Jan 10, 2010

ನಾನಿರದ ನೀನು......!

ನಾನಿರದ ನಿನ್ನ ಜೀವನ.....

ಉಪ್ಪಿಲ್ಲದ ಸಾರು,
ಉಪ್ಪುಪ್ಪು ನೀರು.......

ಚಕ್ರವಿಲ್ಲದ ತೇರು,
ಪೆಟ್ರೋಲಿಲ್ಲದ ಕಾರು......

ತಂಪಿಲ್ಲದ ಬೀರು,
' ಟುನ್ ' ಮಾಡದ ಬಾರು .......

ತೂತಾಗಿರೋ ಸೂರು,
ನೆರೆ ಬಂದ ಊರು........


ನಾನಿರದೇ ನೀನು......

ಕರೆಂಟಿಲ್ಲದ ಫ್ಯಾನು,
ನೀರಲ್ಲಿಲ್ಲದ ಮೀನು.....

ಹಾಳಾಗಿರೋ ಜೇನು,
ಶಾಯಿಯಿಲ್ಲದ ಪೆನ್ನು......

ಕೈಗೆಟುಕೋ ಬಾನು,
ಅಮಾವಾಸ್ಯೆಯ ' ಮೂನು ' .......

ಬೋಳುತಲೆಯ ಹೇನು,
ಬಾರದೆ ಹೋದ ಸೀನು........

35 comments:

  1. ದಿನಕರ್,
    ಅದಕ್ಕೆ ನೀವು ಇರಬೇಕು....
    ನೀವಿದ್ದರೆ ಅವರ ಬಾಳೆಲ್ಲ ಜೇನು....
    ಚೆಂದದ ಬರಹ...

    ReplyDelete
  2. ಬ್ಲಾಗಿಲ್ಲದ ನಾವು ನೀವು !! ಒಂಥರಾ ಮಜವಾಗಿದೆ...ಧನ್ಯವಾದಗಳು.

    ReplyDelete
  3. ಬೋಳುತಲೆಯ ಹೇನು,
    ಬಾರದೆ ಹೋದ ಸೀನು........

    ಚೆನ್ನಾಗಿದೆ... ಈ ಲೈನು...ಹ್ಹ..ಹ್ಹ...ಹ್ಹಾ....

    ReplyDelete
  4. ದಿನಕರ್ ಸರ್ ...
    ಸಕ್ಕತ್ತಾಗಿದೆ .. ಬೋಳುತಲೆಯ ಹೇನು ಹ್ಹಾ ಹ್ಹಾ ಹ್ಹಾ

    ReplyDelete
  5. ದಿನಕರ್ ಸರ್,

    ಇದರಲ್ಲಿ ನಿಮ್ಮ ಹೊಗಳಿಕೆಯೋ, ನಿಮ್ಮ ಕೋಪ ವ್ಯಕ್ತಪಡಿಸುವ ಭಾಷೆಯೋ....ಸುಮ್ಮನೇ ತಮಾಷೆಗೆ ಹೇಳಿದೆ.
    ಎರಡು ಮೂರು ಪದಗಳಲ್ಲಿ ಚೆನ್ನಾಗಿ ಹೇಳಿದ್ದೀರಿ.

    ReplyDelete
  6. ಓಹೊಹೊಹೊ........
    ತು೦ಬಾ ಚೆನ್ನಾಗಿದೆ.ಬರಿತಾಇರಿ.

    ReplyDelete
  7. ಮಹೇಶ್ ಸರ್,
    ಅವರಿದ್ರೆ ಅಷ್ಟೇ ನಾವಲ್ಲ, ನಾವಿದ್ರೂ ಸಹ ಅವರು ಅಂತ ಬರೆದೆ.... ಸುಮ್ನೆ ತಮಾಷೆಗೆ ಸಾರ್..... ಧನ್ಯವಾದ ನಿಮ್ಮ ಕಾಮ್ಮೆಂಟ್ಗೆ....

    ReplyDelete
  8. ಸುಬ್ರಮಣ್ಯ ಸರ್.
    ಧನ್ಯವಾದ ನಿಮ್ಮ ಅಭಿಪ್ರಾಯಕ್ಕೆ.... ಹೀಗೆ ಬರ್ತಾ ಇರಿ....

    ReplyDelete
  9. ವಿಜಯಶ್ರೀ ಮೇಡಂ,
    ಅವೆರಡು ಸಾಲು ಕೊನೆಯಲ್ಲಿ ಹೊಳೆದದ್ದು..... ನನ್ನ ಅರ್ದ ಬೋಳಾದ ತಲೆ ಕೆರೆದುಕೊಳ್ತಾ ಇದ್ದೆ.... ಅವಾಗ ಹೊಳೆದದ್ದು..... ಹಾ ಹಾ ..... ಇಷ್ಟವಾದುದಕ್ಕೆ ಖುಷಿ ಇದೆ.... ಧನ್ಯವಾದ ...

    ReplyDelete
  10. ರಂಜಿತಾ ಮೇಡಂ,
    ನಿಮಗೆ ಇಷ್ಟವಾದ ಸಾಲು, ನನ್ನ ತಲೆ ಕೆರೆದುಕೊಂಡೆ ಹುಟ್ಟಿದ್ದು.... ಅಭಿಪ್ರಾಯಕ್ಕೆ ಧನ್ಯವಾದ.....

    ReplyDelete
  11. ಶಿವೂ ಸರ್,
    ಮೊದಲಿಗೆ ಈ ಕವನ ಸಾಲು '' ನೀನಿಲ್ಲದೆ ನಾನು'' ಎಂದು ಯೋಚಿಸಿದ್ದೆ....... ಆದರೆ, ಪದೇ ಪದೇ ಹುಡುಗಿ ಬಗ್ಗೆ ಬರೆದರೆ ತಲೆ ಮೇಲೆ ಇನ್ನೆರಡು 'ಕೊಡು' ಬರಬಹುದು ಅಂತ ಚೇಂಜ್ ಮಾಡಿ '' ನಾನಿಲ್ಲದೆ ನೀನು'' ಅಂತ ಬರೆದೆ....... ಅವರಿಲ್ಲದೆ ನಾವು ಹೇಗೆ ಅಪೂರ್ಣವೋ, ನಾವಿಲ್ಲದೇ ಅವರೂ ಸಹ ಅಪೂರ್ಣ .... ಆಲ್ವಾ ಸರ್...... ಮುಕ್ತ ಅಭಿಪ್ರಾಯಕ್ಕೆ ಧನ್ಯವಾದಗಳು ....

    ReplyDelete
  12. ನೀನು ಇಲ್ಲದ ನಾನು
    ಚಂದ್ರನಿಲ್ಲದ ಬಾನು...
    ನೀನು ಇಲ್ಲದ ನಾನು
    ಉಜಾಲಾ ಇಲ್ಲದ ಬನಿಯನು...
    ನಾನು ಇಲ್ಲದ ನೀನು.....


    ನಿಮ್ಮ ಇಮೇಲ್ ವಿಳಾಸ ಕೊಡಿ ಮುಂದಿನ ಸಾಲು ಅಲ್ಲೇ ಹೇಳುವೆ.. :-)

    ReplyDelete
  13. ದಿನಕರ ಸರ್
    ಸೂಪರ್ ಆಗಿದೆ
    ಎಷ್ಟೊಂದು ನವಿರಾಗಿದೆ ಸಾಲುಗಳು

    ReplyDelete
  14. ರವಿಕಾಂತ್ ಸರ್,
    ನಾನು ಇಲ್ಲದ ನೀನು............ ಬರಲಿ ಮುಂದಿನ ಸಾಲು..... ನನ್ನ ಇ- ಮೇಲ್ ಗೆ... dinakar.moger @gmail .ಕಂ......... ಧನ್ಯವಾದ ನಿಮ್ಮ ಕಾಮೆಂಟ್ ಗೆ......

    ReplyDelete
  15. ಗುರು ಸರ್,
    ಎಲ್ಲರೂ ಆ ಹುಡುಗಿಯ ಬಗ್ಗೆ ಬರೆದರೆ, ನಾನು ನನ್ನ ಬಗ್ಗೆ ಬರೆದೆ..... ಹಾಗಾಗಿ ನವಿರಾಗಿವೆ ಸಾಲುಗಳು... ಹಾ ಹಾ ಹಾ.....

    ReplyDelete
  16. ಶಿವಪ್ರಕಾಶ್,
    ಹ್ಹ ಹಾ ಹ್ಹಾ..... , ಧನ್ಯವಾದ..... ಧನ್ಯವಾದ......

    ReplyDelete
  17. ಅಖಿಲ ಕರ್ಣಾಟಕ ಪುರುಷ ಸಂಘಟನೆಗೆ ಕಹಳೆ ಊದಿದ್ದೀರಾ, ಜಯವಾಗಲಿ :)

    ReplyDelete
  18. ಆನಂದ್ ಸರ್,
    ನೀವೂ ನಮ್ಮ ಸಂಘ ಸೇರಿ, ನಮ್ಮ (ಹುಡುಗರ) ಬಗ್ಗೆ ಬರೆಯಿರಿ...... ಹ್ಹ ಹ್ಹಾ ಹ್ಹಾ......

    ReplyDelete
  19. :D ಕೊನೆಯ ಸಾಲು ಬಹಳ ನಗು ತರಿಸಿತು. ಒಂಥರಾ ವಿನೂತನ ರೀತಿಯ ಕವನ..ಚೆನ್ನಾಗಿದೆ.

    ReplyDelete
  20. ನಾನಿರದ ನೀನು...ದಿನಕರನಿಲ್ಲದ ಬಾನು...
    ನಿಮ್ಮವ,
    ರಾಘು.

    ReplyDelete
  21. ತೇಜಸ್ವಿನಿ ಮೇಡಂ,
    ಆ ಸಾಲು ಬರೆಯುವಾಗ ನನಗೂ ತುಂಬಾ ನಗು ತರಿಸಿತ್ತು....... ಕಾಮೆಂಟ್ ಗೆ ಧನ್ಯವಾದಗಳು...... ಹೀಗೆ ಬರುತ್ತಾ ಇರಿ.....

    ReplyDelete
  22. ರಘು ಸಾರ್,
    ಅರೆರೆ...... ಈ ಸಾಲು ನನಗೆ ಹೊಳೆದೇ ಇರಲಿಲ್ಲ....... ಥ್ಯಾಂಕ್ಸ್.... ಬಳಸಿದ್ದಕ್ಕೆ ನನ್ನ ಹೆಸರು....... ಹಾ ಹ್ಹಾ ಹ್ಹಾ...... ಧನ್ಯವಾದಗಳು.....

    ReplyDelete
  23. This comment has been removed by a blog administrator.

    ReplyDelete
  24. chendada prasa padya. odu muda niditu. irada bagge kalpisi iruvadannu avshyaka anno sandesh chennaagide

    ReplyDelete
  25. bolu tale henu andiddakke tale mele kai aadisikondu nodabekaayitu. ha ha

    ReplyDelete
  26. ಸೀತಾರಾಂ ಸರ್,
    ಹ್ಹಾ... ಹ್ಹಾ... ನೀವೂ ತಲೆ ಮೇಲೆ ಕೈ ಆಡಿಸ್ಕೊಂದ್ರಾ .... ಧನ್ಯವಾದ ಸರ್... ನಿಮ್ಮ ಪ್ರತಿಕ್ರೀಯೆಗೆ......

    ReplyDelete
  27. ದಿನಕರ...

    ಸೂಪರ್ರೂ....!!

    ಹುಷಾರು...! ನಿಮ್ಮಾಕೆ ದೊಣ್ಣೆ ಹಿಡಿದು ಕೊಳ್ಳುತ್ತಾರೆ..
    ಈ ಕವನ ಓದಿದರೆ...!!

    ಹ್ಹಾ..ಹ್ಹಾ...!

    ಇಂಥಹ ಇನ್ನಷ್ಟು ಕವನ ಬರಲಿ...

    ನಿಮಗೂ.. ನಿಮ್ಮ ಕುಟುಂಬದವರಿಗೂ..

    ನಿಮ್ಮ ಬ್ಲಾಗ್ ಓದುಗರಿಗೂ...
    "ಸಂಕ್ರಮಣದ ಶುಭಾಶಯಗಳು"

    ReplyDelete
  28. ಪ್ರಕಾಶಣ್ಣ,
    ನನ್ನ ಎಲ್ಲಾ ಪೋಸ್ಟ್ ನ ಪ್ರಥಮ ಓದುಗೆ ನನ್ನಾಕೆ.... ಹಾಗಾಗಿ ದೊಣ್ಣೆ ಏಟು ತಪ್ಪಿದೆ..... ಧನ್ಯವಾದ ನಿಮ್ಮ ಅಭಿಪ್ರಾಯಕ್ಕೆ.....

    ReplyDelete
  29. ದಿನಕರ್, ವನಿತಾ ಅಭಯ ಸಿಕ್ಕಮೇಲೇನೇ ನೀವೂ ಬ್ಲಾಗಿಗೆ ಪೋಸ್ಟ್ ಮಾಡಿದ್ದು ಅಂತ ಹೇಳೋದೇನಿದೆ...?? ಹಹಹ...
    ಸಾಲುಗಳಬಗ್ಗೆ ಹೇಳಬೇಕೇ...???.....
    ಮೋಡವ ಕಂಡು ನರ್ತಿಸಿದೆ ನವಿಲು
    ಹುಟ್ಟತೊಡಗಿದೆ ನಮ್ಮೆಲ್ಲರಿಗೆ ದಿಗಿಲು

    ಸೂ,,,,ಪ...ರ್....ಸಿಂಪ್ಲಿ...ಸೂಪರ್...

    ReplyDelete
  30. ಅಜಾದ್ ಸರ್,
    ನಿಮ್ಮ ಮಾತಿನಂತೆ ನಾನು ನನ್ನವಳ ಅನುಮತಿ ಪಡೆದು ಬರೆದೆ...... ಅವಳು ಸಲಹೆ ಸಹ ಕೊಡುತ್ತಾರೆ...... ಧನ್ಯವಾದ ನಿಮ್ಮ ಕಾಮೆಂಟ್ ಗೆ...

    ReplyDelete