Jul 5, 2010

' ಪೀಕಲಾಟವಯ್ಯಾ.........'

'' ಸರ್, ಒಳಗೆ ಬರಲಾ'' ಎಂದೆ..... ಒಳಗಡೆ ಒಬ್ಬರು 55  - 60 ವರ್ಷದ ಮನುಷ್ಯ ಕುಳಿತಿದ್ದರು...... ನಾನು  ಇತ್ತೀಚಿಗಷ್ಟೇ ಹೊಸ ಕೆಲಸಕ್ಕೆ  ಸೇರಿದ್ದೇನೆ.... ನಮ್ಮದು ಕುಂದಾಪುರದಿಂದ ಕೇರಳ ತನಕ ಇರುವ ಎರಡು ಪಥದ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ಮಾಡುವ ಕೆಲಸ...... ಹೀಗಾಗಿ ಕೆಲಸದ ಆರಂಭಕ್ಕೂ ಮೊದಲು, ಇರುವ ಮರಗಳ ಕಡಿದು ಹೊಸ ಮರ ನೆಡುವ ಕೆಲಸ, ಈಗಿರುವ ವಿದ್ಯುತ್ ಕಂಬಗಳ ಕಿತ್ತು ರಸ್ತೆಗಳ ದೂರಕ್ಕೆ ಹಾಕುವ ಕೆಲಸವನ್ನ  ಮಾಡಬೇಕಿತ್ತು...... ಆ ದಿನ ನಾನು ಅರಣ್ಯ ಇಲಾಖೆಗೆ ಹೋಗಿದ್ದೆ, ಎಲ್ಲಿಯದು, ಯಾರು ಎನ್ನುವದನ್ನು ಬರೆಯಲ್ಲ....ಅದು ಬೇಡದ ವಿಷಯ..... '' ಬನ್ನಿ, ಬನ್ನಿ '' ಎಂದರು ಆ ವ್ಯಕ್ತಿ.... ನಾನು ಕುಳಿತುಕೊಂಡೆ, ಏನೂ ಕೆಲಸವಿರದಿದ್ದರೂ ಕೆಲಸ ಮಾಡುತ್ತಿರುವ ಹಾಗೆ ನಟಿಸಿದರು..... ನಾನು ಸುಮ್ಮನಿದ್ದೆ....... '' ಹೇಳಿ ಏನು ವಿಷಯ '' ಎಂದರು ತಲೆ ಎತ್ತದೆ...... '' ಸರ್, ನಾನು ಕುಂದಾಪುರದಿಂದ ತಲಪಾಡಿ ತನಕ  four laning ಮಾಡುವ ಕಂಪನಿಯಿಂದ ಬಂದಿದ್ದೇನೆ.... ನಮಗೆ ರಸ್ತೆ ಬದಿ ಇರುವ ಮರಗಳ ಕಡಿಯಲು ಅನುಮತಿ ಪಡೆಯುವ ಬಗ್ಗೆ ಮಾತನಾಡಲು ಬಂದಿದ್ದೇನೆ '' ಎಂದೆ....... ವ್ಯಕ್ತಿ, ನನ್ನನ್ನೊಮ್ಮೆ ನೋಡಿ ಮತ್ತೆ ಕೆಲಸ ಮಾಡುವ ನಾಟಕ ಮುಂದುವರಿಸಿತು....... '' ಮರಗಳನ್ನು ಕಡಿಯದೇ, ರಸ್ತೆ ಮಾಡಲು ನಿಮಗೆ ಬರುವುದಿಲ್ಲವಾ, ಪಾಪದ ಮರಗಳನ್ನು ಕಡಿದು ಏನು ಮಹಾ  ಸಾಧಿಸುತ್ತೀರಿ ? .... ದಿನಾ ದಿನಾ ಮರ ಕಡಿದು ಭೂಮಿ ಬರಿದು ಮಾಡುತ್ತೀರಿ  '' ಎಂದರು..... ''ಸರ್, ಈಗ ಇರುವ ಮರಗಳು, ರಾಷ್ಟೀಯ ಹೆದ್ದಾರಿ ಜಾಗದಲ್ಲಿವೆ......ರಸ್ತೆ ಅಗಲ ಮಾಡುವ ಸಮಯಲ್ಲಿ ಈ ಮರಗಳನ್ನು ಕಡಿಯುವ ಶರತ್ತಿನ ಮೇಲೆಯೇ ನಿಮಗೆ ಅಲ್ಲಿ ಮರ ನೆಡುವ ಅನುಮತಿ ನೀಡಲಾಗಿತ್ತು ಅಲ್ಲವೇ'' ಎಂದೆ..... ''ಅದು ಸರಿ, ಆದರೆ ಈಗ ಮರ ಕಡಿದರೆ ಪರಿಸರದ ಮೇಲೆ ಅಡ್ಡ ಪರಿಣಾಮ ಬೀರುತ್ತದಲ್ಲ ?'' ಎಂದರು... ನಾನು ಬಿಡಬೇಕಲ್ಲಾ, '' ಒಂದು ಮರ ಕಡಿದರೆ, ಎರಡು ಗಿಡ ಬೆಳೆಸುವ ಹಣ ನಿಮಗೆ ಸಂದಾಯ ಮಾಡುತ್ತೇವೆ, ಅದರ ಉಸ್ತುವಾರಿಯೂ ಸಹ ರಾಷ್ಟೀಯ ಹೆದ್ದಾರಿ ತೆಗೆದುಕೊಳ್ಳುತ್ತಿದೆ...... ಈಗ ಕಡಿಯುವ ಮರದ ಸಂಪೂರ್ಣ ವೆಚ್ಚ ಮತ್ತು ಅದರ ಹಣವನ್ನೂ ಈಗಾಗಲೇ ರಾಷ್ಟೀಯ ಹೆದ್ದಾರಿ ಭರಿಸಿದೆ.... ಅದರ ಹಣ ಒಂದು ತಿಂಗಳ ಮೊದಲೇ ಅರಣ್ಯ ಇಲಾಖೆಗೆ ಜಮಾ ಮಾಡಿದೆ '' ಎಂದೆ.......

  ''ಸರಿ, ನೀವು ರಾಷ್ಟೀಯ ಹೆದ್ದಾರಿ  ಕಡೆಯಿಂದ ಬಂದಿದ್ದೀರೋ ಅಥವಾ ಕಂಪನಿ ಕಡೆಯಿಂದ ಬಂದಿದ್ದೀರೋ'' ಎಂದರು..... ನಾನು'' ಕಂಪನಿ ಕಡೆಯಿಂದ'' ಎಂದೆ..... '' ಸರಿ, ನಮ್ಮ ಆಫೀಸಿನಲ್ಲಿ, ತಿಂಗಳ ಖರ್ಚು ಅಂತ ಇರತ್ತೆ, ಅದರ ಖರ್ಚಿಗೆಲ್ಲಾ ಸರಕಾರ ಹಣ ಮಂಜೂರು ಮಾಡಲ್ಲ.... ನಿಮ್ಮ ಕಂಪನಿಯಿಂದ ಹತ್ತು ಸಾವಿರ ರುಪಾಯಿ ಕೊಡಿ, ನಾನು ಇವತ್ತೇ order issue ಮಾಡ್ತೇನೆ''  ಎಂದರು.... ನನಗೆ ಉರಿದು ಹೋಯಿತು....... ಇಷ್ಟು ಹೊತ್ತು ಪರಿಸರ, ಅರಣ್ಯ ನಾಶ ಅಂತ ಮಾತಾಡಿದ ವ್ಯಕ್ತಿ ಇವರೇನಾ ಅಂತ ಅನುಮಾನ ಬಂತು...... '' ಸರ್, ಇದೂ ಸಹ ಸರಕಾರೀ ಕೆಲಸವೇ, ನಾವು ಮಾಡೋದು ನಮ್ಮ ಮನೆ ರಸ್ತೆಯಲ್ಲ.... ರಾಷ್ಟೀಯ ಹೆದ್ದಾರಿ...... ಅದಕ್ಕೆ ಸರಕಾರವೇ ಹಣ ಕೊಡುತ್ತಿದೆ..... ನಿಮ್ಮ ಇಲಾಖೆಗೆ ಸೇರಬೇಕಾದ ಹಣ ಈಗಾಗಲೇ ನಿಮ್ಮ ಇಲಾಖೆಗೆ ಜಮಾ ಆಗಿದೆ, ಈಗ ನೀವು ಹಣ ಯಾಕಾಗಿ ಕೇಳ್ತಾ ಇದೀರಾ ಅಂತ ಅರ್ಥ ಆಗ್ಲಿಲ್ಲ ಸರ್'' ಎಂದೆ ಸಾವದಾನವಾಗಿ...... '' ಸರಿ ಹಾಗಾದರೆ, ನೀವು ಒಂದು ವಾರ ಬಿಟ್ಟು  ಬನ್ನಿ..... ನಾನು ಎಲ್ಲ ರೆಕಾರ್ಡ್ ಪರಿಶೀಲಿಸಿ ನಿಮಗೆ ಪತ್ರ  ಬರೆಯುತ್ತೇನೆ'' ಎಂದರು.......   ತುಂಬಾ ಸಿಟ್ಟು ಬಂತು.... ಏನೂ ಮಾಡುವ ಹಾಗಿರಲಿಲ್ಲ..... ನನ್ನ  ಸ್ವಂತ ಕೆಲಸವಾಗಿದ್ದರೆ, ನನ್ನ ಮೂಗಿನ ನೇರಕ್ಕೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬಹುದಿತ್ತು..... ಆದರೆ, ನಾನು ಒಂದು ಕಂಪನಿಯಲ್ಲಿ ದುಡಿಯುತ್ತಿರುವ  ಒಬ್ಬ ನೌಕರ.... ಹಾಗಾಗಿ ದುಡುಕದೆ ಸುಮ್ಮನೆ ಕುಳಿತೆ, '' ಸರ್, ನಮ್ಮ ಬಾಸ್ ಗೆ ಫೋನ್ ಮಾಡಿ ಬರುತ್ತೇನೆ '' ಎಂದು ಹೊರಗಡೆ ಬಂದೆ.....

   ಬಾಸ್ ಗೆ ಫೋನ್ ಮಾಡಿ ವಿಷಯ ತಿಳಿಸಿದೆ.......'' ಅಷ್ಟೆಲ್ಲ ಹಣ ಕೊಡಬೇಡ..... ನಮಗೂ ಕೆಲಸ ಮುಖ್ಯ , ಈ ಕೆಲಸ ತಡವಾದರೆ ನಮ್ಮ ಉಳಿದ ಕೆಲಸದ ಮೇಲೆ ಪರಿಣಾಮ ಬೀರುತ್ತದೆ..... ಎಷ್ಟು ಕಡಿಮೆಯಲ್ಲಿ ಆಗುತ್ತದೋ, ಅಷ್ಟರಲ್ಲಿ ಮುಗಿಸಿ ಬಾ'' ಎಂದರು...... ನನ್ನಲ್ಲಿ ಹಣ ಇತ್ತು..... ಆದರೆ ಸ್ವಲ್ಪ ಸತಾಯಿಸೋಣ ಎನಿಸಿದೆ...... ಒಳಗೆ ಹೋದೆ...... '' ಸರ್, ನಮ್ಮ ಬಾಸ್ ಹತ್ತಿರ ಮಾತನಾಡಲು ಆಗಲಿಲ್ಲ.... ಅವರು ಈಗ ಇಲ್ಲಿಲ್ಲ'' ಅಂದೆ...... '' ಸರಿ, ಏನು ಮಾಡ್ತೀಯಾ ಈಗ '' ಎಂದರು....... '' ನನ್ನ ಹತ್ತಿರ ಈಗ ಎರಡು ಸಾವಿರ ಇದೆ, ನಿಮ್ಮ ಆಫೀಸಿನ ಖರ್ಚಿಗೆ ಇದನ್ನು ಕೊಡುತ್ತೇನೆ.... ನನ್ನ ಬಾಸ್ ಹತ್ತಿರ ಮಾತನಾಡಿ ಮತ್ತೆ ಹಣ ಕೊಡುತ್ತೇನೆ '' ಎಂದೆ..... '' ಏನ್ರಿ, ಇಷ್ಟು ದೊಡ್ಡ ಆಫೀಸಿಗೆ ಬಂದು ಎರಡು ಸಾವಿರದ ಮಾತಾಡ್ತೀರಾ'' ಎಂದರು ದೊಡ್ಡ ಕಣ್ಣು ಮಾಡಿ..... '' ಸರ್, ನನ್ನ ಹತ್ತಿರ ಇರುವುದು ಇಷ್ಟೇ  ಹಣ '' ಎಂದೆ ಮುಖ ಸಣ್ಣ ಮಾಡಿಕೊಂಡು......  '' ಛೆ ಛೆ, ಯಾಕಾದ್ರೂ ಬರ್ತೀರೋ ಇಂಥ ಆಫೀಸಿಗೆ ಹಣ ಇಲ್ಲದೆ, ಆಯ್ತು ಈಗ ಕೊಡಿ ಅದನ್ನ .... ನಂತರ  ಉಳಿದ ಹಣ ತೆಗೆದುಕೊಂಡು ಬನ್ನಿ '' ಎಂದರು..... '' ಎಲ್ಲಿ ಸರ್, ನಿಮ್ಮ ಆಫೀಸಿನ ಖರ್ಚಿಗೆ ಅಂತ ಇಟ್ಟ ಡಬ್ಬಿ..... ಅದರಲ್ಲೇ ಹಾಕುತ್ತೇನೆ ಹಣ  '' ಎಂದೆ....... ಅವರು ನನ್ನ ಮುಖ ನೋಡಿದ ರೀತಿ ನೋಡಬೇಕಿತ್ತು...... '' ಕೇಳಿ ಸರ್, ನಮ್ಮ ಇಲಾಖೆಯಿಂದ ನಡೆಯುವ ಸಭೆ, ಇಲಾಖೆಯ ಮಂತ್ರಿ, ಅವರ ಮಗ, ಹೆಂಡತಿ ಯಾರೇ ಬಂದರೂ ಅವರ ಖರ್ಚು ನಾನೇ ನೋಡಿಕೊಳ್ಳಬೇಕು..... ಅವರಿಗೆ ದೇವಸ್ತಾನಕ್ಕೆ ಕರೆದುಕೊಂಡು ಹೋಗಲು ಗಾಡಿ, ಅವರ ಇತರೆ ಖರ್ಚನ್ನೂ ನಾನೇ ನೋಡಿಕೊಳ್ಳಬೇಕು.... ಇದಕ್ಕೆ ಸರಕಾರ ಹಣ ಕೊಡಲ್ಲ...... ನಾನು ಇದನ್ನೆಲ್ಲಾ ಮಾಡದೆ ಇದ್ದರೆ, ನನ್ನ ವರ್ಗಾವಣೆ ಆಗತ್ತೆ.....
ಮಕ್ಕಳನ್ನು ಇಲ್ಲೇ ಶಾಲೆಗೇ ಹಾಕಿದ್ದೇನೆ.... ಎಲ್ಲಾ ಬಿಟ್ಟು ಹೋಗಲು ಆಗತ್ತಾ....... ಹಾಗಾಗಿ, ನಿಮ್ಮಿಂದ ಇದನ್ನೆಲ್ಲಾ ನಿರೀಕ್ಷೆ  ಮಾಡುತ್ತೇವೆ'' ಎಂದರು ಅಸಹಾಯಕರಾಗಿ.....

ನಾನು ಏನೂ ಮಾತಾಡಲಿಲ್ಲ..... ಇದಕ್ಕೆ, ಲಂಚ ಎನ್ನಲೋ... ಸಹಾಯ ಎನ್ನಲೋ ತಿಳಿಯಲಿಲ್ಲ..... ಏನನ್ನಾದರೂ ಕೊಟ್ಟು ನನ್ನ ಕೆಲಸ ಮುಗಿಸಿ ಹೊರಡಬೇಕಿತ್ತು.... ಕಿಸೆಯಲ್ಲಿದ್ದ ಕವರನ್ನು ತೆಗೆದು ಕೊಟ್ಟೆ..... ಸಾಹೇಬರು ಅದನ್ನ ಎಣಿಸಿ ಅವರ ಕಿಸೆಗೆ ಹಾಕಿಕೊಂಡರು...... ''ಸರಿ, ನಾಳೆ ಬಂದು ನಿಮ್ಮ ಲೆಟರ್ ತೆಗೆದುಕೊಂಡಿ ಹೋಗಿ.... '' ಎಂದರು..... ನಾನು ಹೊರಡಲು ಎದ್ದು ನಿಂತೇ......'' ಹೆಲೋ, ಎಲ್ಲಿ ಹೊರಟಿರಿ, ನಾಳೆ ನೀವು ಬರದೆ ಇದ್ದರೆ.... ನಾನು ನಿಮ್ಮನ್ನು ಹುಡುಕಿಕೊಂಡು ಬರಲಾ, ನಿಮ್ಮ ಬಾಸ್ ನಂಬರ್  ಕೊಡಿ , ನೀವು ಬರದೆ ಇದ್ದರೂ ಅವರಿಂದ ಪಡೆಯುತ್ತೇನೆ  '' ಎಂದರು.......   ನನಗೆ ಏನು ಮಾಡೋದು ಅಂತ ತಿಳಿಯಲಿಲ್ಲ..... ಬಾಸ್ ನಂಬರ್ ಕೊಟ್ಟರೆ ಸರಿ ಆಗಲ್ಲ... ಕೊಡದೆ ಇದ್ದರೆ ಈತ ಬಿಡಲ್ಲ.....  '' ಓಹೋ ಅದಕ್ಕೇನಂತೆ ಸರ್, ಬರೆದುಕೊಳ್ಳಿ..... 99614 .......... ''ಎಂದು ನಮ್ಮ ಬಾಸ್ ರ ನಿಜವಾದ ನಂಬರಿನ ಎರಡು ಅಂಕೆಗಳನ್ನು ಆಚಿಚೆ ಮಾಡಿ ಹೇಳಿದೆ ..... '' ಇರಿ  ಒಂದ್ನಿಮಿಷ, ನಿಮ್ಮೆದುರೆ ಮಾತನಾಡಿಸುತ್ತೇನೆ'' ಎಂದರು..... ಇದನ್ನು ನಾನು expect ಮಾಡಿರಲಿಲ್ಲ..... 'ಸುಮ್ಮನೆ ಒಂದು ನಂಬರ್ ಕೊಟ್ಟು ಬಂದರೆ ಆಯ್ತು.....  ಹಣ ಕೇಳಲು ಯಾರೂ ಆಫೀಸಿನಿಂದ ಫೋನ್ ಮಾಡಲ್ಲ..... ಸಂಜೆಯೊಳಗೆ ನನಗೆ ಬೇಕಾದ ಲೆಟರ್ ಟೈಪ್ ಆಗಿರತ್ತೆ.... ಇವರು  ಸಂಜೆ ಮನೆಗೆ ಹೋಗಿ ತಪ್ಪಾಗಿ ಕೊಟ್ಟ  ಬಾಸ್ ನಂಬರಿಗೆ  ಟ್ರೈ ಮಾಡ್ತಾ ಇರಲಿ' ಎಣಿಸಿ ತಪ್ಪು  ನಂಬರ್ ಕೊಟ್ಟಿದ್ದೆ.... ಪುಣ್ಯಾತ್ಮ, ಫೋನ್ ಮಾಡೇ ಬಿಡೋದಾ......

'' ಹೆಲೋ, ಇದು four laning ಮಾಡೋ ಕಂಪನಿಯ ಬಾಸಾ ? '' ನನಗೆ ನಗು ಬರುತ್ತಾ ಇತ್ತು...... ನಕ್ಕರೆ..... ನನ್ನ ಬಂದ ಕೆಲಸ ಕೆಡುತ್ತಿತ್ತು....ಸುಮ್ಮನಿದ್ದೆ..... ಆ ಕಡೆಯಿಂದ ಮಾತನಾಡಿದ ವ್ಯಕ್ತಿ ತಮಗೆ ಬೇಕಾದವನಲ್ಲ ಎಂದು ಗೊತ್ತಾಗಿತ್ತು ಇವರಿಗೆ.... '' ಏನ್ರೀ, ತಪ್ಪು ನಂಬರ್ ಕೊಡ್ತೀರಾ....? ಹಣ ಕೊಡಲು ಆಗದೆ  ಇದ್ದರೆ ಹೇಳಬೇಕು... ಅದನ್ನ ಬಿಟ್ಟು ಹೀಗೆ  ಮಾಡ್ತೀರಾ .....ನಿಮ್ಮ ಆರ್ಡರ್ ಕೊಡಲ್ಲ ಹೋಗ್ರೀ'' ಎಂದರು ಸಿಟ್ಟಿನಿಂದ.....ನನಗೆ ನಡುಕ ಶುರು ಆಯ್ತು...... ಆದರೂ ಪಾರಾಗಬೇಕಲ್ಲ......'' ಸರ್, ನೀವು ಯಾವ ನಂಬರಿಗೆ ಮಾಡಿದ್ರೀ, ಅವರು ಈಗ ಇಲ್ಲಿಲ್ಲ..... ದೆಹಲಿಯಲ್ಲಿದ್ದಾರೆ....... ಇಲ್ಲಿಯ ನಂಬರ್ ಇಲ್ಲ ಅವರ ಹತ್ತಿರ..... ಅವರ ನಂಬರ್ ಮೊದಲಿಗೆ  ಸೊನ್ನೆ ಸೇರಿಸಿ ಮಾಡಿ ಸರ್... ನಾನು ಫೋನ್ ಮಾಡಿದಾಗ ಅವರ ಫೋನ್ not reachable  ಅಂತ ಬರ್ತಾ ಇತ್ತು  '' ಎಂದೆ..... ಸಮಯಕ್ಕೆ ಸರಿಯಾದ ಸುಳ್ಳನ್ನೇ ಹೇಳಿದ್ದೆ..... ವ್ಯಕ್ತಿ convince ಆದ ಹಾಗೆ ಕಂಡರು  ...... ಅಂತೂ ಬದುಕಿದೆ ಎನಿಸಿತು....... ' ಸರಿ ಸರ್, ನಾನು ಹೊರಡುತ್ತೇನೆ.... ನಾಳೆ ಆರ್ಡರ್ ಅನ್ನು ಕಳಿಸಿಕೊಡಿ... '' ಎಂದು ಹೊರಟೆ.....

ಬಾಗಿಲ ತನಕ ಹೋಗಿದ್ದೆ......  '' ರೀ ನಿಮ್ಮ ನಂಬರೂ ಕೊಡಿ..... ಯಾವುದಕ್ಕೂ ಇರಲಿ'' ಎಂದರು ಬೆನ್ನು ಬಿಡದ ಬೇತಾಳದಂತೆ.... ಅಷ್ಟರಲ್ಲಿ ಇನ್ನೊಬ್ಬ ವ್ಯಕ್ತಿ  ಒಳಕ್ಕೆ ಬಂದ.... 'ಅಯ್ಯೋ... ಹೇಗಾದರೂ ಮಾಡಿ ತಪ್ಪಿಸಿಕೊಳ್ಳೋಣ ಎಂದುಕೊಂಡರೆ ಈತ ನನ್ನ ನಂಬರ್  ಕೇಳ್ತಾ ಇದ್ದಾನಲ್ಲ   ' ಎಂದುಕೊಂಡು....... ನನ್ನ ನಂಬರ್ ಹೇಳಿದೆ.... ಆಗಿನ ಹಾಗೆ ಒಂದು ನಂಬರ್ ಆಚಿಚೆ ಮಾಡಿ..... ಅಲ್ಲಿಗೆ ಬಂದ ವ್ಯಕ್ತಿ ಎದುರಿನ ಕುರ್ಚಿ ಮೇಲೆ ಕುಳಿತ...... ನಾನು ಸಹ ಅವನ ಪಕ್ಕದಲ್ಲೇ ನಿಂತಿದ್ದೆ...... ನನ್ನ ನಂಬರ್    ಅವರ ಮೊಬೈಲ್ ನಲ್ಲಿ ಸೇವ್ ಮಾಡಿಕೊಂಡರು  .... '' ರಿಂಗ್ ಕೊಡ್ತಾ ಇದ್ದೀನಿ ನೋಡಿ, ಇದು ನನ್ನ ನಂಬರ್... ಸೇವ್ ಮಾಡಿಕೊಳ್ಳಿ '' ಎಂದರು....... ' ಅಯ್ಯೋ ಸತ್ತೆ, ಮತ್ತೆ ಸಿಕ್ಕಿ ಹಾಕಿಕೊಂಡೆ' ಎನಿಸಿದೆ...... ಮೊಬೈಲ್ ರಿಂಗ್ ಕೇಳಿಸುತ್ತಾ  ಇತ್ತು... ........ ನನಗೋ ಆಶ್ಚರ್ಯ...... 'ನಂಬರ್ ತಪ್ಪಾಗಿ ಕೊಟ್ಟರೂ ರಿಂಗ್ ಹೇಗೆ ಬಂತು ' ಅಂತ....  '' ಸರಿ, ನೀವು ಹೊರಡಿ '' ಎಂದರು ಅವರು ..... ನಾನು ನನ್ನ ಮೊಬೈಲ್ ಹೊರ ತೆಗೆದೆ .... ನನ್ನ ಮೊಬೈಲ್ ನಲ್ಲಿ ಯಾವುದೇ ಮಿಸ್ ಕಾಲ್ ಬಂದಿರಲಿಲ್ಲ.... ಅದೇ ಸಮಯಕ್ಕೆ ಒಳಗೆ ಬಂದ ವ್ಯಕ್ತಿಯೂ ಸಹ ಅವನ ಕಿಸೆಯಿಂದ ಮೊಬೈಲ್ ಹೊರ ತೆಗೆಯುತ್ತಿದ್ದ....... ಆಗಲೇಗೊತ್ತಾಗಿದ್ದು  ನನಗೆ, ರಿಂಗ್ ಆದ ಮೊಬೈಲ್ ನನ್ನದಲ್ಲ ಎಂದು.... 

57 comments:

 1. ಹಣ ಪೀಕುವ ಆಟ =ಪೀಕಲಾಟ!ಸೂಪರ್ ಲೇಖನ.ಚೆನ್ನಾಗಿಯೇ ಸತಾಯಿಸಿದ್ದೀರಿ.ಧನ್ಯವಾದಗಳು.

  ReplyDelete
 2. ಏನ್ಸಾರ್,
  ನಿಮಗೆ ಪೀಕಲಾಟ........
  ಆತನಿಗೆ ಯಾವ ಆಟ?
  ಅಂತೂ ಲಂಚ ಕೊಟ್ಟೆ ಬಿಟ್ರ?
  ಚೆನ್ನಾಗೆ ಸ್ತಾಯಿಸಿದಿರಿ........................

  ReplyDelete
 3. ಸರ್ ,
  ಲಂಚವೋ, ಸಹಾಯವೋ ಗೊತ್ತಿಲ್ಲ............... ಅಂತೂ ಹಣ ಕೊಟ್ಟೆ..... ಸರಕಾರೀ ಆಫೀಸಿನ ನಿಜವಾದ ಕಷ್ಟ ನನಗೆ ಈಗೀಗ ಅರ್ಥ ಆಗ್ತಾ ಇದೆ............

  ReplyDelete
 4. ಅನುಮತಿ ಪತ್ರ ಸಿಕ್ಕಿತಾ?
  ಇಲ್ಲಾ ಕೊಟ್ಟ ಹಣವೂ ಚೌರವಾಗಿ ಮತ್ತೆ ಅಲೆಯುತ್ತಿದ್ದೀರಾ? ಸುಳ್ಳು ನಂಬರ್ ಕೊಡುವುದು ಕಷ್ಟ! ಹೇಗೆ ಮ್ಯಾನೇಜ್ ಮಾಡಿದಿರೋ?

  ReplyDelete
 5. ದಿನಕರ್ ಸರ್,
  ತುಂಬಾ ಚೆನ್ನಾಗಿದೆ ನಿಮ್ಮ ಅನುಭವ, ಕೊನೆಗೆ ನಿಮಗೆ ಬರೆಬೇಕಾದ ಲೆಟರ್ ದೊರಕಿತೋ ಇಲ್ಲವೋ..........

  ReplyDelete
 6. ಚೆನ್ನಾಗಿಯೇ ಸತಾಯಿಸಿದ್ದೀರಿ.
  ಸೂಪರ್ ಲೇಖನ.
  ಧನ್ಯವಾದಗಳು.

  ReplyDelete
 7. ಭಾರತಕ್ಕೆ ಬಡಿದಿರುವ ‘ಲಂಚರೋಗ’ವಿದು. ಸಾರ್ವಜನಿಕರ ಎದುರಿಗೆ ಇಟ್ಟು ಒಳ್ಳೆಯ
  ಕೆಲಸ ಮಾಡಿದಿರಿ.

  ReplyDelete
 8. ಈ ರೀತಿ ಚಂದಾ ಎತ್ತುವದು ಕೆಲವು ಸರಕಾರೀ ಕಚೇರಿಗಳ ಕೆಲಸ!
  ಆದರೂ ಅದನ್ನು ರಸವತ್ತಾಗಿ ನಗೆಲೆಖನದಲ್ಲಿ ಹೇಳಿದ್ದಿರಾ...

  ReplyDelete
 9. ಸರ್ ಏನ್ ಸ್ಟೋರಿ..
  ಸಕತ್ ಮಜಾ ಸಿಕ್ತು..
  ಲಾಸ್ಟ್ ಗೆ ಮೊಬೈಲ್ ರಿಂಗ್ ಸೂಪರ್..!
  ಕುಂದಾಪುರ ಹೇಗಿದೆ ಸರ್..
  ಕುಂದಾಪ್ರ ಕನ್ನಡ ಬತ್ತಾ ಈಗ..:)
  ನಿಮ್ಮವ,
  ರಾಘು.

  ReplyDelete
 10. ಒಳ್ಳೆ ಪೀಕಲಾಟ ... ಚೆನ್ನಾಗಿ ವಿವರಿಸಿದ್ದೀರಿ ,,,


  ನನ್ನ ಬ್ಲೊಗ್ ಗೂ ಒಮ್ಮೆ ಭೇಟಿ ಕೊಡಿ ...

  shridhar ..

  ReplyDelete
 11. ದಿನಕರ್.
  ಪೀಕಲಾಟ ಚೆನ್ನಾಗಿದೆ...
  ಚೆಂದದ ಬರಹ....

  ReplyDelete
 12. Hahaha... ondu kade lanchavatara innondu kade mibile pechaata... konegu avaru nimmanna nambidra???? :) lekahana chenaagi moodibandide....:)

  ReplyDelete
 13. ಡಾ. ಸರ್.
  ಹೌದು ಅವರಿಗೆ ಹಣ ಪೀಕುವ ಆಟ.... ನನಗೆ ತಪ್ಪಿಸಿಕೊಳ್ಳುವ ಪೀಕಲಾಟ..... ಧನ್ಯವಾದ ನಿಮ್ಮ ಅನಿಸಿಕೆಗೆ ಸರ್....

  ReplyDelete
 14. ಭಾಶೆ ಮೇಡಂ,
  ಹೌದು ... ಸರಿಯಾದ ಸಮಯಕ್ಕೆ ಕೊಟ್ಟರು..... ಮತ್ತೆ ಏನೂ ಹಣ ನಾನು ಕೊಡಲೇ ಇಲ್ಲ.....

  ReplyDelete
 15. ಮನಸು ಮೇಡಂ,
  ಹ್ಹಾ ಹ್ಹಾ... ಸಿಕ್ಕಿದೆ ಈಗ ಅನುಮತಿ ಸಿಕ್ಕಿದೆ...... ಅದು ಅವರ ಕರ್ತವ್ಯ ಕೂಡ...... ಆದರೂ ಆರಂಭದಲ್ಲಿ ಸಿಕ್ಕಷ್ಟು ಪೀಕುತ್ತಾರೆ ಅಷ್ಟೇ..... ಧನ್ಯವಾದ ನಿಮ್ಮಮೆಚ್ಚುಗೆಗೆ.....

  ReplyDelete
 16. ವೆಂಕಟಕೃಷ್ಣ ಸರ್.
  ಧನ್ಯವಾದ ನಿಮ್ಮ ಮೆಚ್ಚುಗೆಗೆ... ಪ್ರೋತ್ಸಾಹ ಹೀಗೆ ಇರಲಿ....

  ReplyDelete
 17. ಸುನಾಥ್ ಸರ್,
  ಹೌದು..... ಹೊಸ ಕೆಲಸಕ್ಕೆ ಸೇರಿದಾಗಿನಿಂದ ತುಂಬಾ ಸರಕಾರೀ ಕಚೇರಿಗಳಿಗೆ ಓಡಾಡಿದ್ದೇನೆ..... ಎಲ್ಲಿಗೆ ಹೋದರು ಇದೆ...... ಗರಿ ಗರಿ ನೋಟು ತೋರಿಸದೆ ಕೆಲಸವಾಗಲ್ಲ..... ಭಾಷೆ ಬರದೆ ಇದ್ದರೂ ನೋಟು ತೋರಿಸಿದರೆ ಸಾಕುಕೆಲಸವಾಗತ್ತೆ......

  ReplyDelete
 18. ಸೀತಾರಾಂ ಸರ್.
  ಹೌದು, ಹಣ ಪಡೆಯೋದಕ್ಕೆ ಒಳ್ಳೊಳ್ಳೆ ಕಥೆ ಕಟ್ಟುತ್ತಾರೆ..... ನಮಗೆ ಹೌದೌದು ಎನ್ನುವ ಹಾಗೆ ಹೇಳುತ್ತಾರೆ..... ನಾವು ಹಣ ಕೊಡದೆ ಕೆಲಸವಾಗದ ಹಾಗೆ ಮಾಡುತ್ತಾರೆ..... ಧನ್ಯವಾದ ಸರ್, ನಿಮ್ಮ ಮೆಚ್ಚುಗೆಗೆ....

  ReplyDelete
 19. ರಘು,
  ಕುಂದಾಪುರದ್ದೆ ಇನ್ನೊಂದು ಬರಹವಾಗಬಹುದು..... ಎಲ್ಲಾ ರಸವತ್ತಾದ ಕಥೆಗಳು..... ನಮ್ಮ ಸಿವಿಲ್ ಫೀಲ್ಡ್ ನಲ್ಲಿ ಇಂಥದ್ದೇ ಸುದ್ದಿಗಳು...... ನಾನು ಆರ್. ಏನ್ ಶೆಟ್ಟರ ಕಂಪನಿಯಲ್ಲಿ ಇದ್ದಾಗಲೇ, ಕುಂದಾಪ್ರ ಕನ್ನಡದ ಕಂಪು ತಿಳಿದಿತ್ತು..... ಅಲ್ಪ ಸಲ್ಪ ಬತ್ತಿತ್ತು ನಂಗೆ..... ಕೇಳೂಕು ಚಂದ ಆ ಭಾಷಿ ಅಲ್ದಾ........

  ReplyDelete
 20. ಶೀಧರ್ ಸರ್,
  ಓದಿ, ಇಷ್ಟಪಟ್ಟು ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದ..... ನಿಮ್ಮ ಬ್ಲಾಗ್ ಗೆ ಬಂದಿದ್ದೇನೆ ಸರ್....

  ReplyDelete
 21. ಮಹೇಶ್ ಸರ್,
  ಧನ್ಯವಾದ ಪ್ರೋತ್ಸ್ಹಾಹ ಕೊಟ್ಟಿದ್ದಕ್ಕೆ..... ನನ್ನ ಪೀಕಲಾಟ ನೋಡಿ ನಗ್ತಾ ಇದೀರಾ ಸರ್......

  ReplyDelete
 22. ವಿನಯ್ .
  ಸ್ವಾಗತ ನನ್ನ ಬ್ಲಾಗ್ ಗೆ..... ಅವರು ನನ್ನನ್ನ ನಂಬಿ ಲೆಟರ್ ಬರೆದು ಕಳಿಸಿದ್ದರು..... ಆದರೂ ಆ ಸಮಯಕ್ಕೆ ನನ್ನ ಪ್ರಾಣ ಬಾಯಿಗೆ ಬಂದಿತ್ತು..... ಧನ್ಯವಾದ ನಿಮ್ಮ ಅನಿಸಿಕೆಗೆ....

  ReplyDelete
 23. ಪೀಕಲಾಟವಯ್ಯ
  ಚೆನ್ನಾಗಿದೆ
  ತುಂಬಾ ಸಕತ್ತಾಗಿ ಬರೆದಿದ್ದಿರಾ ಸರ್

  ReplyDelete
 24. ದಿನಕರ್ ಸರ್,

  ಎಲ್ಲಿಹೋದರೂ ಈ ವ್ಯವಸ್ಥೆ ಸರಿಹೋಗಲ್ಲವೆನಿಸುತ್ತೆ..ಒಂದಕ್ಕೊಂದು ಎಷ್ಟು ದೊಡ್ಡ ಲಿಂಕ್ ಇರುತ್ತೆ ಅಲ್ವಾ...ಕೊನೆಗೂ ನಿಮಗೆ ಲೆಟರ್ ಸಿಕ್ತಾ..ನಿಮ್ಮ ಪೀಕಲಾಟವಂತೂ ಕಣ್ಣಿಗೆ ಕಟ್ಟುವಂತಿತ್ತು...
  .

  ReplyDelete
 25. ನೀವು ಬರೆದಿರುವುದನ್ನು ಹಾಗೂ ಇಲ್ಲಿರುವ ಕಮೆಂಟ್ ಗಳನ್ನು ’ಆ’ ಮಹಾಶಯರು ಓದಲಿ ಅಂದುಕೊಳ್ಳುತ್ತೇನೆ. ಹಾಗಾದರೂ ಪಾಪಪ್ರಜ್ಞೆ ಕಾಡಲಿ. ವ್ಯವಸ್ಥೆಯೊಳಗಣ ಹುಳುಕನ್ನು ತೆಗೆದು ಬರೆದಿದ್ದು ಸರಿಯಾಯಿತು.

  ReplyDelete
 26. ನಕ್ಕು ನಕ್ಕು ಸಾಕಾಯ್ತು ಸರ್, ತುಂಬಾ ಚೆನ್ನಾಗಿದೆ ಧನ್ಯವಾದಗಳು.

  ವಸಂತ್

  ReplyDelete
 27. ದಿನಕರ್ ಸರ್, ಪೀಕುವ ಮಾರ್ಗಗಳೂ ಜನರೂ ಹಲವು ಈ ಕಾಲದಲ್ಲಿ! ನಿಮ್ಮ 'ಪೀಕಲಾಟ' ನಗುತರಿಸಿತು, ಮತ್ತೆ ನೆಪಾಗುತ್ತದೆ ನಿಮ್ಮ ಮುಖ ಬ್ಲಾಗಲ್ಲಿ ಕಂಡೊಡನೆ, ಹಹಹ, ಧನ್ಯವಾದ

  ReplyDelete
 28. ಡಾ. ಗುರು ಸರ್,
  ಧನ್ಯವಾದ... ನಿಮ್ಮ ಪ್ರೋತ್ಸಾಹಕ್ಕೆ....

  ReplyDelete
 29. ಶಿವೂ ಸರ್,
  ಹೌದು ಸರ್, ಒಮ್ಮೊಮ್ಮೆ ಆಶ್ಚರ್ಯ ಆಗತ್ತೆ... ದನ್ಯವಾದ ನಿಮ್ಮ ಮೆಚ್ಚುಗೆಗೆ....

  ReplyDelete
 30. subramanya sir,
  'aa' mahaashaya odabahudu anta aashaya nanagilla... thank you sir.. nimma kaLakaLige..

  ReplyDelete
 31. sivaprakaash,
  hha hha... kelasa aagide... thank you...

  ReplyDelete
 32. vasant sir,
  thank you nanna kashta nodi nakkiddakke.... hha hhaa... dhanyavaada....

  ReplyDelete
 33. bhat sir,

  peekalaata nannadu majavaagittu... adannu heLida reeti nimage hidisidare ade nanage khushi... dhanyavaada sir, nimma mecchugeya maatige...

  ReplyDelete
 34. ದಿನಕರ ಮೊಗೇರ.. ,
  ಚೆನ್ನಾಗಿದೆ ಚೆನ್ನಾಗಿದೆ..

  ReplyDelete
 35. chennagide sir nimma lekhana .. dhanyavadagalu :) :)

  ReplyDelete
 36. he he chennagide nimma peekalata:)
  yaake neevu correct phone number kottilla..??!!..

  ReplyDelete
 37. ದಿನಕರ್ ಸುಳ್ಳು ಹೇಳೋದು..ತಪ್ಪುದಾರಿಗೆ ಎಳಿಯೋದು ಗೊತ್ತಿಲ್ಲದೋರು ಇರ್ಲಿ ಒಮ್ಮೆ ಅಂತ ಆ ಬಾಣಾನ ಬಿಟ್ರೆ..ಬೂಮರಾಂಗ್ ತರಹ ರಾಂಗ್ ಆಗಿ ನಮ್ಮ ಮೇಲೇನೇ ಬೀಳುತ್ತೆ ಅನ್ನೋದಕ್ಕೆ ನಿಮ್ಮ ಅನುಭವ ಸಾಕ್ಷಿ..ಇಂಥ ಆಫೀಸುಗಳಿಗೆ ಲೋಕಾಯುಕ್ತರು ಹೋಗೋಲ್ವೋ ಅಥವಾ ಬಹಳ ದಿನ ಆಗಿದೆಯೋ ಗೊತ್ತಿಲ್ಲ....ಹಹಹ....ಅಂತೂ ನಿಮ್ಮ ನಂಬರ್ ಬೇರೆಯವರ ಮೊಬೈಲ್ ನಲ್ಲಿ ರಿಂಗ್ ಆಗಿ ಅವ್ರು ಸೇವ್ ಮಾಡ್ಕೊಂಡಿರ್ತಾರೆ ಮುಂದೆ ಒಮ್ಮೆ ಶೇವ್ ಮಾಡಿಸ್ಕೊಳ್ಳೂಕೆ...,,ಹಹಹ,,,

  ReplyDelete
 38. ದಿನಕರ್,

  ಚೆನ್ನಾಗಿದೆ ನಿಮ್ಮ ಲೇಖನ. ತುಂಬಾ ಸ್ವಾರಸ್ಯಕರ ಮತ್ತು ಕುತೊಹಲದಿಂದ ಕೂಡಿದೆ :)


  - ಚಂದ್ರು

  ReplyDelete
 39. vanitaa madam,
  nanna phone number kottidre matte matte phone maaDi haNakkaagi peeDisuttidda adakke naanu nanna number koDalilla ashte.....

  ReplyDelete
 40. aazaad sir,
  houdu, tumbaa kettogide sarakaari office..... dhanyavaada nimma anisikege...

  ReplyDelete
 41. chandru sir,
  nanna blog ge swaagata..... heege baruttaa iri... dhanyavaada....

  ReplyDelete
 42. ayoo sir ...enidu nimma peekalaata??he he...

  ReplyDelete
 43. ದಿನಕರ್...

  ಲಂಚಕೊಡುವ ಮನಸ್ಸಿಲ್ಲದಿದ್ದರೂ...
  ಬೇರೆಯವರಿಗೆ ಕೆಲಸ ಮಾಡುವ ನಮ್ಮ "ವೃತ್ತಿ ಧರ್ಮಕ್ಕಾಗಿ"
  ಕೊಡಬೇಕಾದ "ಅಸಹಾಯಕ ಸಂದರ್ಭ...
  ಆ ಲಂಚಕೋರನಿಗೆ ನೀವು ಸತಾಯಿಸಿದ್ದು ಬಹಳ ಇಷ್ಟವಾಯಿತು..

  ನಿಮ್ಮ ನಿರೂಪಣೆ ಆಕರ್ಷಕವಾಗಿದೆ..
  ಎಲ್ಲಿಯೂ ನಿಲ್ಲಿಸದೇ.. ಓದಿಸಿಕೊಂಡು ಹೋಗುತ್ತದೆ..

  ನಾನು ನಿಮ್ಮ ಬ್ಲಾಗಿಗೆ ಮೊದಲನೆಯ ಪ್ರತಿಕ್ರಿಯೆ ಕೊಡಲು ಇಷ್ಟ ಪಡುತ್ತೇನೆ...
  ಈ ಸಾರಿ "ಅರ್ಧ ಶತಕ"ದ ಪ್ರತಿಕ್ರಿಯೆಗೆ ಕೊಡುತ್ತಿರುವೆ..
  ಇದೂ ಸಹ ಬಹಳ ಸಂತೋಷ.. !

  ಚಂದದ ಲೇಖನಕ್ಕಾಗಿ ಅಭಿನಂದನೆಗಳು...

  ReplyDelete
 44. prakaashanna,
  nimma aatmeeya pratikreeyege tumbaa dhanyavaada.... comment ardhashataka daaTiddakke khushiyaagide......

  tumbaa dhanyavaada.....

  ReplyDelete
 45. Dinakar Sir...

  ee nimma lekhana superb...neerupisida reeti tumba ista aitu....ottare tumbaa uttama lekhana....

  ReplyDelete
 46. Dinakar Sir.. Sannivesha super aagide.. olle svarasyavaagide.. konege number miss aadru neev bachaav aagiddu.. super!!

  ReplyDelete
 47. ಹ: ಹ:.. ಲೇಖನ ಚೆನ್ನಾಗಿದೆ Sir..:) ಆದರೂ ಲಂಚ ತೆಗೆದುಕೊಳ್ಳೊರನ್ನ ನೊಡಿದ್ರೆ ವಿಪರೀತ ಸಿಟ್ಟು ಬರುತ್ತೆ..

  ReplyDelete
 48. ashok sir,
  dhanyavaada mecchi comment maadiddakke...

  ReplyDelete
 49. pradeep sir,
  tumbaa thanks...... nanna baraha mecchi comment haakiddakke.... swagata nanna blog ge.... heege baruttaa iri....

  ReplyDelete
 50. shravana sir,
  houdu nanage sittu baratte... aadre naanidda paristiti haagittu..... dhanyavaada....nimma mecchuge .... heege baruttaa iri...

  ReplyDelete