Oct 25, 2009

'' ಅವನೇಕೆ ನಿಮ್ಮಂತೆ?''


"ಅರೆರೆ, ಇವನು ನಿನ್ನ ಮಗನೇನು?
ಮುಖದಲ್ಲೇಕೆ ಇವನು ನನ್ನನ್ನೇ ಹೋಲುವನು?''
ಕೇಳಿದರೆ ನೀನು ನಗುತ್ತಾ ಮುನ್ನೆಡೆದೆ...
ತುಂಟ ಮಗ ನನ್ನನ್ನು ''ಅಪ್ಪಾ'' ಎಂದೇ ಕರೆದ...

ನೀನೇಕೆ ಕಾಯಲಿಲ್ಲ ನನಗಾಗಿ ಇನ್ನೂ,
ಅಲ್ಲೇನು ನೋಡುವೆ ದೇವರಿಲ್ಲ ಮೇಲೆ,
ನಿನಗಾಗಿ ನಾನು ಕಾದು ಕುಳಿತಿರಲು ಇಲ್ಲಿ,
ನಿನ್ನದೇ ಸುಳಿವಿಲ್ಲ ಕನಸು ಮನಸಲ್ಲೂ.....

ನೆನಪಿದೆಯಾ ಆ ರಾತ್ರಿ ನನ್ನಲ್ಲಿ ನೀನು,
ಕೇಳುತ್ತಾ ಕಾಣಿಕೆಯ, ಬೇಡುತ್ತಾ ಸುಖವಾ....
ನಸುಕಲ್ಲೇ ಎದ್ದು ನೀ ನಕ್ಕು ನಡೆದೆ,
ಮರುದಿನವೇ ಅಲ್ಲವೇ ನಿನ್ನ ಅವನ ಮದುವೆ....?

ನನ್ನಾಕೆಗೆ ಸಂಶಯ, ನಿನ್ನ ಮಗನ ನೋಡಿ,
ತಡೆಯಲಾರದೆ ಕೇಳಿದಳು, 'ಅವನೇಕೆ ನಿಮ್ಮಂತೆ'?
ನಾ ನಕ್ಕು ನುಡಿದೆ, 'ಅವನನ್ನೇ ಕೇಳು'
ನಿನ್ನ ಮಗ ಜಾಣ, ಕಣ್ಣ್ ಹೊಡೆದು ಮುನ್ನಡೆದ.........

17 comments:

  1. ದಿನಕರ್ ಸರ್,

    ಒಂದು ಸೊಗಸಾದ ಅರ್ಥಪೂರ್ಣ ಕವನ.

    ReplyDelete
  2. ಸರ್,
    ತುಂಬಾ ಚೆನ್ನಾಗಿದೆ ಕವನ...

    ReplyDelete
  3. ದಿನಕರ್, ಕವನ ತುಂಬಾ ಚನ್ನಾಗಿದೆ, ಒಳ್ಳೆಯ ಕಲ್ಪನೆ, ಪದ ಪ್ರಯೋಗ...ಮುಂದುವರೆಸಿ

    ReplyDelete
  4. ಹಾಸ್ಯ ಭರಿತ ಕವನ ತುಂಬಾ ಚನ್ನಾಗಿದೆ.

    ReplyDelete
  5. ಸ್ವಲ್ಪ confusing ಆಗಿದೆ. clear ಆಗಿ ಅರ್ಥ ಆಗ್ತಾ ಇಲ್ಲ :(

    ReplyDelete
  6. ಡಿಫರೆ೦ಟ್ ಟಾಪಿಕ್ ಆದರೂ ಕವನ ಚೆನ್ನಾಗಿ ಬ೦ದಿದೆ ದಿನಕರ್ ಅವರೇ...

    ReplyDelete
  7. ಕವನ ಚೆನ್ನಾಗಿದೆ ಸರ್. ಮೂಕ ಮನದ ಮಾತಿಗೆ ಇದು ನನ್ನ ಮೊದಲ ಭೇಟಿ
    -ಚಿತ್ರಾ

    ReplyDelete
  8. ಶಿವೂ ಸರ್,
    ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...

    ReplyDelete
  9. ಮನಸು ಮೇಡಂ,
    ನಿಮ್ಮ ಕಾಮ್ಮೆಂಟ್ಗೆ ಧನ್ಯವಾದಗಳು....

    ReplyDelete
  10. ಅಜಾದ ಸರ್,
    ನಿಮ್ಮ ಅನಿಸಿಕೆಗೆ ಧನ್ಯವಾದಗಳು...

    ReplyDelete
  11. ಉದಯ್ ಸರ್,
    ಇಷ್ಟಪಟ್ಟಿದ್ದಕ್ಕೆ ಧನ್ಯವಾದ, ಹೀಗೆ ಬರುತ್ತಿರಿ....

    ReplyDelete
  12. ಶಿವಪ್ರಕಾಶ್,
    ನಿಮಗೆ ಅರ್ಥ ಆಗಲಿಕ್ಕೆ ಇನ್ನೊ ಟೈಮ್ ಇದೆ.... ಹ ಹ ಹ.....
    ನಿಮಗೆ ಹೇಳಿದ ಹಾಗೆ ಇದು ನನ್ನ ಬೆಸ್ಟ್ ಫ್ರೆಂಡ್ ಕಥೆ, ಅವನಿಗಾಗಿ ತುಂಬಾ ಹಿಂದೆ ಬರೆದಿದ್ದೆ.... ಈಗ ಬ್ಲಾಗ್ನಲ್ಲಿ ಬರೆದೆ....

    ReplyDelete
  13. ಮಹೇಶ್ ಸರ್,
    ನಿಮಗೆ ಇಸ್ತವಾದುದಕ್ಕೆ ಖುಷಿಯಾಯ್ತು....

    ReplyDelete
  14. ಸುಧೇಶ್ ,
    ಸ್ವಲ್ಪ ರೂಟ್ ಚೇಂಜ್ ಮಾಡಿ ಪ್ರಕಟಿಸೋಣ ಅಂತ ಬರೆದೆ..... ಇದನ್ನು ತುಂಬಾ ಹಿಂದೆ ಬರೆದಿದ್ದೆ...

    ReplyDelete
  15. ಚಿತ್ರ ಮೇಡಂ,
    ಸ್ವಾಗತ ನನ್ನ ಬ್ಲಾಗ್ ಗೆ..... ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದ..... ಹೀಗೆ ಬರುತ್ತಿರಿ.....

    ReplyDelete
  16. Dinakar Ji,

    Nice One. good picturisation...
    idu nanna modala bheti dinakar. And nandoo nimma oore.

    Kallare

    ReplyDelete