ಮನಸ್ಸಿನ ಮಾತುಗಳು ಮನಸ್ಸಲ್ಲೇ ಇದ್ದರೆ ಮುತ್ತುಗಳಾಗಲ್ಲ. ಎಲ್ಲೋ ಕೇಳಿದ ಕಥೆ,ಅನುಭವಿಸಿದ ವ್ಯಥೆ, ಇಷ್ಟಪಟ್ಟ ಯಾರದೋ ಸಾಲುಗಳು, ನೋಡಿದ ಸಿನೆಮಾಗಳ ಬಗ್ಗೆ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ಮನಸ್ಸಿಗೆ ತೋಚಿದ್ದನ್ನ, ನೋಡಿದ್ದನ್ನ ಬರೆಯುತ್ತೇನೆ, ನೋವನ್ನ ನಲಿವಿನಿಂದಲೇ ಹೇಳುತ್ತೇನೆ.
Dec 31, 2009
ಹೊಸ ವರುಷದಲ್ಲಿ ಹಳೆಯ ನಿರೀಕ್ಷೆ.....!
ಗೆಳತಿ, ಹೊಸ ಬೆಳಕಲ್ಲಿ ಹಳೆಯ ನಿರೀಕ್ಷೆ,
ಇಂದಿಗೂ ನದಿ ತೀರದಲ್ಲೇ ಕುಳಿತಿದ್ದೇನೆ,
ನಿನ್ನ ಆ ಸವಿ ಸ್ನೇಹವ ನೆನೆಯುತ್ತಾ.........
ಎಂದೆಂದಿಗೂ ನಿನಗಾಗಿ ಕಾಯುತ್ತೇನೆ,
ನೀನು ಬರೋ ದಾರಿಯ ನೋಡುತ್ತಾ.....
ಕಾಯುವುದು ಹೊಸತಲ್ಲ.........
ಬರುವ ದಿನ ಹೊಸತು.......
ಅಂದು ನಾ ಕಾದಿದ್ದೆ ಹಿಡಿ ಪ್ರೀತಿಗಾಗಿ,
ಕಾದು ಕಾದು ಸೋತು ಹೋಗಿದ್ದೆ.....
ಇಂದು ನಾ ಕಾಯುತಿರುವೆ ಸಿಹಿ ಸ್ನೇಹಕ್ಕಾಗಿ,
ಕಾಡಿಸದಿರು ನನ್ನ ಪ್ರೀತಿಯ ಗೆಳತಿ........
ಇರುಳಲ್ಲೊಮ್ಮೆ ಬೆಳಕನ್ನು ಮುಟ್ಟಿ,
ಕಾಯುತ್ತಿರುವೆ ನೀ ಬರುವ ದಾರಿ........
ನೀ ಬಂದೆ ಬರುವಿಯೆಂದು,
ಕಾಯುವುದೇ ಒಂದು ಪುಳಕ.........
ಬಾಚಿಕೊಂಡ ಬೆಳಕು ಸರಿದು ಹೋದಾಗ,
ಕಣ್ಣೀರಾಗುವುದೇ ಈಗಿನ ಕಾಯಕ........
ನೀನು ಬರುವವರೆಗೆ ಕಾಯುವುದು ನಿಲ್ಲೋದಿಲ್ಲ............
ನೀನು ಬರುವ ನಂಬಿಕೆಯೇ ನನಗಿಲ್ಲವಲ್ಲ ...........!
Subscribe to:
Post Comments (Atom)
ಕವನ ತುಂಬಾಚೆನ್ನಾಗಿದೆ.. ಹಳೆಯ ಕಹಿ ನೆನಪು ಹಾಗು ನಿಮ್ಮ ಕಾಯುವಿಕೆಯ ಕಹಿಯಲ್ಲೇ ನಿಮಗೆ ಹೊಸವರ್ಷದ ಶುಭಾಶಯಗಳನ್ನು ತಿಳಿಸುತ್ತೇವೆ.
ReplyDeleteದಿನಕರ್ ಅವರೇ.....
ReplyDeleteನಿಮ್ಮ ರೆಸೊಲ್ಯೂಷನ್ ಚೆನ್ನಾಗಿದೆ ಹೊಸ ವರುಷಕ್ಕೆ :)
ಕವನ ಚೆನ್ನಾಗಿದೆ....
ಹೊಸ ವರುಷದ ಶುಭಾಶಯಗಳು....
ಮನಸು ಮೇಡಂ,
ReplyDeleteಧನ್ಯವಾದ ನಿಮ್ಮ ಅಭಿಪ್ರಾಯಕ್ಕೆ ..... ನಿಮಗೂ ಹೊಸ ವರ್ಷದ ಶುಭಾಷಯ.............
ಸುಧೇಶ್,
ReplyDeleteಹೊಸ ವರ್ಷದ ರೆಸುಲೆಸನ್ ಏನೂ ಅಲ್ಲ..... ಸುಮ್ಮನೆ ಕಲ್ಪನೆಯ ಕವಿತೆ ಅಸ್ತೆ..... ಯಾರದೋ ಮನ ಹೊಕ್ಕು , ಅವರ ಮನಸ್ಸಿನ ಭಾವನೆ ಬರೆದಿದ್ದೇನೆ ಅಸ್ತೆ.......
ದಿನಕರ್ ಕಾಯುವಿಕೆ ಯಾರಿಗೇ ಆಗಲಿ ಯಾರಿಗಾಗೇ ಆಗಲಿ ಒಂದು ಅಸಹನೀಯ ಕ್ಷಣ...ಅದು ಪ್ರೇಯಸಿಗಾದರೆ...ಅನಿಶ್ಚಯತೆಯ ತೂಗುಯ್ಯಾಲೆ...ಈ ಎಲ್ಲಾ ಭಾವನೆಗಳನ್ನು ಸಾಲುಗಳಲ್ಲಿ ಪೋಣಿಸಿ ಬೆಸೆದಿದ್ದೀರಿ....ಚನ್ನಾಗಿದೆ ....ಹೊಸ ವರ್ಷದ ಹೊಸ ಕೊಡುಗೆ.
ReplyDeleteದಿನಕರ,
ReplyDeleteಹೊಸ ವರ್ಷದಲ್ಲಿ ಆಶಾಭಾವವನ್ನು ತೋರಿಸಿದ್ದೀರಿ. ನಿಮಗೆ ಶುಭಾಶಯಗಳು.
ಅಜಾದ್ ಸರ್,
ReplyDeleteಕಾಯುವಿಕೆ ಒಳ್ಳೆಯದ್ದಕ್ಕೆ ಆದರೆ ಒಳ್ಳೆಯದು ನನ್ನ ಪ್ರಕಾರ....... ಹಾಗೆ ಕಾಯುತ್ತಿದ್ದೇನೆ ಒಳ್ಳೆಯದಕೆ......... ಹಾಗೆ, ಈ ಕವನ ನನ್ನ ಕಾಯುವಿಕೆ ತೋರಿಸುತ್ತಿಲ್ಲ.... ಯಾರದೋ ಕಾಯುವಿಕೆ ನನ್ನ ಕವನದಲ್ಲಿ..... ನಿಮಗೂ ಹೊಸ ವರ್ಷದ ಶುಭಾಶಯಗಳು ಸರ್.....
ಸುನಾಥ್ ಸರ್,
ReplyDeleteನಿಮ್ಮ ಹಾರೈಕೆ ಹೀಗೆ ಇರಲಿ, ನನ್ನಿಂದ ಒಳ್ಳೆಯ ಕವನ , ಒಳ್ಳೆಯ ಕೆಲಸ ಆಗ್ತಾ ಇರಲಿ..... ನಿಮಗೂ ಸಹ, ಹೊಸ ವರುಷದ ಸುಭಾಶಯಗಳು ಸರ್.............
ಹೊಸವರ್ಷದ ಶುಭಾಶಯಗಳು. ಹೊಸ ವರ್ಷದಲ್ಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ
ReplyDeleteಕವನ ತುಂಬಾ ಚೆನ್ನಾಗಿದೆ .. :)
ReplyDeleteಹೊಸ ವರ್ಷದ ಹಾರ್ದಿಕ ಶುಭಾಶಯಗಳು :)
ಕಾಯುವಿಕೆ ಕನಸನ್ನ ಹೆಚ್ಚಿಸುತ್ತದೆ.. ದಿನಕರ್.
ReplyDeleteಕನಸು ಸದಾ ಸಿಹಿಯಲ್ಲವೇ...
ಕಾಯುವಿಕೆಯ ಸಮಯ ಕಳೆದು ಕೊನೆಯಲ್ಲಿ ಬಯಸಿದವರು ಸಿಕ್ಕಾಗ ಮನದ ತು೦ಬಾ ಸಿಹಿ ಸಿಹಿ ....
ಚೆನ್ನಾಗಿದೆ ಕವನ
ಕವನ ತುಂಬಾ ಚೆನ್ನಾಗಿದೆ.....
ReplyDeleteಹೊಸ ವರ್ಷದ ಶುಭಾಶಯಗಳು....
ದಿನಕರ...
ReplyDeleteಬರುವ ನಂಬಿಕೆ ಇಲ್ಲದ್ದಿದ್ದರೂ..
ಭರವಸೆಯಿಂದ ಕಾಯುವದಿದೆಯಲ್ಲ...
ಅದು ಗ್ರೇಟ್...!!
ಸೊಗಸಾದ ಕವನ...!!
ಹೊಸವರ್ಷದ ಶುಭಾಶಯಗಳು...
ಚಂದದ ಕವನಕ್ಕೆ ಅಭಿನಂದನೆಗಳು...
ದಿನಕರ್ ಸರ್,
ReplyDeleteಕವನ ತುಂಬಾ ಚೆನ್ನಾಗಿ ಬರೆದಿದ್ದೀರಿ...
ಕಾಯುವುದು ಹೊಸತಲ್ಲ.........
ಬರುವ ದಿನ ಹೊಸತು.......
ಇಷ್ಟು ಸರಳವಾದ ಸಾಲಿನಲ್ಲಿ ಎಷ್ಟು ಅರ್ಥವಿದೆಯಲ್ಲಾ...
ಹೊಸ ವರ್ಷದ ಶುಭಾಶಯಗಳು.
ಮಂಜು ಸರ್,
ReplyDeleteಪ್ರತಿಕ್ರೀಯೆಗೆ ಧನ್ಯವಾದ........ ನಿಮಗೂ ಹೊಸ ವರ್ಷದ ಶುಭಾಶಗಳು......
snow white .........
ReplyDeleteಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದ.......
ವಿಜಯಶ್ರೀ ಮೇಡಂ,
ReplyDeleteಕಾಯುವುದು ಸಿಹಿ............ ಕೊನೆಯಲ್ಲಿ ಸಿಕ್ಕಾಗ ಅಲ್ಲವೇ....... ಸಿಗದೇ ಇದ್ದಾಗ........... ಕಹಿ ಕಹಿ....... ಉಪ್ಪು..ಉಪ್ಪು............ ಹುಳಿ.. ಹುಳಿ....... ಹ ಹ ಹಾ.......... ಧನ್ಯವಾದ ನಿಮ್ಮ ಪ್ರತಿಕ್ರೀಯೆಗೆ .....
ಮಹೇಶ್ ಸರ್..
ReplyDeleteಇಷ್ಟ ಪಟ್ಟಿದ್ದೀರ......... ನೀವು ಕಾಯುತ್ತೀರಿ ನಂಗೊತ್ತು,,,,,,,,,,, ಮನಸು ಮೇಡಂ ಬರೆದ ಕಥೆ ನೆನಪಿದೆ ಸರ್.......... ನಿಮಗೂ ಹೊಸ ವರುಷ ಹರುಷ ತರಲಿ ಸರ್.........
ಪ್ರಕಾಶಣ್ಣ,
ReplyDeleteಬರುವ ನಂಬಿಕೆಯೇ ಇಲ್ಲದೆ ಕಾಯೋರು, ಕಾಯೋದು ಒಂದು ತಪಸ್ಸು....... ಇದು ಸಾಧ್ಯವಾಗೋದು ಈ ಕಾಲದಲ್ಲಿ ಕಷ್ಟ....... ನನ್ನ ಮನಸ್ಸಿಗೆ ಬಂತು, ಬರೆದು ತೆಗೆದೇ....... ನಿಜ ಮಾಡೋದು........ ಕಷ್ಟ ಕಷ್ಟ...............
ಶಿವೂ ಸರ್,
ReplyDeleteಕಾಯೋದು ನಿರಂತರ........ ಕಾದು ಕಾದು ಸೋತಾಗ ಪರ.... ಪರ............ ಹಾ ಹಾ ಹಾ................... ಕಾಯೋದು ಕನಸಲ್ಲಿ ........... ಕವನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ........
ದಿನಕರ್ ಸರ್ .. ಸಕ್ಕತ್ತಾಗಿದೆ .. ಬಂದೆ ಬರ್ತಾರೆ ನಿರಾಸೆ ಬೇಡ .. :D
ReplyDeleteಸಿಕ್ಕಾಗ ಆಗೋ ಖುಶಿಗಿಂತ ಕಾಯೋ ಖುಷಿನೇ ಚೆನ್ನಾಗಿರತ್ತೆ ಅಲ್ವಾ ?
Be Positive Sir...
ReplyDeleteಬಂದೆ ಬರ್ತಾಳೆ ಬಿಡಿ.. ಹೊಸ ವರ್ಷಕ್ಕೆ ಉಡುಗೊರೆಯಾಗಿ... ;)
ಹೊಸ ವರ್ಷದ ಹಾರ್ದಿಕ ಶುಭಾಶಯಗಳು..
ರಂಜಿತ ಮೇಡಂ.
ReplyDeleteಹೌದು, ಕಾಯೋದರಲ್ಲಿ ಇರೋ ಸುಖ ಖುಷಿ, ಸಿಕ್ಕ ಮೇಲೆ ಇರಲ್ಲ..... ಅಭಿಪ್ರಾಯಕ್ಕೆ ಧನ್ಯವಾದಗಳು... ನಿಮಗೂ ಹೊಸ ವರ್ಷದ ಶುಭಾಶಯಗಳು.....
ಶಿವಪ್ರಕಾಶ್,
ReplyDeleteನಾನು ಪೊಸಿಟಿವ್ ಆಗೇ ಇರ್ತೇನೆ, ಅವಳು ವಾಪಸ್ ಬರ್ತಾಳೆ ಅಂತ ಅಲ್ಲ...... ನನಗೆ ಯಾರೂ ವಾಪಸ್ ಬರೋರು ಇಲ್ಲಪ್ಪ.... ಕೆಲವರ ಭಾವನೆ ಈ ರೀತಿ ಇರತ್ತೆ ಅಂತ ಬರೆದಿದ್ದೇನೆ ಅಷ್ಟೇ..... ವಾಪಸ್ ಬಂದರೆ ಅವರಿಗೆಲ್ಲಾ ಖುಷಿ ಆಗಬಹುದು ಆಲ್ವಾ.... ಅಭಿಪ್ರಾಯಕ್ಕೆ ಧನ್ಯವಾದಗಳು... ನಿಮಗೂ ಹೊಸ ವರ್ಷದ ಶುಭಾಶಯಗಳು.....
Happy New Year Sir (Belated)
ReplyDeletechennagide kavana
ಗುರು ಸರ್,
ReplyDeleteನಿಮಗೂ ಸಹ ಹೊಸ ವರ್ಷದ ಶುಭಾಶಯಗಳು..... ಕಾಮೆಂಟಿಸಿದ್ದಕ್ಕೆ ಧನ್ಯವಾದ.....
ದಿನಕರ್ ಅವರೇ,
ReplyDeleteಹೊಸ ವರ್ಷದ ಶುಭಾಶಯಗಳು.... :) ಹೊಸ ವರ್ಷದಲ್ಲಿ ನೀವು ಕಾಯ್ತಾ ಇರೋ ಹೊಸ ದಿನ ಬಂದೆ ಬರುತ್ತೆ ಎನ್ನೋ ನಂಬಿಕೆ ನನಗಿದೆ... ನಿಮಗೆ ಇದೆಯಾ...? :)
ಕವನ ಸೂಪರ್ ಸರ್....!
ನಿಮ್ಮವ,
ರಾಘು.
ರಘು ಸರ್,
ReplyDeleteನಂಗೂ ನಂಬಿಕೆ ಇದೆ, ಹೊಸ ದಿನ ಬರತ್ತೆ ಅಂತ ..... ನಾನು ಕಾಯ್ದೆ ಇದ್ರೂ ಹೊಸ ದಿನ ಬರತ್ತೆ ಆಲ್ವಾ.....
"ಕಾದಿರುವಳು ಶಬರಿ ರಾಮ ಬರುವನೆಂದು...."... ಕವನ ಚೆನ್ನಾಗಿದೆ
ReplyDeleteಗೋರೆ ಸರ್,
ReplyDeleteಕಲಿಯುಗದಲ್ಲಿ ಎಲ್ಲೂ ಶಬರಿ ಸಿಗಲ್ಲ ಆಲ್ವಾ ಸರ್.....
ಹೀಗೆ ಕಾಯುವ ನಲಿವು ನೋವಿನಲ್ಲೇ ನಮ್ಮ ಒಳ ತಾರುಣ್ಯದ ಜಾಗೃತಿ.
ReplyDeleteನಮ್ಮೆಲ್ಲರ ಭಾವನೆಗಳನ್ನು ಕೆಣಕುವ ಇಂತಹ ಕವನಗಳಿಗೆ ಸ್ವಾಗತ.