Dec 20, 2018

ಬಿದ್ದ ಹಲ್ಲು- ಗೆದ್ದ ಮಗಳು..!!!


ಬಿದ್ದೋಯ್ತಲ್ಲೇ ಅಮ್ಮ ನನ್ ಹಲ್ಲು...
ಮತ್ತೆ ಬರಲ್ವಾ..?
ಹೀಗೇ ಬೊಚ್ ಬಾಯಾ ಹೇಗೆ?
ಕಚ್ಚಲಿ ಹೇಗೇ ಸೇಬು
ಕಡಿಯಲಾಗದು ಕಬಾಬೂ!
ಬೇಕೇ ಬೇಕು ಈಗ್ಲೇ ನನ್ ಹಲ್ಲು

ಓ ಅಂತ ಅತ್ತಳು ಮಗಳು
ಅಮ್ಮನಿಗೋ ದಿಗಿಲು

ಮಗಳೇ... ಈ ಹಲ್ಲು ಹಳತು..
ಇದು ಬಿದ್ದರೆ, ಬರತ್ತೆ ಹೊಸತು..
ದೇವಲೋಕದ ‘ಪರಿ’ ಬಂದು ಕೊಡ್ತಾಳೆ ಹೊಸತು

ತರಕಾರಿ ತಿಂದರೆ ಮಗಳೇ
ಬಿಟ್ಟರೆ ತಂಟೆಯು ರಗಳೇ
ಬರುತಾಳೆ ಕನಸಲಿ  ‘ಪರಿ’
ಬಿದ್ದ ಹಲ್ಲಿನ ಬದಲು ಕೊಡ್ತಾಳೆ ಚಿನ್ನದ ಹಲ್ಲು...

ಯೋಚನೆಗೆ ಬಿದ್ದಳು‌ ಪೋರಿ,
ನಾಲಿಗೆ ಹೊರಳಿಸಿ ಹಲ್ಲ ಸಂದಿಗಳಲಿ

ಅಮ್ಮಾ ನನ್ನ ಹಲ್ಲು ನನಗೇ ಬರಲಿ
ಚಿನ್ನದ ಹಲ್ಲು ಅವಳಲ್ಲಿರಲಿ
ದಿನಾ ಹೋಂವರ್ಕನ್ನ ಮಾತ್ರ
ಪ್ಲೀಸ್ ಪ್ಲೀಸ್ ಅವಳೇ ಬರ್ಕೊಡಲಿ...

( ನಾನು ಬರೆದ ಸಾಧಾರಣ ಕವನಕ್ಕೆ ಬಂಗಾರದ ರಂಗು ಕೊಟ್ಟವರು ಬದರಿನಾಥ್ ಪಲವಳ್ಳಿಯವರು..)

2 comments:

  1. ಮನಮುಟ್ಟಿದ concept ಸಾರ್.
    ಪರಿಸ್ಥಿತಿಯ ಲಾಭ ಪಡೆಯಲು ಅಮ್ಮನೇ ಚಾಲಾಕಿತನ ಉಪಯೋಗಿಸಿದರೇ. ಮಗಳು ಆಕೆಗಿಂತ updated, ಎಂತಹ idea ಕಂಡುಕೊಂಡಳು!

    ReplyDelete
  2. Wow...sundara kavite.. sogasaagide.. Badari Sir touch kottiddare andre.. adu mast..

    ReplyDelete