ಮನಸ್ಸಿನ ಮಾತುಗಳು ಮನಸ್ಸಲ್ಲೇ ಇದ್ದರೆ ಮುತ್ತುಗಳಾಗಲ್ಲ. ಎಲ್ಲೋ ಕೇಳಿದ ಕಥೆ,ಅನುಭವಿಸಿದ ವ್ಯಥೆ, ಇಷ್ಟಪಟ್ಟ ಯಾರದೋ ಸಾಲುಗಳು, ನೋಡಿದ ಸಿನೆಮಾಗಳ ಬಗ್ಗೆ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ಮನಸ್ಸಿಗೆ ತೋಚಿದ್ದನ್ನ, ನೋಡಿದ್ದನ್ನ ಬರೆಯುತ್ತೇನೆ, ನೋವನ್ನ ನಲಿವಿನಿಂದಲೇ ಹೇಳುತ್ತೇನೆ.
Oct 12, 2009
ನಾನಾ..........?
ಮನವೆಂಬ ಮರ್ಕಟವ ಕೇಳೇ ಗೆಳತಿ,
ಯಾರು ನಿನ್ನೆದೆಯ ವೀಣೆ ಮೀಟಿದವರು?
ಬೆನ್ನ ಹಿಂದಿನ ನೆರಳಂತೆಯೇ ಇದ್ದು,
ದಿನವಿಡೀ ನೆನಪಾಗಿ ಕಾಡುವವನು....
ಸುಖ ಕೂಡಿಸಿ, ದುಃಖ ವ್ಯವಕಲಿಸಿ,
ಧೈರ್ಯ ಗುಣಿಸಿ, ನೋವು ಭಾಗಿಸುವವನು...
ಹಾಸ್ಯ ಮಾತು, ನಗೆ ಚಟಾಕಿಗಳಲಿ,
ದಿನದ ಆಯಾಸ ಮರೆಸುವವನು....
ನಿನ್ನ ಉಜ್ವಲ ಭವಿಷ್ಯಕ್ಕಾಗಿ,
ತನ್ನ ವರ್ತಮಾನ ಮರೆಯುವವನು....
ಚಿತ್ರ ವಿಚಿತ್ರ ಮಾತನಾಡುತ್ತಾ,
ತಲೆಚಿಟ್ಟು ಹಿಡಿಸುವವನು.....
ಅಮ್ಮನ ಕೈಯ ಕಾಫಿಗಿಂತ,
ಮುಂಚೆಯೇ ನೆನಪಾಗುವವನು...
ಒಮ್ಮೊಮ್ಮೆ ಅತಿಯಾಯಿತೆನಿಸಿದರೂ,
ಮತ್ತೆ ಬೇಕೇ ಬೇಕೆನಿಸುವವನು........
ಯಾರೇ ..........?
Subscribe to:
Post Comments (Atom)
ಚೆನ್ನಾಗಿದೆ ಕವನ....
ReplyDeleteಉತ್ತರ ದಿನಕರ ಅನ್ನಿಸುತ್ತೆ.....?.?
This one cool :)
ReplyDeleteಸೊಗಸಾದ ಕವನ...
ReplyDeleteಸುಖ ಕೂಡಿಸಿ, ದುಃಖ ವ್ಯವಕಲಿಸಿ,
ಧೈರ್ಯ ಗುಣಿಸಿ, ನೋವು ಭಾಗಿಸುವವನು...
ಇವೆರಡು ಸಾಲಂತೂ ಸೂಪರ್...
cool.. Nice One.
ReplyDeleteI think, what Mahesh sir said is correct...
i mean... "ದಿನಕರ "
very nice!!!
ReplyDeleteyaaru..? annuva prashnege... answer nanna husband(ಸವಿಗನಸು) kottiddare hahaha
wow nice one .. keep writing ..
ReplyDeleteಕವನ ಚೆನ್ನಾಗಿದೆ ದಿನಕರರೇ.... ನಿಮ್ಮ ದಸರಾ ಹಬ್ಬದ ಚಿತ್ರಗಳೂ ಬಹಳ ಮುದ್ದಾಗಿವೆ..... ನನ್ನ ಬ್ಲಾಗ್ ಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....... ಹೀಗೇ ಬರ್ತಾಯಿರಿ......
ReplyDeleteಶ್ಯಾಮಲ
ಸೂಪರ ಕವನ ದಿನಕರ, ಉಪಯೊಗಿಸಿರು ಒಂದೊಂದು ಪದವೂ ಅರ್ಥಪೂರ್ಣ...
ReplyDeleteತಲೆ ಚಿಟ್ಟು ಹಿಡಿಸುವವನು ಅತಿಯೆನಿಸಿದರೂ ಬೇಕೆನ್ನಿಸುವವನು ಈ ಎಲ್ಲ ಸಾಲುಗಳಮ್ತೂ ಬಹಳ ಹಿಡಿಸಿದವು.
ಅಲ್ಲದೆ ಹಿಂದಿನ ಪೋಸ್ಟನಲ್ಲಿನ "ಕಣ್ಣಿರು ಕೆನ್ನೆಗೆ ಧುಮುಕಿ" ಸಾಲ್ಉ ಸಕತ್ತಾಗಿತ್ತು... ಹೀಗೆ ಬರೀತಾ ಇರಿ...
ದಿನಕರ....
ReplyDeleteತುಂಬಾ ಸೊಗಸಾಗಿದೆ...
ಉತ್ತರ ಮಹೇಶ್ ಮೊದಲೇ ಕೊಟ್ಟುಬಿಟ್ಟಿದ್ದಾರೆ....
ಇಂಥಹವನೊಬ್ಬ ಕಾಡುವದರಲ್ಲೂ ಮಜಾ ಇದೆ ಅಲ್ಲವಾ...?
ಚಂದದ ಕವನಕ್ಕೆ ಅಭಿನಂದನೆಗಳು....
ವಾಹ್... ಸು೦ದರ ಪ್ರೇಮ ಕವನ :)
ReplyDeleteದಿನಕರ ಅವರೇ...
ReplyDeleteನಿನ್ನ ಉಜ್ವಲ ಭವಿಷ್ಯಕ್ಕಾಗಿ,
ತನ್ನ ವರ್ತಮಾನ ಮರೆಯುವವನು....
ಚಿತ್ರ ವಿಚಿತ್ರ ಮಾತನಾಡುತ್ತಾ,
ತಲೆಚಿಟ್ಟು ಹಿಡಿಸುವವನು.....
ಈ ಸಾಲುಗಳು ಹಿಡಿಸಿದವು.. ನನಗೆ ಅನ್ವಹಿಸುವಂತಿವೆ ...
---ಎ.ಕಾ.ಗುರುಪ್ರಸಾದಗೌಡ.;-www.balipashu.blogspot.com.;hanebaraha@gmail.com
nice nice so nice:)
ReplyDelete