Sep 10, 2009

ಇನ್ನೊಮ್ಮೆ ಬಾ......!

'ಸಾರೆ ಜಹಾಂಸೇ ಅಚ್ಚಾ........' ನನ್ನ ಕಾರ್ ಹಿಂದಕ್ಕೆ ಬರ್ತಾ ಇತ್ತು... ಮನೆಗೆ ಹೋಗಲು ಕಾರನ್ನು ಹಿಂದಕ್ಕೆ ತೆಗಿತಾ ಇದ್ದೆ, ತುಂಬಾ ಮಳೆ ಬರ್ತಾ ಇತ್ತು.... ಗೊತ್ತಲ್ಲ, ಕರಾವಳಿಯ ಮಳೆ ಹೇಗಿರತ್ತೆ ಅಂತ....ಕಾರ್ ಹಿಂದೆ ನಿಂತು ಆಟೋಗೆ ಕಾಯುತ್ತಿದ್ದ ಹುಡುಗಿಗೆ ಡಿಕ್ಕಿ ಹೊಡೆದಾಗಲೇ ನನ್ನ ಕಾರಿನ 'ಸಾರೆ ಜಹಾಂಸೇ ಅಚ್ಚಾ' ಮ್ಯೂಸಿಕ್ ನಿಂತದ್ದು....ತಕ್ಷಣ ಕೆಳಗಿಳಿದು ನೋಡಿದರೆ.....ದಿನಾಲೂ ಬೆಳಿಗ್ಗೆ ನಾನು ಕಾರ್ ಪಾರ್ಕ್ ಮಾಡುವಾಗ 'ಗುಡ್ ಮಾರ್ನಿಂಗ್ ಸರ್' ಎನ್ನುತ್ತಾ ಅವಳಷ್ಟೇ ಮುದ್ದಾದ ಸ್ಕೂಟಿ ಪಾರ್ಕ್ ಮಾಡುತ್ತಾ ಸ್ವೀಟ್ smile ಎಸೆಯುತ್ತಿದ್ದ ಹುಡುಗಿ......! 'ಸಾರೀ ಕಣ್ರೀ, ನಂಗೆ ಕಾಣಿಸಲೇ ಇಲ್ಲ, ಏನಾದ್ರೂ ಪೆಟ್ಟು ಬಿತ್ತಾ ' ಎಂದೆ . ...'ಏನೂ ಇಲ್ಲ ಸರ್, ನನ್ನ ಸ್ಕೂಟಿ ಕೈಕೊಟ್ಟಿದೆ, ಅದ್ಕೆ ಆಟೋಗಾಗಿ ಕಾಯ್ತಾ ಇದ್ದೆ...' ಅಂದಳು ಹುಡುಗಿ....ಆಗ ನಾನು 'ಹೆದರಬೇಡಿ, ನಾನು ನಿಮ್ಮನ್ನು ಮನೆಗೆ ಡ್ರಾಪ್ ಮಾಡಿ ಹೋಗುತ್ತೇನೆ' ಎಂದೇ.... ಹುಡುಗಿ, 'ಥಾಂಕ್ ಯು ಸರ್' ಎನ್ನುತ್ತಾ ನನ್ನ ಪಕ್ಕದ ಸೀಟಿನಲ್ಲಿಯೇ ಕುಳಿತಳು.ನನ್ನ ಮನಸ್ಸು ಆಗಲೇ ದೂದ್ ಪೇಡಾ ತಿನ್ನೋಕೆ ಶುರು ಮಾಡಿತ್ತು..... ಯಾವಾಗಲು ಏನೂ ಮಾತಾದದಿದ್ದ ಹುಡುಗಿ ಇವತ್ತು ವಟ....ವಟ....ಮಾತಾಡುತ್ತಿತ್ತು. ಅವಳ ಊರು, ಅವಳ ಕೆಲಸ ಅದು...ಇದು...ಅಂತ ಮಾತಾಡುತ್ತಲೇ ನನ್ನೆಡೆಗೆ, ಸ್ಮೈಲ್ ಸ್ಮೈಲ್ ಕೊಡುತ್ತಿದ್ದಳು.... ನಾನಂತೂ ಫುಲ್ ಖುಷ್... ಆಕಸ್ಮಿಕವಾಗಿ ಸಿಕ್ಕ ಈ ಕಂಪನಿಗೆ ನಾನು ಖುಷಿಯಾಗಿದ್ದೆ. ಹೊರಗಡೆ ಜೋರಾಗಿ ಮಳೆಯಾಗುತ್ತಿದ್ದರೆ, ನನ್ನ ಮೈ ಬಿಸಿಯಾಗುತ್ತಿತ್ತು....ಅಷ್ಟರಲ್ಲಿ ಅವಳ ಮನೆ ಬಂತು... 'please ಸರ್,ನನ್ನ ಮನೆಯಲ್ಲಿ ಒಂದು ಕಪ್ ಕಾಫಿ ಕೊಡಿದು ಹೋಗಿ ಸರ್' ಎಂದಿತು ಹುಡುಗಿ.....ನಾನುe ಆಗಲೇ ' ಬೇಡ ....ಬೇಡ.....ಇನ್ಯಾವತ್ತಾದರೂ ......' ಎನ್ನುತ್ತಲೇ ಅವಳ ಮನೆ ಬಾಗಿಲಲ್ಲಿ ನಿಂತಿದ್ದೆ .....ಅವಳು ಕೀನಿಂದ ಬಾಗಿಲು ತೆಗೆದಾಗಲೇ ಗೊತ್ತಾಗಿದ್ದು, ಅವಳ ಮನೆಯಲ್ಲಿ ಬೇರೆ ಯಾರೂ ಇಲ್ಲ ಎಂದು....ನನ್ನ ಬಾಯಿ ಮಾತ್ರ..' ನೀವು ಒಬ್ಬರೇ ಇದ್ದಿರಾಂತ ಕಾಣ್ಸತ್ತೆ, ನಾನು ಇನ್ಯಾವತ್ತಾದರು ಬರ್ತೇನೆ' ಅನ್ನುತ್ತಿತ್ತದರೂ ....ಕಳ್ಳ ಮನಸ್ಸು ಮಾತ್ರ ಡಾನ್ಸ್ ಮಾಡುತ್ತಿತ್ತು......ಒಳಗೆ ಹೋಗಿ ಸೋಫಾ ಮೇಲೆ ಕುಳಿತೆ.... 'ಸರ್, ಟವೆಲ್ ಏನಾದರು ಕೊಡ್ಲಾ, ನಿಮ್ಮ ತಲೆ ಒದ್ದೆಯಾಗಿದೆ ಅಂದಳು...'ಏನೂ ಬೇಡ, ನಾನು ಮನೆಗೆ ಹೋಗಬೇಕು' ಎಂದೇ. 'ಇಲ್ಲ ಸರ್, ನೀವು ಇಲ್ಲೇ ಊಟ ಮಾಡಿ ಹೋಗಬೇಕು. ನಾನು ಡ್ರೆಸ್ ಚೇಂಜ್ ಮಾಡಿಕೊಂಡು ಬರುತ್ತೇನೆ, ' ಎಂದು ಒಳಗೆ ಹೋದಳು. ನನ್ನ ಮನಸ್ಸು ಆಗಲೇ "ಹಂ ತುಂ ಏಕ್ ಕಮರೆಮೆ ಬಂದ್ ಹೋ" ಎಂದು ಹಾಡಲು ಶುರು ಮಾಡಿತ್ತು ..... ಡ್ರೆಸ್ ಚೇಂಜ್ ಮಾಡಿ ಬಂದ ಹುಡುಗಿ ಜೂಹಿ ಚಾವ್ಲ ಹಾಗೆ ಮುದ್ದಾಗಿ ಕಾಣುತ್ತಿದ್ದಳು...ಒಂದು ಕೈಯಲ್ಲಿ ಕಾಫಿ ಇನ್ನೊಂದು ಕೈಯಲ್ಲಿ ಟವೆಲ್ ಇತ್ತು..... ಅವಳ ಬಿಸಿ ಉಸಿರು ನನ್ನ ಮುಖಕ್ಕೆ ತಾಕುತ್ತಿತ್ತು....ಒದ್ದೆ ತಲೆಯಲ್ಲಿ ಬಿಸಿ ಬಿಸಿ ಯೋಚನೆ......ತಲೆ ಒರೆಸಿಕೊಂಡು ಟವೆಲ್ ವಾಪಸ್ ಕೊಟ್ಟೆ....ಇನ್ನೊಂದು ಕೈಯಿಂದ ಕಾಫಿ ತೆಗೆದುಕೊಳ್ಳುವಾಗ ಅವಳ ಕೈ ನನ್ನ ಕೈಯಲ್ಲಿತ್ತು..... ಅವಳು ಹತ್ತಿರ ಬಂದಳು..... ಕೈಯಲ್ಲಿ ಕಾಫಿ.....ಮನಸಲ್ಲಿ ದೂದ್ ಪೇಡ.... ಅವಳ ಮುಖ ,ನನ್ನ ಮುಖದ ಎದುರು..........ನಾನು ಹತ್ತಿರ ಹೋದೆ....... ಅವಳೂ ಹತ್ತಿರ ಬಂದಳು ........ಕೈಯಲ್ಲಿದ್ದ ಬಿಸಿ ಬಿಸಿ ಕಾಫಿ ನನ್ನ ಮೈ ಮೇಲೆ............. 'ಅಯ್ಯೋ ಅಮ್ಮಾ' ಅಂದು ಕಿರುಚಿದೆ........... 'ಏನಾಯ್ತುರೀ ...... ರೀ... ಏನಾಯ್ತು...'... ಕಣ್ ಬಿಟ್ಟೆ..... .......ನನ್ನ ಹೆಂಡತಿ ಎಬ್ಬಿಸಿ ಕೇಳ್ತಾ ಇದ್ದಳು.....'ಏನಾಯ್ತು, ಯಾಕೆ ಕೂಗ್ತಾ ಇದ್ದೀರಾ...' 'ಏನಿಲ್ಲಾ ಕನಸು ಅಷ್ಟೆ' ಮಗ್ಗಲು ಬದಲಿಸಿ ಮಲಗಿದೆ, ಕನಸಾದರೂ ಮುಂದುವರಿಯಲಿ ಎಂದು...........

3 comments:

  1. This comment has been removed by the author.

    ReplyDelete
  2. ಈ ಕನಸುಗಳೇ ಹೀಗೆ ಯಾವಾಗಲು ಅರ್ಧಕ್ಕೇ ನಿಲ್ಲುತ್ವೆ...!!

    ReplyDelete
  3. ಹ್ಹಾ ಹ್ಹಾ ಹ್ಹಾ.... ಸಕತ್ ಆಗಿದೆ ಕನಸು... :D

    ReplyDelete