Sep 16, 2010

ಬರೀ ಬಿಳುಪು.....!

ವಾಕಿಟಾಕಿಯಲ್ಲಿ ಸಂದೇಶ ಬರುತ್ತಲೇ ಇತ್ತು......
"ನೀರು ಮೇಲೇರುತ್ತಲೇ ಇದೆ ಸರ್..... ಬೇಗ ಹೊರಟುಬಿಡಿ...."

ಅಣೇಕಟ್ಟಿನಿಂದ ಹೊರಬಿಟ್ಟ ನೀರು ನನಗೆ ಸರಕಾರ ಕೊಟ್ಟ ಮನೆಯ ಒಳಗೆ ಹೊಕ್ಕಿತ್ತು...... ಮಕ್ಕಳು ಹೆಂಡತಿಯನ್ನು ತವರುಮನೆಗೆ ಕಳುಹಿಸಿ ನಾನು ಮುಳುಗುತ್ತಿರುವ ಮನೆಯಿಂದ ಅವಶ್ಯಕ ಮತ್ತು ಪ್ರಮುಖ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದೆ......


ಹೆಂಡತಿಯ ಇಷ್ಟದ ಕಸೂತಿಯ ಪರದೆಗಳು,ಟಿಪಾಯಿಯ ಮೇಲೆ ಹಾಕಿದ ಹೊದಿಕೆ, ಎಲ್ಲವನ್ನೂ ತೆಗೆದುಕೊಂಡಿದ್ದೆ.....
ನನ್ನನ್ನು ಇಷ್ಟಪಡುವ ಹೆಂಡತಿಯ , ನನಗಾಗಿ ಏನನ್ನಾದರೂ ಮಾಡಲು ರೆಡಿಯಾಗಿರುವ ನನ್ನಾಕೆಗೆ ಇದನ್ನಾದರೂ ಮಾಡಬೇಕಾಗಿತ್ತು....

ಸೆಲ್ ಫೊನ್ ರಿಂಗಣಿಸಿತು....
ನೋಡಿದೆ......
ನನ್ನವಳ ಸುಂದರ ಚಿತ್ರದೊಡನೆ ಅವಳ ನಂಬರ್ ಇತ್ತು.....

"ಹೆದರಬೇಡ ಚಿನ್ನ... ನಾನು ಚೆನ್ನಾಗಿದ್ದೇನೆ.....ನಿನ್ನ ಎಲ್ಲಾ ಇಷ್ಟದ ವಸ್ತುಗಳನ್ನು ತೆಗೆದುಕೊಂಡಿದ್ದೇನೆ.... ಈಗಲೇ ಬಿಡುತ್ತಿದ್ದೇನೆ.... ಮಕ್ಕಳನ್ನು ಹೊರಗಡೆ ಬಿಡಬೇಡ" ಎಂದೆ....

"ರೀ......." ಅವಳು ಹೀಗೆ ಕರೆದರೇ ನನಗೆ ಇಷ್ಟ......." ನೀವು ಅಲ್ಲಿಂದ ಇನ್ನೂ ಹೊರಟಿಲ್ಲ ಎಂದಾದರೆ ನಿಮ್ಮ ಸಹಾಯಕರನ್ನಾದರೂ ಕಳಿಸಿ ಹಾಲ್ ನಲ್ಲಿರೋ ಶೊಕೇಸಿನಲ್ಲಿ ನನ್ನ ಅಪ್ಪ ನಿಮಗೆ ಕೊಟ್ಟಿರೊ ಚಿನ್ನದ ಸರ ಸರ ಇದೆ... ತೆಗೆದುಕೊಂಡು ಬನ್ನಿ" ಎಂದಳು......

"ಚಿನ್ನಾ, ನೀರು ತುಂಬಾ ಮೇಲೆರುತ್ತಿದೆ ಕಣೇ..... ನನ್ನ ಸೊಂಟದವರೆಗೂ ಬಂದಿದೆ ನೀರು..... ಈಗ ಹೆಲಿಕಾಫ್ಟರ್ನಿಂದ ಕೆಳಗೆ ಕಾಲಿಟ್ಟರೂ ಕಷ್ಟ ಕಣೇ...." ಎಂದೆ.... "ಸರಿ ನಿಮ್ಮಿಷ್ಟ .. ಬೇಗ ಬನ್ನಿ" ಎಂದು ಹೇಳಿ ಇಟ್ಟಳು.....

 ಆಡಳಿತ ಸೇವೆಯ ಸ್ಪರ್ದಾತ್ಮಕ ಪರೀಕ್ಶೆಯಲ್ಲಿ ಪ್ರಥಮ ಸ್ಥಾನ ಪಡೆದಾಗ ನನ್ನ ಮಾವ ಕೊಟ್ಟ ಚಿನ್ನದ ಸರ ಅದು.... ಆ ಸರದಲ್ಲಿ ನನ್ನ ಹುಡುಗಿ ಕೊಟ್ಟ...  ಲೊಕೆಟ್ ಇತ್ತು......

ಲೊಕೆಟ್ ನೆನಪಾದ ಕೂಡಲೇ ಹೆಲಿಕಾಫ್ಟರ್ನಿಂದ ಕೆಳಕ್ಕೆ ಧುಮುಕಿದೆ..... ನೀರು ಸೊಂಟದವರೆಗೂ ಇತ್ತು..... ನನ್ನ ಜೊತೆ ನನ್ನ ಸಹಾಯಕನೂ ಧುಮುಕಿದ... " ಸರ್, ಹೋಗಬೇಡಿ..ಏನು ಬೇಕು ಹೇಳಿ ನಾನೇ ತರುತ್ತೇನೆ ಸರ್..... ನೀರು ತುಂಬಾ ಜೋರಾಗಿದೆ ಸರ್.."

ನನಗೇನೂ ಕೇಳಿಸುತ್ತಿರಲಿಲ್ಲ....

 ನನಗೆ ಎಲ್ಲಾ ನೆನಪಾಯಿತು.........

ಸ್ಪರ್ಧಾತ್ಮಕ ಪರೀಕ್ಶೆಯ ಕೊನೆಯ ದಿನ ಆ ಹುಡುಗಿ ಕೊಟ್ಟಿದ್ದಳು.....

ನನಗೆ ಉತ್ತೇಜನ ಕೊಟ್ಟವಳು ಅವಳು...

ಅವಳ ನಗೆ ನನಗೆ ಖುಷಿ ಕೊಟ್ಟಿತ್ತು.....

ಅವಳ ಸನಿಹ ನನಗೆ ಹಿತ ನೀಡುತ್ತಿತ್ತು....

ನನ್ನ ಗೆಲುವು ಅವಳಿಗೆ ಮುದ ನೀಡುತ್ತಿತ್ತು.....

ನಮ್ಮ ಸಂಬಂಧಕ್ಕೆ ಹೆಸರು ಇರದೇ ಇದ್ದರೂ ನನಗೆ ಅವಳು ನನ್ನ ಸ್ಪೂರ್ತಿಯಾಗಿದ್ದಳು..... ನಮ್ಮ ಕೊನೆಯ ದಿನ ಅವಳದೊಂದು ಕಪ್ಪು ಬಿಳುಪಿನ ಚಿತ್ರ ಮತ್ತು ಚಿನ್ನದ ಲೊಕೆಟ್ ಕೊಟ್ಟು .... ಕಣ್ಣಲ್ಲಿ ನೀರು ತುಂಬಿಕೊಂಡು ಓಡಿ ಹೋಗಿದ್ದಳು ಹುಡುಗಿ....
ತಿರುಗಿ ಕೂಡ ನೋಡದೆ.......

ನನ್ನ ಕೈಯಿ ನನ್ನ ಕಿಸೆಯ ಮೇಲೆ ಇತ್ತು.....

ಅದರಲ್ಲಿದ್ದ ಅವಳ ಫೋಟೊ ನನಗೆ ಹಿತ ನೀಡುತ್ತಿತ್ತು...

ಅವಳು ಕೊಟ್ಟ ಲೊಕೆಟ್ , ನನ್ನ ಮಾವ ಕೊಟ್ಟ ಸರದ ಜೊತೆ ಸೇರಿ ನನಗೆ ಸ್ಪೂರ್ತಿ ಕೊಡುತ್ತಿತ್ತು.... ಅದನ್ನು ಧರಿಸಿದಾಗ ನನ್ನಾಕೆಯ ಸಂಭ್ರಮ ತೀರದಾಗಿತ್ತು....ಅವಳಿಗಾಗಿ ನಾನು ಅದನ್ನು ದಿನಾಲೂ ಧರಿಸುತ್ತಿದ್ದೆ..... ಅವಳಿಗೆ ತಿಳಿದಿರಲಿಲ್ಲ ನಾನು ಅದನ್ನು  ಧರಿಸುತ್ತಿದ್ದುದು ಆ ಹುಡುಗಿಯ ಲೊಕೆಟ್ ಗಾಗಿ ಎಂದು......

ಹೆಂಡತಿಗೆ ಮೋಸ ಮಾಡುತ್ತಿದ್ದೆನಾದರೂ ಮನಸ್ಸು ಅದಕ್ಕೆ 'ಮೋಸ'ದ ಹೆಸರು ಕೊಟ್ಟಿರಲಿಲ್ಲ.....

ಮನೆಯ ಅರ್ಧ ಬಾಗಿಲಿನವರೆಗೆ ನೀರು ತುಂಬಿತ್ತು.... ರಬಸ ಕೂಡ ಹೆಚ್ಚಿತ್ತು.....

ಒಳ ಮನಸ್ಸು ಯೊಚಿಸುತ್ತಿತ್ತು....
" ಆ ಹುಡುಗಿ ನನ್ನನ್ನು ಮರೆತು ಯಾರ ಜೊತೆಗೋ ಸುಖವಾಗಿ ಇರಬಹುದು.....
 ಅವಳು ನನಗೆ ಕೊಟ್ಟ ಕಾಣಿಕೆ ಗೌರವದಿಂದಲೂ ಇರಬಹುದು..
ಆ ಹುಡುಗಿ ಎಂದೋ ಕೊಟ್ಟ ಗಿಫ್ಹ್ಟ್ ಸಲುವಾಗಿ ನಾನು ನನ್ನ ಇವತ್ತಿನ ಜೀವನ ದಾಳವಾಗಿ ಇಡುವುದು ತಪ್ಪು...."

ಆದರೆ ಕಳ್ಳ ಬುದ್ದಿ ಇದನ್ನೆಲ್ಲಾ ಒಪ್ಪಲು ಸಿದ್ದವಿರಲಿಲ್ಲ..... ತುಂಬಾ ಕಷ್ಟಪಟ್ಟು ಮನೆಯ ಒಳಗೆ ಹೋಗಿ ಲೊಕೆಟ್ ಜೊತೆಗೆ ಸರವನ್ನು ಹಿಡಿದಾಗ ಮನಸ್ಸು ಹಗುರಾಗಿತ್ತು.....

ಸಹಾಯಕನ ಜೊತೆ ಸಾವಧಾನವಾಗಿ ನಡೆದು ಬಂದು ಹೆಲಿಕಾಫ್ಟರ್ ಹತ್ತಿ ಕುಳಿತೆ.....

ನೀರು ಅಪಾಯದ ಮಟ್ಟಕ್ಕೆ ಮುಟ್ಟಿದ್ದರಿಂದ ಪೈಲಟ್ ಕೂಡಲೇ ಸ್ಟಾರ್ಟ್ ಮಾಡಿ ಹೊರಟ.....

ಯಾಕೋ ಮನಸು ಆ ಹುಡುಗಿಯ ಸುತ್ತಲೆ ಗಿರಗಿಟ್ಲೆಯಾಡುತ್ತಿತ್ತು.....

ಹೆಂಡತಿಯ ತವರು ಮನೆಯ ಸಮೀಪ ಹೆಲಿಕಾಫ್ಟರ್ ಲ್ಯಾಂಡ್ ಮಾಡಿದರೂ ನನಗೆ ಇಳಿಯುವ ಮನಸ್ಸಿರಲಿಲ್ಲ...... ಕೈಯಲ್ಲಿನ ಲೊಕೆಟ್ ನನ್ನನ್ನು ಬ್ರಮಾಲೋಕಕ್ಕೆ ಕರೆದೊಯ್ದಿತ್ತು.....

ಇನ್ನೂ ಸ್ವಲ್ಪ ಹೆಲಿಕಾಫ್ಟರ್ನಲ್ಲೇ ಕುಳಿತಿರಲು ನೆವ ಬೇಕಿತ್ತು... ಅದಕ್ಕಾಗಿ ಅಲ್ಲೇ ಕುಳಿತು  ಹೆಂಡತಿಯ ಇಷ್ಟದ ಒಂದೊಂದೇ ವಸ್ತುಗಳನ್ನು ಕೆಳಕ್ಕೆ ಇಳಿಸಿ ಕಳಿಸುತ್ತಿದ್ದೆ...

 ಬಾಗಿಲಲ್ಲೆ ನಿಂತಿದ್ದ ನನ್ನಾಕೆ ಅವೆಲ್ಲವನ್ನು ಕಿರುಗಣ್ಣಿಂದಲೂ ನೋಡದೆ ಒಳಗೆ ಕಳಿಸುತ್ತಿದ್ದಳು.....

ನಾನು ದೂರದಿಂದಲೇ ಇದನ್ನೆಲ್ಲಾ ಗಮನಿಸುತ್ತಿದ್ದೆ.....   ತುಂಬಾ   ಕಷ್ಟಪಟ್ಟು ಅವಳ ಇಷ್ಟದ ವಸ್ತುಗಳನ್ನು ತಂದಿದ್ದೆ...... ಇವಳ್ಯಾಕೆ ಅದರ ಬಗ್ಗೆ ಗಮನವನ್ನೂ ಹರಿಸುತ್ತಿಲ್ಲ.....

ಇವಳಿಗೇನಾದರೂ ನನ್ನ ಲೊಕೆಟ್ ಕಥೆ ಗೊತ್ತಿದೆಯಾ....? ನನ್ನನ್ನು ಪರೀಕ್ಶೆ ಮಾಡಲೇ ಸರ ತರಲು ಹೇಳಿರಬಹುದಾ...?

ಅಷ್ಟು ತಂಪು ವಾತಾವರಣದಲ್ಲೂ ಸಣ್ಣಗೆ ಬೆವೆತೆ....

ಮನಸ್ಸು ಕೆಡುಕು ಯೊಚಿಸುತ್ತಿತ್ತು......

ಏನಾದರಾಗಲಿ ಎಂದು ಅವಳತ್ತ ನಡೆದೆ.....

ನನ್ನ ಕೈಲಿದ್ದ ಫೊಟೊ ಅಲ್ಬಂ ಅವಳು ತೆಗೆದುಕೊಂಡಳು....

ನನ್ನ ಎದೆ ಬಡಿತ ನನಗೇ ಕೇಳಿಸುತ್ತಿತ್ತು.....

ಅವಳು ನನ್ನನ್ನೇ ನೋಡುತ್ತಿದ್ದಳು....

" ನೋಡಮ್ಮಾ, ನಿನಗೆ ಬೇಕೆಂದಿದ್ದ ಎಲ್ಲಾ ವಸ್ತುಗಳನ್ನು ತಂದಿದ್ದೇನೆ..... ಕಸೂತಿಯ ಪರದೆಗಳು, ನಿನ್ನ ನೆಚ್ಚಿನ ಅಡುಗೆ ಸಾಮಾನು, ಮಕ್ಕಳ ಫೋಟೊ ಆಲ್ಬಂ ಎಲ್ಲಾ ತಂದಿದ್ದೇನೆ......ನೀನು ಹೇಳಿದ ಹಾಗೆ ಮಾವನವರು ಕೊಟ್ಟ ಸರ ತರಲು ನಾನು ತುಂಬಾ ಪ್ರಯಾಸಪಟ್ಟೆ ಗೊತ್ತಾ..."

ನನಗೆ ಗೊತ್ತಿತ್ತು ನಾನು ಸರ ತರಲು ಯಾಕೆ ಹೋಗಿದ್ದು ಎಂದು...

ಆದರೆ ಮೂಳೆ ಇಲ್ಲದ ನಾಲಿಗೆ ಸುಳ್ಳು ಹೇಳುತ್ತಿತ್ತು....

ಅವಳು ಕೈಲಿದ್ದ ಆಲ್ಬಂ ಬಿಸಾಡಿಬಿಟ್ಟಳು.....

ಸುತ್ತಲಿದ್ದ ಜನರನ್ನೂ ಲೆಕ್ಕಿಸದೇ ನನ್ನನ್ನು ಬಿಗಿದಪ್ಪಿದಳು......

" ಅಲ್ಲಾರೀ... ನನಗೇನೂ ಬೇಡಾರಿ...... ನಿಮ್ಮ ಜೀವಕ್ಕಿಂತ ಹೆಚ್ಚಾ ಈ ವಸ್ತುಗಳು ನನಗೆ.... ಅಪ್ಪ ಕೊಟ್ಟ ಸರ ತರಲು ನೀವು ನೀರಲ್ಲಿ ಹೋದ ವಿಷಯ ನಿಮ್ಮ ಸಹಾಯಕ ಹೇಳಿದಾಗ ನನ್ನ ಜೀವ ಬಾಯಿಗೆ ಬಂದಿತ್ತುರೀ........ ನನಗೇನೂ ಬೇಡಾರೀ..... ನೀವು ಬಂದಿರಲ್ಲ..... ಅಷ್ಟೇ ಸಾಕು .. " ಎಂದು ಬಿಗಿದಪ್ಪಿದಳು.....

ಇಷ್ಟು ಪ್ರೀತಿಸುವ ಹೆಂಡತಿ ಬಿಟ್ಟು ನಾನು ಎನೇನೋ ಯೋಚಿಸಿಬಿಟ್ಟೆನಲ್ಲಾ.......

ಇವಳ ಪ್ರೀತಿ ಬಿಟ್ಟು ನಾನು  ಎಂದೋ ಕೊಟ್ಟ ಗಿಫ್ಟ್ ,ಅದನ್ನು ಕೊಟ್ಟ ಹುಡುಗಿಯನ್ನು ನೆನಸಿಕೊಂಡು ನನ್ನ ಹೆಂಡತಿಗೆ ಮೋಸ ಮಾಡುತ್ತಿದ್ದೆನಲ್ಲಾ.....
ನನ್ನ ಜೊತೆ ನನ್ನ ಸಂಸಾರಕ್ಕೂ , ಮಕ್ಕಳ ಭವಿಷ್ಯಕ್ಕೂ ಹೆಣಗಾಡುತ್ತಿರುವ ನನ್ನಾಕೆಯ ಬಿಟ್ಟು ಆ ಹುಡುಗಿಯ ನೆನಪು ಮಾಡಿಕೊಳ್ಳುವುದು ನನಗೆ ನಾನೇ ಮಾಡಿಕೊಳ್ಳುವ ಮೋಸ ಎನಿಸಲು ಶುರು ಆಯಿತು......

ಹೌದು ಇದಕ್ಕೆಲ್ಲಾ ಒಂದು ಅಂತ್ಯ ಹಾಡಲೇ ಬೇಕು....

ನನ್ನಾಕೆಗೆ ಸಮಾಧಾನ ಮಾಡಿ ಬಟ್ಟೆ ಬದಲಾಯಿಸಲು ನನ್ನ ರೂಮಿಗೆ ಬಂದೆ......

ಇಷ್ಟು  ಪ್ರೀತಿಯಿಂದ.. ಮಮತೆಯಿಂದ ನೋಡಿಕೊಳ್ಳುವ ನನ್ನಾಕೆಯ ಎದುರು ನಾನು  ಬಹಳ ಸಣ್ಣವನಾಗಿ ಬಿಟ್ಟಿದ್ದೆ .

    ಶರ್ಟ್ ಕಿಸೆಯಲ್ಲಿದ್ದ ಆ ಹುಡುಗಿಯ ಫೊಟೊ ನನ್ನ ಚಿತ್ತ ಕೆಣಕುತ್ತಿತ್ತು.....
    ಬೇಡ....
    ಬೇಡ....
    ಇನ್ನೆಂದೂ ಅವಳ ನೆನಪು ಮಾಡಿಕೊಳ್ಳಬಾರದು....
    ನನ್ನಾಕೆಗೆ ಮೋಸ ಮಾಡಬಾರದು......

    ಕಿಸೆಗೆ ಕೈಹಾಕಿ ಫೊಟೊ ಹೊರ ತೆಗೆದೆ......
    ಕೊರಳಲ್ಲಿದ್ದ ಲೊಕೆಟ್ ತೆಗೆದೆ....

    ಎರಡನ್ನೂ ಕಿಟಕಿಯ ಹೊರ ಬಿಸಾಡೋಣ ಎಂದುಕೊಂಡು ಕಿಟಕಿಯ ಪಕ್ಕ ಬಂದೆ......
    ಹೇಗೂ... ಫೋಟೋ  ಹೊರಗೆ ಎಸೆಯುತ್ತಿದ್ದೆ...

ನನ್ನ ಕಳ್ಳ ಮನಸ್ಸು  .... !!

ಒಮ್ಮೆ ನೋಡಿಬಿಡಬೇಕೆನ್ನುವ  ಆಸೆ ಜಾಸ್ತಿಯಾಯಿತು....

 ಇದೇ ಕೊನೆಯ ಸಾರಿಯಲ್ಲವಾ.... ಒಮ್ಮೆ ನೋಡಿ ಬಿಸಾಡೋಣ.......

ಹೊರಗೆ ತೆಗೆದೆ...

ಇಲ್ಲಿಯವರೆಗಿನ ನನ್ನ ಏಕಾಂತದಲ್ಲಿ...
ನನ್ನ ಒಂಟಿತನದ ಬೇಸರದಲ್ಲಿ.... ಕದ್ದು ಕದ್ದು    ಸಾಂತ್ವನ ಕೊಡುತ್ತಿದ್ದ   ಈ  ಫೋಟೋ...!!

    ಕೈಲಿದ್ದ ಫೋಟೊ ನೋಡಿದೆ........

    ಅಚ್ಚ ಬಿಳುಪಿತ್ತು........!!

    ಫೋಟೊ ಹಿಂಬದಿಯ ಬಿಳುಪಿರಬಹುದು ಎಂದು ತಿರುಗಿಸಿ ನೋಡಿದೆ.....

    ಅಲ್ಲೂ ಅಚ್ಚ ಬಿಳುಪಿತ್ತು.....!!

    ಆಗ ನೆನಪಾಯಿತು..... ಮಳೆಯಲ್ಲಿ ನೆನೆದಿದ್ದು.....



    ಕಿಸೆಯಲ್ಲಿನ ಫೋಟೊ ಒದ್ದೆಯಾದದ್ದು......


ಕಪ್ಪು ಬಿಳುಪು...
ಒದ್ದೆಯಾಗಿ...
 ಬರಿ ಬಿಳುಪು ಮಾತ್ರ  ಉಳಿದಿತ್ತು.... !






(ನನ್ನಲ್ಲಿ ಈ ಕಥೆಯನ್ನು ಬರೆಯಿಸಿದ ಪ್ರಕಾಶಣ್ಣನಿಗೆ ಈ ಕಥೆಯ ಶ್ರೇಯ ಸಲ್ಲುತ್ತದೆ..... ಕಥೆಯನ್ನು ತಿದ್ದಿ ತೀಡಿದ್ದಾರೆ.....
ತಪ್ಪಿದ್ದರೆ ಅದು ನನ್ನದು... )

74 comments:

  1. ದಿನಕರ್ ಸಾಹೇಬ್ರೆ, ಬಹಳ ಚೆನ್ನಾಗಿದೆ! ಇದ್ರ ಬಗ್ಗೆ ಮತ್ತೆ ಬೇರೆ ಶಬ್ದ ಬೇಡ ಅನ್ನಿಸ್ತು. ಆಪ್ತತೆ ತುಂಬಿದ ಕಥೆ !

    ReplyDelete
  2. ದಿನಕರ್,
    ಕಥೆ ಬಹಳ ಚೆನ್ನಾಗಿದೆ....
    ಮತ್ತಷ್ಟು ಬರಲಿ ಹೀಗೆ....

    ReplyDelete
  3. ಚೆನ್ನಾಗಿದೆ ಸರ್... ತುಂಬಾ ಕುತೂಹಲದಿಂದ ಓದುವಂತಿದೆ...

    ReplyDelete
  4. ನನಗೂ ಏನು ಹೇಳ್ಬೇಕು ಅಂತನೇ ತೋಚುತ್ತಿಲ್ಲ :) ಇಬ್ಬರು ಒಳ್ಳೇ ಬರಹಗಾರರು ಎರಡು ಭಾಗಗಳಲ್ಲಿ ಬರೆದ ಕಥೆ ಬಗ್ಗೆ ಮಾತಾಡೋಹಾಗೇ ಇಲ್ಲ :)

    ಸೂಪರ್ ಆಗಿದೆ ಸಾರ್..........

    ReplyDelete
  5. ಪ್ರಕಾಶಣ್ಣ ಬರೆದ ಕಥೆಗೆ ನೀವು ಮತ್ತೊಂದು ಆಯಾಮ ನೀಡಿದ್ದೀರಾ . ಪ್ರಕಾಶಣ್ಣ ನ ಕಥೆಯಲ್ಲಿ ಒಂದು ರೀತಿಯ ಹರಿವಿದ್ದರೆ ನಿಮ್ಮ ಕಥೆಯಲ್ಲಿ ಮತ್ತೊಂದು ಹರಿವು ಹೀಗೆ ಆಗಿದ್ರೆ ?? ಅನ್ನಿಸದಿರದು.ಎರಡೂ ರೂಪಗಳ ಕಥೆ ಚೆನ್ನಾಗಿಬಂದಿದೆ. ನಿಮಗೆ ಹಾಗು ಪ್ರಕಾಶ್ ಇಬ್ಬರಿಗೂ ಥ್ಯಾಂಕ್ಸ್.

    ReplyDelete
  6. ವಾವ್ ಎಷ್ಟು ಸೊಗಸಾಗಿದೆ, ಕುತೂಹಲವೂ ಇದೆ.
    ಬೇರೆಯದೇ ಗುಂಗಿನಲ್ಲಿರುವಾಗ ಪಕ್ಕದಲ್ಲಿ ಪ್ರೀತಿ ತೋರುವ ಜೀವಗಳು ಕಾಣಿಸಿರುವುದೇ ಇಲ್ಲ.
    ಮನಸು ಕಪ್ಪು ಬಿಳುಪಿನ ಗೊಂದಲ ನಿವಾರಿಸಿಕೊಂಡು ಅಚ್ಚ ಬಿಳುಪಿನೆಡೆಗೆ ತಿರುಗುವುದು ಸಂತಸದ ವಿಷಯ.
    ಮಸ್ತ್ ಕಥೆ.

    ReplyDelete
  7. ದಿನಕರ್;ನಿಮ್ಮೊಳಗೂ ,ಪ್ರಕಾಶಣ್ಣನಂತಹ ಅದ್ಭುತ ಕಥೆಗಾರನಿದ್ದಾನೆಂದು ತೋರಿಸಿದ್ದೀರ.ನಿಮ್ಮಿಬ್ಬರ ಜುಗಲ್ ಬಂಧಿ ಸೊಗಸಾಗಿದೆ.ಮತ್ತಷ್ಟು ಸಖತ್ ಕಥೆಗಳು ಬರಲಿ.ನಿಮ್ಮಿಬ್ಬರಿಗೂ ಹಾರ್ದಿಕ ಅಭಿನಂದನೆಗಳು.

    ReplyDelete
  8. ಭಟ್ ಸರ್,
    ನಿಮ್ಮ ಕೆಲವು ಶಬ್ಧಗಳು ನನ್ನ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ..... ಪ್ರಕಾಶಣ್ಣನ ಕಥೆಯ ಇನ್ನೊಂದು ಭಾಗ ಬರೆಯೋದು ಕಷ್ಟ, ಅದರಲ್ಲು ಅವರು ಬರೆಯೋ ರೀತಿ ತುಂಬಾ ಆಪ್ತವಾಗಿರುತ್ತೆ... ಅವರ ಹಾಗೆ ಬರೆಯೋದು ಕಷ್ಟ.... ನಿಮ್ಮ ಪ್ರೊತ್ಶಾಹಕ್ಕೆ ತುಂಬಾ ಧನ್ಯವಾದ ಸರ್..

    ReplyDelete
  9. ಮಹೇಶ್ ಸರ್,
    ಧನ್ಯವಾದ ಸರ್, ನಿಮ್ಮ ಮೆಚ್ಚುಗೆಗೆ....

    ReplyDelete
  10. ಪ್ರಗತಿ ಮೇಡಮ್,
    ನಿಮ್ಮ ಮೆಚ್ಚುಗೆಗೆ ನನ್ನ ಅಭಿನಂದನೆ..... ಹೀಗೆ ಬರುತ್ತಾ ಇರಿ.....

    ReplyDelete
  11. ಗುರುಪ್ರಸಾದ್ ಸರ್,
    ಸಾರ್.... ಇಬ್ಬರು ಒಳ್ಳೆ ಬರಹಗಾರರು ಅಂತ ಹೇಳಬೇಡಿ... ಪ್ರಕಾಶಣ್ಣ ನ ಹಾಗೆ ಬರೆಯೋಕೆ ಆಗಲ್ಲ ಸರ್..... ನನಗನಿಸಿದ ಹಾಗೆ ನಾನು ಬರೆದು ಅವರಿಗೆ ಕಳಿಸಿದ್ದೆ..... ಅವರೇ ಅದನ್ನು ಪ್ರೀತಿಯಿಂದ ಟ್ರಿಮ್ ಮಾಡಿ ನನಗೆ ಕಳಿಸಿದ್ದರು...... ಇದರ ಪೂರ್ತಿ ಶ್ರೇಯ ಅವರಿಗೆ ಸಲ್ಲುತ್ತದೆ..... ನಿಮ್ಮ ಮೆಚ್ಚುಗೆಗೆ ಧನ್ಯವಾದ ಸರ್....

    ReplyDelete
  12. ವನಿತಾ,
    ನಿಮ್ಮ ಉದ್ಘಾರವಾಚಕಕ್ಕೆ ಧನ್ಯವಾದ.... ಇರಲಿ ಹೀಗೆ ಪ್ರೊತ್ಶಾಹ....

    ReplyDelete
  13. ಬಾಲು ಸರ್,
    ನಿಮ್ಮ ಮೆಚ್ಚುಗೆಗೆ ತುಂಬಾ ಥ್ಯಾಂಕ್ಸ್.....ಪ್ರಕಾಶಣ್ಣನ ಕಥೆಯಲ್ಲಿ ಒಂದು ರೀತಿಯ ಮೆದು ಇರತ್ತೆ.... ಅದಕ್ಕೆ ಎಲ್ಲರಿಗೂ ಇಷ್ಟವಾಗತ್ತೆ.... ಮತ್ತೆ ಕೊನೆಯಲ್ಲಿ ಒಂದು ಸಂಧೇಶ ಇದ್ದೇ ಇರತ್ತೆ..... ಹಾಗಾಗಿ ಅವರ ಹಾಗೆ ಬರೆಯೋದು ಅಸಾಧ್ಯ..... ನಿಮ್ಮ ಮೆಚ್ಚುಗೆಗೆ ನನ್ನ ನಮನ.....

    ReplyDelete
  14. ನಾಗರಾಜ್,
    ನಿಮ್ಮ ಮಾತು ನಿಜ..... ದೂರದಲ್ಲಿರುವವರು ಹತ್ತಿರ ಇದ್ದಿದ್ದರೆ ಇಷ್ಟು ಸುಖ ಸಿಗುತ್ತಿತ್ತು.... ಹಾಗಿರುತ್ತಿತ್ತು..... ಹಿಗಿರುತ್ತಿತ್ತು ಎಂದೆಲ್ಲ ಕನವರಿಸುವ ನಾವು ಹತ್ತಿರವಿರುವ ನಮಗಾಗಿ ಜೀವ ಸವೆಸುವ ನಮ್ಮವರನ್ನು ಮರೆಯಿತ್ತೇವೆ ಅಲ್ವಾ.... ಧನ್ಯವಾದ ನಿಮ್ಮ ಚಂದದ ಅನಿಸಿಕೆಗೆ........

    ReplyDelete
  15. ಡಾಕ್ಟರ್ ಸರ್,
    ಕಥೆ ಬರೆಯುವದರಲ್ಲಿ ಪ್ರಕಾಶಣ್ಣನ ಸ್ಪರ್ಧೆ ಇಲ್ಲ..... ಅವರ ಒನಪು ಕಥೆಯಲ್ಲಿ ತುಂಬಾ ಸಿಗತ್ತೆ......ಅವರ ಮಾರ್ಗದರ್ಶನ ನನಗೆ ಈ ಕಥೆ ಬರೆಯಲು ಪ್ರೇರೇಪಿಸಿತು..... ಧನ್ಯವಾದ ಸರ್ ನಿಮ್ಮ ಪ್ರೊತ್ಶಾಹದ ಮಾತಿಗೆ....

    ReplyDelete
  16. ದಿನಕರ್...

    ನಾನು ಬರೆದ ಕಥೆಗೆ ಇನ್ನೊಂದು ಅಂತ್ಯ ಕೊಡುವ ವಿಚಾರ... ಬಂದದ್ದು..
    ಅದಕ್ಕೆ ಅನೇಕರು ಬೆಂಬಲ ವ್ಯಕ್ತ ಪಡಿಸಿದ್ದು...

    ನನಗೆ ಫೋನಿನಲ್ಲಿ ನೀವು
    "ಈ ರೀತಿ ಮಾಡಿದರೆ ಹೇಗೆ?"
    ಅಂದಾಗ ನಾನು ಶಾಕ್ ಆಗಿತ್ತು... ಖುಷಿಯಿಂದ...!

    "ಕಪ್ಪು ಬಿಳುಪು" ನೆನಪುಗಳೆಲ್ಲ... ಬರೀ ಬಿಳುಪಾದದ್ದು...
    ಬರಿ.. ಬಿಳುಪೊಂದೆ ಉಳಿದು ಚಿತ್ರಗಳೆಲ್ಲ "ಅಸ್ಪಷ್ಟವಾಗಿ" ಅಳಿಸಿ ಹೋಗಿದ್ದು !!

    ವಾಹ್ !!
    ಬಹಳ ಚಂದದ ಕಲ್ಪನೆ.. !!

    ಈ ಕಥೆ ಚಂದವಾಗಿ ಮೂಡಿ ಬಂದಿದೆ...
    ಇದರಲ್ಲಿ ನನ್ನ ಹೆಗ್ಗಳಿಕೆ ಏನೂ ಇಲ್ಲ..

    ನಿಮ್ಮಿಂದ ಇನ್ನಷ್ಟು ಕಥೆಗಳು ಬರಲಿ..
    ನಮಗೆಲ್ಲ ಉಣ ಬಡಿಸಿ...

    ಚಂದದ ಕಲ್ಪನೆಗಾಗಿ...
    ಸುಂದರವಾಗಿ ಕಥೆ ಹೆಣೆದಿದ್ದಕ್ಕೆ.. ಅಭಿನಂದನೆಗಳು....!!

    ReplyDelete
  17. ಪ್ರಕಾಶರ ಕಥೆಗೆ ಹೊಸ ಆಯಾಮ ಕೊಟ್ಟಿದ್ದೀರಿ. ತು೦ಬಾ ಚೆನ್ನಾಗಿದೆ. ನಿಮ್ಮೊಳಗಿನ ಕಥೆಗಾರನಿಗೆ ಇನ್ನಷ್ಟು ಕೆಲಸ ಕೊಡಿ

    ReplyDelete
  18. Hi Dinakar..

    Wov.. very nice continuation... kappu bilupu bari bilupaagi ulidittu.. super ending...

    very very nice
    Pravi

    ReplyDelete
  19. ಕೊನೆಯಲ್ಲಿ ಇಟ್ಟಿರೋ ಫೀಲಿಂಗ್ ಸೂಪರ್..
    ಆಗ ಆ ಮನಸು ಅದೆಷ್ಟು ಚಡಪಡಿಸಿರುತ್ತೆ ಅಲ್ವ..

    ReplyDelete
  20. ದಿನಕರ್,
    ಸೂಪರ್ ಬಿಳುಪಿನ ಕತೆ ಇದು !
    ಚೆನ್ನಾಗಿ ಮೂಡಿ ಬಂದಿದೆ..

    ReplyDelete
  21. ದಿನಕರ್ ಸರ್ ನಿಮ್ಮ ಬರೀ ಬಿಳುಪಿನ ಕತೆ ನಮ್ಮ ಹಿಂದಿನ ನೆನಪುಗಳನ್ನು ಕೆದಕಿತು.

    ReplyDelete
  22. ದಿನಕರ್ ಅವರೇ...

    ಎ೦ತ ತಲೆ ಮಾರಾಯ್ರೆ ನಿಮ್ಮದು... ತು೦ಬಾ ಚ೦ದವಾಗಿ ಮುಗಿಸಿದ್ದೀರಿ ಕಥೆಯನ್ನು.. ಅಲ್ಲಲ್ಲಿ ಪ್ರಕಾಶಣ್ಣನ ಬರಹದ ಶೈಲಿಯ ಛಾಯೆ ಕೂಡ ಇದೆ...

    ಇಬ್ಬರಿಗೂ ಅಭಿನ೦ದನೆಗಳು :)

    ReplyDelete
  23. ಉತ್ತಮ ಪ್ರಯತ್ನ. ಮುಂದುವರಿಯಲಿ. ಸಾಲುಗಳಲ್ಲಿ ಕಂಟ್ಯೂನಿಟಿ ಇದ್ದಿದ್ದರೆ ಮತ್ತೂ ಚೆನ್ನಾಗಿತ್ತು. ಹೆಚ್ಚು ಎಂಟರ್‌ಗಳಿದ್ದರೆ ಅದು ಕಥೆಗಿಂತ ಹೆಚ್ಚಾಗಿ ಘಟನೆಯಂತೆ ಓದಿಸಿಕೊಳ್ಳುತ್ತದೆ. ಕೊನೆಯ ಸಾಲುಗಳು ಹೆಚ್ಚು ಆಪ್ತವಾಗಿವೆ.

    ReplyDelete
  24. Too good, Sir.. ತುಂಬಾ ಉತ್ತಮವಾಗಿ ಮುಂದುವರಿಸಿದ್ದೀರ.. ಭೂತಕಾಲದ ಕಪ್ಪು ಸರಿದು ವರ್ತಮಾನದ ಬಿಳುಪು ಮಾತ್ರ ಉಳಿಯಿತು.. ಅರ್ಥಪೂರ್ಣ ಕಲ್ಪನೆ.. ಅಭಿನಂದನೆಗಳು :)

    ReplyDelete
  25. sooper kathe sir, eradu baari odide very nice heege barita iri

    ReplyDelete
  26. ಪ್ರಕಾಶಣ್ಣನ ಕತೆಯನ್ನು ನೀವು ಮುಂದುವರೆಸಿದ ರೀತಿ ತುಂಬ ಚೆನ್ನಾಗಿದೆ.

    ReplyDelete
  27. ದಿನಕರ,
    ಪ್ರಕಾಶರ ಕತೆಗೆ ಸುಂದರ ಅಂತ್ಯ. ಅಭಿನಂದನೆಗಳು.

    ReplyDelete
  28. ದಿನಕರ್ ಸರ್,
    ಒಂದು ಕತೆಯನ್ನು ಎಷ್ಟು ವಿಧದಲ್ಲಿ ಬೇಕಾದರೂ ಅಂತ್ಯ ಕಾಣಿಸಬಹುದು.
    ಆದರೆ ಈ ಕತೆಗೆ ಇಂತಹ ಅಂತ್ಯ ಅದ್ಭುತ.
    ಪ್ರಕಾಶಣ್ಣನ ಕತೆಯಲ್ಲಿ ಸಿಹಿ ಕಹಿಗಳ ಮಿಶ್ರಣ, ನಿಮ್ಮ ಕತೆ ಸಿಹಿಯ ರಸದೌತಣ.......
    ಒಬ್ಬರಿಗಿಂತ ಒಬ್ಬರು ಸುಂದರವಾಗಿ ಕತೆಯನ್ನು ಮುಗಿಸಿದ್ದೀರಾ,
    superro super.......

    ReplyDelete
  29. ದಿನಕರ್ ,
    ಪ್ರಕಾಶಣ್ಣ ನ ಬರಹದ್ದೇ ಆತ್ಮೀಯ ಭಾವ ಇಲ್ಲಿಯೂ ಧ್ವನಿಸಿತು. ಮುಗಿಸುವಾಗ .. ಒಂಥರಾ.... ಮನಸ್ಸು ಆರ್ದ್ರವಾದ ಅನುಭವ .. ಚಂದದ ಬರಹ .

    ReplyDelete
  30. ಪ್ರಕಾಶಣ್ಣ,
    ನಿಮ್ಮ ಕಥೆಗೆ ಇನ್ನೊಂದು ಭಾಗ ಬರೆಯುವ ಮಾತು ಬಂದಿದ್ದು, ತಪ್ಪು ಕಲ್ಪನೆಯಿಂದ...... "ಇನ್ನೂ ಇದೆ" ಎಂದು ನೀವು ಬರೆದಿದ್ದೀರಾ ಎಂದುಕೊಂಡು ನಾನು ನಿಮಗೆ ನನಗನಿಸಿದ ಅಂತ್ಯ ಹೇಳಿದೆ.... ನಿಮಗೆ ಅದು ಇಷ್ಟವಾಗಿ ನನಗೆ ಬರೆಯಲು ಹೇಳಿದಿರಿ...... ನಾನು ಬರೆದು ಕಳಿಸಿದ ಕಥೆಯನ್ನು ತಿದ್ದಿ ಬರೆದು ಕಳಿಸಿದಿರಿ.... ಅದು ನಿಮ್ಮ ದೊಡ್ಡ ಗುಣ...... ಧನ್ಯವಾದ ನಿಮ್ಮ ಪ್ರೊತ್ಸಾಹಕ್ಕೆ.... ಹೀಗೆ ಬೆನ್ನು ತಟ್ಟುತ್ತಿರಿ....

    ReplyDelete
  31. ಪರಾಂಜಪೆ ಸರ್,
    ಕಥೆಗಾರನಿಗೆ ಬೆನ್ನುತಟ್ಟುತ್ತಿರಿ ಸರ್..... ಪ್ರೊತ್ಸಾಹಕ್ಕೆ ಧನ್ಯವಾದ.....

    ReplyDelete
  32. ಮನಮುಕ್ತಾ ಮೇಡಮ್,
    ಥ್ಯಾಂಕ್ಯು.... ನಿಮ್ಮ ಮೆಚ್ಚುಗೆಗೆ, ಅನಿಸಿಕೆಗೆ.....

    ReplyDelete
  33. ಪ್ರವೀಣ್.
    ಸ್ವಾಗತ ನನ್ನ ಬ್ಲಾಗ್ ಗೆ.....ನಿಮ್ಮ ಮೆಚ್ಚುಗೆಗೆ ನನ್ನ ಧನ್ಯವಾದ..... ಎನೇ ಆದರೂ ಜೀವನದಲ್ಲಿ ಕಪ್ಪೆಲ್ಲಾ ಕಳೆದು ಬಿಳಿಯಷ್ಟೆ ಉಳಿದರೆ ಜೀವನ ಚಂದ.... ಅಲ್ಲವಾ...?

    ReplyDelete
  34. ಕತ್ತಲ ಮನೆ,
    ಮನಸ್ಸು ಎಲ್ಲದ್ದಕ್ಕು ಚಡಪಡಿಸತ್ತೆ..... ಅದನ್ನು ಸರಿ ದಾರಿಗೆ ತಂದರೆ ಎಲ್ಲವೂ ಸರಿ ಆಗತ್ತೆ..... ಧನ್ಯವಾದ ನಿಮ್ಮ ಮೆಚ್ಚುಗೆಯ ಅನಿಸಿಕೆಗೆ...

    ReplyDelete
  35. ಅಪ್ಪ ಅಮ್ಮ,
    ಹೌದು, ಇದು ಅಚ್ಚ ಬಿಳುಪಿನ ಕಥೆ..... ಜೀವನದಲ್ಲಿ ಕಪ್ಪಿರಬೇಕು ನಿಜ... ಆದ್ರೆ ಅದು ಎಷ್ಟಿರಬೇಕೋ ಅಷ್ಟಿದ್ದರೆ ಚೆನ್ನ ಅಲ್ಲವೆ.... ಧನ್ಯವಾದ ನಿಮ್ಮ ಅನಿಸಿಕೆ ಮತ್ತು ಮೆಚ್ಚುಗೆಗೆ.....

    ReplyDelete
  36. ಹರೀಶ್,
    ಹೌದಾ....? ನಿಮ್ಮ ಹಿಂದಿನ ಕಥೆಯನ್ನು ನಮ್ಮ ಜೊತೆ ಹಂಚಿಕೊಳ್ಳಿ...... ನಿಮ್ಮ ಮನ ಕಲಕಿದ್ದು ನನಗೆ ಖುಶಿ ತಂದಿತು.... ಧನ್ಯವಾದ....

    ReplyDelete
  37. ಸುಧೇಶ್,
    ಹೌದು ... ಅವರ ಕಥೆ ಮುಂದುವರಿಸಲು ಹೋದೆನಲ್ಲ...ಅದಕ್ಕೆ ಅವರ ಹಾಗೆ ಬರೆಯಲು ಪ್ರಯತ್ನ ಪಟ್ಟೆ..... ಎಷ್ಟು ಯಶಸ್ಸು ಪಡೆದೆನೋ ಗೊತ್ತಿಲ್ಲ..... ಧನ್ಯವಾದ ನಿಮ್ಮ ಅನಿಸಿಕೆಗೆ..... ನನ್ನ ತಲೆಗೆ ಅಭಿನಂದನೆ ಸಲ್ಲಿಸಿದ್ದನ್ನು ಸ್ವೀಕರಿಸಿದ್ದೇನೆ.....

    ReplyDelete
  38. ತೇಜಸ್ವಿನಿ ಮೇಡಮ್,
    ನಿಮ್ಮ ಮೆಚ್ಚುಗೆಗೆ ಧನ್ಯವಾದ..... ಈ ಕಥೆಯಲ್ಲಿ ಘಟನೆಗಳಿಗಿಂತ ವಿಚಾರಗಳ ಗೊಂದಲಗಳೇ ಹೆಚ್ಚಾಗಿದ್ದರಿಂದ ಹೀಗೆ ಬರೆದೆ... ನಿಮ್ಮ ಹಿತನುಡಿಗಳಿಗೆ ಧನ್ಯವಾದ.....

    ReplyDelete
  39. ಶ್ರವಣ್,
    ಹಿಂದಿನ ಕತ್ತಲನ್ನು ತೊಡೆದು ಬೆಳಕಿನತ್ತ ನಡೆದರೆ ಅದನ್ನು ಮುನ್ನಡೆ ಎನ್ನುತ್ತಾರೆ...... ಹಾಗೆ ನಾವು ನಮ್ಮ ಜೀವನದ ಕಪ್ಪನ್ನು ಬಿಟ್ಟು, ಬಿಳಿಪಿನತ್ತ ನಮ್ಮ ಧ್ಯಾನ ಹರಿಸಿದರೆ ಉತ್ತಮ ಎಂದು ಈ ರೀತಿ ಬರೆದೆ.... ಧನ್ಯವಾದ ನಿಮ್ಮ ಮೆಚ್ಚುಗೆಗೆ...

    ReplyDelete
  40. ವೆಂಕಟೇಶ್ ಸರ್,
    ಸುಖಾಂತ್ಯ ನನಗೂ ಖುಶಿ ಕೊಟ್ಟಿತು.... ನಿಮಗೂ ಇಷ್ಟವಾದುದಕ್ಕೆ ನನಗೆ ಖುಶಿ ನೀಡಿತು.... ಧನ್ಯವಾದ ನಿಮ್ಮ ಮೆಚ್ಚುಗೆಭರಿತ ಅನಿಸಿಕೆಗೆ....

    ReplyDelete
  41. ಮನಸು ಮೇಡಮ್,
    ತುಂಬಾ ತುಂಬಾ ಧನ್ಯವಾದ..... ಎರಡು ಸಾರಿ ಓದಿ, ಅನಿಸಿಕೆ ಹಾಕಿದ್ದಕ್ಕೆ...... ನಿಮ್ಮ ಬ್ಲೊಗ್ ಗೆ ಯಾವಾಗ ಮುಂದಿನ ಪೋಸ್ಟ್......

    ReplyDelete
  42. ಸುಮ ಮೇಡಮ್,
    ಅವರ ಕಥೆ ಮುಂದುವರಿಸಿದ್ದೇ ನನಗೆ ಖುಶಿ ಕೊಟ್ಟಿದೆ.... ಅದರಲ್ಲೂ ನಿಮಗೆಲ್ಲಾ ಇಷ್ಟವಾದದ್ದು ಇನ್ನೂ ಖುಷಿ ತಂದಿತು.......ಧನ್ಯವಾದ....

    ReplyDelete
  43. ಸುನಾಥ್ ಸರ್,
    ನಿಮ್ಮ ಮೆಚ್ಚುಗೆಯ ಮಾತುಗಳೆ ನನಗೆ ಮುಂದುವರಿಯಲು ಮದ್ದು.... ಹೀಗೆ ಬೆನ್ನು ತಟ್ಟುತ್ತಾ ಇರಿ.... ಧನ್ಯವಾದ....

    ReplyDelete
  44. ಪ್ರವೀಣ್,
    ಹೌದು... ಪ್ರಕಾಶಣ್ಣ ಬರೆದ ಕಥೆಗೆ ಅಂತ್ಯ ಬರೆದ ನಂತರ ಭಯ ಇತ್ತು.... ನಿಮಗೆಲ್ಲಾ ಇಷ್ಟ ಆಗುತ್ತೋ ಇಲ್ವೋ ಅಂತ.... ಇಷ್ಟಪಟ್ಟಿದ್ದಕ್ಕೆ ಧನ್ಯವಾದ.....

    ReplyDelete
  45. chitra madam,
    thank you very much for your comment and appreciation....

    ReplyDelete
  46. ದಿನಕರ್
    ಎಲ್ಲಿಟ್ಟಿದ್ರಿ..ಇಷ್ಟುದಿನ...?ಛುಪಾ ರುಸ್ತುಮ್ ಕಣ್ರೀ...
    ಪ್ರಕಾಶನ ಪ್ರಕಾಶಕ್ಕೆ ಬಣ್ಣದ ಕಾಗದ ಹಚ್ಚಿ ಬಿಳಿಯ ಅಂತ್ಯಕ್ಕೆ ಕಲರ್ ಕೊಟ್ರಿ...ಮುಮ್ದುವರೆಯಲಿ ಈ ದಿಶೆಯಲ್ಲೇ ಇನ್ನೂ ಹಲವು.

    ReplyDelete
  47. ಹೆಗಡೇಜಿ ಅವರ ಕತೆಯ ಮುಂದುವರೆದ ಭಾಗ ಅಂತ ತಳ್ಳಿಹಾಕುವಂತಿಲ್ಲ ನಿಮ್ಮ ಛಾಪೂ ಇದೆ.
    ಆದ್ರೆ ತೇಜಸ್ವಿನಿ ಹೇಳಿದ ಮಾತುಅದೇ ಘಟನೆಗಳ ವಿವರ ಮಾತ್ರ ಅನಿಸುತ್ತದೆ ಈ ಕತೆಯಲ್ಲಿ ಪಾತ್ರಗಳ
    ಒಳತೋಟಿ ತೋರಿಸಲು ನಿಮಗೆ ಅವಕಾಶವಿತ್ತು ಮುಂದೆ ನಿಮ್ಮಿಂದ ಇನ್ನೂ ಹೆಚ್ಚಿಗೆ ನಿರೀಕ್ಷೆಯಿದೆ

    ReplyDelete
  48. dinakar sir... prakash sir arambisidannu.. sundaravaagi muktaya gosiddira ... sundara vaada lekhana...

    ReplyDelete
  49. ದಿನಕರ್ ಸರ್,

    ನಿಮ್ಮ ಕಥೆ ತುಂಬಾ ಇಷ್ಟ ಆಯಿತು, 'ಕಪ್ಪು- ಬಿಳುಪು' ಕೊನೆಯಲ್ಲಿ ಬರೀ 'ಬಿಳುಪಾಗಿ' ಉಳಿದಿದ್ದೆ ಕಥೆಯ ಪ್ರಮುಖ ಅಂಶ. ನಮ್ಮ ಮನಸ್ಸಿನಲ್ಲಿ ಆಗಾಗ ಬದಲಾಗುತ್ತಿರುವ ಭಾವನೆಗಳಿಗೆ ನಿಮ್ಮ ಕಥೆಯೊಂದು ಜ್ವಲಂತ ಉದಾಹರಣೆ. ಕಥೆಯ ನಿರೂಪಣೆ ತುಂಬಾ ಇಷ್ಟ ಆಯಿತು. ಇನ್ನು ಹೆಚ್ಚು ಹೆಚ್ಚು ಕಥೆಗಳು ನಿಮ್ಮಿಂದ ಬರಲಿ....ಧನ್ಯವಾದಗಳು.

    ReplyDelete
  50. full marks dinakar sir. kuthoohalavannu kadeyavaregu ulisikondu bandu, bhaavada bannavannu badalayisida upameyu... super...!

    shubhashayagalu
    ananth

    ReplyDelete
  51. ಕತೆ ಬಲು ಸೊಗಸಾಗಿದೆ ಸರ್ .ಕುತೂಹಲದಿಂದ ಓದಿಸಿಕೊಂಡು ಹೋಗಿತು..ಹೀಗೆಯೇ ಮುಂದುವರೆಸಿ.

    ReplyDelete
  52. ದಿನಕರ್ ಸರ್,

    ಇವತ್ತು ಬಿಡುವು ಮಾಡಿಕೊಂಡು ನಿದಾನವಾಗಿ ಓದಿದೆ. ನೀವು ತುಂಬಾ ಕುತೂಹಲಕರವಾಗಿ ಚೆನ್ನಾಗಿ ಮುಂದುವರಿಸಿಕೊಂಡು ಹೋಗಿದ್ದೀರಿ. ನಮ್ಮನ್ನು ಮೀರಿ ಪ್ರಕೃತಿ ಹೇಗೆ ಎಲ್ಲವನ್ನು ಬದಲಿಸಬಲ್ಲದು ಎನ್ನುವುದಕ್ಕೆ ನಿಮ್ಮ ಕತೆಯ ಅಂತ್ಯ ಉದಾಹರಣೆ. ತುಂಬಾ ಚೆನ್ನಾಗಿದೆ. keep it up..sir.

    ReplyDelete
  53. ತುಂಬ ಚೆನ್ನಾಗಿತ್ತು ಸರ್. ಮುಂದುವರಿಯಲಿ ಹೀಗೆ.

    ReplyDelete
  54. ಸುಬ್ರಮಣ್ಯ ಸರ್,
    ನಿಮ್ಮ ಮೆಚ್ಚುಗೆಯ ಅನಿಸಿಕೆಗೆ ತುಂಬಾ ಧನ್ಯವಾದ.....

    ReplyDelete
  55. ಆಜಾದ್ ಸರ್,
    ಹ್ಹ ಹ್ಹಾ... ಎಲ್ಲೂ ಇರಲಿಲ್ಲ ಸರ್, ನಿಮ್ಮಂಥವರ ಮಾರ್ಗದರ್ಶನ ನನ್ನಲ್ಲಿ ಉತ್ಸಾಹ ಮೂಡಿಸುತ್ತಿದೆ ಸರ್.... ನಿಮ್ಮೆಲ್ಲರ ಪ್ರೊತ್ಸಾಹ ಹೀಗೆ ಇರಲಿ.....ಧನ್ಯವಾದ ನಿಮ್ಮ ಮೆಚ್ಚುಗೆಗೆ....

    ReplyDelete
  56. ಉಮೇಶ್ ಸರ್,
    ನನ್ನ ಕಥೆಯಲ್ಲಿ, ಘಟನೆಗಳಿಗಿಂತ ಹೆಚ್ಚಾಗಿ ಭಾವನೆಗಳ ತಾಕಲಾಟ ಇದೆ.... ಅದಕ್ಕಾಗಿ ಈ ರೀತಿ ಬರೆದೆ..... ಭಾವನೆಗಳನ್ನು ಒಂದು ಪ್ಯಾರಗ್ರಾಫ್ ನಲ್ಲಿ ಬರೆದರೆ ಓದಲು ಸರಿ ಆಗಲ್ಲ ಎನಿಸಿ ಹೀಗೆ ಬರೆದೆ..... ನನ್ನ ಎಂದಿನ ಶೈಲಿ ಸ್ವಲ್ಪ ಬದಲಿ ಮಾಡಿ ಬರೆದೆ ಸರ್.... ಧನ್ಯವಾದ ನಿಮ್ಮ ಅನಿಸಿಕೆಗೆ.....

    ReplyDelete
  57. ತರುಣ್,
    ತುಂಬಾ ಧನ್ಯವಾದ ನಿಮ್ಮ ಮೆಚ್ಚುಗೆಯ ಅನಿಸಿಕೆಗೆ.....

    ReplyDelete
  58. ಅಶೋಕ್ ಸರ್,
    ನಿಮ್ಮ ಅನಿಸಿಕೆಗೆ ನನ್ನ ಸಹಮತ ಇದೆ.... ಬಾಳಲ್ಲಿ ಎಂದಿಗೂ ಕಪ್ಪಲ್ಲಿ ಬಿಳುಪೇ ಎದ್ದು ಕಂಡರೆ ಖುಶಿ ಅಲ್ವಾ...? ಎಲ್ಲರ ಬಾಳಿನ ಹಾರೈಕೆ ಇದು.....ಧನ್ಯವಾದ ಸರ್ ನಿಮ್ಮ ಮೆಚ್ಚುಗೆಗೆ....

    ReplyDelete
  59. ಅನಂತ್ ಸರ್,
    ನಿಮ್ಮ ಮೆಚ್ಚುಗೆ ಭರಿತ ಮಾತುಗಳಿಗೆ ನನ್ನ ಅನಂತ ಧನ್ಯವಾದಗಳು..... ನಿಮ್ಮ ಪ್ರೊತ್ಸಾಹ ಹೀಗೆ ಇರಲಿ.....

    ReplyDelete
  60. ಶಶಿ ಮೇಡಮ್,
    ಧನ್ಯವಾದ.... ಹೀಗೆ ಬರುತ್ತಾ ಇರಿ....

    ReplyDelete
  61. ಶಿವೂ ಸರ್,
    ಮಾನವ ಎಂದಿಗೂ ಪ್ರಕ್ರತಿಯ ಮುಂದೆ ದೊಡ್ಡವನಲ್ಲ ಎಂದು ಗಮನದಲ್ಲಿಟ್ಟು ಬರೆದೆ ಸರ್.... ನಿಮಗೆ ಮೆಚ್ಚುಗೆಗೆ ತುಂಬಾ ಧನ್ಯವಾದ.....

    ReplyDelete
  62. ಭಾಶೇ ಮೇಡಮ್,
    ತುಂಬಾ ಧನ್ಯವಾದ......

    ReplyDelete
  63. ಡಾ. ಗುರು ಸರ್,
    ಧನ್ಯವಾದ ನಿಮ್ಮ ಮೆಚ್ಚುಗೆಗೆ....

    ReplyDelete
  64. dinakar sir,
    i dont want to lie..
    lekhana channagiye barediddiri.. adare astu kikku siglilla... :(

    ReplyDelete
  65. ನಿರೂಪಣಾ ಶೈಲಿ ಬಹಳ ಸೊಗಸಾಗಿದೆ ದಿನಕರ್ . ಉತ್ತಮ ಕಥೆ ನೀಡಿದ್ದಕ್ಕಾಗಿ ಧನ್ಯವಾದಗಳು.

    ReplyDelete
  66. tumba chennagide sir, modala baari nimma blog nodiddu, matte matte odona annisutte...

    ReplyDelete
  67. ನಿಮ್ಮೊಳಗಿನ ಕತೆಗಾರ ಈಗ ಹೊರ ಬರುತ್ತಿದ್ದಾನೆ. ಮನೋಜ್ಞ ಕಥನ ಶೈಲಿ... ಭೇಷ್...

    ReplyDelete
  68. ಚೆನ್ನಾಗಿದೆ ಬಾಸ್!

    ReplyDelete
  69. Thumba chennagide :)
    Kathe super!

    ReplyDelete
  70. ಪ್ರಕಾಶಣ್ಣನ ಕಥೆಯನ್ನೂ ಮುಂದುವರೆಸಿ ಅದಕ್ಕೆ ಇನ್ನೊಂದು ಆಯಾಮ ನೀಡಿದ್ದಿರ.. ತುಂಬಾ ಆಪ್ತತೆಯ ಬರಹ.

    ReplyDelete