Jan 18, 2010

ಅಪ್ಪ ಅಮ್ಮ ನಮಗೆ ವಿದ್ಯೆ ಕೊಡಿಸಿದ್ದೆ ತಪ್ಪಾ......?


'' ಅವ್ವಾ, ಹೋಗಿ ಬರುತ್ತೇನೆ '' ..... ಅಣ್ಣ , ಅಮ್ಮನನ್ನು ಕರೆಯುತ್ತಿದ್ದ....
ಅಪ್ಪನ ಕಾಲಿಗೂ ನಮಸ್ಕರಿಸಿದ..... ಅಪ್ಪನ ಕಣ್ಣು ಆಗಲೇ ಹನಿಗೂಡುತ್ತಿತ್ತು..... ಅಮ್ಮ ಅಲ್ಲಿಗೆ ಬರುತ್ತಾ ಇದ್ದರು..... ಅವರ ಕಾಲಿಗೂ ಅಣ್ಣ ನಮಸ್ಕರಿಸಿದ..... ನಾನು ದೂರದಲ್ಲಿ ಕುಳಿತು ಇದನ್ನೆಲ್ಲಾ ಗಮನಿಸುತ್ತಿದ್ದೆ..... ಇದು ಪ್ರತಿ ಸಾರಿ ಊರಿಗೆ ಬಂದು ಅಲ್ಲಿಂದ ಹೊರಡುವಾಗ ನಡೆಯುವ ದ್ರಶ್ಯ..... ಈ ಸಾರಿ ಊರಹಬ್ಬಕ್ಕೆ ಮನೆಗೆ ಹೋಗಿ ಎರಡು ದಿನ ಳೆದು
ವಾಪಸ್ ಬರುವಾಗಲೂ ಹೀಗೆ ನಡೆಯಿತು .... ಸಾರಿ ಸಹ ಇದು ನನ್ನನ್ನು ತುಂಬಾ ಘಾಡವಾಗಿ ಕಾಡಿತು..... ಹಲವು ಪ್ರಶ್ನೆಗಳನ್ನು ಸಹ ಕೇಳಿತು.....

ನಾನು , ನನ್ನಣ್ಣ ಊರಿನಿಂದ ದೂರದಲ್ಲಿ ಕೆಲಸ ಮಾಡುತ್ತೇವೆ..... ನಮಗೆ ನಮ್ಮದೇ ಸಂಸಾರ, ನಮ್ಮದೇ ಆದ ತಾಪತ್ರಯಗಳಿವೆ..... ಹೊಟ್ಟೆಪಾಡಿಗಾಗಿ ನಾವು ನಮ್ಮ ಗೂಡಿಗೆ ಹಿಂತಿರುಗಿ ಬರಲೇ ಬೇಕು..... ಅಪ್ಪ ಅಮ್ಮನಿಗೆ ಬೇಸರವಾಗುತ್ತದೆ ಎಂದು ಅಲ್ಲೇ ಕುಳಿತರೆ ಬಡಪಾಯಿ ಹೊಟ್ಟೆಗೆ ಹಸಿವೆಯಾಗುತ್ತದಲ್ಲ... ..... ಅದಕ್ಕೆ ನೋವು ನಲಿವು, ಸಿಟ್ಟು ಸೆಡವು, ಪ್ರೀತಿ ಮತ್ತೆ ಅದರ ಆತ್ಮೀಯತೆ ಅರ್ಥವಾಗುವುದಿಲ್ಲವಲ್ಲ....

ಅಪ್ಪ ಅಮ್ಮ, ನಮಗೆ ವಿದ್ಯೆ ಕೊಡಿಸಲು ತುಂಬಾ ಕಷ್ಟ ಪಟ್ಟಿದ್ದರು..... ಅದರಲ್ಲೂ ಅಮ್ಮ , ಅಪ್ಪನ ಕೆಲಸದ ಹೊರತಾಗಿಯೂ, ಸಣ್ಣ ಪುಟ್ಟ ವ್ಯಾಪಾರ ಮಾಡಿ ನಮ್ಮ ಭವಿಷ್ಯದ ಕನಸಿಗೆ ಧಾರೆ ಎರೆದಿದ್ದರು ..... ಅವರ ಕಷ್ಟದ ದಿನಗಳು ನಮಗೆ ಆಗ ಏನೂ ಅರ್ಥ ಆಗುತ್ತಿರಲಿಲ್ಲ..... ದೀಪ ಹೇಗೆ ತನ್ನನ್ನು ಹೊತ್ತಿಕೊಂಡು ಇತರರಿಗೆ ಬೆಳಕು ಕೊಡುತ್ತದೋ ಹಾಗೆ ಅಪ್ಪ ಅಮ್ಮ ಅವರ ವರ್ತಮಾನ ಮರೆತು ನಮ್ಮ ಭವಿಷ್ಯಕ್ಕಾಗಿ ದುಡಿದಿದ್ದರು.... ಅವರ ಸ್ವಂತ ಸುಖ ಮರೆತು ನಮಗೆ ವಿದ್ಯೆ ಕೊಡಿಸಿ ಅದರಲ್ಲೇ ಸಾರ್ತಕ್ಯ ಕಂಡರು......ತಮ್ಮ ಹಾಗೆ ವಿದ್ಯೆ ಇಲ್ಲದೆ ಕಷ್ಟ ಪಡುವುದರ ಬದಲು ವಿದ್ಯೆ ಕಲಿತು ಒಳ್ಳೆಯ ಉದ್ಯೋಗಲ್ಲಿರಲಿ ಎಂದು ಹಾರೈಸಿ ಕನಸು ಕಂಡಿದ್ದರು.......

ಅವರ ಹಾರೈಕೆ, ಆಶಿರ್ವಾದದ ಫಲದಿಂದ ಉದ್ಯೋಗವೂ ದೊರೆತಿದೆ........ ಆದರೆ ಅವರಿಂದ ದೂರವೂ ತಳ್ಳಿದೆ... ...... ಮನೆಯಲ್ಲಿ ಏನಾದರೂ ಪೂಜೆ, ಊರಹಬ್ಬ ಇದ್ದರೆ, ಊರಿಗೆ ಹೋಗಿ ಒಂದೆರಡು ದಿನ ಮನೆಯಲ್ಲಿ ಕಳೆದು ಹೊರಡುತ್ತೇವೆ... ..... ಪ್ರತಿ ಬಾರಿ ಇಲ್ಲಿಂದ ಹೊರಡುವಾಗಲೂ ಇದೆ ಪ್ರಶ್ನೆ ನನ್ನನ್ನು ಪದೇ ಪದೇ ಕಾಡುತ್ತವೆ......

ನಾವಿಬ್ಬರೂ ಪ್ರತಿ ತಿಂಗಳೂ ಮನೆ ಖರ್ಚಿಗೆ ಅಂತ ಹಣ ಕಳಿಸಿಕೊಡುತ್ತೇವೆ.....

ಆದರೆ ಮಕ್ಕಳು ಕಳುಹಿಸುವ ಹಣ ಪ್ರೀತಿ ಕೊಡುತ್ತದಾ......?


ಅಪ್ಪ ಅಮ್ಮ ಇಬ್ಬರಿಗೂ ವಯಸ್ಸಾಗಿದೆ.......

ಅವರ ನರಳಿಕೆ ನಮಗೆ ಕೇಳಿಸುತ್ತದಾ.....?


ಕೆಲಸದ ಗಡಿಬಿಡಿಯಲ್ಲಿ ಫೋನ್ ಮಾಡುತ್ತೇವೆ ....

ಅವರ ನಿಟ್ಟುಸಿರಿಗೆ ಕಿವಿಯಾಗಲು ಸಾದ್ಯವಾಗತ್ತಾ.....?


ತಮ್ಮ ಜೀವ ತೇಯ್ದು ನಮಗೆ ಕೊಡಿಸಿದ ವಿದ್ಯೆ......

ನಮ್ಮನ್ನು ಅವರಿಂದ ದೂರ ತರಿಸಿತಾ.....?


ಅವರ ಹಾಗೆ ಕಷ್ಟ ಪಡುವುದು ಬೇಡ ಎಂದು ನಮಗೆ ಕಲಿಸಿದ ವಿದ್ಯೆ......

ಅವರ ಕೊನೆಗಾಲದಲ್ಲಿ ಅವರದೇ ಉಪಯೋಗಕ್ಕೆ ಬಾರದೆ ಹೋಯಿತಾ....?


ಸಿಮೆಂಟಿನಿಂದ ಕಟ್ಟಿಸಿದ ಮನೆ , ಮಕ್ಕಳು ಕೊಡುವ ನೆರಳು ಕೊಡತ್ತಾ....?

ನಿರ್ಜೀವ ಫೋನಿನಿಂದ ಬರುವ ಮಕ್ಕಳ ದ್ವನಿ, ಮನಸ್ಸಿಗೆ ನೆಮ್ಮದಿ ನೀಡತ್ತಾ....?


ಅಪ್ಪ ಅಮ್ಮ ನಮಗೆ ವಿದ್ಯಾ ಕೊಡಿಸದೇ ಇದ್ದಿದ್ದರೆ, ಇಂದು ನಾವು ಊರಲ್ಲೇ ಏನಾದರು ಕೆಲಸ ಮಾಡಿಕೊಂಡು ಮನೆಯಲ್ಲೇ ಇರುತ್ತಿದ್ದೆವು..... ಅವರ ಜೊತೆಯಲ್ಲೇ ಕಾಲ ಕಳೆಯುತ್ತಿದ್ದೆವು..... ಅಪ್ಪ ಅಮ್ಮ ಸ್ವಾರ್ಥಿಯಾಗದೆ ಇದ್ದದ್ದು ತಪ್ಪಾ....?

ನನ್ನ ಕೊನೆಯ ಪ್ರಶ್ನೆ....

ಅಪ್ಪ ಅಮ್ಮ ನಮಗೆ ವಿದ್ಯೆ ಕೊಡಿಸಿದ್ದೆ ತಪ್ಪಾ......?







56 comments:

  1. ದಿನಕರ....

    ಕಟು ಸತ್ಯದ ಮಾತುಗಳು....

    ನಿಮ್ಮ ಭಾವನೆಗಳಿಗೆ ನನ್ನ ನಮನಗಳು...
    ಇದು ನಿಮ್ಮೊಬ್ಬರ ಖೇದ ಅಲ್ಲ...
    ಹಳ್ಳಿ ಬಿಟ್ಟು ಹೊರಗೆ ಕೆಲಸ ಮಾಡುವ ಬಹುತೇಕ ಜನರ ಪ್ರಶ್ನೆ...

    ನಿಮಗೆ ಮತ್ತೊಮ್ಮೆ ನಮನಗಳು...

    ಯಾಕೆಂದರೆ...
    ನಿಮ್ಮ ತಂದೆ, ತಾಯಿಯರನ್ನು ಪ್ರೀತಿಯಿಂದ ಸ್ಮರಣೆ ಮಾಡಿಕೊಳ್ಳುತ್ತೀರಿ..
    ಹಣ ಕಳುಹಿಸಿ ಕೊಡುತ್ತೀರಿ...
    ಅವರ ಭೌತಿಕ ಕಷ್ಟಗಳಿಗೆ ಸ್ಪಂದಿಸುತ್ತೀರಿ...
    ಅವರ ಜೊತೆಯಲ್ಲಿ ಇರಲಾಗುವದಿಲ್ಲವೆಂದು ನಿಮ್ಮನ್ನೇ ನೀವು ಹಳಿದು ಕೊಳ್ಳುತ್ತೀರಿ...

    ಕೆಲವರು ಬೇರೆಯೇ ಪ್ರಪಂಚದಲ್ಲಿರುತ್ತಾರೆ...

    ನಮ್ಮನ್ನೆಲ್ಲ ಚಿಂತನೆಗೆ ಹಚ್ಚಿಸಿದ್ದಕ್ಕೆ ವಂದನೆಗಳು...

    ReplyDelete
  2. ಪ್ರಕಾಶಣ್ಣ,
    ಈ ವಾರ ಏನೂ ಬರೆಯುವ ಮನಸ್ಸಿರಲಿಲ್ಲ..... ಅಷ್ಟು ಬೇಸರ ಬಂದಿತ್ತು..... ಕಷ್ಟ ಪ್ರಕಾಶಣ್ಣ, ಅಪ್ಪ ಅಮ್ಮ ನ ಕಷ್ಟಕ್ಕೆ ನೋವಿಗೆ ನಾವು ಆಗದೆ ಹೋದರೆ ಮತ್ಯಾಕೆ ನಾವೆಲ್ಲಾ..... ನಿಮ್ಮ ಅಭಿಪ್ರಾಯಕ್ಕೆಧನ್ಯವಾದಗಳು.....

    ReplyDelete
  3. ಕೊನಯ ಐದಾರು ಸಾಲುಗಳಂತೂ ಮುಖದ ಮೇಲೆ ಹೊಡೆದಂತಿದೆ....ಎಷ್ಟೋ ಮಕ್ಕಳು ತಂದೆ-ತಾಯಿಯರನ್ನು ದೂರ ಮಾಡಿ ನಗರಗಳಲ್ಲಿ ಪೋಲಿ ಸುತ್ತುತ್ತಿರುವುದನ್ನು ನಾನು ನೋಡಿದ್ದೇನೆ...ಸತ್ಯ ಎಂದರೆ...ಆ ಮಕ್ಕಳೂ ಸಹ ತಂದೆ-ತಾಯಿ ಯಾಗುತ್ತಾರೆನ್ನುವುದು...ಆಗ ಜ್ಞಾನೋದಯವಾಗುತ್ತದೆ...ಪಶ್ಚಾತ್ತಾಪ ಪಡುತ್ತಾರೆ..ಪ್ರಯೋಜನವೇನು ? ಮನಮುಟ್ಟುವ ಬರಹ.

    ReplyDelete
  4. ದಿನಕರ್ ಸರ್,
    ಎಲ್ಲರನ್ನು ಕಾಡುವ ಪ್ರಶ್ನೆ ಸರ್, ನೀವುಗಳಾದರು ಅಲ್ಲೇ ಸಮೀಪದ ಊರಿಗಳಿರೋದರಿಂದ ಕರೆ ಮಾಡಿದಕೂಡಲೇ ಓಡಿಹೋಗಬಹುದು, ಆದರೆ ನಾವುಗಳು ನಮ್ಮಂತವರು ಹಲವಾರು ಜನರ ಪರಿಸ್ಥಿತಿ ಹೇಳಲಾಗದು.
    ತಂದೆ ತಾಯಿ ಜೊತೆಯಲ್ಲಿರಬೇಕು ಎಂದು ಖಂಡಿತವೆನಿಸುತ್ತೆ.
    ವಿದ್ಯೆಯೇ ನಮ್ಮ ಸಂಬಂಧಗಳಿಗೆ ಮುಳುವಾಯಿತೆ ಎಂಬ ಪ್ರಶ್ನೆ ಕಾಡುತ್ತೆ ಅದರ ಜೊತೆಗೆ ಮತ್ತೊಂದು ಪ್ರಶ್ನೆ ಅಪ್ಪ ಅಮ್ಮ ಎಲ್ಲ ಕಷ್ಟಪಟ್ಟು ಸಾಕಿದರು ನಮ್ಮಗಳಿಗೆ ಆಗುವುದಿಲ್ಲವೆ ಹಾಗೆ ಎಂದೆನಿಸುತ್ತೆ. ನಾವುಗಳು ಅಷ್ಟು ಓದಿದ್ದೀವಿ ನಮಗೆ ಸಂಬಳ ಅಷ್ಟುಬೇಕು ಹಾಗಿರಬೇಕು ಹೀಗಿರಬೇಕು ಎಂಬ ಆಸೆ ಆಕಾಂಕ್ಷೆ ಹೆಚ್ಚೆಯಾಯಿತೆ ಎಂಬ ಮತ್ತೊಂದು ಪ್ರಶ್ನೆ ಕಾಡುತ್ತದೆ.

    ReplyDelete
  5. ದಿನಕರ್, ಇದೇ ಮಾತಿಗೆ ನನಗೂ ಮನಸ್ಸು ಭಾರವಾಗುವುದು. ಊರಿಗೆ ಹೋದಾಗಲಂತೂ ಇದು ಅತಿರೇಕಕ್ಕೆ ಹೋಗುತ್ತೆ. ಹೌದು ನಮಗೆ ಅನಿಸುವುದು ಸಹಜ ಏಕೆಂದರೆ ಅವರ ಹಿರಿವಯಸಿನಲ್ಲಿ ಅವರಜೊತೆಗಿಲ್ಲವಾಗುತ್ತೇವಲ್ಲ ಎಂದು, ಆದರೆ...ಒಂದರ ಗಳಿಕೆಗೆ ಇನ್ನೊಂದರ ಕಳಿಕೆ..ಅನಿವಾರ್ಯ ಎಂದು ನಾವು ಸಮಾಧಾನಪಟ್ಟುಕೊಳ್ಳಬೇಕು. ಊರಲ್ಲಿ ಕೆಲವೊಮ್ಮೆ ಮಾತು ಮಾತಿನ ಮಧ್ಯೆ ನಾನು ನನ್ನ ಚಿಕ್ಕ ತಮ್ಮನ ಮೇಲೆ ಅಸೂಯೆ ಪಟ್ಟುಕೊಂಡು ಹೇಳುತ್ತೇನೆ....ನಿನಗೇನಪ್ಪ..ಅಪ್ಪ ಅಮ್ಮನ ನೆರಳು ಸದಾ ಇರುತ್ತೆ..ಅಂತ...ಹೌದು ಎಷ್ಟು ಸತ್ಯ ಈ ಮಾತು....ಅವರ ಪ್ರತಿ ಮುನಿಸು, ಸಂತಸ, ನೋವುಗಳಿಗೆ ತೀರಾ ಹತ್ತಿರದಿಂದ ಸ್ಪಂದಿಸುವ ಅವಕಾಶ ನಮಗೆ ಇಲ್ಲವಾಯಿತೇ ಎಂದು...ನಮ್ಮ ಹಣ ನಮ್ಮ ಫೋನು, ನಮ್ಮ ಸವಲತ್ತುಗಳು...ಮಕ್ಕಳು ದೂರ ಇದ್ದಾರೆ ಎನ್ನುವ ಅವರ ಕೊರಗನ್ನು ಖಂಡಿತಾ ಕಡಿಮೆಗೊಳಿಸದು....ತುಂಬಾ..ಭಾವನಾತ್ಮಕ ಚರ್ಚೆಗೆ ದಾರಿಮಾಡಿದ್ದೀರಿ...ಅಭಿನಂದನೆ

    ReplyDelete
  6. ದಿನಕರ್ ಅವರೇ...
    ಇವತ್ತು ಬರೆದಿದ್ದಿರಲ್ಲ ಇದು ಮೂಕ ಮನದ ಮಾತು...!! ಇದು ನಗ್ನ ಸತ್ಯ... ನಿಮ್ಮ ನೋವು ತುಂಬಿದ ಪ್ರಶ್ನೆಗಳು ತುಂಬಾ ನೇರ ಮತ್ತು ಹೀಗೆ ಇದ್ದರೆ ಚಂದ ಎನ್ನುದನ್ನು ತಿಳಿಸ್ಲಿಕ್ಕೆ ನೋಡ್ತಾ ಇದೆ... ನಿಜವಾದ ಪ್ರೀತಿ ನೀಡುವವರು ಯಾವತ್ತು ಸ್ವಾರ್ಥಿಗಳು ಆಗಿರೋಲ್ಲ... ಅಲ್ವೇ ...?
    ನಿಮ್ಮವ,
    ರಾಘು.

    ReplyDelete
  7. ಏನು ಕಾಕತಾಳೀಯ ಸರ್, ಈಗಷ್ಟೇ‌ ಊರನ್ನು ನೆನೆಯುತ್ತಾ ಬ್ಲಾಗಲ್ಲಿ ಒಂದು ಹೊಸ ಪೋಸ್ಟ್ ಹಾಕಿದೆ. ನೀವೂ ಸಹ ಅದರ ಬಗ್ಗೆಯೇ ಬರೆದಿದ್ದೀರ. ನೀವು ಕೇಳಿರೋ ಪ್ರಶ್ನೆಗಳಿಗೆ ಉತ್ತರಗಳನ್ನು ನಾನೂ ಹುಡುಕುತ್ತಿದ್ದೇನೆ, ಇನ್ನೂ ಸಿಕ್ಕಿಲ್ಲ.

    ReplyDelete
  8. ಸುಬ್ರಮಣ್ಯ ಸರ್,
    ನಾವೂ ಅಪ್ಪನ್ದಿರಾಗುತ್ತೇವೆ ಅನ್ನುವ ಪ್ರಜ್ಞೆ, ಅರಿವು ಎಲ್ಲರಿಗೂ ಇರತ್ತೆ.... ಆದರೆ ನಾವು ಹೀಗೆ ವರ್ತಿಸ್ತೇವೆ..... ಅಭಿಪ್ರಾಯಕ್ಕೆ ಧನ್ಯವಾದ...

    ReplyDelete
  9. ಮನಸು ಮೇಡಂ,
    ಎಲ್ಲ ಮಕ್ಕಳ ಮಾತು ಇದು... ಒಂಥರಾ ಅಸಹಾಯಕತೆ ಎಂದರೆ ಸರಿ ಆಗತ್ತೋ ಏನೋ...... ನೀವಾದರೆ ತುಂಬಾ ದೂರ ಇದ್ದೀರಾ..... ನನ್ನಂಥಾ ಕೆಲವರು, ದೂರ ಎಂದರೆ ದೂರ ಅಲ್ಲ ಹತ್ತಿರ ಎಂದರೆ ಹತ್ತಿರ ಅಲ್ಲ.... ಹಾಗಿದ್ದಾರೆ.... ಆದರೂ ನಮ್ಮ ಕರ್ತವ್ಯ ನಿಭಾಯಿಸೋಕೆ ಆಗ್ತಾ ಇಲ್ಲಾ..... ನಿಮ್ಮೆಲ್ಲರ ಹೃದಯಕ್ಕೆ ಕೈ ಹಾಕಿ ಮನೆಯ ನೆನಪು ಮಾಡಿಸಿದ್ದೇನೆ..... ನಿಮ್ಮ ಅಭಿಪ್ರಾಯಕ್ಕೆಧನ್ಯವಾದಗಳು ಮೇಡಂ....

    ReplyDelete
  10. ಅಜಾದ್ ಸರ್,
    ಇದನ್ನ ಬರೆಯುವಾಗ ತುಂಬಾ ಬೇಸರವಾಗಿತ್ತು.... ಇದು ನನ್ನ ಮನೆಯ ಕಥೆಯಾದರೂ, ಪೂರ್ತಿ ಸತ್ಯ ಅಲ್ಲ ಯಾಕಂದ್ರೆ ನನಗೆ ಇನ್ನ ಇಬ್ಬರು ಅಣ್ಣಂದಿರು ಇದ್ದಾರೆ .... ಅವರೂ ಸಹ ಮನೆಯಿಂದ ದೂರಾನೆ ಇದ್ದಾರೆ, ನಮ್ಮ ಹಾಗೆ...... ಅದೆಲ್ಲರ ಬಗ್ಗೆ ಬರೆದರೆ ಮುಕ್ಯ ಉದ್ದೇಶದಿಂದ ದೂರ ಹೋಗಿ , ನನ್ನದೇ ಕಥೆಯಾಗತ್ತೆ ಅನಿಸಿತು..... ಇದು ಸಾಮಾನ್ಯವಾಗಿ ಎಲ್ಲರ ಮನೆ ಸಮಸ್ಯೆ ....... ಎಲ್ಲರ ಮನಸ್ಸಿನ ಚೆರ್ಚೆಗೆ ಶುರು ಮಾಡಿದ್ದೇನೆ...... ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಸರ್.....

    ReplyDelete
  11. ದಿನಕರ್ ಅವರೆ,
    ನಿಜ. ತ೦ದೆತಾಯಿಯರ ಕುರಿತು ನಿಮಗನ್ನಿಸುತ್ತಿರುವುದು ಅನೇಕರ ಅನುಭವ.ಮಕ್ಕಳು ಹಾಗೇ ಅನ್ನಿಸಿಕೊಳ್ಳಬೇಕಾದ್ದದ್ದೇನೆ. ತ೦ದೆತಾಯಿಗಳಿಗೆ ಮಕ್ಕಳ ಸುಖದ ಕಡೆಯೆ ಲಕ್ಶ್ಯ. ಅವರಿಗೆ ಸ೦ತೋಷವಾಗುವ ರೀತಿಯಲ್ಲಿ ನಾವಿದ್ದರೆ ಬೌತಿಕವಾಗಿ ದೂರವಿರುವುದು ಅವರಿಗೆ ನೋವು ತರಲಾರದು.ಮಕ್ಕಳು ತ೦ದೆತಾಯಿಯನ್ನು ಬಿಟ್ಟು ಹೊರಡುವಾಗ ದುಃಖವಾಗುತ್ತದೆ.ನಿಜ...ಸಹಜ...
    ತ೦ದೆ ತಾಯಿಯರಿಗಾಗಿ ನಿಮ್ಮಿ೦ದ ಏನು ಮಾಡಲು ಶಕ್ಯವೋ ಅದನ್ನು ನಿರ್ವ೦ಚನೆಯಿ೦ದ ಮಾಡಿದ್ದೀರಿ.ಮು೦ದೆಯೂ ಮಾಡುವ ಮನಸ್ಸೂ ಇದೆ.ಅವರ ಬಗ್ಗೆ ಸಾಕಷ್ಟು ಪ್ರೀತಿ, ಕಳಕಳಿ ಇದೆ, ತೋರಿಸುತ್ತಲೂ ಇದ್ದೀರ. ನಿಮ್ಮ ಸ೦ತೋಷ,ನಿಮ್ಮ ಉನ್ನತಿ, ನಿಮಗೆ ಅವರ ಬಗೆಗಿನ ಕಳಕಳಿಯನ್ನುನೋಡಿ, ಅವರಿಗೆ, ನಿಮ್ಮಿ೦ದ ದೂರವಿರುವ ನೋವನ್ನು ಮರೆಸುತ್ತದೆ.ನೀವು ಬೇಸರ ಪಡುತ್ತಿದ್ದರೆ ತ೦ದೆತಾಯಿಗಳಿಗೂ ನೋವಾಗುತ್ತದೆ.ಹಾಗಾಗಿ ಬೇಸರ ಪಡಬೇಡಿ.
    ತ೦ದೆತಾಯಿಯರಿಗೆ ಒಬ್ಬ ಮಗಳಾಗಿ,ಮಗಳಿಗೆ ತಾಯಿಯಾಗಿ
    ಇದು ನನ್ನ ಅನಿಸಿಕೆ.
    ಬೇಸರವಾದರೆ ಮತ್ತೆ ಮತ್ತೆ ಹೋಗಿಬನ್ನಿ.ಹೋದಾಗ ಆದಷ್ಟೂ ಅವರ ಬಳಿಯೇ ಇರಿ.ನಿಮ್ಮ ಫೋನ್ ಕಾಲ್ ಕೂಡಾ ಅವರಿಗೆ ಪ್ರೀತಿಯ ಕರೆಯೇ ಆಗಿರುತ್ತದೆ.ಪದೇಪದೇ ಫೋನ್ ಮಾಡುತ್ತಿರಿ.
    ನಿಮ್ಮೆಲ್ಲರ ಸ೦ತೋಷವೇ ಅವರ ಸ೦ತೋಷ.
    ವ೦ದನೆಗಳು.

    ReplyDelete
  12. ದಿನಕರ್...
    ಭೌತಿಕವಾಗಿ ತ೦ದೆ ತಾಯಿಯಿ೦ದ ದೂರವಿದ್ದರೂ..
    ಮಾನಸಿಕವಾಗಿ ಹತ್ತಿರವೇ ಇದ್ದೀರಲ್ಲ...
    ಬೇಕಾದಾಗ ಹೋಗಿ ಬನ್ನಿ...
    ತಾಯಿಕರುಳಿಗೆ ಮಕ್ಕಳ ಆ೦ತರ್ಯ ಗೊತ್ತಾಗೇಅಗುತ್ತದೆ...

    ಆದರೂ ನನ್ನದೊ೦ದು ತಕರಾರಿದೆ.....!
    ಗ೦ಡುಮಕ್ಕಳು ತಾಯ್ತ೦ದೆಯನ್ನು ಬೇಕಾದಾಗ ಹೋಗಿ ನೋಡಿಬರಬಹುದು.. ಅಥವಾ ತಾವಿರುವಲ್ಲಿಯೆ ಕರೆದು ತ೦ದಿಟ್ಟುಕೊ೦ಡು ಸೇವೆ ಮಾಡಬಹುದು.
    ಆದರೆ ಎಲ್ಲಾ ಹೆಣ್ಣುಮಕ್ಕಳಿಗೂ ಈ ಅವಕಾಶ ಇರುವುದಿಲ್ಲ...ಕೆಲವರಿಗಿರಬಹುದು.

    ಮತ್ತೊ೦ದೇನೆ೦ದರೆ...
    ಹೆಣ್ಣುಮಕ್ಕಳು ಕೂಡಾ ತಮ್ಮನ್ನು ಗ೦ಡ, ಮಕ್ಕಳು, ಅತ್ತೆ, ಮಾವ, ಮನೆ ಅ೦ತ ನಮ್ಮನ್ನ ನಾವೇ ಕಟ್ಟಿಹಾಕಿಕೊ೦ಡಿರುತ್ತೇವೆ...ಅಪ್ಪ ಅಮ್ಮ ಹಬ್ಬ ಹರಿದಿನಕ್ಕೊಮ್ಮೆ ಮಾತ್ರಾ...
    ಒಬ್ಬೊಬ್ಬರಿಗೆ ಒ೦ದೊ೦ದು ಚಿ೦ತೆ...
    ಹೆತ್ತವರ ಮೇಲೆ ನಮಗೆ ಇರುವ ಭಾವನೆಯನ್ನ ಅವಕಾಶ ಇರುವಲ್ಲಿ ಸ೦ಪೂರ್ಣವಾಗಿ ತೋರಿಸೋಣ..
    ಚಿ೦ತೆ ಬಿಡೋಣ......!!!

    ವಂದನೆಗಳು.

    ReplyDelete
  13. ಮೂಕ ಮನದ ಮಾತು !!!!... ನಿಜ ನಿಜ...ಇದೊಂದು ಥರ ಕಷ್ಟ... ಕಷ್ಟ ಪಟ್ಟು ಒದಿಸಿದ ಅಪ್ಪ ಅಮ್ಮ ತನ್ನ ಮಕ್ಕಳಿಗೆ ಕೆಲಸ ಸಿಗುವುದನ್ನು ನೋಡಲು ಇರದೇ ಇರುವುದು ಇನ್ನೊಂದು ಕಷ್ಟ !! :-(

    ReplyDelete
  14. ದಿನಕರ,
    ತುಂಬ ಜಟಿಲವಾದ ಪ್ರಶ್ನೆಯನ್ನು ಎತ್ತಿದ್ದೀರಿ.ಇದು ಈವತ್ತಿನ ಗಂಬೀರ ಸಮಸ್ಯೆಯಾಗಿದೆ. ತಾಯಿ ತಂದೆಯರಿಗೆ ಇಳಿಗಾಲದಲ್ಲಿ ಸುಖ ಕೊಡಬೇಕೆನ್ನುವದು ಎಲ್ಲ ಮಕ್ಕಳ ಮನದ ಮಾತೂ ಹೌದು. ಆದರೆ ಎಲ್ಲರಿಗೂ ಸಾಧ್ಯವೆ?

    ReplyDelete
  15. ನಮಸ್ತೆ...

    ಪ್ರತಿಯೊಂದು ಪ್ರಶ್ನೆಗೂ ಉತ್ತರ ಇದ್ದೆ ಇದೆ..

    ---http://manasinamane.blogspot.com/

    ReplyDelete
  16. ದಿನಕರ್,
    ಮೂಕ ಮನದ ಮಾತು ಓದಿ ಮೂಕನಾಗಿ ಬಿಟ್ಟೆ....ನಿನ್ನೆಯಷ್ಟೆ ಅಮ್ಮನಿಗೆ ಫೋನ್ ಮಾಡಿ ಇನ್ನು ಆರು ತಿಂಗಳು ಹೇಗಾದರೂ ಕಾಲ ಹಾಕು ಅಂತ ಹೇಳಿದೆ....ಆಮೇಲೆ ಬರುತೇನೆ ಅಂತ ಹೇಳಿದೆ....ಸ್ವಲ್ಪ ದಿನ ರಜೆಗೆ ಹೋಗಿ ಮತ್ತೆ ನಮ್ಮ ಕೆಲಸಕ್ಕೆ ಮರಳಬೇಕು ನೆನೆಸಿಕೊಂಡರೆ ಬಹಳ ದುಃಖ ಆಗುತ್ತೆ....
    "ಅವರ ಹಾಗೆ ಕಷ್ಟ ಪಡುವುದು ಬೇಡ ಎಂದು ನಮಗೆ ಕಲಿಸಿದ ವಿದ್ಯೆ......
    ಅವರ ಕೊನೆಗಾಲದಲ್ಲಿ ಅವರದೇ ಉಪಯೋಗಕ್ಕೆ ಬಾರದೆ ಹೋಯಿತಾ....?
    ನಿಮ್ಮ ಮಾತು ನಿಜ....ಅಸಹಾಯಕತೆ ಪರಿಸ್ಥಿತಿ ....
    ಒಳ್ಳೆ ವಿಷಯದ ಬಗೆ ಬರೆದಿದ್ದೀರ.....

    ReplyDelete
  17. ದಿನಕರ್ ಸರ್
    ನನಗೂ ಊರಿಗೆ ಹೋದಾಗ ಇಂಥಹ ಪ್ರಶ್ನೆ ಕಾಡಿದೆ
    ಯಾವ ಪುರುಷಾರ್ಥಕ್ಕೆ ಕೆಲಸ ಮಾಡುತ್ತಿದ್ದೇವೆ ಎನಿಸಿದೆ
    ನಮ್ಮವರನ್ನು ಬಿಟ್ಟು ಹೊಟ್ಟೆ ಪಾಡಿಗೆ ಕೆಲಸ ಮಾಡುವುದು ಬೇಕಿತ್ತಾ ಎಂದೆನಿಸಿದೆ
    ನಿಮ್ಮ ಬರಹ ಎಲ್ಲ ಕುಟುಂಬದ ಕಥೆ

    ReplyDelete
  18. ಲೇಖನದ ಭಾವ ತೀವ್ರವಾಗಿ ಕಾಡಿತು. ತಂದೆ ತಾಯಿಯರನ್ನು ಬಿಟ್ಟು ದೂರದಲ್ಲಿರುವವರ ಸಮಸ್ಯೆಗಳು ಅನೇಕ . ಅವರಿರುವಲ್ಲಿಗೆ ಹೋಗಿರುವುದೂ ಅಸಾಧ್ಯ , ಕೊನೆಗಾಲದಲ್ಲಿ ಅಷ್ಟುವರ್ಷ ಬಾಳಿದ ಊರಿಂದ, ಮನೆಯಿಂದ ದೂರ ಬರಲು ಅವರಿಗೂ ಹಿಂಸೆಯಾದ್ದರಿಂದ ಅವರನ್ನು ನಾವಿರುವಲ್ಲಿಗೆ ಕರೆಸಿಕೊಳ್ಳುವುದೂ ಅಸಾಧ್ಯ. ಬರೀ ಹೆಣ್ಣುಮಕ್ಕಳೇ ಇರುವವರ ಸಮಸ್ಯೆಯಂತೂ ಇನ್ನೂ ಅಧಿಕ . ಹೆಣ್ಣುಮಕ್ಕಳ ಮನೆಯಲ್ಲಿ ಹೆಚ್ಚುದಿನ ಉಳಿಯಬಾರದೆಂಬ ಪರಂಪರಾಗತ ನಂಬಿಕೆ ಅಳಿಸುವುದು ಕಷ್ಟ.
    ಇಂತಹ ಸ್ಥಿತಿಯಲ್ಲಿ ಸಾಧ್ಯವಾದಷ್ಟು ಅವರಿಗೆ ಸ್ಪಂದಿಸುವುದೊಂದೇ ಉಳಿದ ಪರಿಹಾರ.

    ReplyDelete
  19. ತಮ್ಮ ಪ್ರಶ್ನೆಗಳು ನಾಟುವ೦ತಿದೆ. ನಿಜವಾಗಿಯೂ ತಮ್ಮ ಲೇಖನ ಮೂಕ ಮನದ ಮಾತುಗಳು. ಒದು ಕಲೆತು ತನ್ನವರನ್ನು ಪರಕೀಯರನ್ನಾಗಿಸಿ, ಬದುಕರಸಿ ಪರನಾಡಲ್ಲಿ ಹೋಗಿ ತಾವು ಪರಕೀಯರಾಗಿ ಜೀವನ ನಡೆಸುವ ಜನರ ಮನದ ಮಾತು. ತ೦ದೆ ತಾಯಿಯರು ಮಕ್ಕಳಿಗೆ ವಿಧ್ಯೆ ಕಲಿಸುವದು ತಮ್ಮಿ೦ದ ದೂರವಾಗಲೆ೦ದೆ ಎ೦ಬ ತಮ್ಮ ಪ್ರಶ್ನೆ ಮನ ಕಲುಕುತ್ತದೆ. ಭಾವಪೂರ್ಣ ಬರಹಕ್ಕೆ ನಮನಗಳು.

    ReplyDelete
  20. ನನಗ್ಯಾಕೋ ನಿಮ್ಮ ಬರಹ ಕಾಡುತ್ತಲೇ ಇದೆ...ಒಂದು ಮಾತು ಹೇಳ್ತೀನಿ ದಿನಕರ್ ಸರ್....ನಿಮ್ಮ ಮನೋವೇದನೆ ಇದೆಯಲ್ಲಾ...ನಿಮ್ಮ ಅಂತರಂಗ ಪ್ರೀತಿಯಿದೆಯಲ್ಲಾ...ಅದು ಖಂಡಿತಾ ಹೆತ್ತವರನ್ನು ಕಾಪಾಡುತ್ತದೆ...ದೂರ ಎನ್ನುವುದು ಸಾಂಕೇತಿಕವಷ್ಟೆ...ವೇದನೆ ಪಡಬೇಕಾಗಿರುವುದು ನೀವಲ್ಲ ..ನಾನು ನನ್ನ ಮೊದಲ ಕಾಮೆಂಟ್ನಲ್ಲಿ ಹೇಳಿದ ಜನಗಳು...
    ಅನಿವಾರ್ಯ ಕಾರಣಗಳಿಂದಾಗಿಯಷ್ಟೇ ಪೋಷಕರಿಂದ ದೂರವಿರಿತ್ತೀರಿ ಎನ್ನುವುದನ್ನು ಬಿಟ್ಟರೆ ...ಇದರಲ್ಲಿ ನಿಮ್ಮ ತಪ್ಪಾಗಲೀ ಪೋಷಕರ ತಪ್ಪಾಗಲೀ ಏನೂ ಇಲ್ಲ. ರೆಕ್ಕೆ ಬಲಿತ ನಂತರ ಹಕ್ಕಿ ಗೂಡು ಬಿಟ್ಟು ಹಾರಲೇ ಬೇಕು..ಅದು ಪೃಕೃತಿ ನಿಯಮವಷ್ಟೇ.....ಚುಕ್ಕಿಚಿತ್ತಾರದವರ ತಕರಾರಿಗೆ ನನ್ನದೂ ಸಮ್ಮತಿಯಿದೆ...ಎಲ್ಲದರಲ್ಲೂ ಸಮಾನತೆ ಬಯಸುವ ಮಹಿಳೆ ಪೋಷಕರ ಪಾಲನೆಗೂ ಬದ್ದರಾಗಿರಬೇಕು ಅಲ್ಲವೇ...

    ReplyDelete
  21. ಮನಮುಕ್ತ ಮೇಡಂ,
    ನಿಮ್ಮ ಸಲಹೆ, ಅಭಿಪ್ರಾಯಕ್ಕೆ ಧನ್ಯವಾದ...... ಹೇಗೆ ಪ್ರತಿಕ್ರೀಯಿಸಬೇಕೋ ತಿಳಿಯುತ್ತಿಲ್ಲ..... ಒಂದಂತೂ ಸತ್ಯ .... ಜೀವನದಲ್ಲಿ ಸ್ವಲ್ಪ ಸ್ವಾರ್ಥಿಯಾಗಿರಬೇಕು ಆಲ್ವಾ ಮೇಡಂ...... ನೀವು ಹೇಳಿದ್ದು ನಿಜ, ಇದು ಎಲ್ಲರ ಮನದ ಭಾವನೆಯೂ ಹೌದು..... ನಾನು ಸ್ವಲ್ಪ ಬೇಗ ಇದರಬಗ್ಗೆ ಬರೆದೆ.....

    ReplyDelete
  22. ರಘು,
    ನಮ್ಮ ಬ್ಲಾಗ್ ಬರೆಯುವ ಗೆಳೆಯರ, ಹಿರಿಯರ ಎಲ್ಲರ ಕಥೆಯೂ ಇದೆ ಯಾಕಂದ್ರೆ ಎಲ್ಲರೂ ಮನೆಯಿಂದ ದೂರ ಇದ್ದಾರೆ.... ಅವರ ಕಥೆ ಇದು..... ಎಲ್ಲರೂ ಒಂದಲ್ಲಾ ಒಂದು ಸಾರಿ ನನ್ನ ಹಾಗೆ ಯೋಚಿಸಿಯೇ ಇರುತ್ತಾರೆ ಅಲ್ಲವಾ..... ನಿಮ್ಮೆಲ್ಲರ ಮೂಕ ಮನಸಿಗೆ ನಾನು ಮಾತಾದೆ ಅಷ್ಟೇ.... .....

    ReplyDelete
  23. ಆನಂದ್ ಸರ್,
    ನಿಮ್ಮೆಲ್ಲರ ಪ್ರತೀಕ್ರಿಯೆಗೆ ಧನ್ಯವಾದ ಹೇಳುತ್ತಿದ್ದರೂ ನನ್ನ ಪ್ರಶ್ನೆಗಳು ಹಾಗೆ ಉಳಿದಿವೆ..... ನಿಮ್ಮ ಬ್ಲಾಗ್ ಓದಿ ಅಲ್ಲೇ ನನ್ನ ಪ್ರತೀಕ್ರಿಯೆ ಹಾಕುತ್ತೇನೆ.....

    ReplyDelete
  24. ವಿಜಯಶ್ರೀ ಮೇಡಂ,
    ಬೌತಿಕವಾಗಿ ದೂರ ಇರೋದು, ಮಾನಸಿಕವಾಗಿ ಹತ್ತಿರವಿರೋದು ಅಂತ ಏನೂ ಇಲ್ಲ ಮೇಡಂ..... ಬರೇ ಹೇಳಲಿಕ್ಕೆ ಅಷ್ಟೇ...... ನಾನು ಅವರ ಮನಸ್ಸಿನ ಹತ್ತಿರ ಇದ್ದೇನೆ ಅಂತ ಹೇಳಬಹುದು.... ಆದರೆ ಅದನ್ನ ಫೀಲ್ ಮಾಡಲು ಅವರಿಗೆ ಆಗಲ್ಲ ಆಲ್ವಾ..... ಅವರಿಗೆ ಆರಾಮಿರದೆ ಇರುವ ಸಮಯದಲ್ಲಿ, ''ನಾನು ನಿಮಗೆ ಮಾನಸಿಕವಾಗಿ ಹತ್ತಿರ ಇದ್ದೇನೆ'' ಎನ್ನಲಿಕ್ಕೆ ಆಗಲ್ಲ ಆಲ್ವಾ ಮೇಡಂ..... ನಿಮ್ಮ ಪ್ರತಿಕ್ರೀಯೆಗೆ ಧನ್ಯವಾದ....

    ReplyDelete
  25. ರವಿಕಾಂತ್,
    ಅಪ್ಪ ಅಮ್ಮ ಮಕ್ಕಳನ್ನು ಕಳಿಸಿ, ಬೆಳೆಸಿ, ಮಾಡುವೆ ಮಾಡಿಸಿ ಬೇರೆ ಕಳಿಸಿ ಕೊಡಬೇಕು..... ಅವರಿಂದ ಏನೂ ನಿರೀಕ್ಷಿಸದೆ ಅವರನ್ನು ದೂರ ಇಡಬೇಕು..... ಮಕ್ಕಳೂ ಸಹ ಇದನ್ನು ಅವರ ಕಾಲದಲ್ಲಿ ಮುಂದುವರಿಸಬೇಕು...... ಇದು ನಮ್ಮ ಭಾರತದಲ್ಲಿ ಸಾಧ್ಯಾನ....... ಇಲ್ಲ ಫ್ರೆಂಡ್.... ನಮ್ಮ ಭಾರತದ ಸಂಸ್ಕ್ರತಿ ದೊಡ್ಡದು ಮತ್ತು ವಿಶಾಲವಾದುದು..... ಅಪ್ಪ ಅಮ್ಮ , ಮಕ್ಕಳು ಚಿಕ್ಕವರಿದ್ದಾಗ ಅವರಿಗೆ ನೆರಳಾದರೆ, ಅದೇ ಮಕ್ಕಳು ದೊಡ್ಡವರಾಗಿ ಅಪ್ಪ ಅಮ್ಮನಿಗೆ ನೆರಳುನೀಡಬೇಕು.....

    ReplyDelete
  26. ಗೌತಮ್ ಸರ್,
    ಧನ್ಯವಾದ ನಿಮಗೆ ಇಷ್ಟವಾದುದಕ್ಕೆ....

    ReplyDelete
  27. ಸುನಾಥ್ ಸರ್,
    ನಂಗೆ ಉತ್ತರ ಗೊತ್ತಿಲ್ಲ ಸರ್....... ನಾನು ಅಪ್ಪನ ಸ್ಥಾನಕ್ಕೆ ಹೋಗಿ, ನನಗೆ ವಯಸ್ಸಾದಾಗ ಉತ್ತರ ಸಿಗಬಹುದು..... ಕಾಯುತ್ತೇನೆ ಅಂದಿನವರೆಗೂ...... ನನ್ನಿಂದ ಎಷ್ಟು ಸಾದ್ಯವೋ ಅಷ್ಟು ನನ್ನ ಜವಾಬ್ಧಾರಿನಿಭಾಯಿಸುತ್ತೇನೆ......

    ReplyDelete
  28. ಗುರುದೆಸೆ ಅವರೇ,
    ಪ್ರಶ್ನೆಗಳು ಕಾಡುತ್ತಿವೆ..... ಉತ್ತರ ಹೊಳೆಯುತ್ತಿಲ್ಲ.....

    ReplyDelete
  29. ಮಹೇಶ್ ಸರ್,
    ನಿಜ ನಿಮ್ಮ ಮಾತು....... ಅವರ ಹತ್ತಿರ ಸ್ವಲ್ಪ ಸಮಯ ಕಳೆದು , ಮತ್ತೆ ವಾಪಸ್ ಬರುವ ಘಳಿಗೆ ತುಂಬಾ ನೋವು ಕೊಡತ್ತೆ ಸರ್..... ನಿಮ್ಮ ಪ್ರತೀಕ್ರಿಯೆಗೆ ಧನ್ಯವಾದಗಳು........

    ReplyDelete
  30. ಗುರು ಸರ್,
    ನಿಮ್ಮ ಹಾಗೆ ನನಗೆ ಅನಿಸಿತ್ತು ........ ಅದಕ್ಕೆ ಈ ಬರಹ..... ಅಮ್ಮ ಅಪ್ಪನ ಋಣ ಈ ಜನ್ಮದಲ್ಲಿ ತೀರಿಸಲಿಕ್ಕೆ ಆಗಲ್ಲ ಸರ್......

    ReplyDelete
  31. ಸುಮಾ ಮೇಡಂ,
    ಎಲ್ಲರು ಹೆಣ್ಣು ಮಕ್ಕಳಿದ್ದರೆ ಒಳ್ಳೆಯದು ಮೇಡಂ ಯಾಕಂದ್ರೆ ಅಪ್ಪ ಅಮ್ಮ ಅವರಿಂದ ಏನೂ ನಿರೀಕ್ಷೆ ಮಾಡಲ್ಲ ...... ಆದರೂ ಹೆಣ್ಣುಮಕ್ಕಳು ತಮ್ಮ ಕೈಲಾದ ಸಹಾಯ ಮಾಡ್ತಾರೆ....... ಅದಕ್ಕೆ ನಾನು ನನ್ನ ಮಕ್ಕಳಾಗಿ ಹೆಣ್ಣು ಮಗುವನ್ನು ಅಪೇಕ್ಷೆ ಮಾಡ್ತಾ ಇದ್ದೇನೆ...... ಹೆಣ್ಣು ಮಗುವೆ ಸಿಕ್ಕರೆ ನಾನು ಧನ್ಯ....... ನಿಮ್ಮ ಭಾವನೆಗಳಿಗೆ ನನ್ನನಮನ,,,,,,

    ReplyDelete
  32. ಸೀತಾರಾಂ ಸರ್,
    ಎಲ್ಲರ ನೋವು ಇದೆ...... ನಾವು ದುಡಿವುವ ವೇಳೆಯಲ್ಲಿ ನಮ್ಮ ಅಪ್ಪ ಅಮ್ಮನ ಜೊತೆ ಕಾಲ ಕಳೆಯುವ, ಅವರಿಗೆ ನೆಮ್ಮದ್ದಿ ನೀಡುವ ಭಾಗ್ಯ ನಮಗಿಲ್ಲವಲ್ಲ ಅಂತ........ ಧನ್ಯವಾದ ನಿಮ್ಮ ಭಾವನೆಗಳಿಗೆ.....

    ReplyDelete
  33. ಸುಬ್ರಮಣ್ಯ ಸರ್,
    ನಿಮ್ಮ ನ್ನು ಇಷ್ಟು ಚಿಂತನೆಗೆ ಈಡು ಮಾಡಿದ್ದಕ್ಕೆ ನನಗೆ ಖುಷಿ ಇದೆ..... ನಾನು ನನ್ನ ಕರ್ತವ್ಯವನ್ನು ಎಷ್ಟು ನಿಭಾಯಿಸುತ್ತಿದ್ದೇನೋ ಅದನ್ನ ನನ್ನ ಅಪ್ಪ ಅಮ್ಮನಿಗೆ ಕೇಳಬೇಕು....... ಆದರೂ ನನ್ನದೊಂದು ತಕರಾರು ಇದೆ ನಿಮ್ಮಲ್ಲಿ...... ಹೆಣ್ಣು ಮಕ್ಕಳು , ಈ ಜವಾಬ್ದಾರಿ ಯನ್ನು ಗಂಡು ಮಕ್ಕಳಿಗಿಂತ ಚೆನ್ನಾಗಿ ನಿಭಾಯಿಸ್ತಾ ಇದ್ದಾರೆ..... ನಾನು ತುಂಬಾ ಜನರನ್ನು ನೋಡಿದ್ದೇನೆ............ ತುಂಬಾ ಧನ್ಯವಾದ ಸರ್....... ನಿಮ್ಮ ಭಾವನೆಗಳಿಗೆ....

    ReplyDelete
  34. ಅಭಿಪ್ರಾಯ ನೀಡಿದ ಎಲ್ಲರಿಗೂ ಧನ್ಯವಾದ....... ಈ ಬರಹ ನಿಮ್ಮೆಲ್ಲರ ಮೇಲೆ ಇಷ್ಟು ವಿಚಾರ ಹುಟ್ಟಿಸುತ್ತದೆ ಅಂತ ತಿಳಿದಿರಲಿಲ್ಲ..... ನಿಮ್ಮ ಭಾವನೆಗಳನ್ನು ಇಲ್ಲಿ ಹಂಚಿಕೊಂಡಿದ್ದೀರ..... ತುಂಬಾ ತುಂಬಾ ಧನ್ಯವಾದಗಳು..... ಅಪ್ಪ ಅಮ್ಮನ ಋಣ ತೀರಿಸೋಕೆ ಪ್ರಯತ್ನ ಪಡೋಣ........ ಯಾಕೆಂದರೆ ನಾವೂ ಒಂದು ದಿನ ಅಪ್ಪಅಮ್ಮನಾಗುತ್ತೇವೆ.....

    ReplyDelete
  35. ನನ್ನದು ಅದೇ ಪ್ರಶ್ನೆ ಸರ್.. ಪ್ರತಿ ಬಾರಿ ಊರಿಗೆ ಹೋಗಿ ವಾಪಸಾಗುವಾಗ ನಮ್ಮಲ್ಲಿ ಮೂಡುವ ಪ್ರಶ್ನೆ...
    ನನ್ನ ಪುಣ್ಯಕ್ಕೆ, ನನ್ನ ತಮ್ಮ ಊರಿನಲ್ಲಿಯೇ ಕೆಲವು ವ್ಯವಹಾರಗಳನ್ನು ಮಾಡಿಕೊಂಡು ಇದ್ದಾನೆ. ಹಾಗಾಗಿ ಸ್ವಲ್ಪ ನಿಟ್ಟುಸಿರು.

    ReplyDelete
  36. ಶಿವಪ್ರಕಾಶ್,
    ಈ ಪ್ರಶ್ನೆ ನನ್ನನ್ನು ಈ ಬಾರಿ ತುಂಬಾ ಕಾಡಿ, ಈ ಬರಹ ಹುಟ್ಟಿತು..... ಧನ್ಯವಾದ ನಿಮ್ಮ ಅಭಿಪ್ರಾಯಕ್ಕೆ....

    ReplyDelete
  37. ದಿನಕರ್
    ಮೊದಲ ಬಾರಿಗೆ ಇ೦ದು ನಿಮ್ಮ ಬ್ಲಾಗಿಗೆ ಬ೦ದೆ, ತು೦ಬಾ ಚೆನ್ನಾಗಿದೆ, ಇನ್ನಷ್ಟು, ಮತ್ತಷ್ಟು ಬಿಡುವಿದ್ದಾಗ ಓದುವೆ, ಖುಷಿಯಾಯಿತು.

    ReplyDelete
  38. ಪರಾಂಜಪೆ ಸರ್,
    ಸ್ವಾಗತ ನಿಮಗೆ ನನ್ನ ಬ್ಲಾಗ್ ಗೆ..... ಹೀಗೆ ಬರುತ್ತಾ ಇರಿ...... ಧನ್ಯವಾದ ನಿಮ್ಮ ಕಾಮೆಂಟ್ ಗೆ...

    ReplyDelete
  39. ದಿನಕರ್ ಸರ್,
    ಕೆಲವು ಅಂತರರಾಷ್ಟ್ರೀಯ ಸ್ಪರ್ಧೆಗಳಿದ್ದರಿಂದ ಬ್ಲಾಗುಗಳಿಗೆ ಬರಲಾಗಲಿಲ್ಲ. ಕ್ಷಮೆ ಇರಲಿ.

    ಈಗ ಬಿಡುವು ಮಾಡಿಕೊಂಡು ನಿಮ್ಮ ಲೇಖನ ಓದಿದೆ. ಲೇಖನ ಪುಟ್ಟದಾದರೂ ಅದು ಮನದಲ್ಲಿ ಮೂಡಿಸುವ ಪ್ರಶ್ನೆಗಳು ನಮ್ಮನ್ನು ವಿಷಾದಕ್ಕೆ ಎಡೆಮಾಡಿಬಿಡುತ್ತವೆ. ಇದು ಪ್ರತಿಯೊಬ್ಬರ ಬಾಳಿನಲ್ಲಿ ಒಮ್ಮೆಯಾದರೂ ಬರುವಂತ ಪ್ರಶ್ನೆ. ನನಗೂ ನನ್ನ ತಂದೆಯ ಕೊನೆಗಾಲದಲ್ಲಿ ಇದೇ ಪ್ರಶ್ನೆ ತುಂಬಾ ಕಾಡಿತ್ತು. ಅದರ "ಅಪ್ಪಂದಿನದಿನದಂದೂ ಒಂದು ಲೇಖನವನ್ನು ಬರೆದು ಬ್ಲಾಗಿನಲ್ಲಿ ಪ್ರಾಯಶ್ಚಿತ್ತಮಾಡಿಕೊಂಡೆ.

    ಆದರೂ ಏನೇ ಕೆಲಸದ ಒತ್ತಡವಿದ್ದರೂ, ಆವರೊಟ್ಟಿಗೆ ಕಳೆಯಲು ಸಮಯ ಮಾಡಿಕೊಳ್ಳಲೇಬೇಕಲ್ವಾ...ಏಕೆಂದರೆ ಮುಂದೆ ನಮಗೆ ನಮ್ಮ ಮಕ್ಕಳಿಂದ ಇಂಥದ್ದೇ ಪರಿಸ್ಥಿತಿ ಬಂದರೆ?

    ReplyDelete
  40. ದಿನಕರ್ ಸರ್ ನಿಮ್ಮ ಬ್ಲಾಗ್ ಪೋಸ್ಟ್ ಓದಲು ತಡವಾಯಿತು ಕ್ಹಮಿಸಿ..
    ಲೇಖನ ತುಂಬಾ ಚೆನ್ನಾಗಿದೆ .
    ಹೌದು ಸರ್ , ಉತ್ತರವಿರದೇ ಎಲ್ಲರನ್ನೂ ಕಾಡೋ ಪ್ರಶ್ನೆ ಅಂದ್ರೆ ಅನಿಸುತ್ತೆ !

    ReplyDelete
  41. ಶಿವೂ ಸರ್,
    ಧನ್ಯವಾದ , ಒತ್ತಡದ ನಡುವೆಯೂ ಓದಿ ಕಾಮೆಂಟ್ ಮಾಡಿದ್ದಕ್ಕೆ.... ಮೊದಲ ಬಾರಿ ಗಂಭೀರ ವಿಷಯದ ಬಗ್ಗೆ ಬರೆದಿದ್ದೆ..... ಹಾಗಾಗಿ ನಿಮ್ಮೆಲ್ಲರ ಅನಿಸಿಕೆ ಬೇಕಿತ್ತು..... ನೀವು ಹೇಳಿದ್ದು ಸರಿ, ನಾವು ಈಗ ಮಾಡಿದ ಧರ್ಮ ನಮ್ಮನ್ನು ಕೊನೆಗೆ ಕಾಪಾಡಬಹುದು...... ಕರ್ಮ ಮಾಡಿದರೆ,ಕಾಡಬಹುದು.....

    ReplyDelete
  42. ರಂಜಿತ ಮೇಡಂ,
    ಧನ್ಯವಾದ ನಿಮ್ಮ ಕಾಮೆಂಟ್ ಗೆ.... ನನಗಂತೂ ಪದೇ ಪದೇ ಕಾಡುವ ಕೊರೆಯುವ ಪ್ರಶ್ನೆ ಇದಾಗಿತ್ತು....... ಹಾಗಾಗಿ ನಿಮ್ಮನ್ನೆಲ್ಲಾ ಕರೆದು ಇದರ ಬಗ್ಗೆ ಅನಿಸಿಕೆ ಕೇಳಿದೆ....... ನಮ್ಮ ಕೊನೆಗಾಲದಲ್ಲಿ ಇದಕ್ಕೆ ಉತ್ತರ ಸಿಗಬಹುದು.....ಕಾಯೋಣ.....

    ReplyDelete
  43. ಸತ್ಯದ ಮಾತುಗಳು..ನನಗೂ ಇಂಥಹ ಪ್ರಶ್ನೆ ಕಾಡಿದೆ...ಎಲ್ಲರ ಮನೆಯಲ್ಲೂ ಈಗ ಇದೆ ಕತೆ....ನಾವು ಮನೆಗೆ ಬರುವದಕ್ಕೆ ಕಾಯುತ್ತಿರುವ ಅಪ್ಪಾ ,ಅಮ್ಮ ನನ್ನು ನೆನೆದರೆ ಮನ ತುಂಬಿ ಬರುತ್ತದೆಯಲ್ಲ

    ReplyDelete
  44. ಸತ್ಯವನ್ನು ಒಪ್ಪಿಕೊಳ್ಳಲೂ ಕಷ್ಟವಾಗುತ್ತಿದೆ.

    ReplyDelete
  45. ಸುಮಾ ಮೇಡಂ,
    ಸ್ವಾಗತ ನನ್ನ ಬ್ಲಾಗ್ ಗೆ.......... ನಿಮ್ಮ ಮಾತು ನಿಜ..... ತುಂಬಾ ನೋವಾಗುತ್ತದೆ...... ನಮ್ಮ ಅಮ್ಮ ಅಪ್ಪ ನಮ್ಮನ್ನು ಏನೂ ನೀರಿಕ್ಷೆಯಿಲ್ಲದೆ ಓದಿಸಿರುತ್ತಾರೆ..... ಅವರಿಗೆ ನಮ್ಮ ಓದಿನಿಂದ ಏನೂ ಪ್ರಯೋಜನವಾಗುವುದೇ ಇಲ್ಲ..........

    ReplyDelete
  46. ಉಮಾ ಮೇಡಂ,
    ಸ್ವಾಗತ ನನ್ನ ಬ್ಲಾಗ್ ಗೆ..... ಹೀಗೆ ಬರುತ್ತಾ ಇರಿ.... ಧನ್ಯವಾದ ನಿಮ್ಮ ಅಭಿಪ್ರಾಯಕ್ಕೆ.....

    ReplyDelete
  47. ಈ ಪ್ರಶ್ನೆ ನಿಮ್ಮನ್ನೊಬ್ಬರನ್ನೇ ಅಲ್ಲ ಎಲ್ಲರನ್ನೂ ಕಾಡುತ್ತದೆ ಸರ್, ಎಲ್ಲರೂ ಇರುವ ನಮ್ಮೂರು ಬಿಟ್ಟು... ಪರವೂರಿನಲ್ಲಿ ಪರದೇಶಿಗಳಂತೇ ಇದ್ದು ಬಿಡುತ್ತೇವೆ ನಾವು...
    ಎಲ್ಲೊ ಪಾಶ್ಚಿಮಾತ್ಯ ಜನರ ಹಾಗೆ ನಾವೂ ಆಗುತ್ತಿದ್ದೆವೊ ಅನ್ನೊ ಭಯ, ಹದಿವಯಸ್ಸಿಗೆ ಅಲ್ಲಿ ಅಪ್ಪ ಅಮ್ಮ ಮನೆಯಿಂದ ಹೊರಹಾಕಿದರೆ, ಇಲ್ಲಿ ನಾವೇ ಹೊರಕಾಲಿಡುತ್ತಿದ್ದೇವೆ...
    ಅಪ್ಪ ಅಮ್ಮನನ್ನು ಇಲ್ಲಿ ನಗರಗಳಿಗೆ ಕರೆತಂದರೆ ಪಂಜರದಲ್ಲಿ ಕೂಡಿಟ್ಟ ಗುಬ್ಬಚ್ಚಿಗಳಂತಾಗಿ ಬಿಡುತ್ತಾರೆ, ಅಲ್ಲಿಯೇ ಬಿಟ್ಟರೆ ಗೂಡಿಗೆ ಮರಳದ ಗುಬ್ಬಚ್ಚಿಗಳು ನಾವಾಗುತ್ತೇವೆ. ನಗರಗಳು ಮಾತ್ರ ಬೆಳೆದು ಹಳ್ಳಿಗಳು ಹಾಗೇ ಇರುವುದರಿಂದ ಈ ವಲಸೆ ಅನಿವಾರ್ಯ ಆಗುತ್ತಿದೆ... ನನಗೇನೊ ಒಂದಿಲ್ಲೊಂದು ದಿನ ಮರಳಿ ಹೋಗುವ ಆಸೆ ಇದೆ, ಆದರೆ ಎಂದೊ ಗೊತ್ತಿಲ್ಲ... ಮಣ್ಣಾಗುವ ದಿನ ಆ ಮಣ್ಣಿನ ನೆನಪು ಬಾರದಿರಲಿ...

    ReplyDelete
  48. ದೂರದಲ್ಲಿ ಕೆಲಸ ಮಾಡುವ ಎಲ್ಲರಿಗೂ ಇದೇ ಅನುಭವ ಅಲ್ವೇ ದಿನಕರ್ ಅವರೇ...

    ನಾನು ಮೊನ್ನೆ ಹತ್ತು ದಿನ ಊರಲ್ಲಿ ಕಳೆದು ಬ೦ದೆ... ಅಲ್ಲಿ ಸಿಗುವ ನೆಮ್ಮದಿ ಇಲ್ಲಿ ಬೆ೦ಗಳೂರಿನಲ್ಲಿ ಸಿಗುವುದಿಲ್ಲ..
    ಆದರೂ ಹೊಟ್ಟೆಪಾಡಿಗಾಗಿ ಇಲ್ಲೇ ಇರಬೇಕಾದುದು ಅನಿವಾರ್ಯ....

    ReplyDelete
  49. This comment has been removed by a blog administrator.

    ReplyDelete
  50. ನಿಮ್ಮ ಬರಹ ಹಳೆಯ ನೆನಪುಗಳನ್ನ ಎತ್ತಿ ತರುತ್ತಿದೆ. ನನ್ನ ತಂದೆ, ಇಲ್ಲವಾಗಿ ಹತ್ತು ವರ್ಷಗಳಾದವು. ಮೊದಲನೇ ಶಾಲೆಗೆ ಭುಜದ ಮೇಲೆ ಹೊತ್ತುಕೊಂಡು, ಹೋಗಿದ್ದು ಇನ್ನೂ ನೆನಪಿದೆ. "ಒಡಲೊಳಗಿದ್ದರೆ ವಿದ್ಯೆ ನಡೆದರೆ ಭಾರವಲ್ಲ. ಎಷ್ಟು ಬೇಕಾದರೂ ಕಲಿ, ಆದರೆ ಯಾರದೋ ಕೈ ಕೆಳಗೆ ಕೂಲಿ ಮಾಡಬೇಡ" ಎಂದಿದ್ದು, ಮೊದಲ ಬಾರಿ ನೌಕರಿಗೆ ಹೊರಟು ನಿಂತಾಗ, ಸೋಪು, ರೇಜರ್ ಸೆಟ್ ವರೆಗೆ ತಂದು ಕೊಟ್ಟು "ನನ್ನ ಕರ್ತವ್ಯ ಇದು, ಇನ್ನು ಮುಂದಿದ್ದು ನಿಂದು" ಹೇಳಿದ್ದು, ಕೊನೆಗೆ, ನೌಕರಿ ಬಿಟ್ಟು ಕಾಡು ತಿರುಗಲು ಹೋಗ್ತೆ ಅಂದಾಗ ಸ್ವಲ್ಪವೂ ಬೇಸರ ಪಟ್ಟುಕೊಳ್ಳದೆ,ನಿನ್ನಿಷ್ಟದ ಬದುಕು ಆಯ್ಕೆ ಮಾಡಿಕ್ಯ " ಎಂದಿದ್ದು ಎಲ್ಲ ನೆನಪುಗಳು ಒತ್ತರಿಸಿ ಬರುತ್ತಿದೆ.
    ಎಷ್ಟು ಆಸಕ್ತಿಯಿಂದ, ಎಷ್ಟೆಲ್ಲ ಕಷ್ಟ ಪಟ್ಟು ಸೈಕಲ್ಲಿಗೆ ಒಂದು ಜರ್ಮನಿಯ "ಡೈನಮೋ" ತಂದು ಹಾಕಿದ್ದರು. ಈಗ ನಾನು ಜರ್ಮನಿಯಲ್ಲಿ ಇದ್ದೆ ಎಂದಾಗ ಎಷ್ಟು ಸಂಭ್ರಮ ಪಡುತ್ತದ್ದನೇನೋ!

    ನೆನಪುಗಳು ಬರುವ ಹಾಗೆ ಬರೆದ ನಿಮಗೆ ಧನ್ಯವಾದಗಳು

    ReplyDelete
  51. ಪ್ರಭು ಸರ್,
    ನಿಮ್ಮ ಮಾತು ಸತ್ಯ..... ಮಣ್ಣಾಗುವ ದಿನ ಮಣ್ಣಿನ ನೆನಪು ಬಂದೆ ಬರತ್ತೆ.....

    ReplyDelete
  52. ಸುಧೇಶ್,
    ಊರಿಗೆ ಹೋದಾಗ ಸಿಗುವ ಅನುಭವ ಬರೆಯಲು ಸಾದ್ಯವೇ ಇಲ್ಲ...... ..... ನಿಜ...... ಹೊಟ್ಟೆಪಾಡು ನಮ್ಮಿಂದ ಏನೆಲ್ಲಾ ಮಾಡಿಸತ್ತೀ ಆಲ್ವಾ....

    ReplyDelete
  53. ಬಾಲು ಸರ್,
    ಮೊದಲನೆಯದಾಗಿ ನಿಮಗೆ ನನ್ನ ಬ್ಲಾಗ್ ಗೆ ಸ್ವಾಗತ....... ನಿಮ್ಮ ನೆನಪುಗಳನ್ನ್ನು ನಾನು ಕೆದಕಿದೆ....... ಅಪ್ಪ ಅಮ್ಮನ ಬಗ್ಗೆ ಕೆದಕಿದ್ದಸ್ತೂ ನೆನಪುಗಳು ಸಿಗುತ್ತವೆ..... ಅಪ್ಪ ನಿಮ್ಮ ಜೊತೆ ಇರದಿದ್ದರೂ ಅವರ ಆತ್ಮ ನಿಮ್ಮ ಏಳಿಗೆ ನೋಡಿ ಖುಷಿ ಪಟ್ಟಿರತ್ತೆ..... ಅವರು ನಿಮ್ಮನ್ನು ನೋಡುತ್ತಿದ್ದಾರೆ ಎಂದೇ ನಿಮ್ಮ ಒಳ್ಳೆಯ ಕೆಲಸ ಮುಂದುವರಿಸಿ...... ನನ್ನ ಬ್ಲಾಗ್ ಗೆ ಹೀಗೆ ಬರುತ್ತಾಇರಿ.....

    ReplyDelete
  54. idanna odida mele mattashtu prashnegalu sataayitaa ide Dinakar...oorinalliro makkalanna avara taayi tande hechge odisde idre olledeno annistaa ide!

    ReplyDelete
  55. This comment has been removed by the author.

    ReplyDelete