Jan 14, 2011

ಸಭೆಯ ಆಭಾಸ....!

ಸರಿಯಾಗಿ ನಾಲ್ಕು ವರ್ಷದ ಹಿಂದೆ ನಡೆದ ಘಟನೆಯಿದು....

ನಮ್ಮ ಊರಲ್ಲಿ ಪ್ರತಿ ವರ್ಷ ಮಕರ ಸಂಕ್ರಮಣದ ಮಾರನೇ ದಿನ ಸಂಜೆ ನಮ್ಮೂರ ಯುವಕ ಮಂಡಲದ ಯುವಕರು , ಯುವತಿಯರು ಎಲ್ಲಾ ಸೇರಿ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಸಿಕೊಡುತ್ತಾರೆ..... ಆ ದಿನ ರಾತ್ರಿ ಯಾವುದೇ ಊರಲ್ಲಿದ್ದರೂ , ಎಷ್ಟೇ ದೂರದಲ್ಲಿದ್ದರೂ ನಮ್ಮೂರ ಯುವಕರು ಬಂದೇ ಬರುತ್ತಾರೆ..... ಆ ಒಂದು ದಿನ ಎಲ್ಲಾ ಸೇರಿ ತಮ್ಮ ಸಂತಸ, ಕಲೆಗಾರಿಕೆ ತೋರಿಸಿಕೊಂಡು ಸಂತಸ ಪಡುತ್ತಾರೆ.... ಚಿಕ್ಕ ಚಿಕ್ಕ ಮಕ್ಕಳ ಡಾನ್ಸ್, ಯುವಕರ ಕಿರು ನಾಟಕ , ಕೊನೆಯದಾಗಿ ಪ್ರಸಿದ್ದ ನಾಟಕ ಕಂಪನಿಯಿಂದ ಬೆಳಗಿನ ತನಕ ನಡೆಯುವ ನಾಟಕ ಪ್ರದರ್ಶನ ಇರುತ್ತದೆ.....

ಆ ದಿನ ನನಗೆ ತುಂಬಾ ಖುಷಿಯಾಗಿತ್ತು...... ಯಾಕೆಂದರೆ ಆ ದಿನ ನಮ್ಮೂರ ಕ್ಷೌರಿಕನಿಗೆ ಸನ್ಮಾನ ನಡೆಯುವುದಿತ್ತು.... ಆತ ನಾನು ಹುಟ್ಟಿದಾಗಿನಿಂದ ನಮ್ಮೂರಲ್ಲೇ ಅಂಗಡಿ ಮಾಡಿಕೊಂಡು ಇದ್ದರು....  ನಮ್ಮ ಊರಿಗೆ ಮಾಡಿದ ಸೇವೆಗೆ ನಮ್ಮ ಸಣ್ಣದೊಂದು ಸನ್ಮಾನ ಮಾಡೋದು ನಿರ್ಧಾರವಾಗಿತ್ತು....ಇದು ನನ್ನ ಗೆಳೆಯನ ಯೋಚನೆಯಾಗಿತ್ತು..... ಆತನ ಯೋಚನೆ ಮತ್ತು ಯೋಜನೆ ವಿಭಿನ್ನವಾಗಿರುತ್ತಿತ್ತು..... ಉದಾಹರಣೆಗೆ..... ರಕ್ತದಾನ ಮಾಡಿದವರಿಗೆ ವೇದಿಕೆಗೆ ಕರೆದು ಸನ್ಮಾನ ಮಾಡಿ ಧನ್ಯವಾದ ಹೇಳೋದು, ನಮ್ಮೂರಿಗೆ ಹೊಸದಾಗಿ ಮದುವೆಯಾಗಿ  ಬಂದ ಮದುವಣಗಿತ್ತಿಗೆ ವೇದಿಕೆಗೆ ಕರೆದು ಹೂವು ಕೊಟ್ಟು ಸ್ವಾಗತ ಮಾಡೋದು, ಸರ್ಕಾರದ ಸವಲತ್ತು ಜನರಿಗೆ ಮುಟ್ಟಿಸೋದು, ರಂಜನೆಯ ಜೊತೆ ಸಣ್ಣಪುಟ್ಟ ಆಟ....

ನಾನು ಊರಿನ ಹುಡುಗರಿಂದ ಸ್ವಲ್ಪ ದೂರವೇ ಇರುತ್ತಿದ್ದೆ.......  ಇದ್ದ ಒಂದಿಬ್ಬರು ಗೆಳೆಯರ ಜೊತೆಯೇ ನನ್ನ ಒಡನಾಟ ಇರುತ್ತಿತ್ತು.... ಈ ಸಾರಿ ಮಾತ್ರ ನನ್ನ ಆ ಗೆಳೆಯನ ಒತ್ತಾಸೆಗೆ ಮಣಿದು ನಾನು ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದೆ.... ಗೆಳೆಯ ನನಗಾಗಿ ಕೆಲವು ಪ್ರಮುಖ ಕೆಲಸ ವಹಿಸಿದ್ದ..... ಅದೇನೆಂದರೆ ..... ಕಾರ್ಯಕ್ರಮ ನಡೆಯುತ್ತಾ ಇರುವಾಗ ಅದಕ್ಕೊಪ್ಪುವ ಸಂಗೀತದ c . d play  ಮಾಡೋದು.... ಸನ್ಮಾನ ನಡೆಯುವಾಗ ತಬಲಾ, ವಾಯೋಲಿನ್ ಸಂಗೀತ play  ಮಾಡಬೇಕಿತ್ತು ....  ಆ ದಿನ ನಾಲ್ಕೈದು ಸ್ಕಿಟ್ ಸಹ ಇತ್ತು... ಅದರಲ್ಲಿ ಮಧ್ಯೆ ಮಧ್ಯೆ ಸಿನೆಮಾ ಹಾಡು ಪ್ಲೇ ಮಾಡಬೇಕಿತ್ತು....ಗೆಳೆಯ ಮತ್ತು ನಾನು ಮೊದಲೇ ಹಾಡನ್ನೆಲ್ಲಾ ರೆಕಾರ್ಡ್ ಮಾಡಿಕೊಂಡಿದ್ದೆವು.... ಆದರೆ... ಒಂದು ಎಡವಟ್ಟು ಆಗಿತ್ತು.......

ಆದದ್ದೇನೆಂದರೆ .... ಮೊದಲು ಪ್ಲೇ ಆಗಬೇಕಾದ ಹಾಡು ಹತ್ತನೆಯದಾಗಿತ್ತು... .... .... ಸಾಂಗ್ ಸೆಲೆಕ್ಟ್ ಮಾಡಿ ಪ್ಲೇ ಮಾಡಬೇಕಾಗಿತ್ತು.... ಲ್ಯಾಪ್ಟಾಪ್ ಇದ್ದರೆ ಸುಲಭ.... ಆದ್ರೆ ಬರಿಯ D . V .D  PLAYER display ನೋಡಿ ಪ್ಲೇ ಮಾಡಬೇಕಾಗಿತ್ತು..... ಒಂದರಿಂದ ಕೊನೆಯ ತನಕ ಇರುವ ಎಲ್ಲಾ ಹಾಡುಗಳ ಲಿಸ್ಟ್ ಬರೆದಿಟ್ಟುಕೊಂಡಿದ್ದೆ ಕೂಡ......ನನಗೆ ಇದು ಹೊಸ ಕೆಲಸವಾಗಿತ್ತು.... ಗಲಿಬಿಲಿಯಾಗಿದ್ದೆ..... ಗೆಳೆಯನ ಪ್ರೋತ್ಸ್ಹಾಹ ,ಧೈರ್ಯ ನನ್ನ ಜೊತೆ ಇತ್ತು....

ಕಾರ್ಯಕ್ರಮ ಶುರುವಾಗುವುದರಲ್ಲಿತ್ತು.... ಗೆಳೆಯನ ಸೊಗಸಾದ ನಿರೂಪಣೆ ಮಾಡುತ್ತಿದ್ದ.... ಹಿನ್ನೆಲೆ 
ಸಂಗೀತವಾಗಿ ಸಂತೂರ್ ವಾದನದ C .D ಮೆಲ್ಲನೆ ನುಡಿಸಿದ್ದೆ....ಮುಂದಿನ ಕಾರ್ಯಕ್ರಮ ಸನ್ಮಾನವಾಗಿತ್ತು.... ಅದರ ಸಂಗೀತದ C .D ರೆಡಿ ಮಾಡಿ ಇಟ್ಟಿದ್ದೆ.... ಸನ್ಮಾನ ಮಾಡಿಸಿಕೊಳ್ಳುವ , ಮಾಡುವ ಗಣ್ಯರು ವೇದಿಕೆ ಹತ್ತುತ್ತಿದ್ದರು... ಗೆಳೆಯ ನನ್ನ ಕಡೆ ಸನ್ನೆ ಮಾಡಿದ.... ನಾನು ರೆಡಿ ಮಾಡಿ ಇಟ್ಟಿದ್ದ ಸಂಗೀತ ಪ್ಲೇ ಮಾಡಿದೆ...... ... ಸಮಾರಂಭ ಎಂದರೆ ರಾಜಕೀಯದವರು ಇದ್ದೇ ಇರುತ್ತಾರೆ ಅಲ್ಲವೇ..... ? ಒಂದಿಬ್ಬರು ಅಲ್ಲೂ ಇದ್ದರು..... ನನಗೆ ಪರಿಚಯದವರೇ ಆಗಿದ್ದರು..... ಸನ್ಮಾನ ಅಭೂತಪೂರ್ಣವಾಗಿತ್ತು.... ಯಾರು ಗುರುತಿಸದಿದ್ದರೂ ತನ್ನ ಕೆಲಸ ತಾನು ಮಾಡುತ್ತಾ ಇದ್ದ ನನ್ನೂರಿನ ಕ್ಷೌರಿಕ ತನಗೆ ಸಿಕ್ಕ ಗೌರವಕ್ಕೆ  ಭಾವುಕನಾಗಿದ್ದ.... ನನ್ನ ಮನಸ್ಸು ಭಾರವಾಗಿತ್ತು......

ನನ್ನ ಮನಸ್ಸು
  ಆಗಲೇ ಮುಂದಿನ ಕಾರ್ಯಕ್ರಮಕ್ಕೆ ತಯಾರಾಗುತ್ತಿತ್ತು.... D .V .D player ನಲ್ಲಿ ಎರಡು C .D  ಒಮ್ಮೆಲೇ ಹಾಕಬಹುದಾಗಿತ್ತು....ಒಂದರಲ್ಲಿ ಮೆಲುವಾಗಿ ಸಂತೂರ ವಾದನ ಬರುತ್ತಿತ್ತು..... ಇನ್ನೊಂದು C .D ಹಾಕಿ ತಯಾರಾಗಿರೋಣ ಎಂದುಕೊಂಡು ಎರಡನೇ C .D ಹಾಕೋದಕ್ಕೂ ........ ವೇದಿಕೆಯ ಮೇಲೆ ರಾಜಕೀಯ ವ್ಯಕ್ತಿಯೊಬ್ಬರು ಅನಿಸಿಕೆ ಹಂಚಿಕೊಳ್ಳಲು ಮೈಕ್ ಹಿಡಿಯುವುದಕ್ಕೂ ಸರಿ ಹೋಯಿತು.... ನಾನು ವೇದಿಕೆಯ ಕಡೆ ಗಮನ ಕೊಡುತ್ತಾ ಇರುವಾಗಲೇ ಅಚಾನಕ್ಕಾಗಿ C .D ಪ್ಲೇ ಆಗಿ ಬಿಟ್ಟಿತ್ತು.....ಅದರಲ್ಲೂ ಮೊದಲಿನ ಸಾಂಗ್ full volumn ನೊಂದಿಗೆ...... ನನಗೆ ತುಂಬಾ ನಗು ಬಂದಿತ್ತು.....  ಆ ಹಾಡು ಸಂದರ್ಭಕ್ಕೆ   ಸರಿಹೊಂದುತ್ತಿತ್ತು.... ನನ್ನ ಗೆಳೆಯ ನನ್ನನ್ನೇ  ತಿನ್ನುವಂತೆ  ನೋಡುತ್ತಿದ್ದ....ಹಾಡನ್ನು ನಿಲ್ಲಿಸುವಂತೆ ಕೂಗುತ್ತಿದ್ದ...ಪಕ್ಕದಲ್ಲಿದ್ದ ಸೌಂಡ್ ಅರೆಂಜೆರ್ ಹಾಡನ್ನ ನಿಲ್ಲಿಸಿದ್ದ... ಅಷ್ಟಕ್ಕೂ ಪ್ಲೇ ಆದ ಹಾಡು ಯಾವುದು ಗೊತ್ತಾ....?      " WHO LET THE DOG OUT ...... ವೌ......ವೌ.... ವೌ...."

ಇಂದಿಗೂ ಆ ಹಾಡು ಕೇಳಿದರೆ ಇದೆಲ್ಲಾ ನೆನಪಾಗುತ್ತದೆ.....
  ಗೆಳೆಯ ನೆನಪಾಗುತ್ತಾನೆ... ನಗು ಬರುತ್ತದೆ.....  

28 comments:

 1. 'who let the dog out!wou!wou!.......ha ..ha sooper!:-)

  ReplyDelete
 2. hahaha... super ide samayakke takkada haaDu...

  sankrati shubhashyagaLu

  ReplyDelete
 3. ದಿನಕರ್ ಸಾಹೇಬರೇ, ಗಂಭೀರ ಹಾಸ್ಯಮಾಡಿದ್ದೀರಿ, ಸಂಕ್ರಮಣದ ಹಾರ್ದಿಕ ಶುಭಾಶಯಗಳು.

  ReplyDelete
 4. ಹ..ಹ..ಹ...ದಿನಕರ್ ಸರ್,

  ಲೇಖನ ಓದಿ ಸಕ್ಕತ್ ನಗುಬಂತು ಗೊತ್ತಾಗದೇ ಮಾಡಿದರೂ ಅದು ಹೆಚ್ಚು ಸೂಕ್ತವಾಗಿದ್ದು ಸೂಪರ್ ಅನ್ನಿಸುತ್ತೆ ಅಲ್ವಾ..ಹಳೆಯ ನೆನಪು ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್.

  ReplyDelete
 5. ಹ್ಹ ಹ್ಹ ಹ್ಹ...ದಿನಕರ್ ಸರ್, ಆ ಸಂದರ್ಭದಲ್ಲಿ ನಿಮ್ಮ ಪರಿಸ್ಥಿತಿ ಹೇಗಾಗಿರಬೇಡ ಎಂದು ಯೋಚಿಸಿ ತುಂಬಾ ನಗು ಬಂತು. ಚೆನ್ನಾಗಿದೆ ಲೇಖನ.

  ReplyDelete
 6. ಹೋ ಹೋ ಹೋ ಚೆನ್ನಾಗಿದೆ ದಿನಕರ್ ಸರ್.

  ರಾಜಕಾರಣಿಗಳಿಗೆ ಹೇಳಿ ಮಾಡಿಸಿದ ಹಾಡು.

  ReplyDelete
 7. ದಿನಕರ್,
  ತುಂಬಾ ದಿನದ ನಿಮ್ಮ ಲೇಖನ ಬಂದಿದೆ.
  ನೀವು ಬೇಕಂತಲೇ ಮಾಡದಿದ್ದರೂ, ನೀವು ಹಾಕಿದ ಹಾಡಿಗೆ ಎಲ್ಲರ ಸಮ್ಮತವಿತ್ತು !

  ReplyDelete
 8. ದಿನಕರ ಮೊಗೇರ.. ,

  ಹ.. ಹ.. ಹ..
  ಸೂಪರ್..

  ReplyDelete
 9. dinakar sir.. modalinda full series agi odide...

  last songs odbittu bejan nakkide sir...

  super agide sir...

  ReplyDelete
 10. ಒಳ್ಳೇ ಫಜೀತಿ... :)

  ನಗು ತರಿಸಿತು :)

  ReplyDelete
 11. ದಿನಕರ್ ಸರ್ ತುಂಬಾ ನಗು ಬಂತು . ಸರಿಯಾದ ಸಮಯಕ್ಕೆ ಸರಿಯಾದ ಹಾಡು ,ಅಚಾತುರ್ಯವೆನ್ನಿಸಿದರೂ ಸಂಧರ್ಬಕ್ಕೆ ಹೊಂದಿಕೊಂಡಿದೆ ಹೋಗ್ಲಿಬಿಡಿ.ಪುಣ್ಯಕ್ಕೆ ವೇದಿಕೆ ಮೇಲಿದ್ದವರು ನಿಮ್ಮನ್ನು ಕಚ್ಚಲಿಲ್ಲವಲ್ಲಾ ಅದೇ ಪುಣ್ಯ ಹ ಹ ಹ .

  --
  ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

  ReplyDelete
 12. ದಿನಕರ್ ಅವರೇ,
  ಮಜವಾಗಿದೆ ನಿಮ್ಮ ಅನುಭವ :)

  ReplyDelete
 13. ಗಣಕ ಯಂತ್ರದ ತೊಂದರೆಯಿಂದಾಗಿ ಒಂದು ವಾರ ಅಂತರಜಾಲಕ್ಕೆ ಬರಲಾಗಿರಲಿಲ್ಲ. ಈಗ ಬಂದು ನಿಮ್ಮ ಲೇಖನ ಓದುತ್ತಿದ್ದಂತೆ ನಗೆ ಹರಿದು ಬಂದಿತು. ನಿಮಗೆ ಧನ್ಯವಾದಗಳು.

  ReplyDelete
 14. ha ha ha... sullu heLta ideera alwa.. neeve beku beku anta aa song play maadirteeri.. ha ha ha :D

  ReplyDelete
 15. ಪ್ರೋತ್ಸಾಹಕ್ಕೆ ಧನ್ಯವಾದಗಳು!
  ಶುಭವಾಗಲಿ.
  ಪ್ರೀತಿಯಿಂದ,
  ಅದಮ್ಯಾಯುಷ್ಯ

  ReplyDelete
 16. hahaha ಏನಿದೇನಿದು ? ದಿನಕರ..ಶುಭಕರ...ಕುಛ್ ಭೀ ಕರೋ ಚನ್ನಾಗಿ ಕರೋ...ಹಹಹಹ

  ReplyDelete
 17. ಅರಿವಿಲ್ಲದೆ ಬ೦ದ ಪ್ರತಿಕ್ರಿಯೆ! ಇನ್ನು ಮು೦ದೆ ಜೋಪಾನ! ಚೆನ್ನಾಗಿ ನಿರೂಪಿಸಿದ್ದೀರಿ.

  ReplyDelete
 18. ದಿನಕರ್...

  ಇದನ್ನು ಓದು ಹೊಟ್ಟೆ ಹುಣ್ಣಾಗುವಷ್ಟು ನಕ್ಕೆ..
  ನಾನೂ ಸಹ ಇಂಥಹ ಫಜೀತಿಯಲ್ಲಿ ಸಿಕ್ಕಿದ್ದೆ..
  ಆದರೆ ನಾನು ಸ್ಟೇಜಿನ ಮೇಲಿದ್ದೆ...
  ಹಾಡು ಹಾಕಿದವ ನನ್ನ ಪರಮಾಪ್ತ ಗೆಳೆಯ ನಾಗು..

  ಹಳೆಯ ನೆನಪನ್ನು ಮತ್ತೆ ನೆನಪಿಸಿದ್ದಕೆ ಧನ್ಯವಾದಗಳು...

  ReplyDelete
 19. ಓ ಸೂಪರ್ ಸರ್
  ಈ ಹಾಡೆಂದರೆ ನನಗೂ ತುಂಬಾ ಇಷ್ಟ
  ಈ ಹಾಡಿನ ಅರ್ಥವನ್ನು ಈಗ ಮಾಡಿಕೊಂಡಂತಾಯಿತು ಧನ್ಯವಾದಗಳು....

  ವಸಂತ್

  ReplyDelete