Dec 15, 2009

'' ಜೈ ಮಹಾರಾಷ್ಟ್ರ''.................

''ಜೈ ಮಹಾರಾಷ್ಟ್ರ'' ....... ಮೈಯೆಲ್ಲಾ ಉರಿದು ಹೋಯ್ತು ....... ನಾನಾಗ ಮುಂಬೈಯಲ್ಲಿ ಕೆಲಸ ಮಾಡ್ತಾ ಇದ್ದೆ...... ದಿನಾ ಬೆಳಿಗ್ಗೆ ಆಫೀಸಿಗೆ ಹೋದಾಗ ಎಲ್ಲಾ ಸ್ಟಾಫ್ 'ಗುಡ್ ಮಾರ್ನಿಂಗ್' ಎಂದರೆ ಒಬ್ಬ ಹುಡುಗ ಮಾತ್ರ ' ಜೈ ಮಹಾರಾಷ್ಟ್ರ' ಎನ್ನುತ್ತಿದ್ದ..... .... ಮೊದ ಮೊದಲಿಗೆ ಏನೂ ಅನ್ನಿಸದಿದ್ದರೂ , ನಂತರದ ದಿನಗಳಲ್ಲಿನಾನು ಕರ್ನಾಟಕದವನು ಎನ್ನುವ ಕಾರಣಕ್ಕೆ ಅವನು ' ಜೈ ಮಹಾರಾಷ್ಟ್ರ' ಎನ್ನುತ್ತಿದ್ದ ಎಂದು ಗೊತ್ತಾಯಿತು.... ಇದು ಸಹಜವಾಗಿ ನನಗೆ ಸಿಟ್ಟು ತರಿಸಿತ್ತು.... ... ನಾನೂ ಸಹ ಏಟಿಗೆ ಎದಿರೇಟು ಎನ್ನುವ ಹಾಗೆ ಅವನು ಎದುರಿಗೆ ಬಂದಾಗಲೆಲ್ಲ ನಾನು 'ಜೈ ಕರ್ನಾಟಕ' ಎನ್ನಲು ಶುರು ಮಾಡಿದೆ..... ನಾನು ಹೀಗೆ ಹೇಳಿದಾಗಲೆಲ್ಲ, ಅವನು ನಗುತ್ತಿದ್ದನಾದರೂ ಒಳಗೊಳಗೇ ಸಿಟ್ಟು ಮಾಡಿಕೊಳ್ಳುತ್ತಿದ್ದ ಮತ್ತೆ ಬೇರೆಯವರ ಎದುರು ಹೇಳುತ್ತಿದ್ದ ಕೂಡ..... ....
ಒಂದು ಕೆಟ್ಟ ದಿನ ಕೇಳೆ ಬಿಟ್ಟ..... '' ಕ್ಯಾ ಆಪ್ ಲೋಗ್ ಕರ್ನಾಟಕ ಸೆ ಇದರ್ ಆಕೆ ಜೈ ಮಹಾರಾಷ್ಟ್ರ ನಹಿ ಬೋಲ್ತೆ ಹೈ, ಬದಲೇ ಮೇ ಜೈ ಕರ್ನಾಟಕ ಬೋಲ್ತೆ ಹೈನ್...'' ಅಂದ..... ನಾನು '' ಮುಜೆ ಜೈ ಮಹಾರಾಷ್ಟ್ರ ಬೋಲ್ನೆ ಮೇ ಕುಚ್ ಭೀ ಪ್ರಾಬ್ಲಮ್ ನಹಿ ಹೈ, ಮಗರ್ ತುಂ ತೋ ಮೇರಾ ಮಜಾಕ್ ಉಡಾ ರಹೇ ಥೆ ನ, ಇಸ್ ಲಿಯೇ ಮೈ ಜೈ ಕರ್ನಾಟಕ ಬೋಲನಾ ಶುರು ಕಿಯಾ ''...... ಅಂದೇ...... ಅವನು ನಗು ನಗುತ್ತಲೇ,'ಏ ಗಲತ್ ಹೈ, ಆಪ್ ಅಇಸಾ ನಹಿ ಕೆಹ್ ಸಕತೆ.... ಬಂದ್ ಕರೋ ಏ ಸಬ್'' ಅಂದ...... ನಂಗೂ ಏರಿತು ಪಿತ್ತ.......... ' ದೇಖೋ, ಮೈ ಜಬ್ ತುಮಾರ ಮುಹ್ ಸೆ 'ಜೈ ಕರ್ನಾಟಕ' ಸುನತಾ ಹ್ಞೂ ನ, ತಬ್ ಸೆ ಮೈ 'ಜೈ ಮಹಾರಾಷ್ಟ್ರ' ಬೋಲನಾ ಚಾಲೂ ಕರತಾ ಹ್ಞೂ '' ಅಂದೆ..... '' ಐಇಸಾ ಮೈ ಕಭಿ ನಹಿ ಬೋಲೂಂಗಾ'' ಅಂದ...... ನಿನ್ನ ಕೈಲಿ ' ಜೈ ಕರ್ನಾಟಕ' ಹೇಳಿಸಿಯೇ ತೀರುತ್ತೇನೆ ಎಂದು ಚಾಲೆಂಜ್ ಮಾಡಿದೆ..... ಅವನೂ ಸಹ ಚಾಲೆಂಜ್ ಸ್ವೀಕರಿಸಿದ.......

ಹೀಗೆ ನಮ್ಮ 'ಜೈ ಕರ್ನಾಟಕ' ' ಜೈ ಮಹಾರಾಷ್ಟ್ರ' ನಡೆದೇ ಇತ್ತು........ ನಾನು ನನ್ನ ಚಾಲೆಂಜ್ ಮರೆತಿರಲಿಲ್ಲ.............

ಒಂದು ದಿನ ಮದ್ಯಾನ್ಹ ಆಫೀಸಿನಲ್ಲಿ ಊಟ ಮಾಡ್ತಾ ಇದ್ದೆವು.... ಅದೇ ಹುಡುಗ ಎಂದಿನಂತೆ ನನ್ನ ನೋಡಿ ' ಜೈ ಮಹಾರಾಷ್ಟ್ರ' ಹೇಳುತ್ತಾ ಟಾಯ್ಲೆಟ್ ಹೋದ.... ಆಗ ನನ್ನ ತಲೆಯಲ್ಲಿ ಒಂದು ಕ್ರಿಮಿನಲ್ ಐಡಿಯಾ ಹೊಳೆಯಿತು..... ಆ ಹುಡುಗ
ಟಾಯ್ಲೆಟ್ ಒಳಗೆ ಹೋದ ನಂತರ ನಾನು ಹೊರಗಿನಿಂದ ಲಾಕ್ ಮಾಡಿ ಬಂದು ಕುಳಿತೆ........ ಅವನಿಗೆ ಫೋನ್ ಮಾಡಿ ಹೇಳಿದೆ..... ನೀನು ' ಜೈ ಕರ್ನಾಟಕ' ಎಂದರೆ ಮಾತ್ರ ಲಾಕ್ ತೆಗೆಯುತ್ತೇನೆ ಅಂದೆ..... ' ಬೇಡ, ನಾನು ಬೇರೆಯವರಿಂದ ತೆಗೆಸುತ್ತೇನೆ' ಅಂದ....... ಎಲ್ಲರ ಮೊಬೈಲ್ ನಾನೇ ತೆಗೆದುಕೊಂಡು ನನ್ನ ಟೇಬಲ್ ಮೇಲೆ ಇಟ್ಟುಕೊಂಡೆ.... ಎಲ್ಲರ ಮೊಬೈಲ್ ಗೆ ಫೋನ್ ಮಾಡಿದರೂ ನಾನೇ ಮಾತಾಡಿ' ಜೈ ಕರ್ನಾಟಕ' ಎನ್ನುತ್ತಿದ್ದೆ.... ಅವನಿಗೂ ಸಹನೆ ಮೀರಿತ್ತು.... ಕೊನೆಗೆ, ಜೈ ಕರ್ನಾಟಕ ಎನ್ನಲು ಒಪ್ಪಿದ....... ಫೋನಿನಲ್ಲೇ ' ಜೈ ಕರ್ನಾಟಕ' ಎಂದ...... ನಾನು ಒಪ್ಪಬೇಕಲ್ಲಾ...... '' ಫೋನಿನಲ್ಲಿ ಬೇಡ.... ಎದುರಿಗೆ ಹೇಳು'' ಎಂದೇ...... ಅವನಿಗೋ ಮುಜುಗರ...... '' ಸರ್, ಮೈ ಆಗೇ ಸೆ 'ಜೈ ಮಹಾರಾಷ್ಟ್ರ' ಬೋಲ್ನ ಚೋಡ್ ದೂಂಗಾ..... ಅಭಿ ಮುಜೆ ಚೋಡ್ ದೋ..... ಸಿರ್ಫ್ ಮೈ ಆಪ್ಕೆ ಸಾಮನೇ 'ಜೈ ಕರ್ನಾಟಕ' ಬೋಲೊಂಗಾ .... ಸಬಕೇ ಸಾಮನೇ ನಹಿ ಪ್ಲೀಸ್ '' ಅಂದ........ ಸರೀಪ್ಪಾ...... ಎಂದು ನಾನು ಒಪ್ಪಿಕೊಂಡೆ...... ಆದರೆ ನನಗೆ ಇವನಿಗೆ ಇನ್ನೂ ಸ್ವಲ್ಪ ಸತಾಯಿಸೋಣ ಎನಿಸಿತು..... ಟಾಯ್ಲೆಟ್ ಎದುರಿಗೆ ನಿಂತು ''ಅಬ್ ಬೋಲೋ '' ಅಂದೆ...... ಪಾಪ ಹುಡುಗ...... '' ಜೈ ಕರ್ನಾಟಕ'' ಎಂದ...... ಕೇಳಲು ತುಂಬಾ ಸಿಹಿಯಾಗಿತ್ತು..... ಅವನ ಬಾಯಿಂದ ಮೂರು ಸಾರಿ ಹಾಗೆ ಹೇಳಿಸಿ..... ಬಾಗಿಲು ತೆರೆದೇ....... ಬಾಗಿಲು ತೆರೆಗೂ ಹೊರಗೆ ಬಂದವನಿಗೆ ಕಂಡಿದ್ದು..... ನನ್ನನ್ನೂ ಸೇರಿ, ಎಲ್ಲಾ ಜನರೂ ನಗುತ್ತಾ ಟಾಯ್ಲೆಟ್ ಹೊರಗೆ ಬಾಗಿಲಲ್ಲೇ ನಿಂತಿದ್ದೆವು ..... ಅವರಿಗೆಲ್ಲಾ ನಾನು, 'ಏನೋ ತಮಾಷೆ ತೋರಿಸುತ್ತೇನೆ ಬನ್ನಿ' ಎಂದು ಟಾಯ್ಲೆಟ್ ಬಾಗಿಲಿಗೆ ಕರೆ ತಂದಿದ್ದೆ.... ಅವತ್ತಿನಿಂದ ಅವನು 'ಜೈ ಮಹಾರಾಷ್ಟ್ರ' ಹೇಳೋದು ನಿಲ್ಲಿಸಿದ್ದ.....


16 comments:

  1. ಓದಲಿಕ್ಕೆ ತಮಾಷಿಯಾಗಿದೆಯಾದರೂ, ನಮ್ಮದೇ ದೇಶದ ಆದರೆ ಬೇರೆ ರಾಜ್ಯದ ಪ್ರಜೆ ಮತ್ತೊಂದು ರಾಜ್ಯದ ಬಗ್ಗೆ ತಳೆಯುವ ನಿಲುವು ನಿಜಕ್ಕೂ ಖೇದಕರ.
    ತಮ್ಮ ನೆಲ, ಭಾಷೆಯ ಬಗ್ಗೆ ಅಭಿಮಾನವಿರಬೇಕು ಆದರೆ ತೀರ fanatic ಆಗಬೇಕಾಗಿಲ್ಲ.
    ಯಥಾ ರಾಜ(!) ತಥಾ ಪ್ರಜಾ :)

    ReplyDelete
  2. ದಿನಕರ್,
    ಮಜಾವಾಗಿದೆ ಓದಲು....
    ನಗಿಸಿದ್ದಕ್ಕೆ ಜೈ ದಿನಕರ....

    ReplyDelete
  3. ಆನಂದ್ ಸರ್,
    ಅಲ್ಲಿ ಹೋಗಿ ಕೆಲಸ ಮಾಡಿದರೆ ಇಂಥ ಅನುಭವ ತುಂಬಾ ಆಗುತ್ತದೆ...... ತುಂಬಾ ಧುಖಕರ ವಿಷಯ ಇದು.... ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು....

    ReplyDelete
  4. ಮಹೇಶ್ ಸರ್,
    ನನಗೆ ಆಗ ನನ್ನ ಪ್ರಾಜೆಕ್ಟ್ ಮನಗರ್ ಸಪೋರ್ಟ್ ಇತ್ತು.... ಅವರೂ ಸಹ ಕರ್ನಾಟಕದವರೇ ಆಗಿದ್ದರು..... ಅಲ್ಲಿಂದ ಬಿಟ್ಟು ಬರುವಾಗ, ಎಲ್ಲರಿಗೂ ಸ್ವಲ್ಪ ಕನ್ನಡ ಕಲಿಸಿಯೇ ಬಂದೆ.....ಬರಹ ಮೆಚ್ಚಿದ್ದಕ್ಕೆ ಧನ್ಯವಾದ....

    ReplyDelete
  5. ನಮ್ಮ ನಾಡು, ನುಡಿಯ ಬಗ್ಗೆ ಗೌರವ ಇರಬೇಕು. ಆದರೆ ಬೇರೆ ರಾಜ್ಯದವರ ಬಗೆಗೂ ಸಾಮರಸ್ಯ ಇರಲೇಬೇಕು. ರಾಜ್ಯ ಬೇರೆಯದಾದರೂ ನಾವೆಲ್ಲಾ ಭಾರತೀಯರಲ್ಲವೇ..? ಚೆನ್ನಾಗಿ ಬುದ್ಧಿ ಕಲಿಸಿದಿರಿ.ನಿಮ್ಮ ಬರಹ ಕೂಡಾ ಚೆನ್ನಾಗಿ ಮೂಡಿ ಬ೦ದಿದೆ.

    ReplyDelete
  6. ದಿನಕರ,
    ನಿಮ್ಮದು ತುಂಬಾ ಗಟ್ಟಿ ಧೈರ್ಯ. ಅದಕ್ಕೇ ನಿಮ್ಮೊಂದಿಗೇ ಹೇಳಬೇಕೆಂದು ಅನಿಸುತ್ತೆ: "ಜೈ ಕರ್ನಾಟಕ!"

    ReplyDelete
  7. ಚೆನ್ನಾಗಿದೆ... ನಗು ತರಿಸಿತು, ಚೆನ್ನಾಗಿ ಆಟವಾಡಿಸಿದ್ದೀರಿ ಅವನಿಗೆ ಹಹಹ... ಜೈ ಕರ್ನಾಟಕ!!!

    ReplyDelete
  8. ದಿನಕರ ಸರ್
    ನಿಜಾ, ಮಹಾರಾಷ್ಟ್ರ ಮರಾಠಿ ಎನ್ನುವವರು ಕರ್ನಾಟಕಕ್ಕೇ ಬಂದರೆ ಕನ್ನಡ ಮಾತನಾಡುತ್ತಾರೆಯೇ?
    ಜೈ ಕರ್ನಾಟಕ ಅಂತೂ ಅನ್ನುವುದೇ ಇಲ್ಲ
    ಇವರಿಗೆ ಸಂಕುಚಿತ ಮನೋಭಾವ ಬೆಳೆದುಹೋಗಿದೆ
    ನಾವೆಲ್ಲಾ ಮೊದಲು ಭಾರತೀಯರು ಎಂಬುದೇ ಮರೆತಿದೆ
    ನಿಮ್ಮ ಆಡಿಸಿದ ಪರಿ ಚೆನ್ನಾಗಿದೆ
    ಜೈ ದಿನಕರ್

    ReplyDelete
  9. dinakar avare thumba ishta aayithu nimma baraha.

    sariyaagi budhi kalisideeri avanige.... yeshtu sankuchitha bhaavane!

    ReplyDelete
  10. ಹ್ಹಾ ಹ್ಹಾ ಹ್ಹಾ...
    ಒಳ್ಳೆ ಕೆಲಸ ಮಾಡಿದ್ದಿರಿ...
    ಜೈ ದಿನಕರ :)

    ReplyDelete
  11. ದಿನಕರ್ ಸರ್,

    ದುರಾಭಿಮಾನಿಗಳಿಗೆ ಒಳ್ಳೇ ಪಾಠ ಕಲಿಸಿದ್ದೀರಿ...
    ನಾವು ಕನ್ನಡಿಗರು ಎಲ್ಲದ್ದಕ್ಕೂ ಬಗ್ಗಿಬಿಡುತ್ತೇವೆ. ನೀವು ಹಾಗೆ ಮಾಡಲಿಲ್ಲವಲ್ಲ ಅದೇ ಗ್ರೇಟ್...

    ReplyDelete
  12. ಹ ಹ ಹ .. ಚೆನ್ನಾಗಿದೆ

    ReplyDelete
  13. ದಿನೇಶ...

    ನಾನೂ ಕೂಡ ಮುಂಬೈನಲ್ಲಿದ್ದೆ..
    ಅಲ್ಲಿ ಪರ ಭಾಷೆಯ ಹಾವಳಿ ಬೆಂಗಳೂರಿಗಿಂತ ಕೆಟ್ಟದಾಗಿದೆ... ಅನ್ನುವ ಕಹಿ ಸತ್ಯವನ್ನು ಒಪ್ಪಿಕೊಳ್ಳಲೇಬೇಕು...

    ಮಾತೃಭಾಷೆಯ ಅಭಿಮಾನ ಇರಲೇ ಬೇಕು...
    ದುರಭಿಮಾನ ಇರಬಾರದು...

    ನಿಮ್ಮ ಅನುಭವವನ್ನು ಸೊಗಸಾಗಿ ಚಿತ್ರಿಸಿದ್ದೀರಿ...
    ಅವನ ದುರಭಿಮಾನಕ್ಕೆ ತಕ್ಕ ಶಾಸ್ತಿಯನ್ನೇ ಮಾಡಿದ್ದೀರಿ...

    ಜೈ ಕರ್ನಾಟಕ....

    ReplyDelete
  14. ಚೆನ್ನಾಗಿ ಬುದ್ಧಿ ಕಲಿಸಿದ್ದೀರಿ...ನಮ್ಮ ಕಚೇರಿಯಲ್ಲಿ ಕೆಲವು ಮಲಯಾಳಿ ಭಾಷಾ ದುರಭಿಮಾನಿಗಳಿದ್ದಾರೆ, ಅವರಿಗೂ ಹೀಗೇ ಏನಾದ್ರೂ ಬುದ್ಧಿ ಕಲಿಸೋ ಐಡಿಯಾ ಬೇಕಾದ್ರೆ ನಿಮ್ಮ ಹತ್ರ ಕೇಳ್ತೇನೆ :)

    ReplyDelete
  15. ಚೆನ್ನಾಗಿ ಪಾಠ ಹೇಳಿದ್ದಿರಾ.....
    ತಮ್ಮ ಧೈರ್ಯಾನ್ನ ಮೆಚ್ಚಬೇಕ್ರೀ...

    ReplyDelete