತೆಂಗಿನಕಾಯಿ ಬಿದ್ದು ಸುಮಾರು ಹೆಂಚು ಒಡೆದು ಹೋಗಿದೆ.... ಅದನ್ನ ರಿಪೇರಿ ಮಾಡಬೇಕೆಂಬ ಯೋಚನೆ ಇಲ್ಲ... ತೆಂಗಿನ ಮರಕ್ಕೆ ಒಂದು ವಾರದಿಂದ ನೀರು ಹಾಯಿಸಿಲ್ಲ..... ಯಾರಿಗೂ ಇದರ ಬಗ್ಗೆ ಕಾಳಜಿ ಇಲ್ಲ..... ಪಂಪ್ ರಿಪೇರಿ ಇದೆಯಂತೆ.... "


ಆಕೆ ನನಗೆ ಊಟ ಬಡಿಸುತ್ತಾ, ಇದನ್ನೆಲ್ಲಾ ಹೇಳುತ್ತಿದ್ದಳು..... ನನಗೆ ತಲೆ ಬುಡ ಅರ್ಥ ಆಗ್ತಾ ಇರಲಿಲ್ಲ..... ನನ್ನ ಮನೆಯಲ್ಲೂ ಸಹ ಮನೆಯ ಮೇಲೆ ತೆಂಗಿನಕಾಯಿ ಬಿದ್ದು ಹೆಂಚು ಒಡೆದಿತ್ತು..... ಸರಿ ಮಾಡಿಸಲು ಸಮಯ ಸಿಕ್ಕಿರಲಿಲ್ಲ.... ಅದು ಇವರಿಗೆ ಹೇಗೆ ಗೊತ್ತಾಯ್ತು....? ಇವರ ಮನೆ ವಿಷಯ ಇದು, ಇದನ್ನೆಲ್ಲಾ ನನಗೆ ಯಾಕೆ ಹೇಳ್ತಾ ಇದಾರೆ ಅಂತ ತಿಳಿಯಲಿಲ್ಲ........ ಗೆಳೆಯ ಸುಮ್ಮನೆ ತಲೆ ಕೆಳಗೆ ಹಾಕಿ ಊಟ ಮಾಡುತ್ತಿದ್ದ..... ನನ್ನ ಪಕ್ಕ ಕುಳಿತ ಹಿರಿಯರು," ಊಟ ಮಾಡುವಾಗಲಾದರೂ ಸ್ವಲ್ಪ ಸುಮ್ಮನಿರಬಾರದಾ...? ಯಾವಾಗ ನೋಡಿದರೂ ವಟ ವಟ ಅಂತ ಇರ್ತೀಯಾ..... ನಿನ್ನದು ಏನೇ ಮಾತಿದ್ದರೂ ಊಟ ಮುಗಿದ ನಂತರ ಇಟ್ಟುಕೋ " ಎಂದರು..... ನಾನು ಸುತ್ತ ಮುತ್ತ ನೋಡಿದೆ.... ನನ್ನ ಹಾಗೆ ಇವರ ಮಗ ಇರಬಹುದು, ನನ್ನನ್ನೇ ಇವರ ಮಗ ಎಂದುಕೊಂಡು ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದುಕೊಂಡೆ... " ನೀವು ಸುಮ್ಮನಿರಿ, ನಿಮಗೇನೋ ಅರ್ಥ ಆಗಲ್ಲ, ನೀವು ಹೀಗೇ ಸದ್ರ ಬಿಟ್ಟೇ ಇವನು ಹೀಗೆ ಆಡ್ತಾ ಇದಾನೆ..... ಇವನಿಗೊಂದು ಮದುವೆ ಮಾಡಿದ್ರೆ ಮುಗಿದೇ ಹೋಯ್ತು.... ನಮ್ಮ ಕೈಗೆ ಚಿಪ್ಪೇ ಕೊಡ್ತಾನೆ....." ನನಗೆ ಗಂಟಲಲ್ಲಿ ಅನ್ನವೇ ಇಳಿಯಲಿಲ್ಲ..... ಊಟ ರುಚಿ ರುಚಿಯಾಗಿತ್ತು..... ಉಪ್ಪಿನಕಾಯಿಯಂತೂ ತುಂಬಾ ಚೆನ್ನಾಗಿತ್ತು..... ಗೆಳೆಯನ ಮೇಲೆ ಸಂದೇಹವೂ ಬಂತು..... ಆತ ನನ್ನ ಗೆಳೆಯನೇ ಆದರೂ, ಆತನ ಅಪ್ಪ ಅಮ್ಮನನ್ನು ನಾನು ಭೇಟಿ ಆಗಿರಲಿಲ್ಲ..... ತನ್ನ ಮನೆಗೆ ಕರೆದು ತಂದು ಊಟಕ್ಕೆ ಹಾಕುತ್ತಿದ್ದಾನಾ ಎನಿಸಿತು... ಆದರೆ ಒಂದು ಮಾತು ಅರ್ಥ ಆಗಲಿಲ್ಲ..... ನನ್ನ ಗೆಳೆಯನೇ ಇವರ ಮಗನಾದರೆ ಇದನ್ನೆಲ್ಲಾ ನನಗೆ ಯಾಕೆ ಹೇಳುತ್ತಿದ್ದಾರೆ ಎಂದು...

      
         ನನ್ನ ಗೆಳೆಯ ಗಡದ್ದಾಗಿ ಊಟ ಮಾಡುತ್ತಿದ್ದ...... ಊಟ ರುಚಿ ರುಚಿಯಾಗಿದ್ದ ಕಾರಣ ನನಗೂ ಹೊಟ್ಟೆ ತುಂಬಿತ್ತು..... ಕೈ ತೊಳೆಯಬೇಕು ಎಂದುಕೊಂಡು ಎದ್ದೆ.... ಅಜ್ಜಿ ಬಂದವರೇ " ಕರೆಂಟ್ ಬಿಲ್ ತುಂಬಿದ್ದೀಯೋ ಇಲ್ಲವೋ..?, ಹಣಾನೂ ನಾನೇ ಕೊಡಲೋ....? ಹೇಗಾದರೂ ಮಾಡಿ ತುಂಬಪ್ಪಾ.... ಮುಂದಿನ ವಾರ ನಿನ್ನ ಅಕ್ಕ ಬರ್ತಾ ಇದ್ದಾಳಂತೆ, ಅವಳ ಮಗಳಿಗೆ ಒಂದು ಚಿನ್ನದ ಸರ ಮಾಡಿಸಬೇಕು ಕಣೊ...... ನಾನೂ ಸ್ವಲ್ಪ ಹಣ ಕೂಡಿಸಿಟ್ಟಿದ್ದೇನೆ .... ಅದನ್ನೂ ನಿನಗೆ ಕೊಡುತ್ತೇನೆ.... ಸರ ಮಾಡಿಸದೇ ಇದ್ದರೆ ನಿನ್ನ ಬಾವ ಅವಳನ್ನು ಸುಮ್ಮನೇ ಬಿಡಲ್ಲಪ್ಪಾ.... " ಕಣ್ನಲ್ಲಿ ನೀರು ತುಂಬಿತ್ತು..... ನನಗೆ ಇವರಿಗೇನಾದರೂ ಹುಚ್ಚು ಹಿಡಿದಿರಬಹುದಾ ಅಂತ ಅನುಮಾನ ಶುರುವಾಯಿತು.... ನನ್ನಂತೆಯೆ ಇರುವ ಮಗ ಸತ್ತು ಹೋಗಿರಬಹುದು.... ಅವನ ನೆನಪಲ್ಲೇ ಇರುವ ಇವರಿಗೆ ಮಾನಸಿಕ ಆಘಾತವಾಗಿ ಹೀಗೆ ಮಾತನಾಡುತ್ತಾ ಇರಬಹುದು ಎಂದುಕೊಂಡೆ..... ತಲೆ ಕೆಟ್ಟಂತಾಗಿ, ನನ್ನ ಗೆಳೆಯನ ಕಡೆ ನೋಡಿದೆ..... ಆತನ ಕಿವಿಗೆ ಏನೂ ಕೇಳಿಸಲೇ ಇಲ್ಲವೆನೋ ಎನ್ನುವ ಹಾಗೆ ಇದ್ದ.... ನಾನು ಕೈ ತೊಳೆದುಕೊಂಡು  ಬಂದು ಕುಳಿತೆ.... ಅಜ್ಜ ಬಂದು ಎಲೆ ಅಡಿಕೆ ಕೊಟ್ಟರು..... ನನಗೆ ಅವರ ಮೇಲೆ ಅನುಕಂಪ ಬಂತು..... ಅಜ್ಜ ಹೇಗೆ ಇವರನ್ನು ಸಹಿಸಿಕೊಂಡಿದ್ದಾರೊ ಎನಿಸಿತು.... " ಅದನ್ನೆಲ್ಲಾ ತಲೆಗೆ ಹಚ್ಚಿಕೊಳ್ಳಬೇಡಪ್ಪಾ.... ಅವಳು ಯಾವಾಗಲೂ ಹಾಗೆನೆ..... " ಎಂದರು... ’ಅಬ್ಬಾ.. ಇವರಾದರೂ ಸರಿಯಾಗಿದ್ದಾರೆ ’ಎನಿಸಿತು...... ಅವರು ಮುಂದುವರಿಸುತ್ತಾ....." ಮನೆಯ ತೊಂದರೆ ಎಲ್ಲಾ ಇದ್ದಿದ್ದೇ ಕಣಪ್ಪಾ.... ನೀನು ಹೀಗೇಲ್ಲಾ ಬೇರೆಯವರ ಬೈಕ್ನಲ್ಲಿ ತಿರುಗಾಡಬೇಡಪ್ಪಾ.... ಸ್ವಲ್ಪ ಸಾಲ ಮಾಡಿ ನೀನೇ ಬೈಕ್ ತೆಗೆದುಕೋ" ಎಂದರು..... ನನಗೆ ತಲೆ ತಿರುಗೋದೊಂದು ಬಾಕಿ...... ನಾನು ತಲೆ ಹಿಡಿದುಕೊಂಡು ಹೊರಗೆ ಬಂದೆ.......


  ಗೆಳೆಯ ಊಟದ ಹಣ ಕೊಟ್ಟು ಹೊರ ಬಂದ, ಗೆಳೆಯನ  ಮುಖದಲ್ಲಿ ಒಂಥರಾ ನಗುವಿತ್ತು....... ನಾನು ತಲೆ ಕೆಟ್ಟು ನಿಂತಿದ್ದೇನೆ.... ಇವಾ ಹೀಗೆ ನಗಾಡುತ್ತಾ ಇದ್ದಾನಲ್ಲಾ ಎಂದು ಸಿಟ್ಟೂ ಬಂತು...... ಆತ ನಗುತ್ತಲೇ ಕೇಳಿದ " ಹೇಗಿತ್ತು ಮನೆ ಊಟ...?”....... ನನ್ನ ಪಿತ್ತ ನೆತ್ತಿಗೇರಿತು......” ನಿನ್ನ ತಲೆ, ಮನೆ ಊಟವಂತೆ..... ಊಟವೇನೋ ಚೆನ್ನಾಗಿತ್ತು...... ಆದ್ರೆ ಆ ಜನ ನನ್ನನ್ನು ಅವರ ಮಗನೆಂದು ತಿಳಿದು ಜಾಡಿಸುತ್ತಿದ್ದರಲ್ಲ..... ನೀನೇಕೆ ಸುಮ್ಮನಿದ್ದೆ.....? ನಿನಗೆ ಗೊತ್ತಿತ್ತಾ ಅವರ ತಲೆ ಸರಿ ಇಲ್ಲ ಎಂದು...? ಒಳ್ಳೆ ಕಡೆ ಕರೆದುಕೊಂಡು ಊಟ ಹಾಕಿಸಿದೆಯಪ್ಪ...... " ಎಂದೆ...... ಗೆಳೆಯ ನಗುತ್ತಾ...." ಈಗ ಹೇಳು, ನೀನೇನು ಕೆಳ್ದೆ ನನ್ ಹತ್ರ...? ಮನೆ ಊಟ ತಾನೆ....? ಯಾರ ಮನೆಯಲ್ಲಿ ಊಟದ ಜೊತೆ ಮನೆ ಸಮಸ್ಯೆ, ಮಕ್ಕಳಿಗೆ ಬೈಗುಳ ಇರಲ್ಲ ಹೇಳು....? ಊಟದ ಜೊತೆ ಇದೆಲ್ಲಾ ಇದ್ದಿದ್ದಕ್ಕೆ ನಾನು ಮನೆ ಊಟ ಎಂದಿದ್ದು..." ಎಂದ.......

ಬೆಪ್ಪಾಗುವ ಸರದಿ ನನ್ನದಾಗಿತ್ತು..... ಆದರೂ ಅನುಮಾನ ಕಾಡುತ್ತಿತ್ತು..... "ಅದೆಲ್ಲಾ ಸರಿ, ಅವರು ನನಗೆ ಮಾತ್ರ ಯಾಕೆ ಬಯ್ಯುತ್ತಿದ್ದರು...? ನಿನಗೆ ಮಾತ್ರ ಎನೂ ಹೇಳಲಿಲ್ಲ" ಎಂದೆ..... ಗೆಳೆಯ ನಗುತ್ತಾ...." ನಾನು ಪದೇ ಪದೆ ಹೋಗುತ್ತೆನೆ ಅಲ್ಲಿ, ಖಾಯ್ಂ ಗಿರಾಕಿಗಳಿಗೆ ಅವರು ಹಾಗೆ ಮಾಡಲ್ಲ.... ಮೊದಲಿಗೆ ಬಂದವರಿಗೆ ಮಾತ್ರ ಈ ಟ್ರೀಟ್ ಮೆಂಟು.." ಎಂದ.....

ನನಗೆ ಮಾತ್ರ ನಿಜವಾದ ಮನೆ ಊಟ ಸಿಕ್ಕಿತ್ತು......

37 comments:

 1. sir maneyuta sakkattagide adara ruchiyanna namagu badisida nimage shubhashayagalu :)

  ReplyDelete
 2. ಸರ್,
  ಸ್ವಲ್ಪ ಇದೇ ಥರದ ಕಥೆಯನ್ನ ನಾನು ಚಿಕ್ಕವನಿದ್ದಾಗ ಓದಿದ್ದೆ....

  ಅದನ್ನ ನನ್ನ ರೀತಿ ಬರೆದೆ...
  ಇಷ್ಟಪಟ್ಟಿದ್ದಕ್ಕೆ ಧನ್ಯವಾದ ಸರ್...

  ReplyDelete
 3. ಅಣ್ಣ,
  ಏನಿದು ಹೀಂಗೆ..? ನನಗೆ ಇಲ್ಲಿ ಒಂತರ ಆಯ್ತು..
  ನಿಮ್ಮ ಪರಿಸ್ತಿತಿ ನೆನಸ್ಕೊಂಡ್ರೆ.. ಹ ಹ.. :)
  ಆದ್ರೆ, ನಿರೂಪಣೆ ಮಾತ್ರ ಸುಪರ್. ತುಂಬಾ ಇಷ್ಟ ಆಯ್ತು..
  ಹಾಗೆ ನೀವು ನಮ್ಮ ಬ್ಲಾಗಿಗೆ ಬಂದು ತುಂಬಾ ದಿನ ಆಯ್ತು.. :)

  ReplyDelete
 4. ದಿನಕರ,
  ಸ್ವಾರಸ್ಯವನ್ನು ಕಾಯ್ದುಕೊಂಡು ಹೋಗುವ ತುಂಬ ಸೊಗಸಾದ ಕತೆ!

  ReplyDelete
 5. Dinkar sir,

  vibhinna reetiya kathe...niroopane ishta aitu...nice one...

  ReplyDelete
 6. ದಿನಕರ್;ಕಥೆ ಸ್ವಲ್ಪ ವಿಚಿತ್ರವಾಗಿದೆ.ಆ ಹಿರಿಯರು ಹೊಸಬರೊಡನೆ ಹಾಗೇಕೆ ನಡೆದುಕೊಳ್ಳುತ್ತಾರೆ ಎನ್ನುವುದು ನಿಗೂಢವಾಗಿಯೇ ಉಳಿಯಿತು.ಕಥೆ ಇಷ್ಟವಾಯಿತು.

  ReplyDelete
 7. murthy ಸರ್,
  ಎಲ್ಲರ ಮನೆಯಲ್ಲೂ ಅಪ್ಪ ಅಮ್ಮ ಮಕ್ಕಳಿಗೆ ಊಟದ ಜೊತೆ ಅಲ್ಪ ಸ್ವಲ್ಪ ಬೈಯುತ್ತಾರೆ ಕೂಡ.... ಮನೆಯ ಸಮಸ್ಯೆ, ಮಕ್ಕಳ ನಿರ್ಲಕ್ಶ್ಯದ ಬಗ್ಗೆ ಅವರು ಆರೊಪ ಮಾಡುತ್ತಲೇ ಇರುತ್ತಾರೆ.... ಅದಕ್ಕೆ ಮನೆಊಟ ಎಂದರೆ ಊಟದ ಜೊತೆ ಈ ಥರದ ಮಾತುಗಳು...

  ಇದೇ ಥರದ ಕಥೆಯನ್ನು ನಾನು ಚಿಕ್ಕವನಿದ್ದಾಗ ಓದಿದ್ದೆ...... ಅದನ್ನು ನನ್ನದೇ ಶೈಲಿಯಲ್ಲಿ ಬರೆದೆ....

  ReplyDelete
 8. tumba chennagi baredidira :) tumbane vibhinna vagide nimma kathe good one :):)

  ReplyDelete
 9. hahaha....muda nidida chandada kathe sir....thumbaa ishta aythu....

  ReplyDelete
 10. Its cool n fact sir..ootakke illi baigulagale uppinakaayi agbeku..:)

  ReplyDelete
 11. ಹಹಹ.....ಸೂಪರ್ ಮನೆ ಊಟ....
  ಮನೆ ಅಂದ್ರೆ ಹಾಗೆ....

  ReplyDelete
 12. ಎಲ್ಲರ ಮನೆಯಲ್ಲೂ ಇಂಥದೇ ಕೆಲವು ಸಮಸ್ಯೆಗಳು ಊಟದ ಸಮಯದಲ್ಲಿ ಇರುತ್ತದೆ... ಆದರೆ ಅದನ್ನು ಊಟದ ನಂತರ ಮರೆತು ಬಿಡುತ್ತೇವೆ.... ನೀವು ನೆನಪಿನಲ್ಲಿಟ್ಟುಕೊಂಡು ಕಥೆಯಾಗಿಸಿ ನಮ್ಮೊಂದಿಗೆ ಹಂಚಿಕೊಂಡಿದ್ದೀರಿ... ಸುಂದರವಾದ ಕಲ್ಪನೆ...

  ReplyDelete
 13. ದಿನಕರ..
  ನೀವೇ ಸ್ವಂತ ಬರೆದದ್ದು ಅಂದು ಕೊಂಡೆ..
  ತುಂಬಾ ಸೊಗಸಾಗಿದೆ..

  ನನಗೆ ಓಂದು ಕಥೆಯ ಬರೆಯಲು ಸ್ಪೂರ್ತಿ ಸಿಕ್ಕಿದೆ..

  ದಿನ ನಿತ್ಯ ಜಗಳ.. ಸಮಸ್ಯೆ ಇದ್ದರೂ..
  ಮನೆ ಗೂಡಿನ ಮಜವೇ ಬೇರೆ ಅಲ್ಲವೆ?

  ಧನ್ಯವಾದಗಳು..

  ReplyDelete
 14. ಸರ್,

  ಮಎಯೂಟ ಸಕ್ಕತ್ ಆಗಿತ್ತು. ಜೊತೆಗೆ ಬೈಗುಳ ಕೂಡ...ಊಟ ಚೆನ್ನಾಗಿದ್ದರೂ ಅವರ ಮಾತುಗಳನ್ನು ಸಹಿಸಿಕೊಳ್ಳುವ ವಿಚಾರವೇ ಒಂಥರ ವಿಭಿನ್ನ ಅನುಭವವೆನಿಸುತ್ತೆ ಅಲ್ವಾ..

  ReplyDelete
 15. ತು೦ಬ ಚೆನ್ನಾಗಿದೆ ದಿನಕರ್. ಊಟದ ಜೊತೆಗೆ ಬಯ್ಗುಳ, ಜಗಳ, ವಾಗ್ವಾದ ಇವೆಲ್ಲ ಇದ್ದರೆ ಅದು ಮನೆಯೂಟ, ಉ೦ಡ ಊಟದ ರುಚಿಯೂ ಈ ಎಲ್ಲ ವ್ಯ೦ಜ್ಯನಗಳಿ೦ದ ಹೆಚ್ಚುತ್ತದೆ. ಇದ್ಯಾವುದೂ ಇಲ್ಲದ ನಿರ್ಭಾವುಕ ಊಟಕ್ಕೆ ಹೋಟೆಲ್ ಊಟ ಎನ್ನುವ ತಾತ್ಪರ್ಯ ಕೊಡುವ ನಿಮ್ಮ ಈ ಕಥೆಯ೦ತಹ ಬರಹ ಇಷ್ಟವಾಯ್ತು.

  ReplyDelete
 16. tumba chennagide... matte hogi mane ootakke haha

  ReplyDelete
 17. ದಿನಕರ್ ಇದೇನಿದು..??!! ಮಂಗಮಾಯ ನನ್ನ ಪ್ರತಿಕ್ರಿಯೆ...ಮೊನ್ನೆ ಹಾಕಿದ್ದೆ ಮಾರಾರೆ..ಅದೂ ಮೆಸ್ ಊಟದ ನಿಮ್ಮ ’ಮನೆಊಟ’ ಚನ್ನಾಗಿ ಹಿಡಿಸ್ತು..ಹೊಟ್ಟೆ ತುಂಬಾ ಉಂಡು..ಅನ್ನದಾತಾ ಸುಖೀಭವ ಅಂದಿದ್ದೆ...ಎಲ್ಲಾ ಮಾಯ..ಗೊತ್ತಿಲ್ಲ ಏನು ಪ್ರತಿಕ್ರಿಯೆ ಹಾಕಿದ್ನೋ..??!! ಒಟ್ಟಲ್ಲಿ ಮನೆ ಊಟ ಸೂಪರು...

  ReplyDelete
 18. ಹ..ಹ..ಹ ಚೆನ್ನಾಗಿದೆ, ಮನೆಊಟದ ನಿಜವಾದ ಅನುಭವ ನೀಡಿದ್ದಾರೆ ಆ ದಂಪತಿಗಳು !

  ReplyDelete
 19. ತುಂಬಾ ಸೊಗಸಾದ ಕಥೆ.

  ReplyDelete
 20. ಹ್ಹ ಹ್ಹ ಹ್ಹಾ.. ಚೆನ್ನಾಗಿದೆ ನಿಮ್ಮ ಮನೆ ಊಟದ ರುಚಿ!

  ReplyDelete
 21. mane oota da niroopane sakattagide dinakar sir....

  dhanyavaadagalu
  ananth

  ReplyDelete
 22. Ha ha ha.. naanu nija gataneyeNo andukondu bittidde.. chennagide dinakar sir :)

  ReplyDelete
 23. ಹ್ಹಾ ಹ್ಹಾ ಹ್ಹಾ ಮನೆ ಊಟ ಗಮ್ಮತ್ತಿತ್ತಲ್ಲ....
  ಮನೆ ಅಂದ್ರೆ ಹಾಗೆ ಅಮ್ಮ ಕರ ಕರ ಮಾಡ್ತಿದ್ದರೆ ಚಂದ ಅಲ್ವ..ಚೆನ್ನಾಗಿದೆ ಕತೆ.......

  ReplyDelete
 24. ದಿನಕರ್,
  ತುಂಬಾ ದಿವಸದ ನಂತರ ನಿಮ್ಮ ಬರಹ....
  ವಿಭಿನ್ನವಾಗಿತ್ತು ಮತ್ತು ಎಲ್ಲೋ ಅವರಿಗೆ ನಿಮ್ಮ ತರದ ಮಗನಿದ್ದಿರಬಹುದೆಂಬ ಗುಮಾನಿಯಿತ್ತು..

  ReplyDelete
 25. ಕಥೆನಾ...! ನಿಮ್ಮ ಅನುಭವ ಅಂದ್ಕೊಂಡ್ ಬಿಟ್ಟೆ..:)
  ಇಷ್ಟ ಆಯ್ತು.. enjoyed reading it.. :)

  ReplyDelete
 26. svaarasyakaravaagide sir nimma kate.dhanyavaadagalu.

  ReplyDelete
 27. ನನಗಂತೂ ಈ ಊಟದ ವಿಷಯದಲ್ಲಿ ತುಂಬಾನೇ experience ಇದೆ. ಮನೆ ಊಟ ಎಲ್ಲಾದರೂ ಸಿಗಲಿ, ನಾನು ರೆಡಿ. ಏನೇ ಇರಲಿ, ಸಂಗತಿಯನ್ನು ರಸವತ್ತಾಗಿ ವರ್ಣಿಸಿದ್ದೀರಿ. ಅಪರೂಪಕ್ಕೊಮ್ಮೆ ನನಗೂ ಕುಳಿತು ಓದುವ patience ಬಂತು:-)

  ReplyDelete
 28. ತುಂಬಾ ಚೆನ್ನಾಗಿ ಬರೆದಿದ್ದೀರ ದಿನಕರ್, ನನ್ನ ಸ್ಕೂಲ್ ದಿನಗಳು ಜ್ಞಾಪಕ ಬಂತು...ಟೀಚರ್ ಹತ್ರ ಎಷ್ಟು ಏಟು ತಿಂದದ್ದು ! ಲೆಖ್ಹವೇ ಇಲ್ಲ !! ತುಂಬಾ ತುಂಟ ಆಗಿದ್ದೆ !

  ReplyDelete
 29. ತುಂಬಾ ಚೆನ್ನಾಗಿ ಬರೆದಿದ್ದೀರ ದಿನಕರ್, ನನ್ನ ಸ್ಕೂಲ್ ದಿನಗಳು ಜ್ಞಾಪಕ ಬಂತು...ಟೀಚರ್ ಹತ್ರ ಎಷ್ಟು ಏಟು ತಿಂದದ್ದು ! ಲೆಖ್ಹವೇ ಇಲ್ಲ !! ತುಂಬಾ ತುಂಟ ಆಗಿದ್ದೆ !

  ReplyDelete