Aug 26, 2010

ಸೇಡಿನ ಹೊಸ ಬಗೆ...!!!

ತುರ್ತಾಗಿ ನಿನ್ನ ಮೇಲೆ
ಸೇಡು ತೀರಿಸಿಕೊಳ್ಳಬೇಕಿದೆ,
ತುಂಬಾ ಖುಶಿಯಿಂದ ಇದ್ದು,
ನಿನ್ನ ಮರೆಯಬೇಕಿದೆ.....


ಉಸಿರು ತಾಕುವಷ್ಟು ಹತ್ತಿರವೇ ಇದ್ದರೂ,
ಕೈಗೆ ಸಿಗದೇ ಇರಬೇಕಿದೆ......
ಒಳಗೊಳಗೆ ನೋವಿದ್ದರೂ,
ಮುಖದ ತುಂಬ ನಗು ತರಬೇಕಿದೆ......


ನಿನ್ನನ್ನೇ ಪ್ರೀತಿಸುತ್ತಾ ಇದ್ದರೂ,
ನಿನಗೆ ಹೇಳದೆ ಇರಬೇಕಿದೆ......
ಕಣ್ಣಲ್ಲಿ ನಿನ್ನದೇ ಚಿತ್ರ ನಿಂತರೂ,
ನಿನಗೆ ಕಾಣಿಸದೆ ಇರಬೇಕಿದೆ...


ಮನದ ತುಂಬಾ ನಿನ್ನದೇ ನೆನಪಿದ್ದರೂ,
ಹೃದಯದ ಹಾದಿ ತಪ್ಪಿಸಬೇಕಿದೆ....
ನೀ ನಡೆವ ದಾರಿಯಲ್ಲಿ ನಾನೇ ನಿಂತಿದ್ದರೂ,
ನಿನ್ನ ನೆರಳ ಸೋಕದೆ ನಿಲ್ಲಬೇಕಿದೆ...


ನಿನಗೆ ಫೋನ್ ಮಾಡಿದರೂ,
ಮಾತನಾಡದೇ ಸುಮ್ಮನೇ ಇರಬೇಕಿದೆ....
ಮರೆತು ಮೆಸೇಜ್ ಕಳಿಸಿದರೂ,
ಏನೂ ಬರೆಯದೇ ಬ್ಲ್ಯಾಂಕ್ ಇಡಬೇಕಿದೆ.....


ನೀನೇ ಉಸಿರೆಂದು ಗೊತ್ತಿದ್ದರೂ,
ಉಸಿರು ಹೊರಬಿಡಲೇಬೇಕಿದೆ....
ಹೊಸ ಉಸಿರಿಗೆ ದಾರಿ ಮಾಡಬೇಕಿದೆ...
ಮೂಗಿನ  ಹೊಳ್ಳೆ ತೆರೆಯಲೇಬೇಕಿದೆ.....

94 comments:

 1. ದಿನಕರ್ ಸರ್,

  ಒಂದು ರೀತಿಯ ಪೊಸೆಸಿವ್ ಆದ ಪ್ರೀತಿಯನ್ನು ಅದರ ಭಾವನೆಗಳನ್ನು ತುಂಬಾ ಚೆನ್ನಾಗಿ ಕವನದ ರೂಪದಲ್ಲಿ ಹೇಳೀದ್ದೀರಿ..
  ನೀನೇ ಉಸಿರೆಂದು ಗೊತ್ತಿದ್ದರೂ,
  ಉಸಿರು ಹೊರಬಿಡಲೇಬೇಕಿದೆ....ಇದಂತೂ ತುಂಬಾ ಚೆನ್ನಾಗಿದೆ..

  ReplyDelete
 2. shivu sir,
  dhanyavaada nimma modala comment ge.... nanagu ishtavaada saalu adu.... dhanyavaada....

  ReplyDelete
 3. ಮೂಕ ಮನಸು ಸೇಡು ತೀರಿಸಿಕೊಳ್ಳಲು ಹೊಸ ದಾರಿ.
  ಕವನ ತುಂಬಾ ಚೆನ್ನಾಗಿದೆ...

  ReplyDelete
 4. ದಿನಕರ್...
  ಚೆನ್ನಾಗಿದೆ ಕವನ.
  ಒಟ್ಟಿನಲ್ಲಿ ಎಲ್ಲಾ ಬೇಗ ಮರೆಯಬೇಕಿದೆ.
  ಹಿಂದೆ ನೀನಿದ್ದರೂ ನಾ ಕಾಣದೆ ಇರಬೇಕಾಗಿದೆ..
  ನಿಮ್ಮವ,
  ರಾಘು.

  ReplyDelete
 5. ನವೀನ...
  ಪ್ರೀತಿಯಲ್ಲಿ ಮೋಸ ಹೋಗಿ ಕೊರಗೊದಕ್ಕಿಂತ ಈ ರೀತಿ ಸೇಡು ತಿರಿಸಿಕೊಳ್ಳುವುದು ಒಳ್ಳೆಯದು ಅಲ್ವ..... ಅದು ಹುಡುಗಿಯೇ ಆಗಲಿ, ಹುಡುಗನೇ ಆಗಲಿ.....

  ReplyDelete
 6. ರಾಘು.....
  ನಿನ್ನನ್ನು ಯಾರು ಮರೆಯಲ್ಲಪ್ಪ...... ಇಷ್ಟು ಮುದ್ದು ಹುಡುಗ ನನ್ನು ಯಾರು ಮರೆಯುತ್ತಾರೆ ಹೇಳು.....

  ಕವನ ಮೆಚ್ಚಿದ್ದಕ್ಕೆ ಧನ್ಯವಾದ....

  ReplyDelete
 7. ದಿನಕರ್ ಸರ್.. ಪ್ರೀತಿಸಿದವರ ಮೇಲೆ ಸೇಡು ತೀರಿಸುಕೊಳ್ಳುವುದು ಏತಕ್ಕೆ?
  ಕವನದ ಶೈಲಿ ತು೦ಬಾ ಇಷ್ಟವಾಯ್ತು..

  ಶುಭಾಶಯಗಳು
  ಅನ೦ತ್

  ReplyDelete
 8. ದಿನಕರ್...

  ಕವನ ತುಂಬಾ ಚೆನ್ನಾಗಿದೆ..

  ಒಳಗೊಳಗೆ
  ಹುದುಗಿರುವ..
  ಅವ್ಯಕ್ತ..
  ಭಾವಗಳ..
  ವ್ಯಕ್ತ..
  ವ್ಯರ್ಥ..
  ಪ್ರಯತ್ನ..
  ಮುಚ್ಚಿಡಲಾಗದ..
  ಅಸಹಾಯಕ..
  ನನ್ನ..
  ಮಾತುಗಳು..
  ಈ..
  ಮೌನ..
  ಶಬ್ಧಗಳು..

  ದಿನಕರ್.. ಚಂದದ ಕವನಕ್ಕೆ ಜೈ ಹೋ..!

  ReplyDelete
 9. Mungaru Male 2 iro thara ide..:)
  Thumba chennagi barediddira :)
  Neene usiru saalu mana thattithu ...

  ReplyDelete
 10. ವಾಹ್..... ತುಂಬಾ ಚೆನ್ನಾಗಿದೆ ದಿನಕರ್ ಅವರೆ... ಹೊಸ ಶೈಲಿಯಲ್ಲಿ ಪ್ರಯೋಗ ಮಾಡಿರುವಿರಿ, ಪ್ರೀತಿಸಿ ಹತ್ತಿರವಿದ್ದೂ ತೋರಗೊಡದಿರುವುದು ಇಷ್ಟವಾಯಿತು.

  ReplyDelete
 11. ನಿಮ್ಮ ಕವಿತೆ ಅಘಾದವಾದ ಪ್ರೀತಿಯನ್ನು ಸೇಡಿನ ಮೂಲಕ ಹೊರಹಾಕಿದೆ,ಕೆಲವೊಮ್ಮೆ ದೇವರನ್ನೇ ಪ್ರೀತಿಯಿಂದ ಬೈಯ್ಯುವುದಿಲ್ಲವೇ ಹಾಗೆ .ಹೊಸತರಹದ ಚಿಂತನೆ ಗುಡ್

  ReplyDelete
 12. ದಿನಕರ್ ಸರ್ ಖಂಡಿತ ಹೇಳ್ತೀನಿ ಇದು ಹುಡುಗಿಯರಿಗೆ ಮಾತ್ರ ಸಾದ್ಯ . ಕವನ ತುಂಬಾ ಚೆನ್ನಾಗಿದೆ

  ReplyDelete
 13. ನಿನಗೆ ಫೋನ್ ಮಾಡಿದರೂ,
  ಮಾತನಾಡದೇ ಸುಮ್ಮನೇ ಇರಬೇಕಿದೆ....
  ಮರೆತು ಮೆಸೇಜ್ ಕಳಿಸಿದರೂ,
  ಏನೂ ಬರೆಯದೇ ಬ್ಲ್ಯಾಂಕ್ ಇಡಬೇಕಿದೆ.....

  ಡುಂಡಿಮರು ಹೇಳಿದ ಹಾಗೇ ಹೊಸ ಸಂಕೇತಗಳು!!

  ವಾ ಹೊಸ ಬಗೆಯ ಪ್ರ್ರಿತಿಯ ದ್ವೇಷ!!
  ಚೆನ್ನಾಗಿದೆ ನಿಮ್ಮ ಕವನ.

  ReplyDelete
 14. ಕವನ ಅದ್ಭುತ.. ವಿರಹವನ್ನ ಹೊಸ ಬಗೆಯಲ್ಲಿ ತೋಡಿಕೊಂಡಿದ್ದು ಇಷ್ಟವಾಯ್ತು..
  ನನಗೂ ಒಂದೆರಡು ಸಾಲು ಹೊಳೆಯಿತು.. ತಪ್ಪಿದ್ದರೆ ಮನ್ನಿಸಿ...

  ನಿನ್ನ ಮಾತುಗಳಿಗೆ ಕಿವಿಯಾಗದೆ
  ಎದೆಯ ಗೀತೆಗೆ ಕವಿಯಾಗಬೇಕಿದೆ
  ನಿನ್ನೊಡಲ ಕತ್ತಲೆ ಕೂಪ ಸಾಕು
  ನಾನು ಜಗವ ಬೆಳಗುವ ರವಿಯಾಗಬೇಕಿದೆ

  ReplyDelete
 15. ದಿನಕರ್ ಸರ್,

  ತುಂಬಾ ಸುಂದರ ಕವನ...ಮತ್ತೆ ಮತ್ತೆ ಓದುವ ಮನಸಾಗುತ್ತೆ...ಸರಳ ಶಬ್ದಗಳ ಸೊಗಸಾದ ಕವನ...ಇಷ್ಟ ಆಯಿತು...

  ReplyDelete
 16. ನಿಮ್ಮ ಕಾವಿ ಓದಿ ಹೊಟ್ಟೆಕಿಚ್ಚು ಪಟ್ಟು ಪ್ರತಿಕ್ರಿಯೆ ಹಾಕದೆ ಹೋದರೂ
  ಏನಾದರೂ ಹಾಕಲೇ ಬೇಕಾಗಿದೆ
  ನಿಮ್ಮ ಈ ಹೊಸ ಕಾವ್ಯದ ಸ್ಪೂರ್ತಿಗೆ ಮನದಿ ಏನು ತಿಂದಿರಿ ? ಎಂದು ಕೇಳಬೇಕೆನಿಸಿದರೂ
  ಕೇಳದೇ ಇರಬೇಕಾಗಿದೆ
  ನಿಮ್ಮ ಚಟುವಟಿಕೆಗೊಂಡ ಕಾರ್ಯಾಚರಣೆಯನ್ನು ಕಂಡು ಚಪ್ಪಾಳೆ ತಟ್ಟ ಬೇಕೆನಿಸಿದರೂ
  ದೂರದಲಿರುವ ಕಾರಣ ಬರೇ ಹೀಗೇ ಬರ್ದೆ ಮುಗಿಸಬೇಕಾಗಿದೆ !

  ಬಹಳ ಇಷ್ಟವಾಯಿತು ಸಾಹೇಬರೇ, ಜೈಹೋ ! ಧನ್ಯವಾದಗಳು

  ReplyDelete
 17. ನೀನೇ ಉಸಿರೆಂದು ಗೊತ್ತಿದ್ದರೂ,
  ಉಸಿರು ಹೊರಬಿಡಲೇಬೇಕಿದೆ. ಸಕ್ಕತ್ತಾಗಿದೆ ದಿನಕರ್ ಸರ್
  ನಿಮ್ಮ ಬರಹ ಓದೋಕೆ ಒಂತರ ಖುಷಿ ಏನೋ ಒಂದು ಸಮಝಾಯಿಸಿ ಇರತ್ತೆ :)
  ಚಂದದ ಸೇಡು (ಕವನ) :) :P
  ಧನ್ಯವಾದಗಳು

  ReplyDelete
 18. ದಿನಕರ್ ;ಎಲ್ಲಿ ಇಟ್ಟಿದ್ದಿರಿ ಇಷ್ಟು ದಿನ ಇಂತಹ ಸೂಪರ್ ಕವನ!ನಿಮ್ಮ ಬತ್ತಳಿಕೆಯಲ್ಲಿ ಇನ್ನೂ ಏನೇನು ಇದೆಯೋ!ತುಂಬಾನೇ ಇಷ್ಟ ಆಯಿತು.

  ReplyDelete
 19. ಅನಂತರಾಮ್ ಸರ್,
  ಪ್ರೀತಿಸಿ ಮರೆತವರ ಮೇಲೆ, ಕೈ ಕೊಟ್ಟವರ ಮೇಲೆ ಈ ರೀತಿಯ ಸೇಡು ಸೂಕ್ತ ಎಂದು ನನ್ನ ಅನಿಸಿಕೆ... ಅದಕ್ಕೆ ಬರೆದೆ ಸರ್... ಧನ್ಯವಾದ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕೆ..

  ReplyDelete
 20. ಪ್ರಕಾಶಣ್ಣ
  ನನ್ನ ಕವನಕ್ಕಿಂತ ನಿಮ್ಮ ಕವನದ ತೂಕವೇ ಹೆಚ್ಚಿದೆ.....ಪ್ರೀತಿಯ ಅನಿಸಿಕೆಗೆ ಧನ್ಯವಾದ..... ನಿಮ್ಮ ಪ್ರೀತಿಗೆ ಧನ್ಯವಾದ....ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....

  ReplyDelete
 21. ಗಿರೀಶ್,
  ನಿಮ್ಮ ಪ್ರೀತಿಯ ಮಾತಿಗೆ ತುಂಬಾ ಧನ್ಯವಾದ.... ಹೀಗೆ ಬರುತ್ತಾ ಇರಿ....

  ReplyDelete
 22. ಗುರುಪ್ರಸಾದ್ ಸರ್,
  ಪ್ರೀತಿಸಿ ಹತ್ತಿರವಿದ್ರು ಮಾತನಾಡದೆ ಇರೋದು ಅತಿ ಹಿಂಸೆ... ಪ್ರೀತಿಸಿ ಕೈ ಕೊಟ್ಟು ಹೋದವರಿಗೆ ಈ ರೀತಿ ಶಿಕ್ಷೆ ಕೊಡಬೇಕು ಅನ್ನೋದು ನನ್ನ ವಾದ....

  ReplyDelete
 23. ಒಳ್ಳೆಯ ಕವನ . ಕೊನೆಯ ಪ್ಯಾರ ತುಂಬ ಇಷ್ಟ ಆಯ್ತು.

  ReplyDelete
 24. ಸು೦ದರ ಕವನ, ಇನ್ನಷ್ಟು ಬರಲಿ ...........

  ReplyDelete
 25. ನಿಜವಾಗಲೂ ಮನ ಕಲಕಿದ ಸೇಡು.
  ಹಳೆಯ ಉಸಿರು ಹೋಗಲಿ,
  ಹೊಸ ಉಸಿರು ಹಸಿರಾಗಲಿ!
  ಪೋನಿಗೆ ಹೊಸ ದನಿ ಸಿಗಲಿ,
  ಮೇಸೆಜ್ ಬಾಕ್ಸ್ ತುಂಬಲಿ!

  ReplyDelete
 26. ಏನಪ್ಪಾ ಇದು ಏನೋ ಮಾಡ್ಬೇಕು ಅಂತಾ ಏನೂ ಮಾಡ್ದೇ ಇರೋ ಮಸಲತ್ತು?? ದನಕರ್ ಮೆಚ್ಚಿಗೆ ಆಯ್ತು...
  ನನಗೆ ಮೊದಲ ಮತ್ತು ಕಡೆಯ ಎರಡೂ ಕವನಗಳು ಇಷ್ಟ ಆದವು..

  ReplyDelete
 27. ಸೇಡು ತೀರಿಸಲು ಒಳ್ಳೆ ಪ್ಲಾನ್ ಹೇಳಿಕೊಟ್ಟಿದ್ದಕ್ಕೆ ಥ್ಯಾಂಕ್ಸ್ ..ಚೆನ್ನಾಗಿದೆ ದಿನಕರ್..
  ನಾನು "ಸೇಡು" ಚೆನ್ನಾಗಿದೆ ಅಂತ ಹೇಳಲು ಮನಸ್ಸಿಲ್ಲ ಅಂತ ಬರೆದು ಸೇಡು ತೀರಿಸಿಕೊಳ್ಳುವ ಅಂತ ಮಾಡಿದೆ.ಮನಸ್ಸಾಗದೆ ಬರೆದೆ ಹ್ಹಾ ಹ್ಹಾ ಹ್ಹಾ

  ReplyDelete
 28. balu sir,
  houdu summa summane pritige suLLU kaaraNa koTTu, kai koduvavara mele ee kavana..

  mecchiddakke, comment haakiddakke dhanyavaada....

  ReplyDelete
 29. venkatesh sir,
  huDugiyarige... huDugarige anta alla.....
  preti nirmalavaagirabeku.... nirishke irada priti irabeku....
  haagiddaaga priti yashasvi aagatte..

  dhanyavaada nimma anisikege....

  ReplyDelete
 30. sitaaraam sir..
  pritige mosa maaDidavarige pritiyindale dveshisuva hosa bage idu.... mecchiddakke dhanyavaada....

  ReplyDelete
 31. ತುಂಬಾ ಚೆನ್ನಾಗಿದೆ... ಆರೋಗ್ಯಕರವಾಗಿ ಸೇಡು ತೀರಿಸುವ ಬಗೆ

  ReplyDelete
 32. ಹೊಸ ರೀತಿಯ ಸೇಡಿನ ಬಾಷ್ಯ !!!, ನಾನು ಕೆಲವೊಮ್ಮ ಕೆಲವರಿಗೆ ಈ ರೀತಿಯ ಸೇಡು ತಿರಿಸಿ ಕೊಂಡಿದ್ದೇನೆ, ಆದ್ರೆ ಬರವಣಿಗೆಯಲ್ಲಿ ವ್ಯಕ್ತ ಪಡಿಸಿಲ್ಲ !!!
  ಮುಂದು ವರೆಸಿ ಆದ್ರೆ ಸೇಡನಲ್ಲ

  ReplyDelete
 33. hmmm...ಈ ತರಹವೂ ಸೇಡು ತೀರಿಸಿಕೊಳ್ಳಬಹುದೆ ? ..ಕವನ ಚೆನ್ನಾಗಿದೆ.

  ReplyDelete
 34. dilip,
  thank you very much chendada pratikriyege.... nimma pratikriye nijakku sooopar

  ReplyDelete
 35. ashok sir,
  nanage saraLa shabda baLake maaDi bareyodu ishta... nimagu ishtavaagi nimma nisike tiLisiddakke dhanyavaada sir....

  ReplyDelete
 36. ಭಟ್ ಸರ್,
  ನಿಮ್ಮ ಮೆಚ್ಚುಗೆಯ ಅನಿಸಿಕೆಗೆ ಧನ್ಯವಾದ ಸರ್.... ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಕವನಕ್ಕೆ ನನ್ನ ನಮನ.... ಹೀಗೆ ಪ್ರೋತ್ಸಾಹ ನೀಡುತ್ತಿರಿ ಸರ್...

  ReplyDelete
 37. ರಂಜಿತ ಮೇಡಂ,
  ನಿಮ್ಮ ಮೆಚ್ಚುಗೆಗೆ ನಾನು ಆಭಾರಿ.... ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..... ನೀವು ಮೆಚ್ಚಿದ ಸಾಲುಗಳು ನನಗು ಇಷ್ಟವಾಗಿತ್ತು.......

  ReplyDelete
 38. ದಿವ್ಯಾ ...
  ನಿಮಗೆ ಇಷ್ಟವಾದದ್ದು ನನಗೆ ಖುಷಿಯಾಯ್ತು...... ಧನ್ಯವಾದ....

  ReplyDelete
 39. ಡಾ. ಸರ್,
  ನಿಮಗೆ ಇಷ್ಟವಾದರೆ ನನಗೆ ಅದೇ ಸಂತೋಷ..... ನೀವು ಇಷ್ಟ ವ್ಯಕ್ತಪಡಿಸಿದ ರೀತಿಯು ಇಷ್ಟವಾಯಿತು....... ಧನ್ಯವಾದ ಸರ್...

  ReplyDelete
 40. ಸುಮಾ ಮೇಡಂ,
  ತುಂಬಾ ಧನ್ಯವಾದ ಇಷ್ಟಪಟ್ಟು ಕಾಮೆಂಟ್ ಹಾಕಿದ್ದಕ್ಕೆ....

  ReplyDelete
 41. tejaswini madam,
  thank you very much....... for your support.....

  ReplyDelete
 42. ಮನಮುಕ್ತ ಮೇಡಂ,
  ನಿಮ್ಮ ಮೆಚ್ಚುಗೆಯ ಮಾತಿಗೆ ಧನ್ಯವಾದ...

  ReplyDelete
 43. ಪರಾಂಜಪೆ ಸರ್,
  ನಿಮ್ಮ ಮೆಚ್ಚುಗೆಯ ಮಾತು ನನ್ನಲ್ಲಿ ಇನ್ನಷ್ಟು ಹೆಚ್ಚು ಬರೆಯಲು ಪ್ರೇರೇಪಣೆ ನೀಡಲಿ ಸರ್..... ನಿಮ್ಮ ಪ್ರೋತ್ಸಾಹ ಹೀಗೆ ಇರಲಿ........

  ReplyDelete
 44. ಗುಬ್ಬಚ್ಚಿ ಸತೀಶ್,
  ನಿಮ್ಮ ಕವನ ಆಶಯವೇ ನನ್ನದು.... ನಿಮ್ಮ ಪ್ರತಿಕ್ರಿಯೆ ತುಂಬಾ ಇಷ್ಟ ಆಯ್ತು....... ಧನ್ಯವಾದ ನಿಮ್ಮ ಅನಿಸಿಕೆಗೆ...

  ReplyDelete
 45. ಆಜಾದ್ ಸರ್,
  ಮಾಡಬೇಕಾದಲ್ಲಿ ಒಮ್ಮೆ ಏನು ಮಾಡದೆ ಇದ್ದರೆ ಕೆಲಸ ಆಗತ್ತೆ ಅಂತಾರೆ.... ಹಾಗಾಗಿ ಈ ಕವನ ಬರೆದೆ..... ನಿಮ್ಮ ಪ್ರೋತ್ಸಾಹಕ್ಕೆ ತುಂಬಾ ತುಂಬಾ ಧನ್ಯವಾದ ಸರ್.......

  ReplyDelete
 46. ಶಶಿ ಮೇಡಂ,
  ಈ ರೀತಿ ಸೇಡು ತೀರಿಸಿಕೊಂಡರೆ ಯಾರಿಗೂ ತೊಂದರೆಯಿಲ್ಲ ಅಲ್ಲವಾ........ಅದಕ್ಕೆ ಇದನ್ನು ಬರೆದೆ.... ನಿಮ್ಮ ಅನಿಸಿಕೆ, ಮೆಚ್ಚುಗೆ ಗೆ ಧನ್ಯವಾದ....

  ReplyDelete
 47. ಭಾಶೆ ಮೇಡಂ,
  ಹೌದಲ್ವಾ... ಆರೋಗ್ಯಕರವಾಗಿ ಸೇಡು ತಿರಿಸಿಕೊಂಡರೆ ಎಲ್ಲರಿಗು ಆಗೋಗ್ಯ..... ಸುಮ್ಮನೆ ತಲೆ ಬಿಸಿ ಮಾಡಿಕೊಂಡು ಕೈ ಹೊತ್ತು ಕುಳಿತು ಕೊಳ್ಳುವುದಕ್ಕಿಂತ ಇದೆ ಒಳ್ಳೆಯದು ಅಂತ ನನ್ನ ಅಭಿಪ್ರಾಯ.....ಧನ್ಯವಾದ ನಿಮ್ಮಅಭಿಪ್ರಾಯಕ್ಕೆ...

  ReplyDelete
 48. ಉಮೇಶ್ ಸರ್,
  ಸ್ವಾಗತ ನನ್ನ ಬ್ಲಾಗ್ ಗೆ.... ಸೇಡು ತೀರಿಸಿಕೊಳ್ಳುವ ಹೊಸ ಬಗೆಯಲ್ಲಿ ಯಾರ ಆರೋಗ್ಯಕ್ಕೂ ಹಾನಿ ಇಲ್ಲ ಆಲ್ವಾ ಸರ್... ಹಾಗಾಗಿ ಇದು ಒಳ್ಳೆಯದು ಅಂತ ಅಭಿಪ್ರಾಯ.... ಧನ್ಯವಾದ ನಿಮ್ಮ ಅನಿಸಿಕೆಗೆ....

  ReplyDelete
 49. ಸುಬ್ರಮಣ್ಯ ಸರ್,
  ಒಳ್ಳೆಯದು ಆಲ್ವಾ... ಯಾರ ದೇಹಕ್ಕೆ ನೋವು ಕೊಡದೆ ಸೇಡು ತಿರಿಸಿಕೊಳ್ಳುವುದು ಒಳ್ಳೆಯದೇ ಆಲ್ವಾ..... ಧನ್ಯವಾದ ಸರ್ ನಿಮ್ಮ ಅನಿಸಿಕೆಗೆ..........

  ReplyDelete
 50. ದಿನಕರ ಸರ್ ..
  ನಿಮ್ಮ ಮನದ ಅವ್ಯಕ್ತ್ ಭಾವನೆಗಳನ್ನು ಹೊರಕಾಹಿದ ಈ ಹೊಸ ಸೇಡಿನ ವಿಧಾನ ಇಷ್ಟವಾಯ್ತು ...

  ReplyDelete
 51. shreedhar sir,
  nimma mecchugeya maatugaLige tumbaa dhanyavaada.... nimma protshaagha heege irali........

  ReplyDelete
 52. Very different poem by its subject!! Very nice..

  ReplyDelete
 53. ದಿನಕರ,
  ಪ್ರೇಮದ ಪರಿಯನ್ನು ವರ್ಣಿಸುವ ಕವನವನ್ನು ಓದಿ ತುಂಬ ಖುಶಿಯಾಯ್ತು.

  ReplyDelete
 54. ಗಿರೀಶ್ ಸರ್,
  ಸ್ವಾಗತ ನನ್ನ ಬ್ಲಾಗ್ ಗೆ.... ಹೀಗೆ ಬರುತ್ತಾ ಇರಿ.... ಸ್ವಲ್ಪ ವಿಭಿನ್ನವಾಗಿ ಯೋಚಿಸಿ ಬರೆದೆ..... ಮೆಚ್ಚಿ ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದ....

  ReplyDelete
 55. ಸುನಾಥ ಸರ್,
  ನಿಮ್ಮನ್ನು ಮಿಸ್ ಮಾಡಿಕೊಂಡೆವು ಆ ದಿನದ ಕಾರ್ಯಕ್ರಮದಲ್ಲಿ..... ನಿಮ್ಮ ಕಾಮೆಂಟ್ ನೋಡಿ ಖುಷಿಯಾಯ್ತು.... ಹೀಗೆ ಬೆನ್ನು ತಟ್ಟುತ್ತಾ ಇರಿ..... ಧನ್ಯವಾದ

  ReplyDelete
 56. ನೀನೇ ಉಸಿರೆಂದು ಗೊತ್ತಿದ್ದರೂ,
  ಉಸಿರು ಹೊರಬಿಡಲೇಬೇಕಿದೆ....
  ಹೊಸ ಉಸಿರಿಗೆ ದಾರಿ ಮಾಡಬೇಕಿದೆ...
  ಮೂಗಿನ ಹೊಳ್ಳೆ ತೆರೆಯಲೇಬೇಕಿದೆ.....

  ಈ ಸಾಲುಗಳು ತುಂಬಾ ಇಷ್ಟವಾದವು.

  ReplyDelete
 57. superb superb superb. ಮಸ್ತ್ ಕವನ ಕಣ್ರಿ. ಸಕತ್ತ್ತ್ತ್ತ್ ಹಿಡಿಸಿತು

  ReplyDelete
 58. wow.. too good sir.. ಕವನದ ಭಾವ ತುಂಬಾ ಇಷ್ಟವಾಯ್ತು...:)

  ReplyDelete
 59. This comment has been removed by the author.

  ReplyDelete
 60. ಸೇಡು ತೀರಿಸಿಕೊಳ್ಳುವ ಹೊಸಬಗೆ..ಓದುತ್ತ...ಹಾಗೆಯೇ, ಅನುಕರಿಸಿ ಖುಶಿಪಡುವಷ್ಟು ಚೆನ್ನಾಗಿದೆ.

  ReplyDelete
 61. ಹೊಸ ರೀತಿಯ ಸೇಡು ತೀರಿಸುವ ಬಗೆ ಇಷ್ಟ ಆಯಿತು..:)

  ReplyDelete
 62. ಹರೀಶ್,
  ಪ್ರಿತಿಸಿದವ ಉಸಿರೆಂದು ತಿಳಿದು ಉಸಿರು ಬಿಡದೆ ಇದ್ದಾರೆ ಬದುಕೋದು ಕಷ್ಟ ಅಲ್ಲವಾ.... ಹೊಸ ಉಸಿರಿಗೆ ಜಾಗ ಬಿಡಲೇ ಬೇಕು.....ಧನ್ಯವಾದ ನಿಮ್ಮ ಮೆಚ್ಚುಗೆಗೆ..... ಧನ್ಯವಾದ...

  ReplyDelete
 63. ಸಾಗರಿ ಮೇಡಂ,
  ಧನ್ಯವಾದ ಮೇಡಂ..... ನಿಮ್ಮ ಪ್ರೋತ್ಸಾಹಕ್ಕೆ ನಾನು ಆಭಾರಿ.... ಹೀಗೆ ಬೆನ್ನು ತಟ್ಟುತ್ತಾ ಇರಿ.....

  ReplyDelete
 64. ಶ್ರವಣ್,
  ನಿಮಗೆಲ್ಲಾ ಇಷ್ಟವಾದುದನ್ನು ಬರೆದು, ನಿಮಗೆಲ್ಲಾ ಇಷ್ಟವಾಗಿ ಕಾಮೆಂಟ್ ಹಾಕಿದ್ದನ್ನು ನೋಡಿದರೆ ಇನ್ನು ಚೆನ್ನಾಗಿ ಬರೆಯುವ ಸ್ಫೂರ್ತಿ ಬರುತ್ತದೆ...... ಧನ್ಯವಾದ...

  ReplyDelete
 65. ನಾರಾಯಣ್ ಭಟ್ ಸರ್,
  ಹ್ಹ ಹ್ಹಾ ಅನುಸರಿಸೋದು ಕಷ್ಟ ಸರ್.... ಬರೆಯೋದು ಸುಲಭ..... ಈ ರೀತಿ ಮಾಡಿದ್ರೆ ಯಾರಿಗೂ ತೊಂದರೆ ಇರಲ್ಲ ಎನ್ನುವುದು ನನ್ನ ಭಾವನೆ ಸರ್.... ಧನ್ಯವಾದ ನಿಮ್ಮ ಅನಿಸಿಕೆ, ಮೆಚ್ಚುಗೆಗೆ

  ReplyDelete
 66. ವನಿತಾ ಮೇಡಂ,
  ಇಷ್ಟಪಟ್ಟು ಓದಿ, ಕಾಮೆಂಟ್ ಹಾಕಿದ್ದನ್ನು ನೋಡಿ ಖುಷಿಯಾಯ್ತು...... ಹೀಗೆ ಬರುತ್ತಾ ಇರಿ...... ಧನ್ಯವಾದ....

  ReplyDelete
 67. Houdu Saar, Naavu Kushiyaagiddu avara mele sEdu teeriskobeku :)

  ReplyDelete
 68. ಈ ಸಾಲುಗಳು ತುಂಬಾ ಚೆನ್ನಾಗಿವೆ..
  "ಮನದ ತುಂಬಾ ನಿನ್ನದೇ ನೆನಪಿದ್ದರೂ,
  ಹೃದಯದ ಹಾದಿ ತಪ್ಪಿಸಬೇಕಿದೆ....
  ನೀ ನಡೆವ ದಾರಿಯಲ್ಲಿ ನಾನೇ ನಿಂತಿದ್ದರೂ,
  ನಿನ್ನ ನೆರಳ ಸೋಕದೆ ನಿಲ್ಲಬೇಕಿದೆ...

  ReplyDelete
 69. ನಿಮ್ಮ ಪ್ರೀತಿಯ ಕವನ ಆದ್ಭುತವಾಗಿದೆ
  ಇಂತಹದ್ದನ್ನು ಓದಲು ನೀಡಿದ ನಿಮಗೆ
  ಧನ್ಯವಾದಗಳನ್ನು ತಿಳಿಸುವ ಸಮಯವಾಗಿದೆ.

  ಸುಂದರ ಕವನ ತುಂಬಾ ಚೆನ್ನಾಗಿದೆ ಧನ್ಯವಾದಗಳು ದಿನಕರ ಮೊಗೇರ ಸರ್.

  ReplyDelete
 70. @ ದಿನಕರ್

  ಇದೇ ಮೊದಲನೇ ಬಾರಿ ನಿಮ್ಮ ಬ್ಲಾಗಿಗೆ ಬಂದಿದೀನಿ ಅನ್ಸುತ್ತೆ. ಬ್ಲಾಗು ಓಪನ್ ಮಾಡಿದ ಕೂಡಲೇ ಈ ಕವನ ಓದಿದೆ. ಸೂಪರ್ರೋ ಸೂಪರ್ರು.. ಸಕತ್ ಇಷ್ಟ ಆಯ್ತು.

  ನಮ್ಮಂಥೋರಿಗೆ ಇಂಥವೇ ಇಷ್ಟವಾಗ್ತವೆ.

  ಇಂತಿ,
  ಯಳವತ್ತಿ

  ReplyDelete
 71. ಶಿ ಪ್ರಾ,
  ನನ್ನ ಅಭಿಪ್ರಾಯವೂ ಅದೆ.... ನಾವು ಖುಶಿಯಿಂದ ಇದ್ದು ಅವರ ಮೇಲೆ ಸೇಡು ತೀರಿಸಿಕೊಳ್ಳಬೇಕು..... ನಮ್ಮ ಪ್ರೀತಿಗೆ ಅವರೇ ತಿರುಗಿ , ಬೇಡಿ ಬರುವ ತಾಕತ್ತು ಇರಬೇಕು.... ಧನ್ಯವಾದ ನಿಮ್ಮ ಅನಿಸಿಕೆಗೆ..

  ReplyDelete
 72. ಕತ್ತಲೆ ಮನೆ..
  ಧನ್ಯವಾದ ನಿಮ್ಮ ಅನಿಸಿಕೆ ಮತ್ತು ಮೆಚ್ಚುಗೆಗೆ...

  ReplyDelete
 73. ವಸಂತ್,
  ನಿಮ್ಮ ಕವನ ಓದಿ ಬಂದೆ..... ನೊವಿನಿಂದ ಕೊರಗುವ ಬದಲು.... ಹೀಗೆ ಸೇಡು ತೀರಿಸಿಕೊಳ್ಳೀ..... ನಿಮ್ಮನ್ನು ಬಿತ್ತು ಹೋದದ್ದಕ್ಕೆ ಪಶ್ಚಾತಾಪ ಪಡುವ ಹಾಗೆ ಬದುಕಿ ತೋರಿಸಿ.... ಧನ್ಯವಾದ ನಿಮ್ಮ ಮೆಚ್ಚುಗೆಗೆ....

  ReplyDelete
 74. ಡಾ. ಗುರು ಸರ್,
  ಹ್ಹ ಹ್ಹಾ... ಧನ್ಯವಾದ ಸರ್.... ನಿಮ್ಮ ಮೆಚ್ಚುಗೆಗೆ..... ಹೀಗೆ ಬರುತ್ತಾ ಇರಿ....

  ReplyDelete
 75. ಶಿವಶಂಕರ್,
  ಸ್ವಾಗತ ನನ್ನ ಬ್ಲೊಗ್ ಗೆ... ಹೌದುರಿ... ಪ್ರಿತಿಯಲ್ಲಿ ಮೊಸ ಹೋಗಿ ಕೊರಗುತ್ತಾ ಕುಳಿತುಕೊಳ್ಳುವುದಕ್ಕಿಂತ ಹೀಗೆ ಸೇಡು ತೀರಿಸಿಕೊಳ್ಳುವುದು ಒಳ್ಳೆಯದು ಅಲ್ಲವೆ.....
  ಧನ್ಯವಾದ ನಿಮ್ಮ ಮೆಚ್ಚುಗೆಗೆ...

  ReplyDelete
 76. yaru ene helali obba premigene artha agodu e nimma a(preethiya)salugala artha, nimgu nan thara ego problemma?

  ReplyDelete
 77. manju sir,
  nanna blog ge swaagata..... ellaru priti maaDe irtaare.... nanage ego ide antha nimage yaake doubt bantu..?

  ReplyDelete
 78. ಹುಂ........ಏನೆಂದು ಬರೆಯಲಿ ಕವಿತೆ, ನಿನಾಗಾಗಿ ನಾ ಪಟ್ಟ ವ್ಯಥೆಯ ಕಥೆ.......!!!!!!!!!!!!!!!!

  ಬಿಟ್ಟು ಹೋದವರ ನೆನಪಿನ ಕಿಚ್ಚಿನಲ್ಲಿ ಮೂಡಿದ ಪ್ರೇಮದ ಹನಿಗಳು...!!
  ಅನುಭವಕ್ಕೆ ಸಿಕ್ಕ ಅಪರೂಪದ ಸಾಲುಗಳು...!!!

  ಶುಭ ವಾಗಲಿ.

  ಲಿಂಗೆಶ್ ಹುಣಸೂರು,
  ಬಿಂದುವಿನಿಂದ ಅನಂತದೆಡೆಗೆ....

  ReplyDelete
 79. ದಿನಕರ ಅವರೇ,

  ತುಂಬಾ ಸೊಗಸಾಗಿ ಮೂಡಿಬರುತಿದೆ ನಿಮ್ಮ ಬ್ಲಾಗ್
  ಇಷ್ಟವಾಯ್ತು ನಿಮ್ಮ ಕವನ

  ReplyDelete
 80. ಲಿಂಗೇಶ್ ಸರ್,
  ತುಂಬಾ ಧನ್ಯವಾದ ನಿಮ್ಮ ಪ್ರೊತ್ಸಾಹದ ಮಾತುಗಳಿಗೆ., ಹೀಗೆ ಬರುತ್ತಾ ಇರಿ......

  ReplyDelete
 81. ಬಹುಷಃ ಎಲ್ಲ ಪ್ರೇಮಿಗಳ ಮನದ ಮಾತಿದು. ತುಂಬಾ ಚೆನ್ನಾಗಿದೆ ಮೊಗೇರರೇ ನಿಮ್ಮ ಕವನ :)

  ReplyDelete
 82. ದಿನಕರ್ ಸರ್, ಅವತ್ತು ರಾತ್ರಿ ಮಾತಾಡಿದಿನಿ,
  ಮತ್ತೆ ಏನ್ ಹೇಳ್ಬೇಕು ಗೊತ್ತಿಲ್ಲಾ..
  ಅದ್ಭುತವಾದ ಸೇಡು ತಿರಿಸಿಕೊಳ್ಳುವ ಬಗೆ....
  ಹೊಸ ಉಸಿರಿಗೆ ದಾರಿ ಮಾಡಲೇಬೇಕು..!!

  ReplyDelete
 83. nimage ego illa, but naimma preethiya padagalalli ego ide, nimma preethiyalli ego ide, nimma preehiya sedina hosa bage salugalalli swalpa ego anthu idde ide, alwa?

  ReplyDelete
 84. veNu sir,
  houdu nimma maatu nija..... dhanyavaada nimma mechugege...

  ReplyDelete
 85. A-NIL,
  houdu heege seDu tirisikoLLabeku munde baaLabekendare...... dhanyavaada anil matte bandiddakke...

  ReplyDelete
 86. manju saagara avare,
  nimagellinda nanna kavanadalli ego kaaNisto gottaagtilla.....
  nanna manassallantu illa.....

  nimage hege kaaNisitu svalpa vivaristiraa...

  ReplyDelete
 87. ಈ ನಿಮ್ಮ ಕವನ ನನ್ನಿಂದ ಮತ್ತೆ ಮತ್ತೆ ಯಾಕೆ ಓದಿಸಿಕೊಳ್ಳುತ್ತೆ ಅನ್ನೋದಕ್ಕೆ ನಿಮ್ಮಲ್ಲೇನಾದ್ರೂ ಉತ್ತರ ಇದೆಯಾ?

  -ಯಳವತ್ತಿ

  ReplyDelete
 88. ಈ ಶೈಲಿಯ ಎರವಲು ನನಗೂ ಕೊಡಿ ದೇವರೆ. ಅಮೋಘ ಭಾವ ತೀವ್ರ ಶೈಲಿ.

  ಮೆಟ್ಟಿ ನಿಲ್ಲುವ ಗೆದ್ದು ತೋರುವ ಈ ರೀತಿಯ ಸೇಡು ತೀರಿಸಿಕೊಳ್ಳುವ ಪರಿ ಅನನ್ಯ.

  ReplyDelete