Sep 4, 2010

ತಪ್ಪು ಯಾರದು..?

ನನ್ನ ಗುರಿ ತಲುಪಲು ಇನ್ನು ಐವತ್ತು ಕಿಲೊ ಮಿಟರ್ ಅಷ್ಟೇ ಇತ್ತು....... ಕಣ್ಣೂ ಜೊಂಪು ಹತ್ತಿತ್ತು........ ನನಗೆ ನಿದ್ದೆ ಬಂದರೆ ಅಷ್ಟೆ... ನನ್ನ ಸಂಗಡ ಪ್ರಯಾಣ ಮಾಡುತ್ತಿದ್ದವರೆಲ್ಲಾ ಶಿವನ ಪಾದ ಸೇರಬೇಕಾಗುತ್ತದೆ ಎಂದು ತಲೆ ಕೊಡವಿಕೊಂಡೆ.... ತಲೆ ಎತ್ತಿ ಮೇಲೆ ನೋಡಿದೆ, ಮೇಲೆ "ಭಾರತೀಯ  ರೈಲ್ವೆ " ಎಂದು ಬರೆದಿತ್ತು.... ಕೈಯಲ್ಲಿ ಮುಂಬಯಿ ಮಂಗಳೂರು ರೈಲಿನ ಚುಕ್ಕಾಣಿ ಇತ್ತು...... ಎರಡೂ ಕಡೆ ಇರುವ ಹಸಿರು ಮನವನ್ನು ಖುಶಿಗೊಳಿಸಿತ್ತು.... ತುಂಬಾ ದಿನದ ನಂತರ ರಜೆ ತೆಗೆದುಕೊಂಡು ಹೊಗುವವನಿದ್ದೆ ಈ ಪ್ರಯಾಣ ಮುಗಿಸಿ...... ಮನೆಯಲ್ಲಿ ಕಾಯುತ್ತಿರುವ ಹೆಂಡತಿ ಮಗನ ನೆನಪಾಗಿ ಸ್ವಲ್ಪ ವೇಗ ಜಾಸ್ತಿ ಮಾಡಿದೆ........ ರೈಲು ಉಡುಪಿ ಸ್ಟೇಷನ್ ಬಿಟ್ಟು ಮಂಗಳೂರು ಕಡೆ ಹೊರಟಿತ್ತು......ಈ ಸಾರಿ ಹೆಂಡತಿಯ ಜೊತೆ ವೈದ್ಯರಲ್ಲಿಗೆ ಹೋಗಿ ಎರಡನೇ ಮಗುವಿಗಾಗಿ ನಮ್ಮ ಪ್ರಯತ್ನದ ಬಗ್ಗೆ ತಿಳಿಸಿ ಅವರ ಸಲಹೆ ಕೇಳಬೇಕು..... ಮಗನ ಜೊತೆ ಆಟ ಆಡಲು ಒಬ್ಬಳು ಮಗಳು ಬಂದರೆ ಎಲ್ಲರಿಗೂ ಖುಶಿಯಾಗುತ್ತಿತ್ತು..... ಇದೆಲ್ಲಾ ಯೊಚನೆಯಲ್ಲಿ ಯಾವಾಗ ಸುರತ್ಕಲ್ ಬಂತೋ ತಿಳಿಯಲೇ ಇಲ್ಲ.... ಎರಡು ನಿಮಿಷದ ನಿಲುಗಡೆ ನಂತರ ಮುಂದಕ್ಕೆ ಹೊರಳಿಸಿದೆ ..... ಸ್ವಲ್ಪವೇ ದೂರದಲ್ಲಿ, ಇನ್ನೊಂದು ಸ್ಟೇಶನ್ ಕಟ್ಟುವ ಕೆಲಸ  ನಡೆಯುತ್ತಿತ್ತು...... ಸುತ್ತಲೆಲ್ಲಾ ಕಾಮಗಾರಿ ಕೆಲಸಗಾರರು ಗುಡಿಸಲು ಕಟ್ಟಿಕೊಂಡಿದ್ದರು..... ಮಕ್ಕಳೆಲ್ಲಾ ರೈಲಿನ ಹಳಿಯ ಪಕ್ಕದಲ್ಲೇ ಆಟವಾಡಿಕೊಂಡಿದ್ದರು.... ಎಂದಿನ ಹಾಗೆ ಮಕ್ಕಳಿಗೆ ಟಾಟಾ ಹೇಳಿದೆ..... ಅವರೂ ಕೂಡ ನನಗೆ ಟಾಟಾ ಮಾಡಿ ಕೂಗುತ್ತಿದ್ದರು....

ಈ ಮಕ್ಕಳಿಗೆ ವಿದ್ಯಾಭ್ಯಾಸ ಸಿಗದೇ ಇವರೂ ಕೂಲಿ ಮಾಡಬೇಕಾಗುತ್ತದೆ.... ಇವರ ಪಾಲಕರಾದರೂ ಎಲ್ಲಿ ಅಂತ ಶಾಲೆಗೆ ಸೇರಿಸುತ್ತಾರೆ....ಇವತ್ತು ಇಲ್ಲಿ ಕೆಲಸ ಮಾಡಿದರೆ, ನಾಳೆ ಎಲ್ಲಿಯೊ..? ಅಪ್ಪ ಅಮ್ಮ ಇಬ್ಬರೂ ಕೆಲ್ಸ ಮಾಡದಿದ್ದರೆ ಸಂಜೆಗೆ ಗಂಜಿಯೇ ಗತಿ..... ಅನಕ್ಷರತೆ ಇವರನ್ನು ಸಂತಾನ ನಿಯಂತ್ರಣದ ಬಗ್ಗೆ  ಅರಿವು ದೊರಕಿಸಲೇ ಇಲ್ಲ.... ಒಬ್ಬರಿಗೆ ನಾಲ್ಕು ಐದು ಮಕ್ಕಳಿರುತ್ತಾರೆ.... ಹದಿನೈದು ವರ್ಷಕ್ಕೇ ಕೆಲಸಕ್ಕೆ ಸೇರಿಸುತ್ತಾರೆ..... ಇದರ ಬಗ್ಗೆ ಯೊಚಿಸುತ್ತಾ ಹೊರಟವನಿಗೆ ದೂರ ಹಳಿ ಮೇಲೆ ಯಾರೋ ನಡೆದು ಬರುವ ಹಾಗೆ ಕಂಡರು.....  "ಇದು ಯಾರಪ್ಪಾ..?" ಎಂದುಕೊಂಡೆ...... ಸ್ವಲ್ಪ ಹತ್ತಿರ ಬಂದೊಡನೆ ನಾಲ್ಕು ಜನ ಇದ್ದಂತೆ ಕಂಡಿತು...... ಹಳಿಯ ಪಕ್ಕದಲ್ಲೇ ನಿಂತಿದ್ದರು...... ನನ್ನ ರೈಲು ತುಂಬಾ ಸ್ಪೀಡ್ ಇತ್ತು.....ಇನ್ನೂ ಹತ್ತಿರ ಬರುತ್ತಲೇ ಇನ್ನೂ ಸ್ಪಷ್ಟವಾಗಿ ಕಾಣಿಸುತ್ತಿತ್ತು.... ಒಬ್ಬ ಗಂಡಸು, ಒಬ್ಬಳು ಹೆಂಗಸು, ಅವರಿಬ್ಬರ ಕೈಲಿ ಒಬ್ಬೊಬ್ಬರು ಮಕ್ಕಳು.... ಹೆಂಗಸಿನ ಕಂಕುಳಲ್ಲಿ ಇನ್ನೊಂದು ಮಗು ಕೂಡ ಇತ್ತು..... "ಇವರೇನು ಮಾಡ್ತಾ ಇದಾರೆ ಇಲ್ಲಿ" ಎನಿಸಿಕೊಂಡೆ....  ರೈಲು ಅವರ ಹತ್ತಿರಕ್ಕೆ ಬರುತ್ತಾ ಇತ್ತು......... ಗಂಡಸು , ಹೆಂಗಸಿಗೆ ಬೆನ್ನ ಮೇಲೆ ಹೊಡೆದ.... ಅವಳು ತನ್ನ ಕೈಲಿದ್ದ ಹುಡುಗನನ್ನು ಕರೆದುಕೊಂಡು ಹಳಿ ಮೇಲೆ ಮಲಗಿದಳು.... ನನಗೆ ಇದೇನೆಂದು ಅರ್ಥ ಆಗಲಿಲ್ಲ..... ರೈಲಿನ ಸ್ಪೀಡ್ ನೋಡಿದೆ..... ೧೨೫ ಇತ್ತು...... ಗಂಡಸು ಕೂಡ ಅವನ ಕೈಲಿದ್ದ ಮಗುವನ್ನು ಗಟ್ಟಿಯಾಗಿ ಹಿಡಿದು ಹಳಿ ಮೇಲೆಯೆ ಮಲಗಿದ...... ಆಕೆ ತನ್ನ ಕಂಕುಳಲ್ಲಿದ್ದ ಮಗುವನ್ನು ತನ್ನ ಮತ್ತು ಗಂಡಸಿನ ಮಧ್ಯೆ ಮಲಗಿಸಿಕೊಂಡಳು....ಪುಟ್ಟ ಕಂದನಾಗಿತ್ತು ಅದು........ನನಗೆ ಎನೂ ತೊಚಲೇ ಇಲ್ಲ..... ತಲೆ ಹೊರಗೆ ಹಾಕಿ ಕೂಗಿದೆ....." ಎದ್ದೇಳ್ರಲೆ, ಎನ್ ಮಾಡ್ತಾ ಇದ್ದೀರಾ..... ಎದ್ದೇಳಿ....." ನಾನು ಕೂಗುತ್ತಲೇ ಇದ್ದೆ..... ರೈಲಿನ ಸ್ಪೀಡ್ ೧೨೫ ಕ್ಕಿಂತ ಹೆಚ್ಚಿಗೆ ಇತ್ತು..... ಬ್ರೇಕ್ ಮೇಲೆ ಕಾಲಿಟ್ಟೆ...... ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಸಂಖ್ಯೆ ಸಾವಿರಕ್ಕೂ ಹೆಚ್ಚಿತ್ತು.... ನಾನು ಇಷ್ಟು ಸಡನ್ ಆಗಿ ಬ್ರೇಕ್ ಒತ್ತಿದರೆ, ಹಿಂದಿದ್ದ ಬೋಗಿಗಳೆಲ್ಲ ತಲೆ ಮೇಲಾಗುತ್ತದೆ..... ಸಾವಧಾನವಾಗಿ ಬ್ರೇಕ್ ತುಳಿಯೊಣವೆಂದರೆ, ಅವರು ಮಲಗಿದ್ದ ಸ್ಥಳ ಹತ್ತಿರದಲ್ಲೇ ಇತ್ತು..... ಇನ್ನೊಮ್ಮೆ ತಲೆ ಹೊರಗೆ ಹಾಕಿ ಕೂಗಿದೆ.... ನನ್ನ ಪಕ್ಕದಲ್ಲಿದ್ದ ಸಿಗ್ನಲ್ ಹುಡುಗನೂ ಕೂಗಲು ಶುರು ಮಾಡಿದ....  " ಬೇಗ ಎದ್ದೇಳಿ, ಸಾಯುತ್ತೀರಾ " ......

ನನಗೆ ಎನೂ ಮಾಡಲು ತಲೆ ಹೊಳೆಯಲೇ ಇಲ್ಲ..... ನನ್ನ ಪಕ್ಕದ ಸಿಗ್ನಲ್ ಹುಡುಗ ಕೂಗುತ್ತಲೆ ಇದ್ದ.... ಆ ಗಂಡಸಿನ ಪಕ್ಕದಲ್ಲಿ ಮಲಗಿದ್ದ ಹುಡುಗ ಎದ್ದೇಳಲು ನೋಡಿದ .... ಆದರೆ ಆ ಗಂಡಸು ಆತನನ್ನು ಅಲ್ಲೇ ಅಮುಕಿ ಹಿಡಿದ...... ಇವರ್ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಇದ್ದಾರೆ..? ನಾನು ಏನು ಮಾಡಲಿ...? ಬ್ರೇಕ್ ಒತ್ತಿ ಬಿಡಲೆ...? ಇವರ ಮೇಲೆ ರೈಲು ಹತ್ತಿಸಿ ಬಿಡಲೇ....? ನನ್ನ ತಲೆ ಗೊಂದಲದ ಗೂಡಾಗಿತ್ತು....... ಬ್ರೇಕ್ ಒತ್ತಿದರೆ ಪ್ರಯಾಣಿಕರೆಲ್ಲಾ ಸಾಯುತ್ತಾರೆ...... ನನ್ನ ಕಾಲು ನಿಧಾನವಾಗಿ ಬ್ರೇಕ್ ಒತ್ತಲು ಶುರು ಮಾಡಿತ್ತು.... ಈ ಮಧ್ಯೆ ಆ ಹೆಂಗಸು ತಲೆ ಎತ್ತಿ ನೋಡಿದಳು..... ನಾನು ತಲೆ ಹೊರಗೆ ಹಾಕಿ, ಕೈ ಸನ್ನೆ ಮಾಡಿ ಹೊರಗೆ ಹೋಗಲು ಹೇಳಿದೆ..... ನನ್ನ ಪಕ್ಕದ ಹುಡುಗ ಕೂಗುತ್ತಲೇ ಇದ್ದ.... ಅವಳು ರೈಲಿನ ಕಡೆ ನೋಡಿ ಮತ್ತೆ ಮಲಗಿಕೊಂಡಳು.... ನಾನು " ಅಯ್ಯೋ ದೇವರೇ" ಎಂದೆ...... ರೈಲಿನ ಸ್ಪೀಡ್ ಸ್ವಲ್ಪ ಕಡಿಮೆಯಾಗಿತ್ತು ...... ೧೦೦ ರ ಹತ್ತಿರ ಇತ್ತು........ ಇನ್ನೂ ಕಡಿಮೆ ಮಾಡಲು ನೋಡಿದೆ...... ಸಣ್ಣದಾಗಿ ಜರ್ಕ್ ಹೊಡೆದ ಹಾಗಾಯಿತು..... ನನಗೆ ಹೆದರಿಕೆ ಆಗಲು ಶುರು ಆಯಿತು..... ಈ ಐದು ಜನರ ಪ್ರಾಣ ಉಳಿಸಲು ಹೋಗಿ ಸಾವಿರಾರು ಜನರ ಪ್ರಾಣ ಪಣಕ್ಕಿಡೋದು ಸರಿ ಕಾಣಲಿಲ್ಲ..... ಕಾಲನ್ನು ಬ್ರೇಕ್ ಮೇಲಿಂದ ತೆಗೆಯಲಿಲ್ಲ..... ರೈಲು ಪ್ರಾಧಿಕಾರದ ನಿಯಮದಂತೆ ಪ್ರಯಾಣಿಕರ ಪ್ರಾಣ ಉಳಿಸಲು ಮುಂದಾದೆ..... ಎಷ್ಟು ಕೂಗಿಕೊಂಡರೂ ಅವರು ಎದ್ದೇಳಲೇ ಇಲ್ಲ..... ಆತ್ಮಹತ್ಯೆಗೆ ನಿಶ್ಚಯ ಮಾಡಿಕೊಂಡೇ ಬಂದವರಂತೆ ಕಂಡರು.... ನಾನು ಅಸಹಾಯಕನಾಗಿದ್ದೆ...... ಅವರು ಮಲಗಿದ್ದ ಸ್ಥಳ ಹತ್ತಿರ ಬಂದಿತ್ತು..... ಕ್ಯಾಬಿನ್ ಗ್ಲಾಸ್ ನಿಂದ ಅವರನ್ನು ಸ್ಫಷ್ಟವಾಗಿ ನೋಡಿದೆ...... ಗಂಡಸಿನ ಪಕ್ಕದ ಹುಡುಗ ಕೊಸರಿಕೊಳ್ಳಲು ಪ್ರಯತ್ನ ಪಡುತ್ತಿದ್ದ.... ಹಾಗೆಯೇ, ಹೆಂಗಸಿನ ಪಕ್ಕದ ಹುಡುಗನೂ ಕೊಸರುತ್ತಿದ್ದ... ಇಬ್ಬರೂ ಮಕ್ಕಳನ್ನು ಅವರ ಪಕ್ಕದಲ್ಲಿದ್ದ ಗಂಡು , ಹೆಂಗಸು ಗಟ್ಟಿಯಾಗಿ ಹಿಡಿದುಕೊಂಡಿದ್ದರು..... ಅವರಿಬ್ಬರ ಮಧ್ಯೆ ಮಲಗಿದ್ದ ಮುದ್ದಾದ ಮಗು ಕೈಕಾಲು ಆಡಿಸುತ್ತಾ ಮಲಗಿತ್ತು..... ಮಗುವಿನ ಮುದ್ದಾದ ಮುಖ ಕೊನೆಯ ಬಾರಿ ನೋಡಿ ಕಣ್ಣು ಮುಚ್ಚಿದೆ...... ...ನನ್ನ ಪಕ್ಕದ ಹುಡುಗ.." ಅಯ್ಯೋ" ಎಂದಿದ್ದು ಕಿವಿಗೆ ಬಿತ್ತು............ ರೈಲಿನ ಸದ್ದು ಸತ್ತ ಜನರ ಕೊನೆಯ ಕೂಗನ್ನೂ ಅಳಿಸಿಹಾಕಿತ್ತು........ 


ಏನು ಮಾಡುವುದೆಂದೇ ತಿಳಿಯಲಿಲ್ಲ..... ಸ್ಟೇಷನ್ ಗೆ ವೈರ್ಲೆಸ್ ಸಂದೇಶ ಕೊಟ್ಟೆ...... ಮುಂದಿನ ಸ್ಟೇಷನ್ ನಲ್ಲಿ ನಿಲ್ಲಿಸಿ ರಿಪೋರ್ಟ್ ಬರೆದು ಹೋಗಲು ತಿಳಿಸಿದರು.....  ನನ್ನ ಮನಸ್ಸು ನನ್ನ ಹಿಡಿತದಲ್ಲಿ ಇರಲಿಲ್ಲ..... ನಮ್ಮ ರೈಲು ಕಂಕನಾಡಿ ಸ್ಟೇಷನ್ನಲ್ಲಿ ನಿಂತಿದ್ದಾಗಲೇ "ಮಂಗಳಾ ಎಕ್ಸ್ ಪ್ರೆಸ್ಸ್ " ಹಾದು ಹೋಗುತ್ತದೆ ಎಂದಿದ್ದರಿಂದ ನಾವು ಸ್ವಲ್ಪ ಕಾಯಬೇಕಾಯಿತು.... ಅಷ್ಟರಲ್ಲಿ ಅಲ್ಲಿ ಸತ್ತವರ ವಿವರ ವೈರ್ಲೆಸ್ಸ್ ಮೂಲಕ  ನನ್ನ ಕಿವಿಗೆ ಬೀಳತೊಡಗಿತು...... " ಸತ್ತವರು ಗಂಡ ಹೆಂಡತಿಯರಂತೆ... ಇಬ್ಬರು ಮಕ್ಕಳು ಕೂಡ ಸತ್ತಿದ್ದಾರೆ......... " ನಾನು ತಕ್ಷಣ ವಾಕಿಟಾಕಿ ತೆಗೆದುಕೊಂಡು " ಅವರ ಮಧ್ಯೆ ಒಂದು ಮಗು ಇತ್ತಲ್ಲ..? " ಎಂದೆ ಒಂದೇ ಉಸುರಿನಲ್ಲಿ....... " ಹೌದು.... ಆ ಮಗು ಹಳಿಯ ಮಧ್ಯೆ ಇದ್ದುದರಿಂದ ಆ ಮಗುವಿಗೆ ಎನೂ ಆಗದೇ ಬದುಕುಳಿದಿದೆ..." ಉತ್ತರ ಕೇಳಿ ನನಗೆ ಖುಶಿ ಪಡಲೋ, ಆ ಮಗುವಿನ ಪಾಲಕರು ಸತ್ತಿದ್ದಕ್ಕೆ ದುಃಖ ಪಡಲೋ ತಿಳಿಯಲಿಲ್ಲ......." ನನಗೆ ಅವರ ಮನೆ ಎಲ್ಲಿದೆ..? ಅವರ ಬಂಧುಗಳ ವಿಳಾಸ ನನಗೆ ತಿಳಿಸಿ" ಎಂದೆ ವಾಕಿಟಾಕಿಯಲ್ಲಿ...... ಮಂಗಳಾ ಎಕ್ಸ್ ಪ್ರೆಸ್ಸ್ ದಾಟಿ ಹೋದ ನಂತರ ಮಂಗಳೂರು ಸೆಂಟ್ರಲ್ ಗೆ ರೈಲನ್ನು ತಲುಪಿಸಿದರೂ ನನ್ನ ಮನಸ್ಸು ಪೂರಾ ಸತ್ತ ಜನರ ಸುತ್ತಲೇ ಸುತ್ತುತ್ತಿತ್ತು........

ರೈಲಿನ ರಿಪೋರ್ಟ್ ಎಲ್ಲಾ ಬರೆದು ಮನೆಗೆ ಹೊರಡುವ ವೇಳೆಗೆ ನನಗೆ ಅಲ್ಲಿ ಸತ್ತವರ ವಿವರ ಎಲ್ಲಾ ತಿಳಿದಿತ್ತು...... ಸತ್ತವರು, ಉತ್ತರ ಕರ್ನಾಟಕದವರೆಂದೂ, ಅಲ್ಲಿ ಪ್ರವಾಹ ಬಂದು ಇವರ ಬದುಕೆಲ್ಲಾ ಕೊಚ್ಚಿ ಹೋದಾಗ..... ಇಲ್ಲಿ ಕೆಲಸಕ್ಕೆಂದು ಬಂದವರಿಗೆ ಕೆಲಸಕ್ಕೆ ತಕ್ಕ ಸಂಬಳ ಸಿಗದೇ ನಿರಾಸೆಯಲ್ಲಿದ್ದರು..... ಪ್ರವಾಹ ಬಂದು ಹಾಳಾದ ಊರಲ್ಲಿ ತಮಗೆಲ್ಲಾ ಸರಕಾರ ಮನೆ ಕಟ್ಟಿಸಿ ಕೊಡುತ್ತದೆ ಎಂದು ಖುಶಿಯಲ್ಲಿದ್ದ ದಂಪತಿಗಳಿಗೆ , ತಮ್ಮ ಹೆಸರಲ್ಲಿ ಬೇರೆ ಯಾರೋ ಮನೆ, ಜಮೀನನ್ನು ಪಡೆದಿದ್ದಾರೆ ಎಂದು ತಿಳಿದಾಗ ದಿಕ್ಕೇ ತೋಚದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಿಕ್ಕಿತು....   ಆತ್ಮಹತ್ಯೆಗೆ ಕಾರಣ ಯಾರೋ ಆದರೂ ನನ್ನ ರೈಲಿನಡಿ ಸಿಕ್ಕಿ ಸತ್ತಿದ್ದಕ್ಕಾಗಿ ನನ್ನಲ್ಲಿ ಪಾಪಪ್ರಜ್ನೆ ಕಾಡುತ್ತಿತ್ತು...... ಅವರ ಮನೆಯ ವಿಳಾಸ ಸಿಕ್ಕಿದ್ದರಿಂದ ಆ ಕಡೆಯೇ ಹೊರಟೆ......

ಅಲ್ಲಿ ಮುಟ್ಟುವ ವೇಳೆ ಕತ್ತಲಾಗುತ್ತಿತ್ತು...... ಮನೆ ಎಂದು ಕರೆಸಿಕೊಳ್ಳುವ ಜೊಪಡಿಯಲ್ಲಿ ಅವರೆಲ್ಲಾ ಇದ್ದರು...... ಸುತ್ತಮುತ್ತಲೆಲ್ಲಾ ಸಣ್ಣ ಸಣ್ಣ ಗುಡಿಸಲುಗಳು ಇತ್ತು.... ಆಗಲೇ ಶವವನ್ನು ತಂದಿದ್ದರು....ಬಟ್ಟೆಯಲ್ಲಿ ಮುಚ್ಚಿದ್ದರು...... ನನ್ನ ಕಣ್ಣು ಬದುಕುಳಿದ ಆ ಮಗುವನ್ನು ಹುಡುಕುತ್ತಿತ್ತು..... ಅಲ್ಲಿದ್ದ ಹಿರಿಯರನ್ನು ವಿಚಾರಿಸಿದೆ..... " ಆ ಮಗುವಿನ ಭವಿಶ್ಯಕ್ಕೆ ಏನು..? ಮಗುವಿನ ಬಂಧುಗಳ ಬಳಿ ಸ್ವಲ್ಪ ಹಣ ಸಹಾಯ ಮಾಡುತ್ತೇನೆ... " ಎಂದೆ..... ನನ್ನ ಪಾಪಪ್ರಜ್ನೆಯನ್ನು ಸ್ವಲ್ಪವಾಗಿಯಾದರೂ ಕಡಿಮೆ ಮಾಡಿಕೊಳ್ಳುವ ಉದ್ದೇಶ ನನ್ನದಾಗಿತ್ತು....... " ಇಲ್ಲ ಸರ್, ಆ ಮಗುವಿಗೆ ಯಾರೂ ಇಲ್ಲ.... ಊರಿಗೆ ನೆರೆ ಬಂದಾಗ ಎಲ್ಲಾ ಬಂಧುಗಳೂ ಸತ್ತು ಹೋಗಿದ್ದರು..... ಈಗ ಮಗುವಿನ ಹೆತ್ತವರು ಸತ್ತು ಹೋದರು.... ಈಗ ಮಗುವನ್ನು ನೋಡಿಕೊಳ್ಳುವವರು ಯಾರೂ ಇಲ್ಲ..... ಗಂಡು ಮಗುವಾಗಿದ್ದರೆ ಎಲ್ಲರ ಜೊತೆ ಎಲ್ಲೆಲ್ಲೋ ಇದ್ದು ಬೆಳೆಯುತ್ತಿತ್ತು... ಈ ಹೆಣ್ಣುಮಗು ಯಾರಲ್ಲಿ ಬೆಳೆಸೋದು... ಜಗತ್ತು ತುಂಬಾ ಕೆಟ್ಟಿದೆ ಯಜಮಾನರೇ...." ಎಂದರು ಆ ಹಿರಿಯರು..... ಈಗ ನಿಜವಾಗಿಯೂ ನನ್ನ ಸ್ಥಿತಿ ಗಂಭೀರವಾಯಿತು..... ಸ್ವಲ್ಪ ಸಹಾಯ ಮಾಡಿ ಹೋಗೋಣ ಎಂದು ಬಂದವನಿಗೆ ಕಾಲಿಗೇ ತೊಡರಿಕೊಂಡಿತ್ತು....... ಸ್ವಲ್ಪ ಯೋಚಿಸಿ ಆ ಹಿರಿಯರಿಗೆ ಕೇಳಿದೆ...... " ಈ ಮಗುವನ್ನು ನನಗೆ ಕೊಡಿ, ನಾನು ನೋಡಿಕೊಳ್ಳುತ್ತೇನೆ.... ನನ್ನ ಮಗನ ಜೊತೆಗೆ ಈ ಹುಡುಗಿಯೂ ಬೆಳೆಯಲಿ.... ಮಗುವಿಗೆ ಒಳ್ಳೆಯ ವಿದ್ಯೆ ಕೊಟ್ಟು ಅವಳ ಬದುಕು ಕಟ್ಟಿ ಕೊಡುತ್ತೇನೆ" ಎಂದೆ.... ಆ ಕಡೆ ಆ ಮಗುವಿನ ಪಾಲಕರ ಅಂತ್ಯಕ್ರೀಯೆಗೆ ಪ್ರಯತ್ನ ನಡೆಯುತ್ತಿತ್ತು...... ಆ ಹಿರಿಯ ಸ್ವಲ್ಪ ಯೋಚನೆ ಮಾಡಿ ಆ ಕಡೆ ಹೋದರು.....

ತಿರುಗಿ ಬಂದ ಹಿರಿಯರ ಕೈಯಲ್ಲಿ ಆ ಮಗುವಿತ್ತು..... ನನ್ನ ಕೈಯಲ್ಲಿಟ್ಟು ಆ ಹಿರಿಯರೆಂದರು...." ಈ ಮಗು ತನ್ನ ಪಾಲಕರ ಅಂತ್ಯಕ್ರಿಯೆಯಲ್ಲಿ ಇರದೇ ತಮ್ಮನ್ನೇ ತನ್ನ ಪಾಲಕರೆಂದು ತಿಳಿದು ಬೆಳೆಯಲಿ..... ಈ ಮಗುವಿನ ಪಾಲನೆ ಚೆನ್ನಾಗಿ ಮಾಡಿ , ಚೆನ್ನಾಗಿ ಬೆಳೆಸಿರಿ "....... ನನ್ನ ಕೈಯಿ ನಡುಗುತ್ತಿತ್ತು............ ಈ ಮಗುವಿನ ಅಂತ್ಯಕ್ಕೆ ಕಾರಣ ನಾನು ಎಂದು ತಿಳಿದಿದ್ದರೆ ಈ ಹಿರಿಯರು ನನಗೆ ಮಗುವನ್ನು ಕೊಡುತ್ತಿದ್ದರೊ ಇಲ್ಲವೋ ತಿಳಿದಿಲ್ಲ...... ನನ್ನ ಕೈಲಿದ್ದ ಸ್ವಲ್ಪ ಹಣವನ್ನು ಆ ಹಿರಿಯರಿಗೆ ಕೊಟ್ಟು ಸತ್ತವರ ಅಂತ್ಯಕ್ರೀಯೆಗೆ ಉಪಯೋಗಿಸಿ ಎಂದು ಹೇಳಿ ನಾನು ಮಗುವನ್ನೆತ್ತಿಕೊಂಡು ನನ್ನ ಮನೆ ಹಾದಿ ಹಿಡಿದೆ......

ಬೆನ್ನ ಹಿಂದೆ ಬೆಂಕಿಯ ಜ್ವಾಲೆ ಮೇಲೇಳುತ್ತಿತ್ತು......

82 comments:

  1. ಬಹಳ ಚೆನ್ನಾಗಿದೆ ಸಾಹೇಬರೇ, ಎರಡೂ ಕೈ ಎತ್ತಿ ಮುಗಿದೆ, ಇಲ್ಲಿ ಕಥೆಯ ನಾಯಕ ರೈಲು ನಡೆಸುವಾತ ಕಾಲದ ಕೈಗೊಂಬೆ! ಆತ ಎನೂಮಾಡದ ಸ್ಥಿತಿಯಲ್ಲೇ ಇದ್ದಿದ್ದರಿಂದ ಅಲ್ಲಿ ಹಾಗೆ ಮಾಡಿದ್ದೇ ಸರಿ, ಸೂಪರ್, ಧನ್ಯವಾದಗಳು

    ReplyDelete
  2. ಭಟ್ ಸರ್...
    ನಿಮ್ಮ ಮೊದಲ ಪ್ರತಿಕ್ರೀಯೆ ಓದಿ ತುಂಬಾ ಖುಶಿಯಾಯಿತು.... ನಿಮ್ಮೆಲ್ಲರ ಮೆಚ್ಚುಗೆಯೆ ನನ್ನನ್ನು ಇನ್ನೂ ಬರೆಯಲು ಪ್ರೇರೇಪಿಸುತ್ತದೆ ಸರ್..... ನಿಮ್ಮ ಪ್ರೀತಿ, ಪ್ರೊತ್ಶಾಹ ಹೀಗೆ ಇರಲಿ.... ಧನ್ಯವಾದ....

    ReplyDelete
  3. ತುಂಬಾ ಮಾರ್ಮಿಕವಾದ ಮತ್ತು ತೀವ್ರ ಸಂಧಿಗ್ದದ ಕಥೆ. ಕಾತುರತೆಯಿಂದ ಓದಿಸಿಕೊಂದು ಹೋಗುವ ಕಥೆ.
    ಕಥಾನಾಯಕನು ಕರ್ತವ್ಯದಲ್ಲಿ ಮಾಡಿದ್ದು ಸರಿಯೇ! ಆದರೆ ಮಾನವೀಯವಾಗಿ ಎರಡನೆಯದು ಮಾಡಿದ್ದು ಅವನ ಹಿರಿತನ. ಇಂತಹ ಜನ ನಮ್ಮ ಸಮಾಜಕ್ಕೆ ಈಗ ಅವಶ್ಯವಿದೆ.
    ಜೊತೆಗೆ ನಮ್ಮ ಸಧ್ಯದ ಸಾಮಾಜಿಕ ಪರಿಸ್ಥಿತಿಯನ್ನು ಕಥೆಯಲ್ಲಿ ಹಿಡಿದಿದ್ದಿರಾ.. ನೆರೆ -ಬರ ಸಾಮಾನ್ಯರ ಜೀವನದಲ್ಲಿ ಎಬ್ಬಿಸುವ ಸುನಾಮಿ, ಅವರ ಹೆಸರಲ್ಲಿ ದುಡ್ಡು ಮಾಡಿಕೊಳ್ಳುವ ಜನ, ಹತಾಶರ ಆತ್ಮಾಹತ್ಯಾ ಪ್ರವೃತ್ತಿ ಇವೆಲ್ಲವನ್ನೂ ಹೇಳಿದ್ದಿರಾ.. ಜೊತೆಗೆ ನಮ್ಮ ಸಮಾಜಕ್ಕೆ ಅವಶ್ಯವಿರುವ ಸ್ಪಂದನೆಯನ್ನು ಕಥಾನಾಯಕನ ಮೂಲಕ ಹೇಳಿದ್ದಿರಾ.. ಒಳ್ಳೆ ತಂತ್ರ ಮತ್ತು ಸಂದೇಶದ ಕಥೆಗಾಗಿ ನೀಮಗಿದೋ ಅನಂತ ವಂದನೆಗಳು.

    ReplyDelete
  4. ಕಥಾನಾಯಕನ ಸಾಮಾಜಿಕ ಕಳಕಳಿಯನ್ನು ಮನ ಮುಟ್ಟುವಂತೆ ಚಿತ್ರಿಸಿದ್ದೀರ.ಕಥೆಯಲ್ಲಿ ಸದುದ್ದೇಶದ ಸಂದೇಶವಿದೆ.ಖಂಡಿತ ನಿಮ್ಮಿಂದ ಇನ್ನೂ ಒಳ್ಳೆಯ ಕಥೆಗಳು ಬರುವ ಸೂಚನೆ ಕೊಟ್ಟಿದ್ದೀರಿ.ನಿಮ್ಮ ಪ್ರಯತ್ನ ಮುಂದುವರೆಯಲಿ.ಒಳ್ಳೆಯ ಕಥೆ ಕೊಟ್ಟಿದ್ದಕ್ಕೆ ಧನ್ಯವಾದಗಳು.

    ReplyDelete
  5. ದಿನಕರ್..

    ಮನಮಿಡಿಯುವಂಥಹ ಕಥೆ..

    ಎರಡು ವಿಚಾರಗಳ "ದ್ವಂದ್ವ" ಕಾಡುತ್ತದೆ..

    ಇಂಥಹ ಇನ್ನಷ್ಟು ಕಥೆಗಳು ಬರಲಿ..

    ಕಥಾವಸ್ತುವಿನೊಡನೆ..
    ಬರವಣಿಗೆಯ ಶೈಲಿ ತುಂಬಾ ಇಷ್ಟವಾಗುತ್ತದೆ..

    ReplyDelete
  6. ಹೃದಯ ತಟ್ಟಿದ ಈ ಲೇಖನ ಓದಿ ಮನಸ್ಸು ಭಾರವಾಯಿತು. ಕರುಣಾಜನಕ ಕಥೆ ಇದು ಬದುಕಿನ ಜಂಜಾಟದ ನಿತ್ಯ ವ್ಯಥೆ . ಮನ ಕಲಕಿದ ಈ ಘಟನೆಯನ್ನು ಕಣ್ಣಿಗೆ ಕಟ್ಟಿದಂತೆ ಬರೆದಿದ್ದೀರಿ. ಆ ರೈಲಿನ ಚಾಲಕ ನಾನೇ ಎನ್ನುವಂತೆ ಭಾಸವಾಯಿತು. ಲೇಖನ ಮನ ಮಿಡಿಯಿತು.ನಿಮಗೆ ಧನ್ಯವಾದಗಳು.

    ReplyDelete
  7. ಸೀತಾರಾಮ್ ಸರ್,
    ನಾನು ಇಷ್ಟುದ್ದ ಬರೆದ ಕಥೆಯ ಸಾರವನ್ನು ಚಿಕ್ಕದಾಗಿ ನೀವೇ ಬರೆದಿದ್ದೀರಾ..... ಈ ಕಥೆ ತುಂಬಾ ದಿನದಿಂದ ಕೈ ಕಚ್ಚುತ್ತಿತ್ತು...... ನಿನ್ನೆ ಬರೆದು ಮುಗಿಸಿದೆ.... ಧನ್ಯವಾದ ನಿಮ್ಮ ಮೆಚ್ಚುಗೆಗೆ..... ಪ್ರೊತ್ಶಾಹ ಹೀಗೆ ಇರಲಿ....

    ReplyDelete
  8. ಮೂರ್ತಿ ಸರ್...
    ಕಥಾನಾಯಕನ ಮನಸ್ತಿತಿ ಅರಿತು ಬರೆಯಲು ಕಷ್ಟ ಆಯ್ತು ಸರ್... ಯಾಕಂದ್ರೆ ನಾನಿನ್ನೂ ರೈಲ್ ಚಾಲಕನ ಕ್ಯಾಬಿನ್ ಒಳಗೇ ಹೊಗಲೇ ಇಲ್ಲ ಇನ್ನೂ... ಹಾಗಾಗಿ ಎಲ್ಲವನ್ನೂ ಕಲ್ಪನೆ ಮಾಡಿ ಬರೆದೆ..... ನೀವೆಲ್ಲಾ ಇಷ್ಟ ಪಟ್ಟರೆ ಇದೇ ಖುಷಿ ಸರ್..... ನಿಮ್ಮೆಲ್ಲರ ಹಾರೈಕೆ ಪ್ರೊತ್ಶಾಹ ಹೀಗೆ ಇದ್ದರೆ ನನ್ನಿಂದ ಇನ್ನೂ ಕಥೆ ಕವನ ಬರಬಹುದು ಸರ್......ಧನ್ಯವಾದ...

    ReplyDelete
  9. ಪ್ರಕಾಶಣ್ಣ,,,
    ರೈಲ್ವೆ ಹಳಿ ಮೇಲೆ ಆತ್ಮಹತ್ಯೆ ಸುದ್ದಿ ಓದಿದಾಗ ನನಗೆ ನೆನಪಾಗುವುದು ಮತ್ತು ಕಳಕಳಿ ಬರೋದು, ರೈಲ್ವೆ ಚಾಲಕನ ಬಗ್ಗೆ...... ಆತನ ಮನಸ್ಥಿತಿ ನನಗೆ ತುಂಬಾ ಇಂಟರೆಸ್ಟಿಂಗ್ ಎನಿಸೊದು..... ಅದನ್ನೇ ನನ್ನ ಕಲ್ಪನೆ ಜೊತೆ ಸೇರಿಸಿ ಕಥೆ ಬರೆದೆ.... ಎಷ್ಟರಮಟ್ಟಿಗೆ ಯಶಸ್ವಿ ಆಗಿದ್ದೇನೊ ಗೊತ್ತಿಲ್ಲ....
    ನಿಮ್ಮ ಅಭಿಮಾನ ಹೀಗೆ ಇರಲಿ.....ಧನ್ಯವಾದ ಪ್ರಕಾಶಣ್ಣಾ.....

    ReplyDelete
  10. ಬಾಲು ಸರ್..
    ಕಥೆ ಓದಿ ನೀವು ನನಗೆ ಫೊನ್ ಮಾಡಿ ಸಂತಸ ಹಂಚಿಕೊಡಿದ್ದು ತುಂಬಾ ಮುದ ನೀಡಿತು....... ಕಣ್ಣೆದುರು ನಡೆಯುವ ಅಂತ್ಯವನ್ನು ರೈಲ್ವೆ ಚಾಲಕ ಹೇಗೆ ಅರಗಿಸಿಕೊಳ್ಳುತ್ತಾನೆ ಎಂಬುದು ನನ್ನ ದೊಡ್ಡ ಪ್ರಶ್ನೆಯಾಗಿತ್ತು.... ಅದರ ಬಗ್ಗೆ ಕಲ್ಪನೆ ಮಾಡಿ ಬರೆದೆ...... ಧನ್ಯವಾದ ನಿಮ್ಮ ಮೆಚ್ಚುಗೆಗೆ..... ಹೀಗೆ ಬೆನ್ನು ತಟ್ಟುತ್ತಾ ಇರಿ.....

    ReplyDelete
  11. ನಾನು ಯಾವುದೋ ಗುಂಗಿನಲ್ಲಿದ್ದವನು ನಿಮ್ಮ ಬ್ಲಾಗಿಗೆ ಬ೦ದು ಓದಲು ಶುರು ಮಾಡಿದಾಗ, ಥಟ್ಟನೆ ಇದು ಕಥೆ ಎ೦ದು ಅನ್ನಿಸಲೇ ಇಲ್ಲ, ನಿಮ್ಮ ಅನುಭವದ ಘಟನೆಯೇನೋ ಅನ್ನಿಸಿತು. ಹೌದು, ದಿನಕರ್ ಯಾವಾಗಿ೦ದ ರೈಲು ಬಿಡೋಕೆ ಶುರು ಮಾಡಿದ್ರು ಅ೦ತಾನು ಯೋಚನೆಗೆ ಬಿದ್ದೆ. ಪೂರ್ತಿ ಓದಿದ ಮೇಲೆ ಈ ಕಥೆ ಮತ್ತೆ ಮತ್ತೆ ಕಾಡತೊಡಗಿತು. ಅದ್ಭುತವಾಗಿದೆ ಕಥಾವಸ್ತು ಮತ್ತು ನಿಮ್ಮ ನಿರೂಪಣೆ. ಇನ್ನಷ್ಟು ಇಂಥಾದ್ದುಹೊರಬರಲಿ.

    ReplyDelete
  12. ಚೆನ್ನಾಗಿದೆ ಸರ್,
    ಡ್ರೈವರ್ ನ ಅನಿವಾರ್ಯತೆ, ಆ ಕುಟುಂಬದ ಅಸಹಾಯಕತೆ ಮನಸ್ಸಿಗೆ ತಟ್ಟುತ್ತವೆ.

    ReplyDelete
  13. Super sir....

    Very touching! Hope such people still exist here!

    ReplyDelete
  14. ದಿನಕರ್ ಸರ್,

    ಮುಂಬಯಿ ಲೋಕಲ್ ಟ್ರೈನ್ಗಳಲ್ಲಿ ತಿರುಗುವಾಗ ಇಂತಹ ಸನ್ನಿವೇಶಗಳನ್ನು ಕಣ್ಣಾರೆ ಕಂಡಿರುತ್ತೇನೆ..ಮನಸ್ಸಿಗೆ ತುಂಬಾ ಬೇಸರವಾಗುತ್ತದೆ. ದೂರದಿಂದ ನೋಡುವ ನಮಗೆ ಹೀಗಾದರೆ ಇನ್ನೂ ಎಂಜಿನ್ ನಡೆಸುವ ಮೋಟೊರ್ ಮ್ಯಾನ್ ಕಥೆ ಏನಾಗಬೇಕು...ಕಥೆಯ ನಿರೂಪಣೆ ಚೆನ್ನಾಗಿತ್ತು. ಬರವಣಿಗೆ ಶೈಲಿ ಇಷ್ಟ ಆಯಿತು...ಇನ್ನೂ ಹೆಚ್ಚು ಹೆಚ್ಚು ಕಥೆಗಳು ಬರಲಿ...ಧನ್ಯವಾದಗಳು...

    ReplyDelete
  15. ಕಥೆಯನ್ನು ತು೦ಬಾ ಚೆನ್ನಾಗಿ ಬರೆದಿದ್ದಿರಿ..
    ಇ೦ತಹ ಸ೦ದರ್ಭದಲ್ಲಿ ಚಾಲಕನ ಅನಿವಾರ್ಯತೆಯೊ೦ದಿಗೆ ಅಸಹಾಯಕತೆ...
    ಮತ್ತೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಳ್ಳುವ೦ತಹ ಅವರ ಪರಿಸ್ಥಿತಿ.. ಜೀವನದಲ್ಲಿ ಅವರು ಅನುಭವಿಸಿದ ಯಾತನೆ ... ಮನಸ್ಸನ್ನು ಸ್ಥಬ್ದವಾಗಿಸುತ್ತದೆ.

    ReplyDelete
  16. ಚಾಲಕ ತನ್ನ ಅಪರಾಧಿ ಪ್ರಜ್ಞೆಯನ್ನು ಗೆದ್ದ ರೀತಿ ಸೊಗಸಾಗಿದೆ. ತುಂಬ ಉತ್ತಮ ನಿರೂಪಣೆ.

    ReplyDelete
  17. ಪರಾಂಜಪೆ ಸರ್,
    ನನಗೆ ತುಂಬಾ ದಿನ ಕಾಡಿದ ಕಥಾವಸ್ತು ಇದು.... ಚಾಲಕನ ಮನಸ್ತಿತಿ ನನ್ನ ಕುತೂಹಲಕ್ಕೆ ಕಾರಣವಾಗಿತ್ತು.... ನನ್ನ ಕಲ್ಪನೆಗೆ ನಿಲುಕಿದ ಹಾಗೆ ಬರೆದೆ ಸರ್.... ನಿಮಗೆ ಇಷ್ಟ ಆದರೆ ಅದೇ ಖುಷಿ.... ಧನ್ಯವಾದ ನಿಮ್ಮ ಮೆಚ್ಚುಗೆಗೆ....

    ReplyDelete
  18. ಆನಂದ್ ,
    ಎಲ್ಲಿದ್ದೀರಿ ಇಷ್ಟು ದಿನ.... ಸ್ವಾಗತ ತಿರುಗಿ ಬಂದಿದ್ದಕ್ಕೆ..... ನಿಮ್ಮ ಮೆಚ್ಚುಗೆಗೆ ಧನ್ಯವಾದ ... ಹೀಗೆ ಬ್ಲಾಗ್ ಮಿತ್ರರೊಡನೆ ಸಂಪರ್ಕದಲ್ಲಿರಿ...........

    ReplyDelete
  19. ಭಾಶೆ ಮೇಡಂ,
    ಧನ್ಯವಾದ ನಿಮ್ಮ ಮೆಚ್ಚುಗೆಗೆ.....ಜಗತ್ತಿನಲ್ಲಿ ಎಲ್ಲರು ಕೆಟ್ಟವರು ಇರಲಿಕ್ಕಿಲ್ಲ.... ನಮ್ಮ ಕಥಾನಾಯಕನ ಥರದವರು ಇರಬಹುದು ...

    ReplyDelete
  20. ಅಶೋಕ್ ಸರ್,
    ನಾನು ಎಂದಿಗೂ ರೈಲು ಎಂಜಿನ್ ಭೋಗಿ ಒಳಗೆ ಹೋಗಿಲ್ಲ.... ಆದರು ಇದನ್ನ ಕಲ್ಪನೆ ಮಾಡಿ ಬರೆದೆ ಸರ್..... ಧನ್ಯವಾದ ನಿಮ್ಮ ಮೆಚ್ಚುಗೆಗೆ....

    ReplyDelete
  21. ಮನಮುಕ್ತಾ ,
    ನಮ್ಮ ಸಮಾಜವೇ ಜನರ ಜೀವದ ಆಟ ಆಡುತ್ತಿದೆ...... ಅವರ ಕನಿಷ್ಠ ಸೌಲಭ್ಯಗಳಿಗೆ ನಾವು ಸ್ಪಂದಿಸದಿದ್ದರೆ ಅವರು ಇದನ್ನೇ ತಾನೇ ಯೋಚಿಸುತ್ತಾರೆ..... ಧನ್ಯವಾದ ನಿಮ್ಮ ಮೆಚ್ಚುಗೆಯ ಅನಿಸಿಕೆಗೆ....

    ReplyDelete
  22. ಸುನಾಥ್ ಸರ್,
    ಕಥಾನಾಯಕ ನ ಕಥೆಯ ಅಂತ್ಯ ಈ ರೀತಿ ಕೊನೆಯ ಕ್ಷಣದಲ್ಲಿ ಹೊಳೆದದ್ದು ಸರ್..... ಇದನ್ನೇ ಇಷ್ಟಪಟ್ಟಿದ್ದು ನನಗೆ ಖುಷಿ ಆಯಿತು..... ನಿಮ್ಮ ಪ್ರೋತ್ಶಾಹಕ್ಕೆ ನನ್ನ ನಮನ ಸರ್.... ಧನ್ಯವಾದ....

    ReplyDelete
  23. Dinakara sir ..

    sooper story ... nice naration

    ReplyDelete
  24. ದಿನಕರ್ ಭಾಳ ಛಂದ ನಿಮ್ಮ ಕತೆ ಇಂಥಾ ಕತೆ ಆಗಾಗ ನಿಮ್ಮಿಂದ ಬರುತ್ತಿರಲಿ...

    ReplyDelete
  25. ದಿನಕರ್ ಸರ್,

    ಕತೆಯನ್ನು ಓದಿದೆ. ಮನಸ್ಸು ದ್ವಂದ್ವಕ್ಕೆ ಸಿಲುಕಿಬಿಟ್ಟಿತು. ಇಂತಹ ಸಮಯದಲ್ಲಿಯೇ ಅಲ್ಲಯೋ ನಾವು ಸಂಯಮ ಮತ್ತು ಭಾವನೆಗಳನ್ನು ಹತ್ತಿಕ್ಕುವುದನ್ನು ಕಲಿಯಬೇಕಿರುವುದು. ಕತೆ ತುಂಬಾ ಚೆನ್ನಾಗಿ ಬರೆದಿದ್ದೀರಿ...
    ನೀವು ಫೋಟೊಗ್ರಫಿ ಯಾವಾಗ ಕಲಿತಿರಿ. ಹೀಗೆ ಪ್ರೇಮ್ ಟು ಪ್ರೇಮ್ ಚಿತ್ರ ಕಟ್ಟಿಕೊಡುವುದು ಕಲಿತಿದ್ದು ಯಾವಾಗ?

    ReplyDelete
  26. ವಾಹ್.... ಸಕತ್ ಆಗಿದೆ ದಿನಕರ್ ಅವರೆ... ಕಥೆ ಸಿಕ್ಕಾಪಟ್ಟೆ ಸ್ಪೀಡ್ ಆಗಿ ಓದಿಸಿಕೊಂಡು ಹೋಗುತ್ತದೆ ರೈಲಿನ ಸ್ಪೀಡ್ ಗಿಂತ ಜಾಸ್ತಿ ಸ್ಪೀಡ್ ನಲ್ಲಿ..... ಬರವಣಿಗೆಯ ಶೈಲಿಯಂತೂ ಓದುಗನನ್ನೇ ರೈಲಿನ ಚಾಲಕನನ್ನಾಗಿ ಮಾಡಿಬಿಡುತ್ತದೆ. ಹೀಗೇ ಇನ್ನೂ ಉತ್ತಮ ಕಥೆಗಳು ನಿಮ್ಮಿಂದ ಬರಲಿ. ಧನ್ಯವಾದಗಳು.

    ReplyDelete
  27. ದಿನಕರ್,
    ಕಥೆ ತುಂಬಾ ಇಷ್ಟ ಆಯಿತು.ರೈಲ್ವೆ ಡ್ರೈವರ್ ನ ದ್ವಂದ್ವವನ್ನು ಚೆನ್ನಾಗಿ ಸೆರೆಹಿಡಿದಿದ್ದೀರಿ :-)

    ReplyDelete
  28. ದಿನಕರ್,
    ಅದ್ಭುತ ನಿರೂಪಣೆ !
    ದ್ವಂದ್ವಗಳು-ಮನಸಾಕ್ಷಿ-ಅಸಹಾಯಕತೆ ಹಸಿಹಸಿಯಾಗಿ ಮೂಡಿಬಂದಿದೆ..

    ReplyDelete
  29. ದಿನಕರ್ ಸರ್..
    ಅಲ್ಲ ನೀವು, 'ಹೀಂಗ್ ಆದ್ರ ಹ್ಯಾಂಗ್' ಓದಿ.. ಅಬ್ಬ ಏನ್ ಬರಿತಿಯಪ್ಪ.. ಅಂದ್ರಿ..
    ನಿಮ್ಮ ಬಗ್ಗೆ ನಾ ಏನ್ ಹೇಳಲಿ..
    ಅಣ್ಣ ನಿಮಗೆ ಶೀರ ಬಾಗಿ ನನ್ನ ನಮಸ್ಕಾರ..

    ಉತ್ತರ ಕರ್ನಾಟಕ ದ ಕೂಲಿ ಜನರ ಬಗ್ಗೆ ಬರೆದಿರಲ್ಲಾ.. ಒಮ್ಮೆ ಅಳು ಬಂದಂಗ್ ಆಯ್ತು..
    ಆ ಸಮಯದಲ್ಲಿ ನಾನು ಗುಲ್ಬರ್ಗ ದಲ್ಲಿದ್ದೆ.. ಅಲ್ಲಿ ನಡೆದ ಕೆಲವು ಸನ್ನಿವೇಶ ಇಗಲೂ ನನ್ನ ಕಾಡುತ್ತವೆ..

    ಇಲ್ಲಿ ಡ್ರೈವರ್ ತನ್ನ ಕರ್ತವ್ಯ ಮಾಡಿದ .. ಹಾಗೇನೆ "ಮಾನವೀಯತೆ" ಮೆರೆದ ..
    ಆ ಡ್ರೈವರ್ ಗು ನಿಮಗೂ ನನ್ನ ನಮನ..
    -ಅನಿಲ್

    ReplyDelete
  30. yes dinakar sir , first i felt very bad . its really very difficult situation on that time for a railway driver.really its very nice

    ReplyDelete
  31. ಒಳ್ಳೆಯ ಸಂದೇಶ ನೀಡುವ ಚಿಕ್ಕ ಚೊಕ್ಕ ಕಥೆ.

    ReplyDelete
  32. ಶ್ರೀಧರ್,
    ತುಂಬಾ ಧನ್ಯವಾದ ನಿಮ್ಮ ಮೆಚ್ಚುಗೆಗೆ.....

    ReplyDelete
  33. ಗಿರೀಶ್,
    ಮೆಚ್ಚುಗೆ ಸೂಚಿಸಿ ಕೊಮೆಂಟ್ ಹಾಕಿದ್ದಕ್ಕೆ ಧನ್ಯವಾದ....

    ReplyDelete
  34. ಉಮೇಶ್ ಸರ್,
    ನಿಮ್ಮ ಪ್ರೊತ್ಸಾಹ ಹೀಗೆ ಇರಲಿ... ಇದು ನನ್ನಿಂದ ಉತ್ತಮ ಕಥೆ, ಕವನ ಬರೆಯಲು ಪ್ರೇರೇಪಿಸಲಿ...ಧನ್ಯವಾದ...

    ReplyDelete
  35. ಶಿವು ಸರ್,
    ನಿಮ್ಮ ಮೆಚ್ಚುಗೆ ಭರಿತ ಮಾತುಗಳಿಗೆ ನನ್ನ ನಮನ..... ಮನುಷ್ಯ ಎಷ್ಟೇ ಭಾವನಾಜೀವಿಯಾದರೂ ಅವನ ಕರ್ತವ್ಯ ಎಂಬುದು ಎನೆಲ್ಲಾ ಮಾಡಿಸುತ್ತದೆ ಅಲ್ವಾ ಸರ್....
    ಧನ್ಯವಾದ ಚಂದದ ಪ್ರತಿಕ್ರೀಯೆಗೆ...

    ReplyDelete
  36. ಗುರುಪ್ರಸಾದ್ ಸರ್,
    ನಿಮ್ಮ ಮೆಚ್ಚುಗೆ, ಪ್ರೊತ್ಸಾಹದ ಮಾತುಗಳೆ ನನ್ನನ್ನು ಇನ್ನೂ ಬರೆಯಲು ಉತ್ಸಾಹ ತುಂಬುತ್ತದೆ..... ಧನ್ಯವಾದ ನಿಮ್ಮ ಮಾತುಗಳಿಗೆ....

    ReplyDelete
  37. ದಿಗ್ವಾಸ್ ಹೆಗಡೆಯವರೆ,
    ಮೊದಲನೆಯದಾಗಿ ನನ್ನ ಬ್ಲೊಗ್ ಗೆ ಸ್ವಾಗತ..... ಧನ್ಯವಾದ ನಿಮ್ಮ ಮೆಚ್ಚುಗೆಗೆ... ಹೀಗೆ ಬರುತ್ತಾ ಇರಿ....

    ReplyDelete
  38. ವನಿತಾ,
    ಇನ್ನೂ ಚೆನ್ನಾಗಿ ಬರೆಯಬಹುದಿತ್ತು.... ಈಗ ಅನಿಸುತ್ತಾ ಇದೆ..... ಆದರೂ ಇಷ್ಟಪಟ್ಟೂ ಅನಿಸಿಕೆ ಹಾಕಿದ್ದೀರಿ ಧನ್ಯವಾದ....

    ReplyDelete
  39. ಶಿವ್,
    ಸ್ವಾಗತ ನನ್ನ ಬ್ಲೊಗ್ ಗೆ.......ನಿಮ್ಮ ಮೆಚ್ಚುಗೆಗೆ ನಾನು ಅಭಾರಿ.....

    ReplyDelete
  40. A-NIL

    ಕೂಲಿ ಕಾರ್ಮಿಕರ ಬಗ್ಗೆ ಹೊಳೆದದ್ದು ಕೊನೆಯ ಘಳಿಗೆಯಲ್ಲಿ.... ಅದಕ್ಕೆ ಅಲ್ಲಿನ ಪ್ರವಾಹ, ಅದರಲ್ಲಿನ ಮೋಸ ನೆನಪಿಗೆ ಬಂತು.... ಕಥೆಗೆ ಸರಿಯಾಗಿ ಹೊಂದಿಕೆಯಾಯಿತು...... ನಿಮ್ಮ ಮೆಚ್ಚುಗೆಗೆ ನನ್ನ ನಮನ.... ಈಗ್ಲೂ ಹೇಳ್ತೇನೆ... ನಿಮ್ಮ ಬರಹ ತುಂಬಾ ಚೆನ್ನಾಗಿತ್ತು.....

    ReplyDelete
  41. ಹೆಗಡೆ ಸರ್...
    ನಿಮ್ಮ ಮೆಚ್ಚುಗೆಗೆ ನಾನು ಆಭಾರಿ..... ನನಗೂ ಆ ಡ್ರೈವರ್ ಪಾತ್ರ ತುಂಬಾ ಇಷ್ಟವಾಯ್ತು..... ಧನ್ಯವಾದ....

    ReplyDelete
  42. ಸುಮ ಮೇಡಮ್,
    ಧನ್ಯವಾದ ನಿಮ್ಮ ಅನಿಸಿಕೆ ಮತ್ತು ಮೆಚ್ಚುಗೆಗೆ......

    ReplyDelete
  43. ಕತೆಯ ಶೈಲಿ ಮತ್ತು ಕಥಾ ನಾಯಕನ ಭಾವನೆಗಳು, ಮನಸ್ಸಿನ ತಾಕಲಾಟಗಳು.. ಎಲ್ಲವೂ ಆಪ್ತ ಎನ್ನಿಸಿತು. ಬಹಳ ಹಿಡಿಸಿತು

    ReplyDelete
  44. ಚೆನ್ನಾಗಿದೆ ಸರ್. ಇಲ್ಲಿ ಕಥಾನಾಯಕನ ಮನಸ್ಸು ದೊಡ್ಡದು.

    ReplyDelete
  45. ಒಳ್ಳೆಯ ನಿರೂಪಣೆ. ಭಾವನೆಗಳ ಹಲವು ಮುಖಗಳನ್ನು ಕತೆಯು ಪರಿಚಯಿಸುತ್ತಾ ಹೋಗುತ್ತದೆ. ಚೆನ್ನಾಗಿತ್ತು.

    ReplyDelete
  46. ಉತ್ತಮ ಕತೆ ದಿನಕರ್, ನಿರೂಪಣೆ ಸಹಜ, ಸರಳವಾಗಿ ಮೂಡಿಬಂದಿದೆ. keep it up.

    ReplyDelete
  47. ಗೌತಮ್,
    ಧನ್ಯವಾದ .. ಅಪರೂಪಕ್ಕೆ ಬಂದು ಅನಿಸಿಕೆ ಹಾಕಿದ್ದಕ್ಕೆ ಮತ್ತು ಮೆಚ್ಚಿದ್ದಕ್ಕೆ.... ಹೀಗೆ ಬರುತ್ತಾ ಇರು....

    ReplyDelete
  48. ಸಾಗರಿ ಮೇಡಮ್,
    ಕಥೆಯ ಮೊದಲಾರ್ಧ ಮನಸ್ಸಿನ ಭಾವನೆಯ ಬಗ್ಗೆ ಚೆನ್ನಾಗಿ ಬರೆದೆ ಎನಿಸಿದೆ... ಆದರೆ ಕೊನೆ ಕೊನೆಗೆ ಕಥೆ ಉದ್ದವಾಗುತ್ತಿದೆ ಎನಿಸಿತು..... ಅದಕ್ಕೆ ಮನಸಿನ ಭಾವನೆಗೆ ಕತ್ತರಿ ಹಾಕಿ ಮುಗಿಸಿದೆ...... ಇಷ್ಟಪಟ್ಟು ಅನಿಸಿಕೆ ಹಾಕಿದ್ದಕ್ಕೆ ಧನ್ಯವಾದ....

    ReplyDelete
  49. ಸತೀಶ್,
    ಧನ್ಯವಾದ.... ಬಂದು ಓದಿ ಅನಿಸಿಕೆ ಹಾಕಿದ್ದಕ್ಕೆ....

    ReplyDelete
  50. ಸುಬ್ರಮಣ್ಯ ಸರ್,
    ತುಮ್ಬಾ ಧನ್ಯವಾದ ನಿಮ್ಮೆಲ್ಲರ ಪ್ರೊತ್ಸಾಹಕ್ಕೆ ನಮನ..... ಹೀಗೆ ಬರುತ್ತಾ ಇರಿ ಸರ್...

    ReplyDelete
  51. ಮಂಜುನಾಥ್ ಸರ್,
    ನಿಮ್ಮ ಬ್ಲೊಗಿನಲ್ಲಿ ಒಂದು ನನ್ನ ಅನಿಸಿಕೆ ಹಾಕಿದ್ದೆ... ನನ್ನ ಕಥೆ ಓದಲು ಕೇಳಿಕೊಂಡಿದ್ದೆ... ಓದಿ, ನಿಮ್ಮ ಪ್ರೊತ್ಸಾಹದ ಸಾಲುಗಳನ್ನು ಬರೆದಿದ್ದಕ್ಕೆ ಧನ್ಯವಾದ ಸರ್..... ಹೀಗೆ ಬರುತ್ತಾ ಇರಿ.....

    ReplyDelete
  52. ದಿನಕರರೆ, ಎಷ್ಟೋ ವರ್ಷಗಳ ನಂತರ ಒಂದು ಬ್ಲಾಗ್ ಅಂಕಣವನ್ನು ಪೂರ್ತಿಯಾಗಿ ಓದಿದೆ! ನೀವು ಇನ್ವಿತತಿಒನ್ ಕೊಡದಿದ್ದರೆ, ಇಂಥಹ ಹೃದಯ ಕಿವಿಚುವಂಥಹ ಬರಹ ಓದಲು ಸಿಗುತ್ತಿರಲಿಲ್ಲ. ಇದು ನೈಜ ಕಥೆಯೇ?
    ನನಗೂ ಬಹಳ ಬ್ಲಾಗ್ ಓದಬೇಕೆಂದಿದೆ. ಆದರೆ ಆಗುತ್ತಿಲ್ಲ. ಈ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು.

    ReplyDelete
  53. ಪ್ರಾರಂಭದಲ್ಲಿ ಎಲ್ಲಿ ಇದು ಒಂದು ರೈಲು ದುರಂತದ ಕಥಾನಕವೋ ಅಂತ ಕಳವಳದಲ್ಲಿ ಓದುತ್ತಾ ಹೋದೆ. ಕಥಾನಾಯಕ ಇಲ್ಲಿ ಕಾಲನ ಕೈಗೊಂಬೆ. ಕೊನೆಗೆ ಪಾಪಪ್ರಜ್ಞೆಯಿಂದ ಹೊರಬಂದ ಮಾನವೀಯ ರೀತಿ ಅನುಕರಣೀಯ. ಮನೊಜ್ಞ ಕಥೆಗೆ ಅಭಿನಂದನೆಗಳು :)

    ReplyDelete
  54. ಸೂಪರ್.. ತುಂಬಾ ಚೆನ್ನಾಗಿದೆ.ಒಳ್ಳೆಯ ಕೆಲಸ ಮಾಡಿದಿರಿ.

    ReplyDelete
  55. ದಿನಕರ್ ಸಾರ್... ನಿಜವಾಗಲು ತುಂಬಾ ಅದ್ಭುತವಾಗಿದೆ ನಿಮ್ಮ ಕಥೆ.. ತುಂಬ ನೈಜವಾಗಿ ನಿರೂಪಿಸಿದ್ದೀರಿ.. ಅಪಘಾತ ಆಗುವ ಕ್ಷಣವನ್ನಂತು ಕುರ್ಚಿಯ ತುದಿಯಲ್ಲಿ ಕುಳಿತು ಓದಿದೆ.. ಒಂದು ಹಂತದಲ್ಲಿ ನಿಜವಾಗಿಯೂ ನೀವು ರೈಲ್ವೆಯಲ್ಲಿ ಕೆಲಸ ಮಾಡುವಿರೇನೋ.. ಇದು ನಿಮ್ಮದೇ ಅನುಭವವೇನೋ ಎನ್ನಿಸಿಬಿಟ್ಟಿತ್ತು.. ಮಗುವನ್ನು ದತ್ತು ತೆಗೆದುಕೊಂಡ ಪಾತ್ರದ ದೊಡ್ಡ ಗುಣ ಮತ್ತು ಅದರ ತಂದೆ ತಾಯಿ ಸತ್ತಿದ್ದು ಆತನ ರೈಲಿನ ಕೆಳಗೆ ಎಂಬುದು ಹೊರಗೆ ಬರದೆ ಇದ್ದ ಸನ್ನಿವೇಷದ ಸ್ವಾರಸ್ಯ ಮೆಚ್ಚಿದೆ.. ಸ್ಮರಣೀಯ ಕಥೆ.. ಅಭಿನಂದನೆಗಳು.. ನಾನು ಬೆಂಗಳೂರಿಗೆ ಬಂದ ಹೊಸ ಮೆಟ್ರೋದ ಸೊಬಗು ಮತ್ತು ಅದು ಕಟ್ಟುವ ಹಂತದಲ್ಲೆ ಆದ ಅನಾಹುತಗಳ ಬಗ್ಗೆ ಬರೆದಿದ್ದೆ.. ಅದೆ ಸಮಯಕ್ಕೆ ನೀವು ರೈಲು ಅಪಘಾತದ ಬಗ್ಗೆ ಈ ಕಥೆ ಬರೆದಿದ್ದೀರಿ.. "ನಮ್ಮ ಮೆಟ್ರೋಗೆ" ಇನ್ನು ಮುಂದಾದರೂ ಇಂತ ಅನಾಹುತಗಳು ಎದುರಾಗದಿರಲಿ ಎಂದು ಆಶಿಸುವೆ..

    ReplyDelete
  56. ಅಬ್ಬಾ..
    ಅದೆಷ್ಟೋ ರೈಲು ಚಾಲಕರು ಇಂತ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಅನುಭವಿಸುವ ತೊಳಲಾಟವನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿದ್ದೀರಿ..

    ReplyDelete
  57. ಶಿಪ್ರಾ..
    ಧನ್ಯವಾದ..... ನಿಮ್ಮ ಮೆಚ್ಚುಗೆಗೆ.....

    ReplyDelete
  58. ಭಟ್ ಸರ್,
    ನಿಮ್ಮ ಮಾತು ಓದಿ ನೂರಾನೆ ಬಲ ಬಂದಿದೆ.... ಕಥೆ ಇಷ್ಟ ಪಟ್ಟು ಓದಿ ಅನಿಸಿಕೆಯಲ್ಲಿ ನಿಮ್ಮ ಮೆಚ್ಚುಗೆ ಹೇಳಿದ್ದಕ್ಕೆ ತುಂಬಾ ಧನ್ಯವಾದ... ಹೀಗೆ ಬರುತ್ತಾ ಇರಿ ಸರ್...

    ReplyDelete
  59. ತೇಜಸ್ವಿನಿ ಮೇಡಮ್,
    ನಿಮ್ಮ ಮೆಚ್ಚುಗೆ ಭರಿತ ಅನಿಸಿಕೆಗೆ ಧನ್ಯವಾದ... ನಿಮ್ಮ ಪ್ರೊತ್ಶಾಹ ಹೀಗೆ ಇರಲಿ.......

    ReplyDelete
  60. ಶ್ರವಣ,
    ಕಥೆಯ ಎಳೆ ಹೊಳೆದಾಗ ಇದನ್ನ ದುರಂತ ಕಥೆ ಮಾದಬಾರದು ಎಂದೇ ಇತ್ತು.... ಧನ್ಯವಾದ ನಿಮ್ಮ ಮೆಚ್ಚುಗೆಗೆ.... ಬರುತ್ತಾ ಇರಿ.....

    ReplyDelete
  61. ಗೋಪಾಲ್ ಸರ್,
    ತುಂಬಾ ಧನ್ಯವಾದ ನಿಮ್ಮ ಮೆಚ್ಚುಗೆ ಮತ್ತು ಪ್ರೊತ್ಸಾಹಕ್ಕೆ....

    ReplyDelete
  62. ಪ್ರದೀಪ್,
    ಹೌದು ನೀವು ಮೆಟ್ರೊ ಬಗ್ಗೆ ಬರೆದದ್ದು ನಾನು ರೈಲು ಕಥೆ ಬರೆದದ್ದು ಕಾಕತಾಳೀಯ.... ನಿಮ್ಮ ಪ್ರೀತಿಗೆ ಖುಶಿಯಾಯಿತು..... ಧನ್ಯವಾದ......

    ReplyDelete
  63. ಕತ್ತಲ ಮನೆ,
    ಹೌದು, ರೈಲು ಅಪಘಾತ ನನ್ನ ಮನದ ಮೇಲೆ ಕುತೂಹಲ ಮೂಡಿಸುತ್ತಿತ್ತು... ಅದರ ಮೇಲೆಯೆ ಬರೆದೆ.... ಮೆಚ್ಚಿದ್ದಕ್ಕೆ ಧನ್ಯವಾದ....

    ReplyDelete
  64. ವಾಹ್..!!! ನೈಜ ಘಟನೆಯೇ ನಮ್ಮ ಕಣ್ಣ ಮುಂದೆ ನೆಡೆದಂತಿತ್ತು....... ಎಷ್ಟೋ ಜನರ ಜೀವನ ದಿನನಿತ್ಯ ಸಾವಿನ ಬಾಗಿಲನ್ನು ತಾವಾಗೇ ತಟ್ಟುವಂತಾಗಿದೆ.

    ReplyDelete
  65. ಕರುಳನ್ನೇ ಕತ್ತರಿಸೋ ಹಾಗೆ ಬರ್ದಿದ್ದೀರಲ್ಲ ದಿನಕರ್ ಸರ್ ,
    ಮನಸು ಅರಿತರು ಕೆಲವೊಮ್ಮೆ ನಿಸ್ಸಾಹಾಯಕರಾಗಿ ಬಿಡುತ್ತೇವೆ ಅನ್ನೋದನ್ನ ಕರುಣಾಜನಕವಾಗಿ ಚಿತ್ರಿಕರಿಸಿದ್ದೀರಿ
    ನಿಮ್ಮ ಕಲ್ಪನೆಗೊಂದು ಹ್ಯಾಟ್ಸ್ ಆಪ್...

    ReplyDelete
  66. hi, it is really impressive story. driver proves him self twice here. once while not applying brakes to save thousands of commutors. again in climax while he adopts the kid.
    u have all qualities to be a short story writings.
    keep it up boss :-D

    ReplyDelete
  67. ದಿನಕರ್ ತಡವಾಗಿ ಪ್ರತಿಕ್ರಿಯೆಗೆ ಬಂದೆ ಕ್ಷಮಿಸಿ..ಊರಿನ ಬ್ಯುಸಿನೆಸ್ ಮಧ್ಯೆ ಬ್ಲಾಗ್ ಗಳನ್ನ ಸರಿಯಾಗಿ ನೋಡೋಕೂ ಆಗಿಲ್ಲ....
    ಒಂದಂತೂ ಕ್ಲಿಯರ್ ಆಗ್ತಿದೆ....ದಿನಕರ್ ಕಥೆಗಾರ ಚಿಗುರ್ತಾ ಇದ್ದಾನೆ...ಏನಂತೀರಿ...? ಬಹಳ ಮನ ಕಲಕುವ ಕಥಾ ನಿರೂಪಣೆ...ಮಗು ಉಳಿದ ಬಗ್ಗೆ ಸಂತಸ ಪಡುವುದೋ ಪೋಷಕರು ಸತ್ತದ್ದಕ್ಕೆ ದುಃಖಿಸುವುದೋ....!!!??? ಹೌದು ನಿಜಾರ್ಥದ ದ್ವಂದ್ವ.......ನಿಮ್ಮ ಕೃಷಿ ಮುಂದುವರೆಯಲಿ.

    ReplyDelete
  68. ದಿನಕರ್ ಸರ್,
    ಅದ್ಭುತ ಕಲ್ಪನೆ, ಕೌತುಕದಿಂದ ಕೂಡಿದ ನಿರೂಪಣೆ!
    ಇಂದಿನ ಸಾಮಾನ್ಯ ಮನುಷ್ಯನ ಸಕಲ ಸಮಸ್ಯೆಗಳನ್ನೂ ಚೊಕ್ಕವಾಗಿ ಕತೆಯಲ್ಲಿ ಹೇಳಿದ್ದೀರಾ. ಕಥಾನಾಯಕನ ಏನೂ ಮಾಡಲಾಗದ ಅಸಾಹಾಯಕ ಪರಿಸ್ಥಿತಿ, ಅವನ ಮಾನವೀಯತೆ............
    ಎಲ್ಲವೂ ಚನ್ನಾಗಿ ವರ್ಣಿಸಿದ್ದೀರಾ.

    ReplyDelete
  69. ದಿನಕರ್ ಅವರೇ.....

    ತು೦ಬಾ ತಡವಾಗಿ ಓದಿದೆ.. ಕ್ಷಮೆ ಇರಲಿ... ತು೦ಬಾ ಇಷ್ಟ ಆಯಿತು ಬರಹ....

    ReplyDelete
  70. ತುಂಬಾ ದಿನಗಳಾಗಿದ್ದವು ಬ್ಲಾಗ್ ಬರೆಯದೆ... ಅದಕ್ಕಾಗಿ ಬ್ಲಾಗ್ ಓಪನ್ ಮಾಡಿ , ಮೊದಲು ಎಲ್ಲಾ ಬ್ಲಾಗ್ ಓದೋಣ ಅಂತ ಒಂದೊಂದೇ ಓದುತ್ತಿದ್ದೆ... ನಿಮ್ಮ ಈ ಕಥೆ ಓದಿ ಅದೇನೂ ಮಾಡುವ ಮೂಡ್ ಬರುತ್ತಿಲ್ಲ... ಉತ್ತಮವಾದ ಕಥೆಯೊಂದನ್ನು ನೀಡಿದ್ದೀರಾ... ಈ ಕಥೆಯಿಂದ ಹೊರ ಬರಲು ಕೆಲವು ದಿನಗಳೇ ಬೇಕು.. ನನ್ನ ಬ್ಲಾಗ್ ಮುಂದೆ ಬರೆಯುವ ತೀರ್ಮಾನಕ್ಕೆ ಬಂದೆ... ಸೂಪರ್ ಕಥೆ ದಿನಕರ್....

    ReplyDelete
  71. good write-up. really it touched my heart.

    ReplyDelete
  72. ದಿನಕರ ಅವರೇ, ನನಗೆ ಇವತ್ತು ನಿಮ್ಮ ಬ್ಲಾಗ್ ಓದುವ ಭಾಗ್ಯ ಸಿಕ್ಕಿತು.ಮೊದಲನೆಯ ಲೇಖನ ಓದುತ್ತಿದಂತೆಯೇ ಮನಸ್ಸಿಗೆ ತುಂಬಾ ಹಿಡಿಸಿತು,ಹಾಗೆ ಓದುತ್ತ ಹೋದಂತೆ ಒಂದಕ್ಕಿಂತ ಇನ್ನೊಂದು ಲೇಖನ ಚೆನ್ನಾಗಿತ್ತು.ನಿಮ್ಮ ಕಥೆ ನಿರೂಪಣೆ ಅದ್ಭುತವಾಗಿದೆ.ಕಥೆಗಳು ನಿಜ ಜೀವನಕ್ಕೆ ತೀರ ಹತ್ತಿರವಾಗಿವೆ .ಇವತ್ತಿನ ಇಡಿ ದಿನ ನಿಮ್ಮ ಬ್ಲಾಗ್ ಓದುವುದರಲ್ಲೇ ಕಳೆದೆ,ತುಂಬಾ ಖುಷಿಯಾಯ್ತು.
    ನಿಮ್ಮ ಕಥೆಗಳಿಗಾಗಿ ಕಾಯ್ತಾ ಇರುತ್ತೇನೆ.

    ReplyDelete
  73. ದಿನಕರ ಅವರೇ, ನನಗೆ ಇವತ್ತು ನಿಮ್ಮ ಬ್ಲಾಗ್ ಓದುವ ಭಾಗ್ಯ ಸಿಕ್ಕಿತು.ಮೊದಲನೆಯ ಲೇಖನ ಓದುತ್ತಿದಂತೆಯೇ ಮನಸ್ಸಿಗೆ ತುಂಬಾ ಹಿಡಿಸಿತು,ಹಾಗೆ ಓದುತ್ತ ಹೋದಂತೆ ಒಂದಕ್ಕಿಂತ ಇನ್ನೊಂದು ಲೇಖನ ಚೆನ್ನಾಗಿತ್ತು.ನಿಮ್ಮ ಕಥೆ ನಿರೂಪಣೆ ಅದ್ಭುತವಾಗಿದೆ.ಕಥೆಗಳು ನಿಜ ಜೀವನಕ್ಕೆ ತೀರ ಹತ್ತಿರವಾಗಿವೆ .ಇವತ್ತಿನ ಇಡಿ ದಿನ ನಿಮ್ಮ ಬ್ಲಾಗ್ ಓದುವುದರಲ್ಲೇ ಕಳೆದೆ,ತುಂಬಾ ಖುಷಿಯಾಯ್ತು.
    ನಿಮ್ಮ ಕಥೆಗಳಿಗಾಗಿ ಕಾಯ್ತಾ ಇರುತ್ತೇನೆ.

    ReplyDelete