Feb 6, 2010

ಮಲಯಾಳಿ ಮನುಷ್ಯ..... !

ನಾನು ಈಗ ಕೆಲಸ ಮಾಡ್ತಾ ಇರುವ ಕಂಪನಿಯಲ್ಲಿ team leader ಒಬ್ಬರಿದ್ದರು...... ಈಗ ಅವರಿಲ್ಲ , ವರ್ಗಾವಣೆ ಆಗಿದೆ..... ಅವರು ಕೇರಳದವರು.... ಅತಿಯಾದ ಮಲಯಾಳಿ ಪ್ರೇಮ, ಪ್ರೇಮ ಎನ್ನುವುದಕ್ಕಿಂತ ಕೇರಳದಲ್ಲಿಯೇ ಹೆಚ್ಚಿಗೆ ಕೆಲಸ ಮಾಡಿದ್ದರಿಂದ ಮಲಯಾಳಿ ಬಿಟ್ಟು ಬೇರೆ ಭಾಷೆ ಬಿಟ್ಟು ಮಾತಾಡಿರಲಿಲ್ಲ..... ಹಿಂದಿ ಭಾಷೆ ಸುಟ್ಟುಕೊಂಡು ತಿನ್ನಲೂ ಬರುತ್ತಿರಲಿಲ್ಲ.... ಒಂದು ಶಬ್ಧದ ಅರ್ಥವೂ ತಿಳಿದಿರಲಿಲ್ಲ..... ನಮ್ಮ ಸಂಭಾಷಣೆ 'ಮಂಗ್ಲಿಶ್ ' ನಲ್ಲಿ ನಡೆಯುತ್ತಿತ್ತು.... ಅಂದ್ರೆ ಅಲ್ಪ ಇಂಗ್ಲಿಷ್, ಉಳಿದದ್ದು ಮಲಯಾಳಿಯಲ್ಲಿ ನಡೆಯುತ್ತಿತ್ತು..... ಮಾತಿನ ಆರಂಭ ಇಂಗ್ಲಿಷ್ ನಲ್ಲಿ ಮಾಡಿದರೆ , ಮುಗಿಯೋದು ಮಲಯಾಳಿಯಲ್ಲಿ... ಅದೂ 'ರಾಜಧಾನಿ express' ಸ್ಪೀಡಿನಲ್ಲಿ...... ಫರ್ಮಾನು ಹೊರಡಿಸುತ್ತಿದ್ದರು.....ಯಾಕೆಂದರೆ ಮಂಗಳೂರು ಕೇರಳಕ್ಕೆ ಹತ್ತಿರವಂತೆ , ಹಾಗಾಗಿ ನಾವೆಲ್ಲಾ ಮಲಯಾಳಿ ಕಲಿಯಬೇಕಂತೆ..... ನಮ್ಮಲ್ಲಿ ಕೆಲವರು ಕರ್ನಾಟಕದವರು, ಆಂದ್ರ, ಉತ್ತರ ಪ್ರದೇಶ, ಬಂಗಾಳ, ತಮಿಳು ನಾಡಿನವರೂ ಕೆಲಸ ಮಾಡುತ್ತಿದ್ದರು..... ನಮಗೆ ಅವರು ಹೇಳಿದ್ದು ಅರ್ಥವೂ ಆಗುತ್ತಿರಲಿಲ್ಲ.... ಎಲ್ಲಾನೂ ಮಲಯಾಳಿಯಲ್ಲಿ ಹೇಳಿ ಮುಗಿಸಿ ಕೊನೆಗೆ ' understood na ' ಎಂದು ಬೇರೆ ಕೇಳುತ್ತಿದ್ದರು.... ಸುಮ್ಮನೆ ತಲೆಯಾಡಿಸಿ ಬರುತ್ತಿದ್ದೆವು..... 'ಪುಣ್ಯಾತ್ಮರು ' ಯಾವುದೇ ಕೆಲಸ ಹೇಳಿದ್ರೂ , ಎರಡನೇ ಬಾರಿ ಅದರ ಬಗ್ಗೆ ವಿಚಾರಿಸುತ್ತಾ ಇರಲಿಲ್ಲ...... ಕೇಳಿದ್ದರೂ, ನಾವು ಕೆಲಸ ಮಾಡಿರುತ್ತಿರಲಿಲ್ಲ.... ಯಾಕಂದ್ರೆ ಹೇಳಿದ ಕೆಲಸ ಅರ್ಥ ಆಗಿದ್ರೆ ತಾನೇ........
ನಾನಂತೂ ತುಂಬಾ ಕಷ್ಟ ಪಟ್ಟಿದ್ದೆ..... ಯಾವುದೇ ಕೆಲಸ ಇದ್ರೂ ನಂಗೆ ಕರೆದು ಹೇಳುತ್ತಿದ್ದರು ..... ಅದೇ ಮಂಗ್ಲಿಶ್ ಭಾಷೆಯಲ್ಲಿ , ಆರಂಭ ಇಂಗ್ಲಿಷ್....ಅಂತ್ಯ ಮಲಯಾಳಿ..... ಒಂದು
ಚೂರೂ ಅರ್ಥ ಆಗ್ತಿರಲಿಲ್ಲ..... ಹೇಗಾದರೂ ಮಾಡಿ ಅವರಿಗೆ ಚುರುಕು ಮುಟ್ಟಿಸಬೇಕು ಎಣಿಸಿಕೊಂಡೆ..... .. ನನ್ನ ಸಹಪಾಠಿಗಳು ಇದಕ್ಕೆ ಸಮ್ಮತಿಸಿದ್ದರು.....ಹೇಗೆ ಅಂತ ಗೊತ್ತಿರಲಿಲ್ಲ.....
ಇದರ ಬಗ್ಗೆ ನಾವು ತುಂಬಾ ಸಾರಿ ನಮ್ಮ ಕಷ್ಟ ಹೇಳಿಕೊಂಡರೆ , ಅವರು ನಾವೆಲ್ಲಾ ಮಲಯಾಳಿ ಕಲಿಯಬೇಕೆಂದು
ಒಂದು ದಿನ, ತಿಂಗಳಿಗೊಮ್ಮೆ ನಡೆಯುವ ಮೀಟಿಂಗ್ ನಡೆಯುತ್ತಿತ್ತು... ನಮ್ಮ ಪ್ರಾಜೆಕ್ಟ್ ನಲ್ಲಿ ಬರುವ flyover ಕೆಲಸದ ಬಗ್ಗೆ ಚರ್ಚೆ ನಡೆಯಬೇಕಿತ್ತು..... ಶುರುವಾಯಿತು ಚರ್ಚೆ ..... team ಲೀಡರ್ ಮಾತನಾಡಲು ಶುರು ಮಾಡಿದರು...... ಎಂದಿನಂತೆ ಇಂಗ್ಲಿಷ್ ಸ್ಟಾರ್ಟ್....... ಸ್ವಲ್ಪ ಹೊತ್ತಿನಲ್ಲೇ ಮಲಯಾಳಿ ಶುರು ಆಗಿತ್ತು..... ನಾನು ' ಸರ್, ನೀವು ಮಲಯಾಳಿಯಲ್ಲಿ ಮಾತಾಡುತ್ತಿದ್ದೀರಾ' ಎಂದು ಹೇಳೋಣ ಎಂದು ಮದ್ಯೆ ಬಾಯಿ ಹಾಕಿದೆ..... ' ಸರ್ ' ಎಂದೆ ...... ಅವರು ಗಂಭೀರವಾಗಿ ' first let me finish, then ask your doubt' ಎಂದರು ..... ನಾನು ಮುಚ್ಚಿ ಕುಳಿತೆ ..... ಬಾಯಿ ..... ಗಂಭೀರ ವಿಷಯದ ಬಗ್ಗೆ ಚರ್ಚೆ ಮಾಡಬೇಕಿತ್ತು..... ಇವರು ಹೀಗೆ ಮಾತಾಡಿದರೆ ನಮಗೇನೂ ಗೊತ್ತಾಗೊಲ್ಲ.... ಕಷ್ಟ ನಮಗೇ ಆಲ್ವಾ....... ಥಟ್ಟನೆ ನನ್ನ ಕ್ರಿಮಿನಲ್ ಮೈಂಡ್ ಕೆಲಸ ಮಾಡಲು ಶುರು ಮಾಡಿತು.... ಒತ್ತಡದಲ್ಲಿದ್ದಾಗಲೇ ನನ್ನ ಮೆದುಳು ಕೆಲಸ ಮಾಡಿತ್ತು.... .... ನಾನು ಸಣ್ಣ ಚೀಟಿಯಲ್ಲಿ ''ಅವರ ಮಾತು ಮುಗಿದ ನಂತರ ನಾನು ಮೊದಲು ಮಾತಾಡುತ್ತೇನೆ'' ಅಂತ ಬರೆದು ಎಲ್ಲರಿಗೂ ಪಾಸ್ ಮಾಡಿದೆ..... ಎಲ್ಲರೂ ನನ್ನ ಮುಖ ನೋಡಲು ಶುರು ಮಾಡಿದರು.... ನಾನು ಮುಗುಮ್ಮಾಗಿ ಕುಳಿತು ಅವರ ಮಾತು ಆಲಿಸುತ್ತಾ, ಮಧ್ಯೆ ಮಧ್ಯೆ ತಲೆ ಆಡಿಸುತ್ತಾ, ಬಲು ಅರ್ಥ ಆದವನಂತೆ ವರ್ತಿಸಿದೆ...... ಅವರ ಮಾತು ಮುಗಿಸಿ ಎಂದಿನಂತೆ ' understood na ' ಎಂದರು.... ನಾನು '' ಸರ್, i have a doubt ' ಎಂದೆ..... ''yaa . ask now ''ಎಂದರು...... ನಾನು ಒಂದು ಪೇಪರ್ ತೆಗೆದುಕೊಂಡು ಮೇಲುಸೇತುವೆ ಚಿತ್ರ ಬಿಡಿಸಿ '' ಸರ್, ಮೇಲ್ಸೇತುವೆ ಮಾಡುವುದಾದರೆ ಮೊದಲು ಇದರ ಭಾರ ತಡೆದುಕೊಳ್ಳುವ ಸಾಮರ್ಥ್ಯ ತಿಳಿದುಕೊಳ್ಳಬೇಕು , ಇದರ ಮಣ್ಣಿನ ಗುಣ ಪರೀಕ್ಷೆ ಆಗಬೇಕು, ಇದರ ಪಕ್ಕದಲ್ಲಿ ಸಂಪರ್ಕ ರಸ್ತೆ ಮಾಡದೆ ಹೋದರೆ ಜನರಿಗೆ ತುಂಬಾ ತೊಂದರೆ ಆಗತ್ತೆ... '' ಎಂದೆಲ್ಲಾ ಶುದ್ಧ ಕನ್ನಡದಲ್ಲಿ ಸುಮಾರು ಹತ್ತು ನಿಮಿಷ ಮಾತಾಡಿದೆ ...... ನನ್ನ ಸಹಪಾಟಿಗಳು ಸಣ್ಣಗೆ ಮುಸಿ ಮುಸಿ ನಗಲು ಶುರು ಮಾಡಿದರು..... team leader '' i didn't understood your doubt mr dinakar , you were talking in kannada '' ಎಂದರು..... ನಾನೂ ಸಹ ಅಷ್ಟೇ ಗಂಭೀರವಾಗಿ '' i didn't understood the matter at all sir , then how can i ask any doubt , you were talking in malayalam '' ಎಂದೆ...... ಒಂದು ಕ್ಷಣ ತಡೆದು ಅವರೂ ನಗಾಡಲು ಶುರು ಮಾಡಿದರು...... ನಂತರದ ದಿನಗಳಲ್ಲಿ ಅವರು ಮಾತಾಡುತ್ತಿದ್ದಾಗ ಯಾರಾದರೂ ಮಧ್ಯೆ ಬಾಯಿ ಹಾಕಿದರೆ '' am i talking in malayalam '' ಎಂದೇ ಕೇಳುತ್ತಿದ್ದರು....

36 comments:

 1. :) nimma boss bagge nannadondu sanna mechchuge ide.avara bhaashaa premakke:) haage adarinda pacheeti anubhavisida nimma mele sanna sahaanubhooti kooda ide:)

  ReplyDelete
 2. ನಿವೇದಿತ ಮೇಡಂ,
  ಹ್ಹಾ ಹ್ಹಾ..
  ಭಟ್ ಸರ್,
  ಧನ್ಯವಾದ.....

  ReplyDelete
 3. ಗೌತಮ್ ಸರ್,
  ಅದು ಭಾಷಾ ಪ್ರೇಮವಲ್ಲ.... ಅವರಿಗೆ ಮಲಯಾಳಿ ಬಿಟ್ಟು ಬೇರೆ ಭಾಷೆ ಮೇಲೆ ಅಷ್ಟು ಹಿಡಿತ ಇರಲಿಲ್ಲ..... ಇಂಗ್ಲಿಷ್ ಚೆನ್ನಾಗೆ ಇತ್ತು..... ಆದರೆ ಯಾವಾಗ ಮಲಯಾಳಿ ಮಾತಾಡ್ತಾ ಇದ್ದೀನಿ ಅಂತ ಅವರಿಗೇ ಗೊತ್ತಾಗ್ತಾ ಇರಲಿಲ್ಲ.....

  ReplyDelete
 4. ದಿನಕರ,
  ತುಂಬಾ ಸರಿಯಾದ hit back ಮಾಡಿದ್ದೀರಿ. ನಿಮಗೆ ಅಭಿನಂದನೆಗಳು.

  ReplyDelete
 5. ದಿನಕರ ಅವರೇ ತುಂಬಾ ಚೆನ್ನಾಗಿದೆ . ಅವರಿಗೆ ಅರ್ಥ ಮಾಡಿಸೋಕೆ ಇದಕ್ಕಿಂತ ಬೇರೆ ಒಳ್ಳೆ ದಾರಿ ಇಲ್ಲ ಅನ್ನಿಸುತ್ತೆ.
  ನಾನು ಚೆನ್ನೈ ನಲ್ಲಿ ಕೆಲಸ ಮಾಡೋವಾಗ್ ಹೀಗೆ ತುಂಬಾ ಕಷ್ಟ ಅನುಭವಿಸಿದ್ದೇನೆ . ಒಂದೊಂದು ಸಲ ಟೀಂ ಮೀಟಿಂಗ್ ತಮಿಳ್ ನಲ್ಲೆ ಆಗುತಿತ್ತು. ನೀವು ನಂಬಿತಿರೋ ಇಲ್ವೋ ನಾನು ಅವಾಗ್ ಕನ್ನಡಲ್ಲೇ ಮಾತಾಡ್ತಾ ಇದ್ದೆ. ಅಲ್ಲಿನ ಆಟೋ ಚಾಲಕರ್ ಜೊತೆ ಅಂತು ನಾನು ಕನ್ನಡಲ್ಲೇ ಮಾತಾಡ್ತಾ ಇದ್ದೆ, ಯಾಕೆಂದರೆ ಅವರಿಗೆ ತಮಿಳ್ ಬಿಟ್ಟು ಬೇರೆ ಯಾವ್ ಭಾಷೆ ಬರ್ತಾ ಇರ್ಲಿಲ್ಲ .

  ReplyDelete
 6. ದಿನಕರ್,
  ಮಲಯಾಳಿ ಮಾತು ದಿನ ಕೇಳ್ತಾ ಇರ್ತಿನಿ....ನನ್ನ ಜೊತೆ ಇರುವವರು ಸಹ ಮಂಗ್ಲೀಷ್ ಮಾತಾಡ್ತಾರೆ...
  ಚೆನ್ನಾಗಿತ್ತು ಪ್ರಹಸನ.

  ReplyDelete
 7. ಭಾಷೆಯನ್ನೋದು ದುರಭಿಮಾನವಾಗಬಾರದು ಎನ್ನೋದಕ್ಕೆ ನಿಮ್ಮ ಬಾಸ್ ನಿದರ್ಶನ..ಅವರಿಗೆ ನಿಮ್ಮ ಪಾಠವೂ ಸೂಪರ್...ಪೂರ್ತಿ ಎಲ್ಲ ಕನ್ನಡದಲ್ಲೇ ಹೇಳಿದ್ದು...ಕಾಸರಗೋಡನ್ನು ಕಬಳಿಸಿ ಈಗ ಮಂಗಳೂರನ್ನ ಕೇಳುವುದು ಕೇಳಿಗರ...ಅಲ್ಲ ಕೇರಳಿಗರ ಜಾಯಮಾನವೇ...? ಏನು ಮಾಡೋದು..ನಮ್ಮವರ ಲಾಸ್ ಅವ್ರ ಗೈನ್ ಆಗೋಯ್ತು ಕಾಸರಗೋಡು ವಿಷಯದಲ್ಲಿ....
  ಚನ್ನಾಗಿದೆ ದಿನಕರ್ ನಿಮ್ಮ ಅನುಭವದ ಲೇಖನ

  ReplyDelete
 8. :) ..ಎದಿರೇಟು ಸರಿಯಾಗಿಯೇ ಇದೆ...

  ReplyDelete
 9. chennagide, olle boss bidi neevu avarige sariyada uttara neediddeeri

  ReplyDelete
 10. ದಿನಕರ್ ಸರ್,

  ಇದು ಟಿಟ್ ಫಾರ್ ಟಾಟ್. ಅವರಿಗೆ ಸರಿಯಾಗಿ ಮಾಡಿದ್ದೀರಿ. ಅಭಿಮಾನವಿರಬೇಕು. ದುರಭಿಮಾನವಿರಬಾರದು. ಅಲ್ವಾ...

  ಅಭಿನಂದನೆಗಳು.

  ReplyDelete
 11. ಮಹೇಶ್ ಸರ್,
  ದುಬೈ ನಲ್ಲಿ ಮಲಯಾಳಿಗಳ ಹಾವಳಿ ಅಂತೆ ಆಲ್ವಾ..... ತುಂಬಾ ಕೇಳಿದ್ದೀನಿ ಅಲ್ಲಿಯ ಬಗ್ಗೆ ... ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

  ReplyDelete
 12. ಆಜಾದ್ ಸರ್,
  ಮಂಗಳೂರು ಈಗಲೇ ಅರ್ಧ ಮಲಯಾಳಿಗಳ ಪಾಲಾಗಿದೆ..... ರೇಲ್ವೆ ಸ್ಟೇಷನ್ ಕಡೆ ಹೋದರೆ ಅದರ ಸುತ್ತ ಮುತ್ತ ಕನ್ನಡ ಯಾರಿಗೂ ಅರ್ಥ ಆಗಲ್ಲ.... ಮಲಯಾಳಿ ಮಾತಾಡಿದ್ರೆ ಮಾತ್ರ ಮಾತಾಡಿಸ್ತಾರೆ..... ಕಾಸರಗೊದಿಗಿಂತ ಹೆಚ್ಚಿನ ಮಲಯಾಳಿಗಳು ಇಲ್ಲಿದ್ದಾರೆ.... ಹೋಸ್ಪಿಟಲ್, ರೇಲ್ವೆ ಸ್ಟೇಷನ್ ಎಲ್ಲಾ ಕಡೆ ಅವರೇತುಂಬಿದ್ದಾರೆ....

  ReplyDelete
 13. ಸುಬ್ರಮಣ್ಯ ಸರ್,
  ತುಂಬಾ ಧನ್ಯವಾದ......

  ReplyDelete
 14. ಸುನಾಥ್ ಸರ್,
  ಅವರ ತಪ್ಪು ಅವರಿಗೆ ತಿಳಿಸಿದೆ ಅಷ್ಟೇ..... ಸ್ವಲ್ಪ ಖಾರ ಹಚ್ಚಿ ತಿಳಿಸಬೇಕಾಯಿತು....

  ReplyDelete
 15. ಮನಸಾರೆ ,
  ಹ್ಹ ಹ್ಹಾ..... ನಿಮ್ಮ ಅನುಭವ ಚೆನ್ನಾಗಿದೆ.... ನಮ್ಮ ಟೀಂ ಲೀಡರ್ ಕಥೆ ಇನ್ನೂ ಇದೆ... ಅದನ್ನ ಮುಂದೆ ಹೇಳುತ್ತೇನೆ.... ನಿಮ್ಮ ಅನುಭವ ಹಂಚಿಕೊಂಡು ಹೇಳಿದ್ದಕ್ಕೆ ಧನ್ಯವಾದ.... ಹೀಗೆ ಬರುತ್ತಾಇರಿ....

  ReplyDelete
 16. ಮನಸು ಮೇಡಂ,
  ಧನ್ಯವಾದ ನಿಮ್ಮ ಕಾಮೆಂಟ್ ಗೆ.... ಅವರ ತಪ್ಪು ಅವರಿಗೆ ತಿಳಿಸಿದೆ.....

  ReplyDelete
 17. ಶಿವೂ ಸರ್,
  'ಅವರಿಗೆ ದೊಡ್ಡ ಪಾಠ ಕಲಿಸಿದೆ' ಎಂದೆಲ್ಲಾ ಎಣಿಸಿಲ್ಲ ನಾನು..... ಆದರೆ ತುಂಬಾ ಸಾರಿ ಅವರ ತಪ್ಪು ಹೇಳಿದ್ದೆವು... ಯಾವುದನ್ನೂ ಸ್ವೀಕರಿಸದೆ ಅದೇ ತಪ್ಪನ್ನು ಮುಂದುವರಿಸಿದ್ದರು.... ಅದಕ್ಕೆ ಈ ಮಾರ್ಗದಿಂದ ಸ್ವಲ್ಪ ಖಾರವಾಗಿ ತಿಳಿಸಿದೆವು.... ಧನ್ಯವಾದ ಸರ್ ನಿಮ್ಮ ಅಭಿಪ್ರಾಯಕ್ಕೆ....

  ReplyDelete
 18. maleyaali premige sariyaagi budhdhi kalisidheeri :)

  mangalooru malayaali gaLa paalaaguthiruvdhu aathankakaari

  ReplyDelete
 19. ನೀವು ಕಲಿಸಿದ ಪಾಠ ಚೆನ್ನಾಗಿದೆ :-)

  ReplyDelete
 20. ಚನ್ನಾಗಿದೆ..
  ಮ೦ಗ್ಲಿಶ್ ಭಾಷೆ...!

  ReplyDelete
 21. ತುಂಬಾ ಸ್ವಾರಸ್ಯಕರವಾಗಿದೆ
  ಸಾಕಾತು ಪಾಠ ಕಲಿಸಿದ್ದಿರ ಅವರಿಗೆ
  ಓದಿ ತುಂಬಾ ನಗು ಬಂತು

  ReplyDelete
 22. ಹಾಹಾಹಾ.. ಅವ್ರಿಗೆ ಬಹುಶ ಮಲಯಾಳಿ ಲೂಸ್ ಮೋಶನ್ ಆಗಿದ್ದಿರಬೇಕು..(ಗೊತ್ತಾಗದೆ ಪದೇ ಪದೇ ಮಲಯಾಳಿ ಬರೋದು!!) :-)

  ReplyDelete
 23. ಸುಧೇಶ್,
  ಮಂಗಳೂರು ಮಲಯಾಳಿ ಗಳ ಮುಕ್ಕಾಲು ಪಾಲಾಗಿದೆ.... ಸ್ವಲ್ಪವೇ ಉಳಿದಿದೆ..... ಧನ್ಯವಾದ ನಿಮ್ಮ ಕಾಮೆಂಟ್ ಗೆ...

  ReplyDelete
 24. ಸುಮಾ ಮೇಡಂ,
  ಪಾಠವೇನೂ ಕಲಿಸಿಲ್ಲ.... ಅವರು ಎಷ್ಟೆಂದರೂ ನನಗಿಂತ ತುಂಬಾ ಹಿರಿಯರು ವಯಸ್ಸಲ್ಲಿ.... ಅವರ ತಪ್ಪನ್ನಷ್ಟೇ ತೋರಿಸಿದೆ ಅಷ್ಟೇ....

  ReplyDelete
 25. ಗುರು ಸರ್,
  ನಿಮ್ಮ ಕಾಮೆಂಟ್ ಗೆ ಧನ್ಯವಾದಗಳು...

  ReplyDelete
 26. ರವಿಕಾಂತ್,
  ನನ್ನ ಬರಹಕ್ಕಿಂತ ನಿಮ್ಮ ಅಭಿಪ್ರಾಯವೇ ಸಕತ್ ನಗು ತರಿಸಿತು..... ಧನ್ಯವಾದ....

  ReplyDelete
 27. ವಿಜಯಶ್ರೀ ಮೇಡಂ,
  ಮಂಗ್ಲಿಶ್ ಭಾಷೆ ಕೇಳಲು ತುಂಬಾ ಚೆನ್ನಾಗಿರತ್ತೆ..... ಧನ್ಯವಾದ ನಿಮ್ಮ ಅನಿಸಿಕೆಗೆ....

  ReplyDelete
 28. ಶಿವಪ್ರಕಾಶ್,
  ಧನ್ಯವಾದ , ಓದಿ, ಇಷ್ಟಪಟ್ಟು ಕಾಮೆಂಟ್ ಮಾಡಿದ್ದಕ್ಕೆ....

  ReplyDelete
 29. ಸೀತಾರಾಂ ಸರ್,
  ಧನ್ಯವಾದ ನಿಮ್ಮ ಕಾಮೆಂಟ್ ಗೆ....

  ReplyDelete
 30. ಚೆನ್ನಾಗಿದೆ..ನೀವು ತಿಳಿಸಿ ಹೇಳಿದ ರೀತಿ..
  ವ೦ದನೆಗಳು.

  ReplyDelete
 31. ದಿನಕರ...

  ಹ್ಹಾ..ಹ್ಹಾ..

  ಮಸ್ತ್ ಆಗಿದೆ...
  ನಮ್ಮ ವೃತ್ತಿಯಲ್ಲಿನ ಹಾಸ್ಯ ಸಂಗತಿಗಳನ್ನು ಇನ್ನಷ್ಟು ಬರೆಯಿರಿ...

  ನಮ್ಮೆಲ್ಲರ ಶುಭ ಹಾರೈಕೆಗಳು...

  ReplyDelete