Sep 30, 2010

ಮನಸು ಹಗುರಾದ ಬಗೆ.....!

ಆಫೀಸಿನಲ್ಲಿ ತುಂಬಾ ಗಡಿಬಿಡಿಯಿತ್ತು..... ಕೆಲಸವಿತ್ತು ಕೂಡ..... ಘಳಿಗೆಗೊಮ್ಮೆ ರಿಂಗಣಿಸುವ ಫೋನಿನದೊಂದು ದೊಡ್ದ ಕಿರಿಕಿರಿಯಾಗಿತ್ತು..... ಫೋನ್ ತೆಗೆದು ಬಿಸಾಡಿಬಿಡೋಣ ಎನಿಸಿಬಿಟ್ಟಿತ್ತು......  ಮೊಬೈಲ್ ದೂರದಲ್ಲಿರಿಸಿ ಕುಳಿತಿದ್ದೆ..... " ಯಾವ ಮೋಹನ ಮುರಳಿ ಕರೆಯಿತೊ" ಎಂದು ನನ್ನ ಮೊಬೈಲ್ ಕರೆಯಲು ಶುರು ಮಾಡಿತು..... ಅಯ್ಯೋ... ಯಾರದಪ್ಪಾ ಇದು...? ನೋಡಿದೆ.... ಲೋಕಲ್ ನಂಬರ್ ಇತ್ತು...... ಬೇಗ ಏನಾದರೂ ಹೇಳಿ ಮುಗಿಸೋಣ ಎಂದುಕೊಂಡು " ಹೆಲೋ" ಎಂದೆ.... ಅತ್ತಲಿಂದ " ಹಲೊ...... ದಿನಕರ್ ಸರ್ ಅಲ್ರೀ..... ನಾನ್ರಿ... ಗೊತ್ತಾಯ್ತೇನ್ರೀ.....?"  ಆ ಧ್ವನಿ ಮರೆತಿರಲಿಲ್ಲ ನಾನು....
ಆರ್. ಎನ್. ಶೆಟ್ಟಿ ಕಂಪನಿ.........

ಮೊದಲ ಕೆಲಸ.......

ರಾತ್ರಿ ಪಾಳಿ......

ಫೋನ್........

ಆಕ್ಸಿಡೆಂಟ್.........

ಮಾಡದ ಸಹಾಯ.......

ಉಳಿದ ಪಾಪಪ್ರಜ್ನೆ........

ಎಲ್ಲಾ ನೆನಪಾಯಿತು......" ನಿನ್ನನ್ನು ಹೇಗೆ ಮರೆಯಲಿ..... ಹೇಗಿದ್ದೀಯಾ ಜಗದೀಶ್ " ಎಂದೆ...... ಅವನಿಗೆ ಶಾಕ್...... " ಸರ್ರ್..... ಹ್ಯಾಂಗ್ ನೆನಪಿಟ್ಟೀರ್ರೀ ನನ್ನ... ಇಷ್ಟ್ ವರ್ಷ್ ಆದ್ರೂ ನನ್ನ ಗುರ್ತ ಮಾಡೀರಲ್ರೀ ಸರ್ರ್..... ಎಲ್ಲಿದೀರ್ರೀ ಸರ್ರ್... ಹ್ಯಾಂಗ್ ಅದೀರ್ರೀ...ನಾನ್ ಇಲ್ಲೇ ಮಂಗ್ಳೂರ್ನಾಗೇ ಬಂದೀನ್ರೀ ಸರ್ರ್..... ನಿಮ್ಗ್ ಸಿಗ್ಬೇಕಿತ್ರೀ ...." ಅಂದ......... " ಯಪ್ಪಾ ಮಹಾರಾಯ... ನಿನ್ನನ್ನೂ ನಾನು ತುಂಬಾ ದಿನದಿಂದ ಹುಡುಕುತ್ತಾ ಇದ್ದೇನೆ...... ನೀನು ಎಲ್ಲೇ ಇರು ..... ಅಲ್ಲೇ ನಿಂತಿರು.... ಅರ್ಧ ಘಂಟೆಯಲ್ಲಿ ಅಲ್ಲಿರುತ್ತೇನೆ" ಎನ್ನುತ್ತಾ ಹೊರಗೋಡಿ ಬಂದೆ..... ಕಾರಿನಲ್ಲಿ ಕುಳಿತವನೆ " ನಡಿ.... ಪಂಪ್ವೆಲ್ ಸರ್ಕಲ್ ಕಡೆ.. ಅರ್ಜಂಟ್ " ಎಂದೆ..... ಕಾರು ಓಡುತ್ತಿತ್ತು ಪಂಪ್ ವೆಲ್ ಸರ್ಕಲ್ ಕಡೆ..... ನನ್ನ ನೆನಪು ಓಡುತ್ತಿತ್ತು ನನ್ನ ಭೂತಕಾಲದ ಕಡೆ......

 ನಾನು ಡಿಪ್ಲೋಮಾ ಮುಗಿಸಿದವನೇ ಕೆಲಸ ಸೇರಿದ್ದೆ..... ಆರ್. ಎನ್. ಶೆಟ್ಟಿಯವರ ಕಂಪನಿಯಲ್ಲಿ .....ಶರಾವತಿ ನದಿಗೆ ಗೇರುಸೊಪ್ಪದಲ್ಲಿ ಅಣೆಕಟ್ಟು ಕಟ್ಟುವ ಕೆಲಸ ಅದಾಗಿತ್ತು... ಹೊಸದಾಗಿ ಸೇರಿದ್ದರಿಂದ ನನ್ನನ್ನು ರಾತ್ರಿಪಾಳಿಯ ಕೆಲಸ ಕೊಟ್ಟಿದ್ದರು....... ಊಟ ಮುಗಿಸಿ, ರಾತ್ರಿ ೮ ಕ್ಕೆ ಹೊರಡಬೇಕಿತ್ತು.... ರಾತ್ರಿ ಹೆಚ್ಚಿಗೆ ಕೆಲಸವಿರದೇ ಇರುತ್ತಲಿದ್ದರಿಂದ ಒಂದು ಟಿಪ್ಪರ್ ಇಡುತ್ತಿದ್ದರು..... ಅದಕ್ಕೆ "ಸ್ಟ್ಯಾಂಡ್ ಬೈ" ಗಾಡಿ ಎಂದು ಕರೆಯುತ್ತಿದ್ದರು.... ಏನಾದರು ತುರ್ತು ಕೆಲಸಕ್ಕೆ ಅದನ್ನು ಉಪಯೋಗಿಸಬೇಕಿತ್ತು..... ಅದಕ್ಕೆ ಒಬ್ಬ ಚಾಲಕನೂ ಇರುತ್ತಿದ್ದ..... ನಾನು ಹೊಸಬನಾದ್ದರಿಂದ ಅವನನ್ನು ಮಾತನಾಡಿಸಲು ಹೋಗಲಿಲ್ಲ..... ನನಗೆ ಗೊತ್ತಿತ್ತು ನನ್ನ ಸಂಬಳಕ್ಕಿಂತ ಅವನ ಸಂಬಳವೇ ಹೆಚ್ಚು ಎಂದು.... ನನಗೆ ಸಂಬಳ ಆಗ ೧೮೦೦ ರುಪಾಯಿ ಆದ್ರೆ ಅವನದು ೩೩೦೦..... ಮೆಕ್ಯಾನಿಕಲ್ ಸ್ಟಾಫ್ ಗೆ ಸ್ವಲ್ಪ ಹಮ್ಮು ಇದೆ ಎಂದು ನನ್ನ ಸಂಗಡಿಗರು ಮಾತನಾಡಿಕೊಳ್ಳುತ್ತಿದ್ದುದನ್ನು ನಾನು ಕೇಳಿದ್ದೆ..... ಅದಕ್ಕೇ ನಾನು ನನ್ನ ಕೆಲಸದಲ್ಲಿ ತಲ್ಲೀನನಾಗಿದ್ದೆ..." ಕಂಪನಿಗೆ ಹೊಸಬರೆನ್ರಿ " ಎಂದಂತಾಗಿ ತಿರುಗಿದೆ.... ಒಬ್ಬ ಸಪೂರ ಹುಡುಗ ನಿಂತಿದ್ದ....." ಹೌದು.... ಒಂದು ವಾರ ಆಯ್ತು...." ಎಂದೆ.... ಆತ ಸಂಭಾವಿತನಂತೆ ಕಂಡ....ತನ್ನ ಹೆಸರನ್ನ ಜಗದೀಶ್ ಎಂದು ಆತ ಪರಿಚಯ ಮಾಡಿಕೊಂಡ....

"ಊಟ ಆತೇನ್ರೀ ಸರ್ರ್.... ನಾ ಎನಾರ ತರ್ಲೇನ್ರಿ ತಿನ್ನಾಕೆ..." ಎಂದ ಆತ.....ನಾನು ಬೇಡ ಎಂದೆ.... ನನಗೆ ತುರ್ತಾಗಿ ಮನೆಗೆ ಫೋನ್ ಮಾಡಬೇಕಿತ್ತು.... ಹೊಸದಾಗಿ ಮನೆಯಲ್ಲಿ ಫೋನ್ ತೆಗೆದುಕೊಂಡಿದ್ದರು.....  ಮನೆಗೆ ಫೋನ್ ಮಾಡಿ ಅಪ್ಪ ಅಮ್ಮನ ಜೊತೆ ಮಾತನಾಡಬೇಕಿತ್ತು..... ಫೋನ್ ಮಾಡಬೇಕೆಂದರೆ ಐದು ಕಿಲೋಮೀಟರ್ ಹೋಗಬೇಕಿತ್ತು......ಅದಕ್ಕೆ ಆತನನ್ನು ಕರೆದು....." ಜಗದೀಶ್, ಮನೆಗೆ ಫೋನ್ ಮಾಡಬೇಕಿತ್ತು..... ಹೋಗೋಣ್ವಾ..." ಎಂದೆ....." ಅದ್ಕ್ಯಾಕ್ರೀ ಹೀಗ್ ಕೇಳ್ತಿರೀ..... ನಮ್ ಕೆಲ್ಸಕ್ಕೇ ಇಟ್ಟಿದ್ದು ಈ ಗಾಡೀನ.....ನಡಿರ್ರಿ....." ಎಂದವನೇ ಗಾಡಿ ಸ್ಟಾರ್ಟ್ ಮಾಡಿಯೇ ಬಿಟ್ಟ.... ನಾನು ಸುಮ್ಮನೇ ಹೋಗಿ ಕುಳಿತೆ..... ಟಿಪ್ಪರ್ ಒಳ್ಳೆ ಜೀಪ್ ತರಹ ಓಡಿಸುತ್ತಿದ್ದ..... ನಾನು ಗಟ್ಟಿಯಾಗಿ ಕುಳಿತಿದ್ದೆ..... ಐದು ನಿಮಿಷದಲ್ಲಿ ಎಸ್. ಟಿ ಡಿ. ಬೂತ್ ಎದುರಿಗೆ ನಿಂತಿದ್ದೆವು..... ದೊಡ್ಡ ಕ್ಯೂ ಇತ್ತು ಬೂತ್ ಎದುರಿಗೆ..... ನಾನೂ ನಿಂತೆ ಕ್ಯೂನಲ್ಲಿ...... ನನ್ನ ಹಿಂದೆ ಆತನೂ ನಿಂತ.... ಅರ್ಧ ತಾಸಿನ ನಂತರ ನನ್ನ ಪಾಳಿ ಬಂತು..... ಮನೆಯವರೆಲ್ಲರ ಜೊತೆ ಮಾತನಾಡಿ ನಾನು ಹೊರ ಬಂದೆ..... ಆತನೂ ಎಲ್ಲಿಗೋ ಮಾತನಾಡಿ ಬಂದ.... ನಾನು ಮೊದಲೇ ಗಾಡಿಯಲ್ಲಿ ಹೋಗಿ ಕುಳಿತಿದ್ದೆ....... ಆತ ದೊಡ್ಡದಾಗಿ ಹಾಡು ಹೇಳುತ್ತಾ ಬಂದ...." ಹೊಗೊಣೇನ್ರೀ..... ಸರ್ರ...." ಎಂದವನೆ ಗಾಡಿ ಸ್ಟಾರ್ಟ್ ಮಾಡಿದ....  ಟಿಪ್ಪರ್ ಮುಂದೆ ಒಂದು ಸೈಕಲ್ ನಿಂತಿತ್ತು........ ಸೈಕಲ್ ಪಕ್ಕಕ್ಕಿಡಲು ನಾನು ಕೆಳಗಿಳಿಯಲು ಹೋಗುವವನಿದ್ದೆ.....    " ಹೇ ಬಿಡ್ರೀ ಸರ್ರ..... ನೀವ್ಯಾಕ್ ಇಳಿತೀರ್ರೀ.... ತಡೀರ್ರಿ...... ಹಿಂದಕ್ಕ್ ತಗಿತಿನಿ ಗಾಡೀನ......" ಎಂದವನೇ ರಿವರ್ಸ್ ಗೇರ್ ಹಾಕಿ ಹಿಂದಕ್ಕೆ ಹೋದ..........." " ದಡಾಲ್......... ಕಟ್......ಕಟ್......" " ಎಂದು ದೊಡ್ದದಾಗಿ ಸದ್ದಾಯಿತು......

ಎದೆ ಒಂದು ಸಲ ನಿಂತಂತಾಯಿತು...... ಯಾರಾದರು ನಿಂತಿದ್ದಿರಬಹುದಾ....? .... ಅವರ ಮೇಲೆ ಗಾಡಿ ಹೋಗಿರಬಹುದಾ....? ಅವರೇನಾದರು ಸತ್ತು ಹೋದರೆ...? ನಾನು ಇಷ್ಟು ದೂರ ಗಾಡಿ ತೆಗೆದುಕೊಂಡು ಬಂದಿದ್ದೆ ತಪ್ಪು..... ಯಾರಿಗಾದರೂ ಗೊತ್ತಾದರೆ ನನ್ನ ಕೆಲಸ ಹೋಗುತ್ತದೆ...... ಕೆಳಗೆ ಇಳಿಯಲು ಮನಸ್ಸೇ ಆಗಲಿಲ್ಲ..... ಆತ ಸಲೀಸಾಗಿ ಕೆಳಗಿಳಿದು ಹೋಗಿ ಬಂದು..." ಬಜಾಜ್ ಸ್ಕೂಟರ್ ಮ್ಯಾಲ ನಮ್ ಗಾಡಿ ಹತೈತ್ರೀ ಸರ್ರ...... ನೀವೇನೂ ಇಳಿಬ್ಯಾಡ್ರೀ.... ನಾನ್ ಮಾತಾಡ್ ಬರ್ತೀನ್ರೀ..." ಎಂದವನೇ ಮತ್ತೆ ಹಿಂದುಗಡೆ ಹೋದ..... ನಾನು ನನ್ನ ಕಿಸೆಗೆ ಕೈ ಹಾಕಿದೆ...... ಕಿಸೆಯಲ್ಲಿ ಐವತ್ತು ರುಪಾಯಿ ಇತ್ತು...... ರೂಮಿನಲ್ಲಿದ್ದ ಏಳು ನೂರಾ ಐವತ್ತು ರುಪಾಯಿ ನೆನಪಾಯಿತು......  ಎನೋ ದೊಡ್ದ ಸಿರಿವಂತನ ಹಾಗೆ ಕೆಳಗಿಳಿದು ಹೋದೆ.....ಸ್ಕೂಟರ್ ಮಾಲಿಕ ಜಗದೀಶನ ಜೊತೆ ಜಗಳವಾಡುತ್ತಿದ್ದ..... " ಅಲ್ರೀ... ಹೋಗಿ ಹೋಗಿ ಟಿಪ್ಪರ್ ಹಿಂದಕ್ಕ್ ಯಾರಾದ್ರೂ ಗಾಡಿ ನಿಲ್ಲಿಸ್ತಾರೇನ್ರೀ....? ನಿಮ್ಗೂ ತಲಿ ಐತೋ ಇಲ್ವೋ..." ಎಂದು ರೇಗುತ್ತಿದ್ದನಾದರೂ ಅವನ ದ್ವನಿಯಲ್ಲಿ ತನ್ನದೇ ತಪ್ಪಿದೆ ಎನ್ನುವ ಭಾವ ಇತ್ತು...... ನಾನು ಎನೂ ಮಾತನಾಡುತ್ತಿರಲಿಲ್ಲ..... ಯಾಕಂದ್ರೆ , ನನ್ನ ಹತ್ತಿರ ದುಡ್ಡೂ ಇರಲಿಲ್ಲ.... ನಮ್ಮದೇ ತಪ್ಪಿದೆ ಎನ್ನುವ ಅಭಿಪ್ರಾಯವು ನನ್ನದಿತ್ತು.....  ಹಾಗಾಗಿ ನಾನು ಸುಮ್ಮನಿದ್ದೆ......  " ನೀವ್ ಹೋಗ್ ಕುಂದರ್ರೀ ಸರ್ರ್..... ನಾ ಮಾತಾಡ್ ಬರ್ತೀನ್ರಿ. " ಎಂದ ಜಗದೀಶ.... ನಾನು ಸುಮ್ಮನೆ ಹೋದೆ....

ಸ್ವಲ್ಪ ಹೊತ್ತಿನಲ್ಲಿ ಬಂದು ಕುಳಿತ......ಟಿಪ್ಪರ್ ಸ್ಟಾರ್ಟ್ ಮಾಡಿದ..... ಮುಖ ಸ್ವಲ್ಪ ಗಂಭೀರವಾಗಿತ್ತು.... ನಾನು ಸ್ವಲ್ಪ ಅಳುಕುತ್ತಲೇ ಕೇಳಿದೆ.... " ಏನಾಯ್ತು...? "
" ಏನಿಲ್ರೀ ಸರ್ರ್....ಅವ್ನಿಗೆ ಹಣ ಕೊಡ್ತೀನಿ ಅಂದೀನ್ರಿ...... ಸುಮ್ನೆ ಹ್ವಾದ....." ನಾನು ಅಳುಕುತ್ತಲೇ " ಎಷ್ಟು....? " ಎಂದು ಕೇಳಿದೆ...... ಆತ " ನಾಲ್ಕು ಸಾವಿರ ಅಷ್ಟೇರಿ...." ಅಂದ ಎನೂ ಟೆನ್ಶನ್ ಇಲ್ಲದೇ...... ನನ್ನ ಉಸಿರು ನಿಂತಿತು..... ನನ್ನ ಗಣೀತ ಮೊದಲೇ ವೀಕ್...... ನಾಲಿಗೆ ಆಗಲೇ ನಾಲ್ಕು ಸಾವಿರವನ್ನು ನನ್ನ ತಿಂಗಳ ಸಂಬಳದಿಂದ ಬಾಗಿಸಲು ಶುರು   ಮಾಡಿತ್ತು..... ಹೇಗೆ ಬಾಗಿಸಿದರೂ ನನ್ನ ಎರಡು ತಿಂಗಳ ಸಂಬಳಕ್ಕಿಂತ ಹೆಚ್ಚು ಬೇಕಾಗಿತ್ತು..... ನನ್ನಲ್ಲಿ ಮಾತನಾಡಲು ಎನೂ ಇರಲಿಲ್ಲ...... ಮಾತನಾಡಿದರೆ ನಾನು ಹಣ ಹಂಚಿಕೆ ಮಾಡಿಕೊಳ್ಳಬೇಕಾಗಿ ಬರುತ್ತದೆ ಎನಿಸಿ ಸುಮ್ಮನೆ ಕುಳಿತೆ.... ಕಂಪನಿಯ ಜೊತೆ ಮಾತನಾಡಿ ಹಣ ಕೊಡಿಸೋಣ ಎಂದರೆ ಗಾಡಿ ಹೊರಗಡೆ ತಂದಿದ್ದೇ ತಪ್ಪಾಗಿತ್ತು.... ಹಣವಿರದೇ ನಾನು ಅಸಹಾಯಕನಾಗಿದ್ದೆ..... ಆತನಿಗೆ ಸಹಾಯ ಮಾಡದ ಪರಿಸ್ಥಿತಿಯಲ್ಲಿದ್ದೆ.....

ಜಗದೀಶ ಸ್ಕೂಟರ್ ರಿಪೇರಿ ಮಾಡಿಸಿ ತಂದು ಕೊಟ್ಟಿದ್ದಾನೆ ಎಂದು ಕೇಳಿ ತಿಳಿದಿದ್ದೆ..... ಆದ್ರೆ ಆತನಿಗೆ ಏನೂ ಸಹಾಯ ಮಾಡಲಾಗದೇ ಇದ್ದುದಕ್ಕೆ ನನಗೆ ಪಾಪಪ್ರಜ್ನೆ ನನ್ನನ್ನು ಕಾಡುತ್ತಿತ್ತು..... ನಂತರದ ದಿನಗಳಲ್ಲಿ ಆತ ನನ್ನ ಎದುರಿಗೆ ಬಂದರೂ ನನಗೆ ಮುಜುಗರವಾಗುತ್ತಿತ್ತು.... ಹಣ ಸಹಾಯ ಮಾಡೊಣವೆಂದರೂ ನನಗೆ ಆ ಸ್ಥಿತಿ ಇರಲಿಲ್ಲ...... ಸುಮಾರು ದಿನದ ನಂತರ ಆತನ ವರ್ಗಾವಣೆ ಆಗಿದೆ ಎಂದು ತಿಳಿದು ಬಂದಿತ್ತು..... ಇದರ ನಂತರ ನನ್ನ ಪಾಪಪ್ರಜ್ನೆ ಇನ್ನೂ ಹೆಚ್ಚಾಗಿತ್ತು..... ಆತನಿಗೆ ಏನಾದರೂ ಸಹಾಯ ಮಾಡಬೇಕಿತ್ತು ಎನ್ನುವ ನನ್ನ ಒಳಮನಸ್ಸು ಚುಚ್ಚುತ್ತಿತ್ತು...... ಆದರೆ ಆತನ ವಿಳಾಸ ತಿಳಿಯದೇ ಪೇಚಿಗೆ ಸಿಲುಕಿದ್ದೆ.... ಏನೂ ಮಾಡಲು ಆಗದೇ ಒದ್ದಾಡುತ್ತಿದ್ದೆ..... ಆತನಿಗೆ ಸಿಕ್ಕು ಕ್ಷಮಾಪಣೆ ಕೇಳಬೇಕು ಎಂದು ತುಂಬಾ ದಿನದಿಂದ ಆಶಿಸುತ್ತಿದ್ದೆ.......

ಇದೆಲ್ಲಾ ನಡೆದು ಹನ್ನೆರಡು ವರ್ಷವಾಗಿತ್ತು....


ಆತನನ್ನು ಭೇಟಿ ಮಾಡಿ ಕ್ಷಮೆ ಕೇಳಬೇಕೆಂದುಕೊಂಡ  ದಿನ ಬಂದೇ ಬಿಟ್ಟಿತ್ತು.....

" ಸರ್, ಎಲ್ಲಿಗೆ ಹೋಗಬೇಕು " ಎಂದು ಕೇಳುತ್ತಿದ್ದ ಕಾರ್ ಡ್ರೈವರ್..... ನಾನು  ಹೋಟೆಲ್ ಕಡೆ ಕೈ ತೋರಿಸಿ, ತಲೆ ಹೊರಗಡೆ ಹಾಕಿ ಆತನನ್ನು ಹುಡುಕುತ್ತಿದ್ದೆ.... ಆತ ಬಸ್ ಸ್ಟಾಂಡ್ನಲ್ಲಿ ನಿಂತಿದ್ದ.... ಕಂಡ ಕೂಡಲೇ ಅಕ್ಷರಶಃ ಕೆಳಗೆ ಜಿಗಿದು ಓಡಿದೆ.... ಅವನನ್ನು ಬಿಗಿದುಹಿಡಿದೆ...... ಆತನಿಗೆ ನನ್ನ ಗುರುತು ಹಿಡಿಯಲು ಸ್ವಲ್ಪ ಸಮಯ ಹಿಡಿಯಿತು.... ನಾನು ಆತನ ಕೈ ಬಿಡದೇ ಕೇಳಿದೆ....." ಹೇಗಿದ್ದೀಯಾ...... ? ಕೆಲಸ ಮಾಡ್ತಾ ಇದೀಯಾ....? ಹೇಗಿದೆ ನಿನ್ನ ಲೈಫ್...? ಮದುವೆಯಾಗಿದೆಯಾ...? " ಎಂದೆಲ್ಲಾ ಕೇಳುತ್ತಲಿದ್ದೆ....... ಆತ ಶಾಂತವಾಗಿ..." ಎಷ್ಟ್ ಪ್ರಶ್ನಿ ಕೇಳ್ತೀರ್ರಿ ಸರ್ರ್...... ಅಲ್ಲಾ, ಎಟ್ ಚೇಂಜ್ ಆಗೀರ್ರೀ...... ನಾ ಆರಾಮ್ ಅದೀನ್ರೀ..... ಸರಕಾರಿ ಕೆಲ್ಸಾರ್ರೀ...... ಕೆ. ಎಸ್. ಆರ್.ಟಿ. ಯಾಗ್ ಡ್ರೈವರ್ ಆಗಿನ್ರೀ....... ನಿಮ್ ನಂಬರ್ ನಿಮ್ ದೋಸ್ತ್ ಒಬ್ರು ಕೊಟ್ರೀ...... ಅದಕ್ ಫೋನ್ ಮಾಡೀನ್ರೀ....." ನನಗೆ ಹಾಲು ಕುಡಿದ ಹಾಗಾಯಿತು....... ಆತನನ್ನು ಭೇಟಿಯಾಗಿ ಮಾತನಾಡಿದ್ದೆ ನನ್ನ ಅರ್ಧ ಪಾಪಪ್ರಜ್ನೆ ಯನ್ನು ಕಡಿಮೆ ಮಾಡಿತ್ತು.......

ಆತನ ಜೊತೆ ಊಟ ಮಾಡಿದೆ.....ಸ್ವಲ್ಪ ಸಿಹಿ ತಿಂಡಿ ಕಟ್ಟಿಸಿ ಕೊಟ್ಟೆ...... ಮನೆಗೆ ತೆಗೆದುಕೊಂಡು ಹೋಗಲು ಹೇಳಿದೆ...... ಕೊನೆಯದಾಗಿ ಕೇಳಿದೆ....." ಜಗದೀಶ್, ಆ ದಿನ ನನ್ನ ಕೈಯಲ್ಲಿ ದುಡ್ಡಿರಲಿಲ್ಲ..... ಆ ಬಗ್ಗೆ ನಿನ್ನ ಜೊತೆ ಮಾತನಾಡಿದರೆ ನೀನೆಲ್ಲಿ ಹಣ ಕೇಳುತ್ತೀಯೆನೋ ಎಂದು ನಿನ್ನನ್ನು ಮಾತನಾಡಿಸಿರಲಿಲ್ಲ ಆಗ.... ತಪ್ಪಾಯ್ತು ಕಣೋ..... ಕ್ಷಮಿಸಿಬಿಡು" ಇಷ್ಟು ಹೇಳುವಷ್ಟರಲ್ಲೇ ನನ್ನ ಧ್ವನಿ ತೇವವಾಗಿತ್ತು......" ಹೇ.... ಬಿಡ್ರೀ.... ಸರ್ರ, ನಿಮ್ ಜಾಗ್ದಾಗ್ ನಾನಿದ್ರೂ ಅದೇ ಮಾಡ್ತಿದ್ನೋ ಏನೋ....ಅದ್ಯಾಕೆ ನೆನಪ್ ಮಾಡ್ತೀರ್ರೀ ಈಗ...... ಬಿಡ್ರಲ್ಲಾ...... " ಎಂದ ಶಾಂತವಾಗಿ...... ನನಗೆ ಇನ್ನೂ ಕೇಳಬೇಕಿತ್ತು....... ನಾನು " ಜಗದೀಶ್, ಆ ಹಣ ನಾನು ಕೊಡಲಾ..... ಹೀಗೆ ಕೇಳ್ತಾ ಇದೀನಿ ಅಂತ ಬೇಸರ ಮಾಡಿಕೊಳ್ಳಬೇಡ..." ಎಂದು ಕೇಳಿದೆ ಜೀವವನ್ನು ಹಿಡಿ ಮಾಡಿಕೊಂಡು.....  " ಸರ್ರ.... ಬಿಡ್ರೀ.... ದೇವ್ರು ನಂಗೆ ಒಳ್ಳೇದೆ ಮಾಡ್ಯಾನ್ರೀ....ದುಡ್ಡು ಗಿಡ್ದು ಏನೂ ಬ್ಯಾಡ್ರೀ......ನಿಮ್ಮ ಒಳ್ಳೆ ಮನ್ಸು ಹೀಗೇ ಇರಲ್ರೀ....." ನನ್ನ ಮನಸ್ಸು ತುಂಬಿ ಬಂತು...... ಗಟ್ಟಿಯಾಗಿ ತಬ್ಬಿಕೊಂಡೆ......


                          (ಜಗದೀಶನ ಜೊತೆ  "ಅರ್ಧಚಂದ್ರ ತೇಜಸ್ವಿ" ಯ ಅರ್ಧ ಫೋಟೊ....)

58 comments:

  1. ದಿನಕರ್...

    ನಮ್ಮ ಬದುಕು ಎಷ್ಟೋ ಜನರಿಗೆ ಉಪಕೃತವಾಗಿರುತ್ತದೆ..

    ಉಪಕ್ಕಾರಕ್ಕೊಂದು ಕೃತಜ್ಞತೆ ಸಲ್ಲಿಸಲಾಗದ..

    ಅಸಹಾಯಕತೆನ್ನು ಮರೆಯದೆ...

    ದೇವರಂತೆ ಸಹಾಯ ಮಾಡಿದವರು ...

    ಮತ್ತೆ ಅವರು ಸಿಕ್ಕಿದ್ದು ನಿಮ್ಮ ಪುಣ್ಯ...!

    ನಿಜ ಅಂಥಹ ಸನ್ನಿವೇಶ ಬಹಳ ಭಾವಪೂರ್ಣವಾಗಿರುತ್ತದೆ..

    ಸುಂದರ ನಿರೂಪಣೆ... ಅಭಿನಂದನೆಗಳು...

    ನಿಮ್ಮ ಸ್ನೇಹಿತರೀಗೂ ನನ್ನ ನಮಸ್ಕಾರ ತಿಳಿಸಿ...

    ReplyDelete
  2. WOW! that's good.

    U r lucky to get a chance to meet him and tell him your condition. A lot of times, we do not get second chances. :)

    BhaShe

    ReplyDelete
  3. ಜಗದೀಶನಂತಹ ಮಾನವೀಯ ಗುಣದ ವ್ಯಕ್ತಿಯ ಪರಿಚಯ ಮಾಡಿಕೊಟ್ಟದ್ದಕ್ಕಾಗಿ ಥ್ಯಾಂಕ್ಸ. ಇಂತಹ ಲೇಖನಗಳನ್ನು ಓದಿದಾಗ, ಈ ಜಗತ್ತಿನಲ್ಲಿ ಒಳ್ಳೆಯತನವಿದೆ ಎನ್ನುವ ವಿಶ್ವಾಸ ಮೂಡುತ್ತದೆ.

    ReplyDelete
  4. ಉಪಕಾರ ಮಾಡಿದವರನ್ನು ನೆನಪಿಟ್ಟು ಅವರನ್ನು ಆದರಿಸುವ ನಿಮ್ಮ ಮಾನವೀಯತೆಗೆ ನನ್ನದೊಂದು ಸಲಾಂ. ನಿಮ್ಮ ಆದರ ಪ್ರೀತಿಯ ಸವಿಯುನ್ದವರಲ್ಲಿ ನಾನು ಒಬ್ಬ!
    ಜಗದೀಶನಂತಾ ಜನರು ಅಪರೂಪ. ನಿಮ್ಮನ್ನು ಹುಡುಕಿದ ಅವನಿಗೂ ಧನ್ಯವಾದಗಳು ಮತ್ತು ನಮ್ಮ ಸಲಾಂ.

    ReplyDelete
  5. ಕೆಲವೊಂದು ಸಂದರ್ಭಗಳೇ ಹಾಗೆ..... ತುಂಬಾ ಚೆನ್ನಾಗಿ ಬರೆದಿದ್ದೀರ....

    ReplyDelete
  6. ಮನಮಿಡಿಯುವ ಬರಹ ದಿನಕರ್ ಅವರೇ... ನಿಮ್ಮನ್ನು ಹುಡುಕಿ ಬಂದ ಅವರಿಗೂ, ಹೃದಯವಂತಿಕೆ ಮೆರೆದ ನಿಮಗೂ ಅಭಿನಂದನೆಗಳು.. ನಾನೂ ಮನಸು ಹಗುರ ಮಾಡಿಕೊಳ್ಳಲು ಕಾಯುತ್ತಿದ್ದೇನೆ.... ಆಗ ನಿಮ್ಮೆಲ್ಲರೊಡನೆ ಖಂಡಿತಾ ಹಂಚಿಕೊಳ್ಳುವೆ... ವಂದನೆಗಳು..

    ReplyDelete
  7. ಒಳ್ಳೆಯ ವಿಷಯವನ್ನ ಬ್ಲಾಗ್ ಗೇ ತಂದಿದೀರಿ .:) ಇಷ್ಟ ಆಯ್ತು .

    ReplyDelete
  8. ದಿನಕರ್;ನೀವು ಬರೆದ ಘಟನೆ ಹೃದಯ ಸ್ಪರ್ಶಿಯಾಗಿತ್ತು.ನನ್ನ ಜೀವನದಲ್ಲಿ ನಡೆದ ಎರಡು ಇಂತಹ ಘಟನೆ ನೆನಪಿಗೆ ಬಂದವು.ಎಂದಾದರೂ ಮುಂದೊಮ್ಮೆ ಬ್ಲಾಗಿಸುತ್ತೇನೆ.
    ನಮ್ಮೆಲ್ಲರ ಪ್ರೀತಿಯ ಸ್ನೇಹಿತ 'ಅರ್ಧ ಚಂದ್ರ ತೇಜಸ್ವಿ'ಯ ಫೋಟೋ ಚೆನ್ನಾಗಿದೆ.ಧನ್ಯವಾದಗಳು.

    ReplyDelete
  9. ಜಗದೀಶ್ ನಿಗೊಂದು ಸಲಾಮು. ಈ ಜೀವನ ಕಲಿಸೋ ಪಾಠ ಯಾವ ಸಾಲಿಯೊಳಗೂ ಯಾರೂ ಕಲಿಸೂದಿಲ್ಲ

    ReplyDelete
  10. ಇಬ್ಬರದೂ ತು೦ಬಾ ಒಳ್ಳೆಯ ಮನಸ್ಸು...ಇಬ್ಬರಿಗೂ ಶುಭವಾಗಲಿ.

    ReplyDelete
  11. ಈ ಲೇಖನ ಓದಿ ಸ್ವಲ್ಪ ಹೊತ್ತು ನೆನಪಿನ ಚಿತ್ರಶಾಲೆಗೆ ಜಾರಿದೆ. ಬಹಳ ಆಪ್ತ, ಆರ್ದ್ರ ಶೈಲಿಯಲ್ಲಿ ಹಳೆಯ ಗೆಳೆಯೊಬ್ಬನೊ೦ದಿಗಿನ ಭೇಟಿ ಮತ್ತು ಹಳೆಯ ಘಟನೆಗಳ ಮೆಲುಕು ಹಾಕಿದ್ದೀರಿ. ನನ್ನ ಜೀವನದ ಯಾವುದೋ ಒ೦ದು ನೆನಪು ನೆನಪಿನ ಕೋಶದಿ೦ದ ಹೊರಬಂತು. Good one, Dinakar!!

    ReplyDelete
  12. ದಿನಕರ್,

    ಜೀವನದಲ್ಲಿ ಈ ತರದ ವ್ಯಕ್ತಿಗಳನ್ನು ಮತ್ತೆ ಮಾತಾಡಿಸುವ ಅವಕಾಶಗಳು ಬರುವುದು ಕಡಿಮೆ. ನೀವು ನಿಮ್ಮ ಎದೆ ಹಗುರ ಮಾಡಿಕೊಂಡಿದ್ದು ಒಳ್ಳೆಯದಾಯ್ತು.

    ಇಷ್ಟವಾಯ್ತು ನಿಮ್ಮ ನೆನಪಿನ ಬುತ್ತಿ

    ReplyDelete
  13. ದಿನಕರ್ ಸಾರ್,

    ನಿಮ್ಮಿಬ್ಬರಿಗೂ ಅಭಿನಂದನೆಗಳು... ನಿಮ್ಮ ಈ ಬರಹ ಓದಿ ನನಗೆ ನನ್ನ ೫ ವರ್ಷದ ಹಿಂದಿನ ಫಜೀತಿಯೊಂದು ನೆನಪಾಯಿತು... ಈ ಬಾರಿ ಅದರ ಬಗ್ಗೆ ಬರೆಯುವೆ.. ಇಂತಹ ಸನ್ನಿವೇಶಗಳು ಮರೆಯೋಣವೆಂದರೂ ಮರೆಯಲಾಗುವುದಿಲ್ಲ ಅಲ್ಲವೇ? ಹಳೆಯದನ್ನೆಲ್ಲ ನೆನಪಿಸಿದ ನಿಮಗೆ ಧನ್ಯವಾದಗಳು...

    ReplyDelete
  14. ಉತ್ತಮ ವಿಷಯ ಸರ್ ಮನಮಿಡಿಯುವ ವಿಷಯ ..ಜಗದೀಶ ಮನದಲ್ಲಿ ತುಂಬಾ ಹೊತ್ತು ಮನದಲ್ಲಿ ಸುಳಿದಾಡುತ್ತಿದ್ದ..!

    ReplyDelete
  15. idaralli nim tappu enu illa... neevu yaake aa tara tilkondidri...? hogli bidi...

    ReplyDelete
  16. ನಿಮ್ಮ ಲೇಖನ ಓದಿ ನನಗೆ ನಾನ್ನ ನೆನಪಾಯಿತು.

    ಅಪ್ಪ ಕೊಡುತ್ತಿದ್ದ ಪ್ಯಾಕೆಟ್ ಮನಿ ಅನ್ನುವ ನನ್ನದಲ್ಲದ ಹಣ , ನನ್ನ ಕೆಲವು ಸ್ನೇಹಿತರ ಕಾಲೇಜ್ ಫೀ , ಕೆಲವರಿಗೆ ಅವರು ಊರಿಗೆ ಹೋಗಲು ಬಸ್ ಚಾರ್ಜ್ , ಪುಸ್ತಕ ಕೊಂಡುಕೊಳ್ಳಲು, ದಾರಿಯಲ್ಲಿ , ಬಸ್, ಟ್ರೈನ್ ನಲ್ಲಿ ಸಿಗುವ ಅಸಾಹಾಯಕ ವಿದ್ಯಾವಂತ ಬಿಕ್ಷುಕರಿಗೆ ಬುದ್ದಿವಾದ ಹೇಳುವಾಗ , ಹಲವರ ಖರ್ಚಿಗೆ ಸಾಲ ರೂಪದಲ್ಲಿ ( ಯಾವೂದು ವಾಪಸ್ ಬಂದಿಲ್ಲ, ನಾನು ಕೇಳುವುದು ಇಲ್ಲ ) ...ಆಗಿನ ನನ್ನ ಸಾಮಾಜಿಕ ತುಡಿತ "ಚುಕ್ಕಿ ಸಂಸ್ಥೆ" ಯಾಗಿ ಹೊರಹೊಮ್ಮಿದೆ.

    ನಿಮ್ಮ ಲೇಖನ ಓದುವಾಗ ಇದೆಲ್ಲ ನೆನಪಾಯಿದು. ಆ ಗೆಳೆಯನನ್ನು ನೆನೆಸಿಕೊಂಡ ನಿಮ್ಮ ಒಳ್ಳೆಯ ಮನಸ್ಸಿಗೆ ನನ್ನ ಸೆಲ್ಯೂಟ್ . ನಾವು ನೆಮ್ಮದಿಯಿಂದ ಬದುಕುವಾಗ, ನಮ್ಮ ಸಂತೋಷಕ್ಕೆ ಹೆಗಲು ಕೊಟ್ಟವರನ್ನೂ ಯಾವತ್ತೂ ಮರೆಯಬಾರದು.


    ಸುಂದರ ಲೇಖನ . ನೆನಪುಗಳ ಸವಿ ಹೂರಣ.....

    ಒಮ್ಮೆ ಬೆಟ್ಟಿ ನೀಡಿ , http://chukkisamsthe.blogspot.com

    ReplyDelete
  17. "ನಮ್ಮ ಹೆಮ್ಮೆಯ ಗಾಂಧಿ ತಾತ" - ಓದಿ ಮಹಾತ್ಮ ನಿಗೆ ನನ್ನ ನಮನ ಕವಿತೆ ರೂಪದಲ್ಲಿ http://lingeshhunsur.blogspot ನಲ್ಲಿ.

    ನಿಮ್ಮ ಪ್ರೀತಿಯ,
    ಲಿಂಗೆಶ್ ಹುಣಸೂರು,
    ಬಿಂದುವಿನಿಂದ ಅನಂತದೆಡೆಗೆ...

    ReplyDelete
  18. Thumba interesting agiththu :)
    Chennagi barediddira :)

    ReplyDelete
  19. ದಿನಕರ್ ಸರ್,

    ಇಂಥ ಘಟನೆಗಳು ಸಿನಿಮಾದಲ್ಲಿ ನೋಡುತ್ತಿರುತ್ತೇವೆ. ನಿಜಜೀವನದಲ್ಲಿ ಇಂಥದ್ದು ಆದಾಗ ಅದನ್ನು ಹಂಚಿಕೊಳ್ಲಲು ಪದಗಳಿರುವುದಿಲ್ಲ. ಅಂತವು ಅಪರೂಪಕ್ಕೆ ಒಮ್ಮೆ ಘಟಿಸುತ್ತವೆ. ಇದೊಂಥರ ಮನಸ್ಸುಗಳ ಪರಿಶುದ್ಧ ಮಿಲನವೆನಿಸುತ್ತದೆ. ನಿಮ್ಮ ಗೆಳೆಯ ಜಗದೀಶರಿಗೆ ನನ್ನ ಕಡೆಯಿಂದ ನಮನ. ನಿಮ್ಮ ಲೇಖನದಿಂದ ಮನತುಂಬಿಬಂತು.

    ReplyDelete
  20. ತುಂಬ ಸಂತೋಷವಾಯ್ತು ದಿನಕರ್ ಅವರೆ. ನಿಮ್ಮಿಬ್ಬರ ಭಾವನೆಗಳನ್ನು ಗಮನಿಸಿದಾಗ ಒಳ್ಳೆಯತನಕ್ಕೆ ಕಾಲವಿದೆ ಎಂಬ ಆಶಾವಾದ ಮೂಡುತ್ತದೆ.

    ReplyDelete
  21. ಜೀವನ ಮೌಲ್ಯಗಳನ್ನು ಎತ್ತಿಹಿಡಿಯುವ ಇ೦ತಹ ಘಟನೆಗಳು ಮನಮಿಡಿಯುತ್ತವೆ. ಉತ್ತಮ ನಿರೂಪಣೆ ದಿನಕರ್.

    ಅನ೦ತ್

    ReplyDelete
  22. ಪ್ರಕಾಶಣ್ಣ,
    ಮೊದಲ ಪ್ರತಿಕ್ರೀಯೆಗೆ ಧನ್ಯವಾದ.... ಮಾಡಿದ ತಪ್ಪಿಗೆ ಕ್ಷಮೆ ಕೇಳುವ ಅವಕಾಶ ಕೆಲವರಿಗೆ ಮಾತ್ರ ಸಿಗುತ್ತದಂತೆ..... ನನಗೆ ಆ ಅವಕಾಶ ಸಿಕ್ಕಿತ್ತು...... ನಾನು ಧನ್ಯವಾದ ದೇವರಿಗೆ ಹೇಳಿದ್ದೇನೆ.....ಧನ್ಯವಾದ ನಿಮ್ಮ ಮೆಚ್ಚುಗೆಗೆ....

    ReplyDelete
  23. ಭಾಶೇ ಮೇಡಮ್,
    ಧನ್ಯವಾದ ನಿಮ್ಮ ಮೆಚ್ಚುಗೆಗೆ.... ಹೌದು...ಎಲ್ಲರಿಗೂ ಸಿಗಲ್ಲ ಎರಡನೇ ಅವಕಾಶ.....

    ReplyDelete
  24. ಸುನಾಥ್ ಸರ್,
    ಆ ಹುಡುಗನ ಸರಳತೆ ನನಗೆ ತುಂಬಾ ಇಷ್ಟ ಆಗಿತ್ತು...... ಆತ ತನ್ನ ಒಳ್ಳೆಯತನದಿಂದಲೇ ಎಲ್ಲರ ಮನ ಗೆದ್ದಿದ್ದ..... ಧನ್ಯವಾದ ಸರ್ ನಿಮ್ಮ ಮೆಚ್ಚುಗೆಗೆ.....

    ReplyDelete
  25. ಸುಮ ಮೇದಮ್,
    ಧನ್ಯವಾದ.... ಹೀಗೆ ಮೆಚ್ಚುತ್ತಿರಿ......

    ReplyDelete
  26. ಸೀತಾರಾಮ್ ಸರ್,
    ಆ ದಿನಗಳಲ್ಲಿ ನನಗೆ ಸಹಾಯ ಮಾಡುವ ಮನಸ್ಸಿದ್ದರೂ , ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ.... ಅದ್ಕ್ಕೆ ಈಗ ನೆನೆಸಿ ಬರೆದೆ ಸರ್.... ಧನ್ಯವಾದ ನಿಮ್ಮ ಮೆಚ್ಚುಗೆಗೆ.....

    ReplyDelete
  27. ಗುರು ಸರ್,
    ಸ್ವಾಗತ ನನ್ನ ಬ್ಲಾಗ್ ಗೆ.... ಮೊದಲ ಸಾರಿ ಬರ್ತಾ ಇದೀರಾ...... ಧನ್ಯವಾದ ನಿಮ್ಮ ಮೆಚ್ಚುಗೆಗೆ ... ಹೀಗೆ ಬರ್ತಾ ಇರಿ.....

    ReplyDelete
  28. ಪ್ರಗತಿ ಮೇಡಮ್,
    ಹೌದು.... ಮನಸು ಹಗುರಾದರೆ ಎಲ್ಲಾ ಸರಳ......ನಿಮ್ಮ ಅನುಭವ ಹೇಳಿಕೊಳ್ಳಿ... ಮನಸು ಹಗುರ ಮಾಡಿಕೊಳ್ಳಿ......

    ReplyDelete
  29. ಗೌತಮ್,
    ಧನ್ಯವಾದ.... ಹೀಗೆ ಬರುತ್ತಾ ಇರಿ......

    ReplyDelete
  30. ಡಾಕ್ಟ್ರೇ......
    ಆತನ ಒಳ್ಳೆಯ ಗುಣಕ್ಕೆ ನಾನು ಆಗಲೇ ಸಲಾಮ್ ಹೇಳಿದ್ದೇನೆ...... ಧನ್ಯವಾದ, ಅರ್ಧಚಂದ್ರ ಚಂದ್ರನ ಫೋಟೊ ಮೆಚ್ಚಿದ್ದಕ್ಕೆ.... ಹ್ಹ ಹ್ಹಾ....

    ReplyDelete
  31. ದೇಸಾಯಿ ಸರ್,
    ನಿಮ್ಮ ಮಾತು ಸತ್ಯ.... ಜೀವನ ಕಲಿಸುವ ಪಾಠ ಎಲ್ಲೂ ಕಲಿಸಲ್ಲ..... ಧನ್ಯವಾದ ನಿಮ್ಮ ಮಾತಿಗೆ.....

    ReplyDelete
  32. ಮನಮುಕ್ತಾ,
    ಧನ್ಯವಾದ ನಿಮ್ಮ ಹಾರೈಕೆಗೆ......

    ReplyDelete
  33. ಪರಾಂಜಪೆ ಸರ್,
    ನಿಮ್ಮ ನೆನಪಿನ ಕೋಶಕ್ಕೆ ಕೈ ಹಾಕಿದ್ದು ನನ್ನ ಬರಹ ಎಂದು ಖುಶಿಯಾಯಿತು..... ನಿಮ್ಮ ಬುತ್ತಿಯನ್ನು ಹಂಚಿಕೊಳ್ಳಿ ಸರ್....

    ReplyDelete
  34. ಶಿವ್,
    ಧನ್ಯವಾದ ನಿಮ್ಮ ಮೆಚ್ಚುಗೆಗೆ.... ಈಗ ನನ್ನ ಮನ ಹಗುರಾಗಿದೆ.....

    ReplyDelete
  35. ರವಿಕಾಂತ್ ,
    ತುಂಬಾ ದಿನದ ನಂತರ ಬರ್ತಾ ಇದೀರಾ..... ನಿಮ್ಮ ಫಜೀತಿಯನ್ನು ನಮ್ಮ ಜೊತೆ ಹೇಳಿಕೊಳ್ಳಿ..... ಧನ್ಯವಾದ ಮೆಚ್ಚುಗೆಗೆ.... ಬರ್ತಾ ಇರಿ...

    ReplyDelete
  36. ಸೌಮ್ಯ,
    ಸುಸ್ವಾಗತ ನನ್ನ ಬ್ಲೊಗ್ ಗೆ.... ನಿಮ್ಮ ಮೊದಲ ಭೇಟಿ ಇದು ನನ್ನ ಬ್ಲಾಗ್ ಗೆ.... ಮೆಚ್ಚಿದ್ದಕ್ಕೆ ಧನ್ಯವಾದ.... ಹೀಗೆ ಬರ್ತಾ ಇರಿ....

    ReplyDelete
  37. ಶಶಿ ಮೇಡಮ್,
    ಜಗದೀಶ ಎಲ್ಲರಿಗೂ ಧರ್ಮಸ್ಥಳ ಬೈಲಹೊಂಗಲ ಬಸ್ಸಲ್ಲಿ ಸಿಗಬಹುದು...... ಸಿಕ್ಕರೆ ಮಾತನಾಡಿಸಿ......

    ReplyDelete
  38. ಶಿವಪ್ರಕಾಶ್,
    ದೂರದಿಂದ ಯೋಚಿಸಿದರೆ ನಿಮ್ಮ ಹಾಗೆ ಅನಿಸೋದು ಸಹಜ... ಆದ್ರೆ ನನಗೆ ತುಂಬಾ ನೋವಾಗಿತ್ತು... ಅದನ್ನ ಈಗ ಮನಸ್ಸು ಹಗುರಾಯಿತು......

    ReplyDelete
  39. ಚಿಕ್ಕಿ,
    ಧನ್ಯವಾದ ನಿಮ್ಮ ಮೆಚ್ಚುಗೆಗೆ ಸರ್..... ನಿಮ್ಮ ಸಂಸ್ಥೆ ಬಗ್ಗೆ ತಿಳಿಸಿ..... ಕುತೂಹಲವಿದೆ.....

    ReplyDelete
  40. ಗಿರೀಶ್,
    ಧನ್ಯವಾದ ನಿಮ್ಮ ಮೆಚ್ಚುಗೆ ಮಾತುಗಳಿಗೆ.... ಹೀಗೆ ಬರುತ್ತಾ ಇರಿ....

    ReplyDelete
  41. ಶಿವೂ ಸರ್,
    ನಿಮ್ಮ ಮೆಚ್ಚುಗೆಯ ಮಾತುಗಳಿಗೆ ನನ್ನ ನಮನ.... ಹೌದು, ನನಗೆ ಕ್ಷಮೆ ಕೇಳಲು ಇನ್ನೊಂದು ಅವಕಾಶ ಸಿಕ್ಕಿದೆ....ಅದಕ್ಕೆ ಧನ್ಯವಾದ ಹೇಳಿದ್ದೆನೆ...

    ReplyDelete
  42. ಸುಬ್ರಮಣ್ಯ ಸರ್,
    ಧನ್ಯವಾದ ನಿಮ್ಮ ಮೆಚ್ಚುಗೆಯ ಮಾತುಗಳಿಗೆ.......

    ReplyDelete
  43. ಹೀಗೆಯೇ ಸರ್..
    ಸವಿನೆನಪಿನ ನಾಟಕದ ಪಾತ್ರಧಾರಿಗಳು ದಿಢೀರ್ ಎಂದು ಭೇಟಿಯಾದಾಗ ಆಗುವ ಸಂತೋಷ ಬೇರೇನೆ ಇದೆ..

    ReplyDelete
  44. ದಿನಕರ್,
    ನಿರೂಪಣೆ ಹೃದಯಸ್ಪರ್ಶಿಯಾಗಿತ್ತು....ನಿಮ್ಮನ್ನು ಹುಡುಕಿ ಬಂದ ಮಿತ್ರ ಜಗದೀಶರಿಗೂ, ಹೃದಯವಂತಿಕೆ ಮೆರೆದ ನಿಮಗೂ ಅಭಿನಂದನೆಗಳು.. .

    ReplyDelete
  45. tumba chennagide sir nirupaNe... oLLeya manassu sada irali

    ReplyDelete
  46. ದಿನಕರ ಅವ್ರೆ ಒಳ್ಳೆ ಕೆಲ್ಸ ಮಾಡಿದ್ರಿಯಪ .. ... !!!!

    ReplyDelete
  47. ದಿನಕರ ..ಹೌದು ಕೆಲವರನ್ನು ನೋಡಿದರೆ ಏಕೋ ಏನೋ ಮಳೆ ಬೆಳೆ ಆಗುತ್ತಿರುವುದು ಇಂತಹ ಉತ್ತಮ ಮನಸು ಉಳ್ಳವರಿಂದಲೇ ಅನಿಸುತ್ತೆ..ನಿಜಕ್ಕೂ ಅಂತಹವರ ಸ್ನೇಹ ಸಿಗೋದೂ ಅಪರೂಪವೇ...ಅಭಿನಂದನೆಗಳು...

    ReplyDelete
  48. ಅವರಿಗೆ ಕಷ್ಟವಾಗಿದ್ದರೂ ನಿಮ್ಮನ್ನು ಪಾಲುದಾರನ್ನಾಗಿಸದ ಅವರ ಹೃದಯವೈಶ್ಯಾಲತೆ ಮೆಚ್ಚಬೇಕಾದ್ದು. ಸಿಕ್ಕಿದ ಎರಡನೆಯ ಅವಕಾಶವನ್ನು ಉಪಯೋಗಿಸಿದ ನಿಮಗೆ ಅಭಿನಂದನೆಗಳು..:)

    ReplyDelete
  49. ಬಹಳ ಖುಷಿಪಟ್ಟೆ,ಅಕ್ಷರಶಃ ಕುಣಿದಾಡಿದೆ ಎನ್ನಬೇಕು, ಭೇಷ್! ತುಂಬಾ ಹಿಡಿಸಿತು,ನಿಮ್ಮ ಉಪಕಾರಸ್ಮರಣೆಯ ರೀತಿನೋಡಿ ನನಗೂ ಹಾಗಿರಬಾರದೇ ಅನ್ನಿಸಿತು,ಅರ್ಧಚಂದ್ರರಲ್ಲಿ ಪೂರ್ಣಚಂದ್ರನನ್ನ ಕಂಡೆ! ಧನ್ಯವಾದಗಳು

    ReplyDelete
  50. Uttama nirupane sir.. Good one! Dhanyavaadagalu!

    ReplyDelete
  51. Dinakar sir,

    Odutta hodante kutuhala tadeyalaagalilla, sundaravaagi niroopisiddiri, igalu maanaviyate ge bele embudu nijavaitu, dhanyavdagalu sir...

    ReplyDelete
  52. ದಿನಕರ್ ಸರ್,
    ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ,
    ಕೆಲವು ಸಂದರ್ಭಗಳಲ್ಲಿ ನಮ್ಮ ಅಸಹಾಯಕತೆ ಮನುಷ್ಯತ್ವವನ್ನು ಮರೆಸುತ್ತದೆ. ನಿಮ್ಮ ಸ್ನೇಹಿತನಿಗೆ ಕೃತಜ್ನತೆ ಸಲ್ಲಿಸಲು ಮತ್ತೊಮ್ಮೆ ಅವಕಾಶ ಸಿಕ್ಕಿದ್ದು ನಿಮ್ಮ ಒಳ್ಳೆ ಮನಸ್ಥಿತಿಗೆ ಹಿಡಿದ ಕನ್ನಡಿ.ಮನಸ್ಸಿಗೆ ತುಂಬಾ ಹತ್ತಿರವಾದ ಬರಹ,

    ReplyDelete
  53. ದಿನಕರಣ್ಣ,
    ಮನಸನ್ನ ಸಂಪ್ರೀತಗೊಳಿಸುವ ಸನ್ನಿವೆಶವಿದು.
    ನೀವು ತುಂಬಾ ಅದೃಷ್ಟವಂತರು.
    ನೀವು ಕಾಯುತ್ತಾ, ಹುಡುಕುತ್ತಿದದವನು ತಾನಾಗಿ ಫೋನ್ ಮಾಡಿದ ಅಂದ್ರೆ ಆಹಾ . . . .ಖಂಡಿತವಾಗಿ ಆಗ ಮನಸು ಹಗುರಾಗುತ್ತೆ. . . .
    ಈ ರೀತಿ ಅನುಭವಿಸುವ ಕ್ಷಣಗಳಿಂದ ಅನೀಸುತ್ತೆ " ಇದು ಜೀವನ, ಇದುವೇ ಜೀವನ "
    ಜಗದೀಶ್ ಉತ್ತರ ಕರ್ನಾಟಕದವರಾ ? ( ಅವರ ಮಾತಿನ ಶೈಲಿ ಓದಿ ಹಾಗನ್ನಿಸಿತು )
    " ಸ್ನೇಹ ಅತಿ ಮಧುರ . . . ಸ್ನೇಹ ಅದು ಅಮರ . . ."

    ReplyDelete
  54. ಸರ್
    ಹ್ರದಯಸ್ಪರ್ಶೀ ಲೇಖನ

    ಮೊದಲೊಮ್ಮೆ ಕಾಮೆಂಟಿಸಿದ್ದೆ, ಆದರೆ ಯಾಕೋ ಹೋಗಿರಲಿಲ್ಲ

    ಜಗತ್ತು ನಿಂತಿರುವುದೇ ಇಂಥಹ ಸಹ್ರದಯೀ ವ್ಯಕ್ತಿಗಳ ಭಾವನೆಗಳ ಮೇಲೆ

    ReplyDelete
  55. ಹೃದಯವಂತಿಕೆ ಉಳ್ಳ ನಿಮ್ಮ ಗೆಳೆಯರನ್ನ ನಮಗೆಲ್ಲ ಪರಿಚಯಿಸಿದ್ದಕ್ಕೆ ಧನ್ಯವಾದಗಳು "ಅರ್ಧ ಚಂದ್ರ ತೇಜಸ್ವಿಯವರೇ" :P :)

    ReplyDelete