Sep 12, 2009

ಧಿಕ್ಕಾರ.......ಧಿಕ್ಕಾರ.....

ಚರ್ಚ್ , ಪಬ್ ದಾಳಿಯ ನಂತರ ಈಗ ಮಂಗಳೂರಲ್ಲಿ ಸುದ್ದಿ ಮಾಡ್ತಾ ಇರೋದು , ರಸ್ತೆ ಬದಿಯ ಮರಗಳನ್ನು ಕಡಿಯುವ ಬಗ್ಗೆ.... ಸಾಧಾರಣವಾಗಿ ಮಂಗಳೂರಿನ ಎಲ್ಲ ರಸ್ತೆಗಳು ಸಿಮೆಂಟಿನ ರಸ್ತೆಗಳಾಗುತ್ತಿವೆ.... ನಿಮಗೆ ಗೊತ್ತಿರುವ ಹಾಗೆ ಸಿಮೆಂಟಿನ ರಸ್ತೆಗಳು ವಾತಾವರಣವನ್ನ ತುಂಬಾ ಬಿಸಿಯಾಗಿಸುತ್ತವೆ..... ನಮ್ಮ ಹಿರಿಯರು ನಮ್ಮ ಹಿತಕ್ಕಾಗಿ , ನಮ್ಮ ಒಳಿತಿಗಾಗಿ ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಟ್ಟಿದ್ದರು. ಅವು ಈಗ ಮರಗಳಾಗಿವೆ... ತಂಪನ್ನು ನೀಡುತ್ತಿವೆ... ಮಂಗಳೂರಿನ ನಗರದ ರಸ್ತೆಗಳ ಎರಡು ಬದಿಗಳಲ್ಲಿ ವೆಹಿಕಲ್ ಪಾರ್ಕ್ ಮಾಡಲು ಕೊಟ್ಟು ಹಣ ವಸೂಲಿ ಮಾಡುತ್ತಾರೆ....ಹೀಗೆ ರಸ್ತೆ ಬದಿಗಳಲ್ಲಿ ವೆಹಿಕಲ್ ಪಾರ್ಕ್ ಮಾಡಲು ಬಿಡುವುದೇ ಆದರೆ, ಅದೇ ಬದಿಗಳಲ್ಲಿ ತಮ್ಮ ಪಾಡಿಗೆ ತಾವಿರುವ ಮರಗಳನ್ನು ಕಡಿಯುವ ಯೋಚನೆಯಾದರು ಯಾಕೆ ಅಂತ.....ನಮಗೆ ನೆರಳು, ತಂಪನ್ನು ಕೊಡುವ ಮರಗಳನ್ನು ಕತ್ತರಿಸುವ ನಿರ್ಧಾರಕ್ಕೆ ಬರುತ್ತಾರೆ ಅಂದರೆ ಅವರನ್ನು ದೇವರೇ ಕಾಪಾಡಲಿ..... ಅಕಸ್ಮಾತ್ ಮರಗಳು ರಸ್ತೆ ಮಧ್ಯದಲ್ಲಿದ್ದರೆ ಕಡಿಯಲಿ ಆದರೆ ರಸ್ತೆಯ ಬದಿಯಲ್ಲಿದ್ದು , ರಸ್ತೆಯ ಅಂದ , ಜನರ ಆರೋಗ್ಯ ಹೆಚ್ಚಿಸುವ ಮರಗಳನ್ನು ಕದಿಯುತ್ತಾರೆ ಎಂದರೆ ಅವರಿಗೊಂದು ಧಿಕ್ಕಾರವಿರಲಿ.... ಮೊನ್ನೆ 'ವಿಜಯ ಕರ್ನಾಟಕ'ದಲ್ಲಿ ಒಂದು ಧುಕ್ಖದ ಸುದ್ದಿ ಓದಿದೆ..., ಯಾರೋ ಪುಣ್ಯಾತ್ಮರು ಈ ಸಮಸ್ಯೆಯನ್ನು ನಿವಾರಿಸಲು ಹೊಸ ಮಾರ್ಗ ಕಂಡುಕೊಂಡಿದ್ದಾರೆ... ಅದೇನೆಂದರೆ ಮರಕ್ಕೆ ಚಿಕ್ಕಚಿಕ್ಕ ಹೋಲ್ ಮಾಡಿ ಅದರಲ್ಲಿ ಇಂಗನ್ನು ತುಂಬಿಸಿದ್ದಾರೆ.... ಹೀಗೆ ಮಾಡಿದರೆ ಮರ ಕ್ರಮೇಣ ಒಣಗಿ ಸತ್ತು ಹೋಗುತ್ತವೆ..... ಎಂತಾ ಕೆಟ್ಟ ಜನರಲ್ಲವೆ....ಒಂದು ಗಿಡ ಮರವಾಗಲು ಹದಿನೈದು ವರ್ಷವಾದರೂ ಬೇಕು...ಅಧಿಕಾರದಲ್ಲಿರುವ ಜನ ಈ ರೀತಿ ಮರಗಳನ್ನು ಹೋದರೆ, ತಮ್ಮ ಮುಂದಿನ ಸಂತತಿಗಳಿಗೆ ಆಮ್ಲಜನಕವನ್ನು ಅಮೆರಿಕದಿಂದಲೇ ಆಮದು ಮಾಡಿಕೊಳ್ಳುತ್ತಾರೋ ನೋಡಬೇಕು....ಮರಗಳನ್ನು ಹೀಗೆ ಸಾಯಿಸಿರುವ ಕೆಲಸ ಮಾಡಿದ ಪಾಪಿಗಳಿಗೆ ದೇವರು ನೂರು ಗಿಡಗಳನ್ನು ನೆಡುವ ಬುದ್ದಿ ಕೊಡಲಿ ಎಂದು ಹಾರೈಸುತ್ತೇನೆ......

No comments:

Post a Comment