Oct 12, 2009

ನಾನಾ..........?



ಮನವೆಂಬ ಮರ್ಕಟವ ಕೇಳೇ ಗೆಳತಿ,
ಯಾರು ನಿನ್ನೆದೆಯ ವೀಣೆ ಮೀಟಿದವರು?
ಬೆನ್ನ ಹಿಂದಿನ ನೆರಳಂತೆಯೇ ಇದ್ದು,
ದಿನವಿಡೀ ನೆನಪಾಗಿ ಕಾಡುವವನು....

ಸುಖ ಕೂಡಿಸಿ, ದುಃಖ ವ್ಯವಕಲಿಸಿ,
ಧೈರ್ಯ ಗುಣಿಸಿ, ನೋವು ಭಾಗಿಸುವವನು...
ಹಾಸ್ಯ ಮಾತು, ನಗೆ ಚಟಾಕಿಗಳಲಿ,
ದಿನದ ಆಯಾಸ ಮರೆಸುವವನು....

ನಿನ್ನ ಉಜ್ವಲ ಭವಿಷ್ಯಕ್ಕಾಗಿ,
ತನ್ನ ವರ್ತಮಾನ ಮರೆಯುವವನು....
ಚಿತ್ರ ವಿಚಿತ್ರ ಮಾತನಾಡುತ್ತಾ,
ತಲೆಚಿಟ್ಟು ಹಿಡಿಸುವವನು.....

ಅಮ್ಮನ ಕೈಯ ಕಾಫಿಗಿಂತ,
ಮುಂಚೆಯೇ ನೆನಪಾಗುವವನು...
ಒಮ್ಮೊಮ್ಮೆ ಅತಿಯಾಯಿತೆನಿಸಿದರೂ,
ಮತ್ತೆ ಬೇಕೇ ಬೇಕೆನಿಸುವವನು........

ಯಾರೇ ..........?

12 comments:

  1. ಚೆನ್ನಾಗಿದೆ ಕವನ....
    ಉತ್ತರ ದಿನಕರ ಅನ್ನಿಸುತ್ತೆ.....?.?

    ReplyDelete
  2. ಸೊಗಸಾದ ಕವನ...

    ಸುಖ ಕೂಡಿಸಿ, ದುಃಖ ವ್ಯವಕಲಿಸಿ,
    ಧೈರ್ಯ ಗುಣಿಸಿ, ನೋವು ಭಾಗಿಸುವವನು...

    ಇವೆರಡು ಸಾಲಂತೂ ಸೂಪರ್...

    ReplyDelete
  3. cool.. Nice One.
    I think, what Mahesh sir said is correct...
    i mean... "ದಿನಕರ "

    ReplyDelete
  4. very nice!!!

    yaaru..? annuva prashnege... answer nanna husband(ಸವಿಗನಸು) kottiddare hahaha

    ReplyDelete
  5. ಕವನ ಚೆನ್ನಾಗಿದೆ ದಿನಕರರೇ.... ನಿಮ್ಮ ದಸರಾ ಹಬ್ಬದ ಚಿತ್ರಗಳೂ ಬಹಳ ಮುದ್ದಾಗಿವೆ..... ನನ್ನ ಬ್ಲಾಗ್ ಗೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....... ಹೀಗೇ ಬರ್ತಾಯಿರಿ......
    ಶ್ಯಾಮಲ

    ReplyDelete
  6. ಸೂಪರ ಕವನ ದಿನಕರ, ಉಪಯೊಗಿಸಿರು ಒಂದೊಂದು ಪದವೂ ಅರ್ಥಪೂರ್ಣ...
    ತಲೆ ಚಿಟ್ಟು ಹಿಡಿಸುವವನು ಅತಿಯೆನಿಸಿದರೂ ಬೇಕೆನ್ನಿಸುವವನು ಈ ಎಲ್ಲ ಸಾಲುಗಳಮ್ತೂ ಬಹಳ ಹಿಡಿಸಿದವು.
    ಅಲ್ಲದೆ ಹಿಂದಿನ ಪೋಸ್ಟನಲ್ಲಿನ "ಕಣ್ಣಿರು ಕೆನ್ನೆಗೆ ಧುಮುಕಿ" ಸಾಲ್ಉ ಸಕತ್ತಾಗಿತ್ತು... ಹೀಗೆ ಬರೀತಾ ಇರಿ...

    ReplyDelete
  7. ದಿನಕರ....
    ತುಂಬಾ ಸೊಗಸಾಗಿದೆ...
    ಉತ್ತರ ಮಹೇಶ್ ಮೊದಲೇ ಕೊಟ್ಟುಬಿಟ್ಟಿದ್ದಾರೆ....

    ಇಂಥಹವನೊಬ್ಬ ಕಾಡುವದರಲ್ಲೂ ಮಜಾ ಇದೆ ಅಲ್ಲವಾ...?

    ಚಂದದ ಕವನಕ್ಕೆ ಅಭಿನಂದನೆಗಳು....

    ReplyDelete
  8. ವಾಹ್... ಸು೦ದರ ಪ್ರೇಮ ಕವನ :)

    ReplyDelete
  9. ದಿನಕರ ಅವರೇ...

    ನಿನ್ನ ಉಜ್ವಲ ಭವಿಷ್ಯಕ್ಕಾಗಿ,
    ತನ್ನ ವರ್ತಮಾನ ಮರೆಯುವವನು....
    ಚಿತ್ರ ವಿಚಿತ್ರ ಮಾತನಾಡುತ್ತಾ,
    ತಲೆಚಿಟ್ಟು ಹಿಡಿಸುವವನು.....

    ಈ ಸಾಲುಗಳು ಹಿಡಿಸಿದವು.. ನನಗೆ ಅನ್ವಹಿಸುವಂತಿವೆ ...


    ---ಎ.ಕಾ.ಗುರುಪ್ರಸಾದಗೌಡ.;-www.balipashu.blogspot.com.;hanebaraha@gmail.com

    ReplyDelete