Oct 31, 2009

ನಿನ್ನ ಮರೆತ ನೆನಪಿಲ್ಲ............!

ಒಬ್ಬಂಟಿಯಾಗಿ ನಡೆಯುತ್ತಿದ್ದೇನೆ,
ಬೆನ್ಹತ್ತುತ್ತಿವೆ ನನ್ನ ನೆರಳುಗಳು.....
ಸಂಜೆಯಾಗಿ ಕತ್ತಲಾಗುತ್ತಿದೆ,
ಕಾದುತ್ತಿವೆ ನಿನ್ನ ನೆನಪುಗಳು.....

ಸಂಬಂಧಗಳು ಕಡಿದಿವೆ ನಿಜ,
ನೆನಪನ್ನು ಹೇಗೆ ಮರೆಯಲಿ ಹೇಳು.....
ಮನಸ್ಸು ಮುರಿದಿದೆ ನಿಜ,
ಮನ ಹಿಗ್ಗುವ ಬಗೆ ಹೇಳು ......

ನಿನ್ನ ನೆನಪು ಮಾಡೋಣ ಎಂದರೆ ,
ಮರೆತೇ ಹೋಗುತ್ತಿಲ್ಲವಲ್ಲ....
ನನಗೆ ಅಂಥಾ ದುಃಖವಿಲ್ಲ ಎಂದರೂ,
ಸುಖದ ಸುಳಿವೇ ಇಲ್ಲವಲ್ಲ.....!

12 comments:

  1. ದಿನಕರ್ ಸರ್,

    ವಿಷಾದದ ಛಾಯೆಯಲ್ಲಿ ಭಾವನೆಗಳನ್ನು ಚೆನ್ನಾಗಿ ವ್ಯಕ್ತಪಡಿಸಿದೆ ಕವನ.

    ReplyDelete
  2. ತುಂಬಾ ಚನ್ನಾಗಿದೆ ರಿ.
    ಕಾಡುವ ನೆನಪುಗಳನ್ನು ನಿಮ್ಮ ಕವನದಲ್ಲಿ ಚನ್ನಾಗಿ ಹೇಳಿಕೊಂಡಿದ್ದಿರಿ.

    ReplyDelete
  3. ಭಾವನೆಗಳು ತು೦ಬಿರುವ ನಿಮ್ಮ ಕವನವನ್ನು ಓದುವುದೇ ಒ೦ದು ಖುಷಿ ದಿನಕರ್ ಅವರೇ...

    ReplyDelete
  4. ನೆನಪೆಂದರೆ ಅದೇ ಅಲ್ಲವೆ, ಕಾಡುವುದು?

    ReplyDelete
  5. ದಿನಕರ...

    ವಿಷಾದದ ಛಾಯೆ ನಮ್ಮನ್ನೂ ಆವರಿಸಿ ಬಿಡುತ್ತದೆ..
    ಭಾವಗಳನ್ನು ಶಬ್ಧಗಳಲ್ಲಿ ಹಿಡಿದಿಟ್ಟಿದ್ದೀರಿ...

    ಅಭಿನಂದನೆಗಳು ಚಂದದ ಕವಿತೆಗೆ...

    ReplyDelete
  6. ನೆನಪು ಏನೇ ಆಗಿರಲಿ ದುಃಖಕರ ಅಥವಾ ಸಂತೋಷಕರ ಯಾವುದೇ ಆದರು ನೆನಪು ನಮ್ಮನ್ನ ಕಾಡುತ್ತಲೇ ಇರುತ್ತದೆ. ಕವನ ತುಂಬಾ ಚೆನ್ನಾಗಿದೆ ಇಷ್ಟವಾಯಿತು
    ಕನ್ನಡ ರಾಜ್ಯೋತ್ಸವದ ಶುಭಾಶಯಗಳು

    ReplyDelete
  7. ದಿನಕರ್,
    ಈ ನೆನಪೆ ಹಾಗೆ... ಕಾಡುವುದು....
    ಚಂದದ ಕವಿತೆ...
    ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು...

    ReplyDelete
  8. ಕವನ ತು೦ಬಾ ಚೆನ್ನಾಗಿದೆ.

    ReplyDelete
  9. ದಿನಕರ್ ಅವರೇ..ಕತ್ತಲಾದಾಗಲೇ ಯಾಕೆ ಬೇಡದ ನೆನಹುಗಳು ಕಾಡುತ್ತವೆ?? ಉತ್ತರ ಕಷ್ಟ ಅಲ್ಲವೇ?

    ReplyDelete
  10. ದಿನಕರ್, ನಿರಾಸೆಯ ಛಾಯೆಯಲ್ಲೂ ಆಸೆಯ ಭಾವ ಮೂಡುವುದು ಸಹಜ..ಸರಳವಾಗಿ ಕನವಿಸಿದ್ದೀರಿ..ಶುಭವಾಗಲಿ,,,

    ReplyDelete