Dec 31, 2009

ಹೊಸ ವರುಷದಲ್ಲಿ ಹಳೆಯ ನಿರೀಕ್ಷೆ.....!


ಗೆಳತಿ, ಹೊಸ ಬೆಳಕಲ್ಲಿ ಹಳೆಯ ನಿರೀಕ್ಷೆ,


ಇಂದಿಗೂ ನದಿ ತೀರದಲ್ಲೇ ಕುಳಿತಿದ್ದೇನೆ,
ನಿನ್ನ ಸವಿ ಸ್ನೇಹ ನೆನೆಯುತ್ತಾ.........
ಎಂದೆಂದಿಗೂ ನಿನಗಾಗಿ ಕಾಯುತ್ತೇನೆ,
ನೀನು ಬರೋ ದಾರಿಯ ನೋಡುತ್ತಾ.....

ಕಾಯುವುದು
ಹೊಸತಲ್ಲ.........
ಬರುವ ದಿನ ಹೊಸತು.......

ಅಂದು ನಾ ಕಾದಿದ್ದೆ ಹಿಡಿ ಪ್ರೀತಿಗಾಗಿ,
ಕಾದು ಕಾದು ಸೋತು ಹೋಗಿದ್ದೆ.....
ಇಂದು ನಾ ಕಾಯುತಿರುವೆ ಸಿಹಿ ಸ್ನೇಹಕ್ಕಾಗಿ,
ಕಾಡಿಸದಿರು ನನ್ನ ಪ್ರೀತಿಯ ಗೆಳತಿ........

ಇರುಳಲ್ಲೊಮ್ಮೆ ಬೆಳಕನ್ನು ಮುಟ್ಟಿ,
ಕಾಯುತ್ತಿರುವೆ ನೀ ಬರುವ ದಾರಿ........

ನೀ ಬಂದೆ ಬರುವಿಯೆಂದು,
ಕಾಯುವುದೇ ಒಂದು ಪುಳಕ.........
ಬಾಚಿಕೊಂಡ ಬೆಳಕು ಸರಿದು ಹೋದಾಗ,
ಕಣ್ಣೀರಾಗುವುದೇ ಈಗಿನ ಕಾಯಕ........

ನೀನು ಬರುವವರೆಗೆ ಕಾಯುವುದು ನಿಲ್ಲೋದಿಲ್ಲ............
ನೀನು ಬರುವ ನಂಬಿಕೆಯೇ ನನಗಿಲ್ಲವಲ್ಲ ...........!



31 comments:

  1. ಕವನ ತುಂಬಾಚೆನ್ನಾಗಿದೆ.. ಹಳೆಯ ಕಹಿ ನೆನಪು ಹಾಗು ನಿಮ್ಮ ಕಾಯುವಿಕೆಯ ಕಹಿಯಲ್ಲೇ ನಿಮಗೆ ಹೊಸವರ್ಷದ ಶುಭಾಶಯಗಳನ್ನು ತಿಳಿಸುತ್ತೇವೆ.

    ReplyDelete
  2. ದಿನಕರ್ ಅವರೇ.....

    ನಿಮ್ಮ ರೆಸೊಲ್ಯೂಷನ್ ಚೆನ್ನಾಗಿದೆ ಹೊಸ ವರುಷಕ್ಕೆ :)

    ಕವನ ಚೆನ್ನಾಗಿದೆ....

    ಹೊಸ ವರುಷದ ಶುಭಾಶಯಗಳು....

    ReplyDelete
  3. ಮನಸು ಮೇಡಂ,
    ಧನ್ಯವಾದ ನಿಮ್ಮ ಅಭಿಪ್ರಾಯಕ್ಕೆ ..... ನಿಮಗೂ ಹೊಸ ವರ್ಷದ ಶುಭಾಷಯ.............

    ReplyDelete
  4. ಸುಧೇಶ್,
    ಹೊಸ ವರ್ಷದ ರೆಸುಲೆಸನ್ ಏನೂ ಅಲ್ಲ..... ಸುಮ್ಮನೆ ಕಲ್ಪನೆಯ ಕವಿತೆ ಅಸ್ತೆ..... ಯಾರದೋ ಮನ ಹೊಕ್ಕು , ಅವರ ಮನಸ್ಸಿನ ಭಾವನೆ ಬರೆದಿದ್ದೇನೆ ಅಸ್ತೆ.......

    ReplyDelete
  5. ದಿನಕರ್ ಕಾಯುವಿಕೆ ಯಾರಿಗೇ ಆಗಲಿ ಯಾರಿಗಾಗೇ ಆಗಲಿ ಒಂದು ಅಸಹನೀಯ ಕ್ಷಣ...ಅದು ಪ್ರೇಯಸಿಗಾದರೆ...ಅನಿಶ್ಚಯತೆಯ ತೂಗುಯ್ಯಾಲೆ...ಈ ಎಲ್ಲಾ ಭಾವನೆಗಳನ್ನು ಸಾಲುಗಳಲ್ಲಿ ಪೋಣಿಸಿ ಬೆಸೆದಿದ್ದೀರಿ....ಚನ್ನಾಗಿದೆ ....ಹೊಸ ವರ್ಷದ ಹೊಸ ಕೊಡುಗೆ.

    ReplyDelete
  6. ದಿನಕರ,
    ಹೊಸ ವರ್ಷದಲ್ಲಿ ಆಶಾಭಾವವನ್ನು ತೋರಿಸಿದ್ದೀರಿ. ನಿಮಗೆ ಶುಭಾಶಯಗಳು.

    ReplyDelete
  7. ಅಜಾದ್ ಸರ್,
    ಕಾಯುವಿಕೆ ಒಳ್ಳೆಯದ್ದಕ್ಕೆ ಆದರೆ ಒಳ್ಳೆಯದು ನನ್ನ ಪ್ರಕಾರ....... ಹಾಗೆ ಕಾಯುತ್ತಿದ್ದೇನೆ ಒಳ್ಳೆಯದಕೆ......... ಹಾಗೆ, ಈ ಕವನ ನನ್ನ ಕಾಯುವಿಕೆ ತೋರಿಸುತ್ತಿಲ್ಲ.... ಯಾರದೋ ಕಾಯುವಿಕೆ ನನ್ನ ಕವನದಲ್ಲಿ..... ನಿಮಗೂ ಹೊಸ ವರ್ಷದ ಶುಭಾಶಯಗಳು ಸರ್.....

    ReplyDelete
  8. ಸುನಾಥ್ ಸರ್,
    ನಿಮ್ಮ ಹಾರೈಕೆ ಹೀಗೆ ಇರಲಿ, ನನ್ನಿಂದ ಒಳ್ಳೆಯ ಕವನ , ಒಳ್ಳೆಯ ಕೆಲಸ ಆಗ್ತಾ ಇರಲಿ..... ನಿಮಗೂ ಸಹ, ಹೊಸ ವರುಷದ ಸುಭಾಶಯಗಳು ಸರ್.............

    ReplyDelete
  9. ಹೊಸವರ್ಷದ ಶುಭಾಶಯಗಳು. ಹೊಸ ವರ್ಷದಲ್ಲಿ ನಿಮ್ಮ ಕನಸುಗಳೆಲ್ಲ ನನಸಾಗಲಿ

    ReplyDelete
  10. ಕವನ ತುಂಬಾ ಚೆನ್ನಾಗಿದೆ .. :)
    ಹೊಸ ವರ್ಷದ ಹಾರ್ದಿಕ ಶುಭಾಶಯಗಳು :)

    ReplyDelete
  11. ಕಾಯುವಿಕೆ ಕನಸನ್ನ ಹೆಚ್ಚಿಸುತ್ತದೆ.. ದಿನಕರ್.
    ಕನಸು ಸದಾ ಸಿಹಿಯಲ್ಲವೇ...
    ಕಾಯುವಿಕೆಯ ಸಮಯ ಕಳೆದು ಕೊನೆಯಲ್ಲಿ ಬಯಸಿದವರು ಸಿಕ್ಕಾಗ ಮನದ ತು೦ಬಾ ಸಿಹಿ ಸಿಹಿ ....
    ಚೆನ್ನಾಗಿದೆ ಕವನ

    ReplyDelete
  12. ಕವನ ತುಂಬಾ ಚೆನ್ನಾಗಿದೆ.....
    ಹೊಸ ವರ್ಷದ ಶುಭಾಶಯಗಳು....

    ReplyDelete
  13. ದಿನಕರ...

    ಬರುವ ನಂಬಿಕೆ ಇಲ್ಲದ್ದಿದ್ದರೂ..
    ಭರವಸೆಯಿಂದ ಕಾಯುವದಿದೆಯಲ್ಲ...

    ಅದು ಗ್ರೇಟ್...!!

    ಸೊಗಸಾದ ಕವನ...!!

    ಹೊಸವರ್ಷದ ಶುಭಾಶಯಗಳು...
    ಚಂದದ ಕವನಕ್ಕೆ ಅಭಿನಂದನೆಗಳು...

    ReplyDelete
  14. ದಿನಕರ್ ಸರ್,

    ಕವನ ತುಂಬಾ ಚೆನ್ನಾಗಿ ಬರೆದಿದ್ದೀರಿ...

    ಕಾಯುವುದು ಹೊಸತಲ್ಲ.........
    ಬರುವ ದಿನ ಹೊಸತು.......

    ಇಷ್ಟು ಸರಳವಾದ ಸಾಲಿನಲ್ಲಿ ಎಷ್ಟು ಅರ್ಥವಿದೆಯಲ್ಲಾ...

    ಹೊಸ ವರ್ಷದ ಶುಭಾಶಯಗಳು.

    ReplyDelete
  15. ಮಂಜು ಸರ್,
    ಪ್ರತಿಕ್ರೀಯೆಗೆ ಧನ್ಯವಾದ........ ನಿಮಗೂ ಹೊಸ ವರ್ಷದ ಶುಭಾಶಗಳು......

    ReplyDelete
  16. snow white .........
    ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದ.......

    ReplyDelete
  17. ವಿಜಯಶ್ರೀ ಮೇಡಂ,
    ಕಾಯುವುದು ಸಿಹಿ............ ಕೊನೆಯಲ್ಲಿ ಸಿಕ್ಕಾಗ ಅಲ್ಲವೇ....... ಸಿಗದೇ ಇದ್ದಾಗ........... ಕಹಿ ಕಹಿ....... ಉಪ್ಪು..ಉಪ್ಪು............ ಹುಳಿ.. ಹುಳಿ....... ಹ ಹ ಹಾ.......... ಧನ್ಯವಾದ ನಿಮ್ಮ ಪ್ರತಿಕ್ರೀಯೆಗೆ .....

    ReplyDelete
  18. ಮಹೇಶ್ ಸರ್..
    ಇಷ್ಟ ಪಟ್ಟಿದ್ದೀರ......... ನೀವು ಕಾಯುತ್ತೀರಿ ನಂಗೊತ್ತು,,,,,,,,,,, ಮನಸು ಮೇಡಂ ಬರೆದ ಕಥೆ ನೆನಪಿದೆ ಸರ್.......... ನಿಮಗೂ ಹೊಸ ವರುಷ ಹರುಷ ತರಲಿ ಸರ್.........

    ReplyDelete
  19. ಪ್ರಕಾಶಣ್ಣ,
    ಬರುವ ನಂಬಿಕೆಯೇ ಇಲ್ಲದೆ ಕಾಯೋರು, ಕಾಯೋದು ಒಂದು ತಪಸ್ಸು....... ಇದು ಸಾಧ್ಯವಾಗೋದು ಈ ಕಾಲದಲ್ಲಿ ಕಷ್ಟ....... ನನ್ನ ಮನಸ್ಸಿಗೆ ಬಂತು, ಬರೆದು ತೆಗೆದೇ....... ನಿಜ ಮಾಡೋದು........ ಕಷ್ಟ ಕಷ್ಟ...............

    ReplyDelete
  20. ಶಿವೂ ಸರ್,
    ಕಾಯೋದು ನಿರಂತರ........ ಕಾದು ಕಾದು ಸೋತಾಗ ಪರ.... ಪರ............ ಹಾ ಹಾ ಹಾ................... ಕಾಯೋದು ಕನಸಲ್ಲಿ ........... ಕವನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ........

    ReplyDelete
  21. ದಿನಕರ್ ಸರ್ .. ಸಕ್ಕತ್ತಾಗಿದೆ .. ಬಂದೆ ಬರ್ತಾರೆ ನಿರಾಸೆ ಬೇಡ .. :D
    ಸಿಕ್ಕಾಗ ಆಗೋ ಖುಶಿಗಿಂತ ಕಾಯೋ ಖುಷಿನೇ ಚೆನ್ನಾಗಿರತ್ತೆ ಅಲ್ವಾ ?

    ReplyDelete
  22. Be Positive Sir...
    ಬಂದೆ ಬರ್ತಾಳೆ ಬಿಡಿ.. ಹೊಸ ವರ್ಷಕ್ಕೆ ಉಡುಗೊರೆಯಾಗಿ... ;)
    ಹೊಸ ವರ್ಷದ ಹಾರ್ದಿಕ ಶುಭಾಶಯಗಳು..

    ReplyDelete
  23. ರಂಜಿತ ಮೇಡಂ.
    ಹೌದು, ಕಾಯೋದರಲ್ಲಿ ಇರೋ ಸುಖ ಖುಷಿ, ಸಿಕ್ಕ ಮೇಲೆ ಇರಲ್ಲ..... ಅಭಿಪ್ರಾಯಕ್ಕೆ ಧನ್ಯವಾದಗಳು... ನಿಮಗೂ ಹೊಸ ವರ್ಷದ ಶುಭಾಶಯಗಳು.....

    ReplyDelete
  24. ಶಿವಪ್ರಕಾಶ್,
    ನಾನು ಪೊಸಿಟಿವ್ ಆಗೇ ಇರ್ತೇನೆ, ಅವಳು ವಾಪಸ್ ಬರ್ತಾಳೆ ಅಂತ ಅಲ್ಲ...... ನನಗೆ ಯಾರೂ ವಾಪಸ್ ಬರೋರು ಇಲ್ಲಪ್ಪ.... ಕೆಲವರ ಭಾವನೆ ಈ ರೀತಿ ಇರತ್ತೆ ಅಂತ ಬರೆದಿದ್ದೇನೆ ಅಷ್ಟೇ..... ವಾಪಸ್ ಬಂದರೆ ಅವರಿಗೆಲ್ಲಾ ಖುಷಿ ಆಗಬಹುದು ಆಲ್ವಾ.... ಅಭಿಪ್ರಾಯಕ್ಕೆ ಧನ್ಯವಾದಗಳು... ನಿಮಗೂ ಹೊಸ ವರ್ಷದ ಶುಭಾಶಯಗಳು.....

    ReplyDelete
  25. ಗುರು ಸರ್,
    ನಿಮಗೂ ಸಹ ಹೊಸ ವರ್ಷದ ಶುಭಾಶಯಗಳು..... ಕಾಮೆಂಟಿಸಿದ್ದಕ್ಕೆ ಧನ್ಯವಾದ.....

    ReplyDelete
  26. ದಿನಕರ್ ಅವರೇ,
    ಹೊಸ ವರ್ಷದ ಶುಭಾಶಯಗಳು.... :) ಹೊಸ ವರ್ಷದಲ್ಲಿ ನೀವು ಕಾಯ್ತಾ ಇರೋ ಹೊಸ ದಿನ ಬಂದೆ ಬರುತ್ತೆ ಎನ್ನೋ ನಂಬಿಕೆ ನನಗಿದೆ... ನಿಮಗೆ ಇದೆಯಾ...? :)
    ಕವನ ಸೂಪರ್ ಸರ್....!
    ನಿಮ್ಮವ,
    ರಾಘು.

    ReplyDelete
  27. ರಘು ಸರ್,
    ನಂಗೂ ನಂಬಿಕೆ ಇದೆ, ಹೊಸ ದಿನ ಬರತ್ತೆ ಅಂತ ..... ನಾನು ಕಾಯ್ದೆ ಇದ್ರೂ ಹೊಸ ದಿನ ಬರತ್ತೆ ಆಲ್ವಾ.....

    ReplyDelete
  28. "ಕಾದಿರುವಳು ಶಬರಿ ರಾಮ ಬರುವನೆಂದು...."... ಕವನ ಚೆನ್ನಾಗಿದೆ

    ReplyDelete
  29. ಗೋರೆ ಸರ್,
    ಕಲಿಯುಗದಲ್ಲಿ ಎಲ್ಲೂ ಶಬರಿ ಸಿಗಲ್ಲ ಆಲ್ವಾ ಸರ್.....

    ReplyDelete
  30. ಹೀಗೆ ಕಾಯುವ ನಲಿವು ನೋವಿನಲ್ಲೇ ನಮ್ಮ ಒಳ ತಾರುಣ್ಯದ ಜಾಗೃತಿ.

    ನಮ್ಮೆಲ್ಲರ ಭಾವನೆಗಳನ್ನು ಕೆಣಕುವ ಇಂತಹ ಕವನಗಳಿಗೆ ಸ್ವಾಗತ.

    ReplyDelete